POLICE BHAVAN KALABURAGI

POLICE BHAVAN KALABURAGI

16 April 2016

Kalaburagi District Reported Crimes

ಕೊಲೆ ಪ್ರಕರಣ :
ಚಿತ್ತಾಪೂರ ಠಾಣೆ : ಶ್ರೀಮತಿ ಗೋದಾವರಿ ಗಂಡ ಸಾಬಣ್ಣ ಜಡಿ ಸಾ:ಢೋಣಗಾಂವ್ ತಾ:ಚಿತ್ತಾಪೂರ ಜಿ:ಕಲಬುರಗಿ ಇವರ ನಮ್ಮೂರ ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ ಹಾಗೂ ರಾಜಪ್ಪ ತಂದೆ ಮಲ್ಲಪ್ಪ ಜಡಿ ನನ್ನ ಗಂಡ ಸಾಬಣ್ಣನ ಗೆಳೆತನ ಇತ್ತು. ಆಗಾಗ ಇವರೆಲ್ಲರು ಕೂಡಿಯೆ ಇರುತ್ತಿದ್ದರು. ಈಗ ಸುಮಾರು 15 ದಿವಸಗಳ ಹಿಂದೆ ಸದರ ಮಾರ್ತಂಡಪ್ಪ ರಟಕಲ ಮತ್ತು ರಾಜಪ್ಪ ಜಡಿ ಇಬ್ಬರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ರೊಕ್ಕ ಯಾವಾಗ ಕೊಡುತ್ತಲೆ ಅಂತ ಬಾಯಿ ಮಾಡುತ್ತಿದ್ದರು. ಆಗ ನಾನು ನನ್ನ ಗಂಡನಿಗೆ ಕೇಳಿದಾಗ, ನನ್ನ ಗಂಡ ಸಾಬಣ್ಣ ನಾನು ಅವರ ಹತ್ತಿರ 20 ಸಾವೀರ ರೂಪಾಯಿ ತೆಗೆದುಕೊಂಡಿದ್ದೇನೆ. ಅದಕ್ಕೆ ಅವರು ಕೇಳುತ್ತಿದ್ದಾರೆ, ನಿನಗೇನು ಮಾಡುವುದಿದೇ ಸುಮ್ಮನೀರು ಅಂತ ಅಂದನು ನಾನು ಸುಮ್ಮನಾದೆ. ದಿನಾಂಕ:-09/04/2016 ರಂದು ರಾತ್ರಿ 7 ಗಂಟೆ ಸುಮಾರಿಗೆ ನಮ್ಮ ಮನೆ ಕಟ್ಟೆಯ ಮೇಲೆ ನಾನು ಮತ್ತು ನನ್ನ ಗಂಡ ನಾದ ಸಾಬಣ್ಣ ತಂದೆ ಸುಬಣ್ಣ ಜಡಿ ಇಬ್ಬರು ಮಾತಾಡುತ್ತಾ ಕುಳಿತ್ತಿದ್ದಾಗ. ನನ್ನ  ಗಂಡನ ಗೆಳೆಯರಾದ 1] ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ 2] ರಾಜಪ್ಪ ತಂದೆ ಮಲ್ಲಪ್ಪ ಜಡಿ ಸಾ: ಇಬ್ಬರು ಢೋಣಗಾಂವ್. ಇಬ್ಬರು ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ನಿಂತು ಮಾರ್ತಂಡಪ್ಪ ಈತನು ನನ್ನ ಗಂಡನಿಗೆ ಕೈ ಸನ್ನೆ ಮಾಡಿ ಕರೆದನು. ನನ್ನ ಗಂಡನು ಅವನು ಕಡೆಗೆ ಹೊಗುತ್ತಿದ್ದಾಗ. ನಾನು ಅವನಿಗೆ ಊಟ ಮಾಡು ಅಂತ ತಡೆದೆ. ಅದಕ್ಕೆ ಅವನು ನೀನು ಊಟ ಮಾಡಿ ಮಲಗು ನಾನು ಹೊಗಿ ಬರುತ್ತೇನೆ ಅಂತ ಹೇಳಿ ಹೋದನು. ರಾತ್ರಿಯಾದರು ನನ್ನ  ಗಂಡ ಮನೆಗೆ ಬರಲಿಲ್ಲ. ಮರುದಿನ ದಿನಾಂಕ:-10/04/2016 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಮ್ಮ ಓಣಿಯ ಜನರೆಲ್ಲರು ಹಳಿಮನಿ  ಮರೆಪ್ಪನ ಮನೆ ಕಪೌಂಡಿಗೆ ಹತ್ತಿ ಒಬ್ಬ ಮನುಷ್ಯ ಸತ್ತು ಬಿದ್ದಾನ ಅಂತ ಓಡುತ್ತಿದ್ದಾಗ, ನಾನು ಸಹ ಅವರೊಂದಿಗೆ ಹೋಗಿ ನೋಡಲಾಗಿ ನನ್ನ ಗಂಡ ಸಾಬಣ್ಣ ತಂದೆ ಸುಬಣ್ಣ ಜಡಿ ಈತನು ಸತ್ತಿದ್ದು ನೋಡಿದೆ. ನಾನು ಗಾಬರಿಯಾಗಿ ಅಳತೊಳಗಿದೆ. ನಂತರ ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ, ಸಾಬಣ್ಣ ತಂದೆ ಬಸಪ್ಪ ಚವನೂರು, ದೇವೀಂದ್ರ ತಂದೆ ಶರಣಪ್ಪ ರಟಕಲ ವರೆಲ್ಲರು ನನ್ನ  ಗಂಡನ ಶವವನ್ನು ಪ್ಲಾಸ್ಟೀಕ ತಾಡಪತ್ರಿಯಲ್ಲಿ ನನ್ನ  ಮನೆಯ ಮುಂದೆ ತಂದು ಹಾಕಿದರು. ನನ್ನ ಗಂಡನ ಶವವನ್ನು ನೋಡಲಾಗಿ. ತಲೆಯ ಹಿಂದೆ ರಕ್ತ ಬಂದಿದ್ದು. ಮತ್ತು ಹಳೆಣೆ ಕಚ್ಚಿನ ಗಾಯ ಬಿದ್ದಿದ್ದು. ಕುತ್ತಿಗಿಗೆ ಎದುರುಗಡೆ ಕಂದುಗಟ್ಟಿದ ಗಾಯ ನೋಡಿದೆ. ಏನಾಗಿದೆ ನನ್ನ ಗಂಡನಿಗೆ ಅಂತ ಅಳುತ್ತಿದ್ದಾಗ ಬಿಸಿಲು ಜಾಸ್ತಿ ಆದ ಕೊಡದಂಗ ಕಾಣ್ತಾನ ಅದಕ್ಕೆ ಸತ್ತಾನ ಅಂತ ಅನ್ನುತ್ತಿದ್ದರು. ಅದೆ ದಿವಸ ನಮ್ಮ ಹೋಡ ಹೊಲದಲ್ಲಿ ಮಣ್ಣು ಮಾಡಿದರು. ನಂತರ ಊರಲ್ಲಿ ಜನರು ಸಾಬಣ್ಣ ಜಡಿ ಕುಡಿದು ಸತ್ತಿಲ್ಲ. ಅವನಿಗೆ ಕೊಲೆ ಮಾಡಿದ್ದಾರೆ ಅಂತ  ಅಂದಾಡುತ್ತಿದ್ದಾಗ ನಾನು ರಾಜಪ್ಪ ಮತ್ತು ಮರ್ತಾಂಡಪ್ಪನಿಗೆ ನನ್ನ ಗಂಡನಿಗೆ ಏನು ಮಾಡಿದ್ದಿರಿ ಅಂತ ಕೇಳಿದಾಗ ಅವರು ನೀನೆ ನಿನ್ನ ಗಂಡಗ ಹೊಡೆದು ಕೊಲೆ ಮಾಡಿದ್ದಿ ಅಂತ ಕೇಸ ಕೊಡುತ್ತೇವೆ ಸುಮ್ಮನೀರು ಅಂತ ಅಂಜಿಸಿದರು. ನನ್ನ ಗಂಡ ಸಾಬಣ್ಣನಿಗೆ ದಿನಾಂಕ:-09/04/2016 ರಂದು 7 ಪಿ.ಎಮ್. ದಿಂದ ದಿನಾಂಕ:-10/04/2016 ರಂದು 7 .ಎಮ್. ಅವಧಿಯಲ್ಲಿ ನಮ್ಮೂರ ಮಾರ್ತಂಡಪ್ಪ ರಟಕಲ ಹಾಗೂ ರಾಜಪ್ಪ ಜಡಿ ಇವರು ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 April 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮದ್ಯಾಹ್ನ 12:15 ಗಂಟೆಯ ಸುಮಾರಿಗೆ ಜೇವರಗಿ ಪದವಿ ಪೂರ್ವ ಕಾಲೇಜ ಹತ್ತಿರ ಜೇವರಗಿ- ಶಹಾಪೂರ ರೋಡಿನ ಮೆಲೆ ಆನಂದ ಈತನು ತನ್ನ ಮೋಟಾರು ಸೈಕಲ್ ನಂ ಕೆಎ32ಇಎಪ್4283 ನೇದ್ದರ ಮೇಲೆ ನನಗೆ ಕೂಡಿಸಿಕೊಂಡು ಶಹಾಪೂರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಮುಂದುಗಡೆ  ಒಂದು ಕಾರ್ ಎಮ್.ಹೆಚ್-10-ಎವಿ- 5734 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಯಾವದೇ ಸೂಚನೆ ತೋರಿಸದೆ ಒಮ್ಮಲೇ ಬಲ ಸೈಡಿಗೆ ಹೊರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಆನಂದ ಯಾನೂರನಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಕಾರ್ ಚಾಲಕನು ತನ್ನ ಕಾರ್‌ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ತೇಜು ತಂದೆ ಮಲ್ಲಿಕಾರ್ಜುನ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ಸರಕಾರಿ ಶಾಲೆಯ ಮುಂದಿನ ಸಾರ್ವಜನಿಕ  ಬೋರ್‌ವೆಲ್ ನಲ್ಲಿ ನೀರು ತುಂಬುತ್ತಿದ್ದಾಗ 1. ರೆಹಮಾನ್ ತಂದೆ ರತನ್‌ಪಟೆಲ ಮಿರಾಗೌಡ 2. ಲಾಡ್ಲೆಪಟೇಲ ತಂದೆ ರಹೀಮಾನ್ ಪಟೆಲ್  ಮಿರಾಗೌಡ  3. ಮಹೇಬೂಬ ಪಟೆಲ  ದೆರಹೀಮಾನ್ ಪಟೇಲ್ ಮಿರಾಗೌಡ ಸಾ|| ಎಲ್ಲರು ಯಾಳವಾರ ಗ್ರಾಮ  ಕೂಡಿಕೊಂಡು ಬಂದು ವಿನಾಃಕಾರಣ ನನ್ನೊಂದಿಗೆ ಜಗಳ ತೆಗೆದು ನನ್ನ ಕೈ ಮತ್ತು ಸಿರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿದ್ದು ಮತ್ತು ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಮತ್ತು ಪ್ಲಾಸ್ಟೀಕ್‌ ಬುಟ್ಟಿಯಿಂದ ಹೊಡೆದು, ಕಾಲಿನಿಂದ ಒದ್ದಿರುತ್ತಾರೆ  ಅಂತಾ ಶ್ರೀಮತಿ ಶರಣಮ್ಮ ಗಂಡ ಸಿದ್ದಣ್ಣ ಕಂದಗಲ್ ಸಾ : ಯಾಳವಾರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಥಾವರು ಚವ್ಹಾಣ ಸಾ: ಕಪಾನಿ ಫನವೇಲ್ ಏರಿಯಾ ವಾಯಾ ಘರ ಮುಂಬೈ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳೀಕೆ ನೀಡಿದ್ದರ ಸಾರಾಂಶವೇನೆಂದರೆ, ತನ್ನ ಮಗಳಾದ ಪೂಜಾ ವ:20 ವರ್ಷ ಇವಳಿಗೆ ಆರಾಮ ಇಲ್ದದ ಕಾರಣ ತಮ್ಮ ಅಕ್ಕಳಾದ ದೇವಿಬಾಯಿ ಇವಳು ವಾಡಿಯಲ್ಲಿ ತನ್ನ  ಮನೆಯಲ್ಲಿ ಕಳೆದ 6 ತಿಂಗಳ ಹಿಂದೆ ಬಿಟ್ಟಿದ್ದು ಇರುತ್ತದೆ. ತನ್ನ ಮಗಳು ದಿನಾಂಕ:02/04/2016 ರಂದು 3.45 ಪಿಎಮ್ ಕ್ಕೆ ನನ್ನ ಅಕ್ಕಳ ಮನೆಯಾದ ಹನುಮಾನ ನಗರ ತಾಂಡದಲ್ಲಿ ಬ್ರೇಡ ತರಲು ಹೊದವಳು ಮನೆಗೆ ಬಂದಿರುವದಿಲ್ಲಾ ಅಂತಾ ನನ್ನ ಅಕ್ಕ ದೇವಿಬಾಯಿ ಇವಳು ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ನಮ್ಮ ಸಂಬಂದಿಕರ ಮನೆಗಳಿಗೆ ತಿರುಗಾಡಿದರೂ ಸಹ ನನ್ನ ಮಗಳು ಸಿಕ್ಕಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶಿವಪ್ಪಾ ತಂದೆ ಚಂದಪ್ಪಾ ದೊಡ್ಡಮನಿ  ಸಾಃ ಕೆ.ಇ.ಬಿ ಕ್ವಾಟರ್ಸ ಪಂಚಶೀಲ ನಗರ ಕಲಬುರಗಿ ಇವರು ಮಗ ಶರಣಬಸವ ತಂದೆ ಶಿವಪ್ಪಾ ದೊಡ್ಡಮನಿ ವಯಃ 15 ವರ್ಷ ಈತನು ಸೆಂಟ ಮೇರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 8 ನೇ ತರಗತಿ ಓದುತ್ತಿದ್ದು ನಿನ್ನೆ ದಿನಾಂಕ 09/04/2016 ರಂದು 8 ನೇ ತರಗತಿಯ ಫಲಿತಾಂಶ ಇದ್ದರಿಂದ ನನ್ನ ಮಗ ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಶಾಲೆಗೆ ಫಲಿತಾಂಶ ನೋಡಿಕೊಂಡು ಬರಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಲ್ಲಿ ಹುಡುಕಾಡಿದರು ಮತ್ತು ಸಂಬಂಧಿಕರಲ್ಲಿ ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿದ್ದು ಅವನನ್ನು ಹುಡುಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಬಾಬು ತಂದೆ ಸಾಯಬಣ್ಣ ಹರಳಯ್ಯ,  ಮು:ಗೋಳಾ ಬಿ, ತಾ:ಆಳಂದ ಇವರ ಗ್ರಾಮದ ಸಿದ್ರಾಮ ತಂ ಮಹಾದೇವಪ್ಪಾ ಅಲ್ದೆನೂರ, ಇವರು ನಮ್ಮ ಜಾಗೆಯನ್ನು ಸುಮಾರು 2 ವರ್ಷಗಳಿಂದ 2000/- ರೂಪಾಯಿಗೆ ಬಡ್ಡಿಯಂತೆ ತಿಪ್ಪೆ ಜಾಗೆಯನ್ನು ಬಡ್ಡಿಯಲ್ಲಿ ಜಾಗೆಯನ್ನು ಹಾಕಿಕೊಂಡಿದ್ದು  ದಿನಾಂಕ: 07/04/20165 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಸಿದ್ರಾಮ ತಂದೆ ಮಹಾದೇವಪ್ಪಾ ಹಾಗೂ ಆತನ ಮಗನಾದ ಜಗಪ್ಪ ತಂ ಸಿದ್ರಾಮ ಇಬ್ಬರು ಕೂಡಿ ತಿಪ್ಪೆ ಜಾಗೆಯಲ್ಲಿ ಕಟ್ಟಿಗೆ ಹಾಗೂ ಇನ್ನೀತರ ಸಾಮಾನು ಹಾಕಲು ಬಂದಾಗ ನಾನು ಅವರಿಗೆ ಈ ಜಾಗವು ತಿಪ್ಪೆ ಜಾಗವಿದ್ದು ಇಲ್ಲಿ ಕಟ್ಟಿ ಹಾಗೂ ಇನ್ನೀತರ ಸಾಮಾನುಗಳನ್ನು ಏಕೆ ಹಾಕುತ್ತಿದ್ದಿರಿ ಅಂತಾ ವಿಚಾರಿಸಿದಾಗ, ಸಿದ್ರಾಮ ತಂ ಮಹಾದೇವಪ್ಪಾ ಈತನು ಈ ಜಾಗವು ನಾವು ಬಡ್ಡಿಯಿಂದ ಹಾಕಿಕೊಂಡಿದ್ದು ಇದನ್ನು ನೀನು ಯಾರು ಕೇಳುವನು ಎಂದು ಅಂತಾ ನಿಂದು ಸಮಗಾರ ಜಾತಿ ಬಹಳ ಸೊಕ್ಕು ಬಂದಿದೆ ನಿಮ್ದು ಇತ್ತಿತ್ತಾಲಾಗಿ ಊರಾಗ ಬಹಳ ಒದರಾಡುತ್ತಿರಿ ಅನ್ನುತ್ತಾ, ಒಮ್ಮೇಲೆ ನನ್ನ ಮೈಮೇಲೆ ಬಂದವನು ನನಗೆ ನೂಕಿಕೊಟ್ಟಿದ್ದು ನಾನು ಕೇಳಗೆ ಬಿದ್ದಿದ್ದು ಇದನ್ನು ನೋಡಿ ನನ್ನ ಹೆಂಡತಿಯಾದ ರತ್ನಬಾಯಿ ಇವಳು ಬಂದು ನನಗೆ ಎಬ್ಬಿಸಿದ್ದು ನಂತರ ನಾನು ಸಿದ್ರಾಮ ಈತನಿಗೆ ಏಕೆ ಹೀಗೆ ಮಾಡುತ್ತಿದ್ದಿರಿ ಅಂತಾ ಕೇಳಿದಾಗ, ಅಸ್ಟರಲ್ಲಿ ಆತನ ಮಕ್ಕಳಾದ ಜಗಪ್ಪ ತಂದೆ ಸಿದ್ರಾಮ ಹಾಗೂ ಮಹಾದೇವಪ್ಪ ತಂದೆ ಸಿದ್ರಾಮ ಇವರು ಬಂದು ಏಕೆ ನಮ್ಮ ತಂದೆಗುಡ ಜಗಳ ಮಾಡುತ್ತಿದ್ದಿ ಅನ್ನುತ್ತಾ ನನಗೆ ಜಗಪ್ಪ ಈತನು ನನಗೆ ಎದೆ ಮೇಲೆ ಕೈ ಹಿಡಿದು ಕೈಮುಷ್ಠಿಮಾಡಿ ಎದೆಯಮೇಲೆ ಮತ್ತು ಮುಖಕ್ಕೆ ಹೊಡೆದು ನೂಕಾಡಿ ಕಾಲಿನಿಂದ ಎದೆಯ ಮೇಲೆ ಒದ್ದು ಕೆಳಗೆ ನೂಕಿದನು. ನಂತರ ಮಹಾದೇವಪ್ಪ ಈತನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ಹೊಡೆದಿದ್ದು ಇದಲ್ಲಾ ನೋಡಿ ನನ್ನ ಹೆಂಡಿತಿಯಾದ ರತ್ನಬಾಯಿ ಇವಳು ಚಿರುತ್ತಿದ್ದಾಗ ಕಸ್ತೂರಿಬಾಯಿ ಗಂ ಮಹಾದೇವಪ್ಪಾ ಮತ್ತು ಸೊನಿ ಗಂ ಜಗಪ್ಪ ಇವರು ಇಬ್ಬರು ಕೂಡಿ ನನ್ನ ಹೆಂಡಿತಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಹೊಡೆಬಡಿ ಮಾಡಿದ್ದು ಇರುತ್ತದೆ. ನಂತರ ಇವರೆಲ್ಲರು ಕೂಡಿ ನನಗೆ ಮತ್ತು ನನ್ನ ಹೆಂಡತಿಗೆ ನಿಮ್ಮ ಸಮಗಾರ ಜಾತಿ ಎಲ್ಲಿ ಇಡಬೇಕಾಗಿತ್ತಂದರ ಚಪ್ಪಲಿ ತೆಳಗ ಇಟ್ಟರ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಬಡಿ ಮಾಡಿದ್ದು ಅಲ್ಲದೇ ನನ್ನ ಹೆಂಡತಿಗೆ ಜಗಪ್ಪ ಈತನು ಕಾಲಿನಿಂದ ಒದ್ದು ಜಗ್ಗಾಡಿದ್ದು ಇರುತ್ತದೆ. ಇದಲ್ಲಾ ನೋಡಿ ಅಲ್ಲೆ ಇದ್ದ ನಮ್ಮ ಗ್ರಾಮದ ರಾಜಪ್ಪ ತಂ ಚಂದ್ರಾಮಪ್ಪ ಗಣಮುಖೆ ಹಾಗೂ ಕಲ್ಲಪ್ಪ  ತಂ ಸಾತಲಿಂಗಪ್ಪ ಮತ್ತು ನನ್ನ ಮಗಳಾದ ಪುತಳಾಬಾಯಿ ಗಂ ಶ್ರೀಮಂತ ಹರಳಯ್ಯ ಇವರೆಲ್ಲ ನೋಡಿ ಈ ಜಗಳವನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

10 April 2016

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವಂತಪ್ಪ ತಂದೆ ಮಲ್ಲಪ್ಪ ಹೂಗಾರ ದಿನಾಂಕ 29.03.2016 ರಂದು ಮುಂಜಾನೆ 11:30 ಗಂಟೆ ಸುಮಾರಿಗೆ ನಾನು ನಮ್ಮ ಕಾರ್ಖಾನೆಯಲ್ಲಿದ್ದಾಗ ನಮ್ಮ ಕಾರ್ಖಾನೆಯ ಸಿವ್ಹಿಲ್ ಇಂಜನಿಯರಾದ ಶ್ರೀ ಗೋಪಾಲ ಕಲ್ಲಪ್ಪ ಗೊಂದಳಿ ಸಾ|| ಅನಂತಪೂರ ತಾ|| ಅತಣಿ ಜಿ|| ಬೆಳಗಾವಿ ಇವರು ನನಗೆ ಪೋನ ಮಾಡಿ, ನಾನು ಮತ್ತು ಸಿವಿಲ್ ಸೂಪರವೈಜರ ಆದ ಶ್ರೀ ಸುನೀಲ ಪ್ರಭಾಕರ ದಡಫೆ, ಇಬ್ಬರು ನಮ್ಮ ಕಾರ್ಖಾನೆಗೆ ಸಂಭಂದಿಸಿದ ಐ.ಟಿ.ಐ ಕಾಲೇಜದ ಮುಂದೆ ಇದ್ದಾಗ ನಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ ಅಮೃತ ಸಂಗಮಕರ ಸಾ|| ಘತ್ತರಗಾ ಇವನು ನಮ್ಮ ಹತ್ತಿರ ಬಂದು ನಮ್ಮ ಹೊಲದಲ್ಲಿ ಜಾಲಿಕಂಟಿಗಳನ್ನು ತಗೆಸಬೇಕು ಜೆ.ಸಿ.ಬಿ ಯಾಕೆ ಕೊಡುತ್ತಿಲ್ಲಾ ಅಂತಾ ನನಗೆ ತಡೆದು ನಿಲ್ಲಿಸಿ, ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಹಾಗೂ ಕಾರ್ಖಾನೆಯ ಇತರೆ ಅಧಿಕಾರಿಗಳಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಸದರಿಯವನು ನನಗೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೋತೆಗೆ ಇದ್ದ ಸುನೀಲ ಪ್ರಭಾಕರ ದಡಫೆ ಹಾಗೂ ಸೆಕ್ಯೂರ್ಟಿ ಗಾರ್ಡ ಶ್ರೀಮಂತ ಗಾಯಕವಾಡ ಇವರು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ ಎಂದು ತಿಳಿಸಿದನು, ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ರಮೇಶ ಸಂಗಮಕರ ಈತನು ಅಲ್ಲಿಂದ ಹೊಗಿದ್ದನು, ಗೋಪಾಲ ಗೊಂದಳಿ ರವರಿಗೆ ನೋಡಲು ಅವರಿಗೆ ಸಣ್ಣ ಪುಟ್ಟ ಗುಪ್ತಗಾಯಗಳು ಹಾಗೂ ತರಚಿದ ಗಾಯಗಳು ಆಗಿದ್ದವು, ನಂತರ ಸದರಿ ಗೋಪಾಲ ಗೊಂದಳಿ ರವರು ನಾನು ರಜೆ ಹಾಕಿ ನಮ್ಮೂರಿಗೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಊರಿಗೆ ಹೋಗಿರುತ್ತಾರೆ, ಸದರಿ ಗೋಪಾಲ ರವರಿಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ. ಸದರಿ ರಮೇಶ ತಂದೆ ಅಮೃತ ಸಂಗಮಕರ ಸಾ|| ಘತ್ತರಗಾ ಈತನು ತನ್ನ ಹೊಲದಲ್ಲಿ ಜಾಲಿ ಕಂಟಿಗಳನ್ನು ತಗೆಯಲು ಜೆ.ಸಿ.ಬಿ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಹಾಗೂ ತನ್ನ ಡ್ಯೂಟಿಗೆ ಬ್ರೇಕ್ ಕೊಟ್ಟಿದ್ದಕ್ಕೆ ಸಿಟ್ಟಾಗಿ ಸಿವಿಲ್ ಇಂಜಿನಿಯರ್ ಆದ ಗೋಪಾಲ ಗೊಂದಳಿ ರವರಿಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ನಾಗನಾಥ ತಂದೆ ಭೀಮಶಾ ಪ್ಯಾಟಿ ಸಾ|| ಮಾಡಿಯಾಳ ಇವರು ಮಾಡಿಯಾಳ ಗ್ರಾಮ ಸೀಮಾಂತರದ ತಮ್ಮ ಕಾಕಾನವರಾದ ಶ್ಯಾಮರಾವ ತಂದೆ ಮಲಕಪ್ಪಾ ಪ್ಯಾಟಿ ಇವರ ಹೊಲದಲ್ಲಿ ಒಬ್ಬ ಅಪರಿಚಿತ ಹುಚ್ಚು ಗಂಡು ಮನುಷ್ಯ ಆತನ ವಯಸ್ಸು ಅಂದಾಜ 65-70 ವರ್ಷ ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಇತನು ಸುಮಾರು 3-4 ದಿವಸಗಳ ಹಿಂದೆ ದಾರಿ ತಪ್ಪಿ ಬಂದು ಭಾರಿ ಬಿಸಿಲಿನಿಂದಲೋ ಅಥವಾ ಯಾವುದೋ ರೋಗದಿಂದ ಬಳಲಿ ಮೃತಪಟ್ಟಿರಬಹುದು ಆತನ ದೇಹದಿಂದ ಭಾರಿ ಬಿಸಿಲಿನಿಂದಾಗಿ ದ್ರವ ಸೋರುತ್ತಿದ್ದು ಮುಖದ ಮೇಲೆ ಹಕ್ಕಿ ಪಕ್ಷಿ ಹುಳ ತಿಂದು ಕಣ್ಣು ಬಾಯಿ ಮುಖದಿಂದ ರಕ್ತ ಸೋರಿ ರಕ್ತ ಕಪ್ಪು ಬಣ್ಣಕ್ಕೆ ತಿರುಗಿ ಮುಖಕ್ಕೆ ಮಸಿ ಬಳದಂತಾಗಿ ಮೃತನ ಮುಖಚರ್ಯ ಸರಿಯಾಗಿ ಗುರುತು ಸಿಗದ ಸ್ಥಿತಿಯಲ್ಲಿದ್ದು ಮೃತನ ಮುಖದ ಮೇಲೆ ಬಿಳಿ ಗಡ್ಡ ಮಿಸೆ ಹಾಗೂ ತಲೆಯ ಮೇಲೆ ಉದ್ದನೆಯ ಬಿಳಿ ಕೂದಲು ಹೊಂದಿರುತ್ತಾನೆ. ಮೈಮೇಲೆ ಒಂದರ ಮೇಲೊಂದು ಶರ್ಟ ಹಾಕಿದ್ದು ಬೂದಿ ಬಣ್ಣದ ಪ್ಯಾಂಟ ತೊಟ್ಟಿರುತ್ತಾನೆ. ಎರಡು ಕೈ ಮತ್ತು ಕಾಲುಗಳ ಚರ್ಮ ಬಿಸಿಲಿಗೆ ಕಿತ್ತಿ ಬಂದಂತೆ ಕಂಡು ಬಂದಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಳಸಿದ್ದಪ್ಪ ತಂದೆ ಸಾಯಬಣ್ಣ ನೀಲೂರ ಉ|| ಕೆ.ಇ.ಬಿ ಇಲಾಖೆಯಲ್ಲಿ ಕರಜಗಿ ವಿಭಾಗದ ಶಾಖಾದಿಕಾರಿ ಸಾ|| ಚಿಣಮಗೇರಾ ತಾ|| ಅಫಜಲಪೂರ ಇವರು ದಿನಾಂಕ 03-04-2016 ರಂದು ನಮ್ಮ ಲೈನಮನ್ ಆದ ಭಾಗಣ್ಣ ತಂದೆ ನರಸಪ್ಪ ಜಮಾದಾರ ಸಾ|| ಬಿಲ್ವಾಡ (ಕೆ) ಕ್ಯಾಂಪ ಮಾಶಾಳ ಇವರು ನನಗೆ ಪೋನ ಮಾಡಿ ನಮ್ಮ ಕರಜಗಿ ಶಾಖೆಯ ವ್ಯಾಪ್ತಿಯಲ್ಲಿ ಬರುವ ಮಾಶಾಳ ಗ್ರಾಮದ ಓಂಕಾರೆಪ್ಪ ತಂದೆ ಮಾಹಾದೇವಪ್ಪ ದೇಶೆಟ್ಟಿ ಸರ್ವೆ ನಂಬರ 222 ಇವರ   ಹೊಲದಲ್ಲಿರುವ 63 ಕೆ.ವಿ ವಿದ್ಯೂತ್ ಪರಿವರ್ತಕ (ಟಿ.ಸಿ) ಯನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ, ನಾನು ಸ್ಥಳಕ್ಕೆ ಹೋಗಿ ಸ್ಥಳ ಪರೀಶಿಲಿಸಿ, ಸದರಿ ಟಿಸಿ ಕಳ್ಳತನವಾದ ಬಗ್ಗೆ ನಮ್ಮ ಮೇಲಾದಿಕಾರಿಯವರಿಗೆ ವರದಿ ಮಾಡಿ, ಮೇಲಾದಿಕಾರಿಯವರ ಸಲಹೆ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಜಯಶ್ರೀ ಮಾದರ ಸಾ||ಕುರನಹಳ್ಳಿ ತಾ||ಜೇವರ್ಗಿ ಹಾ||||ಚಿನಮಳ್ಳಿ ಇವರ ಮದುವೆಯು ಸುಮಾರು 08 ವರ್ಷದ ಹಿಂದೆ ಕುರನಹಳ್ಳಿ ಗ್ರಾಮದ ಶ್ಯಾಮರಾಯ ಈತನೊಂದಿಗೆ ಮದುವೆಯಾಗಿದ್ದು ಆಗಿದ್ದು. ನನಗೆ ರೇಣುಕಾ, ಮತ್ತು ರಾಹುಲ್ ಅಂತ ಇಬ್ಬರೂ ಮಕ್ಕಳಿದ್ದು ಮದುವೆ ಆದ ಮೇಲೆ ಎರಡು ವರ್ಷಗಳವರೆಗೆ ನನ್ನ ಗಂಡ ನನಗೆ ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡನಾದ ಶ್ಯಾಮರಾಯ ಈತನು ನನಗೆ ನಿನು ಚನ್ನಾಗಿಲ್ಲಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ನೀನು ಕೂಲಿಕೆಲಸ ಕ್ಕೆ ಹೋಲಕ್ಕೆ ಹೋಗು ಅಂತಾ ಬೈದಿದ್ದರಿಂದ. ನಾನು ಈಗ ಕಳೆದ 06 ವರ್ಷಗಳಿಂದ ನನ್ನ ತವರೂರಾದ ಚಿನಮಳ್ಳಿ ಗ್ರಾಮಕ್ಕೆ ಬಂದು ತವರೂರಲ್ಲೆ ನಮ್ಮ ತಂದೆ ತಾಯಿಯೊಂದಿಗೆ ಇರುತ್ತೆನೆ.ಈಗ ನನಗೆ ಸುಮಾರು ಒಂದು ವರ್ಷ ಆರು ತಿಂಗಳ ಹಿಂದೆ ಎಡಗೈ, ಮತ್ತು ಎಡಗಾಲಿಗೆ ಲಕ್ವಾ ಹೊಡೆದಿದ್ದು  ದಿನಾಂಕ:08-04-2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ನನ್ನ ತಾಯಿ ಪುತಳಾಬಾಯಿ ನಮ್ಮ ಮನೆಯಲ್ಲಿ ಮಾತಾಡುತ್ತಾ ಕುಳಿತಾಗ ಅದೆ ಹೊತ್ತಿಗೆ ನನ್ನ ಗಂಡ ಶ್ಯಾಮರಾಯ ಈತನು ಚಿನಮಳ್ಳಿ ಗ್ರಾಮದ ನಮ್ಮ ಮನೆಗೆ ಬಂದು ನನಗೆ ತಡೆದು ನಿಲ್ಲಿಸಿ ನನಗೆ ಏ ರಂಡಿ ಇನ್ನು ಎಷ್ಟ ದಿನಾ ನಿಮ್ಮ ಅಪ್ಪನ ಮನೆಯಲ್ಲಿ ಇರತಿ ಅಂದಾಗ ನಾನು ನಿಮ್ಮ ಮನೆಯಲ್ಲಿ ನೀನು ನನಗೆ ಚನ್ನಾಗಿ ನೋಡಿಕೊಂಡ್ರೆ ನಾ ಯಾಕ ಇಲ್ಲಿ ಇರತಿದ್ದೆ ಮತ್ತು ನನಗೆ ಲಕ್ವಾ ಹೊಡೆದಿದ್ದು ನನಗೆ ಆರಾಮವಾದ ಮೇಲೆ ಊರಿಗೆ ಬರುತ್ತೇನೆ ಆಂತ ಅಂದಾಗ, ಏ ರಂಡಿ ಈಗ ನೀನು ನಮ್ಮ ಮನೆಗೆ ಬರುತ್ತೀಯಾ ಇಲ್ಲ ಅಂತ ಅಂದು ನನ್ನ ತೆಲೆ ಕೂದಲು ಹಿಡಿದು ಜಗ್ಗಾಡಿ ನನ್ನ ಕೈಯಿಂದ ನನ್ನ ಕಪಾಳಕ್ಕೆ ಹೊಡೆಯುತ್ತಿದ್ದಾಗ ನನ್ನ ತಾಯಿ ಪುತಳಾಬಾಯಿ, ನಮ್ಮ ತಂದೆ ಪ್ರಭುಲಿಂಗ ಮತ್ತು ನಮ್ಮ ಅಣ್ಣನಾದ ಶ್ರೀಶೈಲ ಮತ್ತು ನಮ್ಮ ಪಕ್ಕದರಾದ ನಿಂಗಣ್ಣ ತಂದೆ ಸೈಬಣ್ಣ ವಳಕಟ್ಟಿ, ಸಿದ್ದಪ್ಪ ತಂದೆ ಭೀಮಶ್ಯಾ ಮಾಂಗ  ಇವರು ಜಗಳ ಬಿಡಿಸಿದರು, ನನ್ನ ಗಂಡ ಶ್ಯಾಮರಾಯ ಈತನು ಹೋಗುವಾಗ ಏ ರಂಡಿ ಇವತ್ತು ಜಗಳ ಬಿಡಿಸ್ಯಾರ ಇಲ್ಲದಿದ್ದರೆ ನನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಿನ್ನ ಜೀವ ಹೊಡೆಯುತ್ತಿದ್ದೆ ಅಂತ ಅಂದು ಜೀವದ ಭಯ ಹಾಕಿದ ನನ್ನ ಗಂಡನಾದ ಶ್ಯಾಮರಾಯ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.