POLICE BHAVAN KALABURAGI

POLICE BHAVAN KALABURAGI

10 September 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಫರಹತಾಬಾದ  ಠಾಣೆ :
ಶ್ರೀ ಪರಶುರಾಮ ತಂದೆ ಅಮರಪ್ಪಾ  ಮೇಲಿಮನಿ ಸಾ: ನೀರಲಕೇರಾ ತಾ:ಲಿಂಗಸೂಗುರು ರವರು, ದಿನಾಂಕ: 08-09-11 ರಂದು ನನ್ನ ವಿಆರ್‌ಎಲ್ ವಾಹನ ನಂ: ಸಿಟಿಡಬ್ಲ್ಯೂ 5304 ನೇದ್ದರಲ್ಲಿ ಬೆಳೆ ಲೋಡ ಮಾಡಿಕೊಂಡು ಗುಲ
ಬರ್ಗಾದಿಂದ ಬೆಂಗಳೂರಿಗೆ ಹೊರಟಿದ್ದು, ರಾಷ್ಟ್ರೀಯ ಹೆದ್ದಾರಿ 218 ರ ಸೋಮನಾಥ ಹಳ್ಳಿ ಕ್ರಾಸ ಮುಂದೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿ ನಂ: ಕೆಎ-32 ಎ-3134 ನೇದ್ದರ ಚಾಲಕ ಸುಲೇಮಾನ ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ನನ್ನ ಲಾರಿಗೆ ಅಪಘಾತಪಡಿಸಿದ್ದು, ಇದರಿಂದ ನನಗೆ ತೆರೆಚಿದ ಗಾಯಗಳಾಗಿದ್ದು,
ಅವನಿಗೂ
ಕೂಡ ಸಾದಾ ಗಾಯವಾಗಿರುತ್ತದೆ. ಕಾರಣ ಅಪಘಾತಪಡಿಸಿದ ಲಾರಿ ನಂ: ಕೆಎ-32 ಎ – 3134 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಬಂಧನ :-

ರಾಘವೇಂದ್ರ ನಗರ ಠಾಣೆ :ದಿನಾಂಕ 09-09-2011 ರಂದು ಮದ್ಯಾಹ್ನ 12 ಗಂಟೆಗೆ ಬ್ರಹ್ಮಪೂರ ಬಡಾವಣೆಯ ಧನಗರ ಗಲ್ಲಿಯ ಕೋರಿ ಮಠದ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಂದ ಹಣ ಪಡೆದು, ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು, ಪಿ.ಎಸ್.ಐ ಬಸವರಾಜ್ ತೇಲಿ ಹಾಗು ಸಿಬ್ಬಂದಿಯವರು ಹೋಗಿ ದೇವಿಂದ್ರ ತಂದೆ ಸಿದ್ರಾಮಪ್ಪ ಕೋರೆ ಎಂಬಾತನನ್ನು ಹಿಡಿದು ಅವನಿಂದ ನಗದು ಹಣ 1975/-ರೂಪಾಯಿಗಳು, ಮೂರು ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲ್ ಪೆನ್, ಒಂದು ನೊಕಿಯೊ ಕಂಪನಿ ಮೊಬೈಲ್ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಈ ಕುರಿತು ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆದಾರನಿಂದ ಮನೆ ಮಾಲಿಕಳ ಮೇಲೆ ಹಲ್ಲೆ :-

ರಾಘವೇಂದ್ರ ನಗರ ಠಾಣೆ :ಶ್ರೀಮತಿ ಕೌಸರ ಬೇಗಂ ಗಂಡ ಉಸ್ಮಾನ ಪಾಷ ಸೈಯ್ಯದ ಸಾ|| ಜಿಲಾನಾಬಾದ ಇಲಾಯಿ ಮಜ್ಜಿದ ಹತ್ತಿರ ಗುಲಬರ್ಗಾ ರವರು, ನಮ್ಮ ಮನೆಯಲ್ಲಿ ಬಾಡಿಗೆಯಿಂದ ವಾಸವಿದ್ದ, ಸಮೀರ ತಂದೆ ಯುಸೂಫ ಗೊಬ್ಬೂರ ಈತನು 8 ದಿವಸಗಳ ಹಿಂದೆ ಮನೆ ಖಾಲಿ ಮಾಡಿದ್ದು, ಮನೆಯು ಸರಿಯಾಗಿ ಇಡದ ಕಾರಣ, ಮನೆ ರಿಪೇರಿ ಮಾಡಿಕೊಡಿರಿ ಅಂತ ಕೇಳಿದ್ದಕ್ಕೆ, ಸಮೀರ ತಂದೆ ಯುಸೂಫ ಗೊಬ್ಬೂರ ಈತನು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ, ನೀನು ಪೊಲೀಸ್ ಠಾಣೆಗೆ ದೂರು ಕೊಟ್ಟರೆ ನಿನಗೆ ಜೀವಂತ ಇಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಅವನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: