POLICE BHAVAN KALABURAGI

POLICE BHAVAN KALABURAGI

26 June 2015

Kalaburagi District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಚೌಕ ಠಾಣೆ : ದಿನಾಂಕ 22.06.2015 ರಂದು ರಾತ್ರಿ ವೇಳೆಯಲ್ಲಿ ನಡೆದ ಕೊಲೆ ಕೇಸಿನ ಆರೋಪಿ ಪತ್ತೆ ಮಾಡುವ ಕುರಿತು ಶ್ರೀ ಉಮಾಶಂಕರ.ಬಿ ಪಿ.ಐ ಚೌಕ ಪೋಲೀಸ ಠಾಣೆ ಕಲಬುರಗಿ ರವರು ಹಾಗು ಠಾಣೆಯ ಸಿಬ್ಬಂದಿ ಮೋಸಿನ್‌‌ ಪಿಸಿ 811, ಮತ್ತು ವಾಹನ ಚಾಲಕ ಶರೀಫ ರವರೊಂದಿಗೆ ಚೌಕ ಪೊಲೀಸ ಠಾಣಾ ಹದ್ದಿಯಲ್ಲಿ ಸರಕಾರಿ ಜಿಪ್ ನಂ ಕೆಎ 32 ಜಿ 639 ನೇದ್ದರಲ್ಲಿ ದಿನಾಂಕ 25.06.2015 ರಂದು ರಾತ್ರಿ ವೇಳೆಯಲ್ಲಿ ವಿಶೇಷ ಪೆಟ್ರೋಲಿಂಗ್ ಮಾಡುತ್ತಿರುವಾಗ ಬೆಳಗಿನ ಜಾವ 1-30 ಗಂಟೆಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ ಠಾಣಾ ವ್ಯಾಪ್ತಿಯಲ್ಲಿ ಹುಮನಾಬಾದ ರಿಂಗ ಲಾರಿ ತಂಗುದಾಣದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ರಿಂಗ ರೋಡಿಗೆ ಕೆಲವು 5-6 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ ಖಚಿತ ಮಾಹಿತಿ ಸಿಕ್ಕ ಮೇರೆಗೆ ಸಿಬ್ಬಂದಿಯವರೊಂದಿಗೆ ಹುಮನಾಬಾದ ರಿಂಗ ರೋಡ ಲಾರಿ ತಂಗುದಾಣದ ಪಕ್ಕದಲ್ಲಿ ಹೋಗಿ ಠಾಣೆಯ ಹಸೇನ ಬಾಷಾ ಪಿ.ಎಸ್.ಐ (ಕಾ.ಸು) ಹಾಗು ಮತ್ತು ಬೀಟ ಕರ್ತವ್ಯದ ಸಿಬ್ಬಂದಿಯವರಾದ ಶಿವಶರಣಪ್ಪ ಎ.ಎಸ್.ಐ, ಪ್ರಕಾಶ ಪಿಸಿ 1132, ಅಸ್ಲಂಬಾಷಾ ಪಿಸಿ 434, ರವರಿಗೆ  ಮತ್ತು ಮಾಹಾಂತೇಶ ಪಿಸಿ 716, ಬಂದೇನವಾಜ ಪಿಸಿ 429, ಕರಣಸಿಂಗ ಪಿಸಿ 422 ಇವರಿಗೆ ಸದರಿ ವಿಷಯ ಫೊನ ಮುಖಾಂತರ ಮಾಹಿತಿ ನೀಡಿದ್ದು ಅವರು ತಮ್ಮ ದ್ವಿಚಕ್ರಗಳ ವಾಹನಗಳ ಮೇಲೆ ಹುಮನಾಬಾದ ರಿಂಗ ರೋಡ ಲಾರಿ ತಂಗುದಾಣದ ಪಕ್ಕದಲ್ಲಿ ಬಂದಿದ್ದು ನಂತರ ಎಲ್ಲರೂ ಕೂಡಿಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಬೆಳಗಿನ ಜಾವ ರಿಂಗ ರೊಡ ಹತ್ತಿರ ಹೊಗಿ ಜಾಡು ಹಿಡಿದು ನೋಡಲು ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ ಒಟ್ಟು 4 ಜನರಿಗೆ ಹಿಡಿದುಕೊಂಡಿದ್ದು, ಒಬ್ಬನು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ  ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1) ಸಲ್ಲೀಂ ತಂದೆ ಮಹ್ಮದ ಸಲಾಂ ಸಾಃ ಹನುಮಾನ ಗುಡಿ ಹತ್ತಿ ಲಾಲಗಿರಿ ಕ್ರಾಸ್‌ ಕಲಬುರಗಿ 2) ಸಿದ್ದು @ ರೇವಣಸಿದ್ದಪ್ಪ ತಂದೆ ರವಿಕುಮಾರ ಶೆಳ್ಳಗಿ ಸಾಃ ದುಬೈ ಕಾಲೋನಿ ಕಲಬುರಗಿ  3) ರವಿ @ ರವಿಚಂದ್ರ  ತಂದೆ ವಿರೇಶ ವಿಶ್ವಕರ್ಮ ಸಾಃ ಲೋಹರ ಗಲ್ಲಿ ಮಹಾದೇವ ನಗರ ಕಲಬುರಗಿ  4) ಪ್ರಲ್ಹಾದ ತಂದೆ ಅಂಬಾದಾಸ ಗಾಯಕವಾಡ ಸಾಃ ಮರಗಮ್ಮ ಗುಡಿ ಹತ್ತಿರ ಕಲಬುರಗಿ ಈ 4 ಜನರಿಗೆ ಓಡಿ ಹೋದವನ ಬಗ್ಗೆ ಹೆಸರು ವಿಳಾಸ ವಿಚಾರಿಸಲಾಗಿ ಅವನ ಹೆಸರು 5) ಈಶ್ವರ ತಂದೆ ಶಿವಶರಣಪ್ಪ ಮುಡಬಿ ಸಾ: ಸಂಜೀವ ನಗರ ಅಂತಾ ತಿಳಿಸಿದರು.           ನಂತರ ಸದರಿಯವರ ಅಂಗ ಶೋದನೆಯನ್ನು ಮಾಡಲಾಗಿ ಒಂದು ತಲವಾರಗಳು ಮಚ್ಚು ಮತ್ತು ಲಾಂಗಲಳು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 25-06-2015 ರಂದು ಕರಜಗಿ ಗ್ರಾಮದಲ್ಲಿ ಕರಜಗಿ ಗ್ರಾಮದ ಜಗನ್ನಾಥ ತಂದೆ ಹಣಮಂತ ಲೋಣಾರ ಮತ್ತು ಅವನ ತಂಗಿ ಮಾಹಾದೇವಿ ತಂದೆ ಹಣಮಂತ ಲೋಣಾರ ಇವರು ದಿನಾಲು ಬೆಳಗಿನ ಜಾವದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಜಗನ್ನಾಥ ಈತನು ಬಸವೇಶ್ವರ ಚೌಕ ಹತ್ತಿರ ಮತ್ತು ಮಾಹಾದೇವಿ ಇವಳು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಅವರನ್ನು ನಂಬಿಸಿ ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿರುತ್ತಾರೆ. ಈಗ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮಕ್ಕೆ ಹೋಗಿ, ಕರಜಗಿ ಗ್ರಾಮದ ಬಸವೇಶ್ವರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ, ನಿವು ನನ್ನನ್ನು ನಂಬಿರಿ ಇದು ನಿಮ್ಮ ದೈವ ಲಿಲೆ ಧನ ಲಕ್ಷ್ಮೀ ನಿಮ್ಮ ಮನೆಯ ಬಾಗಿಲಿಗೆ ಬಂದು ನಿಂತಿದ್ದಾಳೆ, ಬನ್ನಿ ಹಣ ಕೊಟ್ಟು ನಿಮ್ಮ ಅದೃಷ್ಟದ ನಂಬರನ್ನು ಬರೆಸಿ ನಾನು ನಿಮಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರನ್ನು ವಂಚಿಸುತ್ತಾ ಕೈಯಲ್ಲಿ ಹಣ ಹಿಡಿದುಕೊಂಡು, ಜನರಿಂದ ಹಣ ಪಡೆಯುತ್ತಾ ಅಂಕಿ ಸಂಖ್ಯೆ ಬರೆದುಕೊಟ್ಟು ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜಗನ್ನಾಥ ತಂದೆ ಹಣಮಂತ ಲೋಣಾರ  ಸಾ: ಕರಜಗಿ ಅಂತಾ ತಿಳಿಸಿದನು, ಸದರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿ, ಸದರಿಯವನ ಸ್ವ ಖುಷಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ವ್ಯಕ್ತಿ ನಾನು ಸುಮಾರು ದಿನಗಳಿಂದ ಮಟಕಾ ಬರೆದುಕೊಳ್ಳುತ್ತೆನೆ,  ಹಾಗೂ ನನ್ನ ತಂಗಿ ಮಾಹಾದೇವಿ ಇವಳು ನಮ್ಮ ಮನೆಯ ಮುಂದೆಯೆ ಕುಳಿತುಕೊಂಡು, ಹೊಲಕ್ಕೆ ಹೋಗಿ ಬರುವ ಜನರಿಗೆ ಮತ್ತು ನಮ್ಮ ಮನೆಯ ಹತ್ತಿರ ತಿರುಗಾಡುವ ಜನರನ್ನು ಕರೆದು ಅವಳು ಸಹ ಜನರನ್ನು ನಂಬಿಸಿ ಜನರಿಂದ ಹಣ ಪಡೆದು, ಜನರನ್ನು ವಂಚಿಸಿ ಮೊಸದಿಂದ ಮಟಕಾ ಬರೆದುಕೊಳ್ಳುತ್ತಾಳೆ, ನಾನು ಜನರು ಬರೆಸಿದ ಮಟಕಾ ಹಣದಲ್ಲಿ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ನಮ್ಮ ಮನೆಯಲ್ಲಿ ಮುಚ್ಚಿ ಇಟ್ಟಿರುತ್ತೆನೆ. ಹಾಗೂ ನಾನು ಮತ್ತು ನನ್ನ ತಂಗಿ ಮಾಹಾದೇವಿ ಇಬ್ಬರು ಬರೆದುಕೊಂಡ ಮಟಕಾ ಹಣವನ್ನು ಮತ್ತು ಮಟಕಾ ನಂಬರಗಳನ್ನು ಗಿರಿಮಲ್ಲಪ್ಪ ಗಂಗೊಂಡ ಸಾ: ನಾಗಣಸೂರ ತಾ: ಅಕ್ಕಲಕೋಟ ಈತನು ನಮ್ಮ ಊರಿಗೆ ಬಂದು ತಗೆದುಕೊಂಡು ಹೋಗುತ್ತಾನೆ, ನಾವು ಮಟಕಾವನ್ನು ಗಿರಿಮಲ್ಲಪ್ಪನಿಗೆ ಕೊಡುತ್ತೆವೆ ಅಂತಾ ತಿಳಿಸಿದನು ಮತ್ತು ನಾನು ಈಗಾಗಲೆ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡ ಹಣದಲ್ಲಿ 1,00,000/- ಹಣವನ್ನು ಮನೆಯಲ್ಲಿಟ್ಟಿದ್ದು, ತಾವುಗಳು ನನ್ನ ಜೋತೆಗೆ ಬಂದಲ್ಲಿ ಸದರಿ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ತೋರಿಸಿ ಹಾಜರುಪಡಿಸುತ್ತೆನೆ ಅಂತಾ ತನ್ನ ಸ್ವ ಖುಷಿ ಹೇಳಿಕೆ ನೀಡಿದನು. ನಂತರ ಸದರಿ ಜಗನ್ನಾಥ ಈತನನ್ನು ದಸ್ತಗಿರಿ ಮಾಡಿ, ಸದರಿಯವನನ್ನು ಚೆಕ್ ಮಾಡಲಾಗಿ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ, ನಗದು ಹಣ  36,100/- ರೂ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ನೋಟ್ ಬುಕ್ ಮತ್ತು ಒಂದು ಪೆನ್ನ ಹಾಗೂ ಒಂದು ಮೋಬೈಲ ಪೋನ್ ಅಕಿ- 1000/- ರೂ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡೆನು. ನಂತರ ಸದರಿ ಆರೋಪಿತನು ತನ್ನ ಸ್ವ ಖುಷಿ ಹೇಳಿಕೆಯಲ್ಲಿ ತಿಳಿಸಿದಂತೆ ಮಟಕಾ ಜೂಜಾಟಕ್ಕೆ ಸಂಭಂದಪಟ್ಟ ಮನೆಯಲ್ಲಿಟ್ಟ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ಹಾಜರು ಪಡಿಸುತ್ತೆನೆ ಅಂತಾ ತಿಳಿಸಿದ ಮೇರೆಗೆ, ಸದರಿ ಆರೋಪಿತನನ್ನು ಸದರಿ ಹಣವನ್ನು ಹಾಜರುಪಡಿಸಲು ತಿಳಿಸಿದ ಮೇರೆಗೆ, ಸದರಿ ಆರೋಪಿತನು ನನ್ನ ಜೋತೆಗೆ ಬನ್ನಿ ಅಂತಾ ಹೇಳಿ ಬಸವೇಶ್ವರ ಸರ್ಕಲದಿಂದ ನಮ್ಮನ್ನು ಕರೆದುಕೊಂಡು ನಮ್ಮ ಮುಂದೆ ಮುಂದೆ ಹೊರಟನು, ನಾವೆಲ್ಲರು ಅವನ ಹಿಂದಿನಿಂದ ಹೊರಟೇವು. ಸದರಿ ಆರೋಪಿತನಾದ ಜಗನ್ನಾಥ ಈತನು ಸ್ವಲ್ಪ ದೂರು ಕರೆದುಕೊಂಡು ಹೋಗಿ ದೂರಿನಿಂದ ಮುಂದೆ ಕಾಣುತ್ತಿರುವುದೆ ನಮ್ಮ ಮನೆ, ನಮ್ಮ ಮನೆಯ ಮುಂದೆ ಬೋರವೇಲ್ ಹತ್ತಿರ ಕುಳಿತಕೊಂಡು ಮಟಕಾ ಬರೆದುಕೊಳ್ಳುತ್ತಿದ್ದವಳೆ ನಮ್ಮ ತಂಗಿ ಮಾಹಾದೇವಿ ಇರುತ್ತಾಳೆ ಅಂತಾ ತಿಳಿಸಿದನು. ಆಗ ನಾವೆಲ್ಲರು ಸದರಿ ಮಹಿಳೆಯನ್ನು ನೋಡಲಾಗಿ, ಸದರಿ ಮಹಿಳಿಯೆ ಬೊರವೇಲ್ ಹತ್ತಿರ ಕುಳಿತುಕೊಂಡು ಹೋಗಿ ಬರುವ ಜನರಿಗೆ ಮತ್ತು ಹೊಲಗಳಿಗೆ ಹೋಗುವ ಜನರಿಗೆ ಕರೆದು, ಜನರನ್ನು ವಂಚಿಸುತ್ತಾ ಜನರಿಂದ ಹಣ ಪಡೆಯುತ್ತಾ ಅಂಕಿ ಸಂಖ್ಯೆ ಬರೆದುಕೊಟ್ಟು ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಳು. ಸದರಿ ಮಹಿಳೆಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವಳ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಾಹಾದೇವಿ ತಂದೆ ಹಣಮಂತ ಲೋಣಾರ  ಸಾ: ಕರಜಗಿ ಅಂತಾ ತಿಳಿಸಿದಳು. ಸದರಿ ಮಹಿಳೆಯನ್ನು ವಿಚಾರಣೆಗೊಳಪಡಿಸಿ, ಸದರಿಯವಳ ಸ್ವ ಖುಷಿ ಹೇಳಿಕೆ ಪಡೆದುಕೊಂಡಿದ್ದು, ಸದರಿಯವಳು ನಾನು ಸುಮಾರು ದಿನಗಳಿಂದ ಮಟಕಾ ಬರೆದುಕೊಳ್ಳುತ್ತೆನೆ, ನಾನು ದಿನಾಲು ನಮ್ಮ ಮನೆಯ ಮುಂದೆ ಕುಳಿತುಕೊಂಡು, ಹೊಲಕ್ಕೆ ಹೋಗಿ ಬರುವ ಜನರಿಗೆ ಮತ್ತು ನಮ್ಮ ಮನೆಯ ಮುಂದೆ ತಿರುಗಾಡುವ ಜನರಿಗೆ ಕರೆದು ನಂಬಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು ಮಟಕಾ ಬರೆದುಕೊಳ್ಳುತ್ತೆನೆ, ಹಾಗೂ ನನ್ನ ಅಣ್ಣ ಜಗನ್ನಾಥ ಈತನು ನಮ್ಮ ಊರಿನಲ್ಲಿ ಜನಸಂದಣಿ ಏರಿಯಾಗಳಲ್ಲಿ ತಿರುಗಾಡಿ ಹಾಗೂ ನಿಂತುಕೊಂಡು ಅವನು ಸಹ ಜನರನ್ನು ನಂಬಿಸಿ ಜನರಿಂದ ಹಣ ಪಡೆದು, ಜನರನ್ನು ವಂಚಿಸಿ ಮೊಸದಿಂದ ಮಟಕಾ ಬರೆದುಕೊಳ್ಳುತ್ತಾನೆ, ನಾನು ಜನರು ಬರೆಸಿದ ಮಟಕಾ ಹಣದಲ್ಲಿ 50,000/- ರೂ (ಐವತ್ತು ಸಾವಿರ ರೂಪಾಯಿ) ಹಣವನ್ನು ನಮ್ಮ ಮನೆಯಲ್ಲಿ ಮುಚ್ಚಿ ಇಟ್ಟಿರುತ್ತೆನೆ ಅಂತಾ ತಿಳಿಸಿದಳು. ಮತ್ತು ನಾನು ಈಗಾಗಲೆ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡ ಹಣದಲ್ಲಿ 50,000/- ಹಣವನ್ನು ಮನೆಯಲ್ಲಿಟ್ಟಿದ್ದು, ತಾವುಗಳು ನನ್ನ ಜೋತೆಗೆ ನಮ್ಮ ಮನೆಯಲ್ಲಿ ಬಂದಲ್ಲಿ ಸದರಿ 50,000/- ರೂ (ಐವತ್ತು ಸಾವಿರ ರೂಪಾಯಿ) ಹಣವನ್ನು ತೋರಿಸಿ ಹಾಜರುಪಡಿಸುತ್ತೆನೆ ಅಂತಾ ತನ್ನ ಸ್ವ ಖುಷಿ ಹೇಳಿಕೆ ನೀಡಿದಳು. ನಂತರ ಸದರಿಯವಳನ್ನು ದಸ್ತಗಿರಿ ಮಾಡಿ, ಮ.ಹೆಚ್.ಸಿ ರವರಿಂದ ಚೆಕ್ ಮಾಡಿಸಲಾಗಿ ಸದರಿಯವಳ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ, 6360/- ರೂ ನಗದು ಹಣ ಮತ್ತು ಒಂದು ಪೆನ್ನ ಹಾಗೂ ಒಂದು ಮಟಕಾ ಚೀಟಿ ದೋರೆತವು. ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು,  ಸದರಿ ಆರೋಪಿತಳನ್ನು ವಶಕ್ಕೆ ಪಡೆದುಕೊಂಡೆವು. ಸದರಿ ಆರೋಪಿತರಿಂದ 1) ಒಟ್ಟು 1,92,460/- ರೂ (ಒಂದು ಲಕ್ಷ ತೊಂಬತ್ತೇರಡು ಸಾವಿರದ ನಾಲ್ಕು ನೂರಾ ಅರವತ್ತು ರೂಪಾಯಿ) ಗಳನ್ನು 2) 1 ಅಂಕಿ ಸಂಖ್ಯೆ ಬರೆದ ಮಟಕಾ ನೋಟ ಬುಕ್, 3) ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ 4) ಒಂದು ಕಾರಬನ್ ಕೆ9 ಕಂಪನಿಯ ಮೋಬೈಲ ಪೋನ್ ಅಕಿ-1000/- ರೂ 5) 2 ಪೆನ್ನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಚಿತ್ತಾಪೂರ ಠಾಣೆ : ದಿನಾಂಕ 25-06-2015 ರಂದು ಸಾಯಾಂಕಾಲ ಶ್ರೀನಿವಾಸ ಬಾರ ಹತ್ತಿರ ಅಣ್ಣಪ್ಪ ಗುತ್ತೆದಾರ ಇವನು  ನಿಂತಿದ್ದನ್ನು ನೋಡಿ ಶ್ರೀ ಕುಮಾರ ತಂದೆ ದೇವುಜಿ ಚವ್ಹಾನ ಸಾ : ಮೊಗಲಾ ತಾಂಡಾ ತಾ : ಚಿತ್ತಾಪೂರ ರವರು ತನಗೆ ಕೊಡಬೇಕಾದ 1000/- ರೂ ಸಾಲದ ಹಣವನ್ನು ಕೇಳಲು ತನ್ನ ಅಣ್ಣನೊಂದಿಗೆ ಹೋದಾಗ ಸದರಿ ಅಣ್ಣಪ್ಪನು ನಿಮ್ಮ ಯಾವ ಸಾಲ ಕೊಡುವುದಿದೆ   ಲಮಾಣಿ ಭೋಸಡಿ ಮಕ್ಕಳೆ ಅಂತ ಜಾತಿ ಎತ್ತಿ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬ್ಲೇಡನಿಂದ ಕುತ್ತಿಗೆಯ ಎಡಬಾಗಕ್ಕೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಕೊಲೆ ಮಾಡುವ ಉದ್ದೇಶದಿಂದ ಬ್ಲೇಡನಿಂದ ಹೊಡೆದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಮೃತಪಟ್ಟ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.06.2015 ರಂದು ಮದ್ಯಾನ 1.00  ಗಂಟೆಯ ಸುಮಾರಿಗೆ ಮದರಿ ಸೀಮಾಂತರ ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಪ್ಪ ಗಡೆದಾರ ಕಸ ತೆಗಯುತ್ತಿದ್ದಾಗ ಕಸ ಗುಂಪಿಯಲ್ಲಿನ ವಿಷಪೂರಿತ ಹಾವು ಆಕಸ್ಮಿಕವಾಗಿ ಅವನ ಬಲಕೈ ಕಿರುಬೆರಳಿಗೆ ಕಚ್ಚಿದ್ದು ಉಪಚಾರ ಕುರಿತು  ಸರಕಾರಿ ಆಸ್ಪತ್ರೆ ಜೇವರಗಿಗೆ ತೆಗದುಕೊಂಡು ಹೊಗುವಾಗ ಮಾರ್ಗ ಮದ್ಯದಲ್ಲಿ ಮದ್ಯಾಹ್ನ ಹಾವು ಕಚ್ಚಿದ ವಿಷದ ಬಾದೆಯಿಂದ ಮೃತಪಟ್ಟಿರುತ್ತಾನೆ ಘಟನೆ ಆಕಸ್ಮಿಕವಾಗಿ ಆಗಿರುತ್ತದೆ  ಅಂತಾ ಶ್ರೀಮತಿ ಭಾಗಮ್ಮ ಗಂಡ ಮಲ್ಲಪ್ಪ ಗಡೆದಾರ ಸಾಃ ಮದರಿ ತಾಃ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

25 June 2015

Kalaburagi District Reported Crimes

ಕಿರುಕಳ ನೀಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಿವಶರಣಪ್ಪ ತಂದೆ ರುಕ್ಮಣಪ್ಪ ಜಡಗೆನವರ ಸಾ|| ಸೀತನೂರ, ಇವರ ಮಗಳಿಗೆ ಆಳಂದ ತಾಲೂಕಿನ ಬೊಮ್ಮನಳ್ಳಿ ಗ್ರಾಮದ ನಿಂಗಣ್ಣಾನೊಂದಿಗೆ ಸುಮಾರು 1 ವರ್ಷದ ಹಿಂದೆ ಮದುವೆ ಮಾಡಿ ಕೊಟ್ಟಿದ್ದು ನಿಂಗಣ್ಣ, ಅವರ ತಾಯಿ ಜಾಜಮ್ಮ, ಅವರ ಭಾವ ಮೈದುನರಾದ ಮಾಳಪ್ಪ ಮತ್ತು ಬೀರಪ್ಪ ಇವರು ನಮ್ಮ ಮಗಳಿಗೆ ನೀನು ನಮ್ಮ ಮನೆತನಕ್ಕೆ ಹೊಂದಿಕೆ ಆಗುವದಿಲ್ಲ, ನೀನು ನೋಡಲು ಸರಿಯಾಗಿಲ್ಲ, ಅಡುಗೆ ಮಾಡುವದಕ್ಕೆ ಬರೊದಿಲ್ಲ ಅಂತ ದಿನಾಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ. ಈಗ ಸುಮಾರು 20 ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ದೇವರ ಮಾಡುವ ಕಾರ್ಯಕ್ರಮ ಇರುವದರಿಂದ ನಮ್ಮ ಮಗಳನ್ನು ನಮ್ಮ ಊರಿಗೆ ಕರೆದುಕೊಂಡು ಬಂದಿದ್ದು, ಆಗ ನಮ್ಮ ಮಗಳು ತನಗೆ ತನ್ನ ಗಂಡ ಅತ್ತೆ ಎಲ್ಲರೊ ಸೇರಿ ನೀನು ನಮ್ಮ ಮನೆತನಕ್ಕೆ ಹೊಂದಿಕೆ ಆಗುವದಿಲ್ಲ, ನೀನು ನೋಡಲು ಸರಿಯಾಗಿಲ್ಲ, ಅಡುಗೆ ಮಾಡುವದಕ್ಕೆ ಬರೊದಿಲ್ಲ ಅಂತ ದಿನಾಲು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ತಿಳಿಸಿದ್ದು. ದಿ 22/06/2015 ರಂದು ನಮ್ಮ ಅಳಿಯ ನಿಂಗಣ್ಣನು ನಮ್ಮೂರಿಗೆ ಬಂದಾಗ ಅವನಿಗೂ ಕೂಡ ನಮ್ಮ ಮಗಳಿಗೆ ತೊಂದರೆ ಕೊಡಬೇಡ ಚೆನ್ನಾಗಿ ನೋಡಿಕೊ ಅಂತ ತಿಳಿ ಹೇಳಿ ಅವನ ಜೊತೆ ನನ್ನ ಮಗಳನ್ನು ಕೊಟ್ಟು ಕಳಿಸಿ ಕೊಟ್ಟಿದ್ದು. ದಿ  24/06/2014 ರಂದು ಸಾಯಂಕಾಲ ನಮ್ಮ ಅಣ್ಣತಮ್ಮಕೀಯ ಶರಣಪ್ಪ ಇವರು ಫೋನ ಮಾಡಿ ನಮ್ಮ ಮಗಳು ಹೊಲದಲ್ಲಿ ವಿಷ ಸೇವನೆ ಮಾಡಿದ ಬಗ್ಗೆ ತಿಳಿಸಿದ್ದು. ಆಗ ನಾವು ಬಮ್ಮನಳ್ಳಿ ಗ್ರಾಮಕ್ಕೆ ಬಂದು ವಿಚಾರಿಸಲಾಗಿ ಗ್ರಾಮದ ಕುರಕೋಟಿ ಇವರ ಹೊಲದಲ್ಲಿ ನಮ್ಮ ಮಗಳು ಅವಳ ಗಂಡ ಮತ್ತು ಅತ್ತೆ ಇತರರ ಕಿರುಕುಳದಿಂದ  ವಿಷ ಸೇವಿಸಿ ಮೃತಪಟ್ಟಿರುತ್ತಾಳೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಹಣದ ಆಮಿಷ ಒಡ್ಡಿ  ಬಾಲ್ಯ ವಿವಾಹವಾದ ಪ್ರಕರಣ
ಗ್ರಾಮೀಣ ಠಾಣೆ : ದಿನಾಂಕ. 24-6-2015 ರಂದು  ಪಾಳಾ ಗ್ರಾಮದಲ್ಲಿ  ಬಾಲ್ಯ ವಿವಾಹ ಆದ ಬಾಲಕಿ ಮತ್ತು ಮದುವೆಯಾದ ವ್ಯಕ್ತಿ ಮತ್ತು ಸಮ್ಮಂದಿಕರು ಇರುವ ಬಗ್ಗೆ ಮಾಹಿತಿ ತಿಳಿದು ಶ್ರೀ ತಿಪ್ಪಣ್ಣ ತಂದೆ ಪೀರಪ್ಪಾ ಸಿರಸಗಿ ಉ;ಸಿ.ಡಿ.ಪಿ.ಓ.ಕಲಬುರಗಿ  ಸಾ; ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು (ಸಿ.ಡಿ.ಪಿ.ಓ)  ಕಲಬುರಗಿ ಮತ್ತು ಸಿಬ್ಬಂದಿ ಶಿವಲೀಲಾ .ಬಿ.ಕೆ. ಅಂಗನವಾಡಿ ಮೇಲ್ವೀಚಾರಕರು ,ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರಾದ ಬಸವರಾಜ ಟೆಂಗಳಿ ಜಿಲ್ಲಾ ಸಂಯೋಜಕರು , ಮಲ್ಲಪ್ಪಾ ರಾಜೂರ  ಕೇಂದ್ರ ಸಂಯೋಜರು , ಜ್ಯೋತಿ  ಎಸ್.ಕೆ. ಆಪ್ತ ಸಮಾಲೋಚಕರು ,ಸುಧಾ.ಪಿ. ತಂಡದ ಸದಸ್ಯರು , ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾನೂನು ಪರೀವಿಕ್ಷಣಾಧಿಕಾರಿ ಶ್ರೀ. ಭರತೇಶ ಶೀಲವಂತರ ಹಾಗೂ ಶ್ರೀಮತಿ ಮಂಜುಳ ರೆಡ್ಡಿ ರಕ್ಷಣಾಧಿಕಾರಿಗಳು  ಎಲ್ಲರೂ ಕೂಡಿಕೊಂಡು ಪಾಳಾ ಗ್ರಾಮಕ್ಕೆ ಹೋಗಿ ಶ್ರೀಮಂತ ತಳವಾರ ಇವರ ಮನೆಯ ಮೇಲೆ ದಾಳಿ ಮಾಡಲಾಗಿ  ಮನೆಯಲ್ಲಿ ಒಬ್ಬ ಅಪ್ರಾಪ್ತ ಬಾಲಕಿ ಮದುವೆಯಾದವಳು ಇದ್ದು. ಮನೆಯವರೆಲ್ಲರನ್ನು ಕರೆದು ವಿಚಾರಣೆ ಮಾಡಲಾಗಿ ಮದುವೆಯಾದ ಅಪ್ರಾಪ್ತ ಬಾಲಕಿಯ ಹೆಸರು ಕುಮಾರಿ ವಯಸ್ಸು 13 ವರ್ಷ ತನ್ನ ತಾಯಿ ಲಕ್ಷ್ಮೀ ಗಂಡ ದೇವು ಕಬ್ಬಲಿಗೇರ , ಮತ್ತು ಶ್ರೀಮಂತ ತಳವಾರ ಪಾಳಾ ಗ್ರಾಮ  ಇವರಿಬ್ಬರೂ ಹಣದ ಆಮಿಶಕ್ಕಾಗಿ ರಾಜಸ್ಥಾನ ಮೂಲದ ವಿಜಯಸಿಂಗ, ಸುನೀಲ್ ಹಾಗೂ ಹೇಮರಾಜ ಇವರಿಂದ ರೂ 25,000/- ಗಳನ್ನು ಪಡೆದಕೊಂಡು.  ದಿನಾಂಕ. 9-6-2015 ರಂದು  ನನಗೆ ವಿಜಯಸಿಂಗನೊಂದಿಗೆ ಮದುವೆ ಮಾಡುವದಾಗಿ ಪುಸಲಾಯಿಸಿ ಜಬರದಸ್ತಿಯಿಂದ ಇಂಡಸ್ಟ್ರೀಯಲ್ ಏರಿಯಾಬಸವಣ್ಣ ಗುಡಿಯ ಹತ್ತಿರ ಜಬರದಸ್ತಯಿಂದ ಮದುವೆ ಮಾಡಿದ್ದು ನಂತರ ಇವರೆಲ್ಲರೂ ಕೂಡಿಕೊಂಡು ನನಗೆ ಪಾಳಾ ಗ್ರಾಮಕ್ಕೆ ಕರೆದುಕೊಂಡು ಬಂದು ಶ್ರೀಮಂತ ತಳವಾರ ಇವರ ಮನೆಯಲ್ಲಿ ಉಳಿದುಕೊಂಡಿದ್ದು  ಇವರ ಮನೆಯಲ್ಲಿ ರಾತ್ರಿವೇಳೆಯಲ್ಲಿ ವಿಜಯಸಿಂಗನ್ನು ನನಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ  ಅಂತಾ ತಿಳಿಸಿದಳು ನಂತರ ಮತ್ತು ಮದುವೆಯಾದ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ವಿಜಯಸಿಂಗ ಸಾ:ರಾಜಸ್ಥಾನ  ಎಂದು ಹೇಳಿದ್ದು  ವಿಜಯಸಿಂಗನ ಸಹೋದರರಾದ  ಸುನೀಲ್ ಮತ್ತು  ಹೇಮರಾಜ ಇವರನ್ನು ವಿಚಾರಿಸಲು ದಿನಾಂಕ. 9-6-2015 ರಂದು ವಿಜಯಸಿಂಗನ ಮದುವೆಯು ಕುಮಾರಿ ವಯ;13 ವರ್ಷ ಇವಳೊಂದಿಗೆ ಮದುವೆ ಮಾಡಿದ್ದು  ದಿನಾಂಕ.25-6-2015 ರಂದು ಪಾಳಾ ಗ್ರಾಮದಲ್ಲಿ   ಜಗದೇವಿ @ ಅಂಬಿಕಾ ವಯ;16 ಸಾ: ದಂಡಗುಂಡ ಇವಳೊಂದಿಗೆ ಮಾಡುವ ಕುರಿತು ಪಾಳದಲ್ಲಿ ಎಲ್ಲರೂ ಉಳಿದುಕೊಂಡಿರುವದಾಗಿ ತಿಳಿಸಿದರು.ಆದುದರಿಂದ ಈ ಮೇಲೆ ನಮೂದ ಶ್ರೀಮಂತ ತಳವಾರ ಸಾ;ಪಾಳಾ , ಲಕ್ಷ್ಮೀ ಗಂಡ ದೇವು ಕಬ್ಬಲಿಗೇರ ಸಾ;ಇಂಡಸ್ಟ್ರೀಯಲ್ ಏರಿಯಾ ಕಪನೂರ ,ಇವರು ಅಪ್ರಾಪ್ರ ಬಾಲಕಿಯನ್ನು ಮದುವೆ ಮಾಡುವದು ಕಾನೂನು ಬಾಹಿರವಾದದು ಅಂತಾ ಗೊತ್ತಾಗಿದ್ದರೂ ಕೂಡಾ ಹಣದ ಆಮಿಶಕ್ಕಾಗಿ ರಾಜಸ್ಥಾನ ಮೂಲದ ವಿಜಯಸಿಂಗ,  ಸುನೀಲ್ ಹಾಗೂ ಹೇಮರಾಜ ಇವರಿಂದ 25,000/- ರೂ.  ತೆಗೆದುಕೊಂಡು ವಿಜಯಸಿಂಗನೊಂದಿಗೆ ಬಾಲ್ಯ ವಿವಾಹ ಮಾಡಿದ್ದು , ಅಲ್ಲದೆ ರಾಜಸ್ಥಾನ ಮೂಲದ ವಿಜಯಸಿಂಗ,  ಸುನೀಲ್ ಹಾಗೂ ಹೇಮರಾಜ ಇವರು ಮದುವೆ ಮಾಡಿಕೊಳ್ಳುವದಾಗಿ ಪುಸಲಾಯಿಸಿ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿ ವಿವಾಹ ಮಾಡಿಕೊಂಡು ಪಾಳಾ ಗ್ರಾಮದ ಶ್ರೀಮಂತ ತಳವಾರ ಇವರ ಮನೆಯಲ್ಲಿ  ವಿಜಯಸಿಂಗನು ಜಬರದಸ್ತಿಯಿಂದ ಸಂಬೋಗ ಮಾಡಿದ್ದು ಇವರ ವಿರುದ್ದ ಕ್ರಮ ಕೈಕೊಳ್ಳುವಂತೆ ಶ್ರೀ ತಿಪ್ಪಣ್ಣ ತಂದೆ ಪೀರಪ್ಪಾ ಸಿರಸಗಿ ಸಿ.ಡಿ.ಪಿ.ಓ.ಕಲಬುರಗಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ: ದಿನಾಂಕ 24/06/2015 ರಂದು ಬೆಳಿಗ್ಗೆ ಶ್ರೀ ಸುಭಾಷ ತಂದೆ ಯಲ್ಲಪ್ಪ ಮಕ್ಕಳಕರ್ ಸಾ|| ಕಪಾಡಗಲ್ಲಿ ಶಹಬಜಾರ ಕಲಬುರಗಿ ರವರು ಶಹಬಜಾರದ ಮಂಗಮ್ಮನ ಗುಡಿಯ ಹತ್ತಿರ ಕುಳಿತುಕೊಂಡಾಗ ನಮ್ಮ ಣಿಯ ದೇವಾನಂದ ತಂದೆ ಕಾಂತಪ್ಪ ಮಂಜೂಳಕರ ಇತನು ನನ್ನ ಹತ್ತಿರ ಬಂದು ತಿಳಿಸಿದ್ದೇನೆಂದರೆ, ನಿಮ್ಮ ತಂದೆಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ಸೇರಿಕೆ ಮಾಡಿರುವ ವಿಷಯ ನನಗೆ ಗೋತ್ತಾಗಿ ನಾನು ಯುನೈಟೆಡ್ ಆಸ್ಪತ್ರೆಗೆ ಹೋಗಿ ನೋಡಲಾಗಿ ನಿಮ್ಮ ತಂದೆ ಯಲ್ಲಪ್ಪ ವರಿಗೆ ಮೊಳಕಾಲಿಗೆ ಹಾಗೂ ಕೈ ಬೆರಳಿಗೆ ರಕ್ತಗಾಯ & ತರಚಿದ ಗಾಯವಾಗಿದ್ದು ಅವರು ಮಾತನಾಡಲಿಲ್ಲ, ಅಲ್ಲಿಯೇ ಇನ್ನೊಂದು ಬೆಡ್ ಮೇಲೆ ಒಬ್ಬನು ಗಾಯಗೊಂಡಿದ್ದು ಆತನು, ಆತನ ಜೊತೆಯಲ್ಲಿರುವ ನ್ನೋಬ್ಬ ವ್ಯಕ್ತಿ ಇದ್ದು ಅವರು ತಿಳಿಸಿದ್ದೇನೆಂದರೆ, ನಿನ್ನೆ ದಿನಾಂಕ|| 23/06/2015 ರಂದು ಯಲ್ಲಪ್ಪ ತಂದೆ ನಾಗಪ್ಪ ಮಕ್ಕಳಕರ್ ಸಾ|| ಕಪಾಡಗಲ್ಲಿ ಶಹಬಾಜರ ಕಲಬುರಗಿ ರವರು ಸ್ಟೇಶನ ಗಾಣಗಾಪೂರ ಕ್ರಾಸನ ಟೋಲ್ ನಾಕಾ ಹತ್ತಿರದ ಪೆಟ್ರೋಲ್ ಪಂಪದ ಹತ್ತಿರ ರಸ್ತೆ ದಾಟುತ್ತಿರುವಾಗ ಸ್ಟೇಶನ ಗಾಣಗಾಪೂರ ಕಡೆಯಿಂದ ಬರುತ್ತಿದ್ದ ಇನ್ನೂ ನಂಬರ ಬೀಳದ ಸಿಲವರ್ ಬಣ್ಣದ ಹೊಸ ಹಿರೋ ಸ್ಪ್ಲೇಂಡರ್ ವಾಹನವನ್ನು ದಸ್ತಪ್ಪ ತಂದೆ ತಿಪ್ಪಣ್ಣ ಜಮಾದಾರ ಸಾವಳಗಿ (ಬಿ) ಈತನು ಅತಿ ವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ರಸ್ತೆ ದಾಟುತ್ತಿದ್ದ ಯಲ್ಲಪ್ಪ ತಂದೆ ನಾಗಪ್ಪ ರವರಿಗೆ ಅಪಘತಪಡಿಸಿದ್ದು ಅವರಿಗೆ ರಕ್ತ & ಗುಪ್ತಗಾಯಗೊಂಡು ಬೆಹೋಷ್ ಆಗಿದ್ದು ಬಸವರಾಜ ತೆಗನೂರ ಸಾ|| ಕುಸನೂರ ಇವರ ಈ ಮೋಟಾರ್ ಸೈಕಲ್ ತೆಗೆದುಕೊಂಡು ನಾವು ಕೂಡ ಮಧ್ಯಾಹ್ನ ಅಪ್ಪಾ ಪೀರ ದರ್ಗಾಕ್ಕೆ ಹೋಗಿ ಮರಳಿ ಬರುವಾಗ ಮೋಟಾರ್ ಸೈಕಲನ್ನು ಇತನು ನಡೆಸಿಕೊಂಡು ಬರುವಾಗ  ಅಜ್ಜನೂ ರೋಡ ದಾಟಬೇಕು ಎನ್ನುವಾಗ ಮೋಟಾರ್ ಸೈಕಲ್ ಆಕಡೆ ಈ ಕಡೆಗೆ ಮಾಡುತ್ತಾ ಬರುವಾಗ ಅಜ್ಜನಿಗೆ ಅಪಘಾತ ಪಡಿಸಿದ್ದರಿಂದ ಅಲ್ಲದೇ ದಪ್ಪನಿಗೂ ಕೂಡಾ ಗಾಯವಾಗಿದ್ದು ಮುಂದೆ ಯಾವುದೋ ಒಂದು ವಾಹನದಲ್ಲಿ ಬರಬೇಕೆಂದರೆ, ತಡವಾಗಿದ್ದಕ್ಕೆ ಈಗ ಮುಂಜಾನೆ ಪುನಃ ವಿಚಾರಣೆ ಮಾಡಿಕೊಂಡು ಬಂದಿದ್ದು, ರಾತ್ರಿಯೇ ನಿಮ್ಮ ತಂದೆಗೆ ಯುನೈಟೆಡ್ ಆಸ್ಪತ್ರೆಯವರ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಂದು ಬೆಳಿಗ್ಗೆ ಮೃತ ಪಟ್ಟಿರುತ್ತಾರೆ. ಅಂತಾ ತಿಳಿಸಿದ್ದಕ್ಕೆ ಕೂಡಲೇ ನಾನು, ದೇವಾನಂದ ಮಂಜೂಳಕರ್ ನನ್ನ ತಮ್ಮ ರವಿ ತಂದೆ ಮಲ್ಲಿಕಾರ್ಜುನ , ಮರೇಪ್ಪಾ ತಂದೆ ತುಳಜರಾಮ ಎಲ್ಲರೂ ಕೂಡಿ ಬೆಳಿಗ್ಗೆ 10:45 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ಶವಗಾರದ ಕೋಣೆಯಲ್ಲಿರುವ ಶವವನ್ನು ನೋಡಲಾಗಿ ನನ್ನ ತಂದೆ ಯಲ್ಲಪ್ಪನದೇ ಇದ್ದು ಗುರುತಿಸಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 24-06-2015 ರಂದು ಕರಜಗಿ ಗ್ರಾಮದಲ್ಲಿ ಐ ಬಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮಕ್ಕೆ ಹೋಗಿ, ಕರಜಗಿ ಗ್ರಾಮದ ಐಬಿ ದಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು, ಐಬಿ ಮುಂದುಗಡೆಯಿದ್ದ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದನು. ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾಜಿ ತಂದೆ ನರಸಪ್ಪ ನಿಲೇಗಾಂವ ಸಾ: ಕರಜಗಿ ಅಂತಾ ತಿಳಿಸಿದ್ದು, ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿ ವ್ಯಕ್ತಿ ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು, ಬರೆದುಕೊಂಡ ಮಟಕಾ ಚೀಟಿಗಳನ್ನು ಮತ್ತು ಹಣವನ್ನು ಇಟ್ಟುಕೊಂಡಿರುತ್ತೆನೆ. ನಾಗಣಸೂರ ಗ್ರಾಮದ ಇಸ್ಮಾಯಿಲ ತಂದೆ ಇಬ್ರಾಹಿಮ ಶೇಖ ಸಾ: ನಾಗಣಸೂರ ಈತನು 2 ದಿನಗಳಿಗೊಮ್ಮೆ ನಮ್ಮ ಗ್ರಾಮಕ್ಕೆ ಬಂದು ನಾನು ಬರೆದುಕೊಂಡ ಮಟಕಾ ಚೀಟಿಗಳನ್ನು ಮತ್ತು ಹಣವನ್ನು ತಗೆದುಕೊಂಡು ಹೋಗುತ್ತಾನೆ, ನಾನು ಬರೆದುಕೊಂಡ ಮಟಕಾವನ್ನು ಇಸ್ಮಾಯಿಲ ತಂದೆ ಇಬ್ರಾಹಿಮ್ ಶೇಖ ಸಾ: ನಾಗಣಸೂರ ತಾ: ಅಕ್ಕಲಕೋಟ ಈತನಿಗೆ ಕೊಡುತ್ತೆನೆ ಅಂತಾ ತಿಳಿಸಿದ್ದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 850/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ದಿನಾಂಕ: 24.06.2015 ರಂದು ಪ್ರಕಾಶ ಟಾಕೀಜ ಹತ್ತಿರದ ಸೀಟಿ ವೈನಶಾಪ್ ಎದುರುಗಡೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಪಿ.ಐ ಸಾಹೇಬರಾದ ಉಮಾಶಂಕರ ಬಿ. ರವರಿಗೆ  ರವರ ನೇತ್ರತ್ವದಲ್ಲಿ ಪ್ರಕಾಶ ಟಾಕೀಜ  ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮಣ ತಂದೆ ಮಾರ್ಥಂಡರಾವ ಅವದೂತ ಸಾ: ಮಾಹಾದೇವ ನಗರ ಶಹಾಬಜಾರ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 3080/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್, ಒಂದು ಮೋಬೈಲ್ ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಭಮದು ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ
ಸೇಡಂ ಠಾಣೆ : ದಿನಾಂಕ 23-06-2015 ರಂದು ಬೆಳ್ಳಿಗೆ 08-00 ಗಂಟೆಗೆ ನನ್ನ ಮಗನಾದ ಆಸೀಪ ತಂದೆ ಚಾಂದಪಾಶ್ಯಾ ಆಲಮಬ್ರದರ ಸಾಃ ಕೊಲಕುಂದಾ ತಾಃ ಸೇಡಂ ಇತನು ನಮಗೆ ತಿಳಿಸಿದೆನೆಂದರೆ ನಾನು 10 ತರಗತಿ ಪಾಸ ಆಗಿದ್ದು ಮುಂದಿನ ವಿದ್ಯಾಭ್ಯಾಸದ ಸಲುವಾಗಿ, ಸೇಡಂದ ವಿದ್ಯಾಮಂದಿರ ಶಾಲೆಗೆ ಹೋಗಿ ಟಿ.ಸಿ ತೆಗೆದುಕೊಂಡು ಬರುತ್ತೆನೆ ಮತ್ತು ನನ್ನ ಅಣ್ಣನ ಗೆಳೆಯನಾದ ಮೌನೇಶ ಇತನಿಗೆ ಭೆಟಿಯಾಗಿ ವಾಪಸ ಮನೆಗೆ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾನೆ. ಸಂಜೆಯಾದರೂ ಮನೆಗೆ ಬರದ ಕಾರಣ ನಾವು ಗಾಬರಿಯಾಗಿ ಸೇಡಂಕ್ಕೆ ಬಂದು ಎಲ್ಲಾ ಕಡೆ ವಿಚಾರಿಸಿ ತಿಳಿದುಕೊಂಡರು ಪತ್ತೆಯಾಗಿರುವದಿಲ್ಲ. ಮೌನೇಶ ಇತನಿಗೆ ವಿಚಾರಿಸಲಾಗಿ ಅವನು ತಿಳಿಸಿದೆನೆಂದರೆ. ನಿಮ್ಮ ಮಗ ನಿನ್ನೆ ದಿನಾಂಕ 23-06-2015 ರಂದು 11-00 ಎ,ಎಮ್,ಕ್ಕೆ ನನ್ನ ಹತ್ತಿರ ಬಂದು ಮಾತಾಡಿ ಕಲ್ಬುರ್ಗಿಗೆ ಹೊಗುತ್ತೇನೆ ಅಂತ ಸೇಡಂದಿಂದ ಹೋಗಿರುತ್ತಾನೆ ಅಂತ ತಿಳಿಸಿದನು. ನನ್ನ ಮಗನ ಪೋನ ನಂ 8197074702 ನೇದಕ್ಕೆ ಕರೆ ಮಾಡಿದಾಗ ಪೋನ ಸ್ವಚ್ ಆಪ್ ಆಗಿರುತ್ತದೆ. ನನ್ನ ಮಗನು ಯಾವತ್ತು ಮನೆಯಿಂದ ಹೊರೆಗಡೆ ಹೊದವನಲ್ಲ ಈ ರೀತಿ ಹೇಳದೆ ಕೆಳದೆ  ಹೋಗಿರುವುದು ನೋಡಿದರೆ ನನ್ನ ಮಗನಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಚಾಂದಪಾಶ್ಯಾ ತಂದೆ ಮಹೀಬೂಬ ಅಲಿ ಆಲಮಬ್ರದರ ಸಾಃ ಕೊಲಕುಂದಾ ತಾಃ ಸೇಡಂ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ಅಫಜಲಪೂರ ಠಾಣೆ : ದಿನಾಂಕ 08-08-2014 ರಂದು ನಮ್ಮ APMC ಇಂಚಾರ್ಜ ಸೆಕರೇಟ್ರಿಯಾದ ಮಹಾಂತಪ್ಪ ಕೋಡಿ ರವರಿಗೆ ನಾನು ತಿರುಪತಿ ದೇವರ ದರ್ಶನ ಸಲುವಾಗಿ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಕುಟುಂಬದೊಂದಿಗೆ ಹೋಗಿರುತ್ತೇನೆ. ನಂತರ ದಿನಾಂಕ 13-08-2014 ರಂದು ಮರಳಿ ಕರ್ತವ್ಯಕ್ಕೆ ಬಂದು ನೋಡಿದಾಗ ನಮ್ಮ APMC ವೇ ಬ್ರಿಡ್ಜ ಕೋಣೆಯ ಬಾಗಿಲ ತೆಗೆದಿತ್ತು, ನಂತರ ನಾನು ಒಳಗೆ ಹೋಗಿ ನೋಡಿದಾಗ ಒಳಗಡೆ ಇದ್ದ ಕಂಪ್ಯೂಟರ ಮತ್ತು ಅದರ ಪೀಟೋಪಕರಣ ಹಾಗು ಇನವರ್ಟರ ಬ್ಯಾಟ್ರಿ ಇರಲಿಲ್ಲಾ, ನಂತರ ವಿಷಯವನ್ನು APMC ಇಂಚಾರ್ಜ ಸೆಕರೇಟ್ರಿಯಾದ ಮಹಾಂತಪ್ಪ ಕೋಡಿ ರವರಿಗೆ ಫೋನಿನಲ್ಲಿ ತಿಳಿಸಿದೆನು. ಸದರಿ ಕಂಪ್ಯೂಟರ ಮತ್ತು ಅದರ ಪೀಟೋಪಕರಣದ ಅಂದಾಜ ಕಿಮ್ಮತ್ತ 16,000/- ರೂ ಮತ್ತು ಇನವರ್ಟರ ಬ್ಯಾಟ್ರಿ ಅಂದಾಜ ಕಿಮ್ಮತ್ತ 6,000/- ರೂ ಇರಬಹುದು ಹೀಗೆ ಒಟ್ಟು 22,000/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ 12-08-2014 ರಂದು ರಾತ್ರಿ ವೇಳೆಯಲ್ಲಿ ವೇ ಬ್ರಿಡ್ಜ ಕೋಣೆಯ ಬಾಗಿಲ ಕೀಲಿ ಮುರಿದು ತೆಗೆದುಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಬಸವರಾಜ ತಂದೆ ಧೇನು ರಾಠೋಡ ಸಾ|| ಮಾದಾಬಾಳ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.