POLICE BHAVAN KALABURAGI

POLICE BHAVAN KALABURAGI

10 January 2017

Kalaburagi District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ದೊಡ್ಡ ಹುಸೇನಪ್ಪ ತಂದೆ ಯಂಕಪ್ಪಾ ಬ್ಯಾಡರ್ ಸಾ: ಕೋನಾಪೂರ ತಾ: ಸೇಡಂ ಇವರ ತಮ್ಮ ಹುಸೇನಪ್ಪ ಇತನಿಗೆ ಈಗ 3 ವರ್ಷಗಳ ಹಿಂದೆ ಶಾಂತಮ್ಮ ಇವಳೊಂದಿಗೆ ಮದುವೆ ಮಾಡಿದ್ದು, ಇತನಿಗೆ 10 ತಿಂಗಳ ಒಂದು ಗಂಡು ಇರುತ್ತದೆ. ನಮ್ಮ ತಮ್ಮ ಸಣ್ಣ ಹುಸೇನಪ್ಪ ಇತನು ನಮ್ಮೂರ ಈರಪ್ಪ ತಂದೆ ನರಸಪ್ಪ ಮದ್ದೇಲಬೀಡ ಇತನ ಹೆಂಡತಿಯಾದ ಮೊಗಲಮ್ಮ ಇವಳೊಂದಿಗೆ ಅಕ್ರಮ ಸಂಬಂದ ಇಟ್ಟಿಕೊಂಡಿದ್ದು, ಈ ವಿಷಯವು ಈಗ ಕೆಲ ದಿನಗಳ ಹಿಂದೆ ಮೊಗಲಮ್ಮನ ಗಂಡನಾದ ಈರಪ್ಪನಿಗೆ ತಿಳಿದಿದ್ದು ದಿನಾಂಕ: 04-01-2017 ರ ಬುಧವಾರದಂದು ಮುಂಜಾನೆ ನಮ್ಮ ತಮ್ಮನಾದ ಸಣ್ಣ ಹುಸೇನಪ್ಪ ತಂದೆ ಯಂಕಪ್ಪ ಇತನು ಮನೆಯಿಂದ ಹೊರಗಡೆ ಹೋಗಿದ್ದು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ. ಆಗ ನಾನು ಮತ್ತು ನಮ್ಮ ತಂದೆ ಯಂಕಪ್ಪ ಹಾಗು ತಾಯಿ ಕಾಶಮ್ಮ ಮತ್ತು ನಮ್ಮ ತಮ್ಮನ ಹೆಂಡತಿಯಾದ ಶಾಂತಮ್ಮ ಎಲ್ಲರೂ ಕೂಡಿ ನಮ್ಮ ತಮ್ಮನಿಗೆ ಊರಲ್ಲಿ ಹುಡುಕಾಡುತ್ತಿದ್ದಾಗ ತಿಳಿದು ಬಂದಿದೆನೆಂದರೆ, ನಮ್ಮ ತಮ್ಮ ಅಲ್ಲೇ ಊರ ಹತ್ತಿರ ಇರುವ ದತ್ತು ಇಳಿಗೇರ ಇವರ ಶೆಂಗಾದ ಹೊಲದಲ್ಲಿ ಬಿದ್ದಿರುತ್ತಾನೆ ಅಂತಾ ನಮ್ಮ ತಮ್ಮನ ಜೋತೆ ಅಕ್ರಮ ಸಂಬಂದ ಹೊಂದಿರುವ ಮೊಗಲಮ್ಮ ಇವಳು ಊರಲ್ಲಿ ಯಾಮರೆಡ್ಡಿ ಕಬ್ಬಲಿಗೇರ ಇತನ ಮುಂದೆ ತಿಳಿಸಿದ ಬಗ್ಗೆ ಗೊತ್ತಾಗಿ ನಾವು ರಾತ್ರಿ ಸದರಿ ದತ್ತು ಇಳಿಗೇರ ಇವರ ಹೊಲದಲ್ಲಿ ಹೋಗಿ ನೋಡಲಾಗಿ ಅಲ್ಲಿ ನಮ್ಮ ತಮ್ಮ ಕಾಣಿಸಲಿಲ್ಲಾ. ನಂತರ ನಾವು ರಾತ್ರಿ 08-09 ಗಂಟೆ ಸುಮಾರಿಗೆ ಸದರಿ ಮೊಗಲಮ್ಮ ಇವಳ ಮನೆಗೆ ಹೋಗಿ ವಿಚಾರಿಸಲು ಅವಳು ನಾನು ನಿಮ್ಮ ತಮ್ಮನಿಗೆ ನೋಡಿರುವದಿಲ್ಲಾ ಅಂತಾ ಹೇಳಿ ಮನೆಯಲ್ಲಿ ಹೋದಳು, ನಾವು ರಾತ್ರಿ ಎಲ್ಲಾ ನಮ್ಮೂರ ಸೂತ್ತ ಮುತ್ತಲ ಹೋಲಗಳಲ್ಲಿ ತಿರುಗಾಡಿ ನಮ್ಮ ತಮ್ಮನಿಗೆ ಹೂಡುಕಾಡಲು ಸಿಕ್ಕಿರುವದಿಲ್ಲಾ. ನಂತರ ನಾವು ನಮ್ಮ ಸಂಬಂದಿಕರಲ್ಲಿ ಎಲ್ಲಾ ಕಡೆ ಹುಡುಕಾಡಿದರು ನಮ್ಮ ತಮ್ಮ ಸಿಕ್ಕಿರುವದಿಲ್ಲಾ.  ದಿನಾಂಕ: 09-01-2017 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನು ನಮ್ಮೂರ ನಮ್ಮ ಮಾವನಾದ ಶ್ರೀನಿವಾಸ ತಂದೆ ಲಕ್ಷ್ಮಣ ಬ್ಯಾಡರ್ ಇವರ ಅಂಗಡಿಯ ಹತ್ತಿರ ಇದ್ದಾಗ ನಮ್ಮೂರ ರಾಜಪ್ಪ ತಂದೆ ರಾಮಪ್ಪ ಕಬ್ಬಲಿಗೇರ ಇತನು ನಮ್ಮ ಮಾವನದ ಶ್ರೀನಿವಾಸ ಇತನಿಗೆ ಫೋನ ಮಾಡಿ ನಿಮ್ಮ ಅಳಿಯ ಸಣ್ಣ ಹುಸೇನಪ್ಪ ಇತನು ನಮ್ಮೂರ ರಾಮದೇವರ ಹಳ್ಳದಲ್ಲಿ ಸತ್ತು ಬಿದ್ದಿರುತ್ತಾನೆ. ಅಂತಾ ತಿಳಿಸಿದ್ದು ತಕ್ಷಣ ನಾನು ಹಾಗು ನಮ್ಮ ತಂದೆ-ತಾಯಿ ಇತರೆ ಎಲ್ಲರೂ ಕೂಡಿ ನಮ್ಮೂರ ಶಿವಪ್ಪ ಅಂಬಟ್ಟಿ ಇವರ ಹೊಲದ ಹತ್ತಿರ ಇರುವ ಸಣ್ಣದಾದ ರಾಮದೇವರ ಹಳ್ಳದ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಹಳ್ಳದಲ್ಲಿ  ನಮ್ಮ ತಮ್ಮನ ಶವ ಬಿದ್ದು ಸದರಿ ಹಳ್ಳದಲ್ಲಿ ಸುಮಾರು 1 ಅಡಿಯಷ್ಟು ನೀರಿದ್ದು ಹೇಣವು ಅಂಗಾತವಾಗಿ ತೆಲುತ್ತಿದ್ದು, ಕೈಯು ದಡದ ಮೇಲೆ ಬಿದಿದ್ದು ಇರುತ್ತದೆ. ಸದರಿ ನಮ್ಮ ತಮ್ಮನ ಮೃತ ದೇಹವು ಉಬ್ಬಿ ಪೂರ್ತಿಯಾಗಿ ಕೊಳೆತು ವಾಸನೆ ಬರುತ್ತಿದ್ದು, ಇತನ ಬಾಯಿಯಿಂದ, ಮೂಗಿನಿಂದ ರಕ್ತಬಂದತ್ತೆ ಕಂಡು ಬಂದಿರುತ್ತದೆ.       ನಮ್ಮ ತಮ್ಮ ಸಣ್ಣ ಹುಸೇನಪ್ಪ ತಂದೆ ಯಂಕಪ್ಪ ಇತನು ನಮ್ಮೂರ ಈರಪ್ಪ ಇತನ ಹೆಂಡತಿಯ ಜೋತೆ ಅನೈತಿಕ ಸಂಬಂದವನ್ನು ಹೊಂದಿದ್ದರಿಂದ ನಮ್ಮ ತಮ್ಮನಿಗೆ ಅದೇ ವೈಮನಸ್ಸಿನಿಂದ ಸದರಿ ಈರಪ್ಪ ತಂದೆ ನರಸಪ್ಪ ಮದ್ದೇಲಬೀಡ ಜಾ: ಕಬ್ಬಲಿಗೇರ ಇತನು ಈಗ 3-4 ದಿನಗಳ ಹಿಂದೆ ಯಾವುದೊ ಒಂದು ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿ ಹಳ್ಳದ ದಂಡೆಯಲ್ಲಿ ಹಾಕಿದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ: 31-12-2016 ರಂದು ಕೊಂಕನಳ್ಳಿ ಗ್ರಾಮದಲ್ಲಿ ನಮ್ಮ ಅಜ್ಜಿಯು ಮೃತಪಟ್ಟಿದ್ದರಿಂದ ನಾನು ಮತ್ತು ನಮ್ಮ ತಮ್ಮನಾದ ಸುರೇಶ ತಂದೆ ಯಂಕಪ್ಪ ಇಬ್ಬರೂ ಕೂಡಿ ಅಂತ್ಯಸಂಸ್ಕಾರ ಕುರಿತು ಕೊಂಕನಳ್ಳಿ ಗ್ರಾಮಕ್ಕೆ ಹೋಗಿ, ಅಂತ್ಯಸಂಸ್ಕಾರ ಮುಗಿಸಿಕೊಂಡು ನಂತರ ವಾಪಸ್ ಮೊಟಾರು ಸೈಕಲ್ ನಂ ಕೆಎ 32 ಇಸಿ-9720 ನೇದ್ದರ ಮೇಲೆ ಕುಳಿತು ಕಲಬುರಗಿ-ಸೇಡಂ ರೋಡಿನ ಮೇಲೆ ದಿನಾಂಕ 31-12-2016 ರಂದು ಸೇಡಂ ಕಡೆಗೆ ಹೋಗುತ್ತಿರುವಾಗ ನಮ್ಮ ಮೊಟಾರು ಸೈಕಲ್ ಸುರೇಶ ಇತನು ನಡೆಸುತ್ತಿದ್ದನು, ಕೊಂಕನಳ್ಳಿ ಗೇಟ್ ದಾಟಿ ಸ್ವಲ್ಪ ಮುಂದುಗಡೆ ರೋಡಿನ ಮೇಲೆ ಹೊರಟಾಗ ಸೇಡಂ ಕಡೆಯಿಂದ ಒಬ್ಬ ಕಾರ ನಂ ಎಮ್ಎಚ್ 13 ಬಿಎನ್ 8057 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರು ಸೈಕಲಗೆ ಡಿಕ್ಕಿ ಪಡೆಯಿಸಿದನು ಸುರೇಶನಿಗೆ ತಲೆಗೆ ಭಾರಿ ಗಾಯವಾಗಿ ಕಿವಿಗಳಿಂದ ರಕ್ತ ಸೋರುತ್ತಿದ್ದು ಮತ್ತು ಅಲ್ಲಲ್ಲಿ ಮೈಗೆ ಭಾರಿ ರಕ್ತಗಾಯಗಳಾಗಿ ಅಲ್ಲಿಯೇ ಭೇಹೋಶ ಆದನು. ಇದನ್ನು ನೋಡಿ ಕಾರ ಚಾಲಕ ತನ್ನ ಕಾರ ತೆಗೆದುಕೊಂಡು ಅಲ್ಲಿಂದ ಓಡಿ ಹೋದನು. ನಂತರ ನಾವು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ದಿನಾಂಕ:09-01-2016 ರಂದು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಪಡೆಯುತ್ತಿದ್ದ   ಸುರೇಶ ತಂದೆ ಯಂಕಪ್ಪ ಬಡಿಗೇರ, ಸಾ:ಚಿಂತಕುಂಟಾ, ತಾ:ಚಿಂಚೋಳಿ, ಇವರು ಆಸ್ಪತ್ರೆಯಲ್ಲಿ ಉಪಚಾರ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ  ಅಂತಾ ಶ್ರೀ. ಚಂದ್ರಶೇಖರ ತಂದೆ ಯಂಕಪ್ಪ ಬಡಿಗೇರ, ಸಾ:ಚಿಂತಕುಂಟಾ, ತಾ:ಚಿಂಚೋಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 January 2017

Kalaburagi District Reported Crimes

ಆಕ್ರಮವಾಗಿ ನಾಡ ಪಿಸ್ತೂಲ ಹೊಂದಿದವರ ಬಂಧನ
ಅಫಜಲಪೂರ ಠಾಣೆ : ದಿನಾಂಕ 08-01-2017 ರಂದು ಬೆಳಿಗ್ಗೆ ಅಫಜಲಪೂರ – ದುಧನಿ ರಸ್ತೆಗೆ ಇರುವ ಬಳೂರ್ಗಿ ಗ್ರಾಮ ದಾಟಿ ಮುಂದೆ ಹೊರವಲಯದಲ್ಲಿ ಎರಡು ಜನರು ನಿಂತುಕೊಂಡು ಪಿಸ್ತೂಲ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ Sfri ಶ್ರೀ ಸಿದ್ದರಾಯ ಭೋಸಗಿ sಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಳೂರ್ಗಿ ಗ್ರಾಮ ದಾಟಿ ಬಸವಣ್ಣ ದೇವರ ಗುಡಿಯಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಬಸವಣ್ಣ ದೇವರ ಗುಡಿಯ ಹತ್ತಿರ ರೋಡಿನ ಮೇಲೆ ಎರಡು ಜನರು ನಿಂತಿದ್ದು, ಇಬ್ಬರ ಹತ್ತಿರ ಒಂದೊಂದು ಪಿಸ್ತೂಲುಗಳು ಇದ್ದವು. ಇಬ್ಬರು ಪಿಸ್ತೂಲುಗಳನ್ನು ತಮ್ಮ ಕೈಯಲ್ಲಿ ಹಿಡಿದು ಪರಿಶೀಲನೆ ಮಾಡುತ್ತಿದ್ದಾಗ ದಾಳಿ ಮಾಡಿ ಇಬ್ಬರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿಲಾಗಿ 1) ನಾಗೇಂದ್ರಪ್ಪ ತಂದೆ ಮೋನಪ್ಪ ಸೋನಾರ ಸಾ|| ಜಳಕಿ (ಕೆ) ತಾ|| ಆಳಂದ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಒಂದು ನಾಡ ಪಿಸ್ತೂಲು ದೊರೆತಿದ್ದು, ಹಾಗೂ ಸದರಿಯವನನ್ನು ಚೆಕ್ ಮಾಡಲಾಗಿ ಅವನ ಪ್ಯಾಂಟಿನ ಜೇಬಿನಲ್ಲಿ ಪಿಸ್ತೂಲಿನ 03 ಜಿವಂತ ಗುಂಡುಗಳು ದೊರೆತವು. 2) ಶಿವಶರಣ ತಂದೆ ಸೂರ್ಯಕಾಂತ ಬಾಸಗಿ ಸಾ|| ಜಳಕಿ (ಕೆ) ತಾ|| ಆಳಂದ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಒಂದು ನಾಡ ಪಿಸ್ತೂಲು ದೊರೆತಿದ್ದು, ಹಾಗೂ ಸದರಿಯವನನ್ನು ಚೆಕ್ ಮಾಡಲಾಗಿ ಅವನ ಪ್ಯಾಂಟಿನ ಜೇಬಿನಲ್ಲಿ ಪಿಸ್ತೂಲಿನ 02 ಜಿವಂತ ಗುಂಡುಗಳು ದೊರೆತವು. ಸದರಿಯವರಿಗೆ ಪಿಸ್ತೂಲುಗಳು ಹಾಗೂ ಗುಂಡುಗಳ ಬಗ್ಗೆ ವಿಚಾರಿಸಿದಾಗ, ಸದರಿಯವರು ಇವು ನಾಡ ಪಿಸ್ತೂಲುಗಳುದ್ದು, 05 ಜೀವಂತ ಗುಂಡುಗಳಿರುತ್ತವೆ. ಹಾಗೂ ಇವುಗಳಿಗೆ ಯಾವುದೆ ಲೈಸನ್ಸ ಇರುವುದಿಲ್ಲ. ಅಂತಾ ತಿಳಿಸಿದರು. ಸದರಿ ನಾಡ ಪಿಸ್ತೂಲುಗಳನ್ನು ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ವಿಚಾರಿಸಿದಾಗ, ಸದರಿಯವುಗಳನ್ನು 3) ಸೈಪನಸಾಬ ಶೀರೂರ ಸಾ|| ಜಳಕಿ (ಕೆ) ತಾ|| ಆಳಂದ ಈತನು ನಮಗೆ ಕೊಟ್ಟಿರುತ್ತಾನೆ ಅಂತಾ ತಿಳಿಸಿದರು. ಸದರಿ ಆರೋಪಿತರು ಅಕ್ರಮವಾಗಿ ಇಟ್ಟುಕೊಂಡ ಎರಡು ನಾಡ ಪಿಸ್ತೂಲುಗಳು ಅ||ಕಿ|| 60,000/- ರೂ ಮತ್ತು ಸದರಿ ನಾಡ ಪಿಸ್ತೂಲುಗಳ 05 ಜಿವಂತ ಗುಂಡುಗಳು ಅ||ಕಿ|| 500/- ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಮಹಾದೇವಿ ಗಂಡ ದಿಃ ಪೀರಪ್ಪ ಕುಂಟನೂರ ಸಾ : ಸೀತನೂರ ಇವರ ಮಗಳಾದ ಲಕ್ಷ್ಮೀ ಇವಳು ದಿನಾಂಕ 7/1/2017 ರಂದು ಪ್ರತಿ ದಿವಸದಂತೆ ಬೆಳಿಗ್ಗೆ ಕೆಲಸಕ್ಕೆಂದು ಕಲಬುರಗಿಗೆ ಮನೆಯಿಂದ ಹೋದವಳು ರಾತ್ರಿಯಾದರು ಮನೆಗೆ ಮರಳಿ ಬಂದಿರುವದಿಲ್ಲ ದಿನಾಂಕ 8/1/2017 ರಂದು ಬೆಳಗ್ಗಿನ ಜಾವ ನಮ್ಮ ಅಣ್ಣತಮ್ಮಕಿಯ ಶ್ರಿಮಂತ ತಂದೆ ನಾಗಪ್ಪ ಕುಂಟನೂರ ಇತನು ತಿಳಿಸಿದ್ದೇನೆಂದರೆ, ಲಕ್ಷ್ಮಿ ಹತ್ತಿರ ಇರುವ ಮೊಬೈಲದಿಂದ ಯಾರೋ ತನಗೆ ಪೊನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಸದರಿ ಲಕ್ಷ್ಮಿ ಇವಳು ಮನೆಗೆ ಬರುವಾಗ ಕಲಬುರಗಿಯಿಂದ ಯಾವುದೋ ವಾಹನದಲ್ಲಿ ಬಂದು ಜೇವರಗಿ ಕಡೆಗೆ ಹೋಗುವ ರೋಡಿನ ಕೇಂದ್ರ ಕಾರಾಗೃಹ ದಾಟಿ ನಾಕಣ್ಣ ಕುಲ್ಲಾ ಪ್ಲಾಟ ಇಳಿದು ನಡೆದುಕೊಂಡು ರೋಡಿನ ಎಡ ಬದಿಯಿಂದ ನಡೆದುಕೊಂಡು ಹೋಗುವಾದ ಯಾವುದೋ ವಾಹನದ ಚಾಲಕ ತನ್ನ ವಾಹನ ಅತೀ ವೇಗದಿಂದ ಹಾಗು ಅಲಕ್ಷತನದಿಂದ ನಡೆಯಿಸಿ ಸದರಿ ಲಕ್ಷ್ಮಿ ಡಿಕ್ಕಿ ಪಡೆಯಿಸಿ ವಾಹನ ನಿಲ್ಲಿಸಿದೇ ಹೋಗಿದ್ದು ಅಪಘಾತದಿಂದ ಲಕ್ಷ್ಮಿಯ ತಲೆ ಒಡೆದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಸದರಿ ಘಟನೆ ದಿನಾಂಕ 8/1/2017 ರಂದು 0030 ಗಂಟೆಯಿಂದ 0100 ಎಎಂದಲ್ಲಿ ಆಗಿರಬಹುದೆಂದು ತಿಳಿಸಿದ್ದು ಆಕೆಯ ಶವವು ಫರಹತಾಬಾದ ಪೊಲೀಸರಿಗೆ ಮಾಹಿತಿ ತಿಳಿದು ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆ ಹೋಗೊಣಾ ನಡಿ ಎಂದು ಹೇಳಿದ್ದಕ್ಕೆ ನಾನು ಮತ್ತು ನಮ್ಮ ಸಂಬಂಧಿ ಶ್ರೀಮಂತ ತಂದೆ ನಾಗಪ್ಪ, ಹುಲೇಪ್ಪ ತಂದೆ ಪೀರಪ್ಪ ಕೂಡಿ ಬಂದು ನೋಡಲಾಗಿ ರಸ್ತೆ ಅಪಘಾತದಲ್ಲಿ ಯಾವುದೋ ವಾಹನ ನನ್ನ ಮಗಳಿಗೆ ಡಿಕ್ಕಿ ಪಡೆಯಿಸಿ ಅಪಘಾತ ಮಾಡಿದ ಪರಿಣಾಮ ಆಕೆಯ ತಲೆ ಒಡೆದು ಸಾವು ಸಂಭವಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 January 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ:07-01-2017 ರಂದು ನನ್ನ ಮಗ ಕರಿಘುಳಿ ಮತ್ತು ನಮ್ಮೂರ ಅಯ್ಯಪ್ಪ ತಂದೆ ಬಸಪ್ಪ ಬಂಗಾಳೇರ ಕೂಡಿಕೊಂಡು ನಸುಕಿನಲ್ಲಿ ಕೂಲಿ ಕೆಲಸಕ್ಕಾಗಿ ನಮ್ಮೂರ ಅಮೃತ ಹೂಗಾರ ಇವರ ಟ್ರಾಕ್ಟರ್ ಮೇಲೆ ಪೇಚಿಂಗ್ ಕಲ್ಲು ಹೊಡೆಯುವ ಕುರಿತು ಹೋಗಿದ್ದರು, ಮುಂಜಾನೆ 07-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನೊಂದಿಗೆ ಕೆಲಸಕ್ಕೆ ಹೋದ ಅಯ್ಯಪ್ಪ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಕರಿಘುಳಿ ಕೆಲಸಕ್ಕೆ ಹೋದ ಟ್ರಾಕ್ಟರನಲ್ಲಿ ನಾವು ಪೇಚಿಂಗ್ ಕಲ್ಲು ತುಂಬಿಕೊಂಡು ಹುಳಗೋಳದಿಂದ ಯಾದಗೀರ ಕಡೆಗೆ ಹೊರಟಾಗ ಅಮೃತ ಹೂಗಾರ ಇವರ ಟ್ರಾಕ್ಟರ್ ನಂಬರ್ ಕೆಎ 32 ಟಿಬಿ 0941 /ಕೆ 32 0942ನೇದ್ದರ ಚಾಲಕನು ಟ್ರಾಕ್ಟರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಸೇಡಂ ಯಾದಗೀರ ರೋಡನಲ್ಲಿ ಹಂದರಕಿ ಗ್ರಾಮದ ಕ್ರಾಸ್ ದಾಟಿ ಯಲ್ಲಮ್ಮ ಗಡ್ಡಿಯ ಬ್ರಿಜ್ ಹತ್ತಿರ ಮುಂಜಾನೆ 06-00 ಗಂಟೆಗೆ ಒಮ್ಮೆಲೆ ಟ್ರಾಕ್ಟರ್ ಕಟ್ ಹೊಡೆದಾಗ ಟ್ರಾಕ್ಟರ್ ಇಂಜೆನ್ ಮೇಲೆ ಕುಳಿತಿದ್ದ ಕರಿಘುಳಿ ಈತನು ಒಮ್ಮೆಲೆ ಕೆಳಗೆ ಬಿದ್ದನು ಆಗ ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ, ಬಾಯಿಯಿಂದ, ಕಿವಿಯಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತ ತಿಳಿಸಿದನು ಆಗ ನಾನು ನನ್ನ ಗಂಡ ಎಲ್ಲರೂ ಕೂಡಿಕೊಂಡು ಹೋಗಿ ಸ್ಥಳದಲ್ಲಿ ನೋಡಲಾಗಿ ಅಲ್ಲಿ ರೋಡಿನ ಮೇಲೆ ಬಿದ್ದು ನನ್ನ ಮಗ ಕರಿಘುಳಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸತ್ತಿದ್ದು ನಿಜವಿತ್ತು, ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಸಚೀನ ತಂದೆ ಹಣಮಂತರಾವ ಪಾಟೀಲ ಸಾ: ತಾಳೆಗಾಂವ ದಬಡೆ ಪುಣೆ ಮತ್ತು  ಸಂಕೇತ  ತಂದೆ ಬಾಲಕೃಷ್ಣ ಮೊರೆ ಕಾರ ನಂ. ಎಮ್.ಎಚ್. 10 ಸಿಎ 6801 ನೇದ್ದರ ಚಾಲಕ ಸಾ: ಅಂಬೆಗಾಂವ ಪುಣೆ ರವರು ಹೋಗುತ್ತಿರುವಾಗ ತನ್ನ ಕಾರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿ ಮುಂದೆ ಹೊಗುತ್ತಿದ್ದ ಲಾರಿ ಡಿಕ್ಕಿಪಡಿಸಿದ್ದು ಕಾರಿನಲ್ಲಿದ್ದವರಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲ;ಇಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 07/01/16 ರಂದು 8 ಎಎಮ ಸುಮಾರಿಗೆ ಶ್ರೀ ಕಿಶನ ತಂದೆ ಗುಂಡುರಾವ ರಾಠೋಡ ಸಾ: ಪಾಣೇಗಾಂವ ಶಿವಾಜಿ ತಾಂಡಾ   ತಾ: ಜಿ: ಕಲಬುರಗಿ ರವರು  ತನ್ನ ಹೊಲ ಸರ್ವೆ ನಂ 19/3 ರಕ್ಕೆ ಹೋಗುವಾಗ ಹೊಲದ ಸಮೀಪದಲ್ಲಿ ಶ್ರೀಗಂಧದ ಮರದ ತುಂಡನ್ನು ಕತ್ತರಿ ಸುತ್ತಾ ಕುಳಿತು ಕೊಂಡಿದ್ದು ಅವನಿಗೆ ಹತ್ತಿರ ಹೋಗಿ ವಿಚಾರಿಸಲು ಆತನು ಅಲ್ಲಿಂದ ಓಡಿ ಹೋಗಿದ್ದು ನಂತರ ಹೊಲಕ್ಕೆ ಹೋಗಿ ನೋಡಲು ಅಲ್ಲಿದ 1000/-ರೂಗಳ ಕಿಮ್ಮತ್ತಿನ ಶ್ರೀಗಂಧದ ತುಂಡನ್ನು ಮುಂಜಾನೆ 7 ಗಂಟೆಯ ಸಮಯದಲ್ಲಿ ಕಳ್ಳತನದಿಂದ ಕತ್ತಿರಿಸಿಕೊಂಡು ಹೋಗಿದ್ದು ಸದರಿ ನನ್ನ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ 1000/- ರೂಗಳು ಕಿಮ್ಮತ್ತಿನ ಶ್ರೀಗಂಧದಮರವನ್ನು ಕಡಿದುಕೊಂಡು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮುಧೋಳ ಠಾಣೆ :ಸಂತೋಷಕುಮಾರ ತಂದೆ ವೆಂಕಟೇಶ ನಂದಿವಾಡ ಇತನು ದಿನಾಂಕ 28-12-2016 ರಂದು ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಮನೆಯಿಂದ ಹೊದವನು ಮರಳಿ ಬಂದಿರುವುದಿಲ್ಲ ಕಾಣೆಯಾಗಿದ್ದಾನೆ ಅಂತಾ ಶ್ರೀ ವೆಂಕಟೇಶ ತಂದೆ ಭೀಮಯ್ಯ ನಂದಿಪಾಡ ಸಾ : ಮುಧೋಳ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.