POLICE BHAVAN KALABURAGI

POLICE BHAVAN KALABURAGI

25 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 23/09/2019  ರಂದು  ಬೆಳಿಗ್ಗೆ ನನ್ನ  ತಂದೆಯು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ  ಕೆ ಎ - 32 ಎಸ್- 9203 ನೇದ್ದರ ಮೇಲೆ ಕಿರಾಣಿ ಸಾಮಾನು ತರುತ್ತೇನೆ ಅಂತಾ ಹೇಳಿ  ಶಹಾಬಾದಕ್ಕೆ ಹೋಗಿದ್ದರು.  12-30 ಪಿ ಎಮ್ ಕ್ಕೆ ನನಗೆ ಮಾಲಗತ್ತಿ ಹತ್ತಿರದ ಪಾನ್ ಡಬ್ಬಿಯ ಆನಂದ ಕೊಳ್ಳಿ ಇತನು ಫೋನ್ ಮಾಡಿ  ತಮ್ಮ ತಂದೆಯವರು ನಡೆಸಿಕೊಂಡು ಬರುತ್ತಿದ್ದ ಮೋ ಸೈ  ಟಿ ವಿ ಎಸ್ ಎಕ್ಸ್ ಎಲ್ ಕ್ಕೆ ಮಾಲಗತ್ತಿ ಕ್ರಾಸ್ ಹತ್ತಿರ ರಸ್ತೆ ಅಪಘಾವಾಗಿದೆ ಅಂತಾ ತಿಳಿಸಿರುತ್ತಾರೆ. ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ  ಕುಟುಂಬದವರಾದ ತಾಯಿ ಗುಂಡಮ್ಮ, ತಮ್ಮ ರಾಜಕುಮಾರ ಮತ್ತು ಸುರೇಶ ಮಿರಾಜ್ ಕರ್  ಶಹಾಬಾದ ಹಾಗೂ  ಆನಂದಕೊಳ್ಳಿ ಮಲ್ಲಿಕಾರ್ಜುನ ಇಡಗಿ ಇದ್ದರು.  ರಸ್ತೆಯ ಎಡಬದಿಗೆ ಬಿದ್ದ ನಮ್ಮ ತಂದೆಯನ್ನು ನೋಡಲಾಗಿ ಅವರ ಎಡಕಾಲಿಗೆ ಭಾರಿ ಗುಪ್ತ ಪೆಟ್ಟಾಗಿದ್ದು ಮತ್ತು ತಲೆಗೆ ಮುಖಕ್ಕೆ ಪೆಟ್ಟಾಗಿ ಬಾಯಿ, ಕಿವಿ, ಮತ್ತು  ಮೂಗಿನಿಂದ ರಕ್ತ ಬಂದು ಮೃತಪಟ್ಟಿದ್ದರು ಅಲ್ಲೆ ಇದ್ದ  ಆನಂದ ಮಿರಾಜ್ ಕರ್  ಮತ್ತು ಮಲ್ಲಿಕಾರ್ಜುನ ಇಟಗಿ ಇವರಿಗೆ ವಿಚಾರಿಸಲು ಗೊತ್ತಾಗಿದ್ದೇನೆಂದರೆ 12-30 ಪಿ ಎಮ್ ಸುಮಾರಿಗೆ ನಿಮ್ಮ ತಂದೆಯವರು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ ಕೆ ಎ - 32 ಎಸ್ – 9203 ನೇದ್ದರ ಮೇಲೆ ಕಿರಾಣಿ ಸಾಮಾನು ತೆಗೆದುಕೊಂಡು ಬರುವಾಗ ಕ್ರಾಸ್ ಹತ್ತಿರ ಟರ್ನ್ ಮಾಡಿಕೊಂಡು ನಡೆದಾಗ ರಾವೂರು ರಸ್ತೆ ಕಡೆಯಿಂದ ಒಬ್ಬ ಮೊ ಸೈ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಮ್ಮ  ತಂದೆಯವರ ಮೊ ಸೈ ಕ್ಕೆ ಡಿಕ್ಕಿಪಡಿಸಿದ್ದರಿಂದ  ನಿಮ್ಮ ತಂದೆಯವರ ಎಡಗಾಲಿಗೆ ಭಾರಿ ಗುಪ್ತಪೆಟ್ಟಾಗಿದ್ದು ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾರೆ. ಮತ್ತು ಡಿಕ್ಕಿಪಡಿಸಿದವನ  ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲಾ ಡಿಕ್ಕಿಪಡಿಸಿದವನ  Super Splendar   ಮೊ ಸೈ  ನಂ ಕೆ ಎ 32 ಇ ಸಿ 1372 ಇರುತ್ತದೆ ಅಂತಾ ಮಾಹಿತಿ ನೀಡಿದ್ದುರುತ್ತಾರೆ ಅಂತಾ ಶ್ರೀ ನಾಗೇಂದ್ರ ತಂದೆ ಬಸಣ್ಣ ಸಾ: ಮಾಲಗತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಹಾಂತೇಶ ತಂದೆ ಬಂಡೇಪ್ಪ ಬಿರಾದಾರ ಸಾ|| ಯಡ್ರಾಮಿ ತಾ|| ಯಡ್ರಾಮಿ ರವರ  ಮನೆಯ ಪಕ್ಕದಲ್ಲಿ ನಮ್ಮ ತಮ್ಮಂದಿರರಾದ ಬಸವರಾಜ ಬಿರಾದಾರ, ಈರಣ್ಣ ಬಿರಾದಾರ ಇವರ ಮನೆಗಳು ಇರುತ್ತವೆ, ನಮ್ಮ ಮನೆಯ ಅಲ್ಮಾರಿಯಲ್ಲಿ 1,35,000/- ರೂ ನಗದು ಹಣ, ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್, ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಯಷ್ಟನ್ನು ಅಲ್ಮಾರಿಯಲ್ಲಿ ಇಟ್ಟಿದ್ದು ಇರುತ್ತದೆ, ನಿನ್ನೆ ದಿನಾಂಕ 23-09-2019 ರಂದು ನನ್ನ ಮಗಳು ಸವಿತಾ ಇವಳ ಡಿಲೆವರಿ (ಹೆರಿಗೆ) ಸಲುವಾಗಿ ನಮ್ಮ ಮನೆಯ ಬಾಗಿಲಗೆ ಕೀಲಿ ಹಾಕಿಕೊಂಡು ನಾನು ನನ್ನ ಹೆಂಡತಿ ಇಬ್ಬರು ಕೂಡಿ ಕಲಬುರಗಿಗೆ ದವಾಖಾನೆಗೆ ಹೋಗಿದ್ದೇವು, ಇಂದು ದಿನಾಂಕ 25-09-2019 ರಂದು ಬೆಳಿಗ್ಗೆ 03;30 ಗಂಟೆ ಸುಮಾರಿಗೆ ನಮ್ಮ ತಮ್ಮ ಈರಣ್ಣ ಇವರು ನನಗೆ ಫೋನ ಮಾಡಿ ನಾನು ಇಂದು ರಾತ್ರಿ ವೇಳೆಯಲ್ಲಿ 01;00 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ನಿಮ್ಮ ಮನೆಯ ಬಾಗಿಲ ಕೀಲಿ ಹಾಕಿದ್ದಿತ್ತು, ನಂತರ ಇದೀಗ ಪುನಹ  ಮತ್ತೆ ಮೂತ್ರ ವಿಸರ್ಜನೆ ಮಾಡಲು ಎದ್ದು ನೋಡಿದಾಗ ನಿಮ್ಮ ಮತ್ತು ಬಸವರಾಜ ಬಿರಾದಾರ ರವರ ಮನೆಯ ಬಾಗಿಲ ಕೊಂಡಿಯನ್ನು ಯಾರೋ ಕಳ್ಳರು ಮುರಿದು ಬಾಗಿಲ ತೆರೆದಿರುತ್ತಾರೆ, ನೀವು ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು ನನ್ನ ಹೆಂಡತಿ ಇಬ್ಬರು ಕೂಡಿ ಮನೆಗೆ ಬಂದು ನಂತರ ನಮ್ಮ ತಮ್ಮಂದಿರಾದ ಈರಪ್ಪ, ಬಸವರಾಜ, ನಾಗಣ್ಣ ಬಿರಾದಾರ, ರವರು ಕೂಡಿ ನಮ್ಮ ಮನೆಯೊಳಗೆ ಹೋಗಿ ನೋಡಿದಾಗ ನಮ್ಮ ಅಲ್ಮಾರಿಯ ಬಾಗಿಲ ತೆರೆದಿತ್ತು, ಅದರಲ್ಲಿದ್ದ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಮಾರಿಯಲ್ಲಿ ನಾವು ಇಟ್ಟಿದ 1,35,000/- ರೂ ನಗದು ಹಣ, ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್, ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಬೆಳ್ಳಿ ಅ;ಕಿ; 30,000/- ರೂ ರಷ್ಟು ಇರಲಿಲ್ಲಾ,  ನಂತರ ನಮ್ಮ ತಮ್ಮ ಬಸವರಾಜ ರವರಿಗೆ ವಿಚಾರಿಸಲಾಗಿ ಅವರ ಮನೆಯ ಅಲ್ಮಾರಿಯಲ್ಲಿದ್ದ 05 ಗ್ರಾಂ ಬಂಗಾರದ ಸಣ್ಣು ಮಕ್ಕಳ ಚೈನ ಅ;ಕಿ; 15,000/- ರೂ,  ತಲಾ 02 ಗ್ರಾಮಿನ 2 ಉಂಗುರು ಅ;ಕಿ; 10,000/- ರೂ, ನಗದು ಹಣ 30,000/- ರೂ, ನಮ್ಮ ಮತ್ತು ನಮ್ಮ ತಮ್ಮನ ಬಂಗಾರದ ಸಾಮಾನುಗಳು ಹಾಗು ಬೆಳ್ಳಿಯ ಸಾಮಾನುಗಳು ಮತ್ತು ನಗದ ಹಣ ಹೀಗೆ ಒಟ್ಟು 2,20,000/- ರೂ ಕಿಮ್ಮತ್ತನಿವುಗಳನ್ನು ಯಾರೋ ಕಳ್ಳರು ಇಂದು ದಿನಾಂಕ 25-09-2019 ರಂದು 01;00 .ಎಂ ದಿಂದ 03;30 .ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮತ್ತು ನಮ್ಮ ತಮ್ಮನ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಅಲ್ಮಾರಿಯಲ್ಲಿದ್ದ ನಗದು ಹಣ ಮತ್ತು ಬಂಗಾರ, ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ದಾನಯ್ಯ ತಂದೆ ಈರಯ್ಯ ಹಿರೇಮಠ ಸಾ||ಕುಮ್ಮನ ಶಿರಸಗಿ ತಾ||ಜೇವರ್ಗಿ. ರವರ ಹೆಸರಿನಲ್ಲಿ ಹಿರೋ ಕಂಪನಿಯ ಸ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇದ್ದು ಅದರ ನಂ KA32-EP-5513 ಅದರ ಚಸ್ಸಿ ನಂ MBLHA10CGGHL43724 ಇಂಜನ್ ನಂ HA10ERGHL44793 ಅಂತಾ ಇರುತ್ತದೆ. ರೇವೂರ (ಬಿ) ಗ್ರಾಮದ ನನಗೆ ಪರಿಚಯಸ್ಥರಾದ ಬಂಡೇಪ್ಪಾ ತಂದೆ ಬಸ್ಸಣ್ಣ ಮಾಳಗೆ ರವರ ಹತ್ತಿರ ನನಗೆ ಕೆಲಸವಿದ್ದ ನಿಮೀತ್ಯ ನಾನು ದಿ:19/08/2019 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನನ್ನ ಮೋಟರ ಸೈಕಲ ಮೇಲೆ ರೇವೂರ (ಬಿ) ಗ್ರಾಮಕ್ಕೆ ಬಂದು ಬಂಡೇಪ್ಪಾ ಅವರಿಗೆ ಭೇಟಿಯಾಗಿ ಮರಳಿ ನಮ್ಮ ಗ್ರಾಮಕ್ಕೆ ಹೋಗಬೇಕೆಂದಾಗ ರಾತ್ರಿಯಾಗಿದ್ದರಿಂದ ನಾನು ಬಂಡೇಪ್ಪಾರವರ ಮೆನೆಯಲ್ಲಿ ಬಂಡೇಪ್ಪಾರವರೊಂದಿಗೆ ಉಟ ಮಾಡಿ 10:30 ಗಂಟೆ ಸುಮಾರಿಗೆ ಮಲಗಿಕೊಂಡಿರುತ್ತವೆ. ನನ್ನ ಮೋಟರ ಸೈಕಲ ಬಂಡೇಪ್ಪಾ ರವರ ಮನೆಯ ಮುಂದೆ ನಿಲ್ಲಿಸಿದ್ದು  ದಿನಾಂಕ:20/08/2019 ರಂದು ಬೆಳಿಗ್ಗೆ 05:00 ಗಂಟೆ ಸುಮಾರಿಗೆ ಎದ್ದು ನನ್ನ ಮೋಟರ ಸೈಕಲ ನೋಡಲಾಗಿ ನಾನು ನಿಲ್ಲಿಸಿದ್ದ ಜಾಗದಲ್ಲಿ ನನ್ನ ಮೋಟರ ಸೈಕಲ ಇರಲಿಲ್ಲ. ನಾನು ಬಂಡೇಪ್ಪಾ ಹಾಗೂ ಅವರ ತಮ್ಮನಾದ ಕಲ್ಯಾಣಿ ರವರಿಗೆ ಎಬ್ಬಿಸಿ ವಿಚಾರಿಸಲಾಗಿ ತಮಗೆ ಗೋತ್ತಿರುವುದಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಬಂಡೇಪ್ಪಾ, ಕಲ್ಯಾಣಿ ಹಾಗೂ ರೇವೂರ (ಬಿ) ಗ್ರಾಮದ ಬಸವರಾಜ ಬಶೆಟ್ಟಿ ಎಲ್ಲರು ಕೂಡಿ ರೇವೂರ ಗ್ರಾಮದಲ್ಲಿ ವಿಚಾರಿಸಿ ನಂತರ ಅತನೂರ, ಮಲ್ಲಾಬಾದ, ಮಹಾರಾಷ್ಟ್ರದ ದುಧನಿ ಪಟ್ಟಣಕ್ಕೆ ಹೋಗಿ ವಿಚಾರಿಸಲಾಗಿ ನನ್ನ ಮೋಟರ ಸೈಕಲ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರವುದಲ್ಲಾ. ನಾನು ನಮ್ಮ ಗ್ರಾಮಕ್ಕೆ ಹೋಗಿ ನನ್ನ ಮನೆಯವರಿಗೆ ಹಾಗು ನಮ್ಮ ಸಂಭಂದಿಕರಿಗೆ ನನ್ನ ಮೋಟರ ಸೈಕಲ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 September 2019

KALABURAGI DISTRICT REPORTED CRIMES

ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಅತ್ಯಾಚಾರ  ಮಾಡಿದ ಪ್ರಕರಣ :
ವಾಡಿ ಠಾಣೆ : ಕುಮಾರಿ ರವರು ವಿದ್ಯಾಬ್ಯಾಸ ಮಾಡುವ ಕಾಲಕ್ಕೆ ನಮ್ಮ ಮನೆಯ ಪಕ್ಕದಲ್ಲಿರುವ ರಾಮು ಚವ್ಹಾಣ ಎನ್ನುವರ ಮಗ ವಿಶಾಲ ಇತನು ಸೆಂಟ್ ಅಂಬ್ರೋಸ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಇಬ್ಬರ ಮನೆ ಅಕ್ಕ ಪಕ್ಕದಲ್ಲಿ ಇರುವದರಿಂದ ಒಬ್ಬರಿಗೊಬ್ಬರು ಮಾತನಾಡುವದು ಮಾಡುತ್ತಿದ್ದೆವು. ನಂತರ ಶಹಾಬಾದದಲ್ಲಿ ಪಿ.ಯು.ಸಿ ಕಾಮರ್ಸ ಓದುತ್ತಿದ್ದೆ ವಿಶಾಲ ಇತನು ಗುಲಬರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಆಗಲು ಸಹ ಇಬ್ಬರೂ ರೇಲ್ವೇದಲ್ಲಿ ಹೋಗಿ ಬರುವಾಗ ಮಾತನಾಡುವದು ಅಲ್ಲದೇ ಇಬ್ಬರಿಗೆ ಸ್ನೇಹ ಬೆಳೆದು ಸಲಿಗೆಯಿಂದ ಮಾತನಾಡುತ್ತಿದ್ದೆವು. ನಂತರ ನಾನು ಗುಲಬರ್ಗಾದ ಗೋದುತಾಯಿ ಕಾಲೇಜದಲ್ಲಿ ಬಿ.ಕಾಮ್ ಓದುತ್ತಿದ್ದು ವಿಶಾಲ ಇತನು ಎಸ್.ಬಿ.ಅರ ಕಾಲೇಜದಲ್ಲಿ ಬಿಬಿಎಮ್ ಓದುತ್ತಿದ್ದನು. ಅಲ್ಲಿಂದ ನಾನು ಬೆಂಗಳೂರಿನ ಬಿಎಮಎಸಐಟಿ ಕಾಲೇಜದಲ್ಲಿ ಎಮ್.ಬಿ. ಪದವಿ ಯನ್ನು 2013 ನೇ ಸಾಲಿನಲ್ಲಿ ಓದುತ್ತಿದ್ದೆನು. ಆಗ 2012 ನೇ ಸಾಲಿನಿಂದ 2014 ನೇ ಸಾಲಿನ ವರೆಗೆ ವಿಶಾಲ ತಂದೆ ರಾಮು ಚವ್ಹಾಣ ಇತನು ಬೆಂಗಳೂರಿನ ಆರ್.ವಿ ಕಾಲೇಜದಲ್ಲಿ ಎಮ್.ಬಿ. ಪದವಿ ಓದುತ್ತಿದ್ದನು. ನಾವಿಬ್ಬರೂ ಬೆಂಗಳೂರದಲ್ಲಿ ರಜೆ ಇದ್ದಾಗ ಆಗಾಗ ಒಬ್ಬರಿಗೊಬ್ಬರು ಬೇಟಿ ಆಗುತ್ತಿದ್ದೆವು. ಆಗ ವಿಶಾಲ ಇತನು ನಿನಗೆ ಪ್ರೀತಿ ಮಾಡುತ್ತೆನೆ ಅಲ್ಲದೇ ಮದುವೆ ಸಹ ಮಾಡಿಕೊಳ್ಳುತ್ತೆನೆ ಅಂತಾ ಅನ್ನುತ್ತಿದ್ದನು. ನಂತರ 2018 ನೇ ವರ್ಷದಲ್ಲಿ ದಸರಾ ಹಬ್ಬಕ್ಕೆ ನಾನು ನಮ್ಮೂರಿಗೆ ಬಂದ್ದಿದ್ದೆ ವಿಶಾಲ ಇತನು ಸಹ ಊರಿಗೆ ಬಂದಿದ್ದನು. ದಿನಾಂಕ 08/10/2018 ರಂದು ವಿಶಾಲ ಇತನು ದಸರಾ ಹಬ್ಬದ ದಿವಸ ನನಗೆ ನಮ್ಮ ಮನೆಗೆ ಬಾ ಅಂತಾ ಹೇಳಿದಾಗ ನಾನು ಅವರ ಮನೆಗೆ ಹೋದೆನು. ಆಗ ಅವರ ಮನೆಯವರು ದೇವಿಯ ಮೆರವಣಿಗೆಯನ್ನು ನೋಡಲು ಹೋಗಿದ್ದರು. ಆಗ ವಿಶಾಲ ಇತನು ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡು ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳಿ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿ ವಿಷಯ ಯಾರಿಗೆ ಹೇಳಬೇಡಾ ಅಂತಾ ನನಗೆ ಬೆದರಿಕೆ ಹಾಕಿದನು. ನಂತರ ನಾನು ವಿಷಯ ನಮ್ಮ ಮನೆಯವರಿಗೆ ಹೇಳಲಿಲ್ಲ. ನಂತರ ನಾನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ದಿನಾಂಕ 05/01/2019 ರಂದು ವಿಶಾಲ ಇತನು ಕಲಬುರಗಿದಿಂದ ಬೆಂಗಳೂರಿಗೆ ಬಂದು ನನಗೆ ಬೇಟಿಯಾಗಿ ಬೆಂಗಳೂರ ಸುತ್ತಾಡಿಕೊಂಡು ಬರೋಣ ಅಂತಾ ಹೇಳಿ ಕೊರಮಂಗಲ ಏರಿಯಾದಲ್ಲಿ ಕರೆದುಕೊಂಡು ಹೋಗಿ ಸಾಯಂಕಾಲ ಕೊರಮಂಗಲದಲ್ಲಿರುವ ಎಂಪೈರ್ ಎಂಬ ಹೊಟೇಲಗೆ ಕರೆದುಕೊಂಡು ಹೋಗಿ ಆತನು ತನ್ನ ಹೆಸರಿನಲ್ಲಿ ಮುಂಚೆನೆ ರೂಮ್ ಬುಕ್ ಮಾಡಿದ್ದನು. ರಾತ್ರಿಯಾಗಿದ್ದರಿಂದ ನಾವು ಅಲ್ಲೇ ಉಳಿದುಕೊಂಡಿದ್ದು ಮತ್ತೆ ವಿಶಾಲ ಇತನು ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಮೋಸ ಮಾಡಿ ಅಲ್ಲಿಯು ಸಹ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ 06/01/2019 ರಂದು ಹೊಟೇಲದಿಂದ ಹೊರಟು ಬಂದಿರುತ್ತೆವೆ. ಹೀಗೆ ಆತನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನನಗೆ ಮನೆಗೆ ಕರೆಸಿ ಅನೇಕ ಸಲ ನಾನು ಬೇಡ ಅಂದರು ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ತಾನೆ.  ನಂತರ ನಾನು ಪುನಾಕ್ಕೆ ಹೋಗಿ ನೌಕರಿ ಮಾಡಿಕೊಂಡಿದ್ದು ವಿಶಾಲ ಇತನು ಗುಲಬರ್ಗಾದಲ್ಲಿ ನೌಕರಿ ಮಾಡುತ್ತಿದ್ದು ಆಗಾಗ ನನ್ನೊಂದಿಗೆ ಪೋನದಲ್ಲಿ ಮಾತನಾಡುತ್ತಿದ್ದನು. ನಾನು ಮದುವೆ ಮಾಡಿಕೊಳ್ಳುವ ವಿಷಯ ಕೇಳಿದಾಗ ಸ್ವಲ್ಪ ದಿನ ಹೋಗಲಿ ನಮ್ಮ ತಂದೆ ತಾಯಿಗೆ ತಿಳಿಸಿ ಮದುವೆ ಮಾಡಿಕೊಳ್ಳುತ್ತೆನೆ ಹೇಳುತ್ತ ಬಂದಿದ್ದು ಅಲ್ಲದೇ ಕಳೆದ ಜುಲೈ ತಿಂಗಳ 19 ನೇ ತಾರಿಖದಂದು ನಾನು ನಮ್ಮೂರಿಗೆ ಬಂದು ವಿಶಾಲ ಇತನಿಗೆ ಫೋನ ಮಾಡಿ ನಮ್ಮ ಮದುವೆಯ ವಿಷಯದ ಬಗ್ಗೆ ಕೇಳಿದಾಗ ಆತನು ನಾನು ನಿನಗೆ ಮದುವೆ ಮಾಡಿಕೊಳ್ಳುವದಿಲ್ಲ , ಕೇವಲ ನಿನ್ನೊಂದಿಗೆ ಎಂಜೋಯ್ ಮಾಡಿರುತ್ತೆನೆ ಮುಂದೆ ನನಗೆ ಫೋನ ಮಾಡಬೇಡಾ ಅಂತಾ ಪೋನ ಕಟ್ ಮಾಡಿದನು. ನಂತರ ನನ್ನ ಮನಸ್ಸಿಗೆ ನೋವಾಗಿ ನಾನು ನಮ್ಮ ತಮ್ಮನೊಂದಿಗೆ ದಿನಾಂಕ 28/08/2018 ರಂದು 12-30 ಪಿ.ಎಮ್ ಸುಮಾರಿಗೆ ಬಲರಾಮಚೌಕದಲ್ಲಿರುವ ವಿಶಾಲ ಇತನ ಮನೆಗೆ ಹೋದಾಗ ವಿಶಾಲ ಮತ್ತು ಆತನ ತಂದೆ ರಾಮು ಮತ್ತು ತಾಯಿ ಸುನೀತಾ ಮನೆಯಲ್ಲಿದ್ದರು. ವಿಶಾಲ ಇತನಿಗೆ ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತ ಬಂದಿದ್ದು ಈಗ ಏಕೆ ನಿರಾಕರಿಸುತ್ತಿದ್ದಿ ಅಂತಾ ಕೇಳಿದಾಗ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿರುವದಿಲ್ಲ ಅಂತಾ ಅಂದನು ಹಾಗೂ ಅವರ ತಂದೆ ತಾಯಿ ನೀನು ಯಾರು ನನಗೆ ಗೊತ್ತಿಲ್ಲ ವಿನಾಕಾರಣ ನನ್ನ ಮಗನಿಗೆ ತ್ರಾಸ ಕೊಡುತ್ತಿ ರಂಡಿ ನನ್ನ ಮಗನು ಗಂಡಸು ಇದ್ದಾನೆ ನಿನ್ನ ಜೊತೆ ಮಲಗಿದ್ದಾನೆ ಅದಕ್ಕೆ ನಾವೆನು ಮಡಬೇಕು ನೀನು ಏನು ಮಾಡಕೋತಿ ಮಾಡಕೋ ನಾವು ಮದುವೆ ಮಾಡಿಕೊಳ್ಳಲು ಬಿಡುವದಿಲ್ಲ ಅಂತಾ ಹೆದರಿಸಿ ಇನ್ನೊಮ್ಮೆ ನನ್ನ ಮಗನ ತಂಟೆಗೆ ಬಂದರೆ ಅಥವಾ ನಮ್ಮ ಮನೆಗೆ ಬಂದರೆ ನಿನಗೆ ಖಲಾಸ  ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ವಿಶಾಲ ಇತನಿಗೆ ಇವಳ ತಂಟೆಗೆ ಹೋಗಬೇಡಾ ಮತ್ತು ಅವಳನ್ನು ಮದುವೆ ಮಾಡಿಕೊಳ್ಳುವದು ಬೇಡ ಅಂತಾ ಪ್ರಚೋದನೆ ನೀಡಿದ್ದು ಇರುತ್ತದೆ. ನಂತರ ನಾನು ನಮ್ಮ ಮನೆಗೆ ಬಂದೆನು. ವಿಶಾಲ ಇತನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತಿದ್ದ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಕಾರಣ ವಿಶಾಲ ಇತನು ನನಗೆ ನಂಬಿಸಿ ಮೋಸ ಮಾಡಿ ನನ್ನ ಇಷ್ಟಕ್ಕೆ ವಿರುದ್ದವಾಗಿ ದೈಹಿಕ ಸಂಬಂಧ ಬೆಳೆಸಿದ್ದು ಅಲ್ಲದೇ ಆತನ ಮನೆಗೆ ಹೋಗಿ ವಿಚಾರಿಸಿದ್ದಕ್ಕೆ ಅವರ ತಂದೆ ತಾಯಿ ನನಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 06-02-19 ರಂದು ಶ್ರೀ ಯಲ್ಲಪ್ಪ ತಂದೆ ಸಾತಪ್ಪ ಸಿಂಘೆ ಸಾ||ಉಡಚಾಣ ಮತ್ತು ನಮ್ಮ ಗ್ರಾಮದ ಯೋಗಿರಾಜ ತಂದೆ ಸಿದ್ದಪ್ಪ ಗಿರಣಿ ರವರು ಕೂಡಿಕೊಂಡು ಯೋಗಿರಾಜ ರವರ ಮೋಟಾರ ಸೈಕಲ ನಂ ಎಮೆ.ಹೆಚ್.14-ಎವೈ-9747 ನೇದ್ದರ ಮೇಲೆ ಅಫಜಲಪೂರ ದಿಂದ ಉಡಚಾಣಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶೀರವಾಳ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಶೋಕ ಲೈಲಾಂಡ ಕಂಪನಿಯ ವಾಹನ ಚಾಲಕ ಕೆ.-28-ಸಿ-3033 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡೆಸಿದ್ದು ಇದರಿಂದ ಯೋಗಿರಾಜ ಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮುರಿದಂತತಾಗಿದೆ ಮತ್ತು ಬಲಗಾಲ ಮತ್ತು ಎಡಗಾಲು ಮುರಿದ್ದು ಇರುತ್ತದೆ. ನನಗೆ ಎಡಗಾಲಿಗೆ ಪೆಟ್ಟು ಮತ್ತು ಬಲಗೈ ಮುರಿದಿರುತ್ತದೆ. ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಯೋಗಿರಾಜ ತಂದೆ ಸಿದ್ದಪ್ಪ ಗಿರನಿ ಸಾ||ಉಡಚಾಣ ಈತನು ಅಪಘಾತದಲ್ಲಿ ಆದ ಗಾಯದಿಂದ ಸೆಪ್ಟಿಕ್ ಆಗಿ ಉಪಚಾರ ಕುರಿತು pios ಆಸ್ಪತ್ರೇ ಜಯಸಿಂಗಪೂರದಲ್ಲಿ ದಿನಾಂಕ:16/07/19 ರಂದು ದಾಕಲಾಗಿ ಪಚಾರ ಪಡೆಯುತ್ತಾ ಉಪಚಾರ ಫಲಿಸದೆ ದಿನಾಂಕ:19/07/19 ರಂದು ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.