POLICE BHAVAN KALABURAGI

POLICE BHAVAN KALABURAGI

19 May 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 18-05-2015 ರಂದು ಶ್ರೀ ಚಂಧ್ರಕಾಂತ ತಂದೆ ಗುಂಡಪ್ಪಾ ಜಮಾದಾರ ಸಾ: ಗಂಗಾ ನಗರ ಕಲಬುರಗಿ ರವರು ಎನ,ವಿ ಕಾಲೇಜ ಎದುರು ನಿಂತಿರುವಾಗ ಒಬ್ಬ ಮನುಷ್ಯ ಆನಂದ ಹೋಟೇಲ ಕಡೆಯಿಂದ ಗೋವಾ ಹೋಟೇಲ ಕೆಡೆಗೆ ನಡೆದುಕೊಂಡು ಹೋಗುತ್ತೀದ್ದಾಗ ಆನಂದ ಹೋಟೇಲ ಕಡೆಯಿಂದ ಗೋವಾ ಹೊಟೇಲ ಕಡೆಗೆ ಹೋಗುವ ಕುರಿತು  ಒಬ್ಬ ಆಟೋರಿಕ್ಷಾ ನಂ ಕೆಎ-32-5531 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎನ.ವಿ.ಕಾಂಪ್ಲೇಕ್ಸನಲ್ಲಿ ಬರುವ ಓಂ ಮಣಿಕಂಠ ಲಿಜಿಂಗ (ರಿ) ಎದುರುಗಡೆ ರೋಡ ಮೇಲೆ ಹಿಂದಿನಿಂದ ಅಪರಿಚಿತ ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಆ ಅಪರಿಚಿತ ಮನುಷ್ಯನಿಗೆ ತೆಲೆಗೆ  ಭಾರಿ ಪೆಟ್ಟು ಬಿದ್ದು ,ಮೂಗಿನಿಂದ , ಕಿವಿಯಿಂದ ರಕ್ತ ಬಂದು  ಅಪರಿಚಿತ  ಮನುಷ್ಯ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೆ  ಸಾಯಂಕಾಲ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಸುವರ್ಣಾ ಗಂಡ ಅಂಬಾರಾಯ ಶೇಖರ ಸಾ:ಬಬಲಾದ (ಐಕೆ) ತಾ:ಜಿ:ಕಲಬುರಗಿ ಹಾ:ವ:ರಾಜಾಪುರ ಕಲಬುರಗಿ  ರವರ ಗಂಡ ಅಂಬಾರಾಯ ತಂದೆ ನಾಗಪ್ಪ ಶೇಖರ ಇತನು ತನ್ನ ಮೋಟಾರ ಸೈಕಲ್ ನಂ ಕೆಎ-32 ಇಸಿ-1402 ನೇದ್ದರ ಮೇಲೆ ಸಾವಳಗಿ (ಬಿ) ಗ್ರಾಮದ ಶಿವಲಿಂಗೇಶ್ವರ ಮಠಕ್ಕೆ ಹೋಗಿ ದರ್ಶನ ಪಡೆದುಕೊಂಡು ಮರಳಿ ಕಲಬುರಗಿಗೆ ಬರಬೇಕೆಂದು ಅಲ್ಲಿಂದ ಅದೇ ಮೋಟಾರ ಸೈಕಲ್ ಮೇಲೆ ಗಾಯಾಳು ಜಯಶ್ರೀ ಇವಳಿಗೆ ಕೂಡಿಸಿಕೊಂಡು ಕಲಬುರಗಿ ಕಡೆಗೆ ಬರಬೇಕೆಂದು ಮದ್ಯಾಹ್ನ ಕೇರಿ ಭೋಸಗಾ ಕ್ರಾಸ ಹತ್ತಿರ ಇರುವ ಜೈ ಭವಾನಿ ದಾಬಾ ದಾಟಿ ಸ್ವಲ್ಪ ಮುಂದೆ ಮೋಟಾರ ಸೈಕಲ್ ಮೇಲೆ ಬರುವಾಗ ಅದೇ ವೇಳೆಗೆ ಎದುರಗಡೆಯಿಂದ ಒಬ್ಬ ಲಾರಿ ನಂ ಎಪಿ-06 ಹೆಚ್.ಸಿ-1878 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ ಮೃತ ಅಂಬಾರಾಯ ಮತ್ತು ಜಯಶ್ರೀ ಇಬ್ಬರು ರೋಡಿನ ಮೇಲೆ ಬಿದ್ದಿದ್ದು ಇದರಿಂದ ಅಂಬಾರಾಯನಿಗೆ ಹಣೆಯ ಬಲಗಡೆ ಮೇಲಕಿನ ಮತ್ತು ಕಣ್ಣಿನ ಹತ್ತಿರ ಭಾರಿ ರಕ್ತಗಾಯ, ಎಡ ಮೇಲಕಿನ ಕೆಳಗೆ ರಕ್ತಗಾಯ, ಎಡಗೈ ಮೊಳಕೈಗೆ ಭಾರಿ ರಕ್ತಗಾಯ, ಬಲಗೈ ಹಸ್ತ ಮೇಲಬಾಗಕ್ಕೆ ಗಾಯವಾಗಿ ಮುರಿದಂತಾಗಿದ್ದು, ಹೊಟ್ಟೆಯ ಹಾಗು ಇತರೇ ಭಾಗಕ್ಕೆ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಜಯಶ್ರೀ ಇವಳಿಗೆ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿದ್ದು ಅಪಘಾತವಾದ ಬಳಿಕ ಸದರಿ ಲಾರಿ  ಚಾಲಕನು ತನ್ನ ಲಾರಿಯನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಲಾರಿಯೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬಸಮ್ಮಾ ಗಂಡ ದಿಃ ಬಸವರಾಜ ಡೊಂಗರೆ  ಸಾಃ ಅಹ್ಮದ ನಗರ ರಿಂಗ ರಸ್ತೆ ಕಲಬುರಗಿ ಇವರು ಕಲಬುರಗಿ ನಗರದ ಶೇಖರೋಜಾ ಸರ್ವೆ ನಂ.98 ಪ್ಲಾಟ ನಂ.11 ಉದ್ದ ಅಳತೆ 30*40 ನೇದ್ದನ್ನು ನಾನು ಶ್ರೀ ಸಿದ್ದಾರಾಮ ತಂದೆ ಶಂಕ್ರೇಪ್ಪಾ ಕಲಶಟ್ಟಿ ಸಾ:ಭೀಮನಳ್ಳಿ ತಾ:ಜಿ:ಕಲಬುರಗಿ ಇವರಿಂದ ದಿನಾಂಕ:27/05/2010 ರಂದು 2 ಲಕ್ಷ 40 ಸಾವಿರ ರೂಪಾಯಿಗೆ ಖರೀದಿ ಮಾಡಿರುತ್ತೇನೆ. ಖರೀದಿ ಮಾಡಿದ ಬಗ್ಗೆ ನಾನು ಒಂದು ಸ್ಟ್ಯಾಂಪ ಬರೆದುಕೊಂಡು ಅದಕ್ಕೆ ನೋಟರಿ ಮಾಡಿಸಿರುತ್ತೇನೆ. ಹೀಗಿದ್ದು 2014ನೇ ಸಾಲಿನ ಡಿಸೆಂಬರ ತಿಂಗಳಲ್ಲಿ ಪ್ಲಾಟ್ ಮೇಲೆ ನಾನು ಹಲೋ ಬ್ಲಾಕ್ ಕಲ್ಲಿನಿಂದ ಒಂದು ಕೋಣೆ ಕಟ್ಟಿಕೊಂಡು ಇರುತ್ತೇನೆ. ಅದಕ್ಕೆ ಈಗ ಕೆಲವು ದಿವಸಗಳಿಂದ ಅಮೀರ್ ಎಂಬುವನು ತನ್ನ ಜೊತೆಯಲ್ಲಿ 3-4 ಜನರೊಂದಿಗೆ ಬಂದು ಈ ಪ್ಲಾಟ್ ನನ್ನ ಹೆಸರಿನಲ್ಲಿ ಇರುತ್ತದೆ. ನೀವು ಇದರ ಮೇಲೆ ಏಕೆ ಮನೆ ಕಟ್ಟಿದ್ದಿರಿ ಅಂತಾ ನನಗೆ ಅಂಜಿಸುತ್ತಾ ಬರುತ್ತಿದ್ದು ಆದರೂ ಕೂಡಾ ನಾನು ಅವರಿಗೆ ಅಂಜಿ ಸುಮ್ಮನೆ ಇರುತ್ತಿದ್ದೇನೆ. ದಿನಾಂಕ:16/05/2015 ರಂದು ಬೆಳಗ್ಗೆ ಅಮೀರ ಇವನು ತನ್ನ ಜೊತೆಯಲ್ಲಿ 7-8 ಜನರೊಂದಿಗೆ ನಮ್ಮ ಮನೆಗೆ ಬಂದು ಅವರಲ್ಲಿ ಇಬ್ಬರೂ ಕೈಯಲ್ಲಿ ಹತೋಡಿ ಇದ್ದು ಈ ಮನೆ ನನಗೆ ಸಂಬಂಧ ಇರುತ್ತದೆ ಅಂತಾ ಅಮೀರ ಇತನು ನನಗೆ ಹೇಳಿದಾಗ ಈ ಮನೆ ನನ್ನ ಹೆಸರಿನಿಂದ ಇರುತ್ತದೆ ಅಂತಾ ನಾನು ಹೇಳಲು ಹೋದಾಗ ಅವರೆಲ್ಲರೂ ಒಟ್ಟಿಗೆ ಸೇರಿ  ರಾಂಡ, ಚಿನಾಲ್, ಬೋಸಡಿ ತೇರೆ ದೋನೊ ಆಂಕ ನಿಕಾಲತೆ ಅಂತಾ ಬೈಯುತಿದ್ದರು ಕೈಯಲ್ಲಿ ಹತೋಡಿ ಇದ್ದ ಇಬ್ಬರೂ ಜನರು ಹತೋಡಿಯಿಂದ ನನ್ನ ತಗಡದ ಶಡ್ಡಿನ ಮನೆಯನ್ನು ಸಂಪೂರ್ಣವಾಗಿ ಕೆಡವಿರುತ್ತಾರೆ. ಮತ್ತು ಅವರಲ್ಲಿ ಒಬ್ಬ ಹುಡುಗನು ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

18 May 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 17-05-2015  ರಂದು ಇಂದಿರಾನಗರದ ಡಿಪೋ ನಂ.3 ಕಂಪೌಂಡ ಹತ್ತಿರ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್.ದೊಡ್ಡಮನಿ ಪಿ.ಎಸ್.ಐ (ಕಾ&ಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಇಂದಿರಾನಗರ ಡಿಪೋ ನಂ.3 ರ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1.  ಶಿವಪುತ್ರ ತಂದೆ ಶಿವಶರಣಪ್ಪಾ ಕರಲಗಿ 2. ರವೀಂದ್ರ ತಂದೆ ಮಾಪಣ್ಣ ಚುಬನಕರ್ 3. ಸಂತೋಷ ತಂದೆ ಉತ್ತಮ ಚುಬನಕರ್ 4. ರಾಣೋಜಿ ತಂದೆ ರಾಜು ಬಡದಾಳ ಸಾ || ಎಲ್ಲರು ಇಂದಿರಾನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿ ನಾಲ್ಕು  ಜನರಿಂದ ಹತ್ತಿರ ಇದ್ದ ಹಣ ಒಟ್ಟು. 2560/- ರೂ. ಮತ್ತು 52 ಇಸ್ಪೆಟ್ ಎಲೆಗಳು ನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರಣಪ್ಪಾ ತಂದೆ ಕಲ್ಲಪ್ಪಾ ವಿಬೂತಿಹಳ್ಳಿ ಸಾ||ಅಫಜಲಪೂರ ಇವರು ದಿನಾಂಕ 17-05-2015 ರಂದು ಸರಕಾರಿ ಆಸ್ಪತ್ರೆ ಅಫಜಲಪೂರ ಮುಂದಿನ ರೊಡನಲ್ಲಿ ತನ್ನ ಹೊಲಕ್ಕೆ ನಡೆದುಕೊಂಡು ಹೋಗುತಿದ್ದಾಗ ಎದುರಿನಿಂದ ಮೋ ಸೈ ನಂ ಕೆಎ-28 ಆರ್ 4274 ನೇದ್ದರ ಸವಾರನು ತನ್ನ ಮೋಟರ ಸೈಕಲ್ ನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿ ಬಲಗಾಲು ಮರಿತಂತೆ ಆಗಿ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು ಇರುತ್ತದೆ ಸದರಿ ಚಾಲಕನ ಹೆಸರು ಸಿದ್ದಣ್ಣ ತಂದೆ ಹನಮಂತ ಮಾವೂರ ಸಾ||ಸೋನ್ನ ಅಂತ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸರೋಜನಿ ಗಂಡ ಶರಣಪ್ಪಾ ಅಳ್ಳಗಿ ಸಾ||ಜಕಾಪೂರ ಇವರು ದಿನಾಂಕ 16/05/2015 ರಂದು ತನ್ನ ಮಗ ಸಂತೋಷ ಭವನ ಮಗ ರಾಜಶೇಖರ ಹಾಗೂ ಪಿರ್ಯಾದಿ ಸಂಬಂದಿಯಾದ ರಮೇಶ ಇವರೆಲ್ಲರು ಸ್ಕಾರ್ಪಿಯೋ ವಾಹನವನ್ನು ಬಾಡಿಗೆ ಮಾಡಿಕೊಂಡು ದೇವಲ ಗಾಣಗಾಪೂರಕ್ಕೆ ಹೋಗಿ ಅಲಿಂದ ಘತ್ತರ್ಗಾಕ್ಕೆ ಹೋಗುತಿದ್ದಾಗ ಹೊಂಚಗೇರಾ ಹತ್ತಿರ ಟಾಟಾ ಸುಮೋ ನಂ ಎಮ್ ಹೆಚ್ 04 ವಾಯ್ 9774 ನೇದ್ದುನು ಫಿರ್ಯಾದಿಯ ವಾಹನದಮುಂದೆ ಬಂದು ಸೈಡ್ ಸಲುವಾಗಿ ಅವಾಚ್ಯವಾಗಿ ಬೈಯುತ್ತಾ ನನಗು ಹಾಗೂ ಸಂಗಡ ಇದ್ದವರಿಗೆ ಹಿಡಿದು ಎಳೆದು ಕೈಯಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿದ್ದು ಅದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಹಸೀನಾಬೇಗಂ ಗಂಡ ಶಕೀಲಪಾಶಾ ಶೇಖ ಮುಸ್ಲೀಂ ಸಾ: ಅಫಜಲಪೂರ ಹಾ: ವ: ದೇಸುಣಗಿ ತಾ: ಜೇವರ್ಗಿ ಜಿ: ಕಲಬುರಗಿ ಇವರಿಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಈಗ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇರುತ್ತವೆ. ಮದುವೆಯಾದ 6-7 ವರ್ಷಗಳ ವರೆಗೆ ನನಗೆ ನನ್ನ ಗಂಡ ಮತ್ತು ಗಂಡನ ಮನೆಯವರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 1 ವರ್ಷದಿಂದ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನನ್ನ ಗಂಡನ ಮನೆಯವರು ನಿನು ನೋಡಲು ಚೆನ್ನಾಗಿಲ್ಲ, ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಮದಿರುತ್ತಾರೆ.ದಿನಾಂಕ 19-02-2015 ರಂದು ರಾತ್ರಿ ನಾನು ಅಫಜಲಪೂರ ಪಟ್ಟಣದ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡ 1) ಶಕೀಲಪಾಶಾ ತಂದೆ ಸಾಹೇಬಲಾಲ ಶೇಖ, ಅತ್ತೆ 2) ಹಲೀಮಾ ಗಂಡ ಸಾಹೇಬಲಾಲ ಶೇಖ, ನಮ್ಮ ಅತ್ತೆಯ ತಂಗಿ 3) ಆಶಾಭಿ ಶೇಖ, ನಮ್ಮ ಭಾವ 4) ಅಬ್ದುಲರಜಾಕ ತಂದೆ ಸಾಹೇಬಲಾಲ ಶೇಖ, ನೇಗೇಣಿ 5) ಪರವೀನಬೇಗಂ ಗಂಡ ಅಬ್ದುಲರಜಾಕ ಶೇಖ, ಮೈದುನ 6) ಪೈಗಂಬರ ತಂದೆ ಸಾಹೇಬಲಾಲ ಶೇಖ ಸಾ: ಎಲ್ಲರೂ ಅಫಜಲಪೂರ ಎಲ್ಲರೂ ಕೂಡಿ ನನಗೆ ಏನೆ ರಂಡಿ, ಸೂಳೆ ನಮಗ್ಯಾಕ ಮೂಲಾಗಿದಿ, ನೀನ್ನ ತವರು ಮನೆಗೆ ಹೋಗು ಎಂದು ಬೈಯುತ್ತಿದ್ದರು, ಆಗ ನಾನು ಹೊಗುವುದಿಲ್ಲ ಅಂತಾ ಹೇಳಿದಕ್ಕೆ ಸದರಿಯವರೆಲ್ಲರು ನನಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡಿರುತ್ತಾರೆ, ಸದರಿಯವರು ನನಗೆ ಬೈಯುವುದು ಹೊಡೆಯುವುದು ಮಾಡುತ್ತಿದ್ದಾಗ ನಮ್ಮ ಬಾಜು ಮನೆಯವರಾದ ಬಸವರಾಜ ಅಂಗಡಿ ಮತ್ತು ಇಲಿಯಾಸ ಪಟೇಲ ಇವರು ಬಂದು ನನಗೆ ಹೊಡೆಯುವುದನ್ನು ಬೀಡಿಸಿರುತ್ತಾರೆ, ಆಗ ಸದರಿಯವರು ರಂಡಿ ಇವರು ಬಂದು ಬಿಡಿಸಿದ್ದಕ್ಕೆ ನೀನು ಉಳಿದುಕೊಂಡಿದಿ ಮುಂದೆ ನಿನಗೆ ಒಂದಲ್ಲಾ ಒಂದಿನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 May 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ  ಬಂಧನ  :
ಜೇವರಗಿ ಠಾಣೆ : ದಿನಾಂಕ 16.05.2015 ರಂದು ಮುಂಜಾನೆ ಇಜೇರಿ ಗ್ರಾಮದಲ್ಲಿ ಸಾಥಖೇಡ ಕ್ರಾಸ್ ಹತ್ತಿರ ಬಸ್ಸ ನಿಲ್ದಾಣ ಸಮೀಪ ಸಾರ್ವಜನಿಕ ಸ್ಥಳದಲ್ಲಿ 3 ಜನರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ   ಶ್ರೀ ಪಂಡಿತ ವಿ ಸಗರ ಪಿ.ಎಸ್.ಐ ಜೇರವರಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ ಹಿಡಿದುಕೊಂಡು ವಿಚಾರಿಸಲು 1. ಚಿದಾನಂದ ತಂದೆ ಶಾಂತಯ್ಯ ಕಡಗಂಚಿ  2. ಅಡವಯ್ಯ ತಂದೆ ಬಸಯ್ಯ ಬಂಟೆತ್ತ  3. ಗುಂಡಪ್ಪ ತಂದೆ ನಾನಪ್ಪ ಅಗಸರ ಸಾ: ಎಲ್ಲರು ಇಜೇರಿ ತಾ: ಜೇವರ್ಗಿ  ಅಂತಾ ತಿಳಿಸಿದ್ದು ಅವರಿಂದ ಜೂಜಾಟಕ್ಕೆ ಬಳಸಿದ ನಗದು  ಹಣ 450/- ರೂ, ಮತ್ತು 3 ಮಟಕಾ ಅಂಕಿ ಸಂಖ್ಯೆ ಚೀಟಿಗಳು ಮತ್ತು 3 ಬಾಲ ಪೆನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರ4ಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಿವಾನಂದ ತಂದೆ ಸಿದ್ದಪ್ಪ ಬಿರಾದಾರ ಸಾ: ಕಮಲಾ ನಗರ ಹಾ:ವ ಭೂಸನೂರ ಪ್ಯಾಕ್ಟರಿ   ಇವರು ದಿನಾಂಕ 16/05/2015 ರಂದು ತಾನು ಸಂದೀಪ ವೈನ್ಸ ಭೂಸನೂರ ಪ್ಯಾಕ್ಟರಿ ಯಲ್ಲಿ ಕೆಲಸದಲ್ಲಿದ್ದಾಗ ಮಂಜೂನಾಥ ಯಲಶೇಟ್ಟಿ,  ಅಸ್ಲಾಂ ಪಾಗದ, ಹಣಮಂತ ತಳವಾರ ಸಾ: ಎಲ್ಲರೂ ಭೂಸನೂರ ಪ್ಯಾಕ್ಟರಿ ಇವರು ವೈನ್ ಶಾಪ್ ಗೆ ನುಗ್ಗಿ ತನಗು ಹಾಗೂ ಕೆಲಸವರಾದ ಮಲ್ಲಣ್ಣ ಮದಗುಣಕಿ, ಚಂದ್ರಕಾಂತ ಬಿರಾದಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 16-5-2015 ರಂದು ಶ್ರೀಮತಿ ಶಾರದಾಬಾಯಿ ಗಂಡ ಕಲ್ಯಾಣರಾವ ಡೆಂಗಿ ಸಾ;ಉಪಳಾಂವ ತಾ;ಜಿ;ಕಲಬುರಗಿ ಇವರ ಮಗ ಹಣಮಂತ  ತಂದೆ ಕಲ್ಯಾಣರಾವ ಡೆಂಗಿ ಸಾ;ಉಪಳಾಂವ ಇತನು  ದಿನಾಂಕ.15-5-2015 ರಂದು ಸಂಜೆ ಬೇಲೂರ ಕ್ರಾಸ ಹತ್ತಿರ ಇರುವ ಕಲಬುರಗಿ ಹೋಟಲ  ಉಮೇಶ ದೇಗಾಂವ ಇವರ ಹೋಟೆಲದಲ್ಲಿ ಸಮೋಸ ತೆಗೆದುಕೊಂಡು ಮನಗೆ ಬರುವ ಕರಿತು ಸದರಿ ಹೋಟೆಲ ಎದರುಗಡೆ ರೋಡಿನ ಎಡಬದಿಗೆ ನಿಂತಿರುವಾಗ ಅದೇವೇಳಗೆ ಕಲಬುರಗಿ ಕಡೆಯಿಂದ  ಒಂದು ಮೋಟಾರ ಸೈಕಲ ನಂ.ಕೆ.ಎ.32 ಇಎ-3470 ನೆದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಕಲಬುರಗಿ ಕಡೆಯಿಂದ ಬಹಳ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ನನ್ನ ಮಗ ಹಣಮಂತನಿಗೆ ಡಿಕ್ಕಿ ಹೊಡೆದಿದ್ದರಿಂದ ನನ್ನ ಮಗನ ತಲೆಯ ಹಿಂದುಗಡೆ  ಭಾರಿಗಾಯವಾಗಿದ್ದು  ಮತ್ತು ತರಡಿಗೆ ಗುಪ್ತ ಪೆಟ್ಟಾಗಿದ್ದು , ಸದರಿ ಅಪಘಾತ ಪಡಿಸಿದ ಮೋಟಾರ ಸೈಕಲ ಹೀರ ಹೋಂಡಾ ಫ್ಯಾಶನಪ್ರೋ ನಂ.ಕೆ.ಎ.32 ಇಎ-3470 ನೆದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ದಿನಾಂಕ. 16-5-2015 ರಂದು ಮುಂಜಾನೆ ನನ್ನ ಮಗ ಹಣಮಂತ ತಂದೆ ಕಲ್ಯಾಣರಾವ ಡೆಂಗಿ ಇತನು ಚಿರಾಯು ಆಸ್ಪತ್ರೆಯಲ್ಲಿ ಉಪಚಾರದಲ್ಲಿ ಗುಣ ಮುಖನಾಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.