POLICE BHAVAN KALABURAGI

POLICE BHAVAN KALABURAGI

07 September 2020

KALABURAGI DISTRICT REPORTED CRIMES

 ಮೋಸ ವಂಚನೆ:-

ಅಫಜಲಪೂರ ಪೊಲೀಸ ಠಾಣೆ 

        ದಿನಾಂಕ: 06-09-2020 ರಂದು 9-00 ಪಿಎಮ್ ಕ್ಕೆ ಶ್ರೀ ಶಿವಾನಂದ ತಂದೆ ಕಾಶಿರಾಯ ಬೋರುಟಿ (ಕಳಸಗೊಂಡ) ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಅರ್ಜಿಸಲ್ಲಿಸಿದ್ದು ಸಾರಾಂಶವೇನೆಂದರೆ ನಾನು ಅಂದರೆ ಶ್ರೀ ಶಿವಾನಂದ ತಂದೆ ಕಾಶಿರಾಯ ಬೋರುಟಿ (ಕಳಸಗೊಂಡ) ವಯ|| 32 ವರ್ಷ ಜಾ|| ಕುಡ ಒಕ್ಕಲಿಗ ಉ|| ಒಕ್ಕಲುತನ ಸಾ|| ಮಾಶಾಳ ತಾ|| ಅಫಜಲಪೂರ ಆಗಿದ್ದು, ಮಾಶಾಳ ಸೀಮಾಂತರದಲ್ಲಿ ನನ್ನ ಹೆಸರಿಗೆ 520/2 ರಲ್ಲಿ 4 ಎಕರೆ 24 ಗುಂಟೆ ಹಾಗೂ 4 ಎಕರೆ ಒಟ್ಟು 8 ಎಕರೆ ಕೃಷಿ ಭೂಮಿ ಇರುತ್ತದೆ. ಸದರಿ ಜಮೀನಿನ ಮೇಲೆ ನನ್ನ ತಂದೆಯವರಾದ ಕಾಶೀರಾಯ ಇವರು ದಿನಾಂಕ 03-03-2010 ರಂದು ನಮ್ಮೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ನೇದ್ದರಲ್ಲಿ 12,100 ರೂ ಕೃಷಿ ಸಾಲ ಪಡೆದುಕೊಂಡಿರುತ್ತಾರೆ. ಅದರಂತೆ ನನ್ನ ತಂದೆಯವರು ದಿನಾಂಕ 25-04-2015 ರಂದು ಅಕಾಲಿಕ ಮರಣದಿಂದ ಮೃತ ಪಟ್ಟಿರುತ್ತಾರೆ. ಆದರೆ ಕೃಷಿ ಫತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಇವರು ನನಗೆ ಗೊತ್ತಿಲ್ಲದ ಹಾಗೆ ನನ್ನ ತಂದೆಯ ಖೊಟ್ಟಿ ಸಹಿ ಮಾಡಿ, ಈ ಹಿಂದೆ ಇದ್ದ ನಮ್ಮ ಸಾಲವನ್ನು ಮರುಪಾವತಿ ಮಾಡಿ, ನಂತರ ದಿನಾಂಕ 01-07-2016 ರಂದು ನನ್ನ ತಂದೆಯ ಹೆಸರಿನಲ್ಲಿದ್ದ ಜಮೀನಿನ ಮೇಲೆ 20,500/- ರೂ ಸಾಲ ಹಾಕಿಕೊಂಡು, ಸದರಿ ಸಾಲದ ಹಣವನ್ನು ನನ್ನ ತಂದೆಯ ಹೆಸರಿನಲ್ಲಿ ಡಿಸಿಸಿ ಬ್ಯಾಂಕ ಅಫಜಲಪೂರ ಶಾಖೆಯಲ್ಲಿ ಖಾತೆ ಸಂಖ್ಯೆ 198000668902 ಖಾತೆಯನ್ನು ತಗೆದಿದ್ದು, ಸದರಿ ಖಾತೆಗೆ ದಿನಾಂಕ 06-06-2018 ರಂದು 20,090/- ರೂ ಸಾಲದ ಹಣ ಜಮಾ ಆಗಿರುತ್ತದೆ. ನನ್ನ ತಂದೆಯು ಮೃತ ಪಟ್ಟ ನಂತರ ನನ್ನ ತಂದೆಯ ಹೆಸರಿನಲ್ಲಿದ್ದ ಸಾಲವನ್ನು ಅಲ್ಲಿಗೆ ಮುಕ್ತಾಯ ಮಾಡದೆ, ಅವರ ಖೋಟ್ಟಿ ಸಹಿಗಳನ್ನು ಮಾಡಿ, ಖೋಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಡಿಸಿಸಿ ಬ್ಯಾಂಕ ಅಫಜಲಪೂರದಲ್ಲಿ ಖಾತೆಯನ್ನು ತೆರೆದು, ನನ್ನ ತಂದೆಯವರು ಮೃತ ಪಟ್ಟದ್ದರು ಸಹ ಸಾಲವನ್ನು ಮರುಪಾವತಿ ಮಾಡಿ, ಸಾಲವನ್ನು ತನ್ನ ಸ್ವಂತ ಲಾಭಕ್ಕಾಗಿ ಮುಂದುವರೆಸಿಕೊಂಡು ಬಂದಿರುತ್ತಾನೆ. ನಮ್ಮಂತೆ ನಮ್ಮೂರಿನ 1) ಶಿವಶರಣಪ್ಪ ತಂದೆ ಮಲ್ಲಪ್ಪ ಹಿಪ್ಪರಗಿ ಇವರ ಹೊಲ ಸವರ್ೆ ನಂ 552/1 ರ 4 ಎಕರೆ 4 ಗುಂಟೆ ಜಮೀನಿನ ಮೇಲೆ ಸದರಿ ಶಿವಶರಣಪ್ಪ ಇವರಿಗೆ 02 ಬೇಳೆ ಸಾಲ ಮಂಜೂರಾತಿ ಮಾಡಿ, ಸದರಿಯವರಿಗೆ ಗೊತ್ತಿಲ್ಲದ ಹಾಗೆ ಡಿಸಿಸಿ ಬ್ಯಾಂಕ ಅಫಜಲಪೂರದಲ್ಲಿ 03 ಖಾತೆಗಳನ್ನು ತೆರೆದು ವಿವಿಧ ಹಂತಗಳಲ್ಲಿ ಸುಮಾರು 21,000/- ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ.  2) ಹಣಮಂತ ತಂದೆ ದ್ಯಾವಪ್ಪ ಜವಳಗಿ ಇವರ ಹೊಲ ಸವರ್ೆ ನಂ 701 ನೇದ್ದರ 5 ಎಕರೆ ಜಮೀನಿನ ಮೇಲೆ ಇದ್ದ 10,000/- ರೂ ಸಾಲವನ್ನು ಹಣಮಂತ ಇವರು ಮರುಪಾವತಿ ಮಾಡಿದ್ದು, ನಂತರ ವಿಜಯಕುಮಾರ ಇವರು ಹಣಮಂತ ಇವರಿಗೆ ಗೊತ್ತಿಲ್ಲದ ಹಾಗೆ ಖೊಟ್ಟಿ ದಾಖಲೆಗಳನ್ನು ತಯಾರಿಸಿ ಪುನ ಸದರಿ ಜಮೀನಿನ ಮೇಲೆ 11,250/- ರೂ ಸಾಲವನ್ನು ಪಡೆದುಕೊಂಡು, ಡಿಸಿಸಿ ಬ್ಯಾಂಕ ಅಫಜಲಪೂರದಲ್ಲಿಂದ ಸದರಿ ಹಣವನ್ನು ತಾನೆ ಬಿಡಿಸಿಕೊಂಡು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾನೆ. 3) ಮಾಹಾದೇವಯ್ಯ ತಂದೆ ಮಡಿವಾಳಯ್ಯ ದಿಕ್ಸಂಗಿ ಇವರ ಹೊಲ ಸರ್ವೇ ನಂ 17 ನೇದ್ದರ 4 ಎಕರೆ 38 ಗುಂಟೆ ಜಮೀನಿನ ಮೇಲೆ ಎರಡು ಬಾರಿ ಸಾಲ ಪಡೆದುಕೊಂಡಿದ್ದು, ಒಂದು ಬಾರಿ ಸಾಮಾನ್ಯ ವರ್ಗದಲ್ಲಿ ಹಾಗೂ ಇನ್ನೊಂದು ಭಾರಿ ಪರಿಶೀಷ್ಟ ಜಾತಿಯೆಂದು ನಮುದು ಮಾಡಿ 17000/- ರೂ ಸಾಲ ಪಡೆದುಕೊಂಡಿರುತ್ತಾನೆ. 4) ಮಲ್ಲಪ್ಪ ತಂದೆ ನಾಗಪ್ಪ ಗುಜ್ಜಾ ಇವರ ಹೆಸರಿನಲ್ಲಿರುವ ಹೊಲ ಸರ್ವೆ ನಂ 718/4 ರಲ್ಲಿ 5 ಎಕರೆ ಕೃಷಿ ಭೂಮಿ ಮೇಲೆ ಮಲ್ಲಪ್ಪ ಇವರಿಗೆ ಗೊತ್ತಿಲ್ಲದ ಹಾಗೆ ಖೊಟ್ಟಿ ಸಹಿ ಮಾಡಿ ಸದರಿ ಜಮೀನಿನ ಮೇಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ದಲ್ಲಿ 42,000/- ರೂ ಸಾಲ ಹಾಕಿಕೊಂಡು, ಹಣವನ್ನು ತಾನೆ ಪಡೆದುಕೊಂಡು ಮೋಸ ಮಾಡಿರುತ್ತಾನೆ. 5) ಬಸಣ್ಣ ತಂದೆ ನಾಗಪ್ಪ ಬರಮಚಿ ಇವರು 2009 ನೇ ಇಸ್ವೀಯಲ್ಲಿ ಮೃತಪಟ್ಟಿದ್ದು, ಸದರಿ ಬಸಣ್ಣ ಇವರ ಹೆಸರಿನಲ್ಲಿ 2016 ನೇ ಸಾಲಿನಲ್ಲಿ 11,550/- ರೂ ಸಾಲವನ್ನು ಪಡೆದುಕೊಂಡು ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ. ಈ ಎಲ್ಲಾ ವಿಷಯವು ನಾನು ಮತ್ತು ಶಿವಶರಣಪ್ಪ ಹಿಪ್ಪರಗಿ, ಹಣಮಂತ ಜವಳಗಿ, ಮಹಾದೇವಯ್ಯ ದಿಕ್ಸಂಗಿ, ಮಲ್ಲಪ್ಪಾ ಗುಜ್ಜಾ, ಚೌಡಪ್ಪ ಬರಮಚಿ ಎಲ್ಲರೂ ಸೋಸೈಟಿಗೆ ವಿಚಾರಣೆ ಮಾಡಲು ಹೋದಾಗ ಈ ವಿಷಯವು ನಮಗೆ ಗೊತ್ತಾಗಿ ನಾವೆಲ್ಲರೂ ಕೂಡಿ ದೂರು ನಿಡಲು ಠಾಣೆಗೆ ಬಂದಿರುತ್ತೇವೆ. ಸದರಿ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕೃಷಿ ಫತ್ತಿನ ಸಹಕಾರ ಸಂಘ ಮಾಶಾಳ ಇವರು ನನಗೆ ಮತ್ತು ನಮ್ಮೂರಿನ ಇನ್ನು ಅನೇಕ ಜನ ರೈತರ ಜಮೀನಿನ ಮೇಲೆ ಸಾಲವನ್ನು ಎತ್ತಿ ಹಣ ಕೊಳ್ಳೆ ಹೊಡೆದಿರುತ್ತಾನೆ.  ಕಾರಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಸಾ|| ಮಾಶಾಳ ಇವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನನ್ನ ಖೋಟ್ಟಿ ಸಹಿ ಮಾಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹೆಸರಿನಲ್ಲಿ ಬೇಳೆ ಸಾಲ ಪಡೆದುಕೊಂಡು ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿ ಹಾಗೂ ಮನ್ನಾ ಆದ ಸಾಲದ ಹಣವನ್ನು ಸಹ ನಮಗೆ ಮರಳಿಸದೆ ನಮಗೂ ಮತ್ತು ಸರ್ಕಾರಕ್ಕೂ ಮೋಸ ಮಾಡಿರುತ್ತಾನೆ. ಇವರ ಮೇಲೆ ಹಾಗೂ ಸದರಿ ಅವ್ಯೆವಹಾರದಲ್ಲಿ ಇನ್ನು ಯಾರು ಯಾರು ಬಾಗಿಯಾಗಿದ್ದಾರೆ ಎಂಬ ಬಗ್ಗೆ ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

05 September 2020

KALABURAGI DISTRICT REPORTED CIRMES

 ರಸ್ತೆ ಅಪಘಾತ ಪ್ರಕರಣ:-

ಮುಧೋಳ ಪೊಲೀಸ ಠಾಣೆ 

         ದಿನಾಂಕ: 04-09-2020  ರಂದು 06.00 ಪಿಎಮ್ ಕ್ಕೆ ಫಿರ್ಯಾದಿ ಶ್ರೀಮತಿ ಪಾರ್ವತಿ ಗಂಡ ಸುರೇಶ ಚವ್ಹಾಣ ವ|| 22 ವರ್ಷಜಾ|| ಲಂಬಾಣಿ ಸಾ|| ಕೋನಾಪೂರ ಎಸ್.ಎನ್. ತಾಂಡಾ ಇವರು ಫಿರ್ಯಾದು ನೀಡಿದ ಸಾರಾಂಶವೆನೆಂದರೆ, ದಿನಾಂಕ 30-08-2020 ರಂದು ಸಾಯಂಕಾಲ 06.30 ಗಂಟೆ ಸುಮಾರಿಗೆ ನನ್ನ ಗಂಡ ಸುರೇಶ ಹಾಗೂ ವೆಂಕಟೇಶ ಇಬ್ಬರು ಕೂಡಿ ಮೋಟರ್ ಸೈಕಲ ನಂ ಕೆಎ-32 ಇಜೆ-0534 ನೇದ್ದರ ಮೇಲೆ ಕೋಲಕುಂದಾ ಗ್ರಾಮದಿಂದ ಕೋನಾಪೂರ ಎಸ್.ಎನ್. ತಾಂಡಾಕ್ಕೆ ಹೋಗುವಾಗ ಆರೋಪಿತ ವೆಂಕಟೇಶನು ತನ್ನ ಮೋಟರ್ ಸೈಕಲನ್ನು ಅತಿವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದರಿಂದ ಗಾಯಾಳು ನನ್ನ ಗಂಡ ಸುರೇಶ ಇತನಿಗೆ ತಲೆಗೆ ಹಾಗೂ ಮೈಕೈಗೆ ಭಾರಿರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮನುಷ್ಯ ಕಾಣೆಯಾದ ಬಗ್ಗೆ :-

ಅಫಜಲಪೂರ ಪೊಲೀಸ ಠಾಣೆ 

            ಇಂದು ದಿ:04-09-2020 ರಂದು 1:45 ಪಿ.ಎಮ್. ಕ್ಕೆ ಶ್ರೀಮತಿ ಸವೀತಾ ಗಂಡ ಲಿಂಬಾಜಿ ರಾಠೋಡ ಸಾ|| ಬಾಳು ತಾಂಡಾ (ಮಾಶಾಳ) ತಾ||ಅಫಜಲಪೂರ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ  ಸಾರಾಂಶವೇನೆಂದರೆ, ದಿನಾಂಕ: 01-09-2020 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ಲಿಂಬಾಜಿ ಇತನು ಸ್ವಲ್ಪ ಕೆಲಸವಿದೆ ಹೊರಗಡೆ ಹೋಗಿ ಬರುತ್ತೇನೆ ಅಂತಾ ಮೋಟಾರ ಸೈಕಲ್ ನಂ ಕೆಎ-32 ಈಟಿ- 0889 ನೇದ್ದನ್ನು ತೆಗೆದುಕೊಂಡು ಹೋಗಿದ್ದು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ ನಾನು ಮತ್ತು ನನ್ನ ಭಾವನಾದ ರೂಪಸಿಂಗ ತಂದೆ ನಾಮದೇವ ರಾಠೋಡ ಕೂಡಿಕೊಂಡು ನನ್ನ ಗಂಡನಿಗೆ ಎಲ್ಲಾಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಮತ್ತು ನಮ್ಮ ಸಂಬಂಧಿಕರಲ್ಲಿ ಪೋನ ಮಾಡಿ ವಿಚಾರಿಸಲಾಗಿ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ.  

ಕಾಣೆಯಾದ ನನ್ನ ಗಂಡನ   ಚಹರಾಪಟ್ಟಿ

ಹೆಸರು ಮತ್ತು ವಿಳಾಸ :- ಲಿಂಬಾಜಿ ತಂದೆ ನಾಮದೇವ ರಾಠೋಡ ವ|| 37 ವರ್ಷ ಜಾ|| ಲಂಬಾಣಿ ಸಾ|| ಬಾಳು ತಾಂಡಾ (ಮಾಶಾಳ) ತಾ|| ಅಫಜಲಪೂರ ಜಿ: ಕಲಬುರಗಿ                               

 ಎತ್ತರ :-   ಅಂದಾಜು 5 ಪೀಟ್  05 ಇಂಚು

ಮುಖ  ಚಹರೆ : ಕೋಲಿ ಮುಖ, ಸಾದಾಗಪ್ಪು ಬಣ್ಣ, ಸಾದಾರಣ ಮೈಕಟ್ಟು ಇರುತ್ತದೆ

ಕಾಣೆಯಾದ ದಿನದಂದು ಧರಸಿದ ಉಡುಪುಗಳು :- ಬಿಳಿ ಶರ್ಟ್, ನೀಲಿ ಪ್ಯಾಂಟ

ಮಾತನಾಡುವ ಬಾಷೆಗಳು :- ಕನ್ನಡ, ಲಂಬಾಣಿ

           ಕಾರಣ ಕಾಣೆಯಾದ ನನ್ನ ಗಂಡನನ್ನು ಹುಡುಕಿಕೊಡಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

02 September 2020

KALABURAGI DISTRICT REPORTED CRIMES

ರಸ್ತೆ ಅಪಘಾತ ಮರಣಾಂತಿಕ:-

ಯಡ್ರಾಮಿ ಪೊಲೀಸ ಠಾಣೆ 

           ದಿನಾಂಕ:01-09-2020 ರಂದು 10-30 ಪಿ ಎಮ್ ಕ್ಕೆ ಫಿರ್ಯಾದಿ ದೇವಕ್ಕಿ ಗಂಡ ಬಸವರಾಜ @ ಬಸಪ್ಪ ದೊಡ್ಡಮನಿ ವಯ:45 ವರ್ಷ ಸಾ:ಮಾಣಶಿವಣಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ,  ದಿನಾಂಕ:01-09-2020 ರಂದು ಹರನೂರ ಗ್ರಾಮದಲ್ಲಿ ನಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ನಾನು ನನ್ನ ಗಂಡ ನಮ್ಮ EXCEL ಮೋಟಾರ ಸೈಕಲ ನಂಬರ KA-28 L-7604 ನೇದ್ದನು ತೆಗೆದುಕೊಂಡು ಹೋಗಿ ಮರಳಿ ಬರುವಾಗ ನಮ್ಮ ಮೋಟರ ಸೈಕಲ ಕೆಟ್ಟಿದ್ದರಿಂದ ಮುತ್ತಕೊಡ ಗ್ರಾಮದಲ್ಲಿ ಇಟ್ಟು ಬಂದಿರುತ್ತೆವೆ, ಇಂದು ನನ್ನ ಗಂಡ ಮೋಟರ ಸೈಕಲ ತೆಗೆದುಕೊಂಡು ಬರುತ್ತೆನೆಂದು 4 ಗಂಟೆಗೆ ಮನೆಯಿಂದ ಹೋದನು ನಂತರ 8 ಪಿ ಎಮ್ ಸುಮಾರಿಗೆ ನಮ್ಮ ಊರ ಮಹಾದೇವಪ್ಪ ಕೂಡಿ ಇವರ ಹೋಲದ ಹತ್ತಿರ ರಸ್ತೆಯ ಮೇಲೆ ನನ್ನ ಗಂಡನ ಮೋಟರ ಸೈಕಲ ಅಪಘಾತವಾಗಿ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತಾ ವಿಷಯ ತಿಳಿದ್ದರಿಂದ ನಾನು, ಮತ್ತು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ರಸ್ತೆಯ ಮೇಲೆ ನನ್ನ ಗಂಡ ಮೃತ ಪಟ್ಟು ಬಿದ್ದಿದ್ದನು, ಅವನನ್ನು ನೋಡಲಾಗಿ ಎಡ ಕಣ್ಣಿನ ಹತ್ತಿರ ಹಣೇಯ ಮೇಲೆ ಬಾರಿ ರಕ್ತಗಾಯವಾಗಿ ಮೂಗಿನಿಂದ ಮತ್ತು ಕೀವಿಗಳಿಂದ ರಕ್ತ ಸೋರುತ್ತಿತ್ತು, ನನ್ನ ಗಂಡನ ಮೋಟರ ಸೈಕಲ ಸ್ಥಳದಲ್ಲೇ ಬಿದ್ದಿತ್ತು ನನ್ನ ಗಂಡನಿಗೆ ಅಪಘಾತ ಪಡಿಸಿದ್ದ ಮೋಟರ ಸೈಕಲ ಕೂಡಾ ಸ್ಥಳದಲ್ಲಿಯೇ ಬಿದ್ದಿದ್ದು ಅದರ ನಂಬರ:KA-28 EM-0200 ನೇದ್ದು ಇದ್ದು.  ಅಪಘಾತ ಪಡಿಸಿದ್ದ ವ್ಯಕ್ತಿಗೆ ನೋಡಲಾಗಿ ಎಡ ತಲೆಯ ಹತ್ತಿರ ರಕ್ತಗಾಯವಾಗಿದ್ದು ಅವನ ಹೆಸರು ಕೇಳಿದ್ದಾಗ ಮೂರಾರ್ಜಿ ತಂ ನಿಂಗಣ್ಣ ಹುಡೆದ ಸಾ:ಸುಂಗಠಾಣ ತಾ:ಸಿಂದಗಿ ತಿಳಿಸಿದನು. ಕಾರಣ ನನ್ನ ಗಂಡ ಮೋಟರ ಸೈಕಲ ತಗೆದುಕೊಂಡು ಊರಿಗೆ ಬರುವಾಗ 8 ಪಿ ಎಮ್ ಸುಮಾರಿಗೆ ನಮ್ಮ ಊರಿನ ಮಹಾದೇವಪ್ಪ ಕೂಡಿ ರವರ ಹೋಲದ ಹತ್ತಿರ ಎದುರುಗಡೆಯಿಂದ ಮೂರಾರ್ಜಿ ಎಂಬುವವನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ನನ್ನ ಗಂಡನ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಹೋಡೆದಿದ್ದರಿಂದ ನನ್ನ ಗಂಡ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅವನ ವಿರುದ್ದ ಕ್ರಮ ಕೈಗೋಳ್ಳಬೇಕು ಅಂತಾ ದೂರು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ:-

ಅಫಜಲಪೂರ ಪೊಲೀಸ ಠಾಣೆ 

           ದಿನಾಂಕ 01-09-2020 ರಂದು 8:00 ಪಿ,ಎಮ್ ಕ್ಕೆ  ಅಫಜಲಪೂರ ಪಟ್ಟಣದ ಸಿದ್ರಾಮೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದಿದ್ದರಿಂದ ಪಿಎಸ್ಐ ಸಂತೋಷ ತಟ್ಟೆಪಳ್ಳಿ, ಹಾಗು ಸಿಬ್ಬಂದಿ ಜನರಾದ ಸುರೇಶ ಹೆಚ್,ಸಿ-394, ಸಂತೋಷ ಹೆಚ್.ಸಿ-439, ಆದಿಗೊಂಡ ಪಿಸಿ-1247 ಎಲ್ಲರೂ ಕೂಡಿಕೊಂಡ ಪಂಚ ಜನರೊಂದಿಗೆ ಅಫಜಲಪೂರ ಪಟ್ಟಣದ ಪೋಸ್ಟ ಆಫೀಸ್ ಹತ್ತೀರ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಸಿದ್ರಾಮೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ ಆತನು ತನ್ನ ಹೆಸರು ಮಹೇಶ ತಂದೆ ಮಲ್ಲಪ್ಪ ಹೆಗ್ಗಿ ವಯ||32 ವರ್ಷ ಜಾ|| ಲಿಂಗಾಯತ ಉ||ಕಾರ ಚಾಲಕ ಸಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 4520/-  ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ಇವುಗಳನ್ನು ಜಪ್ತಿ ಪಂಚನಾಮೆ ಪ್ರಕಾರ ವಶಕ್ಕೆ ತೆಗೆದುಕೊಂಡಿದ್ದರಿಂದ ಆರೋಪಿನ ವಿರುದ್ದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಜಾತಿ ನಿಂದನೆ ಪ್ರಕರಣ:-

ಮುಧೋಳ ಪೊಲೀಸ ಠಾಣೆ 

    ದಿನಾಂಕ 01-09-2020 ರಂದು ಸಾಯಂಕಾಲ 05.30 ಗಂಟೆಗೆ ಪಿರ್ಯಾದಿ ಶ್ರೀಶೈಲ ತಂದೆ ಮಲ್ಲಪ್ಪ ಮಾಲಾ ವ|| 22 ಉ|| ಕೂಲಿ ಜಾ|| ಮಾದಿಗ ಸಾ|| ರಿಬ್ಬನಪಲ್ಲಿ ತಾ|| ಸೇಡಂ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ಈಗ ಸುಮಾರು 3-4 ದಿವಸಗಳ ಹಿಂದೆ ನಮ್ಮೂರಿನ ವೆಂಕಟಪ್ಪ ತಂದೆ ಆಶಪ್ಪ ಬದಿಗಾ ಇವರ ಮತ್ತು ನಮ್ಮೂರಿನ ರಾಜು ತಂದೆ ಬಾಲಚಂದ್ರಪ್ಪ ಇರಡಪಲ್ಲಿ ಇವರ ಮದ್ಯದಲ್ಲಿ ಜಗಳ ತಂಟೆ ತಕರಾರು ಆಗಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿರುತ್ತವೆ. ಈ ಜಗಳಕ್ಕೆ ಮತ್ತು ನನಗೆ ಯಾವುದೇ ಸಂಬಂದ ಇರುವದಿಲ್ಲಾ. ಆದರೇ ನಿನ್ನೆ ದಿನಾಂಕ 31-08-2020 ರಂದು ನಾನು 04.30 ಪಿಎಮ್ ಸುಮಾರಿಗೆ ನಮ್ಮೂರಿನ ಅಂಗನವಾಡಿ ಕೇಂದ್ರದ ಹತ್ತಿರ ಇರುವ ಕಟ್ಟೆಯ ಮೇಲೆ ಕುಳಿತ್ತಿದ್ದಾಗ  ನಮ್ಮೂರಿನ ಮಾರುತಿ ತಂದೆ ಆಶಪ್ಪ ಬದಿಗಾ ಅವನ ತಮ್ಮನಾದ ವೆಂಕಟಪ್ಪ ಬದಿಗಾ ಹಾಗೂ ಅವರ ತಂದೆ ಆಶಪ್ಪ ಬದಿಗಾ ಇವರು 3 ಜನರು ಕೂಡಿಕೊಂಡು ನನ್ನ ಹತ್ತಿರ ಬಂದು ನನಗೆ “ ಏ ಮಾದಿಗ ಸೂಳೆ ಮಗನೇ ನಿನಗೆ ಬಹಳ ಸೊಕ್ಕು ಬಂದಿದೆ ರಂಡಿ ಮಗನೇ ನೀನೆ ನಮ್ಮ ಜಾತಿಯ ಹುಡುಗರೊಂದಿಗೆ ಓಡಾಡಿ ಅವರ ತಲೆ ಕೆಡಿಸಿ ಅವರೆಲ್ಲರೂ ನಮ್ಮೊಂದಿಗೆ  ಜಗಳ ಮಾಡುವಂತೆ ಮಾಡಿದ್ದಿಯಾ, ಸುಳೆ ಮಗನೇ “ ಅಂತಾ ಅಂದು ಕೈಯಿಂದ, ರಾಡಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ, ನಂತರ 3 ಜನರು ನನಗೆ ಮತ್ತೆ ಮಾದಿಗ ಸೂಳೆ ಮಗನೆ ನೀನು ಇಂದು ಉಳಿದಿದ್ದಿ ಇನ್ನು ಮುಂದೆ ನೀನು ನಮ್ಮ ಜಾತಿಯ ಹುಡುಗರೊಂದಿಗೆ ದೋಸ್ತಿ ಮಾಡಿ ಅವರೊಂದಿಗೆ ಓಡಾಡುವದು ಕಂಡು ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.  ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಫಿರ್ಯಾದು ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಇಸ್ಪೇಟ  ಜೂಜಾಟ:-

ಶಹಾಬಾದ ನಗರ ಪೊಲೀಸ ಠಾಣೆ 

          ದಿನಾಂಕ 01/09/2020 ರಂದು 7-00 ಪಿಎಮ್ ಕ್ಕೆ ಶ್ರೀ ತಿರುಮಲೇಶ ಪಿ ಎಸ್ ಐ (ಕಾಸು)  ಶಹಾಬಾದ ನಗರ ಪೊಲೀಸ ಠಾಣೆ  ರವರು ಠಾಣೆಗೆ ಹಾಜರಾಗಿ  ಆರೋಪಿತರು ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು  ಅದರ ಸಾರಂಶವೆನೆಂದರೆ ಇಂದು ದಿನಾಂಕ: 01/09/2020 ರಂದು ದೇವನ ತೆಗನೂರ ಗ್ರಾಮದ ಸೇವಾಲಾಲ ಗುಡಿಯ ಮುಂದೆಗಡೆ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಇಸ್ಪೇಟಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ  ಬಂದ ಮೇರೆಗೆ ನಾನು, ಸಿಬ್ಬಂದಿ ಮತ್ತು ಪಂಚಜನರೊಂದಿಗೆ ದೇವನ ತೆಗನೂರ ಗ್ರಾಮಕ್ಕೆ ಹೋಗಿ ಒಂದು ಮನೆಯ ಗೊಡೆಯ ಮರೆಯಾಗಿ ನಿಂತು ನೋಡಲಾಗಿ ಸೇವಾಲಾಲ ಗುಡಿಯ  ಮುಂದುಗಡೆ ಖುಲ್ಲಾ ಜಾಗೆಯಲ್ಲಿ  ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ ಇಸ್ಪೇಟಾ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ 5-15 ಪಿ.ಎಮ್ ಕ್ಕೆ ದಾಳಿ  ಆರೋಪಿತರಾದ ಸೈನಪತಿ ಗಂದೆ ಸುಭಾಷ ಚವ್ಹಾಣ ಸಂಗಡ 07 ಜನರು ಸಾ: ದೇವನ ತೆಗನೂರ ಮತ್ತು ಮುತ್ತಾಗಾ ಒಟ್ಟು 08 ಜನರಿಗೆ  ಹಿಡಿದು ಅವರಿಂದ ಇಸ್ಪೇಟಾ ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 4440-00 ರೂ ಹಾಗೂ 52 ಇಸ್ಪೇಟಾ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದಿದ್ದು ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಸಾರಾಂಶ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.