POLICE BHAVAN KALABURAGI

POLICE BHAVAN KALABURAGI

03 September 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸೇಡಂ ಠಾಣೆ : ಶ್ರೀಮತಿ. ಶಾಂತಾಬಾತಿ ಗಂಡ ದಿ. ಶಾಮರಾವ ಹಂಗನಳ್ಳಿಕರ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರುವಾರ ರವರು ನಮ್ಮ ಶಾಲೆಯ ವ್ಯಾಸಾಂಗ ಕೋಣೆಯ ಕೀಲಿ ಮುರಿದು ಕಟ್ಟಿಗೆ ಅಲಮಾರಿಯಿಂದ ಸಾಮಸ್ಯಾಂಗ ಕಲರ್ ಟೀವಿ 29 ಇಂಚ್ ಅಂ.ಕಿ. 18000/- ರೂಪಾಯಿ ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಹಲ್ಲೆ ಮಾಡಿ, ಮಾನಭಂಗಕ್ಕೆ ಪ್ರಯತ್ನ
ರಾಘವೇಂದ್ರ ನಗರ ಪೊಲೀಸ್ ಠಾಣೆ

ಫಿರ್ಯಾದಿ ಶ್ರೀಮತಿ ಶ್ರೀದೇವಿ ಗಂಡ ಶಿವಶರಣಪ್ಪ ಬೆಳಮಗಿ ರವರು ನಾನು ಸುಮಾರು 15 ದಿವಸಗಳ ಹಿಂದೆ ಯಂಕವ್ವನ ಮಾರ್ಕೆಟದಲ್ಲಿರುವ ಸಂಜು ಸೋನಾರ ಎಂಬುವವನ ಬಂಗಾರದ ಅಂಗಡಿಯಲ್ಲಿ ಬೆಳ್ಳಿಯ 9 ಹರಳು ಇದ್ದ ಬ್ರಾಸಲೆಟ್ ನಮೂನೆಯ ಕೈ ಮೇಲೆ ಕಟ್ಟಿಕೊಳ್ಳುವಗೋಸ್ಕರ ನನ್ನ ಮಗನ ಸಲುವಾಗಿ 5000/-ರೂ ರೂಪಾಯಿಗೆ ಖರಿದಿಸಿದ್ದು, ಅದನ್ನು ತನ್ನ ಮಗ ಕಟ್ಟಿಕೊಳ್ಳುವದಿಲ್ಲಾ ಅಂತ ಹೇಳಿದ್ದಕ್ಕೆ, ಮರಳಿ ದಿನಾಂಕ 02-09-2011 ರಂದು ಬೆಳಿಗ್ಗೆ ಬಂಗಾರದ ಅಂಗಡಿಯ ಸಂಜು ಈತನಿಗೆ ಬೆಳ್ಳಿಯ ಬ್ರಾಸಲೆಟ್ ಮರಳಿ ಕೊಡಲು ಹೋದಾಗ, ಅವಾಚ್ಯವಾಗಿ ಬೈದು ಕೈ ಮುಷ್ಠಿ ಮಾಡಿ ಬಾಯಿ ಮೇಲೆ ಹೊಡೆದದ್ದರಿಂದ ಮೇಲಿನ ತುಟಿ ಒಡೆದು ರಕ್ತ ಸೋರುತ್ತಿದ್ದು, ಸದರಿ ಫಿರ್ಯಾದಿದಾರಳಿಗೆ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :
ಆಳಂದ ಪೊಲೀಸ ಠಾಣೆ:
ದಿನಾಂಕ; 02-09-2011 ರಂದು ಮಧ್ಯಾಹ್ನ ದರ್ಗಾ ಬೇಸದಲ್ಲಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಪಿಐ ಆಳಂ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಲ್ಲಪ್ಪಾ ತಂದೆ ತಿಪ್ಪಣ್ಣ ಇತನನ್ನು ವಶಕ್ಕೆ ತೆಗೆದುಕೊಂಡು ನೋಡಲಾಗಿ 1 ರೂ ಗೆ 80 ರೂ ಬರುತ್ತದೆ ಅಂತಾ ಜನರಿಗೆ ಮೋಸ ಮಾಡುತ್ತಾ ಚೀಟಿಗಳನ್ನು ಬರೆದುಕೊಂಡಿದ್ದವುಗಳನ್ನು ವಶಪಡಿಸಿ ನಗದು ಹಣ 400-0 ರೂ ಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ರೋಜಾ ಪೊಲೀಸ್ ಠಾಣೆ :
ಶ್ರೀ ಮಹಿಬೂಬ ಶಹಾ ತಂದೆ ಮಹ್ಮದ ಶಹಾ ಸಾ:ಡಂಕಾಕ್ರಾಸ್ ಗುಲಬರ್ಗಾ ರವರು ನಾನು ಸಡಿ ಪಾಯನ ಗಲ್ಲಿ ರೋಡಿನ ಬದಿಯಲ್ಲಿ ಅಟೋ ನಂ ಕೆಎ 32 ಎ 856 ಅ.ಕಿ 80000/-ರೂಪಾಯಿ ನೇದ್ದನ್ನು ನಿಲ್ಲಿಸಿ ಹೋಟೆಲ್ ದಲ್ಲಿ ಚಹಾ ಕುಡಿದುಕೊಂಡು ಮರಳಿ ಬಂದು ನೋಡಲು ಯಾರೋ ಕಳ್ಳರು ನನ್ನ ಆಟೋ ಕಳವು ಮಾಡಿಕೊಂಡು ಹೋಗಿದ್ದು ಈ ವಿಷಯ 10:00 ಪಿಎಮ್ ಕ್ಕೆ ರೋಜಾ ಠಾಣೆಯಲ್ಲಿ ಮೌಖಿಕವಾಗಿ ತಿಳಿಸಿ 11:45 ಗಂಟೆಗೆ ಆಟೋ ಹುಡುಕಾಡುತ್ತ ಡಂಕಾಕ್ರಾಸ್ ಹತ್ತಿರ ಬಂದು ನಿಂತಾಗ ಕಳುವಾದ ನನ್ನ ಆಟೋ ಒಬ್ಬನು ತೆಗೆದುಕೊಂಡು ಹೋಗುತ್ತಿದ್ದು ಬೆನ್ನು ಹತ್ತಿ ಹಿಡಿದುಕೊಳ್ಳುವಷ್ಟರಲ್ಲಿ ಕಳುವು ಮಾಡಿದ ಕಳ್ಳ ಆಟೋದಿಂದ ಓಡಿಹೋಗಲು ಯತ್ನಿಸಿದಾಗ ಆಟೋದ ರಾಡ್ ತಲೆಗೆ ಬಡೆದು ಮತ್ತು ರೋಡಿನ ಮೇಲೆ ಬೋರಲಾಗಿ ಬಿದ್ದು ರಕ್ತಗಾಯ ಮಾಡಿಕೊಂಡಿರುತ್ತಾನೆ. ಕಳವು ಮಾಡಿದ ವ್ಯಕ್ತಿಯ ಹೆಸರು ಅಯ್ಯುಬ ತಂದೆ ಖಾಜಾಸಾಬ ಅಂತಾ ಹೆಸರು ಗೊತ್ತಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜಭರಿ ಸಂಭೋಗ :

ವಾಡಿ ಠಾಣೆ:ಶ್ರೀಮತಿ ಸಾವಿತ್ರ ಗಂಡ ಸುರೇಶ ಕೋಂಡಯ್ಯ ಸಾ|| ಇಂಗಳಗಿ ಗ್ರಾಮ ರವರು ನಾನು ನನ್ನ ಗ್ರಾಮದ ಮಲ್ಲು ತಂದೆ ಹಣಮಂತ ನಾಲವಾರ ಇತನ ಹತ್ತಿರ ಖಣಿ ಕೆಲಸಕ್ಕೆ ಹೋಗುತ್ತಿದ್ದು ಆತನ ಸ್ನೇಹ ಬೆಳೆದು ಆತನು ಸಲುಗೆಯಿಂದ ಮಾತನಾಡಿ ನಿನ್ನನ್ನು ಪ್ರತಿ ಮಾಡುತ್ತೆನೆ ಅಂತಾ ಹೇಳಿ ನಂಬಿಸಿ ಖಣಿ ಕೆಲಸಕ್ಕೆ ಹೋದಾಗ ಜಭ ರಿ ಸಂಭೋಗ ಮಾಡಿರುತ್ತಾನೆ. ನಂತರ ಒಂದು ವರ್ಷದ ಹಿಂದೆ ಹಲಕಟ್ಟಾ ಗ್ರಾಮದ ಸುರೇಶ ಇತನೊಂದಿಗೆ ಮದುವೆ ಮಾಡಿದ್ದು. ನನ್ನ ಗಂಡನು ಸಂಶಯ ಬಂದು ನನಗೆ ತವರು ಮನೆಗೆ ಕಳುಹಿಸಿ ಕೊಟ್ಟಿದ್ದು , ಇಂಗಳಗಿ ಗ್ರಾಮದಲ್ಲಿರುವ ಗಿರಿ ಪವಾರ ಸ್ಟೋನ ಪಾಲಿಶ ಮಶಿನದ ಕಟ್ಟಡದ ಮೇಲೆ ಕರೆದುಕೊಂಡು ಹೋಗಿ ಮಲ್ಲು ಇತನು ಬಾಯಿ ಒತ್ತಿ ಹಿಡಿದು ಅಂಜಿಕೆ ಹಾಕಿ ಜಬದಿ ಸಂಭೋಗ ಮಾಡಿರುತ್ತಾನೆ. ಇತನಿಗೆ ತಂದೆಯಾದ ಹಣಮಂತ, ತಾಯಿಯಾದ ದುರ್ಗಮ್ಮ, ಹಾಗು ಅಣ್ಣ ಅಯ್ಯಣ್ನ ಇವರ ಪ್ರಚೋದನೆ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ

No comments: