POLICE BHAVAN KALABURAGI

POLICE BHAVAN KALABURAGI

21 April 2019

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭೀಮಾಶಂಕರ ತಂದೆ ನಿಜಶರಣಪ್ಪ ಇವಣಿ ಸಾ: ಮನೆ ನಂ 11-45/22A/2 ಮಾಣಿಕೇಶ್ವರಿ ಕಾಲೋನಿ ರೊಡ ಸರ್ಕಾರಿ ಆಸ್ಪತ್ರೆ ಮಾಣಿಕೇಶ್ವರಿ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರ ಮೋಟರ ಸೈಕಲನ್ನು ಹೊಂದಿದ್ದು ವಾಹನದ ಹೆಸರು HERO SPLENDOR+ BS-IV ವಾಹನದ ಸಂಖ್ಯೆ KA 32 EQ 7373 ಚೆಸ್ಸಿ ನಂ MBLHAR080HHH55482,  ಇಂಜಿನ ನಂ HA10AGHHHH2127, ಮಾಡೆಲ 08/2017, ಕಲರ್ - BLACK, ಅಂದಾಜು ಕಿಮ್ಮತ್ತು  45,000/- ಈ ರೀತಿ ವಿವರವನ್ನೊಳಗೊಂಡ ನನ್ನ ವಾಹನವನ್ನು ಇಲ್ಲಿಯ ವರೆಗೆ ನಾನು ನನ್ನ ಕೆಲಸಗಳಿಗೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ ದಿನಾಂಕ 24.03.2019 ರಂದು ನಾನು ಮತ್ತು ನಮ್ಮ ತಂದೆ ನಿಜಶರಣಪ್ಪ ಇಬ್ಬರೂ ಕೂಡಿಕೊಂಡು ಕಿರಾಣಿ ಸಂತೆ ಖರೀಧಿಗಾಗಿ ಮಾರ್ಕೇಟದಲ್ಲಿರುವ ಕಿರಾಣಾ ಬಜಾರಕ್ಕೆ ಬಂದಿದ್ದು ಆಗ ನಾನು ನನ್ನ ಮೋಟರ ಸೈಕಲನ್ನು ಕಿರಾಣಾ ಬಜಾರದ ಹತ್ತಿರದಲ್ಲಿ ಇರುವ ಆರ್ಯ ಸಮಾಜಗಲ್ಲಿಯ ಸಂಧಿಯಲ್ಲಿ ನಿಲ್ಲಿಸಿ ಕಿರಾಣಿ ಸಂತೆ ಮಾಡಲು ಹೋಗಿದ್ದು ಇರುತ್ತದೆ ಸಂತೆ ಮಾಡಿಕೊಂಡು ಅಂದಾಜು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಮರಳಿ ನಾನು ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನನ್ನ ಮೋಟರ ಸೈಕಲ ಇರಲಿಲ್ಲ ಆಗ ನಾನು ಮತ್ತು ನಮ್ಮ ತಂದೆ ನಿಜಶರಪ್ಪ ಇಬ್ಬರೂ ಕೂಡಿಕೊಂಡು ಮಾರ್ಕೇಟದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಅಲ್ಲಿ ಎಲ್ಲಿಯೂ ಇಲ್ಲದಿರುವುದನ್ನು ಕಂಡು ಈ ವಿಷಯವನ್ನು ನನ್ನ ಗೆಳೆಯರಾದ ಶಾಂತಯ್ಯ ಗುತ್ತೇದಾರ ಮತ್ತು ಸಿದ್ದಲಿಂಗ ಕುಲಕರ್ಣಿ ರವರಿಗೆ ನನ್ನ ಮೋಟರ ಸೈಕಲ ಕಳುವಾದ ಬಗ್ಗೆ ತಿಳಿಸಿದ್ದು ಆಗ ಅವರೂ ಸಹ ಅಲ್ಲಿಗೆ ಬಂದು ನನ್ನ ಮೋಟರ ಸೈಕಲ ಇಲ್ಲದಿರುವುದನ್ನು ಅವರೂ ಕೂಡಾ ಎಲ್ಲ ಕಡೆಗೆ ಹುಡುಕಾಡಿದ್ದು ಮತ್ತು ಅಲ್ಲಿಂದ ಇಲ್ಲಿಯ ವರೆಗೆ ಎಲ್ಲ ಕಡೆಗೆ ಹುಡುಕಾಡುತ್ತಲೇ ಇದ್ದು ಇಲ್ಲಿಯವರೆಗೆ ಎಲ್ಲಿಯೂ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 :ಶ್ರೀ ಶರಣಪ್ಪಾ ರವರು ದಿನಾಂಕ 20-04-2019 ರಂದು ಶಹಾಪೂರದಲ್ಲಿ ನಮ್ಮ ಸಂಬಂದಿಕರ ಮನೆಯಲ್ಲಿ ಕಾರ್ಯಕ್ರಮ ಇರುವದರಿಂದ ನಮ್ಮ ಸಂಬಂದಿಯಾಧ ಉದಯಕುಮಾರ, ಇವರು ಚಲಾಯಿಸುತ್ತೀರುವ ಕಾರ ನಂಬರ ಕೆಎ-01/ಎಮ.ಕೆ-9022 ನೇದ್ದರಲ್ಲಿ ನಾನು ಮತ್ತು ನನ್ನ ಹೆಂಡತಿ ಭಾರತಿಬಾಯಿ ಮತ್ತು ನನ್ನ ಮಗಳಾದ ಪೂಜಾ ಹಾಗೂ ಉದಯಕುಮಾರ ಇವರ ಹೆಂಡತಿ ಮಹಾದೇವಿ  ರವರು ಕುಳಿತು ಕಲಬುರಗಿ ರಾಮ ಮಂದಿರ ಕ್ರಾಸ ಮುಖಾಂತರವಾಗಿ ಶಹಾಪೂರ ಕಡೆಗೆ ಹೋಗುವಾಗ ಫರಹತಾಬಾದ ಗ್ರಾಮ ದಾಟಿದ ನಂತರ ಉದಯಕುಮಾರ ಇವರು ಕಾರನ್ನು ಅತಿವೇಗವಾಗಿ ಮತ್ತು ರೋಡ ಎಡ ಬಲ ತಿರುಗಿಸುತ್ತಾ ಕಾರ ಚಲಾಯಿಸುತ್ತೀದ್ದರು ನಾನು ಅವರಿಗೆ ನಿಧಾನವಾಗಿ ಕಾರ ಚಲಾಯಿಸುವಂತೆ ತಿಳಿಸದರೂ ಕೂಡಾ ಆತ ಕೇಳದೆ ಅದೇ ರೀತಿಯಾಗಿ ಕಾರ ಚಲಾಯಿಸಿಕೊಂಡು ಹೋಗಿ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹಸನಾಪೂರ ಕ್ರಾಸಇಚೆಗೆ ರೋಡ ಮೇಲೆ ಕಾರ ಎಡ ಬಲ ತಿರುಗಿಸುತ್ತಾ ಒಮ್ಮಲೇ ಕಟ್ ಹೊಡೆದು ಬ್ರೇಕ ಹಾಕಿ ಕಾರ ಪಲ್ಟಿ ಮಾಡಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ನನ್ನ ಹೆಂಡತಿ ಭಾರತಿಬಾಯಿ ಮತ್ತು ನನ್ನ ಮಗಳು ಪೂಜಾ ಹಾಗೂ ಮಹಾದೇವಿ ಅವರಿಗೆ ಗಾಯಗೊಳಿಸಿತಾನೂ ಗಾಯ ಹೊಂದಿದ್ದು ಉದಯಕುಮಾರ ಇವರ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 20-04-2019 ರಂದು  ಶ್ರೀ ಹಣಮಂತ ತಂದೆ ರಾಮಚಂದ್ರ ಕೋಳಿ ಸಾ|| ಶೇಷಗಿರಿ ಗ್ರಾಮ ತಾ|| ಅಫಜಲಪೂರ ರವರಿಗೆ ಜೈಶಂಕರ ಮತ್ತು ವೆಂಕಟೇಶ ಅಂತಾ ಎರಡು ಜನ ಗಂಡು ಮಕ್ಕಳು ಇರುತ್ತಾರೆ. ಇಬ್ಬರದು ಮದುವೆ ಆಗಿದ್ದು, ಹೊಲ ಮನೆ ಹಂಚಿಕೆ ಮಾಡಿಕೊಂಡು ಇಬ್ಬರು ಬೇರೆ ಬೇರೆಯಾಗಿ ಹೊಲದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ನಾನು ನನ್ನ ಕಿರಿಯ ಮಗನಾದ ವೆಂಕಟೇಶನ ಹತ್ತಿರ ಇರುತ್ತೇನೆ. ನನ್ನ ಕಿರಿಯ ಮಗನಾದ ವೆಂಕಟೇಶನು ಅಕ್ಕಲಕೋಟ ತಾಲೂಕಿನ ಬ್ಯಾಗಳ್ಳಿ ಗ್ರಾಮದ ರಾಜಶೇಖರ ಕಿಣಗಿ ಈತನ ಅಕ್ಕಳಾದ ಸುನೀತಾ ಇವಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾನೆ. ನನ್ನ ಮಗ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ರಾಜಶೇಖರ ಕಿಣಗಿ ಈತನು ನನ್ನ ಮಗನ ಮೇಲೆ ದ್ವೆಷ ಹೊಂದಿರುತ್ತಾನೆ. ದಿನಾಂಕ 16-04-2019 ರಂದು ರಾತ್ರಿ 9:00 ಗಂಟೆ ಸುಮಾರಿಗೆ ಮಣೂರ ಸೀಮಾಂತರದಲ್ಲಿರುವ ನಮ್ಮ ಹೊಲ ನಂ 106 ನೇದ್ದರಲ್ಲಿರುವ ಮನೆಯ ಮುಂದೆ ನಾನು ಮತ್ತು ನನ್ನ ಮಗ ವೆಂಕಟೇಶ ಇಬ್ಬರು ಮಾತಾಡುತ್ತಾ ಕುಳಿತ್ತಿದ್ದಾಗ 1) ರಾಜಶೇಖರ ತಂದೆ ಶರಣಪ್ಪ ಕಿಣಗಿ ಸಾ|| ಬ್ಯಾಗಳ್ಳಿ ತಾ|| ಅಕ್ಕಲಕೋಟ ಮತ್ತು ಅವನ ಗೆಳೆಯನಾದ 2) ರಾಜು ತಂದೆ ಪ್ರಭು ಸಮಗಾರ ಸಾ|| ಶೇಷಗಿರಿ ತಾ|| ಅಫಜಲಪೂರ ಇವರು ನಮ್ಮ ಹೊಲದಲ್ಲಿ ಬಂದು ರಾಜಶೇಖರ ಕಿಣಗಿ ಈತನು ನನ್ನ ಮಗ ವೆಂಕಟೇಶನಿಗೆ ಏನೊ ಬೋಸಡಿ ಮಗನೆ ನಮ್ಮ ಅಕ್ಕನ್ನೆ ಓಡಿಸಿಕೊಂಡು ಬರುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಕೂಡಿ ನನ್ನ ಮಗನಿಗೆ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನಾನು ಬಿಡಿಸಲು ಹೋದಾಗ ನನ್ನನ್ನು ತಳ್ಳಿ ರಾಜಶೇಖರ ಕಿಣಗಿ ಈತನು ಅಲ್ಲೆ ಇದ್ದ ಒಂದು ಬಡಿಗೆ ತಗೆದುಕೊಂಡು ಬಂದು ಬಡಿಗೆಯಿಂದ ನನ್ನ ಮಗನ ಎಡಗಾಲಿಗೆ ಹೊಡೆದನು. ಸದರಿಯವರು ನನ್ನ ಮಗನಿಗೆ ಹೊಡೆಯುತ್ತಿದ್ದಾಗ ಅಲ್ಲೆ ಪಕ್ಕದ ಹೊಲದಲ್ಲಿದ್ದ ನನ್ನ ಹಿರಿಯ ಮಗನಾದ ಜೈಶಂಕರ ಹಾಗೂ ಅವನ ಹೆಂಡತಿ ಅಂಬಿಕಾ ಮತ್ತು ನಮ್ಮ ಬಾಜು ಮೇಟಗಿಯಲ್ಲಿ ವಾಸವಾಗಿದ್ದ ಮಹಾದೇವ ಬನಸೋಡೆ ಇವರೆಲ್ಲರೂ ಬಂದು ನನ್ನ ಮಗನಿಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಬಡಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ. ಸದರಿಯವರು ಹೊಡೆದದ್ದರಿಂದ ನನ್ನ ಮಗನಿಗೆ ಎಡಗಾಲಿನ ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 April 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ನಾಗಣ್ಣಾ ತಂದೆ ಶಂಕರೆಪ್ಪಾ ಬೆಳಮಗಿ ಸಾ; ಭೀಮಳ್ಳಿ ಗ್ರಾಮ ತಾ;ಜಿ;ಕಲಬುರಗಿ  ರವರ ಎರಡನೆ ಮಗಳಾದ ಅಂಬಿಕಾ ಇವಳಿಗೆ ಕಗ್ಗನಮಡ್ಡಿ ಗ್ರಾಮದ ಮಲ್ಲಪ್ಪಾ ಮೂಲಗೆ ಇವರ ಮಗ ರವಿ ಮೂಲಗೆ ಎಂಬುವವನೊಂದಿಗೆ ಸಂಪ್ರದಾಯದಂತೆ 1ವರ್ಷ10 ತಿಂಗಳ ಹಿಂದೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 2 ತೊಲೆ ಬಂಗಾರ, 11 ಸಾವಿರ ರೂಪಾಯಿ, ಹಾಗೂ ಅಲಮಾರೆ, ಗಾದಿ ಪಲಂಗ, ಬಾಂಡೆಸಾಮಾನುಗಳು ಕೊಟ್ಟಿರುತ್ತೇವೆ ಅಲ್ಲದೆ ನನ್ನ ಮಗಳು ಅಂಬಿಕಾಳಿಗೆ ಕಿವಿಯೊಲೆ, ಕೊರಳಲ್ಲಿ ಮಂಗಳ ಸೂತ್ರದಲ್ಲಿ ಕೊಯಿಪತ್ತೆ ಮಾಡಿಸಿ ಹಾಕಿರುತ್ತೇವೆ. ಮದುವೆಯೂ ಜೇವರಗಿ ತಾಲೂಕಿನ ಸೊನ್ನ ಮಠದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆಯಾದ 5-6 ತಿಂಗಳು ನನ್ನ ಮಗಳಿಗೆ ಚನ್ನಾಗಿ ಇಟ್ಟುಕೊಂಡಿದ್ದು ನಂತರ ನನ್ನ ಮಗಳು ಅಂಬಿಕಾ ಇವಳ ಗಂಡ ರವಿ ಮೂಲಗೆ ,ಆತನ ತಮ್ಮ ರೇವಣಸಿದ್ದ , ಅವನ ಅಕ್ಕ ಶಿವಲೀಲಾ ಮುದ್ದಡಗಿ , ಮಾವ ರಾಜಪ್ಪಾ ಮುದ್ದಡಗಿ ಇವರೆಲ್ಲರೂ ನನ್ನ ಮಗಳು ಅಂಬಿಕಾಳಿಗೆ  ರಂಡಿ ನಿಮ್ಮ ಅಪ್ಪ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ , ನೀನು ನಮ್ಮ ಮನೆಗೆ ಒಪ್ಪುವದಿಲ್ಲಾ, ಸರಿಯಾಗಿ ಕೆಲಸ ಮಾಡುವದಿಲ್ಲಾ ಅಂತಾ ಎಲ್ಲರೂ ಅವಾಚ್ಯವಾಗಿ ಬೈಯುವದು , ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಿದ್ದಾರೆ ಅಂತಾ ನನ್ನ ಮಗಳು ಫೋನ ಮಾಡಿ ವಿಷಯ ತಿಳಿಸಿದಳು, ನಂತರ ನಾನು ಮತ್ತು ನನ್ನ ಹೆಂಡತಿ ಸುಭದ್ರಬಾಯ ಇಬ್ಬರು ಕೂಡಿಕೊಂಡು 6ತಿಂಗಳ ಹಿಂದೆ ಭೀಮಳ್ಳಿಯಿಂದ ಕಗ್ಗನಮಡ್ಡಿಗೆ ಹೋಗಿ ನನ್ನ ಅಳಿಯ ರವಿ, ಆತನ ತಮ್ಮ ರೇವಣಸಿದ್ದ , ಅಕ್ಕ ಶಿವಲೀಲಾ ಮುದ್ದಡಗಿ, ಮಾವ ರಾಜಪ್ಪಾ ಮುದ್ದಡಗಿ ಇವರಿಗೆ ನಾವು ಬಡವರಿರುತ್ತೇವೆ  ನನ್ನ ಮಗಳಿಗೆ ಸರಿಯಾಗಿ ನಡೆಯಿಸಿಕೊಳ್ಳಿ ಅಂತಾ ಅವರಿಗೆ ಬೇಡಿಕೊಂಡೇವು ಆಗ ಅವರಲ್ಲರೂ ಕೂಡಿಕೊಂಡು ಮದುವೆ ಯಲ್ಲಿ ವರದಕ್ಷಿಣೆ ಕಮ್ಮಿಕೊಟ್ಟಿದ್ದು ಈಗ ವರದಕ್ಷಣಿ ರೂಪದಲ್ಲಿ ಇನ್ನೂ 1 ತೊಲೆ ಬಂಗಾರ , ಟೇಲರಿಂಗ ಮಸೀನ , ಹಾಗೂ 10,000/- ರೂ ನಗದ ಹಣ ಕೋಡಬೇಕು ಅಂತಾ ಡಿಮ್ಯಾಂಡ ಮಾಡಿದರು. ಆಗ ನಮ್ಮಗೆ ಅಷ್ಟು ಕೊಡಲು ಶಕ್ತಿ ಇಲ್ಲಾ ಆದರೆ 15 ದಿವಸ ಬಿಟ್ಟು ಊರಿಗೆ ಬಂದು ಕೋಡುತ್ತೇನೆ ಅಂತಾ ಹೇಳಿದ್ದೆ ಅಲ್ಲದೆ ಊರಿನ ಗ್ರಾಮ ಪಂಚಾಯ ಸದಸ್ಯರಾದ ಪತ್ರುಶಾ ಮತ್ತು ಕುಪೇಂದ್ರ ಧನ್ನಿ ಇವರ ಸಮಕ್ಷಮಾ ತಿಳುವಳಿಕೆ ಹೇಳಿ ಬಂದಿರುತ್ತೇವೆ. ತದನಂತರ 15 ದಿವಸಗಳ ನಂತರ 5000/- ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ನನ್ನ ಅಳಿಯ ರವಿ ಮೂಲಗೆ ಇವರ ಕೈಯಲ್ಲಿ ಕೊಟ್ಟು ಬಂಗಾರ ಮತ್ತು ಟೇಲರಿಂಗ ಮಸೀನ ಕೆಲವು ದಿವಸಗಳ ನಂತರ ಕೋಡುವದಾಗಿ ಹೇಳಿ ಬಂದಿರುತ್ತೇನೆ. ನಂತರ 1 ತಿಂಗಳ ನಂತರ ಪುನಾ; ನಮ್ಮ ಅಳಿಯ ರವಿ ಮೂಲಗೆ ಅವರ ತಮ್ಮ ರೇವಣಸಿದ್ದ, ಅಕ್ಕೆ ಶಿವಲೀಲಾ ಮಾವ ರಾಜಪ್ಪ ಮುದ್ದಡಗಿ ಇವರೆಲ್ಲರೂ ಕೂಡಿಕೊಂಡು ನನ್ನ ಮಗಳು ಅಂಬಿಕಾಳಿಗೆ  ರಂಡಿ ನಿಮ್ಮ ಅಪ್ಪ 1 ತೊಲೆ ಬಂಗಾರ , ಟೇಲರಿಂಗ ಮಸೀನ ತಂದು ಕೋಡುತ್ತೇನೆ ಅಂತಾ ಸುಳ್ಳು ಹೇಳಿ ಹೋಗಿದ್ದು ಇನ್ನೂ ತಂದು ಕೊಟ್ಟಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡಾ ತವರು ಮನಗೆ ಹೋಗು ಅಂತಾ ಮನೆಯಲ್ಲಿ ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಟಿದ್ದಾಗ ನನ್ನ ಮಗಳು ಅಳುತ್ತಾ ನಮಗೆ ಫೋನ ಮಾಡಿ ವಿಷಯ ತಿಳಿಸಿದಳು ಆಗ ನಾನು ಭೀಮಳ್ಳಿಯಿಂದ ಕಗ್ಗನ ಮಡ್ಡಿ ಗ್ರಾಮಕ್ಕೆ ಬಂದು ಎಲ್ಲರಿಗೂ ತಿಳಿಹೇಳಿದ್ದು ಅಲ್ಲದೆ ಕಗ್ಗನಮಡ್ಡಿ ಗ್ರಾಮದ ಗ್ರಾಮಪಂಚಾಯತ ಸದಸ್ಯರಿಗೆ ಹೇಳಿಕೇಳಿ ಸರಿಯಾಗಿ ಇಟ್ಟುಕೊಳ್ಳಿರಿ ಅಂತಾ ಹೇಳಿ ಬಂದಿರುತ್ತೇನೆ. ದಿನಾಂಕ. ದಿನಾಂಕ. 17-4-2019 ರುಂದು 11-00 ಎ.ಎಂ.ದಿಂದ 1-00 ಪಿ.ಎಂ. ಮದ್ಯದಲಿ ಕಗ್ಗನಮಡ್ಡಿ ಗ್ರಾಮದ ಮನೆಯಲ್ಲಿ ನನ್ನ ಮಗಳು ಅಂಬಿಕಾಳಿಗೆ ಇನ್ನೂ 1 ತೊಲೆ ಬಂಗಾರ , ಟೇಲರ ಮಸೀನನ್ನು ವರದಕ್ಷಿಣೆ ರೂಪದಲ್ಲಿ ಡಿಮ್ಯಾಂಡ ಮಾಡಿದನ್ನು ಕೊಡದಿದ್ದಕ್ಕೆ  ನನ್ನ ಮಗಳ ಗಂಡ ರವಿ ಮೂಲಗೆ, ಮೈದುನ ರೇವಣಸಿದ್ದ ಮೂಲಗೆ ಇವರಿಬ್ಬರೂ ಕೂಡಿಕೊಂಡು ಮನೆಯಲ್ಲಿ ಅಂಬಿಕಾಳ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದು ,ಇದಕ್ಕೆ ಅವರ ಅಕ್ಕ ಶಿವಲಿಲ್ಲಾ ಮುದ್ದಡಗಿ, ಮಾವ ರಾಜಪ್ಪಾ ಮುದ್ದಡಗಿ, ಕಲ್ಯಾಣಿ ಮುದ್ದಡಗಿ ಅವರಿಗೆ ಪರೋಕ್ಷವಾಗಿ ಕುಮ್ಮಕು ನೀಡಿರುತ್ತಾರೆ ಕಾರಣಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 17.04.2019 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಖಾದ್ರಿ ಚೌಕ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಶಿವಯೋಗಿ ಎ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಾದ್ರಿ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಖಾದ್ರಿ ಚೌಕದಲ್ಲಿರುವ ರಹೇಮತ ಹೊಟೇಲ ಮುಂದೆ ಇರುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ರಿಯಾಜ ತಂದೆ ಅಬ್ದುಲ ಕರೀಮ ಮುಲ್ಲಾ ಸಾ: ಕಡಗಂಚಿ ಮಠದ ಹಿಂದೆ ಡಕ್ಕನ ಕಾಲೋನಿ ಖಾದ್ರಿ ಚೌಕ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1890 ರೂ  1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ-17/04/2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಕಲಬುರಗಿ ನಾಗನಹಳ್ಳಿ ರಿಂಗ್ ರೋಡನಲ್ಲಿ ಒಬ್ಬ ಅಪರಿಚಿತ ಮನುಷ್ಯ ವ: 28 ರಿಂದ 30 ವರ್ಷದವನು ನಡೆದುಕೊಂಡು ರೊಡ ದಾಟುತ್ತಿರುವಾಗ ರಾಮ ಮಂದಿರ ರಿಂಗ್ ರೋಡ ಕಡೆಯಿಂದ ಯಾವುದೋ ಒಂದು ಟಿಪ್ಪರ್ ವಾಹನದ ಚಾಲಕನು ತನ್ನ ಟಿಪ್ಪ ರ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪರಿಚಿತ ಮನುಷ್ಯನಿಗೆ ಭಾರಿ ರಕ್ತಗಾಯಗೊಳಿಸಿ ದ್ದರಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಟಿಪ್ಪರ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ದ್ದು ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳುಬೇಕೆಂದು ಅಂತಾ ಶ್ರೀ ಚಂದ್ರಶೇಖರ ತಂದೆ ನಾಗೇಂದ್ರಪ್ಪಾ ಮಹಾಗಾಂವಕರ ಸಾ : ನಾಗನಹಳ್ಳಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 :ಶ್ರೀ  ಸಂತೋಷ ತಂದೆ ಸಿದ್ರಾಮಪ್ಪಾ ರವರು ದಿನಾಂಕ 17-04-2019 ರಂದು ರಾತ್ರಿ 8-15 ಗಂಟೆ ಸುಮಾರಿಗೆ ನಾನು ನೆಹರು ಗಂಜನಲ್ಲಿರುವಾಗ ನನ್ನ ಗೆಳೆಯ ವಿರೇಶ ತಂದೆ ನಾಗರಾಜ ವಿಶ್ವಕರ್ಮ ಇತನು ವಾಡಿ ಜಂಕ್ಷನದಿಂದ ನನ್ನ ಹತ್ತೀರ ಬಂದನು ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಆತನು ವಾಡಿಗೆ ಹೋಗುವವನು ಇದ್ದುದ್ದರಿಂದ ನಾನು ಟೌನಹಾಲ ಕ್ರಾಸ ಹತ್ತೀರ ಬಿಟ್ಟು ನಾನು ಮನೆಗೆ ಹೋಗಬೆಕು ಅಂತಾ ನಾನು ಚಲಾಯಿಸುತ್ತೀರುವ ನನ್ನ ಮೋಟಾರ ಸೈಕಲ ನಂ ಕೆಎ-32/ಇಇ-5618 ನೇದ್ದರ ಹಿಂದುಗಡೆ ಕೂಡಿಸಿಕೊಂಡು ಸುಪರ ಮಾರ್ಕೆಟ ಜಗತ ಸರ್ಕಲ ಮುಖಾಂತರ ಟೌನಹಾಲ ಕ್ರಾಸ ಕಡೆಗೆ ಹೋಗುವಾಗ ಮೋಟಾರ ಸೈಕಲ ನಂ ಕೆಎ-32/ಇಆರ್-2681 ನೇದ್ದರ ಸವಾರ ಎಮ್.ಡಿ ಸಮೀರ ಇತನು ತನ್ನ ಮೋಟಾರ ಸೈಕಲ ಹಿಂದುಗಡೆ ಇಮ್ರಾನ ಮತ್ತು ಶೇಖ ಆರೀಫ ಇಬ್ಬರನ್ನು ಕೂಡಿಸಿಕೊಂಡು ಜಗತ ಸರ್ಕಲ ಕಡೆಯಿಂದ ಎಸ.ವಿಪಿ ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಾರ್ಡನ ಎದುರುಗಡೆ ಬರುವ ಶೌಚಾಲಯ ಮತ್ತು 4ಎಮ್ ಕಾರ ಡೆಕೊರೆಟರ್ ಮದ್ಯದ ರೋಡ ಮೇಲೆ ಗಾರ್ಡನ ಕಡೆಯಿಂದ ನಡೆದುಕೊಂಡು ರಸ್ತೆ ದಾಟುತ್ತೀರುವ ಬಸವರಾಜ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ಎಡಗಡೆ ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ವಿರೇಶ ರವರಿಗೆ ಗಾಯಗೊಳಿಸಿ ಬಸವರಾಜ ಇವರಿಗೆ ಭಾರಿಗಾಯಗೊಳಿಸಿ ತಾನೂ ಗಾಯ ಹೊಂದಿದ್ದು ಮೋಟಾರ ಸೈಕಲ ಸವಾರ ಎಮ್.ಡಿ ಸಮೀರ ಇತನ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 02 : ಶ್ರೀಶೈಲ್ ತಂದೆ ಬೈಲಪ್ಪ ಈತನು ತನ್ನ ಮೋಟಾರ ಸೈಕಲ ಚೇಸ್ಸಿ ನಂ: MBLHA10ERA9A03389 ನೇದ್ದನ್ನು ಆಫಜಲಪೂರ ರೋಡ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶರಣಸಿರಸಗಿ ಗ್ರಾಮದ  ನಾಗೂರ ಗುಡಿ ಹತ್ತಿರ ರೋಡಿನ ಮೇಲೆ ಹೋಗುತ್ತಿರುವ ಶ್ರೀ.ಮಲ್ಲಿಕಾರ್ಜುನ ತಂದೆ ಅಣ್ಣರಾಯ ಉಪಾಂಳ ಸಾ:ಶರಣಸಿರಸಗಿ  ತಾ:ಜಿ: ಕಲಬುರಗಿ  ರವರ ಆಕಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ  ಸಮೇತ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ, ಬಾಯಿಂದ. ಮೂಗಿನಿಂದ. ರಕ್ತಸ್ರಾವ ಆಗಿ ಎದೆಯ ಎಡಪಕ್ಕೆಗೆ ಭಾರಿ ರಕ್ತಗಾಯ, ಬಾಯಿಗೆ ಭಾರಿ ಪೆಟ್ಟಾಗಿ ಕೆಳಗಿನ ಮೂರು ಹಲ್ಲುಗಳು ಮುರಿದು ನಾಲಿಗೆ  ಕಚ್ಚಿದ್ದು ಇರುತ್ತದೆ. ಆಕಳು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿರುತ್ತದೆ. ಶ್ರೀಶೈಲ ಈತನು ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಉಪಚಾರ ಹೊಂದುತ್ತಾ ಉಪಚಾರಿ ಫಲಕಾರಿಯಾಗದೆ ದಿನಾಂಕ 18/04/2019 ರಂದು 2-40 ಎ.ಎಂ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ ಸಾಗರ ಹಾಗೂ ನಮ್ಮ ಸಂಬಂಧಿಕಳಾದ ಕುಮಾರಿ ನಿವೇದಿತಾ ತಂದೆ ಶರಣಪ್ಪಾ ಕೊಡದೂರ ಇಬ್ಬರು ಕಲಬುರಗಿ ಯಿಂದ ನನ್ನ ಹೊಸ ಮೊಟಾರ್ ಸೈಕಲ್ ನಂ ಇನ್ನು ಬಿದ್ದಿರುವುದಿಲ್ಲ ಅದರ ಮೇಲೆ ಚಿಂಚನಸೂರ @ ಚಿಂಚೂರ ಗ್ರಾಮದ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗಿ ದರ್ಶನಮಾಡಿಕೊಂಡು ಅಂದಾಜು ಮಧ್ಯಾಹ್ನ 1-30 ಪಿ.ಎಂ ಸುಮಾರಿಗೆ ಮರಳಿ ಕಲಬುರಗಿ ಕಡೆಗೆ ಹೊರಡುಬೇಕು ಅಂತಾ ದೇವಸ್ಥಾನದ ಹತ್ತಿರ ನಿಲ್ಲಿಸಿದ ಮೊಟಾರ್ ಸೈಕಲ್ ಮೇಲೆ ನಾವಿಬ್ಬರು ಏರಿ ಕುಳಿತಾಗ ಅಲ್ಲಿಯೇ ಹತ್ತಿರದಲ್ಲಿ ನಿಲ್ಲಿಸಿದ. ಕ್ರೂಜರ್ ವಾಹನ ನಂಬರ್ ಕೆಎ17-5175 ನೇದ್ದರ ಚಾಲಕನು ತನ್ನ ಕ್ರೂಜರ್ ವಾಹನ ಚಾಲುಮಾಡಿ ಒಮ್ಮಲೇ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತಂಹ ಮೊಟಾರ್ ಸೈಕಲಗೆ ಜೋರಾಗಿ ಹಿಂದಿನಿಂದ ಡಿಕ್ಕಿಹೊಡೆದು ಅಪಘಾತ ಪಡಿಸಿದನು ಆಗ ನಾವಿಬ್ಬರು ಕೆಳಗೆ ಬಿದ್ದಾಗ ನಮ್ಮ ಮೇಲೆ ಕ್ರೂಜರ್ ಹೈಯ್ದು ನನಗೆ ಬಲಗಾಲ ಮೊಳಕಾಲಿಗೆ ಭಾರಿರಕ್ತಗಾಯ ಮತ್ತು ಗುಪ್ತಗಾಯ ಬಲಗೈ ಬೆರಳುಗಳಿಗೆ ರಕ್ತಗಾಯ ಸೊಂಟಕ್ಕೆ ಭಾರಿ ಗುಪ್ತಗಾಯ ನೇವಿದಿತ ಇವಳಿಗೆ ಎಡಗಣ್ಣಿ ಪಕ್ಕ ಭಾರಿ ರಕ್ತಗಾಯ ಬಲಗಭಾಗದ ಹಣೆಗೆ ಬಾರಿ ರಕ್ತಗಾಯ ಸೊಂಡಕ್ಕೆ ಭಾರಿ ಗುಪ್ತಗಾಯಿ ಬಲಗಾಲಿಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯಳಾಗಿ ನಾವಿಬ್ಬರು ಒದ್ದಾಡುತ್ತಿದ್ದಾಗ ದೇವಸ್ಥಾನ ಹತ್ತಿರ ಇದ್ದ ಕೆಲವು ಜನರು ಘಟನೆಯನ್ನು ನೋಡಿ ನಮಗೆ ಎತ್ತಿ ಕ್ರೂಜರ್ ನಂ ಕೆಎ17-5175 ನೇದ್ದರಲ್ಲಿ ಹಾಕಿ ಕಳಿಸಿರುತ್ತಾರೆ. ಅದರ ಚಾಲಕನು ನಮಗೆ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಆಸ್ಪತ್ರೆಯಿಂದ ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀಮತಿ ರೂಬಿನಾಬೇಗಂ ಗಂಡ ಮಹೇಬೂಬಶಾ ಮಕಾಂದಾರ, ಸಾ:ರೇವೂರ(ಬಿ), ತಾ:ಅಫಜಲಪೂರ ರವರಗೆ 10 ವರ್ಷಗಳ ಹಿಂದೆ ರೇವೂರ(ಬಿ) ಗ್ರಾಮದ ಮಹೇಬೂಬಶಾ ತಂದೆ ಖಾಸಿಂ ಶಾ ಮಕಾಂದಾರ ಇವನೊಂದಿಗೆ ಮದುವೆ  ಆಗಿದ್ದು, ನನ್ನ ತವರು ಮನೆ ನರೋಣಾ ಗ್ರಾಮ ಇರುತ್ತದೆ. ನಾನು ನನ್ನ 5ನೇ ಬಾಣಂತನದ ನಿಮಿತ್ಯ 3ತಿಂಗಳ ಹಿಂದೆ ನನ್ನ ಮಕ್ಕಳಾದ 1)ತಬಸುಮ್, 2)ಆಲಿಯಾ, 3)ಅಂಜುಮ್, 4)ಖಾದರಬಿ ಇವರೊಂದಿಗೆ ತವರು ಮನೆ ನರೋಣಾ ಗ್ರಾಮಕ್ಕೆ ಬಂದಿರುತ್ತೇನೆ. ಕಳೆದ ಒಂದುವರೆ ತಿಂಗಳ ಹಿಂದೆ ನನಗೆ 5ನೇ ಹೆಣ್ಣುಮಗು ಜನಿಸಿರುತ್ತದೆ. ದಿನಾಂಕ:16/04/2019 ರಂದು ನನ್ನ 3ನೇ ಮಗಳಾದ ಅಂಜುಮ್ ವಯಾ: 5ವರ್ಷ, ಇವಳು ಸಾಯಂಕಾಲ 4-00 ಗಂಟೆ ಸುಮಾರಿಗೆ ನಮ್ಮ ಕೇರಿಯಾ ಇತರೆ ಮಕ್ಕಳೊಂದಿಗೆ ನರೋಣಾ ಗ್ರಾಮದ ಮಸೂತಿಗೆ ಅರೇಬಿಕ್ ಓದಲು ಹೋಗಿರುತ್ತಾಳೆ.  ಸಾಯಂಕಾಲ 5-40ರ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಸಂಬಂಧಿಕನಾದ ಸೈಯದ ಖಾಸಿಂ ತಂದೆ ಇಸ್ಮಾಯಿಲಸಾಬ ಇನಾಮದಾರ ಇವರು ನಮ್ಮ ಮನೆಗೆ ಬಂದು ಬಸ್ಟ್ಯಾಂಡ್ ಹತ್ತಿರ ಅಂಜುಂ ಇವಳಿಗೆ ಜೀಪ್ ಅಪಘಾತ ವಾಗಿರುತ್ತದೆ ಅಂತಾ ಹೇಳಿದಾಗ ಗಾಬರಿಯಾಗಿ ಮನೆಯಿಂದ ನಾನು ನನ್ನ ತಾಯಿಯಾದ ಶಾಬಿರಾಬಿ ಗಂಡ ಗುಲಾಬಸಾಬ ಇನಾಮದಾರ, ತಮ್ಮನಾದ ಸೈಯದ್ ಫಾರುಖ್ ತಂದೆ ಗುಲಾಬಸಾಬ ಇನಾಮದಾರ ನಾವೆಲ್ಲರೂ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನರೋಣಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಡಾಂಬರ್ ರೋಡಿನ ಮೇಲೆ ನನ್ನ ಮಗಳಾದ ಅಂಜುಮ್ ಇವಳಿಗೆ ಜೀಪ್ ಅಪಘಾತ ಪಡಿಸಿದ್ದರಿಂದ ಅವಳಿಗೆ ಸದರಿ ಅಪಘಾದಲ್ಲಿ ಬಲಗಾಲಿಗೆ ಭಾರಿಗುಪ್ತಗಾಯ ಹಾಗೂ ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿದ್ದು, ಇದರ ಬಗ್ಗೆ ನನ್ನ ಸಂಬಂಧಿಕ ಸೈಯದ್ ಖಾಸಿಂ ಇವರಿಗೆ ವಿಚಾರಿಸಿದಾಗ ಸಾಯಂಕಾಲ 5-30ಕ್ಕೆ ನಾನು ನನ್ನ ಪಂಚರ ಅಂಗಡಿ ಮುಂದೆ ನಿಂತಾಗ ಜೀಪ್ ನಂ: ಕೆಎ23-ಎಂ4217 ನೇದ್ದರ ಚಾಲಕನಾದ ಕ್ಷೇಮಲಿಂಗಯ್ಯ ತಂದೆ ಬಸಪುರಯ್ಯ ಬಾಳಿ ಈತನು ತನ್ನ ಜೀಪನ್ನು ಕಲಬುರಗಿ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತ್ತೆಯ ಪಕ್ಕ ಹೊರಟಿದ್ದ ಅಂಜುಮ್ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಸದರಿ ಜೀಪ್ ಸ್ಥಳದಲ್ಲಿಯೇ ಇದ್ದು ಅದರ ನಂಬರ್ ಪರಿಶೀಲಿಸಲಾಗಿ  ಕೆಎ23-ಎಂ4217 ಇರುತ್ತದೆ. ಗಂಭೀರಗಾಯ ಹೊಂದಿದ ನನ್ನ ಮಗಳಿಗೆ ಸೈಯದ ಖಾಸಿಂ ತಂದೆ ಇಸ್ಮಾಯಿಲಸಾಬ ಇನಾಮದಾರ, ಸಲೀಮಾಬಿ ಗಂಡ ಸೈಯದ್ ಖಾಸಿಂ ಇನಾಮದಾರ, ಫಾತಿಮಾಬಿ ಗಂಡ ಸೈಯದ್ ಸಲಿಂ ಇನಾಮದಾರ ಇವರೆಲ್ಲರೂ ಸೇರಿ 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಒಯ್ದು ಹೆಚ್ಚಿನ ಉಪಚಾರಕ್ಕಾಗಿ ಸೋಲಾಪುರದ ಅಶ್ವನಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅವಮಾನ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಿಲೀಪ ತಂದೆ ಶ್ರೀನಿವಾಸ ನಾಯಕ ಸಾ: ಸ್ಟೇಷನ ತಾಂಡಾ ಶಹಾಬಾದ ರವರು ದಿನಾಂಕ: 18/04/2019 ರಂದು ನಾನು ಮುಂಜಾನೆ ಮನೆಯಲ್ಲಿದ್ದಾಗ ನನಗೆ ಗೊತ್ತಾಗಿದ್ದೆನೆಂದರೆ ಭಂಕೂರ ಕ್ರಾಸ ಹತ್ತಿರ ನಮ್ಮ ಬಂಜಾರ ಸಮಾಜದ ಮುಖಂಡರಾದ ಶ್ರೀ ಬಾಬುರಾವ ಚವ್ಹಾಣ ಮಾಜಿ ಸಚಿವರು 2) ಸುಭಾಷ ರಾಠೋಡ 3) ಅರ್ ಬಿ ರವಿ ಚವ್ಹಾಣ 4) ನಾಮದೇವ ರಾಠೋಡ ಪೇಠಶಿರೂರ ತಾಲ್ಲೂಕಾ ಪಂಚಾಯತ ಸದಸ್ಯರು ರವರುಗಳ ಭಾವಚಿತ್ರ ಮತ್ತು ಹೆಸರುಗಳು ಇರುವ 3 X 5  ಅಳತೆಯ ಪ್ರೇಕ್ಸ ಬೋರ್ಡನಲ್ಲಿ ಸಮಜಾದ ದ್ರೋಹಿಗಳು ದುಡ್ಡಿಗಾಗಿ ಸಮಾಜದ ತೊರೆದ ನಾಲಾಯಕರು ( ಕಳ್ಳರು ) ಅಂತಾ ಬರೆದು ಭಂಕೂರ ಕ್ರಾಸ ಹತ್ತಿರ ಇರುವ ವಿದ್ಯುತ್ ಕಂಬಕ್ಕೆ ಅಳವಡಿಸಿ ಅದಕ್ಕೆ ಚಪ್ಪಲಿಯ ಹಾರ ಮಾಡಿ ಹಾಕಿ ನಮ್ಮ ಸಮಾಜಕ್ಕೆ ಅವಮಾನ ಮಾಡಿರುತ್ತಾರೆ ಅಂತಾ ಗೊತ್ತಾಗಿ ನಾನು ಮತ್ತು ವಿಜಯ ರಾಠೋಡ  ಹಾಗೂ ಸುರೇಶ ಮೆಂಗನ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿದ್ದು ಯಾರೋ ದುಷ್ಕರ್ಮಿಗಳು ದಿನಾಂಕ: 17/04/2019 ರಂದು ರಾತ್ರಿ ವೇಳೆಯಲ್ಲಿ ನಮ್ಮ ಸಮಾಜದ ಮುಖಂಡರ ಪೋಟೊ ಇರುವ ಪ್ಲೇಕ್ಸ ಹಾಕಿ ಅದಕ್ಕೆ ಚಪ್ಪಲಿಯ ಹಾರ ಹಾಕಿ ಅವಮಾನ ಮಾಡಿ ಚುನಾವಣೆ ಸಮಯದಲ್ಲಿ ನಮ್ಮ ಬಂಜಾರ ಸಮಾಜದ ಮೇಲಿನ  ದ್ವೇಷದಿಂದ  ನಮ್ಮ ಸಮಜಾಕ್ಕೆ ಅವಮಾನ ಮಾಡಿರುತ್ತಾರೆ ಕಾರಣ ಅವರ ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

17 April 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ:15/04/2019 ರಂದು ಸಾಯಂಕಾಲ 5-30 ಪಿ,ಎಮ್.ಸುಮಾರಿಗೆ ನನ್ನ ಗಂಡನು ಹೊಲಕ್ಕೆ ಹೋಗಿ ಬರುತ್ತೆನೆ ಅಂತ ತನ್ನ ಮೋಟಾರ ಸೈಕಲ ನಂಬರ ಕೆ.-02 ಈಪಿ-2188 ನೇದ್ದನ್ನು ತಗೆದುಕೊಂಡು ನಮ್ಮ ಮನಯಿಂದ ಹೋಗಿರುತ್ತಾನೆ. ನಂತರ 6-30 ಪಿ,ಎಮ್.ಸುಮಾರಿಗೆ ನಮ್ಮ ಜಾತಿಯ ಬಲವಂತ ತಂದೆ ಹಣಮಂತ ಹೋರ್ತಿ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ ನಾನು ನಮ್ಮ ಹೊಲದಿಂದ ಮನೆಗೆ ಬರಬೆಕೆಂದು ಅಂಬಣ್ಣ ಲೋಣಾರ ರವರ ಹೊಲದ ಹತ್ತೀರ ನಡೆದುಕೊಂಡು ಬರುತ್ತಿರುವಾಗ 6-00 ಪಿ,ಎಮ್.ಸುಮಾರಿಗೆ ಸದರಿ ಹೊಲದ ಹತ್ತೀರ ಮೋಟಾರ ಸೈಕಲ ಮೇಲೆ ಕರಜಗಿ ಕಡೆಯಿಂದ ಬರುತ್ತೀದ್ದ ನಿಮ್ಮ ಗಂಡನ ಮೋಟಾರ ಸೈಕಲಿಗೆ ಅಫಜಲಪೂರ ಕಡೆಯಿಂದ ಟ್ಯಾಂಕರ ನಂಬರ ಕೆ,-32 ಸಿ-9641 ನೆದ್ದರ ಚಾಲಕನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಪಘಾತಪಡಿಸಿದನು ಆಗ ನಾನು ಹೋಗಿ ನೋಡಲಾಗಿ ನಿಮ್ಮ ಗಂಡನ ತಲೆಗೆ ಭಾರಿ ರಕ್ತಗಾಯ, ಬಲಗಾಲಿಗೆ ಮತ್ತು ಬಲಗೈಗೆ ಗಾಯಗಳಾಗಿ ಚರ್ಮ ಸುಲಿದಂತಾಗಿ ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಮತ್ತು ಸದರಿ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಸ್ಥಳದಲ್ಲಿ ನಿಲ್ಲಿಸಿ ಅಪಘಾತವಾಗಿರುವದನ್ನು ನೋಡಿ ಟ್ಯಾಂಕರ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಸೋದರ ಅಳಿಯನಾದ ಬಸವರಾಜ ತಂದೆ ಸುಭಾಷ ಶೇಷಗಿರಿ ಇಬ್ಬರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನು ಅಪಘಾತದಲ್ಲಿ ಆಗಿರುವ ಗಾಯಗಳಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಕಂಡುಬಂದಿರುತ್ತದೆ. ಅಂತಾ ಶ್ರೀಮತಿ ಭೌರಮ್ಮ ಗಂಡ ಹಣಮಂತ ನಿಂಬಾಳ ಸಾ: ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲಿನಾಥ ತಂದೆ ಲಿಂಗಣ್ಣ ಅಂಕಲಗಿ ಸಾ: ಬೈರಾಮಡಗಿ ರವರು ದಿನಾಂಕ:24/02/2019 ರಂದು ಘತ್ತರಗಿ ಗ್ರಾಮದ ಶ್ರೀ ಭಾಗ್ಯವಂತಿ ದೆವಸ್ಥಾನದಲ್ಲಿ ನನ್ನ ತಂಗಿಯ ಮಗಳ ಜವಳ ಕಾರ್ಯಕ್ರಮವಿದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಾಯಿಯಾದ ಶಾರದಾಭಾಯಿ  ಇಬ್ಬರು ಕೂಡಿಕೊಂಡು ಬೆಳಿಗ್ಗೆ  9-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂಬರ ಕೆ,-32 ಈಆರ್-7855 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇವೆ ನಾವು 11-00 ,ಎಮ್.ಸುಮಾರಿಗೆ ನಾವು ಹಿಂಚಗೇರಿ ಗ್ರಾಮ ದಾಟಿ ಅಂದಾಜು 500 ಮೀಟರದಲ್ಲಿ ಘತ್ರರ್ಗಿ ಗ್ರಾಮದ ಕಡೆ ಹೋಗುತ್ತಿದ್ದಾಗ ಸದರಿ ಕಾರ್ಯಕ್ರಮಕ್ಕೆ ಬರುತ್ತಿದ್ದ ನಮ್ಮ ಗ್ರಾಮದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಈತನು ತನ್ನ ಮೋಟಾರ ಸೈಕಲ ನಂಬರ ಕೆ,-32 ಈಎಲ್-3296 ನೇದ್ದರ ಮೇಲೆ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಹಿಂದಿನಿಂದ ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದು ಆಗ ನನ್ನ ಮೋಟಾರ ಸೈಕಲ ಮೇಲೆ ಕುಳಿತಿದ್ದ ನನ್ನ ತಾಯಿಯು ಮೋಟರ ಸೈಕಲ ಮೇಲಿಂದ ಕೇಳಗಡೆ ಬಿದ್ದಳು ಆಗ ನಾನು ಮೋಟಾರ ಸೈಕಲ ಮೇಲಿಂದ ಕೆಳಗಡೆ ಇಳಿದು ನೋಡಲಾಗಿ ನನ್ನ ತಾಯಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಬೆಹುಸಾಗಿ ಬಿದ್ದಿರುತ್ತಾಳೆ ಮಾತನಾಡಿಸಿದರು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವದಿಲ್ಲ ನಂತರ ನಾನು ನನ್ನ ತಾಯಿಗೆ ಅಫಜಲಪೂರ ಕಡೆ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಅಫಜಲಪೂರದ ಸರಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ವಳಸಂಗಕರ ಆಸ್ಪತ್ರೇಗೆ ಸೇರಿಕ ಮಾಡಿರುತ್ತೇನೆ.   ಕಾರಣ ನನ್ನ ಮೋಟಾರ ಸೈಕಲಕ್ಕೆ ಅಪಘಾತಪಡಿಸಿ ನನ್ನ ತಾಯಿಗೆ ಗಾಯಗೋಳಿಸಿದ ಮೋಟಾರ ಸೈಕಲ ನಂಬರ ಕೆ,-32 ಈಎಲ್-3296 ನೇದ್ದರ ಸವಾರನಾದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಸಾ||ಭೈರಾಮಡಗಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲಕ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 15/04/2019 ರಂದು ಮೃತ ಶಿವರಾಜ ಹಾಗೂ ಈಶ್ವರ ಇವರಿಬ್ಬರು ಕೂಡಿಕೊಂಡು ಸೇಡಂ ಹತ್ತಿರ ರಂಜೋಳ ಗ್ರಾಮದಲ್ಲಿ ಫಿರ್ಯಾದಿಯ ಗ್ರಾಮದವನಾದ ಕಾಶಪ್ಪ ತಂದೆ ಶಾಂತಪ್ಪ ಮಾಂಗ ಇವರು ದೇವರ ಕಾರ್ಯಕ್ರಮಕ್ಕೆ ಹೇಳಿದ ಮೇರೆಗೆ ಮೃತನು ತನ್ನ ಹತ್ತಿರ ಇದ್ದ ಇನ್ನು ಪಾಸಿಂಗ ಆಗದ ಹಿರೋ ಹೊಂಡಾ ಸ್ಪಲೆಂಡರ ಮೋಟರ ಸೈಕಲ ನೇದ್ದನ್ನು ಇಬ್ಬರು ಕೂಡಿ ರಂಜೋಳ ಗ್ರಾಮಕ್ಕ ಹೋಗಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಅದೇ ಮೋಟರ ಸೈಕಲ ಮೇಲೆ ಅಲ್ಲಿಂದ ಊರಿಗೆ ಬರುತ್ತಿದ್ದಾಗ ಸಮಯ 6-15 ಪಿ.ಎಂ ಸುಮಾರಿಗೆ ಕಲಬುರಗಿಯ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ ಸಮೀಪ ರಾಯಲ ಧಾಬಾದ ರೋಡಿನ ಮೇಲೆ ಮೋಟರ ಸೈಕಲ ಮೇಲೆ ಹೋಗುತ್ತಿದ್ದಾಗ ಎದುರು ಗಡೆಯಿಂದ ಅಂದರೆ ಟೆಂಗಳಿ ಕ್ರಾಸ ಕಡೆಯಿಂದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಜಿತನದಿಂದ ಚಲಾಯಿಸಿಕೊಂಡು ಬಂದವನೇ ಮೃತನು ಚಲಾಯಿಸಿಕೊಂಡು ಹೋರಟ ಮೋಟರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಈ ಅಪಘಾತದಲ್ಲಿ ಮೃತನ ತಲೆಯ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಹಾಗೂ ಹಣೆಯ ಮುಂಭಾಗದಲ್ಲಿ ಭಾರಿ ರಕ್ತ ಗಾಯ, ಬಲಗಣ್ಣಿನ ಹುಬ್ಬಿನ ಮೇಲೆ, ಮುಗಿಗೆ, ಬಾಯಿಗೆ ರಕ್ತ ಗಾಯವಾಗಿರುತ್ತದೆ. ಮತ್ತು ಹೊಟ್ಟೆಯ ಮೇಲೆ ತರಚಿದ ಗಾಯ, ಬಲಗಾಲಿನ ಮೋಳಕಾಲ ಕೆಳಗೆ ರಕ್ತ ಗಾಯ, ಇತರ ಕಡೆಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ತಲೆಯಲ್ಲಿ ರಕ್ತ ಗಾಯ ಮತ್ತು ಕುತ್ತಿಗೆಗೆ, ಹೊಟ್ಟೆಗೆ ಒಳ ಪೆಟ್ಟಾಗಿರುತ್ತದೆ ಕಾರಣ ರಸ್ತೆ ಅಪಘಾತ ಪಡಿಸಿದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನ ಮೇಲೆ ಕಾನೂನಿ ಕ್ರಮ ಜರುಗಿಸಬೇಕೆಂದು ಶ್ರೀ ಈಶ್ವರ ತಂದೆ ಮಲ್ಕಪ್ಪ ತಳಕೇರಿ ಸಾ ಸಂಗಾವಿ ತಾ : ಚಿತ್ತಾಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ          ಠಾಣೆ ಗುನ್ನೆ ನಂ:33/2019 ಕಲಂ:279, 338, 304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಅಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಲಲಿತಾಬಾಯಿ ಗಂಡ ದೇವಿದಾಸ ರಾಠೋಡ ಸಾ: ಟೇಕು ನಾಯಕ ತಾಂಡಾ ತಾ: ಆಳಂದ ರವರ ಗಂಡನು ಅಂಗವಿಕಲನಿದ್ದು ನನಗೆ ಎರಡು ಜನ ಹೇಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳು ಇರುತ್ತಾರೆ ಹೇಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸಿವಾಗಿರುತ್ತಾರೆ ಗಂಡು ಮಕ್ಕಳು ಇನ್ನೂ ಚಿಕ್ಕವರಿದ್ದು ನಾನು & ನನ್ನ ಗಂಡ ಒಕ್ಕಲುತನ ಕೆಲಸ ಮಾಡಿಕೊಂಡು ಬಂದಿರುತ್ತೇವೆ, ನಮ್ಮ ಹೇಣ್ಣು ಮಕ್ಕಳ ಮದುವೆ ಕಾಲಕ್ಕೆ ಮತ್ತು ನಮ್ಮ ಹೋಲದಲ್ಲಿ ಬೋರವೆಲ ಹಾಕಿದ್ದು, ಹಾಗು ಇನ್ನೀತರ ಹೊಲದ ಕೆಲಸ ಮಾಡಿಸಲು ಎಸ್.ಬಿ,ಹೆಚ್ ಬ್ಯಾಂಕ ಆಳಂದ ದಲ್ಲಿ ನಮ್ಮ ಹೋಲದ ಮೇಲೆ 1.00.000/- (ಒಂದು ಲಕ್ಷ ರೂಪಾಯಿಗಳು) ಸಾಲಾ ಮಾಡಿದ್ದು ಮತ್ತು ನಮ್ಮ ಪ್ರಾಪಂಚಿಕ ಅಡೆಚಡೆಗಾಗಿ ಅಲ್ಲಿಲ್ಲಿ ನಮ್ಮ ಪರಿಚಯಸ್ಥರಲ್ಲಿ ಕೈಗಡ ರೂಪದಲ್ಲಿ ಸುಮಾರು ಐದು ಲಕ್ಷ ರೂಪಾಯಿಗಳು ಸಾಲ ಮಾಡಿದ್ದು ನನ್ನ ಗಂಡನು ನಮ್ಮ ಮನೆಯಲ್ಲಿ ಆಗಾಗ್ಗೆ ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನನ್ನ ಮುಂದೆ ಆಗಾಗ್ಗೆ ಹೇಳಿರುತ್ತಾರೆ. ದಿನಾಂಕ 16/04/2019 ರಂದು 05;00 ಎ.ಎಂಕ್ಕೆ ನನ್ನ ಗಂಡನು ನಮ್ಮ ಮನೆಯಲ್ಲಿ ಎಂದಿನಂತೆ ಎದ್ದು ನಾನು ನಮ್ಮ ಹೋಲದಲ್ಲಿನ ಭಾಗ್ಯವಂತಿ ದೇವಿಗೆ ಪೂಜೆ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಲಕ್ಕೆ ಹೋಗಿದ್ದು ನಂತರ 07;00 ಗಂಟೆಯಾದರು ಮನೆಗೆ ಬರದೆ ಇದ್ದುದ್ದರಿಂದ ನಮ್ಮ ಮೈದುನನಾದ ಹರಿ ತಂದೆ ತುಕಾರಾಮ ಪವಾರ ಇವರು ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ನನ್ನ ಗಂಡ ನಮ್ಮ ಹೋಲ ಸರ್ವೇ ನಂ, 119 ನೇದ್ದರಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ನೇತಾಡುತ್ತಿದ್ದುನ್ನು ನೋಡಿ ಗಾಬರಿಯಾಗಿ ಮನೆಗೆ ಬಂದು ವಿಷಯ ತಿಳಿಸಿದ್ದರಿಂದ ನಾನು ಮತ್ತು, ಹರಿ ಪವಾರ, ನೀಲಕಂಠ ತಂದೆ ಕೀಶನ ರಾಠೋಡ, ಶಂಕರ ತಂದೆ ಲಕ್ಷ್ಮಣ ಆಡೆ, ಮೋಹನ ತಂಧೆ ಗೋಪಿಚಂದ ಪವಾರ, ದಿನೇಶ ತಂದೆ ಖೇರು ರಾಠೋಡ ರವರೆಲ್ಲರೂ ಕೂಡಿಕೊಮಡು ಗಾಬರಿಯಾಗಿ ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ಬೇವಿನ ಗಿಡಕ್ಕೆ ನನ್ನ ಗಂಡನು ನೇಣು ಹಾಕಿಕೊಂಡು ನೇತಾಡುತ್ತಿದ್ದನು, ಕಾರಣ ನನ್ನ ಗಂಡನು ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ಮತ್ತು ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ಬೇಳಿಗ್ಗಿನ ಜಾವ 05;45 ಎ.ಎಂ ಸುಮಾರಿಗೆ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ಸಿದ್ದನಗೌಡ ತಂದೆ ಅಯ್ಯಪ್ಪಗೌಡ ಪೊಲೀಸ ಬಿರಾದಾರ ಸಾ|| ಜಂಬೇರಹಳ್ಳ ತಾ|| ಜೇವರ್ಗಿ ರವರು  ಸುಮಾರು ತಿಂಗಳಿಂದ ನಮ್ಮ ಅಣ್ಣನ ಮಗನಾದ ಬಸವರಾಜ ತಂದೆ ಮಡಿವಾಳಪ್ಪಗೌಡ ಪೊಲೀಸ ಬಿರಾದಾರ ಈತನು ಆಸ್ತಿ ವಿಷಯದಲ್ಲಿ ಮತ್ತು ಮನೆಯಲ್ಲಿ ಪಾಲಿನ ವಿಷಯದಲ್ಲಿ ತಕಾರು ಮಾಡುತ್ತಾ ನನ್ನೊಂದಿಗೆ ಹಗೆ ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ 16-04-2019 ರಂದು 5;30 ಪಿ.ಎಂ ಕ್ಕೆ ನಾನು ನನ್ನ ಮಗ ಮಡಿವಾಳಪ್ಪಗೌಡ ಮತ್ತು ನನ್ನ ಸೊಸೆ ನಿರ್ಮಲಾ ರವರು ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳತಿದ್ದೆವು, ಅದೇ ಸಮಯಕ್ಕೆ ನಮ್ಮ ಅಣ್ಣನ ಮಗ ಬಸವರಾಜ ಇವನು ಕೈಯಲ್ಲಿ ಕೊಡಲಿ ಸಮೇತ ಮುಳ್ಳಿನ ಕಂಟಿಗಳನ್ನು ಹಿಡಿದುಕೋಂಡು ನಮ್ಮ ಮನೆಗೆ ಬಂದು ಏ ಸೂಳಿ ಮಕ್ಕಳ್ಯಾ ನಿಮ್ಮ ಮನೆಯಲ್ಲಿ ನನಗ ಇನ್ನು ಪಾಲು ಬರಬೇಕು, ನೀವು ಕೊಡುತ್ತಿಲ್ಲಾ, ಅದಕ್ಕೆ ಇವತ್ತ ನಿಮ್ಮ ಮನೆಯಲ್ಲಿ ಮುಳ್ಳು ಕಂಟಿ ಹಾಕಿ ನಿಮಗೆಲ್ಲರಿಗು ಕೊಡಲಿಯಿಂದ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಮುಳ್ಳಕಂಟಿಗಳು ನಮ್ಮ ಮನೆಯಲ್ಲಿ ಹಾಕಿದನು, ನಂತರ ನಾನು ಈತರಹ ಯಾಕ ಮಾಡಲಾಕತ್ತಿ ಅಂತಾ ಕೇಳಿದ್ದಕ್ಕೆ ನನಗೆ ತಡೆದು ನಿಲ್ಲಿಸಿ, ಏ ರಂಡಿ ಮಗನೆ ಈ ಮನೆಯಲ್ಲಿ ನನಗೆ ಪಾಲು ಬರುತ್ತದೆ ಅಂತಾ ಹೇಳಿದರು ನನಗೆ ಪಾಲು ಕೊಡುತ್ತಿಲ್ಲಾ, ಇವತ್ತ ನಿನಗ ಸಾಯಿಸೆ ಬಿಡುತ್ತೇನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಕೊಡಲಿಯನ್ನು ಬೀಸಿದನು, ಆಗ ನಾನು ನೆಲಕ್ಕೆ ಕುಳಿತುಕೊಂಡೆನು, ಇಲ್ಲದಿದ್ದರೆ ನನ್ನ ತಲೆ ಕತ್ತರಿಸುತ್ತಿತ್ತು, ನಂತರ ನಾನು ಅಲ್ಲಿಂದ ಓಡಿ ಹೋಗುತ್ತಿದ್ದಾಗ, ಬಸವರಾಜ ಇವನು ಕೊಡಲಿ ತೆಗೆದುಕೋಂಡು ನನಗೆ ಸಾಯಿಸಲು ಬೆನ್ನು ಹತ್ತಿದ್ದನು, ನಂತರ ನಮ್ಮೂರ ಶಿವಪುತ್ರಪ್ಪ ತಂದೆ ಗುರಪ್ಪ ಅರಳಗುಂಡಗಿ, ರೇವಣಸಿದ್ದಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಪೊಲೀಸ ಬಿರಾದಾರ ರವರು ಬಂದು ಬಸವರಾಜನಿಗೆ ಹಿಡಿದು ಅವನ ಕೈಯಲ್ಲಿದ್ದ ಕೊಡಲಿಯನ್ನು ಕಸಿದುಕೋಂಡು ನಮ್ಮ ಮನೆಯ ಮುಂದೆ ಬಿಸಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ:15.04.2019 ರಂದು ರಾತ್ರಿ 10 ಗಂಟೆಯ ಸೂಮಾರಿಗೆ ಸಿರನೂರ ಗ್ರಾಮದ ಹತ್ತೀರ ರುವ ವೆಂಕೇಶ್ವರ ಪ್ಲಾಜಾ ರೆಸ್ಟೊರೆಂಟ ಹತ್ತೀರ ರಾಜಅಹ್ಮದ ಹುಸೇನಿ ಕೋಗನೂರ ಸಾ ಬೈರಮಡಗಿ ಇವನು ಶ್ರೀ ಮಲ್ಲಿ ನಾಥ ತಂದೆ ಲಿಂಗಣ್ಣಾ ಅಂಕಲಗಿ ಸಾ : ಬೈರಮಡಗಿ  ಇವರಿಗೆ ಹಣ ಕೋಡು ಅಂತಾ ಹೇಳಿ ವಿನಾಕಾರಣ ಜಗಳ ತೆಗೆದು ಕೈಯಿಂದ ಕಲ್ಲಿನಿಂದ ಹೋಡೆಬಡೆ ಮಾಡಿ ಭಾರಿ ಗಾಯವುಂಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸುನೀಲ ತಂದೆ ವಸಂತ ಕಲಕುಟಗಿ ಸಾಃ ಭೂಸನೂರ ಗ್ರಾಮ, ತಾಃ ಆಳಂದ ರವರು ಮತ್ತು ನನ್ನ ತಾಯಿಯಾದ ಮಲ್ಲಮ್ಮ ಇಬ್ಬರೂ ಕೂಡಿಕೊಂಡು ತೆಲ್ಲೂರ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತೆಲ್ಲೂರದಿಂದ ನಮ್ಮೂರಿಗೆ ನಾನು ಮತ್ತು ನನ್ನ ತಾಯಿ ಕೂಡಿಕೊಂಡು ದಿನಾಂಕ 16/04/2019 ರಂದು ಖಾಸಗಿ ಜೀಪನಲ್ಲಿ ಬಂದು ನಮ್ಮೂರಿನ ಬಸ ನಿಲ್ದಾಣದಲ್ಲಿ ಇಳಿದು ಬಸ ನಿಲ್ದಾಣದ ಮುಂದೆ ರೋಡಿನ ಪಕ್ಕದಲ್ಲಿ ಮಾತನಾಡುತ್ತಾ ನಿಂತಾಗ ಮಧ್ಯಾಹ್ನ 01.30 ಪಿ.ಎಮ ಸುಮಾರು ನಮ್ಮೂರಿನ ಬಾಷಾಸಾಬ ತಂದೆ ನಜೀರ ಕರ್ಜಗಿ ಮತ್ತು ರಾಜೋಳ ಗ್ರಾಮದ ಆತನ ಸಂಭಂಧಿಕ ಹೆಸರು ಗೊತ್ತಿಲ್ಲ ಇಬ್ಬರೂ ಕೂಡಿಕೊಂಡು ಒಂದು ಮೋಟಾರ ಸೈಕಲ ಮೇಲೆ ಜೋರಾಗಿ ಬಂದು ನನ್ನ ತಾಯಿಯಾದ ಮಲ್ಲಮ್ಮ ಇವಳಿಗೆ ಬೈಕ ಹತ್ತಿ ಸವರಿಕೊಂಡು ಮುಂದೆ ಹೋಗಿದ್ದು ಅದಕ್ಕೆ ನಾನು ಬಾಷಾಸಾಬನಿಗೆ ಮೊಟಾರ ಸೈಕಲ ಸಾವಕಾಸ ನಡೆಸು ನಮ್ಮ ತಾಯಿಗೆ ಸವರಿಕೊಂಡು ಯಾಕ ಹೊಗಿದ್ದಿ ಅಂತ ಅಂದಾಗ ಏ ಭೋಸಡಿ ಮಗನಾ ಸುನೀಲ್ಯಾ ವಡ್ಡರ ಸೂಳೆ ಮಗನೆ ನಿಮ್ಮದು ಊರಾಗ ಬಹಳ ಆಗದ ಅಂತ ಜಾತಿ ಎತ್ತಿ ಬೈದು ಬೈಕ ಅಲ್ಲಿಯೆ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಬಂದನು ಆಗ ಬಾಷಾಸಾಬನ ಸಂಗಡ ಇದ್ದವನು ನನ್ನ ಎರಡು ಕೈಗಳನ್ನು ಹಿಡಿದನು ಬಾಷಾಸಾಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಎಡ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದನು, ನಾನು ಕೆಳಗಡೆ ಬಿದ್ದಾಗ ಇಬ್ಬರೂ ಕೂಡಿಕೊಂಡು ಕಾಲಿನಿಂದ ಹೊಟ್ಟೆ, ಬೆನ್ನ ಮೇಲೆ ಕಾಲಿನಿಂದ ಒದ್ದರು ನನ್ನ ತಾಯಿಯು ಬಿಡಸಲು ಬಂದಾಗ ಏ ರಂಡಿ ಮಲ್ಲಿ ನೀನು ಬಂದರೆ ನಿನಗೂ ಕೂಡ ಖಲಾಸ ಮಾಡುತ್ತೇವೆ ಅಂತ ಬೈದು ಜೀವ ಭಯಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.