POLICE BHAVAN KALABURAGI

POLICE BHAVAN KALABURAGI

14 June 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಖಾನಾಬಾಯಿ ಗಂಡ ಅಮೋಗಿ ಸಾಲುಟಗಿ ಸಾ : ಹಿಂಚಗೇರಾ ತಾ : ಅಫಜಲಪೂರ  ರವರು ಹೊಲ ಮನೆ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಉಪಜೀವಿಸುತ್ತಿರುತ್ತೇನೆ. ನನ್ನ ಅತ್ತೆ ಮಾವಂದಿರರಿಗೆ 4 ಜನ ಗಂಡು ಮಕ್ಕಳಿದ್ದು  1) ಮಾಳಪ್ಪ, 2) ನನ್ನ ಗಂಡ ಅಮೋಗಿ, 3) ಭೀರಪ್ಪ, 4) ಕಾಮಣ್ಣ ಅಂತ ಹೀಗೆ 4 ಜನ ಅಣ್ಣತಮ್ಮಂದಿರರು ಇರುತ್ತಾರೆ. ಮಾಳಪ್ಪ ಮತ್ತು ಬೀರಪ್ಪ ರವರು ಪ್ರತ್ಯಕ ಮನೆ ಮಾಡಿಕೊಂಡಿದ್ದು, ನನ್ನ ಗಂಡ ಮತ್ತು ಮೈದುನ ಕಾಮಣ್ಣ ಒಟ್ಟಿಗೆ ಇರುತ್ತಾರೆ. ಹಿಂಚಗೇರಿ ಗ್ರಾಮದಲ್ಲಿ ನಮ್ಮ ಹಿರಿಯರ ಮನೆ ಇದ್ದು, ನಮ್ಮೊಂದಿಗೆ ನಮ್ಮ ಭಾವ ಮಾಳಪ್ಪ ಮತ್ತು ಆತನ ಮಕ್ಕಳಾದ ಹಿರಗೆಪ್ಪ, ನಾಗಪ್ಪ, ಮಹಾಂತಪ್ಪ ರವರು ಜಗಳ ಮಾಡಿದ್ದರಿಂದ ನಾನು ಮತ್ತು ನನ್ನ ಗಂಡ ಮಕ್ಕಳು ಹಾಗು ನಮ್ಮ ಮೈದುನ ಕಾಮಣ್ಣ ರವರೆಲ್ಲರು ನಮ್ಮ ಹೊಲದಲ್ಲಿರುವ ಮನೆಯಲ್ಲಿ ವಾಸವಾಗಿರುತ್ತೇವೆ. ನಮ್ಮ ಮೈದುನ ಕಾಮಣ್ಣನಿಗೆ ಇಬ್ಬರು ಹೆಂಡಂದಿರರಿದ್ದು, ಮೊದಲನೆ ಹೆಂಡತಿ ನನ್ನ ಗಂಡನ ಅಕ್ಕನ ಮಗಳಾದ ಶೀಲವಂತಿ ಇದ್ದು, ಎರಡನೆಯವಳು ಲಕ್ಷ್ಮೀಬಾಯಿ ಅಂತಾ ಇರುತ್ತಾಳೆ. ಶೀಲವಂತಿ ತವರು ಮನೆ ಹಿಂಚಗೇರಿ ಗ್ರಾಮವೆ ಇರುತ್ತದೆ, ಸದರಿಯವಳು ತನ್ನ ಗಂಡನಿಗೆ ನಮ್ಮಿಂದ ಬೇರೆಯಾಗಿ ಪ್ರತ್ಯೇಕ ಮನೆ ಮಾಡಿಕೊಂಡು ಇರುವಂತೆ ಹೇಳಿದ್ದು ಅದಕ್ಕೆ ನಮ್ಮ ಮೈದುನನು ಒಪ್ಪದಿದ್ದರಿಂದ ಶೀಲವಂತಿ ಇವಳು ಈಗ ಸುಮಾರು 4 ವರ್ಷಗಳ ಹಿಂದೆ ನಮ್ಮ ಮೈದುನನೊಂದಿಗೆ ಜಗಳ ಮಾಡಿಕೊಂಡು ಹೋಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ನಮ್ಮ ಮೈದುನನ ಎರಡನೆ ಹೆಂಡತಿಯಾದ ಲಕ್ಷ್ಮೀಬಾಯಿಯು ತನ್ನ ತಾಯಿಯ ಕಣ್ಣಿನ ಆಪರೇಷನ್ ಆಗಿದ್ದರಿಂದ ತನ್ನ ತಾಯಿಗೆ ನೋಡಿಕೊಳ್ಳುವರು ಯಾರು ಇರದ ಕಾರಣ ತನ್ನ ತಾಯಿಯನ್ನು ನೋಡಿಕೊಳ್ಳಲು ಸುಮಾರು 2 ತಿಂಗಳ ಹಿಂದೆ ತನ್ನ ತವರೂರಾದ ದೇಸಾಯಿ ಕಲ್ಲೂರ ಗ್ರಾಮಕ್ಕೆ ಹೋಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ಕಳೆದ ವರ್ಷ ಏಪ್ರೀಲ್ ತಿಂಗಳಲ್ಲಿ ನಮ್ಮ ಭಾವ ಮಾಳಪ್ಪನು ಊರಲ್ಲಿರುವ ನಮ್ಮ ಹಿರಿಯರ ಮನೆ ಮಾರಾಟ ಮಾಡಲು ನಿರ್ಧರಿಸಿದಾಗ ನನ್ನ ಗಂಡ ಮತ್ತು ನನ್ನ ಮೈದುನ ಕಾಮಣ್ಣ ರವರು ಮನೆ ಮಾರಾಟ ಮಾಡದಂತೆ ನಮ್ಮ ಭಾವನೊಂದಿಗೆ ತಕರಾರು ಮಾಡಿದ್ದರಿಂದ ನನ್ನ ಭಾವ ಮಾಳಪ್ಪ ಮತ್ತು ಆತನ ಮಕ್ಕಳು ನನ್ನ ಗಂಡನೊಂದಿಗೆ ಜಗಳಾ ಮಾಡಿ ಕೊಡ್ಲಿಯಿಂದ ಹೊಡೆದಿದ್ದರು. ಆ ಸಮಯದಲ್ಲಿ ನಾವು ಅವರ ಮೆಲೆ ಕೇಸು ಮಾಡಿಸಿರುತ್ತೇವೆ. ಊರಲ್ಲಿಯ ಮನೆ ಮಾರಾಟ ಮಾಡದಂತೆಯ ತಕರಾರು ಮಾಡಿದ್ದರಿಂದ ಮತ್ತು ಶೀಲವಂತಿಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಂಡಿದ್ದರಿಂದ ನನ್ನ ಭಾವ ಮತ್ತು ಆತನ ಮಕ್ಕಳು ಹಾಗು ನಮ್ಮ ಮೈದುನನ ಮೊದಲನೆಯ ಹೆಂಡತಿ ಶೀಲವಂತಿ ಮತ್ತು ಆಕೆಯ ತಮ್ಮ ಶರಣಪ್ಪ ಜಿಡ್ಡಿಮನಿ ಇವರು ನಮ್ಮ ಮತ್ತು ನಮ್ಮ ಮೈದುನನ ಮೇಲೆ ವೈಮನಸ್ಸು ಹೊಂದಿದ್ದರು. ದಿನಾಂಕ 13-06-2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಮೈದುನ ಕಾಮಣ್ಣ ಇಬ್ಬರು ಹೊಲದಲ್ಲಿನ ಮನೆಯಿಂದ ರೇಷನ ತೆಗೆದುಕೊಂಡು ಹೋಗಲು ಹಿಂಚಗೇರಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಇದ್ದಾಗ, 1] ನಮ್ಮ ಭಾವ ಮಾಳಪ್ಪ, 2] ಹಿರಗೆಪ್ಪ, 3] ನಾಗಪ್ಪ, 4] ಮಹಾಂತಪ್ಪ, 5] ನಮ್ಮ ಅಣ್ಣತಮ್ಮಕಿಯ ಯಲ್ಲಪ್ಪ ತಂದೆ ಬೀಮಶಾ ಸಾಲುಟಗಿ, 6] ಶರಣಪ್ಪ ತಂದೆ ಭೀಮಶಾ ಜಿಡ್ಡಿಮನಿ ಇವರೆಲ್ಲರು ಮನೆ ಮಾರಾಟದ ತಕರಾರಿನ ಹಾಗು ಶೀಲವಂತಿಗೆ ಬಿಟ್ಟು ಬೇರೆ ಮದುವೆ ಮಾಡಿಕೊಂಡಿರುವ ವೈಮನಸ್ಸಿನಿಂದ ಹಾಗು ಶೀಲವಂತಿ ರವರ ಒಳಸಂಚಿನಿಂದ ಸದರಿಯವರೆಲ್ಲರು ಒಟ್ಟುಗೂಡಿ ನನ್ನ ಮೈದುನನೊಂದಿಗೆ ಜಗಳ ತೆಗೆದು ಅಲ್ಲೆ ಬಾಜು ಗಟರನಲ್ಲಿ ಹಾಕಿ ಹೊಡೆಯುತ್ತಿದ್ದಾಗ ಆಜು ಬಾಜು ಅಂಗಡಿಯವರು ಬಿಡಿಸಲು ಹೋದಾಗ ಅವರನ್ನು ಕೇಳದೆ ಹಾಗೆ ಹೊಡೆಯುತ್ತಿದ್ದರು, ಹಿರಗೆಪ್ಪನು ತನ್ನಲ್ಲಿದ್ದ ಚಾಕುವಿನಿಂದ ಕಾಮಣ್ಣನ ಹೊಟ್ಟೆಗೆ 4-5 ಸಲ ಹೊಡೆದನು. ಜಗಳ ಬಿಡಿಸಲು ಹೋದ ಆಜು ಬಾಜು ಅಂಗಡಿಯವರು ನಾವು ಜಗಳ ಬಿಡಿಸಿದರು ಬಿಡಲಿಲ್ಲಾ, ಕಾಮಣ್ಣನಿಗೆ ಚಾಕುವಿನಿಂದ ಹೊಡೆದು ಖಲಾಸ ಮಾಡಿದರು ಅಂತಾ ಅನ್ನುತ್ತಿದ್ದರು. ನಂತರ ಕಾಮಣ್ಣನಿಗೆ ಹೊಡೆದವರು ಅಲ್ಲಿಂದ ಹೋದಾಗ ಕಾಮಣ್ಣನ ಮಗ ತ್ರೀಮೂರ್ತಿ ಮತ್ತು ನಮ್ಮ ಅಣ್ಣತಮ್ಮಕಿಯ ಶಿವರಾಯ ಸಾಲುಟಗಿ ರವರು ಬಂದು ಕಾಮಣ್ಣನಿಗೆ ಉಪಚಾರ ಸಲುವಾಗಿ ಗಟರದಿಂದ ಹೊರಗೆ ತೆಗೆದು ರಸ್ತೆಯಲ್ಲಿರುವ ಬಸವೇಶ್ವರ ಚೌಕ ಹತ್ತಿರ ಇಟ್ಟಾಗ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಮಹ್ಮದ ಅಬ್ದುಲ ಕರೀಮ ತಂದೆ ಅಬ್ದುಲ ಗಫಾರ ಸಾ: ಟಿಪ್ಪೂಸೂಲ್ತಾನ ಚೌಕ ಎದರುಗಡೆ ಆಯುಶ ಮಜೀದ ರಿಂಗ ರೋಡ ಕಲಬುರಗಿ ಇವರು ದಿನಾಂಕ: 13-06-2015 ರಂದು ಬೆಳಗ್ಗೆ ಹೈದರಾಬಾದ ದಿಂದ ಕಲಬುರಗಿಗೆ ತಾನು ಹಾಗು ತನ್ನ ಸಂಬಂದಿಕರಾದ  ಏಜಾಜ ಅಹೇಮದ್ ಹಾಗು ಅವರ ಹೆಂಡತಿ ಅತುಫಾ ಹಾಗು ಇಬ್ಬರು ಮಕ್ಕಳು ಕೂಡಿ ಕಾರ ನಂ ಎಪಿ/09-ಎಟಿ-5335 ನೇದ್ದರಲ್ಲಿ ಕುಳಿತು ಬ ರುತ್ತಿದ್ದಾಗ ಮುಧೋಳ ಗೇಟ ದಾಟಿ ಮುಂದೆ ಸುಮಾರು 1 ½ ಕಿಮಿ ದೂರದಲ್ಲಿ ಸೇಡಂ ಕಡೆಗೆ ಹೋಗುತ್ತಿದ್ದಾಗ ಬೆಳಗ್ಗೆ 11:45 ಗಂಟೆಯ ಸುಮಾರಿಗೆ ಎದರುಗಡೆ ಸೇಡಂ ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗು ನಿಷ್ಕಾಳಜೀತನದಿಂದ ನಡೆಯಿಸುತ್ತಾ ಬಂದು ರಸ್ತೆಯ ಎಡಬದಿಯಿಂದ ಹೊಗುತ್ತಿದ್ದ ನಮ್ಮ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇದರಿಂದ ನಮ್ಮ ಕಾರು ಲಾರಿಯ ಕೆಳಗೆ ಸಿಕ್ಕಿಬಿದ್ದು, ನಮಗೇಲ್ಲರೀಗು ಭಾರಿಗಾಯವಾಗಿದ್ದು, ಆಗ ರಸ್ತೆಯಿಂದ ಹೊಗಿ ಬರುವ ಸಾರ್ವಜನಿಕರು ಬಂದು ನಮಗೆ ಕಾರಿನಿಂದ ಹೊರೆಗೆ ತೆಗೆದಿದ್ದು, ಕಾರ ನಡೆಯಿಸುತ್ತಿದ್ದ ಎಜಾಜ ಅಹೇಮದ್ ತಂದೆ ಮಹ್ಮದ ಪಾಶಾ ಖಾದರಿ ಸಾ: ಶಂಕರಪಲ್ಲಿ ಹಾ:ವ : ಹೈದರಾಬಾದ ಈತನು ಎದೆಗೆ ಹಾಗು ಇತರೆ ಕಡೆ ಭಾರಿಗಾಯಹೊಂದಿ ಸ್ಥಳದಲ್ಲಿಯ ಮೃತ ಪಟ್ಟಿದ್ದು ನನಗೆ ಹಾಗು ಎಜಾಜನ ಹೆಂಡತಿಯಾದ ಅತುಫಾ ಹಾಗು ಈತನ ಮಕ್ಕಳಾದ ಅಲೀದಾ ಸೀದಾ ಹಾಗು ಅಲಿಖಾ ಇವರಿಬ್ಬರಿಗೆ ಭಾರಿಗಾಯವಾಗಿದ್ದು, ನಮಗೆ ಒಂದು ಖಾಸಗಿ ಜೀಪನಲ್ಲಿ ತಂದು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ನಮಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೆನ್ಸನಲ್ಲಿ ಯುನೈಡೈಟ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಎಜಾಜ ಅಹೇಮದನ ಹೆಂಡತಿಯಾದ ಅತುಫಾ ಇವಳು ಉಪಚಾರ ಹೊಂದುತ್ತಾ ಗುಣಮುಖವಾಗದೆ ಮೃತ ಪಟ್ಟಿದ್ದು, ನಾವು ಉಪಚಾರ ಹೊಂದುತ್ತಿದ್ದು ಸದರಿ ಅಪಘಾತ ಪಡಿಸಿದ ಲಾರಿ ನಂ ಕೆಎ/28-1441 ನೇದ್ದು ಇದ್ದು. ಇದರ ಚಾಲಕ ಹೆಸರು ಆನಂದ ತಂದೆ ಅಂಬು ಪವಾರ ಸಾ: ಸೇಡಂ ಅಂತಾ ತಿಳಿದು ಬಂದಿದ್ದು ಈತನಿಗು ಸಹ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಈತನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಯಾದ ಬಗ್ಗೆ ತಿಳಿದು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ  13-06-2015 ರಂದು  ಠಾಣಾ ವ್ಯಾಪ್ತಿಯಲ್ಲಿಯ ಸ್ಟೇಷನ ಏರಿಯಾದ ಒನವೇ ರೋಡನಲ್ಲಿ ಸುರಭಿ ಲಾಡ್ಜ ಹತ್ತೀರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂವರು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ (ಕಾಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸುರಭೀ ಲಾಡ್ಜ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಮೂವರು ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸುತ್ತುವರೆದು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಗಂಗಾಧರ ತಂದೆ ಹಣಮಂತ್ರಾಯ ಹುಳಗೇರಿ ಸಾಃ ಬೋಳೆವಾಡ ತಾ.ಜಿಃ ಕಲಬುರಗಿ 2. ರೇವಣಸಿದ್ದಪ್ಪ ತಂದೆ ಶಿವಲಿಂಗಪ್ಪಾ ನೆಲ್ಲೂರ ಸಾಃ ಹಡಲಗಿ ತಾಃ ಆಳಂದ ಜಿಲ್ಲಾಃ ಕಲಬುರಗಿ 3.  ರಾಮು ತಂದೆ ಲಕ್ಷ್ಮಣ ಕಾವೇರಿ ಸಾಃ ಸೊನ್ನ ತಾಃ ಜೇವರ್ಗಿ ಜಿಲ್ಲಾಃ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಮಟಕಾ ಜೂಜಾಟಕ್ಕೆ ಬಳಸಿದ  ನಗದು ಹಣ 1440/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಎರಡು ಮಟಕಾ ಬರೆದ ಚೀಟಿ ಜಪ್ತಿಮಾಡಿಕೊಂಡು  ಆರೋಪಿ ಮತ್ತು ಮುದ್ದೆ ಮಾಲು ಸಮೇತ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

13 June 2015

Kalaburagi District Reported Crimes

ಕಂಟ್ರೀ ಪಿಸ್ತೂಲ ಇಟ್ಟುಕೊಂಡು ತಿರುಗಾಡುತ್ತಿದ್ದವರ ಬಂಧನ :
ಆಳಂದ ಠಾಣೆ : ದಿನಾಂಕ:12-06-2015 ರಂದು ಬೆಳಿಗ್ಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಪಡಸಾವಳಗಿ ಸೀಮಾಂತರದಲ್ಲಿ ಇಬ್ಬರ ಹತ್ತಿರ ಕಂಟ್ರೀ ಪಿಸ್ತೂಲ್ ಎಲ್ಲಿಂದಲೋ ತಂದು ತಮ್ಮ ಹತ್ತಿರ ಇಟ್ಟುಕೊಂಡಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಮಾಹಾದೇವ ಪಂಚಮುಖಿ ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿಯವರಾದ ಶೇಷಪ್ಪಾ ಸಿ.ಹೆಚ್.ಸಿ-366, ಶಶಿಕಾಂತ ಪಿ.ಸಿ-1228, ಯಲ್ಲಾಲಿಂಗ ಪಿ.ಸಿ-822, ಗುರುನಾಥ ಪಿ.ಸಿ-843, ಮೈಹಿಬೂಬ ಶೇಖ ಪಿ.ಸಿ.681 ರವರನ್ನು ಪಂಚರೊಂದಿಗೆ ಪಡಸಾವಳಗಿ ಸೀಮಾಂತರದ ಬಾತ್ಮೀಬಂದ ಹೊಲಕ್ಕೆ ತಲುಪಿ ಅಲ್ಲಿ ಇಬ್ಬರೂ ಮನುಷ್ಯರು ಬೇವಿನ ಮರದ ಕೆಳಗೆ ಕುಳಿತಿದ್ದು ಅವರನ್ನು ಹಿಡಿದು ಹೆಸರು ವಿಚಾರಿಸಲಾಗಿ ಒಬ್ಬನು ತನ್ನ ಹೆಸರು 1) ವಿಶ್ವನಾಥ ತಂದೆ ಕಲ್ಯಾಣಿ ಜಮಾದಾರ ಸಾ:ಪಡಸಾವಳಗಿ 2) ಲಕ್ಷ್ಮಣ ತಂದೆ ಅಮೃತ ಘೋಡಕೆ ಸಾ:ಸಾವಳೇಶ್ವರ ಎಂದು ಹೇಳಿದ್ದು ಅವರಿಬ್ಬರೂ ಒಬ್ಬರಿಗೊಬ್ಬರು ಜೀವದ ಗೆಳೆಯರಿದ್ದ ಬಗ್ಗೆ ತಿಳಿಸಿದ್ದು ಸದರಿಯವರಿಗೆ ಅನಧಿಕೃತವಾಗಿ ಪಿಸ್ತೂಲ್ ಹೊಂದಿದ ಬಗ್ಗೆ ಕೂಲಕುಂಶವಾಗಿ ವಿಚಾರಿಸಿದಾಗ ಸದರಿಯವರಿಬ್ಬರೂ ಒಂದು ಪಿಸ್ತೂಲ್ ಇದೆ ಎಂದು ಹೇಳಿದ್ದು ಅದನ್ನು ಇಟ್ಟ ಬಗ್ಗೆ ವಿಚಾರಿಸಲಾಗಿ ಯಾರಿಗೂ ಗೊತ್ತಾಗಬಾರದೆಂದು ಇದೆ ಬೇವಿನ ಮರದ ಕೆಳಗೆ ಇದ್ದ ಒಂದು ಬಂಡೆಗಲ್ಲಿನ ಕೆಳಗೆ ಇಟ್ಟಿದ್ದೆವು ಎಂದು ಹೇಳಿ ಸದರಿ ಬಂಡೆಗಲ್ಲಿನ ಕೆಳಗಿನಿಂದ ತಗೆದು ಇದೆ ಪಿಸ್ತೂಲ್ ಎಂದು ಹಾಜರಪಡಿಸಿದ್ದು ಅದು ಪರಿಶೀಲಿಸಿ ನೋಡಲಾಗಿ ಅದು ಕಂಟ್ರೀ ಪಿಸ್ತೂಲ್ ಇದ್ದು ಸದರಿ ಪಿಸ್ತೂಲಿನ ಬ್ಯಾರಲ್ & ಬಾಡಿ ಮ್ಯಾಝಿನ್ ಸ್ಟಿಲ್ ನದ್ದು ಇದ್ದು ಮ್ಯಾಝಿನ್ ಗೆ ಕಪ್ಪು ಪೇಂಟ್ ಹೊಡೆದಿದ್ದು ಸದರಿ ಮ್ಯಾಝಿನ್ ಖಾಲಿ ಇದ್ದು ಯಾವುದೇ ಗುಂಡುಗಳು ಇರುವುದಿಲ್ಲಾ ಸದರಿ ಪಿಸ್ತೂಲ್ ಹೊಂದಿದ ಬಗ್ಗೆ ಸರ್ಕಾರದಿಂದ ಯಾವುದಾದರೂ ಪರವಾನಿಗೆ ದಾಖಲಾತಿಗಳು ಪಡೆದ ಬಗ್ಗೆ ವಿಚಾರಿಸಿದ್ದು ಯಾವುದೇ ಪರವಾನಿಗೆ ದಾಖಲಾತಿಗಳು ಇಲ್ಲಾ ಹಾಗೇಯೆ ಅನಧಿಕೃತವಾಗಿ ಇಟ್ಟು ಕೊಂಡಿರುವದಾಗಿ ತಿಳಿಸಿದರಿಂದ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ನಾಂಕ:12-06-2015 ರಂದು ಬೆಳಿಗ್ಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಹಿತ್ತಲ ಶಿರೂರ ಗ್ರಾಮದ ಹತ್ತಿರ ರೋಡಿನ ಮೇಲೆ ಆಕ್ರಮವಾಗಿ ಇಬ್ಬರೂ ವ್ಯಕ್ತಿಗಳು ಆಯುಧ ಇಟ್ಟುಕೊಂಡು ನಿಂತಿರುತ್ತಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ರಾಥೋಡ್ ಪಿ.ಎಸ್.ಐ ನಿಂಬರ್ಗಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ರೋಡಿನ ಮೇಲೆ ನಿಂತಿದ್ದ ಎರಡು ಜನರು ನಮ್ಮನು ನೋಡಿ ಓಡಲು ಪ್ರಾರಂಭಿಸಿದಾಗ  ಸಿಬ್ಬಂದಿಯವರ ಸಹಾಯದಿಂದ  ಅವರನ್ನು ಬೆನ್ನಟ್ಟಿ ಹಿಡಿದು ಅವರಿಗೆ ಹೆಸರು & ವಿಳಾಸ ವಿಚಾರಿಸಲು ಒಬ್ಬನು ತನ್ನ ಹೆಸರು ಲಕ್ಷ್ಮಣ ತಂದೆ ಲಕ್ಕಪ್ಪಾ ಪೂಜಾರಿ ಸಾ:ಹಿತ್ತಲಶಿರೂರ ಇನ್ನೊಬ್ಬನು ತನ್ನ ಹೆಸರು ಬಸವರಾಜ ತಂದೆ ಶಿವಶರಣಪ್ಪಾ ದೇವಕಾರಿ ಸಾ:ಹಿತ್ತಲಶಿರೂರ ಅಂತಾ ಹೇಳಿದ್ದು ಇವರನ್ನು ವಿಚಾರಿಸಲಾಗಿ ಗಾಬರಿಯಾಗಿ ನಮ್ಮ ಹತ್ತಿರ ಯಾವುದೇ ಆಯುಧ ಇರುವುದಿಲ್ಲಾ ಅಂತಾ ಹೇಳಿದ್ದು ಅವರನ್ನು ನಾನು ಪ್ರತ್ಯೇಕವಾಗಿ ಕೂಲಕುಂಶವಾಗಿ ವಿಚಾರಿಸಲು ಲಕ್ಷ್ಮಣ ತಂದ ಲಕ್ಕಪ್ಪಾ ಪೂಜಾರಿ ಇತನು ನಾನು ಮತ್ತು ಬಸವರಾಜ ಕೂಡಿ ನನ್ನ ಹೊಲದ ಬೇವಿನ ಗಿಡದ ಕೆಳಗೆ ಒಂದು ಪ್ಲಾಸ್ಟೀಕ್ ಚೀಲದಲ್ಲಿ ಕಂಟ್ರೀಮೇಡ್ ಪಿಸ್ತೂಲ್ ನೆಲದಲ್ಲಿ ಹುಳಿ ಇಟ್ಟಿದ್ದು ಇರುತ್ತದೆ ನನ್ನ ಸಂಗಡ ಬಂದಲ್ಲಿ ತೋರಿಸುತ್ತೆನೆ ಅಂತಾ ಹೇಳಿದಾಗ  ಸದರಿ ಎರಡು ಜನರನ್ನು ಜೀಪ್ ನಲ್ಲಿ ಕುಡಿಸಿಕೊಂಡು ಲಕ್ಷ್ಮಣ ಪೂಜಾರಿ ಹೇಳಿದಂತೆ ಹಿತ್ತಲಶಿರೂರದಿಂದ ಮಾಡ್ಯಾಳ ಕಡೆಗೆ ಹೋಗುವ ರೋಡಿಗೆ 02 ಕೀ.ಮಿ. ಹೋಗಿ ಜೀಪ್ ದಕ್ಷಿಣಕ್ಕೆ ತಿರುಗಿಸಿ ಅಂದಾಜು 01 ಕೀ.ಮಿ.ಹೋದ ನಂತರ ಲಕ್ಷ್ಮಣ ಪೂಜಾರಿ ಇತನು ಇದೆ ನನ್ನ ಹೊಲ ಅಂತಾ ಹೇಳಿ ಹೊಲದ ಬಂದಾರಿಯ ಬದಿಗೆ ಇರುವ ಬೇವಿನ ಗಿಡದ ಕೆಳಗೆ ನೆಲದಲ್ಲಿ ಹೂಳಿಟ್ಟ ಪ್ಲಾಸ್ಟೀಕ್ ಚೀಲದಲ್ಲಿ ಇದ್ದ ಕಂಟ್ರಿಮೇಡ ಪಿಸ್ತೂಲ್ ತೋರಿಸಿದ್ದು ಅದನ್ನು ಪರಿಶೀಲಿಸಲಾಗಿ ಅದು ಕಪ್ಪು ಹಿಡಿಕೆ ಉಳ್ಳದ್ದು ಇದ್ದು ಅದರ ಬ್ಯಾರಲ್ ಮೇಲೆ Auto Matic Pistrl  Made inf USA ಅಂತಾ ಇಂಗ್ಲೀಷನಲ್ಲಿ ಬರೆದಿದ್ದು ಇರುತ್ತದೆ. ಲಕ್ಷ್ಮಣ ಪೂಜಾರಿ ಹಾಗೂ ಬಸವರಾಜ ದೇವಕಾರಿ ಇವರಿಗೆ ಗುಂಡುಗಳ ಬಗ್ಗೆ ವಿಚಾರಿಸಲು ಇರುವುದಿಲ್ಲಾ ಅಂತಾ ತಿಳಿಸಿದ್ದು ಸದರಿ ಕಂಟ್ರೀಮೇಡ್ ಪಿಸ್ತೂಲ್  ಲೈಸನ್ಸ ಬಗ್ಗೆ ವಿಚಾರಿಸಲಾಗಿ ತಮ್ಮ ಹತ್ತಿರ ಯಾವುದೆ ಲೈಸನ್ಸ ಇರುವದಿಲ್ಲಾ ಇದನ್ನು ಆಕ್ರಮವಾಗಿ ಇಟ್ಟಿಕೊಂಡಿರುತ್ತೇವೆ ತಿಳಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ತಂದೆ ಧನಶೆಟ್ಟೆಪ್ಪಾ ಚಿಕ್ಕನಾಗಾಂವ ಸಾ; ಯಳವಂತಗಿ (ಬಿ) ತಾ:ಜಿ: ಕಲಬುರಗಿ ರವರು ದಿನಾಂಕ: 15/04/2015 ರಂದು ತನ್ನ ಬಾಬ್ತು ಒಡವೆಗಳನ್ನು ಯಳವಂತಗಿ (ಬಿ) ಗ್ರಾಮದ ತನ್ನ ಮನೆಯ ಅಲಮಾರಾದಲ್ಲಿ ಇಟ್ಟಿದ್ದು ಅಲಮಾರಾದ ಲಾಕರ್ ಕೀ ಹಾಕದೇ ಹಾಗೇಯೇ ಬಿಟ್ಟಿದ್ದು ಅದೇ ದಿನ ರಾತ್ರಿ 10 -00 ಗಂಟೆಗೆ ಫಿರ್ಯಾದಿ ಮಗ ಮೊಮ್ಮಗ ಮಹೇಶ ಇತನು ಮನೆಗೆ ಬಂದು ದಿ: 16/04/2015 ರಂದು ಬೆಳಿಗ್ಗೆ 06-00 ಗಂಟೆಯೊಳಗಾಗಿ ಮನೆಯಿಂದ ಹೊರಗೆ ಹೊಗಿದ್ದು ಫಿರ್ಯಾದಿದಾರ ದಿ: 16/04/2015ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯ ಅಲಮಾರ ತೆರೆದಿದ್ದನ್ನು ನೋಡಿ ಗಾಬರಿಯಿಂದ ಅಲಮಾರಾದಲ್ಲಿಟ್ಟಿದ್ದ ಒಡವೆ ನೋಡಲಾಗಿ ಅಲಮಾರಾದಲ್ಲಿ ಟ್ಟಿದ್ದ 20 ಗ್ರಾಂ ಬಂಗಾರದ ಕೈಖಡ ಅ.ಕಿ=54000/- ರೂ ಹಾಗೂ 60 ಗ್ರಾಂ ಬಂಗಾರದ ಬಿಸ್ಕೇಟ ಅ/ಕಿ= 162000/-ರೂ ಹೀಗೆ ಒಟ್ಟು 216000/-ರೂ ಕಿಮ್ಮತ್ತಿನದ್ದನ್ನು ಮೊಮ್ಮಗ ಮಹೇಶ ತಂದೆ ಬಸವತೀರ್ಥಪ್ಪ ಪಟ್ನೆ ಈತನೆ ಕಳ್ಳತನ ಮಾಡಿರಬಹುದೆಂಬ ಸಂಶಯವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :  ಶ್ರೀ ಪುಂಡಲಿಕ ತಂದೆ ಗಿರೇಪ್ಪ ದೊಡ್ಡಮನಿ ಸಾ: ಗುಡುರ ತಾ: ಅಫಜಲಪೂರ ಹಾ:ವ: ಗುಬ್ಬಿ ಕಾಲೋನಿ   ಕಲಬುರಗಿ  ರವರು ದಿನಾಂಕ 12-06-2015 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಖಾದ್ರಿಚೌಕ ಹತ್ತಿರ ನಬಿ ಕೆಫೇ ಹೋಟಲನಲ್ಲಿ ನನಗೆ ಪರಿಚಯದವರ ನ್ನು ಬೇಟಿಯಾಗುವ ಕುರಿತು ಮೌಂಟ ಮಹರ್ಷಿ ಕಾಲೇಜ ಎದುರು ರೋಡದಿಂದ ನಬಿ ಕೆಫೇ ಹೊಲಟ ಕಡೆಗೆ ನಡೆದುಕೊಂಡು ಹೋಗಿಬರುವ ವಾಹನಗಳನ್ನು ನೋಡಿಕೊಂಡು ರಸ್ತೆ ದಾಟುತ್ತಿರುವಾಗ ಮೋಟಾರ ಸೈಕಲ ನಂಬರ ಕೆಎ-32 ಡಬ್ಲೂ-5763 ನೇದ್ದರ ಚಾಲಕನು ಶಹಾಬಜಾರ ನಾಕಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಬಲಗಾಲು ರಿಸ್ಟ ಹತ್ತಿರ ಭಾರಿಗಾಯ, ಬಲಗಾಲು ಮೊಳಕಾಲಿಗೆ ತರಚಿದಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12 June 2015

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11-06-2015 ರಂದು ಅಫಜಲಪೂರದಲ್ಲಿ ಶ್ರೀಮತಿ ಲಕ್ಷ್ಮೀಬಾಯಿ ಗಂಡ ಚನ್ನಪ್ಪಾ ಸಂಕೊಂಡ ಸಾ ಬಳೂಂಡಗಿ ತಾ : ಜೇವರ್ಗಿ ರವರ ಸೊಸೆ ಮಲ್ಲಮ್ಮ ಇವಳ ದೊಡ್ಡಮ್ಮ ಭೀಮಬಾಯಿ ಇವರು ತೀರಿಕೊಂಡಿದ್ದರಿಂದ ನಾನು ಮತ್ತು ನನ್ನ ಸೊಸೆ ಮಲ್ಲಮ್ಮ ಹಾಗು ನನ್ನ ಮಗ ಶರಣಬಸು ರವರು ಕೂಡಿ ಮದ್ಯಾಹ್ನ ಸಮಯದಲ್ಲಿ ಅಫಜಲಪೂರಕ್ಕೆ ಬಂದಿರುತ್ತೇವೆ. ನಂತರ ನನ್ನ ಮಗ ಕೇಸುರಾಯ ಇವನು ಸಹ ಒಂದು ಮೋಟರ ಸೈಕಲ ತೆಗೆದುಕೊಂಡು ಅಫಜಲಪೂರಕ್ಕೆ ಬಂದಿದ್ದನು. ಸದರಿ ಭೀಮಬಾಯಿ ರವರ ಅಂತಿಮ ಸಂಸ್ಕಾರ ಮುಗಿದ ನಂತರ ನಾನು ಮತ್ತು ನನ್ನ ಸೊಸೆ ಮಲ್ಲಮ್ಮ ಹಾಗು ನನ್ನ ಮಗ ಕೇಸುರಾಯ ರವರು ಕೂಡಿ ಅವನು ತಂದ ಮೋಟರ ಸೈಕಲ್ ನಂ ಕೆ.ಎ-32/ಇ.ಹೆಚ್-3669 ನೇದ್ದರ ಮೇಲೆ ನಮ್ಮೂರಿಗೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ಕೇಸುರಾಯ ಇವನು ನಡೆಸುತ್ತಿದ್ದು, ನಡುವೆ ನಾನು ಮತ್ತು ಹಿಂದುಗಡೆ ನನ್ನ ಸೊಸೆ ಮಲ್ಲಮ್ಮ ಕುಳತಿದ್ದಳು. ನನ್ನ ಮಗ ಕೇಸುರಾಯ ಇವನು ಹಿಂಚಗೇರಿ ಸಮೀಪ ಇದ್ದಾಗ ತನ್ನ ಮೋಟರ ಸೈಕಲನ್ನು ಅತೀವೇಗವಾಗಿ ನಡೆಸುತ್ತಿದ್ದನು, ಆಗ ನಾನು ಮತ್ತು ಮಲ್ಲಮ್ಮ ರವರು ನಿಧಾನವಾಗಿ ಓಡಿಸು ಅಂತಾ ಹೇಳುತ್ತಿದ್ದೇವು, ಅದೇ ಸಮಯಕ್ಕೆ ನಮ್ಮ ಎದುರುಗಡೆಯಿಂದ ಒಂದು ಡಬಲ್ ಟ್ರಾಯಲಿ ಟ್ರ್ಯಾಕ್ಟರ್ ಶೂಗರ ಫ್ಯಾಕ್ಟ್ರಿ ಗೊಬ್ಬರ ತುಂಬಿಕೊಂಡು ಬರುತ್ತಿದ್ದು, ಅದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಬರುತ್ತಿದ್ದನು, ಆಗ ನಾನು ಕೇಸುರಾಯನಿಗೆ ಎದುರುಗೆ ಟ್ರ್ಯಾಕ್ಟರ್ ಚಾಲಕನು ಅಡ್ಡಾದಿಡ್ಡಿಯಾಗಿ ಬರುತ್ತಿದ್ದಾನೆ ನೀನು ನಿಧಾನವಾಗಿ ಚಲಾಯಿಸು ಅಂತಾ ಅಂದಾಗ ಕೇಸುರಾಯ ಇವನು ಅದಕ್ಕೇನಾಗಲ್ಲಾ ಅಂತಾ ಹೇಳಿ ಪುನಃ ತನ್ನ ಮೋಟರ ಸೈಕಲನ್ನು ನಿಸ್ಕಾಳಜಿತನದಿಂದ ಚಲಾಯಿಸುತ್ತಿದ್ದನು, ಹಿಂಚಗೇರಾ ಗ್ರಾಮ ಹತ್ತಿರ ನನ್ನ ಮಗ ಒಮ್ಮೇಲೆ ಮೋಟರ ಸೈಕಲನ್ನು ಕಟ ಮಾಡಿ ರೊಡಿನ ಕೆಳಗೆ ಜೋರಾಗಿ ತೆಗೆದುಕೊಂಡಿದ್ದರಿಂದ ನನ್ನ ಹಿಂದೆ ಕುಳಿತ ನನ್ನ ಸೊಸೆ ಮಲ್ಲಮ್ಮ ಇವಳು ಒಮ್ಮೇಲೆ ಮೋಟರ ಸೈಕಲ ಮೇಲಿಂದ ರಸ್ತೆಯ ಮೇಲೆ ಅಂಗಾತವಾಗಿ ಬಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನು ಅತೀವೇಗವಾಗಿ ಬಂದು ನನ್ನ ಸೊಸೆಯ ಮೈ ಮೇಲೆ ಹಾಯಿಸಿದನು. ಆಗ ನನ್ನ ಸೊಸೆ ಮಲ್ಲಮ್ಮ ಇವಳಿಗೆ ಗುಪ್ತಾಂಗದ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾಳೆ. ಸದರಿ ಟ್ರ್ಯಾಕ್ಟರ್ ಚಾಲಕನು ಮತ್ತು ನನ್ನ ಮಗ ಕೇಸುರಾಯನು ತಮ್ಮ ವಾಹನಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ  ಪಂಡಿತ ತಂದೆ ಲಕ್ಷ್ಮಣ ಮುಗಳಿ ಸಾ: ಬಡದಾಳ ಇವರು 10-12 ವರ್ಷಗಳ ಹಿಂದೆ ನಮ್ಮೂರಲ್ಲಿ ಗೌಂಟಾಣಿ ಖುಲ್ಲಾ ಜಾಗ ಹಿಡಿದಿರುತ್ತೆನೆ. ಸದರಿ ನನ್ನ ಜಾಗದ ಪಕ್ಕದಲ್ಲಿ ನಮ್ಮ ಸಮಜಾದ ಬಸಪ್ಪ ತಂದೆ ಕಲ್ಲಪ್ಪ ಡೆಬ್ಬಿ ಈತನ ಜಾಗ ಇರುತ್ತದೆ. ನಾನು ಈಗ 5-6 ವರ್ಷಗಳಿಂದ ಹೊಟ್ಟೆ ಉಪ ಜೀವನಕ್ಕಾಗಿ ಹೆಂಡತಿ ಮಕ್ಕಳೊಂದಿಗೆ ಪೂನಾಕ್ಕೆ ಹೋಗಿ ಅಲ್ಲೆ ಕೂಲಿ ಕೆಲಸ ಮಾಡುತ್ತಿದ್ದೆನು. ಈಗ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮೂರಿಗೆ ಬಂದಿರುತ್ತೆನೆ. ನಾನು ಈ ಹಿಂದೆ ಹಿಡಿದ ನನ್ನ ಗೌಂಟಾಣಿ ಜಾಗದಲ್ಲಿ ನಮ್ಮ ಜಾಗದ ಪಕ್ಕದಲ್ಲಿದ್ದ ಬಸಪ್ಪ ಡೆಬ್ಬಿ ಈತನು ಮನೆ ಕಟ್ಟಿರುತ್ತಾನೆ. ಇದರಿಂದ ನಾನು ಸದರಿ ಬಸಪ್ಪ ಡೆಬ್ಬಿ ಈತನಿಗೆ ನಮ್ಮ ಜಾಗದಲ್ಲಿ ಮನೆ ಯಾಕೆ ಕಟ್ಟಿದಿ ಎಂದು ಕೇಳಿದಕ್ಕೆ, ಬಸಪ್ಪನು ನನ್ನೊಂದಿಗೆ ಜಗಳ ಮಾಡಿ ನಿನ್ನ ಜಾಗ ಇಲ್ಲ ನನ್ನದು ಇರುತ್ತದೆ ಎಂದು ಜಗಳ ಮಾಡುತ್ತಾ ಬಂದಿರುತ್ತಾನೆ. ಸದರಿ ಬಸಪ್ಪ ಡೆಬ್ಬಿ ಈತನ ಮೇಲ್ ಕಟ್ಟಿ ನಮ್ಮೂರಿನ ಹೂವಣ್ಣ ಡೆಬ್ಬಿ ಮತ್ತು ಬೀರಪ್ಪ ಡೆಬ್ಬಿ, ಭೂತಾಳಿ ಹದರಿ ಇವರು ಮಗನೆ ಬಸಪ್ಪನಿಗೆ ನೀನು ಜಾಗ ಕೇಳಿದರೆ ನೀನಗೆ ಜಿವ ಸಹಿತ ಬಿಡುವುದಿಲ್ಲ ಅಂತಾ ನನಗೆ ಜೀವ ಬೇದರಿಕೆ ಹಾಕುವುದು, ನನ್ನೊಂದಿಗೆ ಜಗಳ ಮಾಡುವುದು ಮಾಡುತ್ತಿರುತ್ತಾರೆ. ದಿನಾಂಕ 11-06-2015 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಮ್ಮೂರಿನ ಹಿರಿಯರಾದ ಮಲ್ಲೇಶಿ ಬಿದನೂರ ಇವರು ನಮ್ಮೂರಿನ ಮೆಂದಿಸಾಬ ದರ್ಗಾದ ಮಾಲಗಂಬದ ಹತ್ತಿರ ಸದರಿ ಜಾಗದ ವಿಷಯವಾಗಿ ನನಗೆ ಮತ್ತು ಬಸಪ್ಪ ಡೆಬ್ಬಿ ಈತನಿಗೆ ಕರೆಸಿ ನ್ಯಾಯ ಪಂಚಾಯತಿ ಮಾಡುತ್ತಿದ್ದರು, ನ್ಯಾಯ ಪಂಚಾಯತಿ ಮಾಡುತ್ತಿದ್ದಾಗ, ಹೂವಣ್ಣ ತಂದೆ ಜಟ್ಟೆಪ್ಪ ಡೆಬ್ಬಿ ಈತನು ತನ್ನ ಕೈಯಲ್ಲಿ ಸೈಕಲ ಚೈನ ಹಿಡಿದುಕೊಂಡು ಬೀರಪ್ಪ ತಂದೆ ಕರೆಪ್ಪ ಡೆಬ್ಬಿ, ಭೂತಾಳಿ ತಂದೆ ಖಾಜಪ್ಪ ಹದರಿ, ಬಸಪ್ಪ ತಂದೆ ಲಕ್ಕಪ್ಪ ಡೆಬ್ಬಿ ಇವರೊಂದಿಗೆ ನನ್ನ ಹತ್ತಿರ ಬಂದು ನನಗೆ ಏನೊ ಸೂಳೆ ಮಗನೆ ಜಾಗದ ತಂಟೆಗೆ ಬರಬೇಡಾ ಅಂತಾ ನಾನು ನಿನಗೆ ಮೋದಲೆ ಹೇಳಿಲ್ಲಾ ಅಂತಾ ಅಂದನು. ಆಗ ಭೂತಾಳಿ ಹದರಿ ಮತ್ತು ಬಸಪ್ಪ ಡೆಬ್ಬಿ ಇವರು ನನಗೆ ಅಲುಗಾಡದಂತೆ ಹಿಡಿದುಕೊಂಡಾಗ ಹೂವಣ್ಣ ಡೆಬ್ಬಿ ಈತನು ತನ್ನ ಕೈಯಲ್ಲಿದ್ದ ಸೈಕಲ ಚೈನಿನಿಂದ ನನ್ನ ಬೆನ್ನಿನ ಮೇಲೆ ಹಾಗೂ ಕೈಗಳ ಮೇಲೆ ಹೊಡೆಯುತ್ತಿದ್ದನು. ಭಿರಪ್ಪ ಡೆಬ್ಬಿ ಈತನು ಕೈಯಿಂದ ನನ್ನ ಮೈ ಕೈಗೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 11-06-2015 ರಂದು ಶ್ರೀಮತಿ ಸೋಮಾಬಾಯಿ ಗಂಡ ರಾಜಶೇಖರ ಕೋಟೆ ಸಾ: ಉಡಚಾಣ ಗ್ರಾಮ ತಾ: ಅಫಜಲಪೂರ ರವರು ತಮ್ಮ ಮನೆಯ ಮುಂದೆ ಜೋಳ ಹಸನು ಮಾಡುತ್ತಿರುದ್ದಾಗ, ಜೋಳದ ಸುಂಕು ನಮ್ಮ ಎದುರುಮನೆಯವನಾದ ರಾಮ ತಂದೆ ಭೀಮಶಾ ಕೋಟೆ ಈತನ ಮೋಟಾರ ಸೈಕಲ ಮೇಲೆ ಹೋಗಿ ಬಿದ್ದಿರುತ್ತದೆ. ಆಗ ರಾಮ ಈತನ ತಾಯಿ ಮರೆವ್ವ ಗಂಡ ಭೀಮಶಾ ಕೋಟೆ ಹಾಗೂ ಅಂದರೆ ನನ್ನ ನಾದನಿಯರಾದ ಜಯಶ್ರೀ ಗಂಡ ಬಸವರಾಜ ಗಂಗನಳ್ಳಿ, ಯಲ್ಲವ್ವ ಗಂಡ ಲಕ್ಷ್ಮಣ ಮ್ಯಾಕೇರಿ ಇವರು ನನ್ನ ಹತ್ತಿರ ಬಂದು ಏನೆ ರಂಡಿ ಬೇಕು ಅಂತಾ ನಮ್ಮ ಗಾಡಿಯ ಮೇಲೆ ಕಸ ಹಾಕುತ್ತಿ ಅಂತಾ ಎಲ್ಲರೂ ಕೂಡಿ ನನಗೆ ಹೊಲಸು ಹೊಲಸು ಬೈಯುವುದು ಹಾಗೂ ಎಲ್ಲರೂ ಕೂಡಿ ಕೈಯಿಂದ ಹೊಡೆಯುವುದು ಮಾಡುತ್ತಿದ್ದರು, ಆಗ ಮನೆಯಲ್ಲಿದ್ದ ನನ್ನ ಗಂಡ ಶಬ್ದ ಕೇಳಿ ಹೊರಗೆ ಬಂದು ನನಗೆ ಹೊಡೆಯುವುದನ್ನು ಬೀಡಸಲು ಬಂದಾಗ, ರಾಮ ತಂದೆ ಭಿಮಶಾ ಕೋಟೆ ಈತನು ಬಂದು ನನ್ನ ಗಂಡನಿಗೆ ಹಿಡಿದುಕೊಂಡು ಕಲ್ಲಿನಿಂದ ನನ್ನ ಗಂಡನ ತಲೆಯ ಮೇಲೆ ಹೊಡೆದನು. ಹಾಗೂ ಜಯಶ್ರೀ, ಯಲ್ಲವ್ವ, ಮರೆವ್ವ ಇವರುಗಳು ನನ್ನ ಗಂಡನ ಎಡಗಾಲು ಹಿಡಿದು ಜಗ್ಗಾಡಿರುತ್ತಾರೆ, ಇದರಿಂದ ನನ್ನ ಗಂಡನ ತಲೆಗೆ ರಕ್ತಗಾಯ ಮತ್ತು ಎಡಗಾಲಿಗೆ ಗುಪ್ತಗಾಯವಾಗಿರುತ್ತದೆ. ರಾಮ ಈತನು ನನ್ನ ಗಂಡನಿಗೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.