POLICE BHAVAN KALABURAGI

POLICE BHAVAN KALABURAGI

09 October 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದತ್ತಪ್ಪಾ ತಂದೆ ನಾಗಪ್ಪ ಅತನುರೇ ಸಾ:ಯಳಸಂಗಿ ತಾ:ಆಳಂದ ಜಿ:ಕಲಬುರಗಿ ಹಾ:ವ: ಖಾದ್ರಿ ಚೌಕ ಹತ್ತಿರ ಸಂತೋಷ ಕಾಲೋನಿ ಕ್ರಾಸ ಕಲಬುರಗಿ ರವರ ತಮ್ಮನಾದ ದಾನಪ್ಪಾ ತಂದೆ ನಾಗಪ್ಪ ಅತನೂರೇ ಇತನು ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ಈಗ 8 ತಿಂಗಳ ಹಿಂದೆ ನನ್ನ ತಮ್ಮನಾದ ದಾನಪ್ಪ ಇತನು ಪೊಲೀಸ ಸಿ.ಇ.ಟಿ ಪರೀಕ್ಷೆ ಕೊಚಿಂಗ ಕ್ಲಾಸಗೆ ಹೋಗುವ ಕುರಿತು ಕಲಬುರಗಿ ನಗರದ ಶಾಹಾ ಬಜಾರದಲ್ಲಿ ಇರುವ ಆರಾಧನಾ ಕಾಲೇಜ ಹತ್ತಿರ ಒಂದು ಬಾಡಿಗೆ ಕೋಣೆ ಮಾಡಿಕೊಂಡು ಇದ್ದನು ಆ ಕೋಣೆಯಲ್ಲಿ ನನ್ನ ತಮ್ಮ ಹಾಗು ನಮ್ಮ ಗ್ರಾಮದ ಸಿದ್ದಲಿಂಗಯ್ಯಾ ತಂದೆ ಸಿದ್ರಾಮಯ್ಯಾ ಮಠಪತಿ, ಮತ್ತು ಸಂದೀಫ ತಂದೆ ಗುಂಡು ಚವ್ಹಾಣ ಮು:ಮಾಡ್ಯಾಳ ತಾಂಡಾ 03 ಜನ ಇರುತ್ತಾರೆ. ನನ್ನ ತಮ್ಮ ಕಲಬುರಗಿ ನಗರದ ರಾಜ ಕೊಚಿಂಗ ಸೆಂಟರಕ್ಕೆ ದಿನಾಲು ಹೋಗಿ ಬರುವುದು ಮಾಡುತ್ತಿದ್ದನು. ಊಟಕ್ಕೆ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನು.ಈಗ 8 ದಿವಸಗಳ ಹಿಂದೆ ನಮ್ಮೂರಿನ ಪ್ರದೀಪ ತಂದೆ ಬಸವರಾಜ ಕಲಶೆಟ್ಟಿ ಇತನು ನಮ್ಮೂರಿನಿಂದ ಬಂದು ನಮ್ಮ ತಮ್ಮನ ರೂಮಿನಲ್ಲಿಯೇ ಇದ್ದನು. ದಿನಾಂಕ 05/10/2017 ರಂದು ಬೆಳಿಗ್ಗೆ ನಮ್ಮೂರ ಪ್ರದೀಪ ಕಲಶೆಟ್ಟಿ ಇತನು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಿನ್ನೆ ದಿನಾಂಕ 04/10/2017 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ನಿಮ್ಮ ತಮ್ಮನಾದ ದಾನಪ್ಪ ಇತನು ರಾಜ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ರೂಮಿಗೆ ಬಂದಿರುವುದಿಲ್ಲಾ. ನಿಮ್ಮ ಮನೆಗೆ ಅಥವಾ ಊರಿಗೆ ಬಂದಿದ್ದಾನೆ ಅಂತಾ ಕೇಳಿದನು ಆಗ ನಾನು ನಮ್ಮ ಮನೆಗೆ ಮತ್ತು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತೇನೆ ನಂತರ ನಮ್ಮ ತಮ್ಮನ ಮೋಬೈಲಿಗೆ ಪೋನ ಮಾಡಲಾಗಿ ಸ್ವೀಚ್ ಆಪ್ ಅಂತಾ ಬಂದಿರುತ್ತದೆ ದಿನಾಂಕ:- 05/10/2017 ರಿಂದ ನಿನ್ನೆ ದಿನಾಂಕ: 07/10/2017 ರವರೆಗೆ ನಮ್ಮ ಸಂಬಂದಿಕರ ಮನೆಗಳಲ್ಲಿ ಇತರೇ ಕಡೆಗಳಲ್ಲಿ ಹಾಗು ಆತನ ಗೆಳಯರಿಗೆ ಪೋನ ಮಾಡಿ ವಿಚಾರಿಸಲಾಗಿ ನಮ್ಮ ತಮ್ಮ ಎಲ್ಲಿಯೂ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ನಂತರ ದಿನಾಂಕ:- 07/10/2017 ರಂದು ಮದ್ಯಾಹ್ನ ನಾನು ಮತ್ತು ನನ್ನ ತಮ್ಮನಾದ ಈರಣ್ಣಾ ಕೂಡಿಕೊಂಡು ಕಲಬುರಗಿ ನಗರದ ಚೌಕ ಪೊಲೀಸ ಠಾಣೆಗೆ ಹೋಗಿ ನನ್ನ ತಮ್ಮ ದಾನಪ್ಪ ಅತನೂರೆ ಇತನು ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಗೆ ಶಹಾ ಬಜಾರದಲ್ಲಿರುವ ತನ್ನ ರೂಮಿನಿಂದ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೋದವನು  ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ ಅಂತಾ ಈ ಬಗ್ಗೆ ಕೇಸು ದಾಖಲು ಮಾಡಲು ಹೇಳಿರುತ್ತೇವೆ. ಚೌಕ ಪೊಲೀಸ ಠಾಣೆ ಪೊಲೀಸರು ನಿಮ್ಮ ತಮ್ಮನ ಭಾವಚಿತ್ರಗಳನ್ನು ತೆಗೆದುಕೊಂಡು ಬನ್ನಿರಿ ಅಂತಾ ಹೇಳಿದ್ದರಿಂದ್ದ ನಾವು ಮರಳಿ ಬಂದಿದ್ದು  ದಿನಾಂಕ:- 08/10/2017 ರಂದು ಮದ್ಯಾಹ್ನ ಚೌಕ ಪೊಲೀಸ ಠಾಣೆಗೆ ಹೋಗಬೇಕು ಅಂತಾ ಮನೆಯಲ್ಲಿದ್ದಾಗ ಯಾರೋ ಜನರು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಅಪರಿಚಿತ ಶವ ಬಿದ್ದಿರುತ್ತದೆ ಅಂತಾ ಮಾತನಾಡುತ್ತಿರುವುದು ಕೇಳಿ ನಾನು ಮತ್ತು ನಮ್ಮಗೆ ಪರಿಚಿಯದ ಶ್ರೀಶೈಲ್ ಮೇಲಶೆಟ್ಟಿ ಇಬ್ಬರು ಕೂಡಿಕೊಂಡು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಬಂದು ತೊಗರಿ ಹೋಲದಲ್ಲಿ ನೋಡಲಾಗಿ ಕೊಳೆತ ಸ್ಥಿತಿಯಲ್ಲಿ ಶವ ಬಿದಿದ್ದು ಸದರಿ ಶವದ ಮೈಮೇಲೆ ಇರುವ ಶರ್ಟ ಮತ್ತು ಬೆಲ್ಟ್ ಹಾಗು ಶವ ನೋಡಲಾಗಿ ಸದರಿ ಶವ ನಮ್ಮ ತಮ್ಮ ದಾನಪ್ಪ ಇತನೆದೇ ಇರುತ್ತದೆ ಅಂತಾ ಗುರ್ತಿಸಿರುತ್ತೇನೆ. ಆತನ ಹೊಟ್ಟೆಯ ಮೇಲಭಾಗದಲ್ಲಿ ಹಾಗು ತಲೆಗೆ ಇತರೇ ಕಡೆಗಳಲ್ಲಿ ಯಾವುದೋ ಹರಿತವಾದ ವಸ್ತುವಿನಿಂದ ಅಥವಾ ಭಾರವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ.          ನನ್ನ ತಮ್ಮನಾದ ದಾನಪ್ಪ ಇತನಿಗೆ ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಯಿಂದ ದಿನಾಂಕ:- 08/10/2017 ರಂದು ಮದ್ಯಾಹ್ನ 04:00 ಗಂಟೆಯ ಮದ್ಯದ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಯಾವುದೋ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವು ತೊಗರಿ ಹೋಲದಲ್ಲಿ ಬಿಸಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾರಣಾಂತಿಕ ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿದ ರೌಟಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 08-10-2017 ರಂದು ಬೆಳಿಗ್ಗೆ 04:00 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣಾ ಗುನ್ನೆ ನಂ:162/2016 ಕಲಂ 363, 323,506, 392 ಸಂಗಡ 34 ಐಪಿಸಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 46/2017 ಕಲಂ 143,147,323,504, 307 ಸಂಗಡ 149 ಐಪಿಸಿ, ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ ನಂ 82/2017 ಕಲಂ 143, 147, 148, 323, 324, 307, 504, 506 ಸಂ/ 149 ಐಪಿಸಿ ಮತ್ತು ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ: 55/2017 ಕಲಂ 143, 147, 148, 307, 324 ಐಪಿಸಿ ಹಾಗೂ ಈ ಪ್ರಸ್ತುತ ಅಶೋಕ ನಗರ ಗುನ್ನೆ ನಂ; 181/2017 ಕಲಂ 143,147,148,323,324, 307 ಸಂಗಡ 149 ಐಪಿಸಿ  ಮತ್ತು ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ 394 ಐಪಿಸಿ, 44/2017 ಕಲಂ 394 ಐಪಿಸಿ ನೆದ್ದರ ಪ್ರಕರಣದ ಆರೋಪಿತರಾದ 1]ಚೇತನ ತಂದೆ ಚಂದ್ರಕಾಂತ ಹೈಬತ್ತಿ 2] ಡೂಗ ಶಿವ್ಯಾ @ ಶಿವಕುಮಾರ ತಂದೆ ರಾಜು ಹೈಬತ್ತಿ ಇವರು ಕಲಬುರಗಿ ನಗರದ ರಿಂಗ್ ರೋಡ ಹತ್ತಿರ ಇರುವ ಡಬ್ರಾಬಾದ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಮೇಲಿನ ಆರೋಪಿತರು ಅರ್ಧ ಮರ್ಧ ಕಟ್ಟಿದ ಮನೆಯಲ್ಲಿ ವಾಸವಾಗಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಪ್ರಯುಕ್ತ ಪಿಐ ಅಶೋಕ ನಗರವರು ನನಗೆ ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬರುವಂತೆ ನಿರ್ದೇಶನದ ನೀಡಿದ ಪ್ರಯುಕ್ತ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ಪಿಐ ಅಶೋಕ ನಗರ ಮತ್ತು ಅವರ ಸಿಬ್ಬಂದಿಯವರು ಹಾಜರಿದ್ದು ಆರೋಪಿತರು ಇರುವಿಕೆಯ ಬಗ್ಗೆ ಪಿಐ ಅಶೋಕ ನಗರ ಠಾಣೆರವರು ನಮಗೆ ಮನವರಿಕೆ ಮಾಡಿಕೊಟ್ಟು ಬೆಳಿಗ್ಗೆ 05:00 ಗಂಟೆಗೆ ಠಾಣೆಯಿಂದ ಹೊರಟು 5:30 ಎಎಂಕ್ಕೆ ಡಬ್ರಾಬಾದ ಕ್ರಾಸಕ್ಕೆ ಹೋಗಿ ಎರಡು ತಂಡಗಳಾಗಿ ವಿಂಗಡಿಸಿ ಒಂದು ಮಾರ್ಗದಿಂದ ನಾನು ಮತ್ತು ಇನ್ನೊಂದು ಮಾರ್ಗದಿಂದ ಪಿಐ ಅಶೋಕ ನಗರರವರು ಹೋರಟೇವು, ನಾನು ಮತ್ತು ನಮ್ಮ ಸಿಬ್ಬಂದಿ ಆಶ್ರಯ ಕಾಲೋನಿಯಲ್ಲಿ ಆರೋಪಿತರ ಬಗ್ಗೆ ಹುಡುಕಾಡಲಾಗಿ ಸುಮಾರು 7 ಎಎಂಕ್ಕೆ ನಮ್ಮ ಜೀಪು ರೈಲ್ವೆ ಟ್ರ್ಯಾಕ ಬಳಿ ಇರುವ ಆಶ್ರಯ ಕಾಲೋನಿಯ ಒಂದು ಮನೆಯ ಹತ್ತಿರ ನಿಂತಾಗ ಶಿವುಕುಮಾರ @ ಡೂಗಶಿವ್ಯಾ@ಸೈಂಟಿಸ್ಟ್ ತಂದೆ ರಾಜು ಹೈಬತ್ತಿ ಈತನು ಮನೆಯ ಬಲಕ್ಕೆ ಇರುವ ರಸ್ತೆಯಿಂದ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಕುರಿತು ತನ್ನ ಕೈಯಲ್ಲಿರುವ ಮಚ್ಚಿನಿಂದ ನಾನು ಕುಳಿತಿರುವ ಭಾಗದ ಕಡೆಗೆ ಜೀಪಿನ ಮುಂಭಾಗದ ಗ್ಲಾಸಿಗೆ ಬಿಸಿ ಹೊಡೆದಿದ್ದರಿಂದ ಅದರ ರಭಸಕ್ಕೆ ಗ್ಲಾಸ್ ಒಡೆದು ಮಚ್ಚಿನ ಏಟು ನನ್ನ ಎಡಗೈಗೆ ಬಡೆದು ಗಾಯವಾಗಿದ್ದರಿಂದ ನಾನು ಜೀಪಿನ ಬಾಗೀಲು ತೆಗೆದು ಸರ್ವಿಸ ಪಿಸ್ತೂಲದೊಂದಿಗೆ ಕೆಳಗೆ ಇಳಿದು ಅವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ಜೋರಾಗಿ ತಿಳಿಸಿದರು ಸಹ ಅವನು ನನಗೆ ನೂಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಆಗ ನಾನು ಅವನಿಗೆ ಶರಣಾಗು ಎಂದು ಎಚ್ಚರಿಕೆ ನೀಡಿದರೂ ಸಹ ಅವನು ನಿಲ್ಲದಿದ್ದಾಗ ನನ್ನ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದೆನು. ಆದರೂ ಅವನು ನಿಲ್ಲದೆ ಓಡಿ ಹೋಗಲು ಪ್ರಯತ್ನಿಸಿದ ಆಗ ನಾನು ಅವನನ್ನು ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಅವನ ಎಡಗಾಲಿಗೆ ಎರಡು ಸುತ್ತು ಗುಂಡು ಹೊಡೆದು ಅವನನ್ನು ವಶಕ್ಕೆ ಪಡೆದುಕೊಂಡಿರುತ್ತೇನೆ, ಅದೇ ಕಾಲಕ್ಕೆ ಆಶ್ರಯ ಕಾಲೋನಿಯ ಎಡಗಡೆ ರಸ್ತೆಯಿಂದ ಪಿಐ ಅಶೋಕ ನಗರ ಮತ್ತು ಅವರ ತಂಡ ಬಂದಿದ್ದು ಅವರು ಬರುವಾಗ ಚೇತನ ಈತನು ಮನೆಯಿಂದ ಹೊರಬಂದು ಸಿಪಿಸಿ ಪ್ರಹ್ಲಾದ ಕುಲಕರ್ಣಿ ಅವರ ಮೇಲೆ ಲಾಂಗ್(ತಲವಾರ) ಬಿಸಿ ಆತನ ಎಡಗೈಗೆ ಹೊಡೆದು ಮಾರಣಾಂತಿಕವಾಗಿ ಭಾರಿ ರಕ್ತಗಾಯ ಪಡಿಸಿ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಪಿಐ ಅಶೋಕ ನಗರರವರು ಸದರಿಯವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ತಿಳಿಸಿದರೂ ಸಹ ಕಿಮ್ಮತ್ತು ಕೊಡದೇ ಆರೋಪಿತನು ತಪ್ಪಿಸಿಕೊಳ್ಳಲು ಮುಂದಾದಾಗ ಅವನ ಮೇಲೆ ತಮ್ಮ ಸರ್ವಿಸ ಪಿಸ್ತೂಲದಿಂದ ಚೇತನ ಇತನ ಬಲಗಾಲಿಗೆ ಎರಡು ಗುಂಡು ಹೊಡೆದು ವಶಕ್ಕೆ ಪಡೆದುಕೊಂಡು  ನಾವು ಸಕರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ಪ್ರಹ್ಲಾದ ಕುಲಕರ್ಣಿ ಪಿಸಿ ಮೇಲೆ ಹಲ್ಲೆ ಮಾಡಿದ ಆರೋಪಿತರಾದ ಶಿವುಕುಮಾರ@ ಡೂಗಶಿವ್ಯಾ@ಸೈಂಟಿಸ್ಟ್ ಹೈಬತ್ತಿ ಮತ್ತು ಚೇತನ ಹೈಬತ್ತಿ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಶ್ರೀಮತಿ ಅಕ್ಕಮಾಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಮ ಪ್ರಭು ತಂದೆ ಕರಿಘೋಳೆಪ್ಪ ಸಾ: ತೊನಸನಳ್ಳಿ (ಎಸ್ ) ಇವರು ತೊನಸನಹಳ್ಳಿ ಗ್ರಾಮದಲ್ಲಿ ಈಗ್ಗೆ ಸುಮಾರು 6-7 ವರ್ಷಗಳಿಂದ ಶ್ರೀ  ಸಾಯಿ ಎಂಬ ಹೆಸರಿನ ಮೇಲೆ ಫೈನಾನ್ಸ ನಡೆಸಿಕೊಂಡು ಬಂದಿದ್ದು ಅದಕ್ಕೆ ಮ್ಯಾನೆಜರ ಅಂತಾ ನಮ್ಮೂರಿನ ಶ್ರೀಶೈಲ ತಂದೆ ಶರಣಪ್ಪಾ ರಾಮಶೆಟ್ಟಿ ಇವರು ನಿರ್ವಹಿಸಿಕೊಂಡು ಬಂದಿರುತ್ತಾರೆ.  ದಿನಾಂಕ 06/10/2017 ರಂದು ಎಂದಿನಂತೆ ಬೆಳಗ್ಗೆ  10.00 ಗಂಟೆಗೆ ಶ್ರೀಶೈಲ ಇತನು ಫೈನಾನ್ಸಕೆ ಹೋಗಿ ಹಣ ಸಂಗ್ರಹ ಮಾಡಿಕೊಂಡು ರಾತ್ರಿ 8.30 ಪಿ ಎಂ ಕ್ಕೆ ಫೈನಾನ್ಸ ಲೆಕ್ಕ ಪತ್ರಗಳನ್ನು ಮುಗಿಸಿ ಫೈನಾನ್ಸದ ಅಲಮಾರದಲ್ಲಿ ನಗದು ಹಣ-75,000/- ರೂ, ಇಟ್ಟು  ಬಾಗಿಲು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದರು. ದಿನಾಂಕ 07/10/2017 ರಂದು ಬೆಳಗ್ಗೆ 10.00 ಗಂಟೆಗೆ ಎಂದಿನಂತೆ ಶ್ರೀಶೈಲ ಇವರು ಫೈನಾನ್ಸಗೆ ಬಂದು ನೋಡಿದಾಗ ರಾತ್ರಿ ವೇಳೆ ಯಾರೋ ಕಳ್ಳರು ಫೈನಾನ್ಸದ ಬಾಗಿಲ ಕೀಲಿ ಮುರಿದು  ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಪೋನಮಾಡಿ ತಿಳಿಸಿದರಿಂದ ನಾನು & ಶಿವಕುಮಾರ ತಂದೆ ಶಂಕ್ರೆಪ್ಪಾ ಕಟ್ಟಿಮನಿ , ಸಿದ್ದಪ್ಪಾ ತಂ ಬರಗಾಲ ಸಿದ್ದ ಪೂಜಾರಿ ಹಾಗೂ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಕೂಡಿ ಎಲ್ಲರೂ ಕೂಡಿ ಫೈನಾನ್ಸಗೆ ಬಂದು ನೋಡಲಾಗಿ ಅಲ್ಲಿಯೇ ಇದ್ದ ಶ್ರೀಶೈಲ ತಿಳಿಸಿದ್ದೇನೆಂದರೆ, ನಾನು ನಿನ್ನೆ ಹಣ ಸಂಗ್ರಹ ಮಾಡಿದ 75,000/- ರೂ ಅಲಮಾರದಲ್ಲಿ ಇಟ್ಟಿರುತ್ತೇನೆ ಅಂತಾ ತಿಳಿಸಿದ್ದು, ಎಲ್ಲರೂ ಕೂಡಿ ಒಳಗೆ ಹೋಗಿ ನೋಡಿದಾಗ ಫೈನಾನ್ಸದಲ್ಲಿದ್ದ ಅಲಮಾರಿ ಮುರಿದು ಅದರಲ್ಲಿದ್ದ ನಗದು ಹಣ 75,000/- ರೂ ಹಾಗೂ ರೂಮಿನಲ್ಲಿದ್ದ 1] ಒಂದು ಮಾನಿಟರ ಮತ್ತು ಹಾರ್ಡ ಡಿಸ್ಕ (ಸಿ.ಸಿ. ಟಿ.ವಿಗೆ ಸಂಬಂಧಿಸಿದ್ದು) ಅ.ಕಿ 5000/-ಒಂದು 2] ಇನ್ವಟರ ಅ.ಕಿ 1000/-, 3] ಇನ ಕೇಬಲ ಸೆಟ್ ಆಫ್ ಬಾಕ್ಸ ಅ.ಕಿ 600/- ಹಾಗೂ 4] ಫೈನಾನ್ಸದಲ್ಲಿ ಅಳವಡಿಸಿದ 3 ಸಿಸಿ ಕ್ಯಾಮೆರಾಗಳು ಅ ಕಿ 5,000 / ಹಾಗೂ ಸಿಸಿ ಟಿ.ವಿ ಅಳವಡಿಸಿದ ಎಲ್ಲಾ ಕೇಬಲ ವೈರಗಳನ್ನು ಕತ್ತರಿಸಿ ಲುಕ್ಸಾನ ಮಾಡಿರುತ್ತಾರೆ.  ಹೀಗೆ ಒಟ್ಟು 86,600/- ರೂ. ವಸ್ತಗಳು ಹಾಗೂ ನಗದು  ಹಣ ರಾತ್ರಿ ವೇಳೆ ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 October 2017

KALABURAGI DISTRICT REPORTED CRIMES

ಅತ್ಯಾಚಾರ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ರವರ ಅಕ್ಕಳಿಗೆ ಸುಂಬಡ ಗ್ರಾಮದ ಸುಬ್ಬಣ್ಣ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು .ಈಗ 8-10 ದಿವಗಳ ಹಿಂದೆ ನಾನು ಸುಂಬಡ ಗ್ರಾಮಕ್ಕೆ ನಮ್ಮ ಅಕ್ಕನ ಹತ್ತಿರ ಬಂದಿದ್ದು ಇರುತ್ತದೆ. ದಿನಾಂಕ: 30-09-17 ರಂದು 1 ಪಿ.ಎಂ ಸುಮಾರಿಗೆ ನಾನು ಬಟ್ಟೆ ಒಗೆಯಲು ಸುಂಬಡ ಗ್ರಾಮದ ಹತ್ತಿರ ಇದ್ದ ಕೆನಾಲಿಗೆ ನಾನೊಬ್ಬಳೆ ಹೋಗಿದ್ದು ಇರುತ್ತದೆ . ಆ ಸ್ಥಳದಲ್ಲಿ ಯಾರು ಇರಲಿಲ್ಲ. ನಂತರ ಅದೆ ಸಮಯಕ್ಕೆ ಸುಂಬಡ ಗ್ರಾಮದ ಶರಣಪ್ಪ ತಂ ಪರಮಾನಂದ ಹಳ್ಳಿ ರವರು ನನ್ನ ಹತ್ತಿರ ಬಂದು ನನ್ನ ಬಾಯಿ ಒತ್ತಿ ಹಿಡಿದು ಅಲ್ಲೆ ಬಾಜು ಬಸವರಾಜ ಕಂಡೋಳಿ ರವರ ಹೊಲದಲ್ಲಿ ಎಳೆದುಕೊಂಡು ಹೋದನು ನಂತರ ಶರಣಪ್ಪ ಇತನು ನಾನು ಒದ್ದಾಡುತ್ತಿದ್ದಾಗ ನನಗೆ ಅವಾಜ ಮಾಡಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅಂಜಿಸಿ ನನ್ನ ಬಟ್ಟೆ ಕಳೆದು ಜಭರಿ ಸಂಭೊಗ ಮಾಡಿದನು. ಈ ಬಗ್ಗೆ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಅಂದು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಮಲ್ಲಿಕಾರ್ಜುನ ತಂದೆ ಶಂಕರೆಪ್ಪ ಬಿರಾದಾರ ಸಾ : ಬೋದನ ಇವರು ದಿನಾಂಕ : 05-10-2017 ರಂದು ನಮ್ಮ ಗ್ರಾಮದಲ್ಲಿ ಅಂಬಾಭವಾನಿ ದೇವಿಯ ಜಾತ್ರ ಪ್ರಯುಕ್ರ ಗ್ರಾಮದಲ್ಲಿ ದೇವಿ ಮೂರ್ತಿಯ ಮೆವರಣಿಗೆ ನಡೆಯುತ್ತಿದ್ದಾಗ ರಾತ್ರಿ ನಮ್ಮ ಗ್ರಾಮದಲ್ಲಿ ಹಿರೋಡ್ಯಾ ಕಟ್ಟೆಯ ಹತ್ತಿರ ಹೋಗುತ್ತಿರುವಾಗ ಮೆರವಣಿಗೆಯಲ್ಲಿ ಕೆಲವು ಹುಡಗರು ಕುಣಿಯುವ ವಿಷಯವಾಗಿ ಅವರವರಲ್ಲಿ ವಾದವಿವಾದ ಮಾಡುತ್ತಿದ್ದು ಆ ಸಮಯದಲ್ಲಿ ನನ್ನ ಅಕ್ಕನ ಮಗನಾದ ಶ್ರೀಶೈಲ್ ತಂದೆ ಸುರಜ್ ವಾರದ್ ಇತನಿಗೆ ನೀನು ಆ ಕಡೆಗೆ ಹೋಗಬೇಡವೆಂದು ಅವನ ಕೈ ಹಿಡಿದು ಬಾ ಎಂದು ಹೇಳುವಷ್ಟರಲ್ಲಿಯೇ ನಮ್ಮ ಗ್ರಾಮದ ಪರಮೇಶ್ವರ ತಂದೆ ಶಂಕರೆಪ್ಪ ವಾರದ್ ಮತ್ತು ಅವನ ಮಕ್ಕಳಾದ ಮಲ್ಲಿನಾಥ ತಂದೆ ಪರಮೇಶ್ವರ ವಾರದ್ ಲಕ್ಷ್ಮೀಪುತ್ರ ತಂದೆ ಪರಮೇಶ್ವರ ವಾರದ್ ಮತ್ತು ಬಸವರಾಜ ತಂದೆ ಪರಮೇಶ್ವರ ವಾರದ್ ರವರುಗಳು ಕೂಡಿಕೊಂಡು ಬಂದು ಅವರಲ್ಲಿ ಪರಮೇಶ್ವರನು ಕೈಮುಷ್ಠಿಮಾಡಿ ನನ್ನ ಹೊಟ್ಟೆಗೆ ಮತ್ತು ಎದೆಯ ಭಾಗಕ್ಕೆ ಗುದ್ದುತ್ತಿರುವಾಗ ಅವನ ಮೂರುಜನ ಮಕ್ಕಳಾದ ಮಲ್ಲಿನಾಥ, ಲಕ್ಷ್ಮೀಪುತ್ರ , ಬಸವರಾಜ ರವರುಗಳು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದಿಯುತ್ತಾ ಕೈಯಿಂದಲು ಹೊಡೆಬಡೆ ಮಾಡುತ್ತಿದ್ದರು. ಪರಮೇಶ್ವರನು ಕಲ್ಲಿನಿಂದ ನನ್ನ ಹಣೆಯ ಮೇಲ್ಭಾಗದ ತಲಗೆ ಹೊಡೆದು ರಕ್ತಗಾಯ ಪಡಿಸಿದನು ಮಲ್ಲಿನಾಥನು ನನ್ನ ಕೊರಳ್ಳಿ ಇರುವ ಲಿಂಗದಕಾಯಿ ದಾರಹಿಡಿದು ಜೊಗ್ಗಿದ್ದರಿಂದ ನನ್ನ ಕುತ್ತಿಗೆಯ ಹಿಂಭಾಗಕ್ಕೆ ಕಂದು ಗಟ್ಟಿದಂತಾಗಿ ಅಲ್ಲದೇ ಹೆಡಕು ನೋವು ಆಗಿರುತ್ತದೆ. ಅಸ್ಟರಲ್ಲಿ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಗಣಪತಿ ತಂದೆ ಶರಣಪ್ಪ ಕಾಂದೆ ಹಣಮಂತರಾಯ ತಂದೆ ಮಲ್ಲಪ್ಪ ಸತ್ಯಾಣಿ ಮತ್ತು ಕಾಸಿನಾಥ ತಂದೆ ಶರಣಪ್ಪ ಬಂಗಿ ರವರುಗಳು ಜಗಳ ನೋಡಿ ನಂತರ ನಾಲ್ಕು ಜನ ಸೇರಿ ಮಗನೇ ಊರಲ್ಲಿ ನಿಂದು ಬಹಳ ನಡದಾದ ಬೋಸಡಿಕೆ ನಿನಗೆ ಖಲಾಸ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05-10-2017 ರಂದು ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಡಬರಬಾದ ಕ್ರಾಸ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ  ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್‌ಐ ರಾಘವೆಂದ್ರ ನಗರ ಪೊಲೀಸ್‌ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇವರದಾಸಿಮಯ್ಯ ಬಡಾವಣೆಯ ಒಳಗಡೆಯಿಂದ ಹೋಗಿ ಒಂದು ಸಿಮೆಂಟ ಅಂಗಡಿಯ ಮರೆಯಲ್ಲಿ ನಿಂತು ನೋಡಲು ಡಬರಬಾದ ಕ್ರಾಸ್‌ನಿಂದ ರಿಂಗ್‌ ರೋಡಿನ ಪಕ್ಕದಲ್ಲಿ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಮಟಕಾ ನಂಬರಕ್ಕೆ ಒಂದು ರೂ ಗೆ 80 ರೂ ಕೊಡುತ್ತೇವೆ ಅಂತಾ ಹೇಳುತ್ತಾ  ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು, ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದಿದ್ದು ಜನರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲು 1)ಮಹ್ಮದ ಅಜೀಮ ತಂದೆ ಮಹ್ಮದ ಇಬ್ರಾಹಿಂ ಸಾ:ಜಾಮೀಯಾ ಮಜೀದ ಹತ್ತಿರ ಮೌಲಾಲಿ ಕಟ್ಟಾ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1840=00 ರೂ ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು.2)ಸೈಯದ ದಾವುದ ತಂದೆ ಸೈಯದ ನೂರ ಮಹ್ಮದ ಸಾ:ಸಿ.ಐ.ಬಿ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ 1500/-ರೂ ಒಂದು ಮಟಕಾ ಚೀಟಿ ಒಂದು ಬಾಲಪೆನ್ನು ಸಿಕ್ಕಿದ್ದು, ಒಟ್ಟು ಹೀಗೆ ನಗದು ಹಣ 3340/-ರೂಗಳು, ಎರಡು ಮಟಕಾ ಚೀಟಿಗಳು ಎರಡು ಬಾಲಪೆನ್‌ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಉಮೇಶ ತಂದೆ ಖೀರು ರಾಠೋಡ ಸಾ|| ಯಡ್ರಾಮಿ ತಾಂಡಾ ರವರು ಗೌರಮ್ಮ ಮುಳ್ಳೊಳ್ಳಿ ರವರ ಹೊಲ ಪಾಲಿಗೆ ಮಾಡಿದ್ದು ದಿನಾಂಕ 05-10-2017 ರಂದು ನಮ್ಮ ಅಕ್ಕ ಲೀಲಾಬಾಯಿ ಗಂಡ ಉಮೇಶ ಪವಾರ ಇವರು ಮನೆಗೆ ಬಂದು ನನ್ನ ಮುಂದೆ ಹೇಳಿದ್ದೇನೆಂದರೆ, ಮದ್ಯಾಹ್ನ ನಾನು ಹೊಲದಲ್ಲಿ ಇದ್ದಾಗ ನಮ್ಮೂರ ಸುನೀಲ ತಂದೆ ಮಲ್ಲಿನಾಥ ಯಲಗೋಡ, ಅನೀಲ ತಂದೆ ಮಲ್ಲಿನಾಥ ಯಲಗೋಡ ರವರು ತಮ್ಮು ಎಮ್ಮೆಗಳನ್ನು ನಾವು ಪಾಲಿಗೆ ಮಾಡಿದ ಹೊಲದಲ್ಲಿ ಬಿಟ್ಟಿದ್ದರು, ನಂತರ ನಾನು ನೋಡಿ ಅವರಿಗೆ ನಿಮ್ಮು ಎಮ್ಮೆಗಳನ್ನು ಹೊಡೆದುಕೊಂಡು ಹೋಗರಿ ಅಂತಾ ಅಂದಾಗ ನನ್ನೊಂದಿಗೆ ತಕರಾರು ಮಾಡಿಕೊಂಡಿರುತ್ತಾರೆ ಅಂತಾ ಹೇಳಿದ್ದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಬಾಬು ತಂದೆ ದಿಲೀಪ ಜಾಧವ ಹಾಗು ನಮ್ಮ ಅಕ್ಕ ಲೀಲಾಬಾಯಿ ರವರು ಕೂಡಿ ಹೋಗುತ್ತಿದ್ದಾಗ ಸಿಂಡಿಕೇಟ ಬ್ಯಾಂಕ ಹತ್ತಿರ ನಮ್ಮೂರ 1] ಆನಂದ ತಂದೆ ಬಸಣ್ಣ ಕುಸ್ತಿ, 2] ರಗು ತಂದೆ ಬಸಣ್ಣ ಕುಸ್ತಿ, 3] ರಮೇಶ ತಂದೆ ಯಂಕಪ್ಪ, 4] ಸುನೀಲ ತಂದೆ ಮಲ್ಲಿನಾಥ ಯಲಗೋಡ, 5] ಅನೀಲ ತಂದೆ ಮಲ್ಲಿನಾಥ ಯಲಗೋಡ, 6] ಈಸು ತಂದೆ ಸೂರ್ಯಕಾಂತ, 7] ದಿನೇಶ ತಂದೆ ಶಿವಕಾಂತ, 8] ಗಣೇಶ ತಂದೆ ಶಿವಕಾಂತ, 9] ಅಂಬರೀಶ ತಂದೆ ಬಸಣ್ಣ, 10] ಶಿವಕಾಂತ ತಂದೆ ಯಂಕಪ್ಪ, 11] ಅವಿನಾಶ ತಂದೆ ಶಿವಕಾಂತ, 12] ಜಗು ತಂದೆ ಸಿದ್ದು, 13] ಸಂತೋಷ ತಂದೆ ಚಂದ್ರಕಾಂತ ಕುಸ್ತಿ  ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿದರು, ನಂತರ ಆನಂದ ಕುಸ್ತಿ ಈತನು ನಮಗೆ ಏ ಸೂಳಿ ಮಕ್ಕಳ್ಯಾ ಹೊಲದಲ್ಲಿ ನಮ್ಮೊಂದಿಗೆ ತಕರಾರು ಮಾಡಿಕೊಂಡು ನಮ್ಮ ಮೇಲೆ ಕೇಸ ಮಾಡಲಾಕ ಹೊಂಟೀರಿ ಅಂತಾ ಅಂದು ಅಲ್ಲೆ ಬಿದ್ದಿದ ಕಲ್ಲನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಮೇಲೆ ಹೊಡೆದನು, ನಂತರ ರಗು ಈತನು ನನ್ನ ಮುಖಕ್ಕೆ ಮುಷ್ಠಿ ಮಾಡಿ ಹೊಡೆದನು, ರಮೇಶ, ಸುನೀಲ, ಅನೀಲ ರವರು ಕೈಯಿಂದ ನನ್ನ ತಲೆಗೆ ಮುಖಕ್ಕೆ ಎದೆಗೆ ಹೊಡೆ ಬಡೆ ಮಾಡಿರುತ್ತಾರೆ, ಆಗ ನಮ್ಮ ಮಾವ ಬಾಬು ಜಾಧವ ರವರು ಬಿಡಿಸಲು ಬಂದಾಗ ಅವರಿಗೆ ಈಸು, ದಿನೇಶ ಇವರು ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ, ನಂತರ ಗಣೇಶ ಮತ್ತು ಅಂಬರೀಶ ರವರು ನಮ್ಮ ಅಕ್ಕಳಿಗೆ ಕೈ ಹಿಡಿದು ಎಳೆದಾಡಿ ಈ ರಂಡಿಗಿ ಹಾಕಿ ಹೊಡಿರೋ ಅಂತಾ ಅಂದರು, ನಂತರ ಶಿವಕಾಂತ, ಅವಿನಾಶ, ಜಗು, ಸಂತೋಷ ರವರು ಇವತ್ತ ಈ ಸೂಳಿ ಮಕ್ಕಳಗಿ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅಂದು ಕೈಯಿಂದ ಕಾಲಿನಿಂದ ನನ್ನ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.