POLICE BHAVAN KALABURAGI

POLICE BHAVAN KALABURAGI

20 June 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ಮಳಖೇಡ ಠಾಣೆ : ಶ್ರೀ ಭೀಮರಾಯ ತಂದೆ ಬಸ್ಸಣ್ಣ ಮಡಿವಾಳ ಸಾ:ಮೀನಹಾಬಾಳ ತಾ:ಸೇಡಂ ರವರು ನನ್ನ ಹೆಂಡತಿಯಾದ ಘಾಳಮ್ಮ ಇವಳು ಅಂಗನವಾಡಿ ಕಾರ್ಯಕರ್ತೆ ಅಂತಾ ಕೆಲಸ ಮಾಡುತ್ತಾಳೆ, ಅವಳಿಗೆ ನಮ್ಮೂರ ಮಲ್ಲಪ್ಪ ತಂದೆ ಚಂದಪ್ಪ ಭಗವಂತೆನವರ ಇವನು ಆಗಾಗ ಹಿಂಬಾಲಿಸಿಕೊಂಡು ಹೋಗಿ ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ, ನೀನು ನನಗೆ ಇಷ್ಟವಾಗಿದ್ದಿ ಅಂತಾ ಹೇಳುತ್ತಿದ್ದ ಬಗ್ಗೆ ನಮಗೆ ಗೊತ್ತಾಗಿ ಅವನಿಗೆ ತಿಳಿಸಿ ಹೇಳಿದ್ದು ಇರುತ್ತದೆ. ದಿನಾಂಕ 10-6-2011 ರಂದು ಶುಕ್ರವಾರ ದಿವಸ ಮಧ್ಯಾನ ನನ್ನ ಹೆಂಡತಿಗೆ ಮಲ್ಲಪ್ಪ ತಂದೆ ಚಂದಪ್ಪ ಭಗವಂತೆನವರ ಇವನು ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ಹೋಗಿದ್ದು, ಇದಕ್ಕೆ ನಮ್ಮೂರ ಚಂದಪ್ಪ ತಂದೆ ಭೀಮಣ್ಣ ಭಗವಂತೆನವರ, ಜಗನ್ನಾಥ ತಂದೆ ಭೀಮಣ್ಣ ಭಗವಂತೆನವರ, ಹಾಗು ಜಗಮ್ಮ ಗಂಡ ಸತ್ಯವಾನ ಭಗವಂತೆನವರ ಸಾ|| ಎಲ್ಲರೂ ಮೀನಹಾಬಾಳ ರವರು ಅಪಹರಣ ಮಾಡಲು ಕುಮ್ಮಕ್ಕು ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಆಳಂದ ಠಾಣೆ : ಶ್ರೀ ಶರಣಪ್ಪಾ @ ಶರಣಬಸಪಪಾ ತಂದೆ ಶಾಂತಪ್ಪಾ ಹತ್ತರಕಿ ಸಾ|| ಬಾಳನಕೆರಿ ಆಳಂದ ರವರು ನಾನು ದಿನಾಂಕ: 16-06-2011 ರಂದು ಬೆಳಗ್ಗೆ ಆಳಂದ ಬಸ್ ಸ್ಟಾಂಡದ ನಾಗೇಶನ ಗ್ಯಾರೆಜ ಮುಂದೆ ನಿಂತಾಗ ಪಟ್ಟಣದಲ್ಲಿ ಬಾಳೆನಕೇರಿ ಕ್ರಾಸ್ ಬಳಿಯ ಬಾರುದ್ವಾಲೆ ಮನೆ ಹತ್ತಿರ ನಡೆದ ಜಗಳದ ದ್ವೇಶದಿಂದ ನನಗೆ ಚನ್ನಪ್ಪಾ ತಂದೆ ಮಲ್ಲಪ್ಪಾ ಹತ್ರಕಿ ಸಂಗಡ ಇನ್ನೂ 9 ಜನರು ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ಚಿತ್ರ ಪ್ರದರ್ಶನ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ವೀರಣ್ಣ ಎಮ. ಕುಂಬಾರ ಪಿ.ಎಸ.ಐ ಬ್ರಹ್ಮಪೂರ ಠಾಣೆರವರು ನಾನು ದಿನಾಂಕ : 19-06-2011 ರಂದು ಸಾಯಂಕಾಲ 4-00 ಗಂಟೆಗೆ ಕರ್ತವ್ಯದಲ್ಲಿದ್ದಾಗ ಸುಪರ ಮಾರ್ಕೆಟ ಚವ್ವಾಣ ಬಿಲ್ಟಿಂಗ ಮೊದಲನೆ ಅಂತ್ತಸ್ತಿನ ಶಕ್ತಿ ವಿಡಿಯೋ ಥೇಟರದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಅಶ್ಲೀಲ ಚಿತ್ರ ಪ್ರದರ್ಶಿಸಿರುತ್ತಾರೆ ಅಂತಾ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಮಾನ್ಯ ರವಿ ಡಿ.ಸಿ. ಎಸ.ಪಿ (ಪ್ರೊಬೇಶನರಿ) ಸಾಹೇಬರು ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಹಾಗು ಇಬ್ಬರ ಪಂಚರ ಸಮಕ್ಷಮ ಥೇಟರ ಒಳಗಡೆ ಹೋಗಿ ನೋಡಲಾಗಿ ರತಿ ಕ್ರಿಡೆಯಲ್ಲಿ ತೊಡಗಿರುವ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುತ್ತಿರುವವದನ್ನು ಸುಮಾರು 8-10 ಜನರು ನೋಡುತ್ತಾ ಕುಳಿತಿದ್ದು ಅಶ್ಲೀಲ ಚಿತ್ರ ಪ್ರದರ್ಶಿಸುತ್ತಿದ್ದ ಅಪರೇಟರ ದೇವಿಂದ್ರ ತಂದೆ ಮಲ್ಲಿಕಾರ್ಜುನ ಮಾವಿನಸೂರ ಸಾ|| ಕೃಷ್ಣಾ ನಗರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಪೈನಿರ ಕಂಪನಿಯ ಡಿ.ವಿ.ಡಿ, ಪ್ರೋಜೆಕ್ಟರ್, ಅಶ್ಲೀಲ ಕ್ಯಾಸೆಟ ಒಂದು ಟೆಕೆಟ ಬುಕ್ ಅರ್ದ ಉಪಯೋಗಿಸಿದ್ದು, ಟೀಕೆಟ ಮಾರಿದ ನಗದು ಹಣ 2450/- ರೂಪಾಯಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಪರೇಟರ ಮತ್ತು ಮಾಲಕನ ವಿರುದ್ದ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: