POLICE BHAVAN KALABURAGI

POLICE BHAVAN KALABURAGI

14 April 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 13.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೈಲಾಸ ನಗರ ಗದಲೇಗಾವ ಕಲ್ಯಾಣ ಮಂಟಪಕ್ಕೆ ಹೊಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಶ್ರೀ ಎ.ಪೌಲ ಎ.ಎಸ್‌‌.ಐ  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಜಾರ ನಾಕಾದಿಂದ ನಡೆದುಕೊಂಡು ಗದಲೇಗಾವ ಕಲ್ಯಾಣ ಮಂಟಪ ಕಡೆಗೆ ಹೋಗುವ ರಸ್ತೆಯ ಹತ್ತಿರ ಹೋಗಿ ಮರೇಯಲ್ಲಿ ನಿಂತುಕೊಂಡು ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ರೇವಣಸಿದ್ದಪ್ಪ ತಂದೆ ಹಣಮಂತ್ರಾವ ಬೇಲೂರ ಸಾ: ಅಪಚಂದ ತಾ: ಆಳಂದ ಜಿ: ಕಲಬುರಗಿ ಹಾ:ವ: ಸುಭಾಶ ನಗರ ಶಹಾಬಜಾರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1150/- ರೂ 2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 13/04/2018 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತಹಸಿ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ತಹಸಿಲ ಕಾರ್ಯಾಲಯದ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅರ್ಜುನ ತಂದೆ ಕಲ್ಲಪ್ಪ ವಾಲಿಕರ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1650/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2018 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ . ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೆರಕನಹಳ್ಳಿ ಗ್ರಾಮಕ್ಕೆ  ಹೋಗಿ, ಗ್ರಾಮದ ಅಗಸಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಸಿದ್ದಪ್ಪ ಚಿಂಚೋಳಿ ಸಾ||ಕೆರಕನಹಳ್ಳಿ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 92 ರಟ್ಟಿನ ಪೌಚಗಳು ಅಕಿ- 2576/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 210/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 92 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

13 April 2018

KALABURAGI DISTRICT REPORTED CRIMES

ಪೊಲೀಸ ಅಧೀಕಾರಿಗಳ ಮೇಲೆ ಹಲ್ಲೆ ಮಾಡಿದವರ ಮೇಲೆ ಆತ್ಮರಕ್ಷಣೆಗೊಸ್ಕರ ಗುಂಡಿನ ದಾಳಿ :
ಗ್ರಾಮೀಣ ಠಾಣೆ : ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಇತ್ತೀತ್ತಲಾಗಿ ಕಲಬುರಗಿ ನಗರದ ವಿವಿಧ ಠಾಣಾ ಸರಹದ್ದಿನಲ್ಲಿ ಸುಲಿಗೆ  ಪ್ರಕರಣಗಳು ದಾಖಲಾಗಿದ್ದು, ಆ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಮಾನ್ಯ ಎ.ಎಸ್.ಪಿ. (ಎ) ಉಪವಿಭಾಗ ಕಲಬುರಗಿ ರವರ ಮೇಲು ಉಸ್ತುವಾರಿಯಲ್ಲಿ  ಒಟ್ಟು 06 ತಂಡಗಳು ರಚನೆ ಮಾಡಿದ್ದು. ಸದರಿ 06 ತಂಡಗಳಲ್ಲಿ  ನನ್ನ ನೇತೃತ್ವದಲ್ಲಿ ಹುಸೇನಬಾಷಾ ಸಿ.ಹೆಚ.ಸಿ.224, ಬಂದೇನವಾಜ ಸಿ.ಹೆಚ.ಸಿ. 546, ಭೀಮನಾಯಕ ಸಿಪಿಸಿ 855 ಇವರುಗಳು ಇದ್ದು, ಪಿ.ಎಸ್.ಐ. ವನಂಜಕರ ರವರ ನೇತೃತ್ವದಲ್ಲಿ  ರಾಜಕುಮಾರ ಸಿಪಿಸಿ 1100 ಸ್ಟೇಷನ ಬಜಾರ ಠಾಣೆ ಕಲಬುರಗಿ, ತೌಸೀಫ ಸಿಪಿಸಿ 1265 ಸ್ಟೇಷನ ಬಜಾರ ಠಾಣೆ ಕಲಬುರಗಿ, ಮತ್ತು ಸಿಪಿಸಿ 108 ನಿಂಗಪ್ಪ ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ ಇವರುಗಳಿರುತ್ತಾರೆ. ಈ ಮೇಲ್ಕಂಡ ಎರಡು ತಂಡಗಳೊಂದಿಗೆ  ಕಲಬುರಗಿ ನಗರದಲ್ಲಿ ವಿಶೇಷ ಗಸ್ತು ಮತ್ತು ಆರೋಪಿತರ ಪತ್ತೆ ಕಾರ್ಯದಲ್ಲಿದ್ದಾಗ  ಬೆಳಗಿನ 03-45  ಗಂಟೆ ಸುಮಾರಿಗೆ ಶಹಾಬಾದ ರಿಂಗ ರೋಡಿನ ವಿ.ಟಿ.ಯು. ಕಾಲೇಜ ಹತ್ತಿರ ಯಾರೋ ಅಪರಿಚಿತ ನಾಲ್ಕು ಜನರು ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ ಮೇಲೆ ಬಂದು  ಅದೇ ದಾರಿಯಿಂದ ಹೋಗುತ್ತಿದ್ದ ಒಬ್ಬ ಮೋಟಾರ ಸೈಕಲ ಸವಾರನಿಗೆ ಅಡ್ಡಗಟ್ಟಿ  ಅವನ ಮೋಟಾರ ಸೈಕಲ ಮತ್ತು ಮೋಬಾಯಿಲ ಕಸಿದುಕೊಂಡು ಹೋಗಿರುತ್ತಾರೆ ಎಂದು ಕಂಟ್ರೋಲ ರೂಮಿನಿಂದ ಮಾಹಿತಿ ತಿಳಿದು ಬಂದ ಮೇರೆಗೆ ವಿಟಿಯು ಕಾಲೇ ಹತ್ತಿರ ಹೋಗಿ ಘಟನಾ ಸ್ಥಳ ಪರಿಶೀಲಿಸುತ್ತಿರುವಾಗ ಬೆಳಗಿನ 04-30 ಗಂಟೆ ಸುಮಾರಿಗೆ ಮತ್ತೆ ಕಂಟ್ರೋಲ ರೂಮಿನವರು ಹೀರಾಪೂರ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ನಾಲ್ಕು ಜನ ಅಪರಿಚಿತರು  ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ  ಮೇಲೆ ಬಂದು ತಡೆದು ನಿಲ್ಲಿಸಿ ಆತನ ಹತ್ತಿರ ಲ್ಯಾಪಟ್ಯಾಪ, ಮೋಬಾಯಿಲ್, ನಗದುಹಣ  ಕಸಿದುಕೊಂಡು ಹೋಗಿರುತ್ತಾರೆ ಎಂದು ಮಾಹಿತಿ ಮೇರೆಗೆ ಪುನ:ಹ ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಹಾಗೂ ಪಿ.ಎಸ್.ಐ. ವನಂಜಕರ ಹಾಗೂ ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರು ಕೂಡಿಕೊಂಡು ಹೀರಾಪೂರ ಕ್ರಾಸ ಕಡೆಗೆ ಬಂದು ಪರಿಶೀಲಿಸಿ  ನಂತರ ಆರೋಪಿತರ ಪತ್ತೆ ಕುರಿತು ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರು  ಬಿದ್ದಾಪೂರ ಕಾಲನಿ, ಹೈ ಕೋರ್ಟ, ಉದನೂರ ರಿಂಗ ರೋಡ ಕಡೆಗೆ ಹೋಗಿದ್ದು. ನಾನು ಮತ್ತು ಸಿಬ್ಬಂದಿಯವರು ಹೀರಾಪೂರ,  ಮಿಜಾಬ ನಗರ, ಡಬರಾಬಾದ, ಕಡೆಗಳಲ್ಲಿ ಹೋಗಿದ್ದು, ಸದರಿ  ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದಾಗ ಬೆಳಗಿನ 06-30 ಗಂಟೆ ಸುಮಾರಿಗೆ ರೇಲ್ವೆ ಬ್ರೀಡ್ಜ ದಾಟಿ ಇರುವ ಡಬರಾಬಾದ ಸೀಮಾಂತರದಲ್ಲಿ ಇರುವ ಆಶ್ರಯ ಕಾಲನಿಯಲ್ಲಿ ಇರುವ ಹಾಳು ಬಿದ್ದ ಮನೆಯಲ್ಲಿ ಈ ಮೇಲೆ ಹೇಳಿದ ಸ್ಥಳಗಳಲ್ಲಿ ಸುಲಿಗೆ ಮಾಡಿದ ಅರೋಪಿತರು ಅಡಗಿ ಕುಳಿತುಕೊಂಡಿದ್ದಾರೆ ಎಂಬ ಬಾತ್ಮಿ ಮೇರೆಗೆ  ಹೈ ಕೋರ್ಟ ಕಡೆಗೆ ಹೋದ ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರಿಗೆ ಡಬರಾಬಾದ ರೇಲ್ವೆ ಬ್ರೀಡ್ಜ ಹತ್ತಿರ ಬರುವಂತೆ ಹೇಳಿದ ಪ್ರಕಾರ ಅವರು ಅಲ್ಲಿಗೆ ಬಂದಾಗ ನಾವೆಲ್ಲರೂ ಕೂಡಿಕೊಂಡು ಆರೋಪಿತರನ್ನು ಹಿಡಿಯಲು ಹಾಳು ಬಿದ್ದ ಡಬರಾಬಾದ ಆಶ್ರಯ ಕಾಲನಿಯ ಹತ್ತಿರ ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಹೋದಾಗ ಒಂದು ಹಾಳು ಬಿದ್ದ ಮನೆ ಹತ್ತಿರ ಒಂದು ಹೊಂಡಾ ಎಕ್ಟೀವ್ ಮತ್ತು ಹೊಂಡಾ ಡಿಯೋ ಗಾಡಿ ನಿಂತಿದಿದ್ದು ನೋಡಿ ಸುಲಿಗೆ ಮಾಡಿದ ಆರೋಪಿತರು ಇಲ್ಲೇ ಅಡಗಿ ಕುಳಿತಿದ್ದಾರೆ ಎಂದು ಖಚಿತವಾದ ಮೇರೆಗೆ ಅವರನ್ನು ಹಿಡಿಯಲು ಸದರಿ ಮನೆಯ ಹತ್ತಿರ ಹೋದಾಗ ಒಳಗಡೆ ಇದ್ದ ನಾಲ್ಕು ಜನರು ಪೊಲೀಸ ಸಮವಸ್ತ್ರ ನೋಡಿ ನಮ್ಮ ಮೇಲೆ ಬಿಯರ ಬಾಟಲಿಗಳು ಎಸೆದಾಗ ಅದನ್ನು ಕಂಡು ನಾನು ಮತ್ತು  ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು ಅವರಿಗೆ ಬಿಯರ ಬಾಟಲಿ ಎಸೆಯಬೇಡಿರಿ ಶರಣಾಗಿರಿ ನಾವು ಪೊಲೀಸರಿದ್ದೆವೆ ಎಂದು ತಿಳಿ ಹೇಳಿದಾಗ ಅವರು ನಮ್ಮ ಮಾತಿಗೆ ಬೆಲೆ ಕೊಡದೇ  ಇದ್ದಾಗ ಅವರನ್ನು ಹಿಡಿಯಲು ಹೋದಾಗ ಒಳಗಡೆ ಇದ್ದ ಇಬ್ಬರು ತಮ್ಮ ತಮ್ಮ ಕೈಯಲ್ಲಿ ಜಂಭಾ ಹಿಡಿದುಕೊಂಡು  ರೂಮಿನಿಂದ ಹೊರಗಡೆ ಬಂದು ನನ್ನ ಮತ್ತು ಜೊತೆಗಿದ್ದ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಅವರಿಗೆ ಶರಣಾಗಿರಿ ಪೊಲೀಸರ ಮೇಲೆ ಹಲ್ಲೆ ಮಾಡುವುದು ಸರಿ ಅಲ್ಲಾ ಎಂದು ತಿಳಿ ಹೇಳಿದರೂ ಕೂಡಾ  ಅವರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಜಂಭೆಯಿಂದ  ಬಂದೇನವಾಜ ಹೆಚಸಿ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರ ಬಲ ಕುತ್ತಿಗೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ರಕ್ತಗಾಯಗೊಳಿಸಿದನು. ನಾನು ಮತ್ತು ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು  ಹಲ್ಲೆ ಮಾಡಬೇಡಿರಿ ಶರಣಾಗಿರಿ ಎಂದು ಹೇಳಿ ಮತ್ತೆ ಅವರಿಗೆ ಹಿಡಿಯಲು ಹೋದಾಗ  ಅವರುಗಳು ಮತ್ತೆ ನಮ್ಮ ಮೇಲೆ ಜಂಭೆಯಿಂದ ಹಲ್ಲೆ ಮಾಡಲು ಮುಂದಾದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಜೊತೆಯಲ್ಲಿದ್ದ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನ ಸರ್ವಿಸ ಪಿಸ್ತೂಲನಿಂದ  ಒಂದು ಸುತ್ತು ಗುಂಡು ಗಾಳಿಯಲ್ಲಿ ಹಾರಿಸಿ ಶರಣಗಾಗಿರಿ ಎಂದು ಎಚ್ಚರಿಕೆ ನೀಡಿದರೂ ಇನ್ನೊಬ್ಬ ತನ್ನ ಕೈಯಲ್ಲಿದ್ದ ಜಂಭೆಯಿಂದ  ಭೀಮನಾಯಕ ಸಿಪಿಸಿ ರವರ  ಬಲಭಜುದ ಮೇಲೆ ಮರಣಾಂತಿಕ ಹಲ್ಲೆ ಮಾಡಿದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಯವರ ಪ್ರಾಣ  ರಕ್ಷಣೆಗಾಗಿ ಸರ್ವಿಸ ಪಿಸ್ತೂಲನಿಂದ ಭೀಮನಾಯಕನಿಗೆ  ಹಲ್ಲೆ ಮಾಡಿದ ವ್ಯಕ್ತಿಯ ಎಡಗಾಲಿಗೆ ಒಂದು ಸುತ್ತು ಗುಂಡು ಹೊಡೆದನು. ಅದನ್ನು ನೋಡಿ ಅವನ ಜೊತೆಯಲ್ಲಿದ್ದ ಬಂದೇನವಾಜನಿಗೆ ಹಲ್ಲೆ ಮಾಡಿದವನು ಮತ್ತೆ ಜಂಭೆದಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ನನ್ನ ಆತ್ಮ ರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಆತನ ಎಡಗಾಲ ಮೇಲೆ ಹೊಡೆದನು. ಅದರಿಂದ ಇಬ್ಬರು ಸ್ಥಳದಲ್ಲಿ ಕುಸಿದು ಬಿದ್ದರು. ರೂಮಿನಲ್ಲಿದ್ದ ಇನ್ನಿಬ್ಬರು ಅಲ್ಲಿಂದ ಓಡಿ ಹೋದರು.  ಬಂದೇನವಾಜನಿಗೆ ಹಲ್ಲೆ ಮಾಡಿದವನ ಹತ್ತಿರ ಹೋಗಿ ಅವನ ಹೆಸರು ಕೇಳಲಾಗಿ ಶೇಖರ @ ಶೇಖು ತಂದೆ ಹಣಮಂತ ಖೇತ್ರಿ ಸಾ: ರಾಮ ತೀರ್ಥ ನಗರ ಕಲಬುರಗಿ ಅಂತಾ ಗೊತ್ತಾಯಿತು. ಮತ್ತು ಭೀಮನಾಯಕನ ಮೇಲೆ  ಹಲ್ಲೆ ಮಾಡಿದವನ ಹೆಸರು ಕೇಳಲಾಗಿ ಅಜೀಂಖಾನ  ತಂದೆ ರಹೇಮಾನಖಾನ ಖಾನಸಾಬ ಸಾ: ಆದರ್ಶ ನಗರ ಕಲಬುರಗಿ  ಅಂತಾ ಗೊತ್ತಾಯಿತು. ನಂತರ ಶೇಖರ ಮತ್ತು ಅಜೀಂ ಇಬ್ಬರಿಗೆ ಓಡಿ ಹೋದವರ ಹೆಸರು  ವಿಳಾಸ ಕೇಳಲಾಗಿ  3)ಅಮರ 4) ಸಾಗರ  ಅಂತಾ ಗೊತ್ತಾಯಿತು. ಈ ವಿಷಯ ಪೊಲೀಸ ಕಂಟ್ರೋಲ್ ರೂಮಿಗೆ ಮಾಹಿತಿ ತಿಳಿಸಿ ನಮ್ಮ ಮೇಲಾಧಿಕಾರಿಯವರಿಗೆ ತಿಳಿಸುವಂತೆ ಹೇಳಿದನು. ಅಲ್ಲದೇ ದು:ಖಾಪತಗೊಂಡು ಬಂದೇನವಾಜ ಮತ್ತು ಭೀಮಾನಾಯ್ಕ  ಹಾಗೂ ಶೇಖರ, ಅಜೀಂಖಾನ ಇವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಲು ಕಂಟ್ರೋಲ ರೂಮಿಗೆ ತಿಳಿಸಿದೆನು. ಶೇಖರ ಮತ್ತು ಅಜೀಂಖಾನ ಇವರಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ 108 ಅಂಬುಲೈನ್ಸ ಗಾಡಿ ಬರಲು ತಡವಾಗುತ್ತಿದ್ದರಿಂದ, ಮತ್ತು ಗಾಯಗೊಂಡ ಸಿಬ್ಬಂದಿಯವರ ಜೊತೆಯಲ್ಲಿ ಪಿ.ಎಸ್.ಐ. ವನಂಜಕರ ಮತ್ತು ಅವರ ಸಿಬ್ಬಂದಿಯವರನ್ನು ಬಿಟ್ಟು  ಶೇಖರ ಮತ್ತು ಅಜೀಂಖಾನ ಇವರಿಗೆ ರಕ್ತಸ್ರಾವ ಆಗುತ್ತಿದ್ದರಿಂದ ಪ್ರಾಣ ರಕ್ಷಣೆಗಾಗಿ  ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಜೀಪು ನಂಬರ ಕೆಎ 32 ಜಿ 295 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಂತಾ ಶ್ರೀ ವಾಹೇದ್ ಹೆಚ.ಕೋತ್ವಾಲ್ ಪಿ.ಎಸ್.ಐ. ಫರತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 12-04-2018 ರಂದು  ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ  ಸಿ.ಪಿ.ಐ ಅಫಜಲಪೂರ ರವರು  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹಿಂಚಗೇರಾ ಗ್ರಾಮಕ್ಕೆ  ಹೋಗಿ, ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವಶರಣ ತಂದೆ ಸಿದ್ದಪ್ಪ ಕುಂಬಾರ ಸಾ|| ಹಿಂಚಗೇರಾ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 64 ರಟ್ಟಿನ ಪೌಚಗಳು ಅಕಿ- 1800/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 64 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ವಶಕ್ಕೆ ಪಡೆದುಕೊಂಡೆನು, ಉಳಿದ ಪೌಚಗಳನ್ನು ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣವನ್ನು  ವಶಪಡಿಸಿಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.

12 April 2018

KALABURAGI DISTRICT REPORTED CRIMES

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನರೋಣಾ ಠಾಣೆ : ದಿನಾಂಕ: 11/04/2018 ರಂದು ಲೇಂಗಟಿ ಗ್ರಾಮದ ಮಹಾದೇವ ದೇವಸ್ಥಾನದ ಹತ್ತಿರ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯವನ್ನು ತನ್ನ ಅಧೀನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಲೇಂಗಟಿ ಗ್ರಾಮದಲ್ಲಿರುವ ಮಹಾದೇವ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಹಾದೇವ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ರಟ್ಟಿನ ಬಾಕ್ಸದಲ್ಲಿ ಮದ್ಯದ ಪೌಚಗಳನ್ನು ಸಂಗ್ರಹಿಸಿ ಇಟ್ಟಿಕೊಂಡು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಡಲಾಗಿ ಸಾರಾಯಿ ಖರೀದಿಸಲು ಬಂದ ಜನರು ಓಡಿಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಲಕ್ಷ್ಮಣ ತಂದೆ ಬಂಡಪ್ಪ ಉಪ್ಪಾರ, ಸಾ||ಲೇಂಗಟಿ ಗ್ರಾಮ,ತಾ:ಆಳಂದ ಅಂತಾ ಹೇಳಿದನು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಅಥವಾ ದಾಖಲಾತಿಗಳ ಬಗ್ಗೆ ವಿಚಾರಿಸಲು ಅನಧಿಕೃತವಾಗಿ ತನ್ನ ಅಧೀನದಲ್ಲಿ ಇಟ್ಟುಕೊಂಡು ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವ ಬಗ್ಗೆ ತಿಳಿಸಿದನು. ಸದರಿಯವನ ಮುಂದೆ ಒಂದು ರಟ್ಟಿನ ಬಾಕ್ಸದಲ್ಲಿ ಸಂಗ್ರಹಿಸಿ ಇಟ್ಟಿರುವ ಪೌಚಗಳನ್ನು ಪರಿಶಿಲಿಸಲಾಗಿ Original choice 180 ML ನ 30 ಪೌಚಗಳು ಪ್ರತಿ ಪೌಚನ ಮೌಲ್ಯ 56 ರೂ 27 ಪೈಸೆ. ಒಟ್ಟು ಅ:ಕಿ: 1688 ರೂ ಇದ್ದು ಹಾಗು ಆಪಾದಿತನು ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ನಗದು ಹಣ 250/- ರೂ ಗಳು ದೋರೆತಿದ್ದು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/04/18 ರಂದು ನಂದಿಕೂರ ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಪರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ   ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ  80/- ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಾಕ ನಂಬರ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು  ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದು ಹೆಸರು ವಿಚಾರಿಸಲು ಚಂದ್ರಯ್ಯ ತಂದೆ ಗುಂಡಯ್ಯ ಗುತ್ತೇದಾರ ಸಾ; ನಂದಿ ಕೂರ ತಾ: ಜಿ: ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ  2250/- ರೂ ನಗದು ಹಣ ಒಂದು ಬಾಲ ಪೆನ್ನು, ಮಟಕಾ ಚೀಟಿ ಜಪ್ತ ಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದನಗಳ ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ.ಸಿದ್ರಾಮಪ್ಪ ತಂದೆ ಗುರುಶಾಂತಪ್ಪ ಭೂಸನೂರ, ಸಾ||ಕಡಗಂಚಿ ಗ್ರಾಮ ಇವರು ಎರಡು ಎಮ್ಮೆಗಳು ಮತ್ತು ಒಂದು ಎಮ್ಮೆ ಮಣಕಾ ಇರುತ್ತವೆ ಅವುಗಳನ್ನು ದಿನಾಲು ನಮ್ಮ ಮನೆಯ ಮುಂದಿನ ಬಯಲು ಜಾಗದಲ್ಲಿ ಕಟ್ಟುತ್ತೇವೆ. ಅದರಂತೆ ದಿನಾಂಕ:06-04-2018 ರಂದು ಎಂದಿನಂತೆ ಸಾಯಂಕಾಲ ಮನೆಯ ಮುಂದೆ ಕಟ್ಟಿರುತ್ತೇನೆ. ರಾತ್ರಿ ಊಟಮಾಡಿ 11-30 ಗಂಟೆ ನಮ್ಮ ಎಮ್ಮಿಗಳಿಗೆ ಮೇವು ಹಾಕಿ ಮನೆಯೊಳಗೆ ಹೋಗಿ ಮಲಗಿರುತ್ತೇನೆ. ದಿನಾಂಕ:07-04-2018 ರಂದು ಬೆಳಿಗ್ಗೆ 06-00 ಗಂಟೆಗೆ ಎಂದಿನಂತೆ ಎಮ್ಮಿಗಳ ಹೆಂಡಿಕಸ ಮತ್ತು ಮೇವು ಹಾಕ ಬೇಕೆಂದು ಮನೆಯಿಂದ ಹೊರಗೆ ನಾನು ಮತ್ತು ನಮ್ಮ ಅಣ್ಣನಾದ ಚಂದ್ರಕಾಂತ ಭೂಸನೂರ ಇಬ್ಬರು ಬಂದು ನೋಡಲಾಗಿ ನಮ್ಮ ಮನೆಯ ಮುಂದೆ ಗುಟಕ್ಕೆ ಕಟ್ಟಿದ ಎಮ್ಮೆಗಳು ಇರಲಿಲ್ಲ. ಯಾರೊ ಕಳ್ಳರು ಕಳವುಮಾಡಿಕೊಂಡು ಹೊಗಿದ್ದರು. ನಂತರ ನಾನು ಮತ್ತು ನಮ್ಮ ಅಣ್ಣ ಹಾಗೂ ನಮ್ಮ ಸಂಬಂದಿಕರಾದ ಅಂಬಾರಾಯ ತಂದೆ ಹಣಮಂತರಾಯ ಜವಳಿ ಎಲ್ಲರೂ ಕೂಡಿ ನಮ್ಮ ಎಮ್ಮೆಗಳನ್ನು ಎಲ್ಲಾಕಡೆ ಹುಡಕಲಾಗಿ ಇಲ್ಲಿಯವರೆಗೆ ಸಿಕ್ಕಿರುವದಿಲ್ಲ. ನನ್ನ 3 ಎಮ್ಮೆಗಳ ಅಂದಾಜು ಕಿಮ್ಮತ್ತು 48000/-ರೂಪಾಯಿಗಳು ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಕೀಲ ಅಹ್ಮೆದ ತಂದೆ ಅಯುಬ ಪಟೇಲ್ ಕೂಡಿ ವಯಸ್ಸು:- 26 ವರ್ಷ ಜಾ:ಮುಸ್ಲಿಂ ಉ: ವ್ಯಾಪಾರ ಮು: ಸರಡಗಿ (ಬಿ) ತಾ:ಜಿ:ಕಲಬುರಗಿ ಹಾವ: ಉದನೂರ ಕ್ರಾಸ ಕಲಬುರಗಿ ವಿಳಾಸದಲ್ಲಿ ವಾಸವಾಗಿದ್ದು ನನ್ನ ಸ್ನೇಹಿತನಾದ ಸೈಯ್ಯದ ಸದ್ದಾಂ ಹುಸೇನ್ ತಂದೆ ಸೈಯ್ಯದ ದಸ್ತಗಿರ ಮು:ಮದಿನಾ ಕಾಲೋನಿ ಎಂ.ಎಸ್.ಕೆ ಮೀಲ ಇವರಿಂದ ಹೇಳಿ ಬರೆಸಿಕೊಡುವ ವಿನಂತಿ ದೂರು ಅರ್ಜಿ ಏನೆಂದರೆ ನಿನ್ನೆ ದಿನಾಂಕ:- 10/04/2018 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನನ್ನ ಹೊಂಡಾ ಆಕ್ಟೀವ್ ಮೋಟಾರ ಸೈಕಲ್ ನಂ KA-32 EF-7565 ನೇದ್ದರ ಮೇಲೆ ಕಲಬುರಗಿ ನಗರದ ಎಂಎಸ್.ಕೆ. ಮಿಲ್ಲ  ಎರಿಯಾದಲ್ಲಿ ಇರುವ ಇವರ ಕಾಕನಾದ  ಎಸ್. ಪಟೇಲ ಇವರಿಗೆ ಭೇಟ್ಟಿ ಆಗಿ ಮರಳಿ ಮನೆಗೆ ಹೋಗಬೇಕೆಂದು ಈ ಮೇಲ್ಕಂಡ ಮೋಟಾರ ಸೈಕಲ್ ಮೇಲೆ ನಾನು ಒಬ್ಬನೇ ಇಂದು ದಿನಾಂಕ:- 11/04/2018 ರಂದು ಮದ್ಯ ರಾತ್ರಿ 01:15 ನಮ್ಮ ಕಾಕನ ಮನೆಯಿಂದ ಹೊರಟು ಮದ್ಯ ರಾತ್ರಿ 01:30 .ಎಂಕ್ಕೆ ಉದನೂರ ಕ್ರಾಸ ಹತ್ತಿರ ಜಂಪನಲ್ಲಿ ಮೋಟಾರ ಸೈಕಲ್ ನಿಧಾನ ಮಾಡಿ ಹೋಗುತ್ತಿದ್ದಾಗ ಆಗ ಹಿಂದಿನಿಂದ 02 ಮೋಟಾರ ಸೈಕಲಗಳ ಮೇಲ 04 ಜನ ಅಪರಿಚಿತರು ಬಂದು ನನ್ನ ಮೋಟಾರ ಸೈಕಲದ ಮುಂದೆ ಅವರ ಮೋಟಾರ ಸೈಕಲಗಳನ್ನು ಅಡ್ಡ ನಿಲ್ಲಿಸಿದರು ಆಗ ನಾನು ಮೋಟಾರ ಸೈಕಲ ನಿಲ್ಲಿಸಿದೇನು ಆಗ ಅವರೆಲ್ಲರೂ ನನಗೆ ಹಿಂದಿ ಭಾಷೆಯಲ್ಲಿ ಕಹಾ ಜಹರಾಹೆಬೇ ಅಂತಾ ಅಂದು ಅದರಲ್ಲಿ ಇಬ್ಬರು ನನಗೆ ಎದೆಯ ಮೇಲೆ ಅಂಗಿ ಹಿಡಿದು ಜಗ್ಗಾಡಿ ಇನ್ನೋಬ್ಬ ನನ್ನ ಕಿಸೆಯಲ್ಲಿದ್ದ ಅಂದಾಜು 15000/-ರೂ ಹಣವನ್ನು ಮತ್ತು ಸ್ಯಾಮಸಂಗ ಕಂಪನಿಯ ಜೆ5 ಮೋಬೈಲ್ ಅಕಿ-13000/-ರೂ ಕಿಮ್ಮತ್ತಿನ ಮೋಬೈಲ ನಂ-9590444691 ನೇದ್ದನ್ನು ಜಬರದಸ್ತಿಯಿಂದ ಕಸಿದುಕೊಂಡನು ಅವರು 04 ಜನರು ಇದುದ್ದರಿಂದ್ದ ನಾನು ಅವರಿಗೆ ಅಂಜಿ ಸುಮ್ಮನೇ ನಿಂತುಕೊಂಡ್ಡಿದ್ದೇನು ಅದರಲ್ಲಿ ಒಬ್ಬನು ನಾನು ನನ್ನ ಮೋಟಾರ ಸೈಕಲ ಹತ್ತಿರ ಹೋಗುತ್ತಿದ್ದಾಗ ನನಗೆ ಕಾಲಿನಿಂದ ಜೋರಾಗಿ ಒದ್ದು ನನ್ನ ಮೋಟಾರ ಸೈಕಲ್ ನಂ KA-32 EF-7565 ತೆಗೆದುಕೊಂಡು ರಾಮ ಮಂದಿರ ರಿಂಗ ರೋಡ ಕಡೆಗೆ ಹೋದರು ಸದರಿ 04 ಜನರು ಅಪರಿಚಿತರು ಇದ್ದು ಅವರು ಮುಖಕ್ಕೆ ದಸ್ತಿಗಳನ್ನು ಕಟ್ಟಿಕೊಂಡಿದ್ದರು ಅವರುಗಳು ಅಂದಾಜು 25 ರಿಂದ 27 ವಯಸ್ಸಿನವರು ಇರುತ್ತಾರೆ. ಘಟನೆ ಸ್ಥಳದಿಂದ ಅಲ್ಲೆ ಹತ್ತಿರದಲ್ಲಿದ್ದ ಸುಮಾರು 1/2  ಕಿ.ಮೀದಲ್ಲಿ ಅಂತರದಲ್ಲಿದ್ದ ನಮ್ಮ ಮನೆಗೆ ನಡೆದುಕೊಂಡು ಹೋಗಿ ಮನೆಯಲ್ಲಿ ಹಿರಿಯರಿಗೆ ವಿಚಾರ ಮಾಡಿ ನಂತರ ನನ್ನ ಸ್ನೇಹಿತರಾದ ಸೈಯ್ಯದ ಸದ್ದಾಂ ಹುಸೇನ್ ತಂದೆ ಸೈಯ್ಯದ ದಸ್ತಗಿರ ಮತ್ತು ರೆಹಮಾನ ತಂದೆ ಅಹ್ಮೆದ ಮಸೂದ ಪರ್ವೆಜ ಇವರನ್ನು ಪೋನ ಮಾಡಿ ನಮ್ಮ ಮನೆಗೆ ಕರೆಯಿಸಿಕೊಂಡು ಅವರು ನಮ್ಮ ಮನೆಗೆ ಬಂದ ನಂತರ ನಾವು 03 ಜನರು ಕೂಡಿಕೊಂಡು ರೆಹಮಾನ ಇತನ ಕಾರಿನಲ್ಲಿ ಕುಳಿತುಕೊಂಡು  ಪೊಲೀಸ ಠಾಣೆಗೆ ಬಂದಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ ದಿನಾಂಕ 02/04/2018 ರಂದು ಶ್ರೀ ರಸೂಲ ಪಟೇಲ ತಂದೆ ಬಾಷಪಟೇಲ ಕೂಡಿ ಸಾಃ ಕೊಳ್ಳೂರ ಗ್ರಾಮ ತಾ.ಜಿಃ ಕಲಬುರಗಿ ರವರ ಮನೆಯವರೆಲ್ಲರು  ಊಟಕ್ಕೆ ಕುಳಿತು ಕೊಂಡಾಗ ಮೃತಳಾದ ಯಾಸ್ಮೀನ ಇವಳು ಮನೆಯಲ್ಲಿ ಸ್ಟೋ ಮೇಲೆ ಕಾಯಿಸಲು ಇಟ್ಟ ಹಾಲು ತೆಗೆದು ಕೊಳ್ಳಬೇಕೆಂದು ಮೇಲ್ಗಡೆ ಇರುವ ಗ್ಲಾಸ ತೆಗೆದುಕೊಳ್ಳಲು ಹೊದಾಗ ಉಟ್ಟ ಬಟ್ಟೆಗೆ ಬೆಂಕಿ ಹತ್ತಿದ್ದು, ಗಾಬರಿಯಲ್ಲಿ ಸ್ಟೋ ಮೇಲೆ ಬಿದ್ದಾಗ ಮೈಗೆ ಬೆಂಕಿ ಹತ್ತಿ ಮೈಯಲ್ಲಾ  ಸುಟ್ಟಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10/04/2018 ರಂದು 2.00 ಪಿ.ಎಮಕ್ಕೆ ಮೃತಪಟ್ಟಿರುತ್ತಾಳೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.