POLICE BHAVAN KALABURAGI

POLICE BHAVAN KALABURAGI

23 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 22-01-2015 ರಂದು ಭೂಸನೂರ ಪ್ಯಾಕ್ಟರಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜುಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಹಣಮಂತ ತಂದೆ ಸೂರ್ಯಕಾಂತ ತಳವಾರ ಸಾ: ಧುತ್ತರಗಾಂವ ಗ್ರಾಮ  ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 900/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ನಿಂಬರ್ಗಾ ಠಾಣೆ : ದಿನಾಂಕ 22-01-2015 ರಂದು ಧುತ್ತರಗಾಂವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜುಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಸಿ.ಪಿ.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಮಲ್ಲಿನಾಥ ತಂದೆ ಭೀಮಶಾ ಮಸರೇ  ಸಾ: ಧುತ್ತರಗಾಂವ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 540/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 22-01-2015 ರಂದು ದುತ್ತರಗಾಂವ ಗ್ರಾಮದ ಭೀಮಶಾ ರಾಜೋಳ ಇವರ ಹೊಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಪಿಐ ಸಾಹೇಬ ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಕೊಡುತ್ತೇನೆ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ  ಅಂತಾ ಕೂಗುತ್ತಾ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ವಂಚಿಸುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಸಿದ್ದಲಿಂಗಯ್ಯ ತಂದೆ ಗುರುಮೂರ್ತಯ್ಯ ವಿಶ್ವನಾಥಮಠ ಸಾ: ಧುತ್ತರಗಾಂವ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 440/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

22 January 2015

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಜಗದೀಶ ತಂದೆ ವಿಶ್ವನಾಥ ಹಿರೆಮಠ ಇವರು ದಿನಾಂಕ: 12-01-2015 ರಂದು ಬೆಳಿಗ್ಗೆ ತನ್ನ ಮಗಳಾದ ವೈಷ್ಣವಿ ಮತ್ತು ಮಗನಾದ ವಿಶ್ವನಾಥ ಇವರು ಬೈಸಿಕಲ್ ಮೇಲೆ ಚಾಣುಕ್ಯ ಶಾಲೆಗೆ ಹೋಗುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಸಿಧ್ಧಾರ್ಥ ಮೆಡಿ ಸೆಂಟರ ಎದುರಿನ ರೋಡ ಮೇಲೆ  ಎಮ್.ಎಸ್.ಕೆ.ಮಿಲ್ ರೋಡ ಕಡೆಯಿಂದ ಮೋ/ಸೈಕಲ್ ನಂ;ಕೆಎ 32-6447-49 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಕ್ಕಳು ಹೋಗುತ್ತಿದ್ದ ಬೈಸಿಕಲ್ ಗೆ ಡಿಕ್ಕಿ ಪಡಿಸಿ ಫಿರ್ಯಾದಿ ಮಕ್ಕಳಿಗೆ ಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಕುಮಾರಿ ಇವಳು  ದಿನ ನಿತ್ಯ ಶಾಲೆಗೆ ಹೋಗುವ ವೇಳೆಯಲ್ಲಿ ತಾಜೋದ್ದಿನ್ ಈತನು ನನಗೆ ಚುಡಾಯಿಸುವದು ಮಾಡುತ್ತಿದ್ದನು ಆದರೂ ನಾನು ಮರ್ಯಾದಿಗೆ ಅಂಜಿ ಸುಮ್ಮನಿದ್ದೇನು. ಆದರು ಕೂಡಾ ಅವನು ಅದೇ ರೀತಿ ಚೂಡಾಯಿಸುವದು ಮಾಡುತ್ತಿರುವದನ್ನು ನಾನು ಮನೆಯಲ್ಲಿ ವಿಷಯ ತಿಳಿಸಿರುತ್ತೇನೆ. ದಿನಾಂಕ 10-1-15 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ನಾನು ಮನೆಯ ಪಕ್ಕದ ಹಿಂದೆ ಇರುವ ನಮ್ಮೂರ ಅಕ್ಬರಗೌಡ ಇವರ ಹತ್ತಿ ಹೊಲದ ಕಡೆಗೆ ಸಂಡಾಸಕ್ಕೆ ಹೋದಾಗ ಸ್ವಲ್ಪ ಸಮಯದ ನಂತರ ತಾಜೋದ್ದಿನ್ ಈತನು ನನ್ನಲ್ಲಿಗೆ ಬಂದು ನನಗೆ ನೆಲಕ್ಕೆ ಕಡೆವಿ ನನ್ನ ಚಡ್ಡಿ ಕಳೆದು ಬಾಯಿ ಒತ್ತಿ ಹಿಡಿದು ಜಬರದಸ್ತಿಯಿಂದ ಸಂಬೋಗ ಮಾಡಿದನು. ನಂತರ ಅವನು ನೀನು ಯಾರಿಗಾದರು ಹೇಳಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಭಯ ಹಾಕಿ ಅವನು ಅಲ್ಲಿಂದ ಓಡಿ ಹೋದನು. ಆಗ್ ನಾನು ಅಳುತ್ತಾ ಮನೆಗೆ ಬಂದು ನಮ್ಮ ತಂದೆ ತಾಯಿಯವರಿಗೆ ಸದರಿ ವಿಷಯ ತಿಳಿಸಿರುತ್ತೇನೆ. ಮನೆಯಲ್ಲಿ ನಮ್ಮ ತಂದೆ ತಾಯಿಯವರು ಮರ್ಯಾದಿಗೆ ಅಂಜಿ ಯಾರಿಗೂ ಈ ವಿಷಯ ತಿಳಿಸುವದು ಬ್ಯಾಡ ಅಂತಾ ನನಗೆ ಮರು ದಿವಸ ಕಲಬುರಗಿಯ ಖಾದರಿ ಚೌಕ ಹತ್ತಿರ ಜಿ. ಆರ್. ನಗರದಲ್ಲಿರುವ ನಮ್ಮ ಮಾವನ ಮನೆಯಲ್ಲಿ ಬಿಟ್ಟಿದ್ದು  ಇಂದು ದಿನಾಂಕ 21-01-15 ರಂದು ಮುಂಜಾನೆ 10 ಗಂಟೆ ಸುಮಾರಿಗೆ ನಾನು ಕಲಬುರಗಿಯ ನಮ್ಮ ಮಾವನ ಮನೆಯ ಮುಂದೆ ನಿಂತಿದ್ದ ವೇಳೆಗೆ ತಾಜೋದ್ದಿನ್ ಈತನು ಅಲ್ಲಿಗೆ ಬಂದು ನನಗೆ ನೀನು ಅಲ್ಲಿಂದ ಇಲ್ಲಿ ಬಂದಿದ್ದಿಯಾ ಅಂತಾ ನನಗೆ ಕೈ ಹಿಡಿದು ಬಲತ್ಕಾರ ಮಾಡುವ ಸುಲುವಾಗಿ ಎಳೆದುಕೊಂಡು ಹೋಗುತ್ತಿದ್ದಾಗ ನಾನು ಚೀರಾಡುವ ಶಬ್ದ ಕೇಳಿ ಜನರು ಬರುವದನ್ನು ನೋಡಿ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾಯಂಕಾಲ 4 ಗಂಟೆ ಸುಮಾರಿಗೆ ಪುನಃ ಅವನು ಅಲ್ಲಿಯೇ ತಿರುಗಾಡುತ್ತಿರುವದನ್ನು ನೋಡಿ ನಾನು ನಮ್ಮ ಮಾವನಾದ ಸರದಾರ್ ಪಟೇಲ, ಬಾಬಾ ಪಟೇಲ ಇವರಿಗೆ ಹೇಳಿದೆನು. ಅವರು ಅವನಿಗೆ ಹಿಡಿದುಕೊಂಡಾಗ ನೆರೆದ ಜನರು ಅವನಿಗೆ ಹೊಡೆ ಬಡಿ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಲ್ಲಪ್ಪ ತಂದೆ  ಮಲ್ಲಿಕಾರ್ಜುನ ಹೊನ್ನಳ್ಳಿ  ಸಾ : ಅಂಬಿಗರ ಚೌಡಯ್ಯ ನಗರ ಶರಣ ಸಿರಸಗಿ ಮಡ್ಡಿ  ರವರು ದಿನಾಂಕ 04-12-2014 ರಂದು ಶಾಲಾ  ಹುಡುಗರಿಗೆ ಶಾಲೆ ಬಿಡಲು ಆಟೋ ತೆಗೆದುಕೊಂಡು ಹೋಗಿದ್ದು ಸಾಯಂಕಾಲ 4-30 ಗಂಟೆಗೆ ನಮ್ಮ ಅತ್ತಿಗೆ ಮಾಲಾಶ್ರೀ ಇವರು ಪೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಹೆಂಡತಿಯಾದ ಶಾಂತಾ ಬಾಯಿ @ ರೇಣುಕಾ ಇವಳು ಮಧ್ಯಾಹ್ನ 3 ಗಂಟೆಗೆ ಸಂಡಾಸಕ್ಕೆ ಹೋಗುತ್ತೇನೆ ಅಂತಾ ತಂಬಿಗೆ ತೆಗೆದುಕೊಂಡು ಹೋದವಳು ವಾಪಾಸ್ಸ ಬಂದಿರುವುದಿಲ್ಲಾ ಅಂದಿನಿಂದ ಇಲ್ಲಿಯವರೆಗು ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-01-2015 ರಂದು  ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತ್ರಾಯ ಮಾಲಿ ಪಾಟೀಲ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 510/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ  20-01-2015  ರಂದು ಬೇಳಿಗ್ಗೆ ಶ್ರೀ ಮಹಾಂತಪ್ಪಾ ತಂದೆ ವೀರಭದ್ರಪ್ಪಾ ಸಿರವಾಳ ಸಾ: ಸರಸ್ವತಿ ಮಂದಿರ ಹತ್ತಿರ ನ್ಯೂ ರಾಘವೇಂದ್ರ ನಗರ : ಕಲಬುರಗಿ  ರವರು ಗೊವಾ ಹೋಟೆಲ ಕಡೆ ಚಹಾ ಕುಡಿಯಲು ನಡೆದುಕೊಂಡು ಹೋಗುವಾಗ ಗೋವಾ ಹೋಟೆಲ್ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಆರ್-6976 ರ ಸವಾರನು ತನ್ನ ಮೋಟಾರ ಸೈಕಲನ್ನು ಜಗತ ಸರ್ಕಲ್ ಕಡೆಯಿಂದ ಎಸ.ಬಿ ಟೆಂಪಲ್ ಕಡೆಗೆ ಹೋಗುವ ಕುರಿತು ಅತಿವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನಗೆ ಬಲಗಾಲು ಮೊಳಕಾಲ ಕೆಳೆಗೆ ರಕ್ತಗಾಯ ಎಡಗಾಲ ಮೊಳಕಾಲ ಕೆಳೆಗೆ ರಕ್ತಗಾಯ ಹಾಗೂ ಮುಗಿಗೆ ತರಚಿದ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ  20-01-2015  ರಂದು ಬೇಳಿಗ್ಗೆ ನಮ್ಮೂರಿಗೆ ಹೋಗುವ ಕುರಿತು ಶ್ರೀ ತಾಯಪ್ಪಾ ತಂದೆ ಹಣಮಂತ ದನಗೊರೆ ಸಾ: ವಚ್ಛ ತಾ: ಚಿತ್ತಾಪೂರ ಜಿ: ಕಲಬುರಗಿ  ಮತ್ತು ನಮ್ಮ ಸಂಬಂದಿಯಾದ ರಾಮು ಮತ್ತು ಅವರ ಮಗಳಾದ ಮಿನಾಕ್ಷಿ  3 ಜನರು ಬಸ್ ನಿಲ್ದಾಣದ ಎದುರಿನ ಬಸ್ಸಗಳ ಪ್ರವೇಶ ಗೇಟ ಎದುರುಗಡೆ ರೋಡ ಪಕ್ಕದಲ್ಲಿ 3 ಜನರು ನಿಂತಿರುವಾಗ  ಅಂದಾಜು 07-45 ಗಂಟೆ ಸುಮಾರಿಗೆ ಕೆ,ಎಸ,ಆರ,ಟಿ,ಸಿ ಬಸ್ಸ ನಂ ಕೆಎ-19-ಎಫ್-3300 ನೇದ್ದರ ಚಾಲಕನು ತನ್ನ ಬಸ್ಸನ್ನು ಆರ.ಪಿ.ಸರ್ಕಲ್ ರೋಡ ಕಡೆಯಿಂದ  ಅತಿವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನಗೆ ಮತ್ತು ನನ್ನ ಜೋತೆಯಲ್ಲಿದ್ದ ಮಿನಾಕ್ಷಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಢಿದ್ದರಿಂದ ನಾನು ಮತ್ತು ಮೀನಾಕ್ಷಿ ಪುಟಿದು ಕೆಳೆಗೆ  ಬಿದ್ದಿದ್ದು ಅಪಘಾತದಿಂದ ನನಗೆ ಎಡಗೈ ಮುಂಗೈ ಹತ್ತೀರ ಭಾರಿ ಪೆಟ್ಟು ಎಡಗಾಲ ಮೊಳಕಾಲ ಕೆಳೆಗೆ ರಕ್ತಗಾಯ ಬಲ ತೊಡೆಗೆ ಎಡ ತೊಡೆಗೆ ಭಾರಿ ಗುಪ್ತಪೆಟ್ಟು ಹಾಗೂ ಟೊಂಕಕ್ಕೆ ಭಾರಿ ಗುಪ್ತಪೆಟ್ಟು ಆಗಿತ್ತು ಮಿನಾಕ್ಷಿ ಇವಳಿಗೆ ಎಡಟೊಂಕಕ್ಕೆ ತೆಲೆಗೆ ಗುಪ್ತಪೆಟ್ಟು ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.