POLICE BHAVAN KALABURAGI

POLICE BHAVAN KALABURAGI

30 September 2015

KALABURAGI DISTRICT REPORTED CRIMES.

ರೇವೂರ ಪೊಲೀಸ ಠಾಣೆ : ದಿನಾಂಕ:29-09-2015 ರಂದು ಹೆಚ್.ಸಿ-406 ರವರು ಸರ್ಕಾರಿ ಆಸ್ಪತ್ರೇ ಕಲಬುರ್ಗಿಯಲ್ಲಿ ಉಪಚಾರ ಕುರಿತು ಸೇರಿಕೆಯಾದ ಪ್ರೇಮನಾಥ ತಂದೆ ಕಲ್ಯಾಣಿ ದೊಡ್ಡಮನಿ ಸಾ:ಭೋಗನಳ್ಳಿ ಗ್ರಾಮ ಈತನ ಹೇಳಿಕೆ ಪಡೆದುಕೊಂಡು 2 ಪಿ.ಎಮ್.ಕ್ಕೆ ಠಾಣೆಗೆ ಬಂದು ಹೇಳಿಕೆ ಸಾರಾಂಶ ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ನಿನ್ನೆ ದಿನಾಂಕ:28-09-2015 ರಂದು 7 ಪಿ,ಎಮ್.ಕ್ಕೆ ನನ್ನತಮ್ಮ ರಾಜಶೇಖರನು ಭೋಗಲಿಂಗೇಶ್ವರ ದೇವಾಲಯಕ್ಕೆ ಹೋಗಿ ತೆಂಗಿನಕಾಯಿ ವಡೆದುಕೊಂಡು ಬಂದನಂತರ 8-00 ಪಿ,ಎಮ್.ಕ್ಕೆ ಸುಮಾರಿಗೆ ಬಸ್ ನಿಲ್ದಾಣದ ಹತ್ತೀರ ಇದ್ದಂತಹ ಕಟ್ಟಿಗೆ ಸಾಮಾನುಗಳನ್ನು ತರಲು ನಾನು ನನ್ನ ತಂದೆಯವರಾದ ಕಲ್ಯಾಣಿ ನ್ನ ತಮ್ಮನಾದ ರಾಜಶೇಖರ ಹಾಗೂ ನಮ್ಮ ಸಮಾಜದವರಾದ  ಶ್ರೀ ಭೋಗಪ್ಪ ತಂದೆ ಬುದ್ದಪ್ಪ ಮೇಲ್ಮನಿ ಶಂಕರ ತಂದೆ ವಿಠ್ಠಲ ಗೌಡಗಾಂವ ಚಂದಪ್ಪ ತಂದೆ ಬಸಣ್ಣ ದೊಡಮನಿ ಎಲ್ಲರೂ ಸರಕಾರಿ ಶಾಲೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಭೋಗಲಿಂಗೆಶ್ವರ ದೇವಾಲಯದ ಪೂಜಾರಿಗಳಾದ 1) ಬಸವರಾಜ ತಂದೆ ದತ್ತು ಸುತಾರ 2) ದತ್ತು ತಂದೆ ಹಣಮಂತ ಸುತಾರ 3) ನಂದು ತಂದೆ ದತ್ತು ಸುತಾರ 4) ಮಲ್ಲು ತಂದೆ ದತ್ತು ಸುತಾರ 5) ಈರಣ್ಣಾ ತಂದೆ ದತ್ತು ಸುತಾರ 6) ದೇವಿಂದ್ರ ತಂದೆ ಹಣಮಂತ ಸುತಾರ 7) ಲಕ್ಷ್ಮಿಕಾಂತ ತಂದೆ ಭೀಮಾ ಸುತಾರ 8) ಸುರೇಶ ತಂದೆ ಸಿದ್ದಣ್ಣಾ ಸುತಾರ ಹಾಗೂ ನಮ್ಮ ಸಮಾಜದ ಮೇಲೆ ಹಿಂದಿನಿಂದ ದ್ವೆಷ ಸಾದಿಸುತ್ತಾ ಬಂದಂತ 9) ಭಾಷಾ ಪಟೇಲ ತಂದೆ ಹಸನ ಪಟೇಲ 10) ನಜೀರ ಪಟೇಲ ತಂದೆ ಹಸನ ಪಟೇಲ 11) ಮುಕ್ತಾರ ಪಟೇಲ ತಂದೆ ಅನ್ವರ ಪಟೇಲ 12) ಅಲ್ಲಾವುದ್ದಿನ್ ತಂದೆ ಮಶಾಕ ಪಟೇಲ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ಏ ರಂಡಿ ಮಕಳ್ಯಾ ಹೋಲ್ಯಾರೇ ದೇವರಗುಡಿ ಒಳಗಡೆ ಬಂದು ತೆಂಗಿನಕಾಯಿ ಒಡಿಯುತ್ತಿರಾ ಅಂತಾ ಬಸವರಾಜನು ಬೈಯುತ್ತಾ ಎಲ್ಲರೂ ನಮಗೆ ತಡೆದು ನಿಲ್ಲಿಸಿ ಮತ್ತೆ ಬಸವರಾಜನು ನನ್ನ ತಮ್ಮ ರಾಜಶೇಖರ ಎದೆಯ ಮೇಲಿನ ಅಂಗಿಯನ್ನು ಹಿಡಿದು ಕೈಯಿಂದ ಕಪಾಳ ಮೇಲೆ ಹೊಡೆದು ನೇಲಕ್ಕೆ ಕಾಕಿದಾಗ ದತ್ತು,ಮಲ್ಲು,ನಂದು,ಎಲ್ಲರೂ ಕಾಲಿನಿಂದ ಒದ್ದಿರುತ್ತಾರೆ.ನನಗೆ ಈರಣ್ಣನು ನನಗೆ ಕೈಯಿಂದ ಕಾಪಾಳ ಮೇಲೆ ಹೊಡೆದಾಗ ಲಕ್ಷ್ಮಿಕಾಂತನು ಅಲ್ಲೆ ಬಿದ್ದ ಬಡಿಗೆಯಿಂದ ನನ್ನ ತೆಲೆಯ ಹಿಂಭಾಗಕ್ಕೆ ಹೊಡೆದು ದೇವಿಂದ್ರನು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಮುಗಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.ಸುರೇಶನು ಭೋಗಪ್ಪನಿಗೆ ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ.ಆಗ ಭಾಷಾ ಪಟೇಲ & ನಜೀರ ಪಟೇಲ ರವರು ರಂಡಿ ಮಕ್ಕಳ್ಯಾ ಹೊಲೇರ್ಯಾ ಊರಲ್ಲಿ ನಿಮ್ಮದೆ ಧಿಮಾಕ್ಕ ಮಾಡತಿರ್ಯಾ ಅಂತಾ ನನ್ನ ತಂದೆಯವರಿಗೆ ಬೈದ್ದು ಶಂಕರನಿಗೆ ಬೆನ್ನ ಮೇಲೆ ಭಾಷಾ ಪಟೇಲನು & ಭೋಗಪ್ಪನಿಗೆ ನಜೀರ ಪಟೇಲನು ಕಪಾಳ ಮೇಲೆ  ಕೈಯಿಂದ ಹೊಡೆದರು ಚಂದಪ್ಪನಿಗೆ ನೆಲಕ್ಕೆ ಹಾಕಿ ಮುಕ್ತಾರ ಪಟೇಲ & ಅಲ್ಲವುದ್ದಿನ್ ಇಬ್ಬರು ಕಾಲಿನಿಂದ ಒದ್ದಿರುತ್ತಾರೆ ಆಗ ನಮ್ಮ ಗ್ರಾಮದವರಾದ ಸರದಾರ ಪಟೇಲ,ಲಾಲ ಅಹ್ಮದ ಪಟೇಲ, ಗುಂಡಪ್ಪ ಜಮಾದಾರ,ಮಕ್ಬುಲ ಪಟೇಲ ತಂದೆ ಇಬ್ರಾಹಿಂ ಪಟೇಲ ಹಾಗೂ ಸಿದ್ದಮ್ಮಾ ಗಂಡ ಉದ್ದಂಡಪ್ಪ ಎಲ್ಲರೂ ಬಂದು ಜಗಳ ಬಿಡಿಸಿದರು.ಆಗ ಮತ್ತೆ ಬಸವರಾಜನು ನಮಗೆ ಇವತ್ತು ಇವರು ಬಂದು ಬಿಡಿಸದಿದ್ದರೆ ನಿಮಗೆ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ ಹೊದರು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ  ಪೊಲೀಸ ಠಾಣೆ : ದಿನಾಂಕ: 29/09/2015 ರಂದು 09-30 ಎಎಮ್ ಕ್ಕೆ ಫಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ, ತಾನು ತಮ್ಮ ದಾಲಮಿಲನಿಂದ ದಿನಾಂಕ: 27/09/2015 ರಂದು 7-00 ಪಿಎಮ್ ಕ್ಕೆ ಎ.ಪಿ.ಎಮ್.ಸಿ ಮಾರ್ಕೇಟ ವಾಸಿ ಮುಂಬೈಗೆ ಆರ್ಡರ್ ಇದ್ದುದ್ದರಿಂದ ಕೆಎ-32 ಬಿ-2343ನಂಬರಿನ ನ್ಯಾಶನಲ್ ಕಲರ್ 10ಟಯರನ ಲಾರಿಯಲ್ಲಿ ನಮ್ಮ ದಾಲಮಿಲ್ ಬಿಲ್ ನಂ 211. 212, 213, 214  ನಂಬರನ 30ಕೆಜಿ ತೂಕದ 534 ಬ್ಯಾಗ ತೋಗರಿ ಬೆಳೆಯನ್ನು 77 ಬ್ರ್ಯಾಂಡನ ಗುರುತುಳ್ಳ ಚೀಲದಲ್ಲಿ ತುಂಬಿ ಕಳುಹಿಸಿರುತ್ತೇನೆ. ಸದರಿ ಲಾರಿ ಚಾಲಕ ಮೆಹಬೂಬ ಎಂಬಾತನು ದಿನಾಂಕ: 28/09/2015 ರಂದು 12-00 ಪಿಎಮ್ ಗಂಟೆ ಸುಮಾರಿಗೆ ಪೋನ ಮಾಡಿ ತೊಗರಿ ಬೆಳೆ ತುಂಬಿದ ನನ್ನ ಲಾರಿಯನ್ನು ರಾತ್ರಿ ಮಿಜಬಾನಗರದ ಸಾಧಿಕ್ ಎಲೆಕ್ಟ್ರೀಕಲ್ ಶಾಪ ಎದರುಗಡೆ ರೋಡಿನ ಎಡಬದಿಯಲ್ಲಿ ನಿಲ್ಲಿಸಿ ದಿನಾಂಕ: 28/09/2015 ರಂದು 4-00 ಎಎಮ್ ವರೆಗೆ ಲಾರಿಯಲ್ಲಿಯೇ ಮಲಗಿಕೊಂಡಿದ್ದು 4-00 ಎಎಮ್ ಕ್ಕೆ ಎದ್ದು ಲಾರಿ ಲಾಕ ಮಾಡಿಕೊಂಡು ಮನೆಗೆ ಹೋಗಿ 9-00 ಎಎಮ್ ಸುಮಾರಿಗೆ ಬಂದು ನೋಡಲು ನಾನು ನಿಲ್ಲಿಸಿದ್ದ ನನ್ನ ಕೆಎ-32 ಬಿ-2343 ನಂಬರಿನ ತೊಗರಿ ಬೆಳೆ ತುಂಬಿದ ಲಾರಿ ಕಾಣಿಸುತ್ತಿಲ್ಲ ಅಂತ ಪೋನ ಮಾಡಿ ತಿಳಿಸಿದ್ದು ತಕ್ಷಣ ನಾನು ಮತ್ತು ನನ್ನ ಸ್ನೇಹಿತ ಪಂಪಣ್ಣಗೌಡ ಇಟಗಿ ಇವರು ಸ್ಥಳಕ್ಕೆ ಹೋಗಿ ನೋಡಲು ಲಾರಿ ಚಾಲಕ ಮೆಹಬೂಬ ಹೇಳಿದ ವಿಷಯ ನಿಜವಿದ್ದು ಸ್ಥಳದಲ್ಲಿ ಲಾರಿ ಇರಲಿಲ್ಲ. ಎಲ್ಲಾಕಡೆ ಹುಡುಕಾಡಿದರೂ 77 ಬ್ರ್ಯಾಂಡನ 30 ಕೆಜಿ ತೂಕದ 534 ಬ್ಯಾಗ ತೋಗರಿ ಬೆಳೆ (ಒಟ್ಟು= 160 ಕ್ವಿಂಟಲ್ 20ಕೆಜಿ)  ತುಂಬಿದ್ದ ಅ.ಕಿ= 1747500/-ರೂ ಹಾಗೂ ಕೆಎ-32 ಬಿ-2343 ನಂಬರಿನ ನ್ಯಾಶನಲ್ ಕಲರ್ 10 ವ್ಹೀಲ್ ಚೆಸ್ಸಿ ನಂ MBICMDWZAA753 ಇಂಜಿನ ನಂ SAH631872 ಇರುವ ಅ.ಕಿ= 1000000/-ರೂ ಹೀಗೆ ಒಟ್ಟು 2747500/-ರೂ ಕಿಮ್ಮತ್ತಿನ ತೊಗರಿ ಬೆಳೆ ತುಂಬಿದ ಲಾರಿಯನ್ನು ದಿನಾಂಕ: 28/09/2015 ರಂದು 4-00 ಎಎಮ್ ದಿಂದ 9-00 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ತೊಗರಿ 30ಕೆಜಿ ತೂಕದ 534 ಬ್ಯಾಗ ತೊಗರಿ ಬೆಳೆ ತುಂಬಿದ ಲಾರಿಯನ್ನು ಪತ್ತೆ ಹಚ್ಚಿ ನಮ್ಮ ತೊಗರಿ ಬೆಳೆ ಮತ್ತು ಲಾರಿಯನ್ನು ನಮಗೆ ವಾಪಸ ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ ನೀಡಿದ ಫಿರ್ಯಾದಿ ಹೇಳಿಕೆ ಮೇಲಿಂದ ಪ್ರಕರಣ ಧಾಖಲಾಗಿರುತ್ತದೆ.

28 September 2015

KALABURAGI DISTRICT REPORTED CRIMES.

ಮಹಿಳಾ ಪೊಲೀಸ ಠಾಣೆ : ದಿನಾಂಕ 27.09.2015 ರಂದು 7 ಪಿ.ಎಂಕ್ಕೆ ಪಿರ್ಯಾದಿದಾರರಾದ ಶ್ರೀಕಾಂತ ತಂದೆ ನಾರಾಯಣರಾವ ಮೆಂಗಜಿ ಅಧೀಕ್ಷಕರು ಸಾ: ಬಾಲಕಿಯರ ಬಾಲ ಮಂದಿರ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ತಮ್ಮ ಸಂಸ್ಥೆಯ ನಿವಾಸಿಯಾದ ಅರ್ಚನಾ ತಂದೆ ಕಮಲಾಕರ ವಯಸ್ಸು 17 ವರ್ಷ ಇವಳು ಸರಕಾರಿ ಫ್ರೌಡ ಶಾಲೆ ವಿಜಯನಗರ ಕಾಲೋನಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ 26.09.2015 ರಂದು 8 ಗಂಟೆಯ ಸುಮಾರಿಗೆ ಅರ್ಚನಾ ಹಾಗೂ ಇನ್ನುಳಿದ 12 ಜನ ಅದೇ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಅವರೆಲ್ಲರನ್ನು ನಮ್ಮ ಸಂಸ್ಥೆಯ ರಕ್ಷಕಿಯಾದ  ಕವಿತಾ ಇವರು ಎಲ್ಲಾ ಮಕ್ಕಳಿಗೆ ಶಾಲೆಗೆ ಬಿಟ್ಟು ಬಂದಿರುತ್ತಾರೆ. ಶಾಲೆಗೆ ಹೋದ 12 ಜನ ಮಕ್ಕಳು ಮರಳಿ 9 ಗಂಟೆಯ ಸುಮಾರಿಗೆ ಶಾಲೆ ಇರುವದಿಲ್ಲ ಅಂತಾ ಸಂಸ್ಥೆಗೆ ಬಂದಿರುತ್ತಾರೆ. ಅರ್ಚನಾ ಇವಳು ಸಂಸ್ಥೆಗೆ ಬರದೇ ಇರುವದರಿಂದ ಕೂಡಲೇ ಶಾಲೆಗೆ ಹೋಗಿ ಹುಡುಕಾಡಲಾಗಿ ಅರ್ಚನಾ ಇವಳು ಸಿಕ್ಕಿರುವದಿಲ್ಲ ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವದಿಲ್ಲ ಕಾರಣ ಕಾಣೆಯಾದ ಅರ್ಚನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ ಠಾಣೆ : ದಿನಾಂಕ 27/09/2015 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾದಿ ಶ್ರೀ ಸಿದ್ದಪ್ಪ ತಂದೆ ಶ ರಣಪ್ಪ  ಮದ್ದರಕಿ ಸಾ: ಜೇವರ್ಗಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅರ್ಜಿ ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 27-08-2015 ರಂದು ಮದ್ಯಾಹ್ನ 1.30  ಗಂಟೆಯಿಂದ 2.00 ಗಂಟೆಯ ಮದ್ಯದ ಅವದಿಯಲ್ಲಿ  ಯಾರೋ ಕಳ್ಳರು ಜೇವರ್ಗಿ ಪಟ್ಟಣದ ಜೇವರಗಿ ಪಟ್ಟಣದ ಎನ್.ಇ.ಎಸ್.  ಕಂಪ್ಯೂಟರ್ ಕೇಂದ್ರ ಎದುರುಗಡೆ ಸ್ಥಳದಲ್ಲಿ ನಿಲ್ಲಿಸಿದ ಪೀರ್ಯಾದಿಯ ಮೊಟಾರ್ ಸೈಕಲ್ ನಂ ಕೆ.ಎ.32-ಇ.ಹೆಚ್.-8013 ಅ.ಕಿ.24,000=00  ನೇದ್ದು  ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಾರಣ ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ ಠಾಣೆ : ದಿನಾಂಕ 26-09-15 ರಂದು ಸಂಜೆ 7-15 ಗಂಟೆ ಸುಮಾರಿಗೆ  ಸದರ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿ ಪಟ್ಟಣ ಕ್ರಾಸ ಮತ್ತು ಸಾವಳಗಿ ಪಾಟಿ ಮಧ್ಯದಲ್ಲಿ ಬರುವ  ಕಲಬುರಗಿ 13 ಕಿ.ಮೀ. ಮೈಲಗಲ್ಲು ಎಡ ರೋಡ ಬದಿಯಿಂದ ಒಬ್ಬ ವ್ಯಕ್ತಿ ನಡೆದುಕೊಂಡು ಹೊರಟಿದ ವ್ಯಕ್ತಿಗೆ  ಆಳಂದ ರೋಡ ಕಡೆಯಿಂದ ಒಂದು ಬಿಳಿ ಬಣ್ಣದ ಲಾರಿ ಎಂಹೆಚ 12 ಎಫಝಡ 9305 ಲಾರಿ ಚಾಲಕ ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಡಿಕ್ಕಿ ಹೊಡೆದು ಅಪಘಾತ ಪಡಿಸಿ,  ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋದನು. ಸದರ ವ್ಯಕ್ತಿಗೆ ನೋಡಲಾಗಿ ಅವನ ಎಡಗೈ ರಟ್ಟೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ. ಬಲಗಾಲ ಮೊಳಕಾಲ ಮೇಲೆ, ಮತ್ತು ಕೆಳೆಗೆ  ಹಾಗೂ ಬಲ ಹುಬ್ಬಿನ ಮೇಲೆ  ಬಲ ತಲೆಯ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಎಡ ಕಿವಿಯಿಂದ ರಕ್ತ ಸೋರಿದ್ದು ಇರುತ್ತದೆ .ಎಡಗಾಲ ಹೆಬ್ಬಟ್ಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ದಾರಿಗೆ ಹೋಗು-ಬರುವ ಜನರು ಅವನ ಷರ್ಟು ಪ್ಯಾಂಟ ಕಿಸೆ ಚೆಕ್ಕ ಮಾಡಲಾಗಿ ಅವನ ಹತ್ತಿರ ಯಾವುದೇ ಡೈರಿ ಮತ್ತು ಮೋಬಾಯಿಲ್ ಸಿಗಲಿಲ್ಲಾ. ಇದರಿಂದಾಗಿ ಸದರ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವಯಸ್ಸಿವನಿದ್ದು, ಉದ್ದ ಮುಖ, ಉದ್ದ ಮೂಗು, ಬಡಕಲು ಮೈಕಟ್ಟು, ಸಾದಾಕಪ್ಪು ಮೈಬಣ್ಣವುಳ್ಳವನು ಇರುತ್ತಾನೆ. ಅವನು ನೀಲಿ ಮತ್ತು ಹಳದಿ ಬಣ್ಣದ ಚೌಕಡಿ ಷರ್ಟು,  ಕಪ್ಪು ಬಣ್ಣದ ಪ್ಯಾಂಟು, ನೀಲಿ ಬಣ್ಣದ ಝಾಂಗ ಧರಿಸಿರುತ್ತಾನೆ. ಅಂದಾಜ 5 ಅಡಿ 3 ಎತ್ತರ ಇರುತ್ತಾನೆ. ಸದರ ಅಪರಿಚಿತ ವ್ಯಕ್ತಿಯು ತನಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ  ನಿನ್ನೆ ದಿನಾಂಕ 26-09-15 ರಂದು ರಾತ್ರಿ 10-30 ಗಂಟೆಗೆ ಸರಕಾರಿ  ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಇಂದು ದಿನಾಂಕ 27-09-15 ರಂದು ಬೆಳಿಗ್ಗೆ ಗೊತ್ತಾಗಿ ಪೊಲೀಸ ಠಾಣೆಗೆ ಬಂದಿರುತ್ತೇನೆ. ಕಾರಣ ಅಪರಿಚಿತ ವ್ಯಕ್ತಿಗೆ ಅಪಘಾತಪಡಿಸಿ ಮರಣವನ್ನುಂಟು ಮಾಡಿದ ಹಟಕೇಶ್ವರ ಲಾರಿ ಎಂಹೆಚ 12 ಎಫಝಡ 9305 ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 378/2015 ಕಲಂ 279,304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಎಕ್ಟ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

25 September 2015

KALABURAGI DISTRICT REPORTED CRIMES

ಮಟಕಾ ಜೂಜು ಕೋರರರ ಬಂಧನ :
 ದೇವಲಗಾಣಗಾಪುರ ಪೊಲೀಸ್ ಠಾಣೆ : ದಿನಾಂಕ 23-09-2015 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ  ದೇವಲ ಗಾಣಗಾಪುರರದ ಶಾಂತಿ ನಗರದ ಸಾರ್ವಜನಿಕ ಸ್ಥಳದಲ್ಲಿ ನಬಿಸಾಬ ತಂದೆ ಪಕೀರಸಾಬ @ ಅಬ್ಬಾಸಾಬ ತಾಂಬೋಳಿ ವಯ ; 55 ವರ್ಷ, ಸಾ|| ದೇವಲಗಾಣಗಾಪುರು ತಾ|| ಅಫಜಲಪೂರು, ಇತನು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಕಲಬುರಗಿ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ. ದಾಳಿ ಮಾಡಿ ಸದರಿಯವನಿಗೆ ಹಿಡಿದು ಅವನ ಕಡೆಯಿಂದ  ಮಟಕಾ ಅಂಕಿ ಸಂಖ್ಯೆ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 4950/- ರೂಪಾಯಿ ಹಣವನ್ನು ಜಪ್ತು ಮಾಡಿಕೊಂಡು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ  ಗುನ್ನೆ ದಾಖಲಾಯಿಸಿದ್ದು ಇರುತ್ತದೆ.
ಇಸ್ಪೀಟ್ ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಶ್ ಠಾಣೆ : ದಿನಾಂಕ 24-09-2015 ರಂದು ಮಾದಾಬಾಳ ತಾಂಡಾದ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರಾದ 1) ಜಗನ್ನಾಥ 2) ಸುರೇಶ 3) ಪಾಂಡುರಂಗ 4) ನಿಂಗಣ್ಣ ರವರನ್ನು ಸಂಗಡ ಕರೆದುಕೊಂಡು ದಾಳಿ ಮಾಡಲಾಗಿ ಜೂಜಾಡುತ್ತಿದ್ದ ನಾಲ್ಕು ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡಿ ಹೋಗಿದ್ದು , ಅವರಲ್ಲಿ ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಮಹಾಂತೇಶ ತಂದೆ ಸಿದ್ದಪ್ಪ ಜಮಾದಾರ ಸಾ||ಚಿಂಚೋಳಿ ತಾ||ಅಫಜಲಪೂರ  2) ಶ್ರೀಶೈಲ ತಂದೆ ಸಿದ್ರಾಮಪ್ಪ ಕಲಕೇರಿ ಸಾ|| ಅಫಜಲಪೂರ  ಅಂತಾ ತಿಳಿಸಿದ್ದು, ನಂತರ ಓಡಿ ಹೋದ ನಾಲ್ಕು ಜನರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಶಿವಾನಂದ ತಂದೆ ನಿಂಗರಾಜ ಬಿರಾದಾರ ಸಾ||ಅಫಜಲಪೂರ  2) ಶರಣು ತಂದೆ ಗಂಗಾಧರ ಕೂಡಮುಳೆ ಸಾ|| ಅಫಜಲಪೂರ 3) ಶ್ರೀಶೈಲ ತಂದೆ ಮಳೇಪ್ಪ ಅಂದೊಡಗಿ ಸಾ|| ಅಫಜಲಪೂರ 4) ಪ್ರಶಾಂತ ತಂದೆ ಶರಣಬಸಪ್ಪ ನಂದಿ ಸಾ|| ಅಫಜಲಪೂರ ಅಂತ  ತಿಳಿಸಿದ್ದು. ಇಸ್ಪೇಟ ಜೂಜಾಟಕ್ಕೆ ಒಟ್ಟು 1890/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 24/09/2015 ರಂದು ಶ್ರೀಮತಿ. ಅರ್ಚನಾ ಗಂಡ ಸುರೇಶ ಗಾಯಕವಾಡ ಸಾ: ವಿದ್ಯಾನಗರ ರವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಕೆಳಗಡೆ ವಾಸವಾಗಿರುವ   ನಮ್ಮ ಅಕ್ಕ ಗೊದಾವರಿ ರವರು ಊರಿಗೆ ಹೊಗಿರುತ್ತಾರೆ. ನಿನ್ನೆ ದಿನಾಂಕ 23/09/2015 ರಂದು ರಾತ್ರಿ 9-30 ಗಂಟೆಗೆ  ನನ್ನ ಪತಿ ಸುರೇಶ ರವರು ಡ್ಯೂಟಿಗೆ ಹೋದ ನಣತರ ನಾನು ಮನೆ ಬಾಗಿಲು ಮುಂದೆ ಮಾಡಿ ಮಲಗಿದ್ದು ದಿನಾಂಕ 24/09/2015 ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ನೊಡಲು ನಮ್ಮ ಮನೆಯ ಬೇಡ ರೂಮ ಅಲಮಾರಾ ಬಾಗಿಲು ತೆರೆದಿದ್ದು  ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಅತಿಕ್ರಮ ಪ್ರವೇಶ ಮಾಡಿ  1) ಬಂಗಾರದ 20 ಗ್ರಾಂ ಲಾಕೇಟ  ಅದಕ್ಕೆ S ಆಕಾರದ ಪದಕವುಳ್ಳದ್ದು  ಅ:ಕಿ: 50,000/- ರೂ 2)  ಪರ್ಸದಲ್ಲಿದ್ದ  ನಗದು 2000/- ರೂಪಾಯಿ ಮತ್ತು 3) ಸ್ಯಾಮಸಂಗ ಮೊಬೈಲ ಹೀಗೆ ಒಟ್ಟು 60,000/- ರೂ ಮೌಲ್ಯದ ಬಂಗಾರ, ಮೊಬೈಲ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಶೋಕ ನಗರ ಠಾಣೆಯಲಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.