POLICE BHAVAN KALABURAGI

POLICE BHAVAN KALABURAGI

23 April 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 22/04/2018 ರಂದು ಸಾಯಂಕಾಲ ನಾನು ಕೆಲಸ ಮಾಡುತ್ತಿದ್ದಾಗ ಆಗ ನಮ್ಮ ಬಾಜು ಖಾಜಾ ದಾಲಮೀಲದಲ್ಲಿ ಕೆಲಸ ಮಾಡುವ ಬಿಹಾರ ರಾಜ್ಯದ ಒಬ್ಬ ಮನುಷ್ಯನು ನಮ್ಮ ಹುಡುಗನಿಗೆ ಯಾರೋ ದಾಲಮೀಲದ ಹಿಂದೆ ಹೊಡೆಯುತ್ತಿದ್ದಾರೆ ಅಂತಾ ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಾನು ಮತ್ತು ನಮ್ಮ ದಾಲಮಿಲ ಮಾಲಿಕ ರಿಜ್ವಾನ ಹಾಗು ಬಿಹಾರ ರಾಜ್ಯದ ಇನ್ನು 03 ಜನರು ಕೂಡಿಕೊಂಡು ನಮ್ಮ ದಾಲಮೀಲದ ಹಿಂದುಗಡೆ ಇರುವ ಅಸ್ಪಾನ ಮೋಟಾರ್ಸ್ ಇವರ ಹೋದಲ್ಲಿ ಮುಳ್ಳಿನ ಕಂಟಿಯಲ್ಲಿ ಒಬ್ಬ ಹುಡಗನು ಬೋರಲಾಗಿ ಬಿದ್ದಿದ್ದನು ಆಗ 03 ಜನರು ಬಿಹಾರ ರಾಜ್ಯದ ಹುಡುಗರು ಅವನಿಗೆ ಸರಿಯಾಗಿ ಮಲಗಿಸಿ ನೋಡಲಾಗಿ ಅವನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ,  ಎಡಹಣೆಗೆ ತರಚಿದ ಗಾಯ, ಬಲಕಣ್ಣಿಗೆ ತರಚಿದ ಗಾಯ, ಎಡಗಣ್ಣಿನ ಕೆಳಗೆ ತರಚಿದ ಗಾಯ, ಎರಡು ಕಿವಿ ಮತ್ತು ಮೂಗಿನಿಂದ ರಸ್ತಸ್ರಾವ, ಎಡರಟ್ಟೆಗೆ ಮತ್ತು ಮೋಳಕೈಗೆ, ಹೆಬ್ಬೆರಳಿಗೆ ಮುಳ್ಳು ಚುಚಿದ ಗಾಯಗಳಾಗಿ ಎರಡು ಕಿವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ನಂತರ ಅವನಿಗೆ ನಾನು ಮತ್ತು ಬಿಹಾರ ರಾಜ್ಯದ ಒಬ್ಬ ಹುಡುಗ ಇಬ್ಬರು ಕೂಡಿಕೊಂಡು ಸದರಿಯವನಿಗೆ ನನ್ನ ಮೋಟಾರ ಸೈಕಲ ಮೇಲೆ ನಡುವೆ ಕೂಡಿಸಿಕೊಂಡು ಕಪನೂರ ಗ್ರಾಮದ ಎ.ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಸದರಿಯವನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೆ ಮೃತಪಟ್ಟಿರುತ್ತನೆ ಅಂತಾ ತಿಳಿಸಿದ್ದು ನನ್ನ ಜೊತೆಗೆ ಮೋಟಾರ ಸೈಕಲ ಮೇಲೆ ಬಂದವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಭೋಜಮುಖಿಯಾ ತಂದೆ ಹೀರಾಲಾಲ ಮುಖಿಯಾ ಸಾ : ತಿರಬಿನಿ  ಸಾ:ತಿರಬಿನಿ ಅಂತಾ ತಿಳಿಸಿದ್ದು ಪ್ರಕಾಶ ತಂದೆ ಕೈಲಾಸ ಮುಖಿಯಾ ಮು:ಜೀತವಾರಪೂರ ತಾ:ಅರೇರಾ ಜಿ:ಮತಿಹಾರಿ ರಾಜ್ಯ: ಬಿಹಾರ ಹಾವ: ಮಹಮ್ಮದ ಜಾವೀದ ಇವರ ದಾಲಮೀಲದಲ್ಲಿ ಅಂತಾ ತಿಳಿಸಿರುತ್ತಾನೆ  ಮತ್ತು ನನ್ನೊಂದಿಗೆ ಸ್ಥಳಕ್ಕೆ ಬಂದ ಇಬ್ಬರ ಹೆಸರು ಸಿಪಾಯಿ ತಂದೆ ರಾಮರಂಗೇರಾವ ಹಾಗು ಹೀರಾಲಾಲ ತಂದೆ ರುವಾಲ ಪಣಿತ ಅಂತಾ ತಿಳಿಸಿದನು ಪ್ರಕಾಶ ಮುಖಿಯಾ ಇತನು ಸಾಯಂಕಾಲ 4 ಗಂಟೆಗೆ ದಾಲಮಿಲ್ದಿಂದ ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ಈ ಘಟನೆ ನಡೆದಿರುತ್ತದೆ   ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಅಥವಾ ಯಾವುದೋ ದುರದ್ದೇಶದಿಂದ ಇಂದು ದಿನಾಂಕ:- 22/04/2018 ರಂದು ಸಾಯಂಕಾಲ 04:00 ಗಂಟೆಯಿಂದ 06:30 ಪಿ.ಎಂದ ಮದ್ಯದ ಅವಧಿಯಲ್ಲಿ ಮೃತ ಪ್ರಕಾಶ ಇತನು ಸಂಡಾಸಕ್ಕೆ ಹೋದಾಗ ಯಾವುದೋ ಭಾರವಾದ ವಸ್ತುವಿನಿಂದ ಅಥವಾ ಯಾವುದೋ ಹರಿತವಾದ ಆಯುದದಿಂದ ಆತನ ತಲೆಗೆ ಹಾಗು ಇತರೇ ಕಡೆಗೆ ಹೊಡೆದು ಬಾರಿ ಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ ಮಹಮ್ಮದ ಶಕೀಲ ತಂದೆ ಶಫೀ ಅಹೆಮ್ಮದ  ಸಾ : ಇಸ್ಲಾಮಾ ಬಾದ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ಶ್ರೀಮತಿ ಉಮಾಶ್ರೀ ಗಂಡ ಭಗವಂತ್ರಾಯ ಬಿರಾದಾರ ಸಾ||ಬಂಕಲಗಾ ತಾ||ಅಫಜಲಪೂರ ರವರ ಗಂಡನಾದ ಭಗವಂತ್ರಾಯ ತಂದೆ ಮಲ್ಲೇಶಿ ಬಿರಾದಾರ ಈತನು ದಿನಾಲು ಸರಾಯಿ ಸೇವನೆ ಮಾಡಿ ಮನೆಗೆ ಬರುತಿದ್ದನ್ನು ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಸರಾಯಿ ಸೇವನೆ ಮಾಡಬೇಡ ಆರೋಗ್ಯ ಹಾಳಾಗುತ್ತೇ ಸಂಸಾರ ಕೆಡುತ್ತೇ ಎರಡು ಹೆಣ್ಣು ಮಕ್ಕಳಿವೆ ಅಂತ ತಿಳುವಳಿಕೆ ಹೇಳಿದರು ಕೇಳದೆ ನನಗೆ ಜೀವನ ಸಾಕಾಗಿದೆ ಅಂತ ಹೇಳಿ ದಿನಾಲು ಸರಾಯಿ ಸೇವನೆ ಮಾಡುತಿದ್ದನು ದಿನಾಂಕ 20/04/2018 ರಂದು 3.00 ಪಿಎಮ್ ಸುಮಾರಿಗೆ ನನ್ನ ಗಂಡನು ಸರಾಯಿ ಸೇವನೆ ಮಾಡಿ ಮನೆಗೆ ಬಂದು ನನಗೆ ಜೀವನ ಸಾಕಾಗಿದೆ ನಾನು ಇಂದು ಸಾಯುತ್ತೇನೆ ಅಂತ ಅನ್ನುತ್ತಾ ಹೊಲಕ್ಕೆ ಹೋಗುತ್ತೇನೆ ಅಂತ ಹೇಳಿ ಹೋದನು ನಾವು ಸರಾಯಿ ನಶೆಯಲ್ಲಿ ಹಾಗೇ ಹೇಳುತ್ತಾನೆ ಅಂತ ಸುಮ್ಮನಿದ್ದೇವು ನಂತರ 6.00 ಪಿಎಮ್ ಸುಮಾರಿಗೆ ನಮಗೆ ತಿಳಿದಿದ್ದೇನೆಂದರೆ ನನ್ನ ಗಂಡನಾದ ಭಗವಂತ್ರಾಯ ಈತನು ನಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ಕ್ರೀಮಿನಾಶಕ ವಿಷ ಸೇವನೆ ಮಾಡಿ ಒದ್ದಾಡುತಿದ್ದಾನೆ ಅಂತ ಗೊತ್ತಾಗಿ ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಹಾಗು ನಮ್ಮ ಗ್ರಾಮದ ಸಿದ್ದರಾಮ ತಂದೆ ಯಶವಂತ್ರಾಯ ಬಿರಾದಾರ, ಮಲ್ಕಣ್ಣಗೌಡ ತಂದೆ ಹಣಮಂತ್ರಾಯ ಗೌಡ ಬಿರಾದಾರ ಎಲ್ಲರು ಕೂಡಿ ಒಂದು ಖಾಸಗಿ  ತಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ದಾರಿಯ ಮೇಲೆ ನನ್ನ ಗಂಡನು ಬಿದ್ದು ಒದ್ದಾಡುತಿದ್ದನು ನಾವು ನನ್ನ ಗಂಡನಿಗೆ ವಿಚಾರಿಸಿದಾಗ ಬೆಳೆಗೆ ಸಿಂಪಡಿಸುವ ಕ್ರೀಮಿನಾಷಕ ಔಷದಿ ಸರಾಯಿ ಕುಡಿದ ನಶೆಯಲ್ಲಿ 5.00 ಗಂಟೆ ಸುಮಾರಿಗೆ ಸೇವನೆ ಮಾಡಿರುತ್ತೇನೆ ಅಂತ ತಿಳಿಸಿದನು ನಾವು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಕಲಬುರಗಿಯ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ಗಂಡನಿಗೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 21/04/2018 ರಂದು ರಾತ್ರಿ 9.25 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 April 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-04-2018 ರಂದು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ  ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶರಣು @ ಶರಣಬಸಪ್ಪ ತಂದೆ ನೀಲಕಂಠ ಮೋಸಲಗಿ 2) ಸುರೇಶ ತಂದೆ ಆನಂದಪ್ಪ ತೋಳನೂರ 3) ಮಹೇಶ ತಂದೆ ಸಂಗಪ್ಪ ಕುಂಬಾರ 4) ಅನೀಲ ತಂದೆ ಕಾಶೀನಾಥ ಜೀಪೂರ ಸಾ|| ಎಲ್ಲರು  ಮಣೂರ ಗ್ರಾಮ  ಅಂತ ತಿಳಿಸಿದ್ದು  ಸದರಿಯವರಿಂದ  ಒಟ್ಟು 12390/- ರೂ ನಗದು ಹಣವನ್ನು ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ
ಅಫಜಲಪೂರ ಠಾಣೆ : ದಿನಾಂಕ 16/04/2018 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು  ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಪುಲೇಪ್ಪ @ ಶಿವಾನಂದ ತಂದೆ ದೇವರಾಯ ಕೋರಳ್ಳಿ ಸಾ|| ಮಣೂರ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಮೊಸಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ಇವರು 2 ವರ್ಷಗಳ ಹಿಂದೆ ಜೇವರ್ಗಿ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದೆನು,  ಆ ಸಮಯದಲ್ಲಿ ಆಲುರ ಗ್ರಾಮದ ಹಮೀದ ತಂದೆ ಬಂದೇನವಾಜ ಹರನೂರ ಎಂಬುವನು ನನಗೆ ಪರಿಚಯಮಾಡಿಕೊಂಡನು, ಅವನು ಸಹ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ನಂತರ ನಾವಿಬ್ಬರು ಪರಸ್ಪರ ಪ್ರಿತಿಸುತ್ತಿದ್ದೇವು, ಹಮೀದ ಇವನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಬಂದಿದ್ದನು, ದಿನಾಂಕ 09-07-2015 ರಂದು ನಾನು ಮನೆಯಲ್ಲಿದ್ದಾಗ ಹಮೀದ ಇವನು ನಮ್ಮ ಮನೆಗೆ ಬಂದಿದ್ದನು, ಆಗ ನಮ್ಮ ಮನೆಯಲ್ಲಿ ಯಾರು ಇರಲಿಲ್ಲಾ. ನಂತರ ಹಮೀ ಇವನು ನನಗೆ ಪುಸಲಾಯಿಸಿ ಮುಂದೆ ನಾವು ಹೇಗಾದರು ಮದುವೆಯಾಗುವುದು ಖಚಿತ ಇದೆ ಅಂತಾ ಮನ ಒಲಿಸಿ ಸಂಭೋಗಕ್ಕೆ ಒತ್ತಾಯಿಸಿದನು, ಆಗ ನಾನು ಮದುವೆಯಾದ ನಂತರ ಸೇರೋಣಾ ಅಂತಾ ಹೇಳಿದರು ಕೇಳದೆ ಬಲವಂತವಾಗಿ ನಮ್ಮ ಮನೆಯಲ್ಲಿ ನನಗೆ ಸಂಭೋಗ ಮಾಡಿರುತ್ತಾನೆ, ಈ ವಿಷಯ ಯಾರಿಗು ಹೇಳಬೇಡಾ ಅಂತಾ ಹೇಳಿ ಹೋದನು. ನಂತರ ಆಗಾಗ ನಮ್ಮ ಮನೆಯಲ್ಲಿ ಯಾರು ಇರಲಾರದನ್ನು ಗಮನಿಸಿ ಹಮೀದ ಇವನು ನಮ್ಮ ಮನೆಗೆ ಬಂದು ನನ್ನೊಂದಿಗೆ ಸುಮಾರು ಸಲ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ, ನಾವಿಬ್ಬರು ಪ್ರಿತಿಸುವ ವಿಷ ನಮ್ಮ ಮನೆಯಲ್ಲಿ ಗೊತ್ತಾಗಿ ನಂತರ ನಮ್ಮ ಮನೆಯವರು ಸೇರಿಕೊಂಡು ಆಲೂರ ಗ್ರಾಮದ ಹಮೀದ ರವರ ಮನೆಗೆ ಹೋಗಿ ವಿಷಯ ಹೇಳಿದರು. ಹಮೀದ ಇವನು ಬೆಂಗಳೂರು ಸಿ..ಆರ್ ಪೋಲಿಸ ನೇಮಕಾತಿಯಾಗಿದ್ದನು, ನಮ್ಮ ಮನೆಯವರು, ಹಮೀದನಿಗೆ ಹಾಗು ಅವರ ಮನೆಯವರಿಗೆ  ಪೊಲೀಸ ಟ್ರೇನಿಂಗ ಹೊಗುವ ಮುಂಚೆನೆ ಮದುವೆ ಮಾಡಿಬಿಡೋಣಾ ಅಂತಾ ಹೇಳಿದಾಗ ಹಮೀದ ರವರ ಮನೆಯವರು ಪೊಲೀಸ ಟ್ರೇನಿಂಗ ಮುಗಿದ ನಂತರ ಮದುವೆ ಮಾಡೋಣಾ ಸದ್ಯ ನಿಶ್ಚಿತಾರ್ಥ ಮಾಡೋಣಾ ಅಂತಾ ಹೇಳಿದರು. ದಿನಾಂಕ 26-10-2016 ರಂದು ನಮ್ಮೂರ ಇಸ್ಲಾಂ ಕಮೀಟಿ ಅಧ್ಯಕ್ಷರಾದ ಇಬ್ರಾಹಿಮಸಾಬ ಉಸ್ತಾದ, ರಜಾಕ ಮನಿಯಾರ, ಅಲ್ಲಾಪಟೇಲ ಚಿಂಚೋಳಿ, ಇಸ್ಮಾಯಿಲ್ ನಾಯ್ಕೋಡಿ, ಮಹಿಬೂಬಪಟೇಲ ಚಿಂಚೋಳಿ, ಶಿವಲಿಂಗ ಸುಂಕದ, ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ ಹಲಕಟ್ಟಿ, ಕೆ. ವಿರೇಶಗೌಡ ಹಾಗು ನಮ್ಮ ಮತ್ತು ಹಮೀದ ರವರ ಸಂಬಂಧಿಕರ ಸಮಕ್ಷಮದಲ್ಲಿ ನಮ್ಮ ಮನೆಯಲ್ಲಿ ನಿಶ್ಚಿತಾರ್ಥ (ರಸಂ) ಮಾಡಿರುತ್ತಾರೆ, ನಂತರ ಹಮೀದ ಇವನು ನನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನು, ಈಗ 5-6 ತಿಂಗಳಿಂದ ಹಮೀದ ಇವನು ನನಗೆ ಸರಿಯಾಗಿ ಮಾತನಾಡದೆ ನೀನು ಸರಿಯಾಗಿಲ್ಲಾ, ನಿನ್ನ ಕ್ಯಾರಕ್ಟರ್ ಸರಿ ಇಲ್ಲಾ ಅಂತಾ ಅನ್ನುತ್ತಾ ನನ್ನಿಂದ ದೂರ ಇರಲು ಪ್ರಾರಂಭೀಸಿದನು, ನಂತರ ಈ ವಿಷಯ ನಮ್ಮ ಮನೆಯವರಿಗೆ ಹೇಳಿದಾಗ ನಮ್ಮ ತಂದೆ ಇಮಾಮಖಾಸಿಂ, ತಾಯಿ ಮಮತಾಜ ಹಾಗು ಮೇಲ್ಕಂಡ ಜಮಾತ ಮಂದಿ ಕೂಡಿಕೊಂಡು ಆಲೂರ ಗ್ರಾಮಕ್ಕೆ 3-4 ಸಲ ಹೋಗಿ ಹಮೀದನ ತಂದೆ ತಾಯಿಗೆ ತೆಳವಳಿಕೆ ಹೇಳಿ ಮದುವೆ ಮಾಡೋಣಾ ಅಂತಾ ಹೇಳಿದರು ಅವರು ಒಪ್ಪದೆ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿ ನಾವು ನಮ್ಮ ಮನಗ ಮದುವೆ ನಿಮ್ಮ ಮಗಳೊಂದಿಗೆ ಮಾಡುವುದಿಲ್ಲಾ ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದರು, ಆಗ ನಮ್ಮ ತಂದೆಯವರು ಈ ಬಗ್ಗೆ ಪೊಲೀಸ ಕಂಪ್ಲೆಂಟ ಕೊಡುತ್ತೇವೆ ಅಂತಾ ಅಂದಾಗ ಪೊಲೀಸ ಕಂಪ್ಲೆಂಟ ಕೊಟ್ಟರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆ. ಕಾರಣ ಹಮೀದ ತಂದೆ ಬಂದೇನವಾಜ ಹರನೂರ ಸಾ|| ಆಲೂರ ಈತನು ನನ್ನೊಂದಿಗೆ ಪ್ರಿತಿಸಿದಂತೆ ವರ್ತಿಸಿ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನನ್ನು ಪುಸಲಾಯಿಸಿ ಸುಮಾರು ಸಲ ಬಲಾತಕಾರದಿಂದ ನಮ್ಮ ಮನೆಯಲ್ಲಿ ಸಂಭೋಗ ಮಾಡಿ ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯ ನನಗೆ ಮದುವೆ ಯಾಗದೆ ಮೋಸ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಆರೀಫಖಾನ ತಂದೆ ನಿಜಾಮಖಾನ ಸಾ|| ಪ್ಲಾಟ ನಂ; 48 ವಿಶ್ವರಾದ್ಯ ಕಾಲೋನಿ ಆಳಂದ ರೋಡ ಕಲಬುರಗಿ ಇವರು ಮ್ಮ ಬಡಾವಣೆಯಲ್ಲಿ ವಾಸವಾಗಿರುವ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರು ವಿನಾಕಾರಣ ನನ್ನ ಸಂಗಡ ವೈರತ್ವ ಬೇಳೆಯಿಸಿಕೊಂಡು ಬಂದಿದ್ದು ಇರುತ್ತದೆ. ನಾನು ಅವರ ಸಂಗಡ ತಿರುಗಾಡಲು ಹೋಗದಕ್ಕೆ ಸದರಿಯವರು ನನ್ನ ಮೇಲೆ ಹಗೆತನ ಬೇಳೆಯಿಸಿಕೊಂಡು ಬಂದಿದ್ದು ದಿನಾಂಕ 12/04/2018 ರಂದು ರಾತ್ರಿ 10.15 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಅವಟೆ ಹಾಸ್ಪೆಟಲ್ ಕಡೆಗೆ ಹೊಗುವ ಕುರಿತು ಎಸ್ ಬಿ ಟ್ರೇಡರ್ಸ ಅಂಗಡಿಯ ಮುಂದಿನ ರಸ್ತಯ ಮೇಲೆ ನಡೆದುಕೊಂಡು ಹೊಗುತ್ತಿದ್ದು ಅದೆ ವೇಳೆಗೆ ನನ್ನ ಎದುರಗಡೆ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರೆಲ್ಲರೂ ಕೋಡಿಕೊಂಡು ಬಂದವರೆ ನನ್ನನ್ನು ತಡೆದು ಅವರಲ್ಲಿ ಹೈದರ ತಂದೆ ಜಿಲಾನಿ ಇತನು ರಂಡಿ ಮಗನೆ ನನ್ನ ಎದರು ಗಾಡಿಮೇಲೆ ದಿಮಾಕ ಮಾಡಿಕೊಂಡು ಹೊಗುತ್ತಿಯಾ ನಿನ್ನ ತಿಂಡಿ ಬಹಳ ಇದೆ ಬೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ಯಾಕೆ ನನಗೆ ಬೈಯುತ್ತಿ ಅಂತ ಕೇಳಿದಾಗ ಸದರಿಯವನು ತನ್ನ ಕೈಯಿಂದ ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು,  ಆರೀಫ್ ತಂದೆ ಸಲಿಂ ಇತನು ನಮಗೆ ಎದರು ಮಾತನಾಡುತ್ತಿಯಾ ಬೋಸಡಿಕ್ಯಾ ಅಂತಾ ಬೈದು ಅಲ್ಲೆ ಬಿದ್ದಿದ್ದ ಡ್ರ್ಯಾನೆಜ್ ಪೈಪು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡದು ರಕ್ತಗಾಯ ಪಡಿಸಿದ್ದು. ಮುಭೀನ್ ತಂದೆ ಖಯುಂ ಕೈಮುಷ್ಟಿಮಾಡಿ ನನ್ನ ತಲೆಯ ಹಿಂಬಾಗ, ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ಫಯಾಜ ಇತನು ಕೈಯಿಂದ ನನ್ನ ಹೊಟ್ಟೆಗೆ ಹೊಡೆದನು. ಪ್ರಶಾಂತ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 April 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 13.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೈಲಾಸ ನಗರ ಗದಲೇಗಾವ ಕಲ್ಯಾಣ ಮಂಟಪಕ್ಕೆ ಹೊಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಶ್ರೀ ಎ.ಪೌಲ ಎ.ಎಸ್‌‌.ಐ  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಜಾರ ನಾಕಾದಿಂದ ನಡೆದುಕೊಂಡು ಗದಲೇಗಾವ ಕಲ್ಯಾಣ ಮಂಟಪ ಕಡೆಗೆ ಹೋಗುವ ರಸ್ತೆಯ ಹತ್ತಿರ ಹೋಗಿ ಮರೇಯಲ್ಲಿ ನಿಂತುಕೊಂಡು ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ರೇವಣಸಿದ್ದಪ್ಪ ತಂದೆ ಹಣಮಂತ್ರಾವ ಬೇಲೂರ ಸಾ: ಅಪಚಂದ ತಾ: ಆಳಂದ ಜಿ: ಕಲಬುರಗಿ ಹಾ:ವ: ಸುಭಾಶ ನಗರ ಶಹಾಬಜಾರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1150/- ರೂ 2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 13/04/2018 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತಹಸಿ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ತಹಸಿಲ ಕಾರ್ಯಾಲಯದ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅರ್ಜುನ ತಂದೆ ಕಲ್ಲಪ್ಪ ವಾಲಿಕರ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1650/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2018 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ . ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೆರಕನಹಳ್ಳಿ ಗ್ರಾಮಕ್ಕೆ  ಹೋಗಿ, ಗ್ರಾಮದ ಅಗಸಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಸಿದ್ದಪ್ಪ ಚಿಂಚೋಳಿ ಸಾ||ಕೆರಕನಹಳ್ಳಿ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 92 ರಟ್ಟಿನ ಪೌಚಗಳು ಅಕಿ- 2576/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 210/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 92 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.