POLICE BHAVAN KALABURAGI

POLICE BHAVAN KALABURAGI

19 December 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಸಪ್ಪ ತಂದೆ ಶಿವಪ್ಪ ಯಾಳವಾರ ಸಾ: ಹರನೂರ ತಾ: ಜೇವರಗಿ ಇವರ ತಮ್ಮನಾದ ಮರೆಪ್ಪ ಯಾಳವಾರ ಇತನು ಕಲಬುರಗಿ ಕೆ.ಎಸ.ಆರ್.ಟಿ.ಸಿ ಡಿಪೋ ನಂ 4 ರಲ್ಲಿ ಚಾಲಕ ಕಂ ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 12.12.16 ರಂದು ಮುಂಜಾನೆ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಅದೆ ದಿವಸ ರಾತ್ರಿ 9.00 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ರಾಹುಲಕುಮಾರ ತಂದೆ ದತ್ತು ಪಂಚಶೀಲ ಇವರು ಫೋನ ಮಾಡಿ ನಿಮ್ಮ ತಮ್ಮ ಮರೆಪ್ಪ ಯಾಳವಾರ ಇತನಿಗೆ ಜೇವರಗಿ ಪಟ್ಟಣದಲ್ಲಿ ಎಕ್ಸಿಡೆಂಟ ಆಗಿರುತ್ತದೆ. ಅವನಿಗೆ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿದ ಕೂಡಲೇ ನಾನು ಮತ್ತು ನನ್ನ ತಾಯಿ ಶಾಂತಮ್ಮ ಯಾಳವಾರ, ನಮ್ಮ ತಮ್ಮನ ಹೆಂಡತಿ ನಿರ್ಮಲಾ ಯಾಳವಾರ ಮೂವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ  ಹೋಗಿ ನೋಡಲು ನನ್ನ ತಮ್ಮ ಮರೆಪ್ಪ ಇತನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದನು ಅವನಿಗೆ ಮಾತನಾಡಿಸಲು ಅವನು ಮಾತನಾಡಲಿಲ್ಲಾ. ಅವನ ತಲೆಯ ಬಲಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿ ಮೂಗಿನಿಂದ ರಕ್ತ ಬಂದಿದ್ದು, ಮತ್ತು ಅವನ ಎಡಕೈಗೆ ರಕ್ತಗಾಯವಾಗಿತ್ತು. ಅಲ್ಲಿಯೇ ಇದ್ದ ರಾಹುಲಕುಮಾರ ಇತನಿಗೆ ಕೇಳಲಾಗಿ ಅವನು ಹೇಳಿದೆನಂದರೆ, ನಾನು ಮತ್ತು ನನಗೆ ಪರಿಚಯದ ಮಹ್ಮದ ಫೈಯಾಜ ಬಾಗವಾನ ಇಬ್ಬರು ಕೂಡಿಕೊಂಡು ಸಾಯಾಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಗೊವಾ ಹೊಟೇಲ ಎದುರುಗಡೆ ರೊಡಿನ ಸೈಡಿನಲ್ಲಿ ಬರುತ್ತಿದ್ದಾಗ ನಮ್ಮ ಮುಂದೆ ಅಂದರೆ ಸಿಂದಗಿ ಕ್ರಾಸ ಕಡೆಗೆ ನಿಮ್ಮ ತಮ್ಮ ಮರೆಪ್ಪ ಇತನು ರೋಡಿನ ಸೈಡಿನಿಂದ ನಡೆದುಕೊಂಡು ಹೋಗುತ್ತಿದ್ದನು. ಅದೆ ವೇಳೆಗೆ ಕಲಬುರಗಿ ಕಡೆಯಿಂದ ಒಂದು ಗೂಡ್ಸ ವಾಹನ ಚಾಲಕನು ತನ್ನ ವಾಹನದಲ್ಲಿ ಹೊಸ ಮೊಟಾರ ಸೈಕಲಗಳನ್ನು ತುಂಬಿಕೊಂಡು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ ಸೈಡಿನಿಂದ ಹೋಗುತ್ತಿದ್ದ ಮರೆಪ್ಪನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದನು ಅಗ ನಿಮ್ಮ ತಮ್ಮ ರೋಡಿನ ಸೈಡಿನಲ್ಲಿ ಬಿದ್ದನು. ಗೂಡ್ಸ ವಾಹನ ಸ್ವಲ್ಪ ಮುಂದೆ ಹೋಗಿ ನಿಂತಿತ್ತು. ಅದರ ನಂಬರ ನೋಡಲು ಅದು ಕೆಎ-33-ಎ-3739 ನೇದ್ದು ಇತ್ತು ಅದರ ಚಾಲಕನಿಗೆ ಹೆಸರು ಕೇಳುತ್ತಿದಂತೆ ಅವನು ತನ್ನ ವಾಹನದೊಂದಿಗೆ ಓಡಿ ಹೋದನು ಅವನಿಗೆ ನೋಡಿದಲ್ಲಿ ಗುರುತ್ತಿಸುತ್ತೇನೆ ಅಂತ ಹೇಳಿದನು. ನಂತರ ನಿಮ್ಮ ತಮ್ಮನಿಗೆ ನಾವಿಬ್ಬರು ಕೂಡಿಕೊಂಡು ಅಪರಿಚಿತ ಆಟೋದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಉಪಚಾರ ಪಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತೇನೆ ಅಂತ ಹೇಳಿದನು. ಅವನು ಹೇಳಿದರಿಂದ ನನಗೆ ವಿಷಯ ಗೊತ್ತಾಗಿರುತ್ತದೆ. ನನ್ನ ತಮ್ಮನ ಸ್ಥಿತಿ ಸಿರಿಯಾಸ್ ಇದ್ದಿದ್ದರಿಂದ ನಾವು ಹೆಚ್ಚಿನ ಉಪಚಾರ ಕುರಿತು ಅಲ್ಲಿಂದ ಕಲಬುರಗಿ ವಾತ್ಸಲ್ಯ ಆಸ್ಪತ್ರೆಯಲ್ಲಿ ಒಯ್ದು ಸೇರಿಕೆ ಮಾಡಿರುತ್ತೇವೆ. ಅಲ್ಲಿ ಕೂಡಾ ವೈದ್ಯರು  ನನ್ನ ತಮ್ಮನು ಸಿರಿಯಾಸ್ ಇರುವದರಿಂದ ವೈದ್ಯರು ಅವನಿಗೆ ಬೇರೆ ಕಡೆಗೆ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಲು ಹೇಳಿದರಿಂದ ಇಂದು ದಿನಾಂಕ: 16.12.16 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮನ ಹೆಂಡತಿ ನಿರ್ಮಲಾ ಹಾಗೂ ನಮ್ಮ ಸಂಬಂಧಿಕನಾದ ಶಾಂತಪ್ಪ ತಂದೆ ರಾಯಪ್ಪ ದೊಡ್ಡಮನಿ ಸಾ: ಸಿ.ಐ.ಬಿ ಕಾಲೂನಿ ಕಲಬುರಗಿ ಎಲ್ಲರೂ ಕೂಡಿ ಅವನಿಗೆ ಹೆಚ್ಚಿನ ಉಪಚಾರ ಕುರಿತು ಖಾಸಗಿ ಅಂಬುಲೆನ್ಸ ವಾಹನದಲ್ಲಿ ಜೇವರಗಿ ಮುಖಾಂತರ ಬೆಂಗಳೂರಿಗೆ ತಗೆದುಕೊಂಡು ಹೋಗುತ್ತಿದ್ದಾಗ ಜೇವರಗಿ ದಾಟಿ ಹೋಗುತ್ತಿದ್ದಾಗ ಮುಂಜಾನೆ 7.00 ಗಂಟೆ ಸುಮಾರಿಗೆ ವೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಸುಗಣ್ಣಗೌಡ ತಂದೆ ಗುರಪ್ಪಗೌಡ ಕಂಚಗಾರಹಳ್ಳಿ ಸಾಃ ರಾಮಪೂರ ತಾಃ ಜೇವರಗಿ ಇವರ ಊರಲ್ಲಿ ಬಕ್ಕಪ್ಪಯ್ಯ ದೇವರ ಜಾತ್ರೆ ಪ್ರತಿ ವರ್ಷ ಊರಲ್ಲಿ ಎಲ್ಲರೂ ಕೂಡಿ ಮಾಡುತ್ತಾ ಬಂದಿರುತ್ತೆವೆ. ಆದರೆ ನಮ್ಮೂರ ಶಂಕರಗೌಡ ಪೊಲೀಸ್ ಪಾಟೀಲ ಇತನು ತನ್ನ ನೇತೃತ್ವದಲ್ಲಿ ಈ ವರ್ಷ ಜಾತ್ರೆ ಮಾಡಿರುತ್ತಾರೆ. ನಮ್ಮ ಕಂಚಗಾರಹಳ್ಳಿಯ ಮನೆತನ ಅಣ್ಣತಮ್ಮಕಿಯವರಿಗೆ ಊರಿನ ಜಾತ್ರೆ ಪಟ್ಟಿ ಸಹ ಕೇಳಿರುವುದಿಲ್ಲಾ ಆದರೂ ಸಹ ನಾವು ದೇವರ ಪಟ್ಟಿ ಅಂತಾ ನಮ್ಮ ಕಂಚಗಾರಹಳ್ಳಿಯ ಮನೆತನ ಅಣ್ಣತಮ್ಮಕಿಯವರೆಲ್ಲರೂ ಕೂಡಿ ದೇವರ ಪಟ್ಟಿ ಜಮಾ ಮಾಡಿ ದೇವರ ಜಾತ್ರೆಗೆ ಕೊಟ್ಟಿರುತ್ತೆವೆ. ದಿ. 12.12.2016 ರಂದು ನಮ್ಮೂರಲ್ಲಿ ಜಾತ್ರೆ ಆಗಿರುತ್ತದೆ. ಊರಲ್ಲಿ ನಮ್ಮ ಕಂಚಗಾರಹಳ್ಳಿಯ ಮನೆತನದ ಅಣ್ಣತಮ್ಮಕೀಯವರು ಊರಲ್ಲಿ ಯಾರಿಗೂ ದ್ವೇಷದಿಂದ ಕಾಣದೆ ನಾವು ನಮ್ಮ ಕೆಲಸ ಮಾಡಿಕೊಂಡು ಊರಲ್ಲಿ ಸರಿಯಾಗಿ ಇರುವುದು ನೋಡಿ ಶಂಕರಗೌಡ ತಂದೆ ಬಸವಂತರಾಯಗೌಡ ಪೊಲೀಸ್ ಪಾಟೀಲ ಇತನು ಸಹಿಸದೆ ಊರಲ್ಲಿ ತನ್ನದೆ ನಡೆಯಬೇಕು ಅಂತಾ ಅಹಂಕಾರದಿಂದ ನಮ್ಮ ಸಂಗಡ ದ್ವೇಷ ಸಾದಿಸುತ್ತಾ ಬಂದಿರುತ್ತಾನೆ ಅದರಿಂದ ಅವರ ಮತ್ತು ನಮ್ಮ ಮದ್ಯೆ ವೈಮನಸ್ಸು ಇರುತ್ತದೆ. ಮತ್ತು ಶಂಕರಗೌಡ ಇತನು ತನ್ನ ಸಂಗಡಿಗರೊಂದಿಗೆ ಕೂಡಿ ಈ ವರ್ಷ ಕಂಚಗರಹಳ್ಳಿಯವರಿಗೆ  ಬಿಟ್ಟು ಹೇಗೆ ಜಾತ್ರೆ ಮಾಡಿರುತ್ತೆವೆ ಅಂತಾ ಬೈದಾಡುತ್ತಾ ಬಂದಿರುತ್ತಾನೆ.  ದೇವರ ಹೆಸರಿನಲ್ಲಿ ಅವನ ಜೊತೆ ಎಲ್ಲಿ ಕಿರಿಕಿರಿ ಅಂತಾ ನಾವು ಸುಮ್ಮನಿದ್ದೆವು.ದಿ. 17.12.2016 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ  ಗುರಣ್ಣಗೌಡ ತಂದೆ ಮಲ್ಕಣ್ಣಗೌಡ ಕಂಚಗಾರಹಳ್ಳಿ, ಬಸಮ್ಮ ಗಂಡ ಶಿವಣಗೌಡ ಕಂಚಗಾರಹಳ್ಳಿ, ಜಯಶ್ರೀ ಗಂಡ ಶಿವಪುತ್ರಪ್ಪ ಚಾಂದಕವಟೆ ಎಲ್ಲರೂ ನಮ್ಮ ಮನೆಯ ಹತ್ತಿರದ ಥೆರಿನ ಜಾಗದಲ್ಲಿ ಇದ್ದಾಗ 1) ಶಂಕರಗೌಡ ತಂದೆ ಬಸವಂತರಾಯ ಪೊಲೀಸ್ ಪಾಟೀಲ, 2) ಸಂಗಣ್ಣಗೌಡ ತಂದೆ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ 3) ಕೊಟ್ರೇಪ್ಪ ತಂದೆ ಮಹಾಂತಗೌಡ ಬಿರಾದಾರ  4) ಶರಣು ತಂದೆ ಸುಬಾಷಚಂದ್ರ  ಕೂಟನೂರ, 5) ರುದ್ರಗೌಡ ತಂದೆ ಶಂಕರಗೌಡ ಪೊಲೀಸ್ ಪಾಟೀಲ 6) ಕರಣಪ್ಪ ತಂದೆ ಶಂಕರಗೌಡ ಪೊಲೀಸ್ ಪಾಟೀಲ 7) ಬಸಲಿಂಗಪ್ಪಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ 8) ಬಸುಗೌಡ ತಂದೆ ಗುರುಲಿಂಗಪ್ಪಗೌಡ ಪೊಲೀಸ್ ಪಾಟೀಲ 9) ಸಿದ್ದಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ  10) ಮಲ್ಲಣ್ಣಗೌಡ ತಂದೆ ಮಹಾಂತಗೌಡ ಬಿರಾದಾರ11) ತಾಯಮ್ಮ ಗಂಡ ಸುಬಾಚಂದ್ರ ಕೂಟನೂರ, 12) ಸುಭದ್ರಮ್ಮ ಗಂಡ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ 13) ನಾಗಮ್ಮ ಗಂಡ ಶಂಕರಗೌಡ ಪೊಲೀಸ್ ಪಾಟೀಲ 14) ರೂಪಾ ಗಂಡ ಸಂಗಣ್ಣಗೌಡ ಪೊಲೀಸ್ ಪಾಟೀಲ 15) ಅಯ್ಯಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ 16)  ಗುರಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ 17) ರಜನಿ ಗಂಡ ಕೊಟ್ರೇಪ್ಪ ಬಿರಾದಾರ, 18) ಈಶಮ್ಮ ಗಂಡ ಸಿದ್ದಣ್ಣಗೌಡ ಪೊಲೀಸ್ ಪಾಟೀಲ 19) ಶರಣು ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ 20) ಕವಿತಾ ಗಂಡ ಕರಣಪ್ಪ ಪೊಲೀಸ್ ಪಾಟೀಲ 21) ನಿರ್ಮಲಾ ಗಂಡ ರುದ್ರಗೌಡ ಪೊಲೀಸ್ ಪಾಟೀಲ ಸಾಃ ಎಲ್ಲರೂ ರಾಮಪೂರ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು  ಈ ವರ್ಷ ಕಂಚಗಾರಹಳ್ಳಿ ಮನೆತನದವರಿಗೆ ಬಿಟ್ಟು ಹೇಗೆ ಜಾತ್ರೆ ಮಾಡಿದೆವು ಈ ಮಕ್ಕಳಿಗೆ ಸೊಕ್ಕು ಬಹಳ ಇದೆ ಹೀಗೆ ಮಾಡಬೇಕು ಸೂಳೆ ಮಕ್ಕಳಿಗೆ ಅಂತಾ ಅವಾಚ್ಯವಾಗಿ ಬೈಹತ್ತಿದ್ದರು. ಆಗ ನಾನು ಅವರಿಗೆ ನಾವು ನೀಮಗೆ ಏನು ಅಂದಿಲ್ಲಾ ಮತ್ತೆ ನಮ್ಮ ಹತ್ತಿರ ಬಂದು ನಮಗೆ ಬೈಯುತ್ತಿರಿ ಅಂತಾ ಅಂದಾಗ ಶಂಕರಗೌಡ ಇತನು  ನನಗೆ ಏ ಸೂಳೆ ಮಗನೆ ನನ್ನ ಎದುರು ಮಾತನಾಡುತಿ ಅಂತಾ ಅಂದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಸಂಗಣ್ಣಗೌಡ ಇತನು ನನಗೆ ನೂಕಿಸಿಕೊಟ್ಟನು ನಾನು ನೇಲಕ್ಕೆ ಬಿದ್ದಾಗ ಕೊಟ್ರೆಪ್ಪ ಇತನು ಕಾಲಿನಿಂದ ನನ್ನ ಬೇನ್ನು ಮೇಲೆ ಜೋರಾಗಿ ಒದ್ದಿರುತ್ತಾನೆ, ನನಗೆ ಹೊಡೆಯುವುದನ್ನು ನೋಡಿ ನನ್ನ ಸಂಗಡ ಇದ್ದವರು ಬಿಡಿಸಲು ಬಂದಾಗ ಗುರಣ್ಣಗೌಡ ಇತನಿಗೆ ಶರಣು ಕೂಟನೂರ ಇತನು ಬಡಿಗೆಯಿಂದ ಎರಡು ಕೈಗಳ ಮೇಲೆ ಹೊಡೆದಿರುತ್ತಾನೆ, ಸಂಗಣ್ಣಗೌಡ ಇತನು ಗುರಣ್ಣಗೌಡ ಇತನ ಬಲಗೈ ಮುಳಕೈ ಕೇಳಗೆ ಕಚ್ಚಿರುತ್ತಾನೆಬಸ್ಸಮ್ಮ ಕಂಚಗಾಹಳ್ಳಿ ಇವಳಿಗೆ ರುದ್ರಗೌಡ ಇತನು ಅವಳ ಮೈ ಮೇಲಿನ ಸೀರೆ ಹಿಡಿದು ಜಗ್ಗಿ ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆಮತ್ತು ಕರಣಪ್ಪ ಇತನು ಕಾಲಿನಿಂದ ಅವಳ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಮಲ್ಲಣ್ಣಗೌಡ ಇತನು ಕೈ ಮುಷ್ಠಿ ಮಾಡಿ ಜೋರಾಗಿ ಜಯಶ್ರೀ ಇವಳ ಬಾಯಿಯ ಮೇಲೆ ಹೋಡೆದಾಗ ಅವಳಿಗೆ ರಕ್ತ ಬಂದಿರುತ್ತದೆ. ಮತ್ತು ತಾಯಮ್ಮ ಇವಳು ಜಯಶ್ರೀ ತಲೆಯ ಕೂದಲು ಹಿಡಿದು ಜಗ್ಗಿರುತ್ತಾಳೆ, ಮತ್ತು ಕೊಟ್ರೆಪ್ಪ ಇತನು ಕಲ್ಲಿನಿಂದ ಗುರಣ್ಣನಿಗೆ ಬೇನ್ನು ಮೇಲೆ ಹೊಡೆದಿರುತ್ತಾನೆ, ಮತ್ತು ಬಸಮ್ಮಳಿಗೆ ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾನೆ, ಊಳಿದವರೆಲ್ಲರೂ ಈ ಸೂಳಿಮಕ್ಕಳಿಗೆ ಸೊಕ್ಕು ಬಹಳ ಇದೆ ಬಿಡಬ್ಯಾಡಿರಿ ಹೊಡೆಯಿರಿ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ, ಶಂಕರಗೌಡ ಪೊಲೀಸ್ ಪಾಟೀಲ ಇತನು ಈ ಕಂಚಗಾರಹಳ್ಳಿ ಸೂಳಿ ಮಕ್ಕಳಿಗೆ ಸೊಕ್ಕು ಬಹಳ ಇದೆ ಇವರಿಗೆ ಹೀಗೆ ಬಿಡಬಾರದು ಈ ಮಕ್ಕಳು ಎನಾದರೂ ಮುಂದೆ ನಮ್ಮ ತಂಟೆಗೆ ಬಂದರೆ ಇವರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ವಿಶ್ವನಾಥ ತಂದೆ ನಾಮದೇವ್ ಕುಂಬಾರ್ ಸಾ: ಭಂಕೊರ ರವರದು ಭಂಕೊರ ಗ್ರಾಮದಲ್ಲಿ ಜೈ ಭವಾನಿ ವರ್ಕ್ ಶಾಪ್ ಹಾರ್ಡ್ವೇರ್ ಅಂಗಡಿ ಇದ್ದು  ಸದರಿ ಅಂಗಡಿಯ ಯಾರೊ ಕಳ್ಳರು  ದಿನಾಂಕ 10/12/2016 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 11/12/2016 ರ ಬೆಳಗಿನ ಜಾವದ ಅವಧಿಯಲ್ಲಿ ವರ್ಕ್ ಶಾಪಗೆ  ಹಾಕಿದ ಕೀಲಿ ಮುರಿದು ಒಳಗಡೆ ಇದ್ದ ಒಂದು ವೆಲ್ಡಿಂಗ್ ಮೆಷಿನ್ ಅ.ಕಿ 12000-00 ರೂ ಮತ್ತು ಕೇಬಲ್ ಹೋಲ್ಡರ್ ಸೆಟ್ ಅ.ಕಿ 3000 -00 ರೂ ನೇದ್ದುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಗುರುನಾಥ ತಂದೆ ಸಾಯಬಣ್ಣ ಪಿ.ಡಿ.ಓ ಗ್ರಾಮ ಪಂಚಾಯತ ಮರತೂರ ಇವರು ದಿನಾಂಕ: 16/12/2016 ರಂದು ಮದ್ಯಾಹ್ನ 1-00 ಗಂಟೆಗೆ ಸುಮಾರಿಗೆ ಮರತೂರ ಗ್ರಾಮದ ಹರಿಜನ ವಾಡದಲ್ಲಿರುವ ಸಾರ್ವಜನಿಕ ರಸ್ತೆ ಕಟ್ಟಿದ ಗೋಡೆಯನ್ನು ತೆರವುಗೊಳಿಸಲು ಹೋದಾಗ ಯಾರೋ ಎರಡು ಜನ ಅಪರಿಚಿತರು ಬಂದು ನನಗೆ ಆಕ್ರಮ ತಡೆ ಮಾಡಿ  ಗೋಡೆಯನ್ನು ತೆರವುಗೊಳಿಸಲು ಬಿಡದೇ ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.  

18 December 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ:18/12/2016 ರಂದು  ಶ್ರೀ ಶಿವಲಿಂಗಪ್ಪಾ ತಂದೆ ವೀಠಲ ಗೌಳಿ ಸಾ:ಜನತಾ ಲೇಜೌಟ ಕಲಬುರಗಿ ರವರ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ; 17/12/16 ರಂದು ರಾಜಾಪೂರಕ್ಕೆ ಖಾಸಗಿ ಬಸ್ಸ ನಂಬರ ಕೆಎ- 34 ಎ-2852 ನೇದ್ದರಲ್ಲಿ  ನಾನು ಮತ್ತು ನನ್ನ ಹೆಂಡತಿ ಶಾಂತಾಬಾಯಿ ನನ್ನ ಮಕ್ಕಳಾದ ದೀಪಾ ರಾಣಿ, ಪ್ರೀತಿ, ನೀತಿನ, ಚೇತನ, ನಮ್ಮ ತಮ್ಮ ಮಲ್ಲಿನಾಥ ಗೌಳಿ ಸೊಸೆ ಶಿವಲೀಲಾ ಗಂಡ ಮಲ್ಲಿನಾಥ ಗೌಳಿ, ನನ್ನ ತಮ್ಮನ ಮಗ ಈಶ್ವರ ತಂದೆ ಮಲ್ಲಿನಾಥ ಗೌಳಿ, ನಮ್ಮ ತಾಯಿ ಅಂಬುಬಾಯಿ ಗಂಡ ವಿಠಲ ಗೌಳಿ, ನಮ್ಮ ತಂದೆ ವಿಠಲ ತಂದೆ ಶರಣಪ್ಪ ಗೌಳಿ ಹಾಗೂ ಇತರೆ 40-50 ಜನರು ಕೂಡಿ ಸದರ ಬಸ್ಸಿನಲ್ಲಿ ಹೋಗುತ್ತಿರುವಾಗ ಬಸ್ಸ ಚಾಲಕ ರಾಮ ಮಂದಿರ  ಮಾರ್ಗವಾಗಿ ಜೇವರ್ಗಿ ಕಡೆಗೆ ಹೋಗುವಾಗ ಬಸ್  ಚಾಲಕನು ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸುತ್ತಿದ್ದಾಗ ನಾವು ಸವಕಾಶವಾಗಿ ಚಲಾಯಿಸಲು ಹೇಳಿದರು ಕೇಳದೆ ಅತೀವೇಗದಿಂದ ಓಡಿಸಿ ನಂದಿಕೂರ ದಾಟಿ ಸ್ವಲ್ಪ ಮುಂದೆ ಬಸ್ಸಿನ ಎದುರಿನ ಲಾರಿಯ ಹಿಂಬಾಗಕ್ಕೆ ಜೋರಾಗಿ ಹಾಯಿಸಿ ಡಿಕ್ಕಿ ಪಡೆಯಿಸಿದ್ದು.. ಅಫಘಾತದಿಂದ ಬಸ್ಸಿನಲ್ಲಿದ್ದ ನನ್ನ ಮಗಳಾದ ದೀಪಾರಾಣಿಯ ಮೂಗಿಗೆ ರಕ್ಗಗಯವಾಗಿದ್ದು. ಚೇತನನಿಗೆ ಬಲಗಣ್ಣೀನ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು ನನ್ನ ತಮ್ಮ ಮಲ್ಲಿನಾಥನಿಗೆ ಎದೆಗೆ ಗುಪ್ತ ಪೆಟ್ಟಾಗಿದ್ದು, ನನ್ನ ಸೊಸೆ ಶಿವಲೀಲಾಗೆ ಕೆಳ ತುಟಿಗೆ ಎಡ ಬಲ ಮೋಳಕಾಲಿಗೆ ರಕ್ತಗಾಯ ಗುಪ್ತ ಗಾಯವಾಗಿದ್ದು ಉಳಿದಂತೆ ನಮ್ಮ ಸಂಬಂದಿಕರು, ಬೀಗರುಗಳಾದ ಅಂಬಿಕಾ ಚೌದ್ರಿ, ಅಂಬವ್ವ ಗಂಡ ಬಸವರಾಜ ಹರಳಯ್ಯ, ನಾಗಮ್ಮ ಗಂಡ ಸಾಯಿಬಣ್ಣ ಕಡಬಿನ್‌‌, ಗುರುಲಿಂಗಪ್ಪ ತಂದೆ ಸಿದ್ದಣ್ಣ ಸನಗುಂದಿ, ಮಾಣೀಕರಾವ ಉಪ್ಪಾರ, ಚೆನ್ನಮ್ಮ ಗಂಡ ಸಿದ್ದರಾಮ ಹರಳಯ್ಯ, ಸಿದ್ದಾರಾಮ ತಂದೆ ಲಕ್ಷ್ಮಣ ಹರಳಯ್ಯ ಪ್ರೇಮಾ ಗಂಡ ಶ್ರೀಮಂತ ಚೌದ್ರಿ, ದೀಪಿಕಾ ತಂದೆ ಸೂರ್ಯಕಾಂತ, ಬೌರಮ್ಮ ಗಂಡ ರಾಜಕುಮಾರ ಚೌದ್ರಿ, ಲಕ್ಷ್ಮಿಬಾಯಿ ಗಂಡ ಶಿವಶರಣಪ್ಪಾ ಚೌದ್ರಿ, ರಮಾಬಾಯಿ ಗಂಡ ನಾಗೇಂದ್ರಪ್ಪಾ ಹರಳಯ್ಯ, ಶಿವಾನಂದ ತಂದೆ ಚಂದ್ರಶ್ಯಾ, ಗುರುಬಾಯಿ ಹರಳಯ್ಯ ಸಾ: ನರೋಣಾ ಶಾಂತಪ್ಪಾ ತಂದೆ ಹಣಮಂತ ಚೌದ್ರಿ, ನೀಲಮ್ಮ ಗಂಡ ಶಾಂತಪ್ಪಾ ಚೌದ್ರಿ ಸುಭಾಷ ತಂದೆ ಬಾಬುರಾವ ಜಮಗಾ, ರಾಜಶೇಖರ ತಂದೆ ತಿಪ್ಪಣ್ಣ ದೊಡ್ಡಮನಿ  ಹಾಗೂ ಇತರೆಯವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು. ನನ್ನ ಮಗಳಾದ ಪ್ರೀತಿ ಇವಳಿಗೆ ತಲೆಗೆ, ಎದೆಗೆ ಪೆಟ್ಟಾಗಿ ಪ್ರಜ್ಞೆ ಇರಲಿಲ್ಲಾ ಅಫಘಾತಕ್ಕೆ ಒಳಗಾದ  ಲಾರಿ ನಂಬರ ಎಮ್‌ಹೆಚ್‌‌- 46 ಹೆಚ್‌‌- 2194 ಯಿದ್ದು. ನಂತರ ನಮ್ಮೇಲ್ಲರಿಗೆ ಇತರೆಯವರು ಬಸ್ಸಿನಿಂದ ಹೊರಗೆ ಇಳಿಸಿಕೊಂಡು 108 ಅಂಬುಲೈನ್ಸ್‌ ಕ್ಕೆ ಕರೆ ಮಾಡಿದಾಗ ಸದರಿ ವಾಹನಗಳು ಬಂದು ನಮ್ಮೇಲ್ಲರಿಗೆ ಜಿಜಿಹೆಚ್‌ ಕಲಬುರಗಿ ಹಾಗೂ ಗಂಗಾ ಆಸ್ಪತ್ರೆ ಕಲಬುರಗಿ ತಂದು ಸೇರಿಕೆ ಮಾಡಿದ್ದು. ನನ್ನ ಮಗಳಾದ ಪ್ರೀತಿ ವ: 19 ವರ್ಷ ಇವಳಿಗೆ ಭಾರಿ ಗಾಯದಿಂದ ಉಪಚಾರ ಹೊಂದುತ್ತಾ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 18/12/16 ರಂದು 1 ಎಎಮಕ್ಕೆ ಮೃತ್ತಪಟ್ಟಿರುತ್ತಾಳೆ. ಕಾರಣ ಖಾಸಗಿ ಬಸ್ಸ ನಂಬರ ಕೆಎ- 34 ಎ- 2852 ನೇದ್ದರ ಚಾಲಕ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸಿ ಎದುರಿನಲ್ಲಿ ಹೊರಟ ಟ್ರಾಯಿಲರ್‌ಗೆ ಲಾರಿಗೆ ಡಿಕ್ಕಿ ಪಡೆಯಿಸಿ ಬಸ್ಸಿನಲ್ಲಿದ್ದವರಿಗೆ ಸಾದಾ ಮತ್ತು ಬಾರಿಗಾಯಗೊಳಿಸಿ ನನ್ನ ಮಗಳ ಸಾವಿಗೆ ಕಾರಣನಾದ ಬಸ್ಸ ಚಾಲಕನ ಮೇಲೆ ಕೂನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಶಂಡದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ :  ದಿ 17.12.2016 ರಂದು ಫಿರ್ಯಾದಿ ಮಾನಸಿಂಗ್ ತಂದೆ ಧಂಜು ರಾಠೋಡ ಸಾ|| ಖ್ಯಾದ್ಯಾಪುರ ಠಾಣೆಗೆ ಹಾಜರಾಗಿ ನಾನು ಮಾನಸಿಂಗ್ ತಂದೆ ದಂಜುನಾಯ್ಕ ರಾಠೋಡ ಸಾಃ ಖ್ಯಾದಾಪೂರ ಇದ್ದು ನಮ್ಮ ತಂದೆಯವರು ಮೃತಪಟ್ಟಿdfdu  ಹೊಲದ ವಿಷಯದಲ್ಲಿ ನನ್ನ ತಮ್ಮ ಶಂಕರ ನನ್ನ ಜಗಳ ಜಗಳ ಮಾಡುತ್ತಾ ಬಂದಿರುತ್ತಾನೆ  ಅದರಿಂದ ಅವನಿಗೂ ನಮಗೂ ಹಿಂದಿನಿಂದ ವೈಮನಸ್ಸು ಇರುತ್ತದೆ. ಹೀಗಿದ್ದು ದಿ. 14-12-2016 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ದೇನುನಾಯ್ಕ ತಂದೆ ಲಕ್ಮಣ ರಾಠೊಡ ಇಬ್ಬರೂ ನಮ್ಮ ಮನೆಯ ಎದುರು ಕುಳಿತುಕೊಂಡು ನಮ್ಮ ತಾಂಡಾದಲ್ಲಿ ಸೇವಲಾಲ ಗುಡಿ ಕಟ್ಟುವ ವಿಷಯದಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಅದೇ ಸಮಯಕ್ಕೆ 1) ಶಂಕರ ತಂದೆ ದಂಜು ನಾಯ್ಕ ರಾಠೊಡ 2)  ಕೀಶನ ತಂದೆ ದಂಜು ನಾಯ್ಕ ರಾಠೊಡ, 3)  ರೂಪಲಾ ತಂದೆ ರಾಮಚಂದ್ರ ಚವ್ಹಾಣ, 4)  ಪರಶುರಾಮ  ತಂದೆ ಶಂಕರ ರಾಠೊಡ, 5) ಆಕಾಶ ತಂದೆ ಶಂಕರ ರಾಠೊಡ, 6)  ಶೀಲಾಬಾಯಿ ಗಂಡ ಶಂಕರ ರಾಠೊಡ, 7) ಶಾಂತಾಬಾಯಿ ಗಂಡ ಕೀಶನ ರಾಠೊಡ, 8) ಪುನ್ನಿಬಾಯಿ ಗಂಡ ರೂಪಲೂ ಚವ್ಹಾಣ ಸಾಃ ಎಲ್ಲರೂ ಖ್ಯಾದಾಪೂರ ಎಲ್ಲರೂ ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ಆಗ ನಾನು ಅವರಿಗೆ ನಾವು ತಾಂಡಾದಲ್ಲಿ ಸೇವಾಲಾಲ ಗುಡಿ ಕಟ್ಟುವ ವಿಷಯದಲ್ಲಿ ಮಾತನಾಡುತ್ತಿದ್ದೆವೆ ಅಂತಾ ಅಂದಾಗ ಅವರಲ್ಲಿ ಶಂಕರ ಇತನು ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದನು, ಕೀಶನ ಇತನು ನನಗೆ ಒತ್ತಿಯಾಗಿ ಹಿಡಿದುಕೊಂಡನು ರೂಪಲೂ ಇತನು ಕೈ ಮುಷ್ಠಿ ಮಾಡಿ ನನ್ನ ಮುಖದ ಮೇಲೆ ಹೊಡೆದನುಪರಶುರಾಮ ಇತನು ಕಾಲಿನಿಂದ ನನ್ನ ಹೊಟ್ಟೆ ಮೇಲೆ ಒದ್ದನು, ಆಕಾಶ ಇತನು ಕಲ್ಲಿನಿಂದ ನನ್ನ ಬಲಕಾಲಿನ ಮೇಲೆ ಹೊಡೆದಿರುತ್ತಾನೆ.  ಮತ್ತು ಅವರೆಲ್ಲರೂ ಈ ಮಗನಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ  ಬೇದರಿಕೆ ಹಾಕಿರುತ್ತಾರೆ ಅಷ್ಟರಲ್ಲಿಯೇ ದೇನುನಾಯಕ ತಂದೆ ಲಕ್ಮಣ ರಾಠೊಡ, ಬಸವರಾಜ ತಂದೆ ದೇಸು ನಾಯಕ್ಲಾಲಸಿಂಗ್ ತಂದೆ ಹರಿಶ್ಚಂದ್ರ ರಾಠೊಡ, ಗೇನು ತಂದೆ ಲಕ್ಮಣ ಚಿನ್ನಾರಠೊಡಶಾಂತಾಬಾಯಿ ಗಂಡ ಜಾನು ನಾಯಕ ರಾಠೋಡ, ಇವರು ಜಗಳ ನೊಡಿ ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ. . ಹಿಂದಿನ ಹಳೆಯ ದ್ವೇಷದಿಂದ ಶಂಕರ ಮತ್ತು ಅವನ ಸಂಗಡ ಇದ್ದವರು ನನ್ನ ಸಂಗಡ ಜಗಳ ಮಾಡಿ ಅವಾಚ್ಯವಾಗಿ ಬೈಯದು, ಕೈಯಿಂದ ಬಡಿಗೆಯಿಂದ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ  ಕಾರಣ ಅವರ ವಿರುದ್ದ ಕಾನೂನು ಪ್ರಕಾರ  ಕ್ರಮ ಜರುಗಿಸಲು ವಿನಂತಿ.  ಅಂತ  ಸಲ್ಲಿಸಿದ ದೂರು ಸಾಟಾಣಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


17 December 2016

KALABURAGI DIST REPORTED CRIMES

ಅಪಘಾತ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ: ದಿನಾಂಕ 16.12.2016 ರಂದು ಶ್ರೀ ಬಸಪ್ಪ ತಂದೆ ಶಿವಪ್ಪ ಯಾಳವಾರ ಸಾ:ಹರನೂರ ಠಾಣೆಗೆ ಹಾಜರಾಗಿ ನನ್ನ ತಮ್ಮನಾದ ಮರೆಪ್ಪ ಯಾಳವಾರ ಈತನು ಕಲಬುರಗಿ ಕೆ.ಎಸ.ಆರ್.ಟಿ.ಸಿ ಡಿಪೋ ನಂ 4 ರಲ್ಲಿ ಚಾಲಕ ಕಂ ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿದ್ದು. ದಿನಾಂಕ: 12.12.16 ರಂದು ಮುಂಜಾನೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಬರುತ್ತಿದ್ದ ಒಂದು ಗೂಡ್ಸ ವಾಹನ ಚಾಲಕನು ತನ್ನ ಗೂಡ್ಸ ವಾಹನದಲ್ಲಿ ಹೊಸ ಮೊಟಾರ ಸೈಕಲಗಳನ್ನು ತುಂಬಿಕೊಂಡು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ರೋಡಿನ ಸೈಡಿನಿಂದ ಹೋಗುತ್ತಿದ್ದ ಮರೆಪ್ಪನಿಗೆ ಹಿಂದಿನಿಂದ ಅಪಘಾತ ಪಡಿಸಿದನು ಅಲ್ಲಿದ್ದವರು ನೋಡಲಾಗಿ ಅದರ ನಂಬರ ಕೆಎ-33-ಎ-3739 ನೇದ್ದು ಇತ್ತು ಅದರ ಚಾಲಕ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು. ನಂತರ ನನ್ನ ತಮ್ಮ ಮರೆಪ್ಪ ಯಾಳವಾರನಿಗೆ ಅಲ್ಲಿದ್ದವರು ಆಟೋದಲ್ಲಿ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಅಂಬುಲೆನ್ಸ ವಾಹನದಲ್ಲಿ ಕಲಬುರಗಿ ಸರಕಾರಿ ಆಸ್ಪತ್ರೆಯ ಮತ್ತು ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ: 16.12.16 ರಂದು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ದಯಲ್ಲಿ ಮೃತ ಪಟ್ಟಿದ್ದು. ನನ್ನ ತಮ್ಮನಿಗೆ ಅಪಘಾತ ಪಡಿಸಿದ ಗುಡ್ಸ ವಾಹನ ನಂ ಕೆಎ-33-ಎ-3739 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಪ್ರಕರಣ:

ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ: 16/12/2016 ರಂದು ಶ್ರೀ ಗುರುನಾಥ ತಂದೆ ಸಾಯಬಣ್ಣ ಪಿ.ಡಿ.ಓ ಗ್ರಾಮ ಪಂಚಾಯತ ಮರತೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 16/12/2016 ರಂದು ಮರತೂರ ಗ್ರಾಮದ ಹರಿಜನ ವಾಡದಲ್ಲಿರುವ ಸಾರ್ವಜನಿಕ ರಸ್ತೆ ಕಟ್ಟಿದ ಗೋಡೆಯನ್ನು ತೆರವುಗೊಳಿಸಲು ಹೋದಾಗ ಯಾರೋ ಎರಡು ಜನ ಅಪರಿಚಿತರು ಬಂದು ನನಗೆ ಆಕ್ರಮ ತಡೆ ಮಾಡಿ  ಗೋಡೆಯನ್ನು ತೆರವುಗೊಳಿಸಲು ಬಿಡದೇ ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಅರ್ಜಿ ಸಾರಂಶದ ಮೇಲಿಂದ ಶಹಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.