POLICE BHAVAN KALABURAGI

POLICE BHAVAN KALABURAGI

09 October 2014

Gulbarga District Reported Crimes

ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ: 06-10-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಪದ್ಮಮ್ಮಾ, ಮಕ್ಕಳಾದ, ಕಾವೇರಿ, ಶ್ರೀಧರ, ನಮ್ಮ ತಂದೆಯಾದ ಸುಭಾಷಬಾಬು ,ತಾಯಿಯಾದ ಶಕುಂತಲಬಾಯಿ ಎಲ್ಲರೂ ಊಟ ಮಾಡಿಕೊಂಡು ಮನೆಯಲ್ಲಿ ಮಗಲಗಿಕೊಂಡಾಗ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮಗಳು ಕಾವೇರಿ ಇವಳು ಬರ್ಹಿದೆಸೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದಳು.  ಸ್ವಲ್ಪ ಹೊತ್ತು ನೋಡಿದ್ದು  ಅವಳು ಬರದ ಕಾರಣ ನಾನು ಮತ್ತು ನನ್ನ ಹೆಂಡತಿ  ಮನೆಯ ಸುತ್ತ ಮುತ್ತ  ಹುಡಕಾಡಲಾಗಿ ನನ್ನ ಮಗಳು ಕಾಣಸಲಿಲ್ಲಾ. ಮತ್ತು ಬೆಳಿಗ್ಗೆ ನಮ್ಮ  ಸಂಭಂದಿಕರ ಹತ್ತಿರ ಹಾಗು ಎಲ್ಲಾ ಕಡೆಗೆ ವಿಚಾರಿಸಲಾಗಿ ನನ್ನ ಮಗಳ ಬಗ್ಗೆ ಗೊತ್ತಾಗಿರುವುದಿಲ್ಲಾ.ರಾಜಕುಮಾರ ಇತನು ಆಗಾಗ ನನ್ನ  ಮಗಳಿಗೆ ಚುಡಾಯಿಸುವುದು, ಪಿಡಿಸುವುದು  ಮಾಡಿದ್ದರಿಂದ ಆತನೇ ನನ್ನ ಮಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ಬರ್ಹಿದಸೆಗೆ ಹೋದಾಗ ಯಾವುದೋ ಉದ್ದೇಶದಿಂದ  ಅಪ್ರಾಪ್ತ ವಯಸ್ಕಳಾದ ನನ್ನ ಮಗಳಾದ ಕಾವೇರಿ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರಬಹುದು  ಅಂತಾ ಶ್ರೀ ರವೀಂದ್ರ ತಂದೆ ಸುಭಾಷಬಾಬು ಮಂಡಿಗಿ  ಸಾ: ಹಾಬಾಳ(ಟಿ) ಗ್ರಾಮ ತಾ: ಸೇಡಂ   ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ರಾಮಚಂದರ ತಂದೆ ಗಣಪತಿ ಕಟಕೆ ಸಾ : ಹರಸೂರ  ರವರು ದಿನಾಂಕ: 7/10/2014 ರಂದು ರಾತ್ರಿ 08-20 ಗಂಟೆಗೆ ತನ್ನ ಟಿವಿಎಸ್ ಮೋ.ಸೈಕಲ ಮೇಲೆ ಮಹಾಗಾಂವ ಕ್ರಾಸದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ಎನ್.ಹೆಚ್.218 ನೇದ್ದರ ರೋಡಿನ ಕುರಿಕೋಟಾ ಸೀಮಾಂತರ ಗಂಡೋರಿ ನಾಲಾ ಹತ್ತಿರ ಆರೋಪಿತನು ಹಿಂದಿನಿಂದ ತನ್ನ ಹಿರೋ ಹೊಂಡಾ ಫ್ಯಾಶನ ಮೋ.ಸೈಕಲ ನಂ. ಕೆಎ:32, ಎಕ್ಸ: 790 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 October 2014

Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ :30-09-14 ರಂದು 6 ಪಿಎಂ ಕ್ಕೆ ಸಂತ್ರಾಸವಾಡಿ ಮೇಡಿಕೇರ್ ಆಸ್ಪತ್ರೆ ಎದರುಗಡೆ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ: 32 – ಇಸಿ 4706 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ರಾಧಾಬಾಯಿ ಗಂಡ ಶಿವರಾಮ ಸಿಂಗ್ ಠಾಕೂರ ಸಾ: ನರೋಣಾ ಇವರ ಗಂಡನಾದ ಶಿವರಾಮ ಸಿಂಗ್ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ತನ್ನ ಗಂಡನಿಗೆ ತಲೆಗೆ ಭಾರಿ ಪಟ್ಟಾಗಿರುತ್ತದೆ ಅಂತಾ ಇತ್ಯಾಧಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 30-09-14 ರಂದು ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿದ್ದ ನನ್ನ ಗಂಡನನ್ನು ಹೆಚ್ಚಿನ ಉಪಚಾರಕ್ಕೆ ನಗರದ ಸತ್ಯ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಆತನ ಉಪಚಾರಕ್ಕೆ ನಮ್ಮ ಹತ್ತಿರ ಹಣ ಇರದ ಕಾರಣ ಪುನಃ ನನ್ನ ಗಂಡನನ್ನು ಸತ್ಯ ಆಸ್ಪತ್ರೆಯಿಂದ ದಿನಾಂಕ; 02-10-14 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ ನಂತರ ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ ಆದ ಭಾರಿ ಪೆಟ್ಟಿನಿಂದ ನನ್ನ ಗಂಡ ಚೇತರಿಸಿಕೊಳ್ಳದೆ ಇಂದು ದಿನಾಂಕ: 06-10-14 ರಂದು 4-40 ಪಿಎಂ ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ದಿನಾಂಕ 06-10-2014 ರಂದು ಬೆಳಿಗ್ಗೆ 0600 ಘಮಟೆಯ ಸುಮಾರಿಗೆ ಸೇಡಂ ರೋಡ ದರ್ಶನ ಟಾವರ ಎದುರುಗಡೆ ರೋಡಿನ ಮೇಲೆ ಆರೋಪಿ ಸಿದ್ದಾರೂಢ ಈತನು ತನ್ನ ಗೂಡ್ಸ ಅಪೆ ಟಂ-ಟಂ ನಂಬರ ಕೆ.ಎ.32ಸಿ2432 ನೇದ್ದರಲ್ಲಿ ತರಕಾರಿ ತುಂಬಿಕೊಂಡು ಹಿಂದೆ ಟಂ-ಟಂ ದಲ್ಲಿ ಫಿರ್ಯಾಧಿ ಖಾಜಾಬೀ ಗಂಡ ಮೈನೂದ್ದೀನ್ ಮತ್ತು ಭೀಮಬಾಯಿ ಗಂಡ ಮಲ್ಕಣ್ಣ ಇವರನ್ನು ಕೂಡಿಸಿಕೊಂಡು ಕಣ್ಣಿ ಮಾರ್ಕೇಟದಿಂದ ಕಾಳಗಿಗೆ ಹೋಗುವ ಕುರಿತು ಸೇಡಂ ರೋಡ ಮೂಲಕ ಹೋಗುತ್ತಿದ್ದಾಗ ಟಂ-ಟಂ ಚಾಲಕನು ತನ್ನ ಗೂಡ್ಸ ವಾಹನವನ್ನು ಅತೀವೇಗ ಮತ್ತು ಅಲ್ಕಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಟಂ-ಟಂದಲ್ಲಿ ಹಿಂದೆ ಕುಳಿತಿದ್ದ ಫಿರ್ಯಾದಿ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-10-2014 ರಂದು 1400 ಪಿ.ಎಮ್ ಕ್ಕೆ ಸಂತ್ರಾಸ ವಾಡಿಯ ಮೇನ್ ರೋಡಿನಲ್ಲಿರುವ ಬಾಬು ತಹಾರಿ ಹೋಟೆಲ ಹತ್ತಿರ ರೋಡಿನ ಮೇಲೆ ಫಿರ್ಯಾದಿಯ ಮಗನಾದ ಮಹ್ಮದ ಜೋಹೆಬ ಈತನು ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟರ ಸೈಕಲ್ ನಂಬರ ಕೆ.ಎ 32 ಡಬ್ಲ್ಯೂ1856 ನೇದ್ದರ ಚಾಲಕ ತನ್ನ ಮೋಟರ ಸೈಕಲ್  ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಅಪಘಾತಮಾಡಿ ತನ್ನ ಮೋಟರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2014

Gulbarga District Reported Crimes

ಚಿತ್ತಾಪೂರ ತಾಲ್ಲೂಕಿನ ಮಂಗಲಗಿ ಗ್ರಾಮದ ಸುರೇಶ ಕಟ್ಟಿಮನಿ ಇತನ ಕೊಲೆ ಪ್ರಕರಣ ಐದು ಜನ ಆರೋಪಿತರ ಬಂಧನ,
ವಿಶ್ವವಿದ್ಯಾಲಯ ಠಾಣೆ : ದಿನಾಂಕ 29/9/2014 ರಂದು ಶ್ರೀನಿವಾಸ ಸರಡಗಿ ಕ್ರಾಸ್ ಏರಪೋರ್ಟ ರಸ್ತೆಯ ಮೂಲಕ ತಮ್ಮ ಊರಾದ ಮಂಗಲಗಿ ಗ್ರಾಮಕ್ಕೆ ಸುರೇಶ ತಂದೆ ಅಂಬಣ್ಣ ಕಟ್ಟಿಮನಿ ಹಾಗೂ ಮರೇಪ್ಪ ಇಬ್ಬರೂ ತಮ್ಮ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಆರೋಪಿತರು ಮೋಟಾರ ಸೈಕಲಗಳ ಮೇಲೆ ಹಿಂಬಾಲಿಸಿ ಸಾಯಬಣ್ಣ ಕೊಟನೂರ ಈತನ ಮಗಳಿಗೆ ಅದೇ ಗ್ರಾಮದ ಗುಂಡಪ್ಪ ಈತನು ಓಡಿಸಿಕೊಂಡು ಹೋಗುವದಕ್ಕೆ ಸುರೇಶ ಈತನೆ ಕಾರಣ ಅಂತಾ ತಿಳಿದು ಹಳೆಯ ವೈಷಮ್ಯದಿಂದ ಸುರೇಶ ಈತನಿಗೆ ಕಲ್ಲಿನಿಂದ ಹೊಡೆದು ಚಾಕುವಿನಿಂದ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿ ಫರಾರಿಯಾಗಿದ್ದು ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿತ್ತು.
ಈ ಕೊಲೆಯ ಪ್ರಕರಣದ ಗಂಭೀರ ಸ್ವರೂಪದ ಅಫರಾದ ಅಂತಾ ಪರಿಗಣಿಸಿ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ,  ಶ್ರೀ ಸಂತೋಷ ಬಾಬು. ಐ.ಪಿ.ಎಸ್.  ಸಹಾಯಕ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಎಸ್ಐ ಹಸನಬಾಷಾ ಶ್ರೀ ನಾಗಭೂಷಣ ಎ.ಎಸ್.ಐ, ಹಾಗು ಸಿಬ್ಬಂದಿಯವರು  ಕೂಡಿಕೊಂಡು ಕಾರ್ಯಾಚರಣೆ ನಡೆಸಿ ಈ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಇಂದು ದಿನಾಂಕ 5/10/2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ದಸ್ತಗಿರಿ ಮಾಡಿದ ಆರೋಪಿತರ ಹೆಸರು & ವಿಳಾಸ
1) ಲಕ್ಷ್ಮಣ @ ಲಕ್ಷ್ಮಿಕಾಂತ ತಂದೆ ಬಸಣ್ಣ ಗಡ್ಡದವರ  ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ  2) ಬಸವರಾಜ ತಂದೆ ಜಗನ್ನಾಥ ಹೊಸಮನಿ ಸಾ : ಸಾವತಖೇಡ ಹಾಲಿ ವಸ್ತಿ ಹೆಬ್ಬಾಳ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ  3) ಮನೋಹರ ತಂದೆ ಬಸಣ್ಣ ಗಡ್ಡದವರ  ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ 4) ಸಂತೋಷ ತಂದೆ ದ್ಯಾವಣ್ಣ ಗಡ್ಡದವರ  ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ 5) ಸಾಯಬಣ್ಣ ತಂದೆ ಮರೇಪ್ಪ ಕೊಟನೂರ ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ ಸದರಿ ಪ್ರಕರಣದಲ್ಲಿ ತನಿಖೆಕೈಕೊಂಡು ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಚಾಕು ಮೋಟಾರ ಸೈಕಲಗಳನ್ನು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಹಾಗೂ ಫರಾರಿ ಇರುವ ಇನ್ನೂ 2 ಜನ ಆರೋಪಿತರ ಪತ್ತೆಗಾಗಿ ಜಾಲ ಬಿಸಲಾಗಿದೆ, ಸದರಿ ಆರೋಪಿತರನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.
ಇಸ್ಪೀಟ ಜೂಜಾಟ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 05/10/2014  ರಂದು ರೋಡಕಿಣ್ಣಿ  ಗ್ರಾಮದ ವಾಟರ ಟ್ಯಾಂಕ ಹತ್ತಿರ ರತ್ನಮ್ಮ ಇವರ ಹೊಲದ ಹತ್ತಿರ ಸಾರ್ವಜನಿಕರು ತಿರುಗಾಡುವ ರಸ್ತೆಯ ಮೇಲೆ  ಹಣವನ್ನು ಪಣಕಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಿಸಲು 1) ರಾಜಕುಮಾರ ತಂದೆ ರೇವಣಸಿದ್ದಪ್ಪಪಾಟೀಲ್ ಸಾ; ರೋಡಕಿಣ್ಣಿ , 2) ಈರಣ್ಣ ತಂದೆ ಶಿವಬಸಪ್ಪ ಪೊಲೀಸ ಬಿರಾದಾರ  ಸಾ; ನೇಳಕೂಡ ,3) ಮನಹೋರ ತಂದೆ ವೀರಣ್ಣ ಕುಂಬಾರ  ಸಾ;  ರೋಡಕಿಣ್ಣಿ 4) ಶಾಂತಕುಮಾರ ತಂದೆ ಬಸವಣ್ಣಪ್ಪ ಬಿರಾದಾರ ಸಾ; ಧನ್ನೂರ(ಆರ್) ತಾ; ಬಸವಕಲ್ಯಾಣ ಜಿ; ಬೀದರ 5) ವಿಜಯಕುಮಾರ ತಂದೆ ಭೀಮಣ್ಣ ಖಾಸಂಪೂರ ಸಾ: ರೋಡಕಿಣ್ಣಿ , 6) ಶ್ಯಾಮರಾವ ತಂದೆ ಚಂದ್ರಪ್ಪ ರಟಕಲ್ ಸಾ, ಹಳ್ಳಿಖೇಡ್ (ಕೆ) ತಾ; ಹುಮನಾಬಾದ ಜಿ ಬೀದರ, 7) ಕಲ್ಯಾಣರಾವ ತಂದೆ ಶ್ರೀಮಂತರಾವ ಮಾಲಿ ಬಿರಾದಾರ ಸಾ; ರೋಡಕಿಣ್ಣಿ ಇವರನ್ನು ದಸ್ತಗಿರಿ ಮಾಡಿ ನಗದು ರೂ 14, 500  ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವರೊಂದಿಗೆ ಮರಳಿ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ದ್ವೀಚಕ್ರ ವಾಹನ ಕಳವು ಮಾಡಲು ಪ್ರಯತ್ತಿಸುತ್ತಿದ್ದವನ ಬಂಧನ  :
ಮಳಖೇಡ ಠಾಣೆ : ಶ್ರೀ ದೇವಿಂದ್ರಪ್ಪ ಏವೂರ ಸಾ: ಮಳಖೇಡ ಇವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಮೊ/ಸೈ ನಂ ಕೆಎ/32-ಈಬಿ-4486 ನೇದ್ದನ್ನು ಆರೋಪಿ ತೌಶೀಫ ತಂದೆ ಮುನೀರ ಶೇಕ್ ಸಾ: ಮದಿನಾಕಾಲೋನಿ ಗುಲಬರ್ಗಾ ಇತನು ಕಳ್ಳತನ ಮಾಡಲು ಪ್ರಯತ್ನಿಸುತ್ತಿರುವಾಗ ಹಿಡಿದಿದ್ದು, ಅವನ ಹತ್ತಿರ ಇನ್ನೊಂದು ಮೊ/ಸೈ ನಂ  ಕೆಎ/32-ವೈ-3452 ನೇದ್ದು ಸಿಕ್ಕಿದ್ದು, ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಸೀಮ ತಂದೆ ಇಬ್ರಾಹಿಮ ಇನಾಮದಾರ ಸಾ: ಮಳಖೇಢ ತಾ: ಸೇಡಂ  ರವರು ದಿನಾಂಕ 05-10-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ನನ್ನ ಮೋ/ಸೈಕಲ ನಂಬರ ಕೆಎ-37 ವಿ-5872 ನೇದ್ದರ ಹಿಂದುಗಡೆ ಸಯ್ಯದ ಇಮ್ರಾನ ಇತನನ್ನು ಕೂಡಿಸಿಕೊಂಡು ಜಗತ ಸರ್ಕಲ ಮುಖಾಂತರ ಎಸ್.ವಿ.ಪಿ. ಸರ್ಕಲ ಕಡೆಗೆ ನನ್ನ ಕೆಲಸದ ಸಂಬಂದ ನಾನು ಮೋ/ಸೈಕಲ ಚಲಾಯಿಸಿಕೊಂಡು ಹೋಗುವಾಗ ಸಿದ್ದಿಪಾಷಾ ದರ್ಗಾ ಎದುರಿನ ರೋಡ ಮೇಲೆ ಮೋ/ಸೈಕಲ ನಂಬರ ಕೆಎ-32 ಇಬಿ-3229 ರ ಸವಾರ ಎಸ್.ವಿ.ಪಿ. ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸನ್ನೆ ಮಾಡದೆ ಇಂಡಿಕೇಟರ ಹಾಕದೆ ವಾಪಸ್ಸ ಎಸ್.ವಿ.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ಒಮ್ಮೇಲೆ ರೋಡ ಬಲಗಡೆ ತಿರುಗಿಸಿ ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಲಹಣೆಯ ಮೇಲೆ ರಕ್ತಗಾಯ, ಬಲಕಣ್ಣಿನ ಕೆಳಗಡೆ ರಕ್ತಗಾಯ, ಎಡ ಗಲ್ಲದ ಮೇಲೆ ತರಚಿದಗಾಯ, ಎಡ ಮೊಳಕಾಲಿಗೆ ರಕ್ತಗಾಯ, ಹಾಗು ಮುಗಿನ ಕೆಳಗಡೆ ತರಚಿದಗಾಯ ಪಡಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.