POLICE BHAVAN KALABURAGI

POLICE BHAVAN KALABURAGI

29 June 2011

GULBARGA DISTIRICT REPORTED CRIMES

ಕಳ್ಳತನ ಪ್ರರಕಣ :
ಅಶೋಕ ನಗರ ಠಾಣೆ : ಡಾ: ಮುರುಗೇಶ ತಂದೆ ಗುರುಶಾಂತಪ್ಪ ಪಸ್ತಾಪುರ ಸಾ|| ಭಗವತಿ ನಗರ ಗುಲಬರ್ಗಾ ರವರು ನಮ್ಮ ಪಸ್ತಾಫೂರ ದವಾಖಾನೆಯ ಜನರೇಟರ್ ಕೋಣೆಯ ಬಾಗಿಲ ಕೀಲಿ ಮುರಿದು ಜನರೇಟರ ಬ್ಯಾಟರಿ ನಂ. 95ಇ01612204ಸಿ10449 ನೇದ್ದು ಅ.ಕಿ. 10,000/- ರೂ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರರಕಣ :

ಗ್ರಾಮೀಣ ಠಾಣೆ : ಶ್ರೀ ಶ್ರೀನಿವಾಸ ತಂದೆ ಸೂರ್ಯಕಾಂತ ಚವ್ಹಾಣ ಸಾ|| ಐಯರವಾಡಿ ಹುಮನಾಬಾದ ಬೆಸ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನಮ್ಮ ತಂದೆ ನನ್ನ ಪರಿಚಯದವರಾದ ಸಿದ್ದಾರೋಡ ಅರಳಿಮರ ಎಲ್ಲರು ಕೂಡಿಕೊಂಡು ಸ್ವಾಮಿ ಸಮರ್ಥ ಮಂದಿರಕ್ಕೆ ಹೋಗುವ ಕುರಿತು ಆಟೋದಲ್ಲಿ ಹುಮನಾಬಾದ ರಿಂಗ ರೋಡಿಗೆ ಬಂದು ಅಲ್ಲಿ ಸೋಮಶೇಖರ ದುತ್ತರಗಿ ಹಾಗೂ ಸಿದ್ದಾರೋಡ ಅರಳಿಮರ ಇವರು ನಿಂತಿದ್ದು ಅವರ ಹತ್ತಿರ ಹೋಗುವ ಕುರಿತು ರೋಡ ದಾಟಲು ಹೋಗುವಾಗ ನಮ್ಮ ತಂದೆಗೆ ಲಾರಿ ನಂ ಕೆಎ 32 ಎ-4218 ಲಾರಿ ಚಾಲಕ ಕಾಶಪ್ಪಾ ಅಲ್ದಿಹಾಳ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿ ಪಡಿಸಿದ್ದರ ಪರಿಣಾಮ ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

No comments: