POLICE BHAVAN KALABURAGI

POLICE BHAVAN KALABURAGI

06 July 2011

GULBARGA DISTRICT REPORTED CRIME

ಬಂಗಾರದ ಅಭರಣಗಳು ಪಾಲಿಸ್ ಮಾಡುವ ನೆಪದಲ್ಲಿ 5 ತೊಲಿ ಬಂಗಾರ ಲೂಟಿ :

ಸೇಡಂ ಠಾಣೆ : ಶ್ರೀಮತಿ, ವೀಣಾ ಗಂಡ ಶಿವರಾಜ ಸಜ್ಜನ ಸಾ: ಹಂದ್ರಕಿ ಹಾವ|| ಸೇಡಂ ರವರು ನಾನು ನನ್ನ ಗಂಡ ಮಕ್ಕಳು ಸೇಡಂದಲ್ಲಿ ಬಜಾಜ ಇವರ ಮನೆಯಲ್ಲಿ ಬಾಡಿಗೆಯಿಂದ ಇರುತ್ತೆವೆ, ನನ್ನ ಗಂಡ ಶಿವರಾಜ ಇವರು ಸಹ ಶಿಕ್ಷಕರಿದ್ದು, ಇಂದು ಬೆಳಗ್ಗೆ 0800 ಗಂಟೆಗೆ ಕರ್ತವ್ಯಕ್ಕೆ ಹೊಗಿದ್ದು, ಮನೆಯಲ್ಲಿ ನಾನು ಮತ್ತು ನನ್ನ ಇಬ್ಬರು ಚಿಕ್ಕ ಮಕ್ಖಳಿದ್ದು, ಇಂದು ಮಧ್ಯಾಹ್ನ 1220 ಗಂಟೆ ಸುಮಾರಿಗೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ನಮ್ಮ ಮನೆಗೆ ಬಂದು ನಾವು ಉಜಾಲಾ ಪೌಡರ ಕಂಪನಿಯವರಿದ್ದು, ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆಯ ಆಭರಣಗಳು ಪೌಡರದಿಂದ ಪಾಲೀಸ್ ಮಾಡಿಕೊಡುತ್ತೆವೆ ಅಂತಾ ಹೇಳಿ, ನಂಬಿಸಿ ಅವರು ನನ್ನ ಹತ್ತಿರ ಇದ್ದ ಬೆಳ್ಗಿಯ ಆಭರಣಗಳು ಪಾಲಿಸ್ ಮಾಡಿಕೊಟ್ಟಿದ್ದು ಆ ನಂತರ ಬಂಗಾರದ ಆಭರಣಗಳು ಪಾಲಿಸ್ ಮಾಡಿಕೊಡುತ್ತೆವೆ ಅಂತಾ ಹೇಳಿದಾಗ ನನ್ನ ಹತ್ತಿರ ಇದ್ದ 4 1/2 ತೋಲೆ ಬಂಗಾರದ ಮಂಗಳ ಸೂತ್ರ ಅಕಿ 90,000/- ರೂ. ಹಾಗು 1/2 ತೊಲೆಯ ಹರಳಿನ ಬಂಗಾರದ ಉಂಗುರ ಅಕಿ 10,000/- ಅವರ ಕೈಯಲ್ಲಿ ಕೊಟ್ಟಿದ್ದು, ಇವರು ನಮ್ಮ ಅಡುಗೆ ಮನೆಯಲ್ಲಿ ಬಂದು ಗ್ಯಾಸ ಹಚ್ಚಿ ಕುಕ್ಕರದಲ್ಲಿ ನೀರು ಹಾಕಿ ಬಂಗಾರದ ಆಭರಣಗಳು ಕುಕ್ಕರದಲ್ಲಿ ಹಾಕಿದ್ದೇವೆ 10-15 ನಿಮೀಷದ ನಂತರ ತೆಗೆಯಿರಿ ನಾವು ಸ್ವಲ್ಪ ಹೊಗಿ ಬರುತ್ತೇವೆ ಅಂತಾ ಹೇಳಿ ಮೊಸದಿಂದ ನನ್ನ ಹತ್ತಿರ ಇದ್ದ ಒಟ್ಟು 5 ತೋಲೆ ಬಂಗಾರ ಆಭರಣಗಳು ಅಕಿ 1,00,000/- ರೂ. ಮೊಸ ಮಾಡಿ ತೆಗೆದುಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: