POLICE BHAVAN KALABURAGI

POLICE BHAVAN KALABURAGI

14 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀ ಗುಂಡೇರಾವ ತಂದೆ ನರಹರರಾವ ಕುಲಕರ್ಣಿ ಉ|| ಎಸ್.ಡಿ.ಇ ಬಿ.ಎಸ್.ಎನ.ಎಲ, ಸಾ|| ಕರುಣೇಶ್ವರ ನಗರ ಗುಲಬರ್ಗಾ  ರವರು  ಭೂಸನೂರ ಗ್ರಾಮದ ಬಿ.ಎಸ್.ಎನ.ಎಲ ಎಕ್ಜೆಂಚೆಂಜ್ ಪಕ್ಕದಲ್ಲಿ ಕೂಡಿಸಿರುವ ಬಿ.ಎಸ್.ಎನ.ಎಲ ಮೋಬೈಲ ಟಾವರಿಗೆ ಬಿ.ಟಿ.ಎಸ್. ಕೊಣೆಯಿಂದ ಟಾವರ ಎಂಟಿನಾಕ್ಕೆ ಜೋಡಿಸಿರುವ 20 ಮೀಟರಿನ 6 ಆರ.ಎಫ ಕೇಬಲ ತುಂಡು ಒಟ್ಟು 120 ಮೀಟರ ಉದ್ದದ ಕೇಬಲ ಯಾರೋ ಕಳ್ಳರು ದಿನಾಂಕ 10-08-2011 ರಂದು 08.00 ಪಿ.ಎಮ ದಿಂದ ದಿನಾಂಕ 11-08-2011 ರ 05.00 ಎ.ಎಮದ ಮಧ್ಯದ ಅವಧಿಯಲ್ಲಿ ಕತ್ತರಿಸಿಕೊಂಡು ಮತ್ತು ಜನರೇಟರನಲ್ಲಿದ್ದ 20 ಲೀಟರ ಡಿಜಲ ಅ.ಕಿ 920=00 ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :
ಶಹಾಬಾದ ನಗರ ಠಾಣೆ
: ದಿನಾಂಕ:13/08/2011 ರಂದು ಮಧ್ಯಾಹ್ನ ಚಕ್ಕಿ ವಡ್ಡರ ಗಲ್ಲಿಯ ವಿಜಯಕುಮಾರ ತಂದೆ ನಾಗಪ್ಪ ರವರ ಮನೆಯ ಎದರುಗಡೆ ಕಟ್ಟೆಯ ಮೇಲೆ ಖುಲ್ಲಾ ಜಾಗದಲ್ಲಿ ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಪ್ರಕಾಶ ತಂದೆ ಬಾಬಣ್ಣಾ ಮಾನೆ ಸಂಗಡ 2 ಜನರು ಸಾ: ಎಲ್ಲರೂ ಭಂಕಟಚಾಲ ಶಹಾಬಾದ ಇವರಿಂದ ನಗದು ಹಣ 3200/- ರೂ ಮತ್ತು ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಜಗದೀಶ್ ತಂದೆ ಕಾಶಿನಾಥ ಮುಕ್ಕೆ ಉ: ಟಂ.ಟಂ. ಚಾಲಕ  ಸಾ; ಡೊಂಗರಗಾಂವ  ತಾ: ಗುಲಬರ್ಗಾ ರವರು ಬೆಳೆಗ್ಗೆ ನಾಣು ಮತ್ತು ನನ್ನ ತಂದೆ ಕಾಶಿನಾಥ ಮುಕ್ಕೆ ಕೂಡಿಕೊಂಡು ಮರಗುತ್ತಿ ಕ್ರಾಸ ಹತ್ತಿರ ಹೊಲದಲ್ಲಿ ಕೆಲಸ ಮಾಡಿ ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ಎದುರುಗಡೆಯಿಂದ ಲಾರಿ ನಂ: ಕೆಎ-32-ಎ-2017 ನೇದ್ದರ ಚಾಲಕ ಸಂಗಪ್ಪ ಸಾ; ವಾಡಿ ತಾ; ಚಿತ್ತಾಪೂರ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾನೆ ನನ್ನ ತಂದೆಯವರಾದ ಕಾಶಿನಾಥ ಇವರಿಗೆ ಹಣೆಗೆ ರಕ್ತಗಾಯವಾಗಿದ್ದು ಎದೆಗೆ ಮತ್ತು ಎಡ ಪಕ್ಕೆಗೆ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ರೋಜಾ ಪೊಲೀಸ್ ಠಾಣೆ :
ಸೈಯದ ಖುತಿಜಾ ಬೆಗಂ ಸಾ:ರಹಿಮತ ನಗರ ಕಾಲೋನಿ ಗುಲಬರ್ಗಾ ರವರು ನಾಣು ಮತ್ತು ನನ್ನ ಮಗಳಾದ ಸೀಮಾ ಕೂಡಿಕೊಂಡು ಕೆ.ಬಿ.ಎನ್ ದರ್ಗಾದಿಂದ ಬಜಾರಕ್ಕೆ ಹೋಗುತ್ತಿದ್ದಾಗ ಫರಾನಾ ಕಾಲೇಜ ಎದುರುಗಡೆ ಸೈಯ್ಯದ ಮೈನುದ್ದಿನ, ಆದೀಲ, ಮುನಾವರ ಹಾಗೂ ಸಲ್ಮಾ ಹೀಗೆ 4 ಜನರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಕೂದಲು ಹಿಡಿದು ಜೊಗ್ಗಿ ಅವಮಾನ ಮಾಡಿ ಕೈಯಿಂದ ಬೆನ್ನ ಮೇಲೆ ಮತ್ತು ಹೊಟ್ಟೆಯ ಮೇಲೆ ಹೊಡೆದಿದ್ದು ಮಗಳು ಬಿಡಿಸಲು ಬಂದರೆ ಅವಳಿಗೂ ಕೂಡಾ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: