POLICE BHAVAN KALABURAGI

POLICE BHAVAN KALABURAGI

08 January 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ:07-01-2017 ರಂದು ನನ್ನ ಮಗ ಕರಿಘುಳಿ ಮತ್ತು ನಮ್ಮೂರ ಅಯ್ಯಪ್ಪ ತಂದೆ ಬಸಪ್ಪ ಬಂಗಾಳೇರ ಕೂಡಿಕೊಂಡು ನಸುಕಿನಲ್ಲಿ ಕೂಲಿ ಕೆಲಸಕ್ಕಾಗಿ ನಮ್ಮೂರ ಅಮೃತ ಹೂಗಾರ ಇವರ ಟ್ರಾಕ್ಟರ್ ಮೇಲೆ ಪೇಚಿಂಗ್ ಕಲ್ಲು ಹೊಡೆಯುವ ಕುರಿತು ಹೋಗಿದ್ದರು, ಮುಂಜಾನೆ 07-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನೊಂದಿಗೆ ಕೆಲಸಕ್ಕೆ ಹೋದ ಅಯ್ಯಪ್ಪ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಕರಿಘುಳಿ ಕೆಲಸಕ್ಕೆ ಹೋದ ಟ್ರಾಕ್ಟರನಲ್ಲಿ ನಾವು ಪೇಚಿಂಗ್ ಕಲ್ಲು ತುಂಬಿಕೊಂಡು ಹುಳಗೋಳದಿಂದ ಯಾದಗೀರ ಕಡೆಗೆ ಹೊರಟಾಗ ಅಮೃತ ಹೂಗಾರ ಇವರ ಟ್ರಾಕ್ಟರ್ ನಂಬರ್ ಕೆಎ 32 ಟಿಬಿ 0941 /ಕೆ 32 0942ನೇದ್ದರ ಚಾಲಕನು ಟ್ರಾಕ್ಟರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಸೇಡಂ ಯಾದಗೀರ ರೋಡನಲ್ಲಿ ಹಂದರಕಿ ಗ್ರಾಮದ ಕ್ರಾಸ್ ದಾಟಿ ಯಲ್ಲಮ್ಮ ಗಡ್ಡಿಯ ಬ್ರಿಜ್ ಹತ್ತಿರ ಮುಂಜಾನೆ 06-00 ಗಂಟೆಗೆ ಒಮ್ಮೆಲೆ ಟ್ರಾಕ್ಟರ್ ಕಟ್ ಹೊಡೆದಾಗ ಟ್ರಾಕ್ಟರ್ ಇಂಜೆನ್ ಮೇಲೆ ಕುಳಿತಿದ್ದ ಕರಿಘುಳಿ ಈತನು ಒಮ್ಮೆಲೆ ಕೆಳಗೆ ಬಿದ್ದನು ಆಗ ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ, ಬಾಯಿಯಿಂದ, ಕಿವಿಯಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತ ತಿಳಿಸಿದನು ಆಗ ನಾನು ನನ್ನ ಗಂಡ ಎಲ್ಲರೂ ಕೂಡಿಕೊಂಡು ಹೋಗಿ ಸ್ಥಳದಲ್ಲಿ ನೋಡಲಾಗಿ ಅಲ್ಲಿ ರೋಡಿನ ಮೇಲೆ ಬಿದ್ದು ನನ್ನ ಮಗ ಕರಿಘುಳಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸತ್ತಿದ್ದು ನಿಜವಿತ್ತು, ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಸಚೀನ ತಂದೆ ಹಣಮಂತರಾವ ಪಾಟೀಲ ಸಾ: ತಾಳೆಗಾಂವ ದಬಡೆ ಪುಣೆ ಮತ್ತು  ಸಂಕೇತ  ತಂದೆ ಬಾಲಕೃಷ್ಣ ಮೊರೆ ಕಾರ ನಂ. ಎಮ್.ಎಚ್. 10 ಸಿಎ 6801 ನೇದ್ದರ ಚಾಲಕ ಸಾ: ಅಂಬೆಗಾಂವ ಪುಣೆ ರವರು ಹೋಗುತ್ತಿರುವಾಗ ತನ್ನ ಕಾರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿ ಮುಂದೆ ಹೊಗುತ್ತಿದ್ದ ಲಾರಿ ಡಿಕ್ಕಿಪಡಿಸಿದ್ದು ಕಾರಿನಲ್ಲಿದ್ದವರಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲ;ಇಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 07/01/16 ರಂದು 8 ಎಎಮ ಸುಮಾರಿಗೆ ಶ್ರೀ ಕಿಶನ ತಂದೆ ಗುಂಡುರಾವ ರಾಠೋಡ ಸಾ: ಪಾಣೇಗಾಂವ ಶಿವಾಜಿ ತಾಂಡಾ   ತಾ: ಜಿ: ಕಲಬುರಗಿ ರವರು  ತನ್ನ ಹೊಲ ಸರ್ವೆ ನಂ 19/3 ರಕ್ಕೆ ಹೋಗುವಾಗ ಹೊಲದ ಸಮೀಪದಲ್ಲಿ ಶ್ರೀಗಂಧದ ಮರದ ತುಂಡನ್ನು ಕತ್ತರಿ ಸುತ್ತಾ ಕುಳಿತು ಕೊಂಡಿದ್ದು ಅವನಿಗೆ ಹತ್ತಿರ ಹೋಗಿ ವಿಚಾರಿಸಲು ಆತನು ಅಲ್ಲಿಂದ ಓಡಿ ಹೋಗಿದ್ದು ನಂತರ ಹೊಲಕ್ಕೆ ಹೋಗಿ ನೋಡಲು ಅಲ್ಲಿದ 1000/-ರೂಗಳ ಕಿಮ್ಮತ್ತಿನ ಶ್ರೀಗಂಧದ ತುಂಡನ್ನು ಮುಂಜಾನೆ 7 ಗಂಟೆಯ ಸಮಯದಲ್ಲಿ ಕಳ್ಳತನದಿಂದ ಕತ್ತಿರಿಸಿಕೊಂಡು ಹೋಗಿದ್ದು ಸದರಿ ನನ್ನ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ 1000/- ರೂಗಳು ಕಿಮ್ಮತ್ತಿನ ಶ್ರೀಗಂಧದಮರವನ್ನು ಕಡಿದುಕೊಂಡು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮುಧೋಳ ಠಾಣೆ :ಸಂತೋಷಕುಮಾರ ತಂದೆ ವೆಂಕಟೇಶ ನಂದಿವಾಡ ಇತನು ದಿನಾಂಕ 28-12-2016 ರಂದು ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಮನೆಯಿಂದ ಹೊದವನು ಮರಳಿ ಬಂದಿರುವುದಿಲ್ಲ ಕಾಣೆಯಾಗಿದ್ದಾನೆ ಅಂತಾ ಶ್ರೀ ವೆಂಕಟೇಶ ತಂದೆ ಭೀಮಯ್ಯ ನಂದಿಪಾಡ ಸಾ : ಮುಧೋಳ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

07 January 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 06-11-2017 ರಂದು  ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟ್ಯಾಕ್ಟರದಲ್ಲಿ  ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್,ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬನ್ನಟ್ಟಿ ಕ್ರಾಸ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ಯಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು. ಆಗ ಸದರಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾನು ಪಂಚರ ಸಮಕ್ಷಮ ಟ್ಯಾಕ್ಟರ  ಚಕ್ಕ ಮಾಡಲು ಟ್ಯಾಕ್ಟರದಲ್ಲಿ ಮರಳು ಇತ್ತು ಸದರಿ ಟ್ಯಾಕ್ಟರ Mahindra Arjun Ultra-1 Engine NO NNHY06809 ಅಂತ ಇದ್ದು  .ಕಿ 3,00,000/-ರೂ ಇರಬಹುದು ಸದರಿ ಟ್ಯಾಕ್ಟರದಲ್ಲಿದ್ದ  ಮರಳಿನ .ಕಿ 3000/- ರೂ ಆಗಬಹುದು  ನಂತರ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-01-2017 ರಂದು ಶಿವಪೂರ ಬನ್ನಟ್ಟಿ  ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್,ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರದ ಪಟ್ಟಣದ  ದಿಲ್ ಖುಷ್ ದಾಬಾದ ಹತ್ತಿರ ಘತ್ತರಗಾ ರೋಡಿಗೆ ಹೋಗುತಿದ್ದಾಗ ನಮ್ಮ ಎದುರಿನಿಂದ ಒಂದು ಟ್ರ್ಯಾಕ್ಟರ ಬರುತಿತ್ತು , ಆಗ ಸದರಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra575 DI  ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂಬರ KA-36 TC-0845 ಅಂತಾ ಇದ್ದು ಸದರಿ ಟ್ರ್ಯಾಕ್ಟರ .ಕಿ 3,00,000/-ರೂ  ಇರಬಹುದು. ನಂತರ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಣಿ ಕಾಣೆಯಾದ ಪ್ರಕರಣ :
ಶಾಹಾವಾದ ನಗರ ಠಾಣೆ : ಶ್ರೀ ಹಾಜಪ್ಪಾ ತಂದೆ ಶರಣಪ್ಪಾ ಕಾಳನೂರ ಸಾ:ಹನುಮಾನ ನಗರ ಶಹಾಬಾದ ರವರ ಮಗಳಾದ ಕುಮಾರಿ ಸಂಗೀತಾ ಇವಳು ಬಿ.ಎ ವಿದ್ಯಾಬ್ಯಾಸ ಮಾಡುತ್ತಿದ್ದು  ದಿನಾಂಕ 19/12/2016 ರಂದು ಸಾಯಂಕಾಲ 5-30 ಪಿಎಂ ಕ್ಕೆ ಮನೆಯಿಂದ ಹೊರಗೆ ಹೋದವಳು ರಾತ್ರಿ 10 ಗಂಟೆಯಾದರೂ ಮನೆಗೆ  ವಾಪಸ ಬಂದಿರುವುದಿಲ್ಲಾ.  ನನ್ನ ಮಗಳು ಮನೆಗೆ ಬರದಿದ್ದರಿಂದ ಗಾಬರಿಯಾಗಿ ನಾನು ಮತ್ತು ನಮ್ಮ ಮನೆಯವರು ಎಲ್ಲರೂ ಕೂಡಿ ಶಹಾಬಾದ ಪಟ್ಟಣದಲ್ಲಿ  ಮತ್ತು ಸುತ್ತ ಮುತ್ತಲಿನ ಏರಿಯಾ & ನಮ್ಮ ಸಂಬಂಧಿರ ಊರುಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ.  ದಿನಾಂಕ 19/12/2016 ರಿಂದ ಇಲ್ಲಿಯ ವರೆಗೆ ಕಾಣೆಯಾದ ನನ್ನ ಮಗಳಿಗೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಸಾವಿತ್ರಿ ಗಂಡ ಶಿವಕುಮಾರ ಪಾಟೀಲ್ ಸಾ: ಬೋದನ ವಾಡಿ ರವರು ಸುಮಾರು 4 ವರ್ಷಗಳ ಹಿಂದೆ ಬೋದನ ವಾಡಿ ಗ್ರಾಮದ ಶಿವಕುಮಾರ ತಂದೆ ರಾಜಶೇಖರ ಪಾಟೀಲ್ ಎಂಬುವವರೊಂದಿಗೆ ಸಾಂಪ್ರದಾಯೀಕವಾಗಿ ಮದುವೆ ಮಾಡಿಕೊಟ್ಟಿರುತ್ತಾರೆ, ನನಗೆ ಈಗ ಒಂದುವರೆ ವರ್ಷದ ಒಬ್ಬಳು ಹೆಣ್ಣು ಮಗಳು ಮತ್ತು 7 ತಿಂಗಳ ಗಂಡು ಮಗ ಇರುತ್ತಾನೆ, ಬೋದನ ವಾಡಿ ಗ್ರಾಮದಲ್ಲಿ ನಾನು ಮತ್ತು ನನ್ನ ಗಂಡ ಮಕ್ಕಳು ಹಾಗೂ ನಮ್ಮ ಅತ್ತೆಯಾದ ಮಹಾದೇವಿ ರವರುಗಳು ಒಂದೆ ಮನೆಯಲ್ಲಿ ವಾಸವಾಗಿದ್ದು ಇನ್ನೂಳಿದ ನನ್ನ 4 ಜನ ಭಾವಂದಿರರು ಅದೇ ಗ್ರಾಮದಲ್ಲಿ ತಮ್ಮ ಪರಿವಾರದೊಂದಿಗೆ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ದಿನಾಂಕ: 29/12/2016 ರಂದು ಎಳ್ಳ ಅಮವಾಸ್ಯೆ ಹಬ್ಬ ಇದ್ದುದ್ದರಿಂದ ಹಬ್ಬದ ಕಿಂತ 2 ದಿವಸ ಮುಂಚೆ ನಾನು ನನ್ನ ತವರೂರಾದ ಪಟ್ಟಣ ಗ್ರಾಮಕ್ಕೆ ಹೋಗಿ ಅಲ್ಲಿಯೇ ವಾಸವಾಗಿರುವಾಗ ನಿನ್ನೆ ದಿನಾಂಕ: 05/01/2017 ರಂದು ರಾತ್ರಿ 9:00 ಗಂಟೆ ಸುಮಾರಿಗೆ ನನ್ನ ಗಂಡನಾದ ಶಿವಕುಮಾರ ರವರು ನನಗೆ ಫೋನ್ ಮಾಡಿ ನಾನು ನಾಗೇಂದ್ರಪ್ಪ ತಂದೆ ಶಿವರಾಯ ಕೆರಳ್ಳಿ ಸಾ: ಕಮಲಾನಗರ ಇವರ ಮೊಟಾರ ಸೈಕಲ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಿದ್ದೇನೆಂದು ತಿಳಿಸಿದ್ದು ಅದಕ್ಕೆ ನಾನು ಈಗ ತುಂಬಾ ರಾತ್ರಿಯಾಗಿದೆ ಬರಬೇಡಿ ಎಂದು ಹೇಳಿರುತ್ತೇನೆ ನಂತರ ನನಗೆ ಅವರು ಫೋನ್ ಕೂಡಾ ಮಾಡಿರುವುದಿಲ್ಲ, ಇಂದು ದಿನಾಂಕ:- 06/01/2017 ರಂದು ಮುಂಜಾನೆ 08:00 ಗಂಟೆ ಸುಮಾರಿಗೆ ನಾನು ಮತ್ತು ತಂದೆಯಾದ ಶಿವಶರಣಪ್ಪ ತಾಯಿಯಾದ ವಿಠಬಾಯಿ ರವರೊಂದಿಗೆ ತವರುಮನೆಯಲ್ಲಿರುವಾಗ ಕಮಲಾನಗರದಿಂದ ನನ್ನ ಅಕ್ಕಳಾದ ಭಾರತಬಾಯಿ ಗಂಡ ಅಂದಪ್ಪ ಬಿರಾದಾರ ಇವರು ನನಗೆ ಫೋನ್ ಮಾಡಿ ನಿನ್ನ ಗಂಡನಾದ ಶಿವಕುಮಾರ ಈತನು ನಿನ್ನೆ ದಿನಾಂಕ: 05/01/2017 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಪಟ್ಟಣಕ್ಕೆ ಹೋಗುತ್ತೇನೆಂದು ಹೇಳಿ ನಾಗೇಂದ್ರಪ್ಪ ಇವರ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದನ್ನು ತೆಗೆದುಕೊಂಡು ಹೋಗಿ ಸದರಿ ಮೊಟಾರ ಸೈಕಲ್ ಚಲಾಯಿಸಿಕೊಂಡು ಪಟ್ಟಣಕ್ಕೆ ಹೋಗುವಾಗ ಬೋದನ ದಾಟಿ ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಸಮೀಪ ಯಾವುದೋ ಒಂದು ವಾಹನ ಗುದ್ದಿದ್ದರಿಂದ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಇಂದು ಮುಂಜಾನೆ ಗೊತ್ತಾಗಿರುತ್ತದೆ ಎಂದು ತಿಳಿಸಿದ ಮೇರೆಗೆ ನಾನು ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಹತ್ತಿರ ಬಂದು ನೋಡಲಾಗಿ ನನ್ನ ಗಂಡನ ತಲೆಗೆ ಮತ್ತು ಬಲಗಡೆ ಮೆಲುಕಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಎದೆಗೆ ತರಚಿದ ಗಾಯವಾಗಿ ಮೃತಪಟ್ಟಿದ್ದರು ಅವರು ಚಲಾಯಿಸಿಕೊಂಡು ಬರುತ್ತಿದ್ದ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದು ರಸ್ತೆಯ ಎಡಬದಿಯಲ್ಲಿ ಬಿದ್ದಿತ್ತು. ದಿನಾಂಕ:- 05/01/2017 ರಂದು ರಾತ್ರಿ 9:30 ರಿಂದ 10:00 ಗಂಟೆಯ ಮದ್ಯದ ಅವದಿಯಲ್ಲಿ ನನ್ನ ಗಂಡನಾದ ಶಿವಕುಮಾರ ತಂದೆ ರಾಜಶೇಖರ ಪಾಟೀಲ್ ಇವರು ಹೀರೊ ಹೊಂಡಾ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದನ್ನು ಚಲಾಯಿಸಿಕೊಂಡು ಬೋದನ ವಾಡಿ ಗ್ರಾಮದಿಂದ ಪಟ್ಟಣಕ್ಕೆ ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಹತ್ತಿರ ಬರುವಾಗ ಯಾವುದೋ ಒಂದು ವಾಹನ ಚಾಲಕನು ತನ್ನ ಅಧೀನದಲ್ಲಿಯ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಗಂಡನು ಚಲಾಯಿಸಿಕೊಂಡು ಬರುತ್ತಿರುವ ಮೊಟಾರ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನನ್ನ ಗಂಡನ ತಲೆಗೆ ಮತ್ತು ಮೆಲಕಿನ ಹತ್ತಿರ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ,  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಗಳ ಕಳವು ಪ್ರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಅಂಬಣ್ಣ ಲೆಂಗಟಿ ಸಾ|| ಕೈಲಾಸ ನಗರ ಕಲಬುರಗಿ ಇವರು ದಿನಾಂಕ: 30/12/16 ರಂದು ಬೆಳಗ್ಗೆ 10.00 ಗಂಟೆಗೆ ನನ್ನ ಮೋಟಾರ ಸೈಕಲ ನಂ.ಕೆಎ.32 ಇ.ಎಮ್‌‌‌.6803 ನೇದ್ದನ್ನು ನಾನು ನನ್ನ ಮನೆ ಕಂಪೌಂಡದಲ್ಲಿ ನಿಲ್ಲಿಸಿ ಹೈದರಾಬಾದಿಗೆ ಹೋಗಿರುತ್ತೆನೆ. ದಿನಾಂಕ: 31/12/2016 ಬೆಳಗ್ಗೆ 07-00 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನನ್ನ ಹೀರೊ ಹೊಂಡಾ ಸ್ಪೆಂಡರ್‌‌‌ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು NO.KA32 EM6803 CHASSIS.NO.MBLHA10CGGHG37882, ENGINE.NO.HA10ERGHG36781  ಅದರ ಅಂ.ಕಿ: 47168/-ರೂ ಬೇಲೆಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ರೋಹಿತ ತಂದೆ ಮೋಹನರಾವ ಜವಳಕರ ಸಾ:ಮನೆ ನಂ.1516, ದೇಶಮುಖ ಲೇಔಟ ಬ್ರಹ್ಮಪೂರ  ಕಲಬುರಗಿ ಇವರು. ದಿನಾಂಕ:14/11/2016 ರಂದು ರಾತ್ರಿ 10-30 ಗಂಟೆಗೆ ನಾನು ನನ್ನ ಮೋಟರ ಸೈಕಲ ನಿಲ್ಲಿಸಿದ್ದು ದಿನಾಂಕ:15/11/2016 ರಂದು ಬೆಳಗ್ಗೆ 8-00 ಗಂಟೆಗೆ ನಾನು ಮನೆಯಿಂದ ಹೋರಗಡೆ ಬಂದು ನೋಡಲು ನನ್ನ ಹೊಂಡಾ ಆಕ್ಟಿವಾ ಮೋಟರ ಸೈಕಲ್ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ಮೋಟರ ಸೈಕಲ ಪತ್ತೆ ಆಗಿರುವುದಿಲ್ಲಾ ದಿನಾಂಕ: 05/01/2017 ರಂದು ಯಾರೋ ಕಳ್ಳರು ನಮ್ಮ ಹೊಂಡಾ ಆಕ್ಟೀವಾ ಮೋಟರ ಸೈಕಲ ಬಿಳಿ ಬಣ್ಣ ಉಳ್ಳದ್ದು ಇದ್ದು ಅದರ ನಂ. KA32W4282, CHASSIS NO.ME4JC445AA8372716, ENGINE NO.JC44E0456981 ಅದರ ಅ.ಕಿ:17000/-ರೂ ಬೆಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 January 2017

Kalaburagi District Reported Crimes

 ಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀ ರತೀಶಕುಮಾರ ತಂದೆ ಶರಣಬಸಪ್ಪಾ ಪಾಟೀಲ ಸಾ: ಚಿತಲಿ ತಾ:ಆಳಂದ ಇವರು ತಂದೆ ತಾಯಿಯೊಂದಿಗೆ ಕಲಬುರಗಿಯಲ್ಲಿ ಜನತಾ ಲೇ ಔಟ್‌ ಮಾರ್ಕೆಟ ರೋಡ ಲಾಲಗಿರಿ ಕ್ರಾಸ್‌ ಹತ್ತಿರ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ಚಿತಲಿ ಗ್ರಾಮದಲ್ಲಿ ನಮ್ಮ ತಂದೆ ಹೆಸದಿನಲ್ಲಿ ಜಮೀನು ಇದ್ದು ಸದರ ಜಮಿನು ನಮ್ಮ ತಂದೆ ಹಾಗು ರಾಮಚಂದ್ರಪ್ಪ ಚಿಕ್ಕಪ್ಪ ಇವರ ಮದ್ಯ ಜಮೀನ ವಿಷಯವಾಗಿ ತಕರಾರು ಇದ್ದು ಈ ಕುರಿತು ಕೊರ್ಟದಲ್ಲಿ ಕೇಸ ನಡೆದಿರುತ್ತದೆ. ಚಿತಲಿ ಸಿಮಾಂತರ ಹೊಲ ಸರ್ವೇ ನಂ 60/3 ರಲ್ಲಿ 4 ಎಕರೆ, 3 ಗುಂಟೆ ಜಮೀನು ನಮ್ಮ ತಂದೆ ಹೆಸರಿನಲ್ಲಿ ಇರುತ್ತದೆ. ನಮ್ಮ ಚಿಕ್ಕಪ್ಪ ರಾಮಚಂದ್ರಪ್ಪ ಇತನು ಈ ಜಮೀನು ನಮಗೆ ಬರುತ್ತದೆ ಎಂದು ತಕರಾರು ಮಾಡುತ್ತಾ ಬಂದು ದ್ವೇಷಸಾದಿಸುತ್ತಾ ಬಂದಿರುತ್ತಾನೆ. ಮತ್ತು ಕೊರ್ಟ ದಲ್ಲಿ ಕೇಸು ನಡೆದು ನಮ್ಮಂತೆ ಆಗಿದ್ದರಿಂದ ನಮಗೆ ಖಲಾಷ ಮಾಡಿ ಜಮೀನು ಕಿತ್ತಿಕೊಳ್ಳಬೇಕೆಂದಿರುತ್ತಾರೆ. ನಮ್ಮ ತಂದೆ ಹಾಗು ಚಿಕ್ಕಪ್ಪ ಹಾಗು ಇತರರ ಮದ್ಯ 8 ಎಕರೆ ಜಮೀನು ಇದ್ದು ಸದರ ಜಮೀನನಲ್ಲಿ ಎಲ್ಲರೂ ಬೆಳೆ ಬೆಳೆದು ಸಮನಾಗಿ ಹಂಚಿಕೊಳ್ಳಬೆಕೆಂದು ಕೊರ್ಟ ಆಧೇಶವಾಗಿರುತ್ತದೆ.ದಿನಾಂಕ 31/12/2016 ರಂದು ಸರ್ವೇ ನಂ 60/3 ರಲ್ಲಿ 4 ಎಕರೆ 3 ಗುಂಟೆ ಜಮೀನನಲ್ಲಿ ತೊಗರೆ ಬೆಳೆ ಬೆಳೆದು ರಾಶಿ ಮಾಡಿಕೊಂಡಿರುತ್ತೇವೆ. ಈ ಜಮೀನು ತಮಗೆ ಬರುತ್ತದೆ ಎಂದುಕೊಂಡು ನಮ್ಮ ಮೇಲೆ ದ್ವೇಷಹೊಂದಿ ಇಂದು ದಿನಾಂಕ 04/01/2017 ರಂದು ಸಾಯಾಂಕಾಲ 6:30 ಗಂಟೆಗೆ ವೇಳೆಗೆ ನಾನು ಮತ್ತು ನಮ್ಮ ತಂದೆ ಶರಣಬಸಪ್ಪ ಪಾಟೀಲ ಇಬ್ಬರು ಕೂಡಿ ಚಿತಲಿ ಗ್ರಾಮದ ಬ್ರಹ್ಮದೇವರ ಗುಡಿ ಹತ್ತಿರ ಕುಳಿತ್ತಿದ್ದಾಗ 1) ರಾಮಚಂದ್ರಪ್ಪ ತಂದೆ ಕಲ್ಯಾಣರಾವ ಪಾಟೀಲ 2) ಆಶಾಲತಾ ಗಂಡ ಉಮೇಶ ಪಾಟೀಲ 3) ಸುಜಾತಾ ಗಂಡ ಬಾಬು ಮೇಳಕುಂದಿ 4) ಶೋಬಾ ಗಂಡ ಜಗನಾಥ ಪೊ. ಪಾಟೀಲ, 5) ನೀಲಮ್ಮಾ ಗಂಡ ಕಲ್ಯಾಣರಾವ ಪಾಟೀಲ ಹಾಗು ರಾಮಚಂದ್ರಪ್ಪ ಇತನ ಹೆಂಡತಿಯ ಅಣ್ಣತಮ್ಮಂದಿರು 3 ಜನರು ಕೂಡಿ ಬಂದವರೇ ಇದೆ ಸುಳೆ ಮಕ್ಕಳು ನಮ್ಮ ಹೊಲದ ರಾಶಿ ಮಾಡಿಕೊಂಡು ಹೊದವರು ಬಿಡಬ್ಯಾಡ್ರಿ ಹೊಡ್ರಿ ಇವರಿಗೆ ಖಲಾಷ ಮಾಡ್ರಿ ಅಂತಾ ಬೈಯುತ್ತಾ ಬಂದವರೇ ರಾಮಚಂದ್ರಪ್ಪ ಇತನು ಕೈಯಿಂದ ನಮ್ಮ ಅಪ್ಪನ ಖಪಾಳ ಮೇಲೆ ಹೊಡೆದನು. ಆಶಾಲತಾ , ಸೂಜಾತಾ ಇವರು ನಮ್ಮ ಅಪ್ಪನ ಎರಡು ಕೈಹಿಡಿದು ನೇಲಕ್ಕೆ ಕೆಡವಿದಾಗ ರಾಮಚಂದ್ರಪ್ಪ ಇತನು ಕೋಲೆ ಮಾಡುವ ಉದ್ಧೇಶದಿಂದ ಚಾಕುದಿಂಧ ಕುತ್ತಿಗೆಗೆ ಹೊಡೆದನು . ಆಗ ನಾನು ನಮ್ಮ ತಂದೆಗೆ ಹೊಡೆಯುದನ್ನು ನೋಡಿ ಬಿಡಿಸಲು ಹೋದಾಗ ಶೋಬಾ ಮತ್ತು ನಿಲಮ್ಮಾ ಇವರು ಕಟ್ಟಿಗೆಯಿಂದ ನನಗೆ ಬೆನ್ನಿಗೆ ಹೊಡೆದರು. ರಾಮಚಂದ್ರಪ್ಪ ಇತನು ನನಗೆ ಕೊಲೆ ಮಾಡಬೇಕೆಂದು ಚಾಕುದಿಂದ ಹೊಟ್ಟೆಗೆ ಹೊಡೆಯಲು ಬಂದಾಗ ಕೈ ಅಡ್ಡ ತಂದಿದಕ್ಕೆ ಎಡಗೈಗೆ ಚಾಕು ಹತ್ತಿದ್ದು ನಂತರ ಮತ್ತೆ ಬೆನ್ನಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಶಾಲತಾ ಮತ್ತು ಶೋಬಾ ನನಗೆ ನೇಲಕ್ಕೆ ಹಾಕಿ ಹೊಡೆಯುವಾಗ ರಾಮಚಂದ್ರಪ್ಪ ಇತನ ಹೆಂಡತಿಯ  ಅಣ್ಣತಮ್ಮಂದಿರು ಮತ್ತು ರಾಮಚಂದ್ರಪ್ಪ ಇವರು ಚಾಕುದಿಂದ ನಮ್ಮ ಅಪ್ಪನ ಹೊಟ್ಟೆಗೆ , ಮೈಗೆ , ಅಲ್ಲಲ್ಲಿ ಚುಚ್ಚಿ ತಿವೃಗಾಯಗೊಳಿಸಿ ಹೊಡೆದು ಕೋಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮೊನಮ್ಮ ಗಂಡ ಅವಿನಾಶ ಮಡಿವಾಳ ಸಾಃ ರಾಜವಾಳ ತಾಃ ಜೇವರಗಿ ಹಾಃವಃ ಹಂದರಕಿ ತಾಃ ಸೇಡಂ ಇವರನ್ನು ಜೇವರಗಿ ತಾಲೂಕಿನ ರಾಜವಾಳ ಗ್ರಾಮದ ಅವಿನಾಶ ಮಡಿವಾಳ ಇತನ್ನೊಂದಿಗೆ ದಿನಾಂಕ 31.03.2016 ರಂದು ನಮ್ಮೂರ ಲೊಕೇಶ್ವರ ಗುಡಿಯಲ್ಲಿ  ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ರಾಜವಾಳ ಗ್ರಾಮದಲ್ಲಿಯೇ ವಾಸವಾಗಿರುತ್ತೆನೆ. ನನ್ನ ಗಂಡನು ಮದುವೆಯಾದ ಎರಡು ತಿಂಗಳವರೆಗೆ ನನ್ನ ಸಂಗಡ ಸರಿಯಾಗಿಯೇ ಇದ್ದು ಅನೋನ್ಯವಾಗಿ ಸಂಸಾರ ಮಾಡುತ್ತಾ ಬಂದಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಸರಿಯಾಗಿಯೇ ಇದ್ದರು. ನಂತರ  ನನ್ನ ಗಂಡನು ಮತ್ತು ಅತ್ತೆ ಮಾವ ಹಾಗೂ ಮೈದುನರು ನೀನಗೆ  ಅಡುಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ, ನೀನು ಸರಿಯಾಗಿ ಇಲ್ಲಾ ನಮ್ಮ ಮನೆಯತನಕ್ಕೆ ತಕ್ಕ ಹೆಣ್ಣು ಇಲ್ಲಾ ಅಂತಾ ಅವಾಚ್ಯವಾಗಿ ಬೈಯುವುದುಹೊಡೆಯುವುದು ಮಾಡುತ್ತಾ ಬಂದಿರುತ್ತಾರೆ ನಾನು ಹಬ್ಬ ಹರಿದಿನಕ್ಕೆ ನನ್ನ ತವರು ಮನೆಗೆ ಹೋದಾಗ ಮನೆಯಲ್ಲಿ ನನ್ನ ತಂದೆ ತಾಯಿಯವರ ಮುಂದೆ ನನ್ನ ಗಂಡ  ಮತ್ತು ಗಂಡನ ಮನೆಯವರು ನನಗೆ ಕಿರುಕುಳ ಕೊಡುತ್ತಿದ್ದ ವಿಷಯ ಹೇಳಿರುತ್ತೆನೆ ಆಗ ನನ್ನ ತಂದೆ ತಾಯಿಯವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ಹೋಗಿರುತ್ತಾರೆ, ಆದರೂ ಸಹ ನನ್ನ ಗಂಡ ಮತ್ತು  ಅತ್ತೆ ಮಾವ ಮೈದುನರು ಅದೇ ರೀತಿ ನನಗೆ ತೊಂದರೆ ಕೊಡುತ್ತಿದ್ದಾಗ ಅವರು ಕೊಡುತ್ತಿದ್ದ  ತೊಂದರೆ ತಾಳಲಾರದೆ  ನಾನು  ಈಗ ಆರು ತಿಂಗಳ ಹಿಂದೆ ರಾಜವಾಳದಿಂದ ನನ್ನ ತವರು ಮನೆಗೆ ಬಂದು ನನ್ನ ತಂದೆಯವರ ಹತ್ತಿರ ವಾಸವಾಗಿದ್ದೆನು. ನಾನು ನಮ್ಮ ಮನೆಯ ಮರ್ಯಾದೆಗಾಗಿ ಅಂಜಿ ಸುಮ್ಮನಿದ್ದೆನುಇಷ್ಟು ದಿನವಾದರೂ ನನ್ನ ಗಂಡನ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನನ್ನ ತಂದೆ ಸುಬ್ಬಣ್ಣಾ ತಂದೆ ಬುಗ್ಗಪ್ಪ ಮಡಿವಾಳ, ತಾಯಿ ಮಹಾದೇವಿ ಗಂಡ ಸುಬ್ಬಣ್ಣ ಮಡಿವಳ, ಅಣ್ಣನಾದ  ಶರಣಪ್ಪ ತಂದೆ ಸುಬ್ಬಣ್ಣ ಮಡಿವಾಳ ಹಾಗು ಸಂಭಂಧಿಕರಾದ ದೇವಪ್ಪ ತಂದೆ ಬುಗ್ಗಪ್ಪ ಮಡಿವಾಳ  ಈಶ್ವರ ತಂದೆ ಶಿವರಾಯ ಮಡಿವಾಳ ಎಲ್ಲರೂ ಕೂಡಿ ನನಗೆ ಗಂಡನ ಮನೆಗೆ ಬಿಡಲು ದಿನಾಂಕ 02.01.2017 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ರಾಜವಾಳಕ್ಕೆ ಕರೆದುಕೊಂಡು ನನ್ನ ಗಂಡನ ಮನೆಗೆ ಬಂದಾಗ ಅಲ್ಲಿ ನನ್ನ ಗಂಡನಾದ 1)  ಅವಿನಾಶ ತಂದೆ ದೇವಿಂದ್ರ ಮಡಿವಾಳ, ಮಾವನಾದ 2) ದೇವಿಂದ್ರ  ತಂದೆ ಯಮನಪ್ಪ ಮಡಿವಾಳ ಅತ್ತೆಯಾದ 3) ನಿರ್ಮಲಾ ಗಂದೆ ದೇವಿಂದ್ರ ಮಡಿವಾಳ, ಮೈದುನರಾದ 4) ರಾಕೇಶ ತಂದೆ ದೇವಿಂದ್ರ ಮಡಿವಾಳ, 5) ಯಮನಪ್ಪ ತಂದೆ ದೇವಿಂದ್ರ ಮಡಿವಾಳ ಎಲ್ಲರೂ ಕೂಡಿಕೊಂಡು ಬಂದು ನಮಗೆ ನೋಡಿ ಅವಾಚ್ಯವಾಗಿ ಬೈಯ ಹತ್ತಿದ್ದರು ನಾನು ಅವರಿಗೆ ನನಗೆ ಗಂಡನ ಮನೆಗೆ ಬಿಡಲು ಬಂದಿರುತ್ತಾರೆ ಯಾಕೆ? ಬೈಯುತ್ತಿದ್ದಿರಿ ಅಂತಾ ಅಂದಾಗ ನನ್ನ ಗಂಡನು ಏ ಬೊಸಡಿ ನೀನಗೆ ಮೊದಲೇ ಮನೆಯಲ್ಲಿ ಅಡುಗೆ ಕೆಲಸ ಮಾಡಲು ಬರುವುದಿಲ್ಲಾ ಹೊಲ ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲಾ ಮತ್ತು ಇಷ್ಠು ದಿನ ತವರು ಮನೆಯಲ್ಲಿ ಇದ್ದು ಇವತ್ತು ಬಂದ್ದಿದಿ ಬೊಸಡಿ ಅಂತಾ ಬೈದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಮತ್ತು ಅತ್ತೆ ಮಾವ ಇವರು ಈ ರಂಡಿಗೆ ಇವತ್ತು ಗಂಡನ ನೇನಪು ಆಗಿದೆ ಅಂತಾ ಬೈಯದಿರುತಾರೆ ಅಲ್ಲದೆ ನನ್ನ ಅತ್ತೆ ನನ್ನ ತಲೆಯ ಕೂದಲು ಹಿಡಿದು ಜಗ್ಗಿರುತ್ತಾಳೆ, ಮತ್ತು ಮೈದುನರು ಈ ಬೋಸಡಿಗೆ ಬಹಳ ಸೊಕ್ಕ ಇದೆ ಇವತ್ತು ಎಲ್ಲರಿಗೂ ಕರೆದುಕೊಂಡು ಗಂಡ ಮನೆಗೆ ಬಂದಾಳ ಹೊಡೆಯಿರಿ ಅಂತಾ ಬೈದಿರುತ್ತಾರೆ ಅಷ್ಟರಲ್ಲಿಯೇ ನನ್ನ ತಂದೆ ತಾಯಿ ಮತ್ತು ನನ್ನ ಅಣ್ಣ ಹಾಗೂ ಸಂಭಂದಿಕರು ಬಂದು ನನಗೆ ಹೊಡೆಯುವುದು ನೋಡಿ ಬಿಡಿಸಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 04-01-2017 ರಂದು ಮುಂಜಾನೆ ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಟಿಪ್ಪರ್ಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ ಎಸ್.ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಜ್ಯೋತಿ ಹೋಟೆಲ ಹತ್ತಿರ ಮುಂಜಾನೆ  ಹೋಗಿರೋಡಿನ ಪಕ್ಕದಲ್ಲಿ ನಿಂತು ಮರಳು ತುಂಬಿದ ಟಿಪ್ಪರ್ಗಳು ಬರುವದನ್ನು ಕಾಯುತ್ತ ಇದ್ದೆವು. ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಮೂರು ಟಿಪ್ಪರ್ಗಳಿಗೆ ನೋಡಿ ಬ್ರೀಜ್ ಹತ್ತಿರ ರೋಡಿನಲ್ಲಿ ಕೈ ಮಾಡಿ ನಿಲ್ಲಿಸಿ ಟಿಪ್ಪರ್ ಚಾಲಕರಿಗೆ ಹೆಸರು ಕೇಳಲಾಗಿ ಅವರು 1) ದೇವರಾಜ ತಂದೆ ಬಸವರಾಜ ಭೊವಿ ಸಾ|| ಚನ್ನೂರ (ಕೆ) ತಾಃ ಶಹಪೂರ ಜಿಲ್ಲಾಃ ಯಾದಗಿರಿ ಟಿಪ್ಪರ್ ನಂ ಕೆ.ಎ32ಸಿ3705 ನೇದ್ದರ ಚಾಲಕ ಅಂತ ತಿಳಿಸಿದನು 2) ಮಲ್ಲಿಕಾರ್ಜುನ ತಂದೆ ನರಸಪ್ಪ ಕುದರಮಳ್ಳಿ, ಸಾಃ ಚನ್ನೂರ (ಕೆ) ತಾಃ ಶಹಾಪೂರ ಟಿಪ್ಪರ್ ನಂ ಕೆಎ32ಸಿ3704 ನೇದ್ದರ ಚಾಲಕ ಅಂತ ತಿಳಿಸಿದನು 3) ಶಂಕರ ತಂದೆ ಮೈಲಾರ ಮಾದರ @ ಹೊಸಮನಿ ಸಾಃ ಚಟ್ನಳ್ಳಿ ತಾಃ ಸಿಂದಗಿ ಟಿಪ್ಪರ್ ಎಪಿ-28-ಟಿಸಿ-9798 ನೇದ್ದರ ಚಾಲಕ ಅಂತ ತಿಳಿಸಿದನು, ನಂತರ ಅವರಿಗೆ ಟಿಪ್ಪರ್ಗಳಲ್ಲಿ ಮರಳು ತುಂಬಿಕೊಂಡು ಬರಲು ನಿಮ್ಮ ಹತ್ತಿರ ಸಂಭಂದ ಪಟ್ಟ ಇಲಾಖೆಯಿಂದ ರಾಯಲ್ಟಿ/ಪರವಾನಿಗೆ ಪತ್ರ ಇದೇಯೆ ಅಂತ ವಿಚಾರಿಸಲು ಅವರು ನಾವು ಭೀಮಾ ನದಿಯಿಂದ ಮರಳು ತುಂಬಿಕೊಂಡು ಬರುತ್ತಿದ್ದು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಅಂತ ಹೇಳಿದರು. ನಂತರ ಸ್ಥಳದಲ್ಲಿದ್ದ ಟಿಪ್ಪರ್ಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ನಂ ಕೆ.ಎ32ಸಿ3705 ನೇದ್ದು ಇದ್ದು ಅದರಲ್ಲಿ 6 ಬ್ರಾಸ್ ಮರಳು ಅ.ಕಿ 6000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ, ಮತ್ತು 2) ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ನಂ ಕೆಎ32-ಸಿ-3704 ನೇದ್ದು ಇದ್ದು ಅದರಲ್ಲಿ 4 ಬ್ರಾಸ್ ಮರಳು ಅ.ಕಿ 4000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ 3) ಟಾಟಾ ಕಂಪನಿಯ ಟಿಪ್ಪರ ನಂ ಎಪಿ ನಂ 28-ಟಿಸಿ-9798 ನೇದ್ದು ಇದ್ದು ಅದರಲ್ಲಿ 5 ಬ್ರಾಸ್ ಮರಳು ಅ.ಕಿ 5000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ ಸದರಿ ಟಿಪ್ಪರ್ಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಮತ್ತು ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಮೂರು  ಟಿಪ್ಪರ್ಗಳನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.