POLICE BHAVAN KALABURAGI

POLICE BHAVAN KALABURAGI

11 July 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಅಮೀತ ತಂದೆ ಅಂಬಣ್ಣ ಕೋಳ್ಳುರ ಸಾ: ಅಶೋಕ ನಗರ ಗುಲಬರ್ಗಾ ರವರು ದಿನಾಂಕ: 26,27/06/2011 ರಂದು ರಾತ್ರಿ ಮನೆ ನಂ. ಇ-11- 360 ನೇದ್ದರ ಮುಂದೆ ತಮ್ಮ ಹಿರೋ ಹೋಂಡಾ ನಂ. ಕೆ.ಎ-32 ಎಲ್- 2197 ನೇದ್ದರ ಕಪ್ಪು ಬಣ್ಣದ್ದು ಅ.ಕಿ. 28,000/- ರೂ ಬೇಲೆವುಳ್ಳದನ್ನು ಮನೆ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ಕಿರುಕುಳ ಪ್ರಕರಣ:

ಶಹಾಬಾದ ನಗರ ಠಾಣೆ: ಶ್ರೀಮತಿ ಜೀನತ ಬೇಗಂ ಗಂಡ ಸೈಯದ ಜಲೀಲ ಸಾ:ಮಿಲ್ಲತ ನಗರ ಶಹಾಬಾದ ತಾ:ಚಿತ್ತಾಪುರ ಜಿ:ಗುಲಬರ್ಗಾ ರವರು ನಾನು ಮನೆಯಲ್ಲಿದ್ದಾಗ ನನ್ನ ಗಂಡ ಸೈಯದ ಜಾಲಿಲ ತಂದೆ ಮೌಲಸಾಬ ,ಮಾವ ಮೌಲಾಸಾಬ, ಅತ್ತೆ ಮಹೇಬೂಬಿ, ನಾದಿನಿ ಹೈಯದಾ, ಹಾಗೂ ನಾದಿಯ ಗಂಡ ದಾವಲಸಾಬ ಹಾಗೂ ಸೈಯದಾ ಇವರೆಲ್ಲರೂ ಕೂಡಿ ಅವ್ಯಾಚವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ :

ಶ್ರೀ.ಶರಣು ತಂದೆ ಸುಭಾಶ್ಚಂದ್ರ ಗಡ್ಡೆ, ಸಾ|| ಪೊಲೀಸ್ ವಸತಿ ಗ್ರಹ ಗುಲಬರ್ಗಾ ರವರು ನನಗೆ ದಿನಾಂಕ 09/07/11 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ಗೋವಾ ಹೊಟೇಲ ಹತ್ತಿರ ದತ್ತು, ಅಂಬರೀಶ, ಈರಪ್ಪ, ಸುರೇಖಾ, ಮಹಾದೇವಿ, ಶಿಲ್ಪಾ ಎಲ್ಲರೂ ಸಾ|| ಗುಲಬರ್ಗಾ ರವರು ಪೈನಾನ್ಸ ವಿಷಯಕ್ಕೆ ಸಂಬಂಧಿಸಿದಂತೆ ತಕರಾರು ಮಾಡಿ ಕೈಯಿಂದ, ಚಾಕುವಿನಿಂದ, ಕಲ್ಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಠಾಣೆ :
ಸತೀಶ ತಂದೆ ರೇವಣಸಿದ್ದಪ್ಪಾ ಘಂಟಿ ಸಾ|| ಚಿಂಚನಸೂರ ತಾ|| ಆಳಂದ ರವರು ನಾನು ದಿನಾಂಕ: 17-06-2011 ರಂದು ರಾತ್ರಿ ನಗರದ ಸುಪರ್ ಮಾರ್ಕೆಟದ ನೂಲಾ ಆಸ್ಪತ್ರೆಯ ಹತ್ತಿರ ನಿಲ್ಲಿಸಿದ ನನ್ನ ಹಿರೋ ಹೊಂಡ ಮೋಟಾರ ಸೈಕಲ್ ನಂ: ಕೆಎ 32 ಅರ್ 2820 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ರೋಜಾ ಠಾಣೆ :
ಶ್ರೀ ಮೆಹಮೂದ ತಂದೆ ಮೆಹಬೂಬ ಸಾಬ ಸಾ:ನೂರಾನಿ ಮೊಹಲ್ಲಾ ಗುಲಬರ್ಗಾ ರವರು ನಾನು ದಿನಾಂಕ:10/07/2011 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ದರ್ಗಾದಿಂದ ಮನೆಯ ಕಡೆಗೆ ಹೋಗುತ್ತಿರುವಾಗ ಖಾಜಾ ಬಜಾರದಲ್ಲಿ ನನ್ನ ಎದುರಿಗೆ ಅಜೀಜ ಮತ್ತು ಸಂಗಡ 2 ಜನರು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಚಾಕುದಿಂದ ಎದೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು ಅವನ ಜೊತೆಯಲ್ಲಿದ್ದವರು ಕೂಡಾ ನನಗೆ ಕೈಯಿಂದ ಹೊಡೆಯ ಹತ್ತಿದರು ಅವರಿಂದ ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ಸೇರಿಕೆ ಯಾಗಿರುತ್ತೇನೆ. ನನಗೆ ಹೊಡೆದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: