POLICE BHAVAN KALABURAGI

POLICE BHAVAN KALABURAGI

08 October 2016

KALABURAGI DISTRICT REPORTED CRIMES

ಜೇವರಗಿ ಠಾಣೆ : ದಿನಾಂಕ  07.10.2016 ರಂದು ಮುಂಜಾನೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ ಜನರಾದ ಶ್ರೀ ಮಲ್ಲಿಕಾರ್ಜುನ ಹೆಚ್.ಸಿ-383, ಶ್ರೀ ಶಿವರಾಜಕುಮಾರ ಸಿಪಿಸಿ-498, ಶ್ರೀ ಬಾಗಣ್ಣ ಸಿಪಿಸಿ-701 ರವರೊಂದಿಗೆ ರೋಡ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಬಾತ್ಮಿದಾರನಿಂದ ಖಚಿತ ಬಾತ್ಮಿ ಬಂದಿದ್ದೆನಂದರೆ, ಅವರಾದ ಕ್ರಾಸ ಹತ್ತಿರ ಅವರಾದ ರೋಡಿನ ಪಕ್ಕದಲ್ಲಿ ಅಕ್ರಮವಾಗಿ ಮದ್ಯ (ಸರಾಯಿ) ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮಾನ್ಯ ಸಿಪಿಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚ ಜನರಾದ 1) ಶ್ರೀ ಸೈಯದ ಹುಸೇನ ತಂದೆ ದಾವಲಸಾಬ ಜಮಾದಾರ ಸಾ: ಮುದಬಾಳ (ಕೆ) 2) ಶರಣಪ್ಪ ತಂದೆ ಹಣಮಂತ ದಿವಣ ಸಾ: ಶಖಾಪೂರ ಎಸ್ ಇವರಿಗೆ ಬರಮಾಡಿಕೊಂಡು ಪಂಚರಿಗೆ ಮತ್ತು ಸಿಬ್ಬಂದಿ ಜನರಿಗೆ ಸರಾಯಿ ದಾಳಿ ಮಾಡುವ ವಿಷಯ ತಿಳಿಸಿ ಸರಕಾರಿ ಜೀಪ ನಂ ಕೆಎ-32,ಜಿ-351 ನೇದ್ದರಲ್ಲಿ ಕುಳಿತು ಅವರಾದ ಕ್ರಾಸ ಹತ್ತಿರ ಹೋಗಿ ಹೊಟೇಲ ಪಕ್ಕದಲ್ಲಿ ನಿಂತು ನೋಡಲು ಒಬ್ಬ ಮನುಷ್ಯನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವದು ಖಚಿತ ಪಡಿಸಿಕೊಂಡು ಏಕ ಕಾಲಕ್ಕೆ ಪಂಚ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿ ಜನರು ಕೂಡಿ ದಾಳಿ ಮಾಡಿ ಹಿಡಿದು ಹೆಸರು ಕೇಳಲು ವಿಜಯಕುಮಾರ ತಂದೆ ನಿಂಗಪ್ಪ ಅವಟೆ ಸಾ: ಶಖಾಪೂರ ಎಸ್.ಎ ಅಂತ ಹೇಳಿದನು. ನಂತರ ನಾವು ಮದ್ಯ ಪರಿಶೀಲಿಸಿ ನೋಡುತ್ತಿದ್ದಾಗ ಅವನು ತಪ್ಪಿಸಿಕೊಂಡು ಓಡಿ ಹೋದನು ಅವನಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನ ಮಾಡಿದರು ಅವನು ಸಿಗಲಿಲ್ಲಾ. ನಂತರ ಮದ್ಯ ಇಟ್ಟ ಜಾಗಕ್ಕೆ ಬಂದು ಪರಿಶೀಲಿಸಿ ನೋಡಲು 1 ) ಒಂದು ಬಾಕ್ಸದಲ್ಲಿ 96 Original Choice Deluxe Wisky 90 ml ಪೌಚಗಳಿದ್ದು ಒಂದ ಬೆಲೆ 26/-ರೂ ಒಟ್ಟು 2,496/-ರೂ 2) ಕಪ್ಪು ಪ್ಲಾಸ್ಟಿಕದಲ್ಲಿ 12 Old Tavaran Wisky 180 ml ಪೌಚಗಳಿದ್ದು ಒಂದ ಬೆಲೆ 62/-ರೂ ಒಟ್ಟು 744/-ರೂ ಕಿಮ್ಮಿತಿವುಗಳು ಇದ್ದವು. ಹೀಗೆ ಒಟ್ಟು 3240/-ರೂ ಸದರಿಯವುಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು. ಆರೊಪಿತ ವಿಜಯಕುಮಾರ ತಂದೆ ನಿಂಗಪ್ಪ ಅವಟೆ ಸಾಃ ಶಖಾಪೂರ ಎಸ್.ಎ ಇತನು ಯಾವುದೇ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳದೇ ಅನಧಿಕೃತವಾಗಿ ( ಅಕ್ರಮವಾಗಿ ) ಕಳ್ಳತನದಿಂದ ಸರಾಯಿ ಮಾರಾಟ ಮಾಡುತ್ತಿದ್ದು ಅವನ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಅಂತ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ ಅಂತ ವರದಿ. 

07 October 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣಪೊಲೀಸ್  ಠಾಣೆ  : ದಿನಾಂಕ. 6-10-2016 ರಂದು ಶ್ರೀಮತಿ  ನಾಗಮ್ಮಾ ಗಂಡ ನಾಗಪ್ಪಾ ನವಲೆ ಸಾ; ಕೆರಿಅಂಬಲಗಿ ತಾ;ಆಳಂದ ಇವರು ಕೊಟ್ಟ ಹೇಳಿಕೆ ಫಿರ್ಯಾದಿಯಲ್ಲಿ ತನ್ನ ಗಂಡ ನಾಗಪ್ಪಾ ನವಲೆ ಇವರು ತಮ್ಮ ಹೀರೋ ಸ್ಪ್ಲೆಂಡರ ಮೋಟಾರ ಸೈಕಲ್ ನಂ.ಕೆ.ಎ.32. ಇಎಲ್. 4983 ನೆದ್ದರ ಮೇಲೆ ಕಲಬುರಗಿಯಿಂದ ಕೆರಿಅಂಬಲಗಾಕ್ಕೆ ಬರುತ್ತಿರುವಾಗ ಮೋಟಾರ ಸೈಕಲನ್ನು ವೇಗವಾಗಿ ಚಲಾಯಿಸುತ್ತಾ ಗಣಜಲಖೇಡ ಕ್ರಾಸ ಸಮೀಪ ಎಮ್ಮೆಗೆ ಅಪಘಾತಪಡಿಸಿದ್ದರಿಂಧ ಎಮ್ಮೆಯ ಖೋಡು ಆತನ ಎದೆಯ ಬಲಭಾಗದಲ್ಲಿ ಚುಚ್ಚಿ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಸದರಿ ಘಟನೆಯು ತನ್ನ ಗಂಡ ನಾಗಪ್ಪಾ ನವಲೆ ಇವರು ಮೋಟಾರ ಸೈಕಲನ್ನು ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿದ್ದರಿಂದ ಸಂಭವಿಸಿದ್ದು. ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ದಿ. 06.10.2016 ರಂದು ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರ್ಗಿ ಠಾಣೆರವರು ಠಾಣೆಯಲ್ಲಿದ್ದಾಗ ನರಿಬೊಳ ಕಡೆಯಿಂದ ಜೇವರಗಿ ಕಡೆಗೆ ಟ್ರ್ಯಾಕ್ಟರ್ ಗಳಲ್ಲಿ ಕಳ್ಳತನದಿಂದ  ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಇಂಗಳೇಶ್ವರ ಸಿಪಿಐ ಜೇವರಗಿ ವೃತ್ತ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ  ಠಾಣೆಯ ಸಿಬ್ಬಂದಿರವರಾದ ಶ್ರೀ ಬಾಗಣ್ಣ ಸಿಪಿಸಿ 701, ಶ್ರೀ ಶರಣರಾಜ ಸಿಪಿಸಿ 1043, ಶ್ರೀ ಸುರೇಶ ಸಿಪಿಸಿ 391  ರವರಿಗೆ ಮತ್ತು ಪಂಚರಾದ 1) ದೇವಪ್ಪ ತಂದೆ ಬಸಣ್ಣಾ ನಂದಿಗೊಂಡ ಸಾಃ ನೇಲೊಗಿ, 2) ಪ್ರೇಮನಗೌಡ ತಂದೆ ಕುಪ್ಪಣ್ಣಾ ಮಂಗಾ ಸಾಃ ನೇಲೊಗಿ ಇವರಿಗೆ ಬರ ಮಾಡಿಕೊಂಡು ಎಲ್ಲರು ಠಾಣೆಯ ಜೀಪ ನಂ ಕೆಎ-32,ಜಿ-351 ನೇದ್ದರಲ್ಲಿ ಕುಳಿತು ಠಾಣೆಯಿಂದ ಜೇವರಗಿ - ವಿಜಯಪೂರ ರಸ್ತೆಯ ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರಗಳಿಗೆ ನೋಡಿ ನಿಲ್ಲಿಸಲು ಹೋದಾಗ  ಟ್ರ್ಯಾಕ್ಟರಗಳ ಚಾಲಕರು ತಮ್ಮ ಟ್ರ್ಯಾಕ್ಟರಗಳನ್ನು ರೋಡಿನ ಸೈಡಿನಲ್ಲಿ ನಿಲ್ಲಿಸಿ ಟ್ರ್ಯಾಕ್ಟರ್ ಬಿಟ್ಟು ಹೊಲದಲ್ಲಿ ಓಡಿ ಹೊಗಿದ್ದು. ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ಆವರ ಹೆಸರು 1) ಶಿವಲಿಂಗಪ್ಪ ತಂದೆ ಸಂಗಣ್ಣಾ ಗೊಬರಡಗಿ ಸಾಃ ಕೂಟ್ನೂರ ಇದ್ದು ಆತನು ಸಂಗಣ್ಣಾಗೌಡ ತಂದೆ ಶಿವಲಿಂಗಪ್ಪ ಗೊಬರಡಗಿರವರ ಟ್ರ್ಯಾಕ್ಟರ್ ನಂ ಕೆಎ-32-ಟಿಬಿ-320 ನೇದ್ದರ ಡ್ರೈವರ್ ಇರುತ್ತಾನೆ, 2) ಬೈಲಪ್ಪ ತಂದೆ ಸಿದ್ರಾಮಪ್ಪ ಡಿಗ್ಗಿ ಸಾಃಕೂಟ್ನೂರ ಆತನು ಶರಣಬಸ್ಸಪ್ಪ ತಂದೆ ಈರಣ್ಣಾ  ಕಾಳಗಿ ಇವರ ಟ್ರ್ಯಾಕ್ಟರ್ ನಂ 43.1024/ಎಸ್.ಟಿಕೆ 1.6704 ನೇದ್ದರ ಚಾಲಕ ಇರುತ್ತಾನೆ, 3) ಪ್ರಭುಲಿಂಗ ತಂದೆ ಸಿದ್ರಾಮಪ್ಪ ತಳವಾರ ಸಾಃ ಕೂಟ್ನೂರ ಇತನು ಬಸವರಾಜ ತಂದೆ ಸಾಹೇಬಗೌಡ ಸಾಃ ಕೂಟ್ನೂರ  ಇವರ ಟ್ರ್ಯಾಕ್ಟರ  ಚೆಸ್ಸಿ ನಂ ಡಬ್ಲೂ ಸಿ ಜಿ406099890 ನೇದ್ದರ ಚಾಲಕ ಇರುತ್ತಾನೆ, 4)  ಶ್ರೀಶೈಲ ತಂದೆ ಮಲ್ಲಣ್ಣಾ ಬಂಗಾರಿ ಸಾಃ  ನೇಲೊಗಿ  ಇತನು ಸಂಗಯ್ಯ ತಂದೆ ಶಾಂತಯ್ಯ ಹೂಲ್ಲೂರ ಸಾಃ ನೇಲೊಗಿ ಇವರ ಟ್ರ್ಯಾಕ್ಟರ ನಂ ಕೆಎ-32-ಟಿಎ-8395 ನೇದ್ದರ ಚಾಲಕ ಇರುತ್ತಾನೆ 5)  ಭಲಭೀಮ ತಂದೆ ಲಕ್ಮಣ ಕ್ಷೇತ್ರಿ ಸಾಃ ನೇಲೊಗಿ ಇತನು ಸಿದ್ದಯ್ಯ ತಂದೆ ಅಮೃತರಾಯ ಪ್ಯಾರಸಾಬಾದ ಸಾಃ ನೇಲೊಗಿ ಇವರ ಟ್ರ್ಯಾಕ್ಟರ ಚೆಸ್ಸಿ ನಂ ಎನ್.ಕೆ.ಜೆಟಿ00109 ನೇದ್ದರ ಚಾಲಕ ಇರುತ್ತಾನೆ. ಅಂತಾ ತಿಳಿಸಿದನು. ನಂತರ ಸ್ಥಳದಲ್ಲಿದ್ದ ಟ್ರ್ಯಾಕ್ಟರ್ ಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ 1)ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ ಕೆಎ-32-ಟಿಬಿ-0320 ಇದ್ದು ಅದರಲ್ಲಿ 1 ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು ಟ್ರ್ಯಾಕ್ಟರ್  ಅ.ಕಿ 3.00.000/- ರೂ  2)ನಂಬರ ಇರಲಾದ  ಸ್ವರಾಜ ಕಂಪನಿ ಟ್ರ್ಯಾಕ್ಟರ್ ಇದ್ದು ಅದರ ಚೆಸ್ಸಿ ನಂ ಡಬ್ಲೂಸಿಎಲ್ 40622106895, ಇಂಜೀನ ನಂ 43.1024/ಎಸ್.ಟಿ.ಕೆ 1.6704 ಇದ್ದು ಅದರಲ್ಲಿ  1 ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು ಟ್ರ್ಯಾಕ್ಟರ್  ಅ.ಕಿ 3.00.000/- ರೂ, 3)  ನಂಬರ ಇರಲಾದ  ಸ್ವರಾಜ ಕಂಪನಿಯ ಟ್ರ್ಯಾಕ್ಟರ್ ಇದ್ದು ಅದರ ಚೆಸ್ಸಿ ನಂ ಡಬ್ಲೂಎಕ್ಸ್ಸಿಜಿ406099890  ಇದ್ದು ಅದರಲ್ಲಿ  1 ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು ಟ್ರ್ಯಾಕ್ಟರ್  ಅ.ಕಿ 3.00.000/- ರೂ, 4) ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ ಕೆಎ-32-ಟಿಎ-8395 ಇದ್ದು ಅದರಲ್ಲಿ 1 ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು ಟ್ರ್ಯಾಕ್ಟರ್  ಅ.ಕಿ 3.00.000/- ರೂ  5) ನಂಬರ ಇರಲಾದ ಮಹಿಂದ್ರಾ ಕಂಪನಿ ಟ್ರ್ಯಾಕ್ಟರ್ ಇದ್ದು ಅದರ ಮಾಡಲ್ ನಂ 575-ಡಿಐ ಅಂತಾ ಚೆಸ್ಸಿ ನಂ, ಎನ್.ಕೆ.ಜೆಟಿ00109 ಇದ್ದು ಅದರಲ್ಲಿ  1 ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು ಟ್ರ್ಯಾಕ್ಟರ್  ಅ.ಕಿ 3.00.000/- ರೂ  ಸದರಿ ಟ್ರ್ಯಾಕ್ಟರ್ ಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಅಥವಾ ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಸರಕಾರಕ್ಕೆ ಮೋಸ ಮಾಡಿ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ 5  ಟ್ರ್ಯಾಕ್ಟರಳನ್ನು 5 ಬ್ರಾಸ್ ಮರಳು ಅ.ಕಿ. 5000=00 ರೂ ಕಿಮ್ಮತ್ತಿನ ಮರಳು ಸಮೇತ ಪಂಚರ ಸಮಕ್ಷಮದಲ್ಲಿ ಮುಂಜಾನೆ 6:00 ಗಂಟೆಯಿಂದ 7:00 ಗಂಟೆಯ ವರೆಗೆ  ಜಪ್ತಿ ಪಂಚನಾಮೆ ಮೂಲಕ ಜಪ್ತ ಮಾಡಲಾಯಿತು. ಸದರಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು  ಸಿಬ್ಬಂದಿಯವರ ಸಹಾಯದಿಂದ ಮರಳಿ ಠಾಣೆಗೆ ಮುಂಜಾನೆ 8.30 ಗಂಟೆಗೆ ತಂದಿದ್ದು ಇರುತ್ತದೆ. ಮೇಲೆ ನಮೂದಿಸಿದ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಮರಳನ್ನು ಸರಕಾರದ ಪರವಾನಿಗೆ ಇಲ್ಲದೇ ಸರಕಾರಕ್ಕೆ ರಾಜ್ಯ ಧನ ಭರಿಸದೇ ಸರಕಾರಕ್ಕೆ ಮೊಸ ಮಾಡಿ ಕಳ್ಳತನದಿಂದ ಮಾರಾಟ ಮಾಡಲು ಸಾಗಿಸುತ್ತಿದ್ದ ಕಾರಣ ಚಾಲಕರ ಮತ್ತು ಮಾಲೀಕರ ವಿರುದ್ದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

06 October 2016

KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ  ಪ್ರಕರಣ:
ಅಫಜಲಪೂರ ಠಾಣೆ : ಶ್ರೀಮತಿ ಅನಸುಬಾಯಿ ಗಂ. ಸಿದ್ದಪ್ಪ  ಬೆಳ್ಳಿಕಟ್ಟಿ ಸಾ: ಹವಳಗಾ ಇವರು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಹೇಳಿಕೆ ಫಿಯಾದಿ ಸಲ್ಲಿಸಿದ್ದೇನೆಂದರೆ ತಾನು ಮದುವೆಯಾದಗಾನಿಂದಲೊ ತನ್ನ ಗಂಡ ಹಾಗೂ ಮಾವ ಇಬದಬರಿ ಸೇರಿಕೊಂಡು ತನ್ನ ಗಂಡನಿಗೆ ಇನ್ನೊಂದು  ಮದುವೇ ಮಾಡುವ ಕುರಿತು ಕಿರುಕುಳ ನೀಡುತ್ತಿದ್ದು ಹೀಗೆ ದಿನಾಂಕ 04-10-2016 ರಂದು ತನ್ನ ಗಂಡ ಸಿದ್ದಪ್ಪ ಹಾಗೂ ಮಾವ ಮುತ್ತಪ್ಪ ಇಬ್ಬರು ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಗಂಡ ತನಗೆ ಎಳೆದು ನೆಲಕ್ಕೆ ಹಾಕಿದನು, ಮಾವನು ಕೈ ಯಿಂದ ಕಾಲಿನಿಂದ ಹೊಡೆದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂಧ ನನ್ನ ಕ್ರಿಮಿನಾಶಕ ಔಷದಿಯನ್ನು ಬಾಯಲ್ಲಿ ಹಾಕಿ ಇಬ್ಬರು ಮನ ಬಂದಂತೆ ಹೊಡೆಯುತ್ತಿದ್ದಾಗ ಸಪ್ಪಳ ಕೇಳಿ ಬಾಜು ಹೊಲದಲ್ಲಿ ಮನೆ ಮಾಡಿಕೊಂಡು ಇದ್ದ ನ್ನ ತಾಯಿಯಾದ ಭಾಗಮ್ಮ ಇವರು ಬಂದಾಗ ಬಿಟ್ಟು ಹೋಗಿರುತ್ತಾರೆ. ನಂತರ ನ್ನ ತಮ್ಮ ಮಲ್ಲಪ್ಪ ಹಾಗೂ ತಾಯಿ ಭಾಗಮ್ಮ ಇಬ್ಬರು ಕೂಡಿಕೊಂಡು ಖಾಸಗಿ ವಾಹನದಲ್ಲಿ ಸರಕಾರಿ ದವಾಖಾನೆಗ ತೋರಿಸಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನನ್ನ ಗಂಡ ಹಾಗೂ ಮಾವನು ವಿಷ ಕುಡಿಸಿ ಸಾಯಿಸಿ ಮಗನಿಗೆ ಇನ್ನೊಂದು ಲಗ್ನ ಮಾಡುವ ಉದ್ದೇಶ ಟ್ಟುಕೊಂಡು ಈ ರೀತಿ ಮಾಡಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಕೊಟ್ಟ ಹೇಳಿಕೆ ಫೀರ್ಯಾಧಿ ಸಾರಾಂಶದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ :  
ಅಫಜಲಪೂರ ಠಾಣೆ: ದಿನಾಂಕ 05-10-2016 ರಂದು ಪಿಎಸ್ಐ ಅಫಜಲಪೂರ ಠಾಣೆ ರವರು ಠಾಣೆಯಲಿದ್ದಾಗ ಅಫಜಲಪೂರ ಪಟ್ಟಣದ ಅಕ್ಕಮಹಾದೇವಿ ಗುಡಿಯ ಮುಂದಿನ ಸಾರ್ವಜನಿಕ  ಖುಲ್ಲಾ ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ ಇವರನ್ನು ಠಾಣೆಗೆ ಬರಮಾಡಿಕೊಂಡು. ದಾಳಿ ವಿಷಯ ತಿಳಿಸಿ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿಎಸ್.ಐ ಅಫಜಲಪೂರ ಠಾಣೆ ಮತ್ತು ಠಾಣೆಯ ಸಿಬ್ಬಂದಿ 1) ಚಂದ್ರಕಾಂತ ಸಿಹೆಸಿ-449, 2) ಅರವಿಂದ ಸಿಪಿಸಿ-501 3)ಶರಣಪ್ಪ ಸಿಪಿಸಿ-881 4) ಪಂಡಿತ ಸಿಪಿಸಿ-1119 ರವರನ್ನು ಸಂಗಡ ಕರೆದುಕೊಂಡು ಖಾಸಗಿ ವಾಹನದಲ್ಲಿ ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಯೊಂದಿಗೆ ಹೋಗಿ, ಅಕ್ಕಮಹಾದೇವಿ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು  ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಜೂಜಾಡುತಿದ್ದ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1)ಬಸವರಾಜ ತಂದೆ ಬಾಬು ಕೋಳಕೂರ ಸಾ||ಅಕ್ಕಮಹಾದೇವಿ ನಗರ ಅಫಜಲಪೂರ 2)ಶಿವಾನಂದ ತಂದೆ ಮಾಹದೇವ ಹೆಗ್ಗಿ ಸಾ||ಅಕ್ಕಮಾಹದೇವಿ ನಗರ ಅಫಜಲಪೂರ 3)ಮಳೇಂದ್ರ ತಂದೆ ಭೀಮರಾಯ ಚಿಂಚೋಳಿ ಸಾ||ಎಮ್.ಜಿ ನಗರ ಅಫಜಲಪೂರ, 4)ಮಹಿಬೂಬ ತಂದೆ ದಾವಲಸಾಬ ಮಾಡ್ಯಾಳ ಸಾ||ಲಿಂಬಿತೋಟ ಅಫಜಲಪೂರ  5)ಶಿವಾನಂದ ತಂದೆ ಪರಸಪ್ಪ ಕುಡಕಿ ಸಾ||ಜೈಭೀಮ ನಗರ ಅಫಜಲಪೂರ ಅಂತ ತಿಳಿಸಿದ್ದು ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ ಒಟ್ಟು  13580/-ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜೂಜಾಟ ಆಡುತ್ತಿದ್ದ 5 ಜನರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.