POLICE BHAVAN KALABURAGI

POLICE BHAVAN KALABURAGI

30 June 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಸ್ಟೇಶನ ಬಜಾರ ಠಾಣೆ : ಶ್ರೀ ಮಿರ್ಜಾ ಬೇಗ್ ತಂದೆ ಮಿರ್ಜಾ ಹಸನ್ ಬೇಗ ಸಾ|| ಜೈನ್ ಹಾಸ್ಟೆಲ್ ಹಿಂದುಗಡೆ ಶಹಬಾಜ ಕಾಲೋನಿ ಗುಲಬರ್ಗಾ ರವರು ರಾತ್ರಿ ತಮ್ಮ ರೆಡಿಮೆಡ್ ಅಂಗಡಿ ಮುಚ್ಚಿಕೊಂಡು ರಹಿಮತ ನಗರದಿಂದ ಹೊರಟಾಗ ಅಜರ ರಹೆಮತ ನಗರ ಇತನು ನನಗೆ ನಿನ್ನ ಅಂಗಡಿಗೆ ಬಂದರೆ ಮರ್ಯಾದೆ ಕೊಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಬ್ಲೇಡನಿಂದ ದೇಹದ ಭಾಗದ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ರವಿಂದ್ರನಾಥ .ಬಿ.ನಾಡಗೌಡ ಶ್ರೀಸಿದ್ದೇಶ್ವರ ಪೇಂಟ್ಸ ಹಾಗು ಹಾರ್ಡವೇರ ದರ್ಶನ ಎಡಿಶನ್ ಕಾಂಪ್ಲೇಕ್ಸ ಜಗತ ಗುಲಬರ್ಗಾ ರವರು ನಮ್ಮ ಅಂಗಡಿಗೆ ದಿನಾಂಕ: 28-06-2011 ರಂದು ರಾತ್ರಿ ಅಂಗಡಿಗೆ ಬೆಂಕಿ ಬಿದ್ದು ಅಂಗಡಿಯಲ್ಲಿದ್ದ ಪೇಂಟ್ ಸಾಮಾನುಗಳು, ಕಂಪ್ಯೂಟರ್ ಯಂತ್ರಗಳು ಹಾಗು ವಿದ್ಯುತ್ ಮೀಟರ ಮೀರಟಗಳು ಹೀಗೆ ಒಟ್ಟು 5,26,000-00 ಕಿಮ್ಮತ್ತಿನ ಮೌಲ್ಯದ್ದು ಆಕಸ್ಮಿಕವಾಗಿ ಸುಟ್ಟು ಕರಲಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

No comments: