POLICE BHAVAN KALABURAGI

POLICE BHAVAN KALABURAGI

26 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 25.06.18 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮೃತ ಆಶಾ ಇವಳು ಒಂದು ಮೋಟಾರ ಸೈಕಲ ಹಿಂದುಗಡೆ ಕುಳಿತ ಏಷಿಯನ ಮಹಲದಿಂದ ಮನೆಯ ಕಡೆಗೆ ಹೋಗುವಾಗ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ ಸೈಕಲ ಸ್ಕಿಡ ಮಾಡಿ ಅಪಘಾತ ಮಾಡಿದ್ದರಿಂದ ಆಶಾ ಇವಳಿಗೆ ಭಾರಿ ಒಳಪೆಟ್ಟು ಬಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ದಿನಾಂಕ 25-06-2018 ಸಾಯಂಕಾಲ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.ಅಂತಾ ಶ್ರೀ ನಿಜಲಿಂಗಪ್ಪಾ ತಂದೆ ಶಿವಶಂಕರ ಕಟ್ಟಿ ಸಾ: ಭೀಮ ನಗರ ಬಡಾ ರೋಜಾ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 24-6-2018 ರಂದು ಮುಂಜಾನೆ. ನನ್ನ ಮಗ ದಯಾಸಾಗರ ಊರ್ಫ ಚಿಂಟು ತಂದೆ ಮನೋಹರ ನವಲೆ  ಇತನು ಹೊರಗಡೆ ಹೋಗಿ ಬರುತ್ತೇನೆಂದು ಹೊಸದಾಗಿ ತೆಗೆದುಕೊಂಡು ತನ್ನ ಬಜಾಜ ಪಲ್ಸರ ಮೋಟಾರ ಸೈಕಲನ್ನು ತೆಗೆದುಕೊಂಡು ಹೋದನು ಮದ್ಯಾಹ್ನ ಅದರು ಮನೆಗೆ ಬರಲಿಲ್ಲಾ ನಂತರ ಅವನ ಗೆಳೆಯನಾದ ನಾಗಯ್ಯಾ ಊರ್ಫ ನಾಗು ಮಠ ಈತನಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ ನನ್ನ ಮಗ ದಯಾಸಾಗರ ಇತನು ಮುಂಜಾನೆ. ಆಳಂದ ಖಜ್ಜೂರಿಗೆ ಹೋಗಿ ಬರುತ್ತೆನೆಂದು  ತನ್ನ ಮೊಟಾರ ಸೈಕಲ್ ಮೇಲೆ ಹೋಗಿ ಬರುತ್ತೇನೆಂದು ದಿನಾಂಕ.25-6-2018 ರಂದು ಬೆಳಗ್ಗೆ 5-30 ಎ.ಎಂ.ಕ್ಕೆ. ಮರಳಿ ಬರುತ್ತೆನೆಂದು ಹೋಗಿರುತ್ತಾನೆ ಎಂದು ತಿಳಿಸಿದನು. ಇಂದು ದಿನಾಂಕ. 25-6-2018 ರಂದು ಮುಜಾನೆ ಬರಬಹುದೆಂದು ನಾವು ಕಾಯುತ್ತಾ ಕುಳಿತಿರುವಾಗ ಮುಂಜಾನೆ.8-30 ಎ.ಎಂ.ದ ಸುಮಾರಿಗೆ ನಮ್ಮ ಕಾಲೂನಿಯಲ್ಲಿ ಜನರು ಅಂದಾಡುತಿದ್ದು ಏನೆಂದರೆ ನನ್ನ ಮಗ ದಯಾಸಾಗರ ಇತನು ಆಳಂದ ರೋಡ ಪಟ್ಟಣ ಟೂಲ ನಾಕಾ ನಂತರ ಜವಳಿ ಸ್ಕೂಲ  ಹತ್ತಿರ ಆಳಂದ ರೋಡಿಗೆ ತನ್ನ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದಿದ್ದು ಮೆಲಕಿಗೆ  ಮತ್ತು ಕುತ್ತಿಗೆ ಹತ್ತಿರ ಹಾಗೂ ಎಡಗಾಲು ತೊಡೆಗೆ ಮತ್ತು ಪಾದಕ್ಕೆ ರಕ್ತಗಾಯಗಳಾಗಿದ್ದವು ಸ್ಥಳದಲ್ಲಿಯೇ ಮೃತಪಟ್ಟದ್ದು ಶವವನ್ನು ಸರ್ಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಗೊತ್ತಾಗಿ ನಾನು ಮತ್ತು ನನ್ನ ಮಕ್ಕಳಾದ ಅಂಜು ನವಲೆ, ಮೀನಾ, ಸೃಷ್ಟಿ ನವಲೆ  ಎಲ್ಲರೂ ಕೂಡಿಕೊಂಡು ಕಲಬುರಗಿ ಸರಕಾರಿ ದವಖಾನಯ ಶವಗಾರಕ್ಕೆ ಬಂದು ನೋಡಲಾಗಿ ತನ್ನ ಮಗನ ಶವವನ್ನು ಗುರುತಿಸಿದ್ದು ನೋಡಲಾಗಿದೆ ನನ್ನ ಮಗ ದಯಾಸಾಗ ಇತನಿಗೆ  ಬಲಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ ಹಾಗೂ ಕುತ್ತಿಗೆಯ ಹಿಂದೆ  ಎಡ ಮತ್ತು ಬಲಕ್ಕೆ ಕಂದುಗಟ್ಟಿದ್ದ ಗಾಯ , ಎಡಗಾಲು ತೊಡೆಗೆ ತರಚಿದ ಪೆಟ್ಟಾಗಿದ್ದು ಎಡಗಾಲು ಪಾದಕ್ಕೆ ,ರಕ್ತಗಾಯ ಆಗಿರುತ್ತದೆ ಹಾಗೂ ಹಿಬ್ಬಟ್ಟಿಗೆ ರಕ್ತಗಾಯ ಆಗಿರುತ್ತದೆ. ಮತ್ತು ಬಲಗೈ ಮೊಳಕೈಗೆ ತರಚಿದ ಗಾಯಗಳಾಗಿದ್ದು ನನ್ನ ಮಗ ದಯಾಸಾಗರ ಊರ್ಫ ಚಿಂಟು ಇತನು ತನ್ನ ಹೊಸದಾಗಿ ತೆಗೆದುಕೊಂಡ ಬಜಾಜ ಪಲ್ಸರ ಮೋಟಾರ ಸೈಕಲ್ ಚಸ್ಸಿ ನಂಬರ MD2A13EYXACC43863 ನೆದ್ದರ ಮೇಲೆ ಆಳಂದ ಖಜ್ಜೂರಿಗೆ ಹೋಗಿ ಮರಳಿ ಕಲಬುರಗಿಗೆ ಬರುತ್ತಿರುವಾಗ ದಿನಾಂಕ. 25-6-2018 ರಂದು ಬೆಳಗ್ಗಿನ ಜಾವ 3-30 .ಎ.ಎಂ.ದಿಂದ 6-00 ಎ.ಎಂ.ದ  ಮದ್ಯಾದ ಅವಧಿಯಲ್ಲಿ ಪಟ್ಟಣ ಸೀಮಾಂತರದ ಕಲಬುರಗಿ ಆಳಂದ ರೋಡಿನ ಜವಳಿ ಸ್ಕೂಲ ಕ್ರಾಸ ಸಮೀಪ ತನ್ನ ಮೋಟಾರ ಸೈಕಲನ್ನು ವೇಗವಾಗಿ ಓಡಿಸಿಕೊಂಡು ಬರುತ್ತಿರುವಾಗ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದು  ಮೆಲಕ್ಕಿಗೆ, ಕುತ್ತಿಗೆ ಹತ್ತಿರ ಹಾಗೂ ಕಾಲೂಗಳಿಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಜೈಶೀಲಾ ಗಂಡ ಮನೋಹರ ನವಲೆ ಸಾ/ ಬುದ್ದಮಂದಿರ ಹತ್ತಿರ ಬಸವನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಚಂದ್ರಭಾಗ ಗಂಡ ಕರಬಸಪ್ಪಾ ಕಂಟೇಕರ ಸಾ|| ನ್ಯೂ ರಾಘವೇಂದ್ರ ಕಾಲೋನಿ ಬಾಳೆ ಲೇಔಟ ಕಲಬುರಗಿ  ರವರ ಮದುವೆಯು ದಿನಾಂಕ 11.05.2011 ರಂದು ರೇವಣಸಿದ್ದೇಶ್ವರ ಕೋರಿ ಮಠ ಧನಗರ ಗಲ್ಲಿ ಬಹ್ಮಪೂರ ಕಲಬುರಗಿಯಲ್ಲಿ ನಮ್ಮ ಸಂಪ್ರದಾಯದಂತೆ  ಕರಬಸಪ್ಪಾ ತಂದೆ ವಿಠ್ಠಲ್ ಕಂಟೇಕರ ಸಾ|| ಕಡಗಂಚಿ ತಾ|| ಆಳಂದ ಜಿ|| ಕಲಬುರಗಿ ಇತನೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ 2 ತೊಲೆ ಬಂಗಾರ  ರೂ 51.000 ರೂಪಾಯಿ ಮತ್ತು ಮನೆಬಳಕೆ ಎಲ್ಲಾ ಸಾಮಾನುಗಳನ್ನು ಕೊಟ್ಟು ನಮ್ಮ ತಂದೆತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾದ ನಂತರ ನಾನು  ನನ್ನ ಗಂಡನೊಂದಿಗೆ ಕಡಗಂಚಿಯಲ್ಲಿಯೆ ವಾಸವಾಗಿದ್ದೇನು. ಕೆಲವು ದಿವಸಗಳಾದ ನಂತರ ನನ್ನ ಗಂಡ ಕರಬಸಪ್ಪಾ ಮತ್ತು ನನ್ನ ಮಾವ ವಿಠಲ ಅತ್ತೆ ಬಸಮ್ಮಾ ಮೈದುನ ಶಂತಪ್ಪಾ ಇವರೆಲ್ಲರು ಕೂಡಿ ನೀನು ತವರು ಮನೆಯಿಂದ  ರೂ 50.000 ಹಣ ಮತ್ತು 5 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ದಿನಾಲೂ ನನಗೆ ದೈಹಿಕ ಮಾನಸಿಕ ಕಿರುಕುಳ ಕೊಡುತ್ತಿದ್ದರು ಆ ಕಿರುಕುಳವನ್ನು ನಾನು ಸಹಿಸಿಕೊಂಡು 2 ಮಕ್ಕಳಿಗೆ ಜನ್ಮ ಕೊಟ್ಟಿರುತ್ತೇನೆ. ಮೊದಲನೆ ಮಗಳು ಸ್ಪೂರ್ತಿ ಮತ್ತು ಎರಡನೇ ಮಗಳು ಕೀರ್ತಿ ಅಂತಾ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ಇದಾದ ನಂತರವು ನನಗೆ ಕಿರುಕುಳ ಕೊಡುವುದು ಹೆಚ್ಚು ಮಾಡಿ ನನಗೆ ಹೊಡೆದು ಮನೆಯಿಂದ ಹೊರಗೆ ಹಾಕಿದರು. ಮೆಲೆ ತೋರಿಸಿದ ಎಲ್ಲರೂ ಕೂಡಿಕೊಂಡು ನನ್ನ ಗಂಡನಿಗೆ 2ನೇ ಮದುವೆ ಮಾಡಿದ್ದಾರೆ. ಅವಳ ಹೆಸರು ಪ್ರವೀಣಾ ಅಂತಾ ಇದ್ದು ಅವಳು ಮುಚಳಂಬಿ ಗ್ರಾಮದವಳಾಗಿದ್ದು ಈ ಬಗ್ಗೆ ನನಗೆ ಗೊತ್ತಾಗಿ ನನ್ನ ಗಂಡನ ಮನೆಗೆ ಹೋಗಿ ವಿಚಾರಿಸಲಾಗಿ ನಾವು ಮದುವೆ ಮಾಡಿದ್ದೇವೆ ಏನು ಮಾಡಿಕೊಳ್ಳುತ್ತೀ ಮಾಡಿಕೊ ಎಂದು ನನಗೆ ನನ್ನ ಗಂಡ ಅತ್ತೆ ಮಾವ ಮೈದುನ ಮತ್ತು ನನ್ನ ಗಂಡನ 2ನೇ ಹೆಂಡತಿ ಪ್ರವೀಣಾ ಇವಳು ಎಲ್ಲರು ಸೇರಿ ಹೊಡೆಬಡೆ ಮಾಡಿ ಮನೆಯಿಂದ ಹೊರೆಗೆ ಹಾಕಿರುತ್ತಾರೆ ಮತ್ತೆ ದಿನಾಂಕ 13.05.2018 ರಂದು ಸಾಯಂಕಾಲ 5 ಗಂಟೆಗೆ ನನ್ನ ಗಂಡ ಮತ್ತು ನನ್ನ ಅತ್ತೆ ಮಾವ ಮೈದುನ ಮತ್ತು ಪ್ರವೀಣಾ ಇವರೆಲ್ಲರು ಕೂಡಿ ನಮ್ಮ ತವರು ಮನೆ ಕಲಬುರಗಿಗೆ ಬಂದು ನನಗೆ ರಂಡಿ ಭೋಸಡಿ ಅಂತಾ ಬೈದು ನಾವು ನಮ್ಮ ಮಗನಿಗೆ 2ನೇ ಮದುವೆ ಮಾಡಿದ್ದೇವೆ ನೀನು ಪಾರೀಖತ್ ಕೊಡು ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಬೈದು ನಂತರ ನನ್ನ ಗಂಡ ನನಗೆ ನೆಲಕ್ಕೆ ಹಾಕಿ  ಹೊಡೆಬಡೆ ಮಾಡುತ್ತಿದ್ದನು. ಉಳಿದವರೆಲ್ಲಾ ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಆಗ ನಾನು ಚೀರಾಡುವುದು ಕೇಳಿ ನನ್ನ ತಾಯಿ ಶಾಂತಾಬಾಯಿ ನನ್ನ ತಂದೆ ಲಕ್ಷ್ಮಿಕಾಂತ ಇವರು ಬಂದು ಬಿಡಿಸಿದರು ಇಲ್ಲದೆ ಇದ್ದರೆ ಸದರಿಯವರು ನನಗೆ ಖಲಾಸ ಮಾಡಿ ಬಿಡುತ್ತಿದ್ದರು. ನನಗೆ ಕಿರುಕುಳ ನೀಡಿ ಹೊಡೆಬಡೆ ಮಾಡಿದ ಮತ್ತು 2ನೇ ಮದುವೆ ಮಾಡಿದ ನನ್ನ ಗಂಡ ಅತ್ತೆ ಮಾವ ಮೈದುನ ಹಾಗೂ ನನ್ನ ಸವತಿ ಪ್ರವೀಣಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

25 June 2018

KALABURAGI DISTRICT REPORTED CRIMES

ನಿಂದನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅರ್ಜುನ ತಂದೆ ತಿಮ್ಮಯ್ಯ ಕೆರಮಗಿ ಸಾಃ ಸಿರನೂರ ರವರ ಊರಿನ ಅಂಬಯ್ಯ ತಂದೆ ನಾಗಯ್ಯ ಗುತ್ತೆದಾರ ಈತನು ದಿನಾಂಕ 29/05/2018 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ನನ್ನ ತಂಗಿಯಾದ ಇವಳಿಗೆ ಮದುವೆಯಾಗುವುದಾಗಿ ನಂಬಿಸಿ ತನ್ನ ಮನೆಗೆ ಕರೆದುಕೊಂಡು ಹೊಗಿ, ಮನೆಯಲ್ಲಿ ಜಬರದಸ್ತಿಯಿಂದ ಜಬರಿ ಸಂಬೋಗ ಮಾಡಿದ್ದು ಈ ಬಗ್ಗೆ ಫರಹತಾಬಾದ ಪೊಲೀಸ ಠಾಣೆ ಪ್ರಕರಣ ದಾಖಲಾಗಿದ್ದಾಗಿದ್ದರಿಂದ ಅಂಬಯ್ಯ ಇತನು ಜೇಲಿನಲ್ಲಿ ಇರುತ್ತಾನೆ. ಅಂಬಯ್ಯ ಇತನ ತಂದೆಯಾದ ನಾಗಯ್ಯ ಕಲಾಲ, ತಾಯಿ ನರಸಮ್ಮ, ಅಣ್ಣಂದಿರರಾದ ಬಸಯ್ಯ, ಮಲ್ಲಯ್ಯ, ದಸ್ತಯ್ಯ, ಮತ್ತು ಅತ್ತಿಗೆಯರಾದ ಪದ್ಮಾವತಿ ಗಂಡ ಮಹಾದೇವಯ್ಯ, ಮಂಜುಳಾ ಗಂಡ ಬಸಯ್ಯ ಹಾಗು ಅಕ್ಕಳಾದ ನೀಲಮ್ಮ ಗಂಡ ಶಿವಲಿಂಗಪ್ಪ ಇವರುಗಳು ನನ್ನ ತಂಗಿಗೆ ಅಂಬಯ್ಯ ಇತನ ಮೇಲೆ ಕೇಸು ಮಾಡಿಸಿ ಜೇಲಿಗೆ ಕಳುಹಿಸಿದ್ದಿ ರಂಡಿ ಅಂತಾ ಅವರ ಮನೆಯ ಮುಂದೆ ಹೋದಾಗ ಬಂದಾಗ ಅನ್ನುತ್ತಿದ್ದು ಈ ವಿಷಯವನ್ನು ನನ್ನ ತಂಗಿ ನನ್ನ ಮತ್ತು ನನ್ನ ತಂದೆ ತಾಯಿಯ ಮುಂದೆ ಹೇಳುತ್ತಿದ್ದು, ನಾವು ಆಕೆಗೆ ಸಮಧಾನ ಮಾಡುತ್ತಿದ್ದೇವು. ಹೀಗಿದ್ದು ನಿನ್ನೆ ದಿನಾಂಕ 23/6/2018 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ನನ್ನ ತಂಗಿಯು ಅಂಬಯ್ಯ ಇತನ ಮನೆಯ ಮುಂದಿನಿಂದ ಬಹಿರದೆಸೆಗೆಂದು ಹೋಗುತ್ತಿದ್ದಾಗ ಮೇಲಿನವರೇಲ್ಲರೂ ಕೂಡಿಕೊಂಡು ನನ್ನ ತಂಗಿಗೆ ವಡ್ಡ ಸುಳೇ ಮಗಳೆ ನೀನು ಅಂಬಯ್ಯ ಇತನಿಗೆ ಜೇಲಿಗೆ ಕಳುಹಿಸಿ ಊರಲ್ಲಿ ಹೀಗೆ ತಿರುಗಾಡುತ್ತಿದ್ದಿ ಭೋಸಡಿ ನೀನು ಭೂಮಿ ಮೇಲೆ ಬದುಕಬಾರದು ಸಾಯಿಬೇಕು ನಿನ್ನಿಂದ ಯಾರಿಗೂ ಉಪಯೋಗವಿಲ್ಲ ಅಂತಾ ಅಂದಾಗ ನನ್ನ ತಂಗಿ ಮನೆಗೆ ಬಂದು ಈ ವಿಷಯವನ್ನು ನಮಗೆ ತಿಳಿಸಿದಾಗ ನಾವು ಅವಳಿಗೆ ಸಮಧಾನ ಮಾಡಿರುತ್ತೇವೆ. ರಾತ್ರಿ ನಾವೇಲ್ಲರೂ ಊಟ ಮಾಡಿ ನಂತರ ನಾವು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದು ನನ್ನ ತಂಗಿಯಾದ ಕಾವೇರಿ ಇವಳು ನಮ್ಮ ಅಜ್ಜನಾದ ಕಾಳಪ್ಪ ನಿಂಗನಕಲ್ಲ ಇವರ ಮನೆಯ ಒಂದು ಕೊಣೆಯಲ್ಲಿ ಮಲಗಿಕೊಂಡಳು. ಇಂದು ದಿನಾಂಕ 24/6/2018 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನನ್ನ ಸೋದರ ಮಾವನಾದ ಹಣಮಂತ ತಂದೆ ಕಾಳಪ್ಪ ನಿಂಗನಕಲ್ಲ ಇವರು ಓಡುತ್ತಾ ಬಂದು ತಿಳಿಸಿದ್ದೇನೆಂದರೆ ತಂಗಿಯಾದ ಕಾವೇರಿ ಇವಳು ಮನೆಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ. ಅಂತಾ ತಿಳಿಸಿದ್ದರಿಂದ ನಾವು ಗಾಬರಿಯಾಗಿ ಹೋಗಿ ನೋಡಲಾಗಿ ಕವಿತಾ @ ಕಾವೇರಿ ಇವಳು ಮನೆಯ ಜಂತಿಗೆ ವೈಯರ ಹಗ್ಗದಿಂದ ನೇಣು ಹಾಕಿಕೊಂಡಿದ್ದು ಅವಳು ಜಿವಂತ ಇರಬಹುದು ಅಂತಾ ತಿಳಿದು ನಾವು ಹಗ್ಗ ಕತ್ತರಿಸಿ ಅವಳಿಗೆ ಕೆಳಗೆ ಮಲಗಿಸಿ ನೋಡಲಾಗಿ ಅವಳು ಮೃತ ಪಟ್ಟಿದ್ದಳು. ನನ್ನ ತಂಗಿಯಾದ ಕವಿತಾ @ ಕಾವೇರಿ ಇವಳಿಗೆ ಅಂಬಯ್ಯ ಇತನ ತಂದೆಯಾದ ನಾಗಯ್ಯ ಕಲಾಲ, ತಾಯಿ ನರಸಮ್ಮ, ಅಣ್ಣಂದಿರರಾದ ಬಸಯ್ಯ, ಮಲ್ಲಯ್ಯ, ದಸ್ತಯ್ಯ, ಮತ್ತು ಅತ್ತಿಗೆಯರಾದ ಪದ್ಮಾವತಿ ಗಂಡ ಮಹಾದೇವಯ್ಯ, ಮಂಜುಳಾ ಗಂಡ ಬಸಯ್ಯ ಹಾಗು ಅಕ್ಕಳಾದ ನೀಲಮ್ಮ ಗಂಡ ಶಿವಲಿಂಗಪ್ಪ ಇವರುಗಳ ಕಿರುಕುಳದಿಂದ ಮನನೊಂದು ಇಂದು ದಿನಾಂಕ 24/6/2018 ರಂದು ಬೆಳಗಿನ ಜಾವ 5-30 ಗಂಟೆಯಿಂದ 6-00 ಗಂಟೆಯ ಅವಧಿಯಲ್ಲಿ ಮನೆಯಲ್ಲಿ ಜಂತಿಗೆ ವೈಯರ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರುಕ್ಸಾನ ಗಂಡ ಮಹಿಮುದ್ದ ಮುಜಾವರ ಸಾ|| ಮಾಶಾಳ ಇವರ ಗಂಡನಾದ ಮಹಿಮುದ್ದ ರವರು ನನಗೆ ಹಾಗು ನಮ್ಮ ಮಕ್ಕಳಿಗೆ ಇಲ್ಲೆ ಬಿಟ್ಟು ದುಡಿಯಲಿಕ್ಕೆ ದುಬೈಗೆ ಹೋಗಿರುತ್ತಾರೆ ನಮ್ಮ ಕುಲದವರಾದ ಹಾಜಿಮಲಂಗ@ ರಾಜಾ ತಂದೆ ಮದರಸಾಬ ಮುಜಾವರ ಈತನು ಆಗಾಗ ವಿನಾ ಕಾರಣ ನನಗೆ ಯಾಸಿ ಬೈಯುವದು ಮಾಡುತ್ತಾ ಬಂದಿರುತ್ತಾನೆ ನಾನು ಸುಮ್ಮನೆ ಇದ್ದೇನು ದಿನಾಂಕ 22/06/2018 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಾಜಿ ಮಲಂಗ@ರಾಜಾ ಈತನು ನನಗೆ ಯಾಸಿಯಾಗಿ ಬೈಯುತ್ತಾ ನಮ್ಮ ಮನೆಯ ಮುಂದಿನಿಂದ ಹೋಗಿರುತ್ತಾನೆ. ನಾನು ರಾತ್ರಿ 8:00 ಗಂಟೆ ಸುಮಾರಿಗೆ ಹಾಜಿಮಲಂಗ@ರಾಜಾ ಅವರ ತಾಯಿಯಾದ 2)ಶ್ರೀಮತಿ ಗಂಡ ಮದರಸಾಬ 3) ಖ್ವಾಜಲ್ ತಂದೆ ಮದರಬಾಬ ಹಾಗು 4) ಮದರಸಾಬ ತಂದೆ ಮಲಂಗಸಾಬ ರವರೇಲ್ಲರು ತಮ್ಮ ಮನೆಯ ಮುಂದೆ ಕುಳಿತಿದ್ದಾಗ ನಾನು ಅವರ ಹತ್ತಿರ ಹೋಗಿ ಹಾಜಿಮಲಂಗ@ ರಾಜಾ ರವರ ತಂದೆ ತಾಯಿಗೆ ನಿಮ್ಮ ಮಗ ವಿನಾ ಕಾರಣ ನನಗೆ ಯಾಸಿ ಬೈಯುವದು ಮಾಡುತಿದ್ದಾನೆ ಅಂತ ಹೇಳುತಿದ್ದಾಗ  ಹಾಜಿಮಲಂಗ@ರಾಜಾ, ಶ್ರೀಮತಿ, ಖ್ವಾಜಲ್, ಮದರಸಾಬ ಎಲ್ಲರೂ ಕೂಡಿ ನನ್ನ ಹತ್ತಿರ ಅವಾಚ್ಯ ಶಬ್ದಗಳಿಂದ ಬೈಯುತ್ತಾ  ಬಂದು ನನ್ನ ಸೀರೆ ಹಿಡಿದು ಜಗ್ಗಾಡುತಿದ್ದಾಗ. ನಾನು ಜಿರಾಡುವ ಸಪ್ಪಳ ಕೇಳಿ ನಮ್ಮ ಓಣಿಯ ರಜೀಯಾ ಬೀ ಗಂಡ ಸೈಫಲಸಾಬ ಮುಜಾವರ, ಝರೀನಾ ಗಂಡ ಹೈಮದ್ ಮುಜಾವರ ರವರು ಬಂದು ನನಗೆ ಬಿಡಿಸುತಿದ್ದಾಗ ಹಾಜಿ ಮಲಂಗ @ ರಾಜಾ ಈತನು ನನಗೆ ರಂಡಿ ನಿನಗೆ ಇವತ್ತ ಬಿಡಲ್ಲಾ ಅಂತ ಅಂದು ನನ್ನ ಕೊರಳಲ್ಲಿನ ತಾಳಿ ಜಗ್ಗಿ ತಾಳಿ ಹರಿದು ನನ್ನ ಬಲಗೈ ಅಂಗೈ ಮೇಲೆ ತನ್ನ ಬಾಯಿ ಹಲ್ಲಿನಿಂದ ಕಚ್ಚಿ ಕಂದುಗಟ್ಟಿದ ಗುಪ್ತ ಗಾಯ ಮಾಡಿರುತ್ತಾನೆ ಆಗ ಅಲ್ಲೆ ಇದ್ದ ರಜೀಯಾ ಬೀ, ಝರಿನಾ ಬಿಡಿಸುತಿದ್ದಾಗ ಮದರಸಾಬ, ಖ್ವಾಜಲ್, ಶ್ರೀಮತಿ ಇವರು ತಮ್ಮ ಕೈಯಿಂದ ನನಗೆ ಹೊಡೆದಿರುತ್ತಾರೆ  . ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟು ಹೋಗುವಾಗ ರಂಡಿ ನೀ ಇನ್ನೊಮ್ಮೆ ನಮ್ಮ ತಂಟೆಗೆ ಬಂದಿ ನೀನ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 23-06-2018 ರಂದು ನನ್ನ ತಮ್ಮ ಹಮೀದ ಹಾಗು ಇಸ್ಮಾಯಿಲ ಗದಲೆಗಾಂವ ಇಬ್ಬರು ಕೂಡಿಕೊಂಡು ಇಸ್ಮಾಯಿಲ ನ ಬೈಕ ನಂ. ಕೆಎ 32-ಇಕೆ-8791  ಮೇಲೆ ಕುಳಿತು ಸಾವಳೇಶ್ವರಕ್ಕೆ ಹೊಗಿ ರಾತ್ರಿ ಸಮಯ 10 ಗಂಟೆ ಸುಮಾರಿಗೆ ಮರಳಿ ಬರುವಾಗ ಇಸ್ಮಾಯಿಲ ನು ಬೈಕ ಚಲಾಯಿಸುತ್ತಿದ್ದು ನನ್ನ ತಮ್ಮ  ಹಿಂದೆ ಕುಳಿತಿದ್ದು, ಇಸ್ಮಾಯಿಲನು ಬೈಕನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ರಸ್ತೆ ಮದ್ಯೆ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿಗೆ ಹಿಂದುಗಡೆ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮ  ಹಮೀದನ ತಲೆಗೆ , ಮುಖಕ್ಕೆ ಭಾರಿ ಗಾಯವಾಗಿ ಸ್ಥಳದಲ್ಲಿ ಬಿದ್ದಿದರು. ಬೈಕ ಚಲಾಯಿಸುತ್ತಿದ್ದ  ಇಸ್ಮಾಯಿಲನಿಗೂ ತಲೆಗೆ ಮೈ-ಕೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಬಿದ್ದಿರುತ್ತಾರೆ. ಎಂದು ಈ ವಿಷಯ ಗೊತ್ತಾಗಿ ನಾನು ಹಾಗು ತಮ್ಮ ಗ್ರಾಮದವರಾದ ಶಿವಕಿರಣ ಶ್ರೀಮಂತರಾವ ಪಾಟೀಲ, ಸಪ್ಪನಿಲ್ ಖಾಳೆ, ಮುಬಾರಕ ಮುಲಗೆ ಸ್ಥಳಕ್ಕೆ ಹೊಗಿ ನೊಡಲು ನನ್ನ ತಮ್ಮ ಹಮೀದ ಮತ್ತು ಬೈಕ ಚಾಲಕ ಇಸ್ಮಾಯಿಲ್ ಇಬ್ಬರು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆಗ ಸಮಯ ರಾತ್ರಿ 10 ಗಂಟೆ ಆಗಿತ್ತು. ಈ ಅಪಘಾತಕ್ಕೆ ಮೂಲ ಕಾರಣವೆನೆಂದರೆ  ರಸ್ತೆ ಮದ್ಯ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿ  ನಂ. ಕೆಎ 32-ಟಿ-8550 ರ ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸದೇ ರಸ್ತೆಯ ಮದ್ಯ ನಿಲ್ಲಸಿ ಅದಕ್ಕೆ ಯಾವುದೇ ಮುನ್ನೆಚ್ಚರಿಕೆ  ಕೈಗೊಳ್ಳದೇ ಅಲಕ್ಷತನ ತೊರಿಸಿದ್ದರಿಂದ  ಮತ್ತು ಬೈಕ ಚಾಲಕ ಇಸ್ಮಾಯಿಲನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಡಿಕ್ಕಿಪಡಿಸಿದ್ದರಿಂದ ನನ್ನ ತಮ್ಮ ಹಮೀದ ಮೃತಪಟ್ಟಿರುತ್ತಾನೆ. ಆದ್ದರಿಂದ ಅಲಕ್ಷತನದಿಂದ ಟ್ರ್ಯಾಕ್ಟರ ಟ್ರ್ಯಾಲಿ ರಸ್ತೆ ಮದ್ಯದಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿ ನಂ. ಕೆಎ 32-ಟಿ-8550 ರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಶ್ರೀ. ಅಲ್ತಾಫ ತಂದೆ ಇಸೂಫ್ ಜಾನಿ  ಮುಲ್ಲಾ ಸಾ- ಪಡಸಾವಳಿ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 23/06/18 ರಂದು ಮದ್ಯಾಹ್ನ ಎನ್ಹೆಚ್ 218 ರಸ್ತೆ ಸರಡಗಿ (ಬಿ) ಖಣಿ ಹತ್ತಿರ ತನ್ನ ಕಾರ ಟಿಪಿ ನಂ  ಕೆಎ-35ಟಿಪಿ-002920/2018-19 ನೇದ್ದ ರಲ್ಲಿ ಶ್ರೀ ಗಿರೀಶ ತಂದೆ ವೆಂಕೋಬಾ ಯಾದವ ಸಾ: ವೆಂಕಟ ನಾರಾಯಣ ಪೇಟ ಮುದಗಲ ರವರ  ತಂದೆ ಮತ್ತು ತಂಗಿಯೊಂದಿಗೆ  ಮರಳಿ ಊರಿಗೆ ಹೋಗುವಾಗ ಎದುರಿನಿಂದ ಬಂದ ಲಾರಿ ನಂಬ ಜಿಜೆ -03 ಎಟಿ-3851 ನೇದ್ದರ ಚಾಲಕ  ತನ್ನ ವಶದಲ್ಲಿದ್ದ ಲಾರಿ ನಂ ಜಿಜೆ-03 ಎಟಿ 3851 ನೇದ್ದನ್ನು ಅತೀವೇಗವಾಗಿ ಅಲಕ್ಷ ತನದಿಂದ ಚಲಾಯಿಸಿಕೊಂಡು ಬಂದಿ ಡಿಕ್ಕಿ ಪಡೆಯಿಸಿ ಗಾಯ ಪಡಿಸಿದ್ದು ಇರು ತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 June 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-06-2018 ರಂದು  ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಡೇಪ್ಪ ತಂದೆ ಕಲ್ಲಪ್ಪ ಕುಂಬಾರ ಸಾ|| ಮಾಶಾಳ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದನು  ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1110/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಫರತಾಬಾದ ಠಾಣೆ : ದಿನಾಂಕ 23/06/2018 ರಂದು ಸೀರನೂರ ಗ್ರಾಮದ ಶರಣಬಸವೇಶ್ವರ ಗುಡಿಯ ಹತ್ತಿರ ಮಹಾದೇವಪ್ಪಾ ತಂದೆ ನಾಗಯ್ಯ ಗುತ್ತೆದಾರ  ಸಾಃ ಸೀರನೂರ ಗ್ರಾಮದವನು  ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ವಾಹಿದ ಕೊತ್ವಾಲ್ ಪಿ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ  ದಾಳಿ ಮಾಡಿ ಆರೋಪಿತನಿಂದ 21 ಓರಿಜನ್ಲ್ ಚೌಯ್ಸ ವಿಸ್ಕಿ ಪೌಚಗಳು ಮತ್ತು ನಗದು ಹಣ 330/-ರೂ ಹೀಗೆ ಒಟ್ಟು 1569/-ರೂ ಬೆಲೆಬಾಳುವವನ್ನು ಜಪ್ತಿ ಪಡಿಸಿ ಕೊಂಡು ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಫರತಾಶಬಾದ ಠಾಣೆ : ದಿನಾಂಕ 23/06/2018 ರಂದು ಸೀರನೂರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಶೋಕ ತಂದೆ ಯಲ್ಲಪ್ಪ ವಡ್ಡರ ಸಾಃ ಸೀರನೂರ  ಗ್ರಾಮದವನು  ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ನಾಗಬೂಷಣ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ರವರು ಹಾಗು ಸಿಬ್ಬಂದಿ ಪಂಚರ ಸಮಕ್ಷಮ ದಲ್ಲಿ ದಾಳಿ ಮಾಡಿ ಆರೋಪಿತನಿಂದ 22 ಓರಿಜನ್ಲ್ ಚೌಯ್ಸ ವಿಸ್ಕಿ ಪೌಚಗಳು ಮತ್ತು ನಗದು ಹಣ 220/-ರೂ ಹೀಗೆ ಒಟ್ಟು 1518/-ರೂ ಬೆಲೆಬಾಳುವವನ್ನು ಜಪ್ತಿ ಪಡಿಸಿ ಕೊಂಡು ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 23/6/2018 ರಂದು ಸರಡಗಿ(ಬಿ) ಖಣಿ ಹತ್ತಿರ ಟಿಪ್ಪರ ನಂ ಕೆಎ-01ಸಿ-9129 ನೇದ್ದರ ಚಾಲಕ & ಮಾಲಿಕ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅಕ್ರಮ ವಾಗಿ ಮರಳು ಕಳ್ಳತನ ಮಾಡಿ ಕೊಂಡು ಬಂದು ಮಾರಾಟ ಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಶ್ರೀ ವಾಹಿದ ಕೊತ್ವಾಲ್ ಪಿ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮರಳು ತುಂಬಿದ ಟಿಪ್ಪರ ನಂ ಕೆಎ-01ಸಿ-9129 ನೆದ್ದನ್ನು ಜಪ್ತಿಪಡಿಸಿ ಕೊಂಡು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : 2018 ರ ಹೊಸ ವರ್ಷದ ವರ್ಷಾಚರಣೆಯಲ್ಲಿ ನನ್ನ ಹಿರಿಯ ಮಗನಾದ ರಾಜಾನೊಂದಿಗೆ ನನ್ನ ಗಂಡನ ಅಣ್ಣ ತಮ್ಮಕಿಯವರಾದ ರಸೀದ ತಂದೆ ಅಲ್ಲಾವುದ್ದಿನ್ ಮುಜಾವರ ಮತ್ತು ಇನ್ನು ಕೆಲವು ಜನರು ಹುಡುಗರು ಸೇರಿ ನನ್ನ ಮಗನೊಂದಿಗೆ ಜಗಳ ಮಾಡಿ ಒಬ್ಬರಿಗೋಬ್ಬರು ಹೊಡೆದಾಡಿಕೊಂಡಿರುತ್ತಾರೆ. ಅಂದಿನಿಂದ ಸದರಿ ರಸೀದ ಮತ್ತು ಅವನ ಕಡೆಯುವರು ನಮ್ಮ ಮೇಲೆ ದ್ವೇಷ ಸಾದಿಸುತ್ತಿರುತ್ತಾರೆ. ಈಗ ಕೆಲವು ದಿನಗಳ ಹಿಂದೆ ಸದರಿ ನಮ್ಮೊಂದಿಗೆ ದ್ವೇಷ ಮಾಡುತ್ತಿದ್ದ ರಸೀದ ಮುಜಾವರ ಈತನಿಗೆ ಯಾವನೊ ಒಬ್ಬ ಹುಡುಗ ಮಾಶಾಳ ಬಸ್ ನಿಲ್ದಾಣದಲ್ಲಿ ಜಗಳ ತಗೆದು ಹೊಡೆಯುತ್ತಿದ್ದಾಗ ನಾನು ನನ್ನ ಕೆಲಸ ಮೇಲೆ ಬಸ್ ನಿಲ್ದಾಣದ ಹತ್ತಿರದಿಂದ ಹಾಯ್ದು ನಮ್ಮ ಮನೆಗೆ ಹೋಗಿರುತ್ತೇನೆ. ದಿನಾಂಕ 22-06-2018 ರಂದು ರಾತ್ರಿ ನಾನು ಮತ್ತು ನನ್ನ ಗಂಡನಾದ ಮದರಸಾಬ ಹಾಗೂ ಮಕ್ಕಳಾದ 1) ರಾಜಾ ವಯ|| 21 ವರ್ಷ 2) ಕರೀಸ್ಮಾ ವಯ|| 17 ವರ್ಷ 3) ಹಸೀನಾ ವಯ|| 15 ವರ್ಷ ಎಲ್ಲರೂ ನಮ್ಮ ಮನೆಯ ಮುಂದೆ ಕುಳಿತಿದ್ದಾಗ, 1) ರಸೀದ ತಂದೆ ಅಲ್ಲಾವುದ್ದಿನ್ ಮುಜಾವರ 2) ಇಲಾಯಿ ತಂದೆ ಬಂದಗಿ ಮುಜಾವರ 3) ಮೌಲಾ ತಂದೆ ಬುಡ್ಡೇಸಾ ನಿಗಾವನ್ 4) ಸೈಫನ್ ತಂದೆ ಇಮಾಮಸಾಬ ಮುಜಾವರ 5) ಮುಬಾರಕ್ ತಂದೆ ಬುಡ್ಡೆಸಾ ಮುಜಾವರ 6) ಹುಸೇನ ತಂದೆ ಅಬ್ಬಾಸಲಿ ಮುಜಾವರ 7) ರಜಿಯಾ ಗಂಡ ಸೈಪನ ಮುಜಾವರ ಹಾಗೂ ರಸೀದನ ಹೆಂಡತಿ ಮತ್ತು ಇನ್ನು ಕೆಲವು ಜನರು ಕೂಡಿ ಉರ್ದು ಬಾಷೆಯಲ್ಲಿ ಬೈಯುತ್ತಾ ನಮ್ಮ ಹತ್ತಿರ ಬಂದು ನನಗೆ ರಸೀದನು ಇದೆ ರಂಡಿ ನನಗೆ ಹೊಡೆಸಿದ್ದಾಳೆ ಎಂದು ಎಲ್ಲರೂ ಕೂಡಿ ನನ್ನ ಸೀರೆ ಜಗ್ಗಿ ನನಗೆ ಕೈಯಿಂದ ಹೊಡೆಯುತ್ತಿದ್ದರು. ಆಗ ನನ್ನ ಗಂಡ ಮಕ್ಕಳುಬಿಡಿಸಲು ಬಂದಾಗ ನನ್ನ ಗಂಡ ರಸೀದನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ಹೊಡೆದಿರುತ್ತಾನೆ. ಉಳಿದವರು ನನ್ನ ಮಕ್ಕಳಿಗೆ ಕೈಯಿಂದ ಹೊಡೆದಿರುತ್ತಾರೆ. ಸದರಿಯವರು ಹೊಡೆದರಿಂದ ನನಗೆ ಬಲ ಗದ್ದಕ್ಕೆ, ತಲೆಗೆ, ಬೆನ್ನಿಗೆ, ಸೊಂಟಕ್ಕೆ ಕಂದುಗಾಯಗಳು ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ನನ್ನ ಮಗಳಾದ ಹಸೀನಾ ಇವಳಿಗೆ ಎಡಕಣ್ಣಿಗೆ ಗುಪ್ತಗಾಯವಾಗಿ ಕಣ್ಣಲ್ಲಿ ರಕ್ತ ಬಂದಂತೆ ಆಗಿರುತ್ತದೆ. ಹಾಗೂ ಕುತ್ತಿಗೆಯ ಕೆಳಗೆ ಚೂರಿದ ಗಾಯ ಮತ್ತು ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ಕರೀಸ್ಮಾ ಇವಳಿಗೆ ತಲೆಗೆ ಒಳಪೆಟ್ಟಾಗಿ ಮೈ ಮೇಲಿನ ಬಟ್ಟೆ ಹರೀದಿರುತ್ತಾರೆ. ರಾಜಾ ಈತನಿಗೆ ತಲೆಗೆ ಒಳಪೆಟ್ಟು ಆಗಿರುತ್ತದೆ. ನನ್ನ ಗಂಡ ಮದರಸಾಬನಿಗೆ ಎದೆಗೆ ಮತ್ತು ತಲೆಗೆ ಒಳಪೆಟ್ಟುಗಳು ಆಗಿರುತ್ತವೆ. ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ನಮ್ಮ ಓಣಿಯ ಜನರೂ ಕೂಡಿ ನಮಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಮಕ್ಕಳ್ಯಾ ನೀವು ಊರ ಬಿಟ್ಟೆ ಹೋಗಬೆಕು ಇಲ್ಲಾಂದ್ರ ನಿಮಗ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ಅಂತಾ ಶ್ರೀಮತಿ ಗಂಡ ಮದರಸಾಬ ಮುಜಾವರ ಸಾ|| ಮಾಶಾಳ ರವರು  ಸಲ್ಲಿಸದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅಂಬಾರಾಯ ತಂದೆ ಶರಣಪ್ಪ ಕೊಡ್ಲಿ ಸಾ|| ಸೊಂತ ತಾ||ಜಿ|| ಕಲಬುರಗಿ ಇವರು ಸುಮಾರು 5 ವರ್ಷಗಳ ಹಿಂದೆ ನನ್ನ ಮಗಳಾದ ರಾಣಿ ಇವಳಿಗೆ ಹಾಗರಗಾ ಗ್ರಾಮದ ಶ್ರೀ ಮಲ್ಲಿಕಾರ್ಜುನ  ಸೊಂತ ಇವರಿಗೆ ಕೊಟ್ಟು ಲಗ್ನ ಮಾಡಿದ್ದು ಇಬ್ಬರು ಗಂಡ ಹೆಂಡತಿ ಹೊಟ್ಟೆಪಾಡಿಗಾಗಿ ಮುಂಬೈಯಿಗೆ ಹೊಗಿದ್ದು ಮುಂಬೈಗೆ ಹೊಗುವ ಮೊದಲು ಅವರ ಹತ್ತಿರ ಇದ್ದ ಬಂಗಾರದ ಸಾಮಾನುಗಳು ನಾವು ಬರುವ ವರೆಗೆ ನಿಮ್ಮ ಹತ್ತಿರ ಇಟ್ಟಿಕೊಳ್ಳಿ ಅಂತ ನಮಗೆ ಕೊಟ್ಟಿದ್ದು ಇರುತ್ತದೆ. ಅವರ ಬಂಗಾರ ಸಾಮಾನುಗಳು ಮತ್ತು ನಮಗೆ ಸಂಭಂದಿಸಿದ ಬಂಗಾರದ ಸಾಮಾನುಗಳು ಹಾಗು ನಗದು ಹಣ ನಮ್ಮ ಮನೆಯ ಟಿವಿ ಕೊಣೆ ಮತ್ತು ದೇವರ ಕೊಣೆಯ ಸಂದುಕುಗಳಲ್ಲಿ ಇಟ್ಟಿದ್ದು ಇರುತ್ತದೆ. ನಿನ್ನೆ ದಿನಾಂಕ 20/06/2018 ರಂದು ರಾತ್ರಿ ನಾನು ನನ್ನ ಹೆಂಡತಿ ಶ್ರೀದೇವಿ ಮತ್ತು ಮಗ ಗುಂಡಪ್ಪ ಮೂವರು ಊಟ ಮಾಡಿ ನಮ್ಮ ಎಲ್ಲಾ ಕೊಣೆಗಳು ಕೀಲಿ ಹಾಕಿ ಎಂದಿನಂತೆ ನಮ್ಮ ಮನೆಯ ಛೇತ್ತಿನ ಮೇಲೆ ಮಲಗಿ ಕೊಳ್ಳಲು ಹೊಗಿ ಮಲಗಿ ಕೊಂಡು ನಾನು ಎಂದಿನಂತೆ ಇಂದು ದಿನಾಂಕ 21/08/2018 ರಂದು ಬೆಳಗ್ಗೆ 06.00 ಎ.ಎಂ ಗಂಟೆಗೆ ಎದ್ದು ಮನೆಯ ಕೀಲಿ ತೆರೆಯಲು ಬಂದಾಗ ನಮ್ಮ ಮನೆಯ ದೇವರ ಕೊಣೆಯ ಮತ್ತು ಟಿ.ವಿ. ಕೊಣೆಯ ಕೀಲಿಗಳು ಮುರಿದಿದ್ದು ನೊಡಿ ನಾನು ಗಾಭರಿಯಾಗಿ ನನ್ನ ಹೆಂಡತಿ ಮತ್ತು ಮಗನಿಗೆ ಎಬ್ಬಿಸಿ ಮೂವರು ಕೂಡಿ ನಮ್ಮ ಮನೆಯ ಟಿ.ವಿ. ಕೊಣೆ ಒಳಗಡೆ ಹೊಗಿ ನೊಡಲಾಗಿ ನಾವು ಭಾಟಿ ಮೇಲೆ ಇಟ್ಟ ಸಂದುಕು ಕೆಳಗೆ ಬಿದ್ದಿದ್ದು ಅದರಲ್ಲಿಟ್ಟ ನನ್ನ ಮಗಳಿಗೆ ಸೇರಿದ 1) 3.5 ತೊಲೆ, ತಾಳಿ ಚೈನ್  ಅ.ಕಿ.ರೂ. 70,000/-, 2) 1 ತೊಲೆ ನಕ್ಲೆಸ್ ಅ.ಕಿ.ರೂ. 20,000/-, 3) 5 ಮಾಸಿ ಕಿವಿಯಲ್ಲಿನ ಜುಮಕಿ ಅ.ಕಿ.ರೂ. 10,000/-, 4) 5 ಮಾಸಿ ಲಾಕೇಟ ಚೈನ್ ಅ.ಕಿ.ರೂ. 10,000/-, 5) 5 ಮಾಸಿ ಸುತ್ತುಂಗರ ಅ.ಕಿ.ರೂ. 10,000/-, ಮತ್ತು ನಮಗೆ ಸೇರಿದ 6) ನಗದು ಹಣ 27,000/- ರೂ, ಟಿವಿ ಎದುರಿಗೆ ಇಟ್ಟ 7) ಒಂದು ಸ್ಯಾಮಸಂಗ್ ಮೊಬೈಲ್ ಅ.ಕಿ.ರೂ. 2000/-ರೂ ಅದರಲ್ಲಿ 7090789162 ಇದ್ದು  ಒಟ್ಟು 6 ತೊಲೆ ಬಂಗಾರದ ಸಾಮನು ಅ.ಕಿ.ರೂ 1,20,000/- ನಗದು ಹಣ 27,000/- ರೂ, ಸ್ಯಾಮಸಂಗ್ ಮೊಬೈಲ್ ಅ.ಕಿ.ರೂ 2,000/- ಮತ್ತು ದೇವರ ಕೊಣೆಯಲ್ಲಿ ಹೊಗಿ ನೊಡಲಾಗಿ ಸಂದುಕಿನ ಕೀಲಿ ಮುರಿದು ಅದರಲ್ಲಿದ 3,000/- ರೂಪಾಯಿ ಕಳ್ಳತನ ಮಾಡಿದ್ದು ಹೀಗೆ ಒಟ್ಟು 6 ತೊಲೆ ಬಂಗಾರದ ಸಾಮಾನು ಅ.ಕಿ.ರೂ 1,20,000/- ಮತ್ತು ನಗದು ಹಣ 30,000/- ರೂ ಹಾಗೂ ಸ್ಯಾಮಸಂಗ್ ಮೊಬೈಲ್ ಹೀಗೆ ಎಲ್ಲಾ ಸೇರಿ ಒಟ್ಟು 1,52,000/- ಕಿಮ್ಮತಿನ ಬಂಗಾರದ ಸಾಮಾನುಗಳು, ನಗದು ಹಣ ಮತ್ತು ಮೊಬೈಲ್ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಒಳಗೆ ನುಗ್ಗಿ  ಸಂದುಕುಗಳ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.