POLICE BHAVAN KALABURAGI

POLICE BHAVAN KALABURAGI

26 March 2014

Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಮಂಗಲಾ ಗಂಡ ಬಸವರಾಜ ಬೇಲೂರ ಸಾಃ ಆದರ್ಶ ನಗರ ಗುಲಬರ್ಗಾ ಇವರು ದಿನಾಂಕ 25/03/2014 ರಂದು ಸಾಯಂಕಾಲ 07:00 ಪಿ.ಎಂ. ಸುಮಾರಿಗೆ ಸ್ವಸ್ತಿಕ ನಗರದಲ್ಲಿರುವ ನನ್ನ ಅಕ್ಕ ಪ್ರಮೀಣಾ ಇವರಿಗೆ ಮತನಾಡಿಸಿ, ನನ್ನ ಮಗಳು ಪೂಜಾ ಇವಳಿಗೆ ಕರೆದುಕೊಂಡು ನಾವಿಬ್ಬರೂ ಸ್ವಸ್ತಿಕ ನಗರದಲ್ಲಿ ಟೊಯೊಟೋ ಶೋರೂಮ ಹಿಂದುಗಡೆ ನಡೆದುಕೊಂಡು ಹೋಗುತ್ತಿರುವಾಗ ಅಂದಾಜು ಸಮಯ 07:25 ಪಿ.ಎಂ. ಸುಮಾರಿಗೆ ನನ್ನ ಹಿಂದುಗಡೆಯಿಂದ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 05 ತೊಲೆ ಬಂಗಾರದ ಮಂಗಳಸೂತ್ರ ಅಃಕಿಃ 1,25,000/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದಲಿಂಗ ಗುಂಡಪ್ಪ ಹೂಗಾರ  ಸಾ: ಸಾವಳಗಿ (ಬಿ) ಹಾ:ವ: ಶರಣ ನಗರ ಗುಲಬರ್ಗಾ ರವರು ದಿನಾಂಕ 25-03-2014  ರಂದು ಮದ್ಯಾಹ್ನ 03-30  ಗಂಟೆ ಸುಮಾರಿಗೆ ಸುಪರ ಮಾರ್ಕೆಟ ಕಡೆಯಿಂದ ಲಾಲಗೇರಿ ಕ್ರಾಸ್ ಕಡೆಗೆ ಸಿಟಿ ಬಸ ನಿಲ್ದಾಣ ಮುಖಾಂತರ ನನ್ನ ಬೈಸಿಕಲ ಮೇಲೆ ಹೋಗುವಾಗ ಸಿಂದಗಿ ಅಂಭಾ ಭವಾನಿ ದೇವಸ್ಥಾನದ ಎದುರಿನ ರೋಡ ಮೇಲೆ ಎದುರಿನಿಂದ ಯಾವುದೊ ಒಂದು ಮೋಟಾರ ಸೈಕಲ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬೈಸಿಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 25-03-2014 ರಂದು 9-30 ಎ.ಎಮ್ ಕ್ಕೆ ದರ್ಗಾ ರೋಡಿನಲ್ಲಿ ಇರುವ ಪರಾನಾ ಸ್ಕೂಲ ಎದರುಗಡೆ ಕಾರ ನಂ. ಕೆ.ಎ 22 ಎನ್ 2822 ನೇದ್ದರ ಚಾಲಕನು  ಮುಸ್ಲಿಂ ಚೌಕ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಮಹ್ಮದ ಅಜಮ ತಂದೆ ಮಹ್ಮದ ಅಫ್ಜಲ  ಸಾಃ ಜುಬೇರ ಕಾಲೂನಿ ಹಾಗರಗಾ ರೋಡ ಗುಲಬರ್ಗಾ ಚಲಾಯಿಸಿಕೊಂಡು ಹೋಗುತ್ತಿದ್ದ ಟಿವಿ.ಎಸ್ ಎಕ್ಸ.ಎಲ್ ನಂ ಕೆ.ಎ 32 ವಿ 4901 ನೇದ್ದಕ್ಕೆ ಡಿಕ್ಕಿ ಪಡಿಸಿ ಅದೇ ವೇಗದಲ್ಲಿ ಡಂಕಾ ಕ್ರಾಸದಲ್ಲಿ ತಿರುಗಿಸಿಕೊಂಡು ಸ್ಕೂಟಿ ನಂ. ಕೆ.ಎ 32 ಡಬ್ಲು 5632 ನೇದ್ದಕ್ಕೆ ಡಿಕ್ಕಿ ಪಡಿಸಿ ರೋಡಿನ ಪಕ್ಕದ ವಿದ್ಯುತ ಕಂಬಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಹಾಗೂ ಶ್ರೀಮತಿ ಪುಷ್ಪಾ ಹಾಗೂ ದ್ವಿಚಕ್ರ ಸೈಕಲ ಅಂಗವಿಕಲ ಜಗನಾಥ ಇವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ  ಅಬ್ದುಲ್ ನಬಿ ತಂದೆ ಅಬ್ದುಲ್ ರಸೀದ ಜಮಾದಾರ ಸಾ: ವಡ್ಡಳ್ಳಿ ತಾ: ಅಫಜಲಪೂರ ಜಿ: ಗುಲಬರ್ಗಾ  ಮತ್ತು ಗೆಳೆಯ ಮೀರಾ ಪಟೇಲ ಪೊಲೀಸ್ ಬಿರಾದಾರ ಇಬ್ಬರು ಊಟ ಮಾಡಿಕೊಂಡು ಜೇವರ್ಗಿಗೆ ನಮ್ಮ ಮರಳಿನ ಟಿಪ್ಪರಗಳು ಶಹಾಪೂರದಿಂದ ಬರುತ್ತಿದ್ದು, ಅಲ್ಲಿಗೆ ಹೋಗೋಣಾ ಅಂತಾ ಮೀರಾ ಪಟೇಲ ತಿಳಿಸಿದನು. ನಂತರ ಗುಲಬರ್ಗಾದಿಂದ ರಾತ್ರಿ 11-30 ಗಂಟೆಯ ಸುಮಾರಿಗೆ ಜೇವರ್ಗಿಗೆ ಹೋಗಲು ಅವರ ಸ್ಪಿಟ್ ಕಾರ ನಂ: ಕೆಎ-26 ಎಮ-2595 ನೇದ್ದರಲ್ಲಿ ಕುಳಿತು ಹೊರಟೇವು. ಸದರಿ ಕಾರನ್ನು ನನ್ನ ಗೆಳೆಯ ಮೀರಾ ಪಟೇಲ ಪೊಲೀಸ್ ಬಿರಾದಾರ ಈತನು ಚಲಾಯಿಸುತ್ತಿದನು. ದಿನಾಂಕ: 25-3-2014 ರಂದು 00-30 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನದಿಸಿನ್ನೂರ ಕ್ರಾಸ ದಾಟಿ ಸ್ವಲ್ಪ ಮುಂದೆ ರಸ್ತೆಯ ತಿರುವಿನಲ್ಲಿ ನಮ್ಮ ಗೆಳೆಯ ಮೀರಾ ಪಟೇಲ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಬದಿಗೆ ಹೋಗಿ ಕಾರನ್ನು ಪಲ್ಟಿ ಗೊಳಿಸಿದನು. ಇದರಿಂದ ನನಗೆ ಎಡಗಡೆ ಸೊಂಟಕ್ಕೆ ಗುಪ್ತ ಗಾಯವಾಗಿರುತ್ತದೆ. ಮತ್ತು ಕಾರು ಚಲಾಯಿಸುತ್ತಿದ್ದ ಮೀರಾ ಪಟೇಲ ಈತನಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಸೊಂಟದ ಹಿಂದಿನ ಭಾಗಕ್ಕೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಜಗನಾಥ ತಂದೆ ಸಿದ್ಧಣ್ಣಾ ಮುಕರಂಬಿ ಇವರು  ತನ್ನ  ಮೋಟಾರ ಸೈಕಲ ಸ್ಪೆಂಡರ ಪ್ಲಸ್ ನಂಬರ ಕೆಎ 32 ಎಕ್ಸ್ 6472  ನೇದ್ದನ್ನು ತೆಗೆದುಕೊಂಡು ಬಂದು ಮಾಹಾಗಾಂವ ಗ್ರಾಮದಲ್ಲಿ ತನ್ನ ಕೆಲಸ ಇದೆ ಮೋಟಾರ ಸೈಕಲ ಮೇಲೆ ಹೋಗಿ ಬರೋಣಾ ಅಂತಾ ಹೇಳಿದ್ದರಿಂದ ನಾವು ಇಬ್ಬರು ಆತನ ಮೋಟಾರ ಸೈಕಲ ಮೇಲೆ ಮಾಹಾಗಾಂವ ಗ್ರಾಮಕ್ಕೆ ಹೋಗಿದ್ದು, ಜಗನಾಥನ ಕೆಲಸ ಮುಗಿದ ನಂತರ 12-00 ಪಿಎಂಕ್ಕೆ ಮತ್ತೆ ಅದೇ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ನಮ್ಮೂರಿಗೆ ಬರುತ್ತಿರುವಾಗ ಜಗನಾಥ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಹಿಂದೆ ನಾನು ಕುಳಿತಿದಿದ್ದೀ ಅಂಕಲಗಿ ಗ್ರಾಮದ ಹತ್ತಿರ ಬಂದಾಗ, ಜಗನಾಥ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಎಡಗಡೆ ಇದ್ದ ಒಂದು ಗೂಟದ ಕಲ್ಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ, ನನ್ನ  ಎಡಗಾಲಿಗೆ ಗೂಟಕಲ್ಲು ಜೋರಾಗಿ ಬಡಿದ್ದಿದ್ದರಿಂದ ನನ್ನ ಎಡಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ   ತೊಡೆಯಲ್ಲಿ ಕಾಲು ಮುರಿದಿರುತ್ತದೆ. ಹಾಗೂ ಎಡಗಾಲಿನ ಮೊಳಕಾಲ ಕೆಳೆಗೆ ಭಾರಿ ರಕ್ತಗಾಯವಾಗಿದ್ದು, ಪಾದದ ಮಧ್ಯದ ಬೆರಳಿಗೆ ರಕ್ತಗಾಯವಾಗಿರುತ್ತದೆ  ಜಗನಾಥನಿಗೆ ಈ ಅಪಘಾತದಿಂದ ಯಾವುದೇ ಗಾಯವಾಗಿಲ್ಲಾ. ನಂತರ ಆತ ನನಗೆ ಮತ್ತು ಮೋಟಾರ ಸೈಕಲ ಬಿಟ್ಟು ಅಲ್ಲೇ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭೀಮರಾಯ ತಂದೆ ಗುಂಡಪ್ಪಾ ವಾಲಿಕಾರ  ಸಾ: ಹನುಮಾನ ಟೆಂಪಲ ಹತ್ತಿರ ಗಂಗಾ ನಗರ ಗುಲಬರ್ಗಾ ರವರು ದಿನಾಂಕ 25-03-2014 ರಂದು ರಾತ್ರಿ 10-00 ಗಂಟೆ ಸುಮಾರಿಗೆ ರವಿ ತಂದೆ ಗುಂಡಪ್ಪ ಇವನು ಮೋಟಾರ ಸೈಕಲ ನಂಬರ ಕೆಎ-32 ಕೆ-1514 ನೇದ್ದರ ಮೇಲೆ ಹಿಂದುಗಡೆ ಕುಳಿತು ಸುಪರ ಮಾರ್ಕೆಟದಿಂದ ಲಾಲಗೇರಿ ಕ್ರಾಸ್ ರೋಡ ಕಡೆಗೆ ಬರುತ್ತಿದ್ದಾಗ ರವಿ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡಿನ ಎಡಬಲ ಕಟ್ಟ ಹೊಡೆದು ಕಲ್ಯಾಣಿ ಪೆಟ್ರೊಲ ಪಂಪ ಕಡೆಗೆ ಹೋಗುವ ರೋಡ ಕ್ರಾಸ ಹತ್ತಿರ ಸ್ಕಿಡ ಮಾಡಿ ಫಿರ್ಯಾದಿಗೆ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 March 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂದನ
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 24-03-2014 ರಂದು 04:30 ಪಿ.ಎಂ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ
ಬರುವ ಬಂದೆನವಾಜ್ ಕಾಲೋನಿಯಲ್ಲಿ ಖುರೇಷಿ ಜನಾಂಗದ ಖಬರಸ್ತಾನದ ಬೇವಿನ ಗಿಡಿದ ಕೆಳಗೆ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪಿಎಸ್ಐ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ 04 ಜನರನ್ನು ಹಿಡಿದು ವಿಚಾರಿಸಲು 1.ಮುಸ್ತಾಕ ತಂದೆ ವಾಜಿದ ಅಲಿ ಸಾಃ  ಯಾದುಲ್ಲಾ ಕಾಲೋನಿ ಗುಲಬರ್ಗಾ 2. ಅಬ್ದುಲ್ ಖಲೀಲ ತಂದೆ ಅಬ್ದುಲ್ ಗನಿ  ಸಾಃ ಪಾಶಾಪೂರ ಛೋಟಾ ರೋಜಾ  ಮಹ್ಮದ ತನ್ವೀರ ತಂದೆ ಮಹ್ಮದ ಸತ್ತಾರ ಸಾಃ ಮೆಕ್ಕಾ ಕಾಲೋನಿ ಗುಲಬರ್ಗಾ 4. ಮಹ್ಮದ ಬಾಬುಲಾಲ ತಂದೆ ಮಹ್ಮದ ಅಲಿಸಾಬ ಸಾಃ ಯಾದುಲ್ಲಾ ಕಾಲೋನಿ ಗುಲಬರ್ಗಾ  ರವರಿಂದ ನಗದು ಹಣ ಒಟ್ಟು 5,660/- ರೂ. ಹಾಗು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಆನಂದ ತಂದೆ ಚಂದ್ರಪ್ಪ ಶೆಟ್ಟಿ ಹುಡಾ ಸಾ:ಬಸವ ನಗರ ಸೇಡಂ ರವರು ನಾಂಕ: 24-03-2014 ರಂದು ಸಾಯಾಂಕಾಲ 5-30 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಗೆಳೆಯನಾದ  ಬಸವರಾಜ ಕಾಳಗಿ ಇಬ್ಬರೂ ಕೂಡಿ ಸೇಡಂ ಪಟ್ಟಣದಲ್ಲಿಯ ಪ್ರಕಾಶ ಧಾಬಾಕ್ಕೆ ಹೋಗಿ ಸೆರೆ ಕುಡಿಯಲು ಆಫೀಸರ್ ಚ್ವಾಯಿಸ್ ಬಾಟಲ್ ಕೊಡು ಅಂತ ಕೇಳಿದೆನು ನನ್ನೊಂದಿಗೆ ಇದ್ದ ಬಸವರಾಜ ಇತನು ಸ್ವಲ್ಪ ಹಿಂದೆ ಬರುತ್ತಿದನು. ಆಗ ಪ್ರಕಾಶ ಧಾಭಾದ  ಮ್ಯಾನೇಜರಿಗೆ ಆಫೀಸರ್ ಚ್ವಾಯಿಸ್ ಬಾಟಲ ಕೊಡುವ ಹಣದಲ್ಲಿ ನಾನು 60 ರೂ ಕೊಟ್ಟಿದ್ದು ಇನ್ನೂಳಿದ 30 ರೂಪಾಯಿ ಕೊಡುತ್ತೇನೆ ನಮ್ಮವನು ಬರುತ್ತಿದ್ದಾನೆ. ಅಂತ ಹೇಳಿದೆನು. ಆಗ ಧಾಬಾದ ಮ್ಯಾನೇಜರ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬಾಟಲ್ ಇಲ್ಲಿ ಇಡು ಅಂತ ಬೈದನು ಆಗ ನಾನು ಅಣ್ಣ ನನ್ನ ಹತ್ತಿರ 500 ರೂ ನೊಟು ಇದೆ ನನ್ನ ಜೋತೆಗೆ ಇದ್ದವನು ಬರುತ್ತಾನೆ ಆವನು ಬಂದ  ಬಳಿಕ ಉಳಿದ ಹಣ ಕೊಡುತ್ತೇನೆ. ಅಂತ ಹೇಳಿದಾಗ ಆಗ ಧಾಬಾದ ಮ್ಯಾನೇಜರ  ಸೇರಿ 8, 10 ಜನರು ಕೂಡಿಕೊಂಡು ನೀನು ಬಹಳ ದಿಮಾಖ ಮಾಡ್ತಿ ಚೋದಿ ಮಗನೆ ಅಂತ ಬೈದು ಕೈಯಿಂದ ಹಾಗು ಬಡಿಗೆಯಿಂದ ನನ್ನ ಎಡಗೈ ರಟ್ಟೆಗೆ ಮತ್ತು ಮಣಕಟ್ಟಿಗೆ ಹೊಡೆದು ಭಾರಿ ರಕ್ತ ಗಾಯ ಗುಪ್ತ ಗಾಯ ಮಾಡಿದ್ದು ಆಗ ಬಸವರಾಜ ಇತನು ಬಿಡಿಸಲು ಬಂದರೆ ಆತನಿಗೂ ಸಹ ಕೈಯಿಂದ ಹೊಡೆದಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24-03-2014 ರಂದು 11:30 ಎಮ್ ಗಂಟೆ ಸುಮಾರಿಗೆ ಶ್ರೀ ಅಬ್ದುಲ ಗನಿ ತಂದೆ ದಸ್ತಗೀರ ಸಾಬ ಕುಂಬಾರಿ ಸಾ : ಹೊಸುರ ರವರು ಮತ್ತು ಹೆಂಡತಿ ತಮೀಜಾ ಮತ್ತು ನನ್ನ ಮಗ ಫಿರೋಜಾ ಮೂರು ಜನರು ಸೇರಿ ನಮ್ಮ ಗ್ರಾಮದ ಮಸೀದಿಗೆ ಕಡಿ ತಗೆದುಕೊಂಡು ಬರಲು ಹೊಗಿರುತ್ತೆವೆನಾವು ಮೂರು ಜನರು ಮಸೀದಿಯ ಮುಂದೆ ಸಿಂಮೆಂಟ ಚೀಲದಲ್ಲಿ ಕಡಿ ತುಂಬುತ್ತಿದ್ದಾಗ, ನಮ್ಮ ಗ್ರಾಮದ ಹುಸೇನಸಾಬ ತಂದೆ ಸೈಫನಸಾಬ ಜಾನೂಲಾ, ಅಸ್ಲಾಂ ತಂದೆ ಅಬ್ಬಾಸಲಿ ಜಾನೂಲಾ ಮತ್ತು ಚಾಂದಸಾಬ ತಂದೆ ಸಲೀಂಸಾಬ ಇನಾಮದಾರ ಮೂರು ಜನರು ನನ್ನ ಹತ್ತಿರ ಬಂದು ಏನೊ ಸೂಳೆ ಮಗನೆ ಯಾರಿಗೆ ಕೇಳಿ ಕಡಿ ತಗೊಂಡು ಹೊಂಟಿದಿ, ಮಸೀದಿ ಕಡಿ ಅಂದ್ರ ಅದು ನಿಮ್ಮಪ್ಪಂದು ಅಂತಾ ಅವಾಚ್ಯವಾಗಿ ಬೈಯುತ್ತಾ ಹುಸೇನಸಾಬ ಈತನು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಅಸ್ಲಾಂ ಜಾನೂಲಾ ಮತ್ತು ಚಾಂದಸಾಬ ಇನಾಮದಾರ ಇಬ್ಬರು ಸೂಳಿ ಮಗನಿಗೆ ಬಿಡಬೇಡಾ ಎಂದು ಕೈಯಿಂದ ಇಬ್ಬರು ನನ್ನ ಮೈ ಕೈಗೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಅಫಜಲಫರ ಠಾಣೆ : ಶ್ರೀಮತಿ ಸಾವಿತ್ರಿ ರುಕ್ಮೋಜಿ ಸಲಗರ ಸಾ : ಉಡಚಣ ರವರು ಉಡಚಾಣ ಗ್ರಾಮದಲ್ಲಿ ಹೊಲ ಮನೆಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇನೆ. ನನ್ನ ತವರು ಮನೆ ಅಕ್ಕಲಕೋಟ ತಾಲೂಕಿನ ಕರ್ಜೋಳ ಗ್ರಾಮವಿದ್ದು, ಸುಮಾರು 05 ವರ್ಷದ ಹಿಂದೆ  ಉಡಚಾಣ ಗ್ರಾಮದ ರಕ್ಮೋಜಿ ತಂದೆ ಸಿದ್ದಣ್ಣ ಸಲಗರ ರವರೊಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ. ಸದ್ಯ ನಮಗೆ 3 ಜನ ಗಂಡು  ಮಕ್ಕಳಿರುತ್ತವೆ. ನಮ್ಮ ಮನೆ ಉಡಚಾಣ ಸಿಮೇಯ ನಮ್ಮ ಹೊಲದಲ್ಲಿ ಇದ್ದು, ಮನೆಯಲ್ಲಿ ನನ್ನ ಗಂಡ, ನಮ್ಮ ಮಾವ ಸಿದ್ದಣ್ಣ, ಅತ್ತೆ ಕಲ್ಲವ್ವ, ಮತ್ತು ಮೈದುನರಾದ ಶರಣು, ರಮೇಶ ಇವರು ಇರುತ್ತಾರೆ. ನನ್ನ ಗಂಡನ ಮನೆಯವರು ಈಗ ಸುಮಾರು 3-4 ವರ್ಷಗಳಿಂದ ನನ್ನ ಮೇಲೆ ವಿನಾಕಾರಣ ಸಂಶಯ ಪಟ್ಟು ಅವಾಚ್ಯವಾಗಿ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಈ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ಆಗಾಗ ಹೇಳುತ್ತಾ ಬಂದಿರುತ್ತೇನೆ. ನನ್ನ ತವರು ಮನೆಯವರು ಕೂಡ ನನ್ನ ಗಂಡನಿಗೆ ಹಾಗು ನಮ್ಮ ಅತ್ತೆ- ಮಾವ, ಮೈದುನರಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಸಹ ನನ್ನ ಗಂಡನ ಮನೆಯವರು ನನಗೆ ಹಿಂಸಿಸುತ್ತಾ ಬಂದಿರುತ್ತಾರೆ. ನಮ್ಮ ಅಕ್ಕನ ಮಗಳಾದ ಉಜ್ವಲಾ ಗಂಡ ನವನಾಥ ದೇಶಮುಖ ಸಾ|| ಆಲಮೇಲ ಇವಳ ಗಂಡ ತಿರಿಕೊಂಡಿದ್ದರಿಂದ ಅವಳನ್ನು ಕೆಲವು ದಿನ ಅಂತಾ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತೇನೆ. ದಿನಾಂಕ 21-03-2014 ರಂದು 2;00 ಪಿ.ಎಂ ಕ್ಕೆ ನಾನು ಮತ್ತು ನಮ್ಮ ಅಕ್ಕನ ಮಗಳಾದ ಉಜ್ವಲಾ ಇವಳೊಂದಿಗೆ ಮಾತಾಡುತ್ತಾ ಕುಳಿತಾಗ ನನ್ನ ಗಂಡ ನನಗೆ ಅವಾಚ್ಯವಾಗಿ ಬೈಯುತ್ತಿದ್ದನು. ನಾನು ಯಾಕ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಏ ರಂಡಿ ನನ್ನೊಂದಿಗೆ ವಾದ ಮಾಡತಿಯೇನೆ ಅಂತಾ ಅಂದು ಕೈಯಿಂದ ನನ್ನ ಎಡ ಕಪಾಳ ಮೇಲೆ, ನನ್ನ ತಲೆಯ ಮೇಲೆ ಹೋಡೆದರು ನಾನು ವಿರೊಧ ಮಾಡಿದ್ದಕ್ಕೆ ನಮ್ಮ ಮಾವ ಸಿದ್ದಣ್ಣ ಇವರು ಈ ರಂಡಿಗಿ ಸ್ವಕ್ಕೆ ಬಹಳಾದ ಹೊಡೆದು ಖಲಾಸ ಮಾಡರೊ ಅಂತಾ ಅಂದನು ಆಗ ನನ್ನ ಮೈದುನ ಶರಣು ಇವನು ಅಲ್ಲೆ ಇದ್ದ ಬಡಿಗೆಯಿಂದ ನನ್ನ ಎರಡು ಮೊಳಕಾಲ ಕೆಲಗೆ ಹೊಡೆದನು ಆಗ ನಾನು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಾಗ ರಮೇಶ ಇವನು ಒಂದು ಕಬ್ಬು ತಂದು ಅದರಿಂದ ನನ್ನ ಬೆನ್ನಿನ ಮೇಲೆ ಹೊಡೆದನು. ಆಗ ನಾನು ಚಿರಾಡುತ್ತಿದ್ದಾಗ ನಮ್ಮ ಅತ್ತೆ ಕಲ್ಲವ್ವ ಇವರು ಈ ರಂಡಿ ಬಾಯಾಗ ಮಣ್ಣ ಹಾಕಿ ಖಲಾಸ ಮಾಡರೋ ಬೈದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ದಾದಾಗೌಡ ತಂದೆ ಮಲ್ಕಾಜಪ್ಪಗೌಡ ಮಾಲಿ ಪಾಟೀಲ ಸಾ : ಹಾವಳಗಾ ರವರ  ಮಕ್ಕಳ ಜವಳ ಕಾರ್ಯಕ್ರಮ ಇದ್ದಿದ್ದರಿಂದ ದಿನಾಂಕ 24-03-2014 ರಂದು ಮದ್ಯಾಹ್ನ 1;00 ಗಂಟೆ ನಾನು ಮತ್ತು ನಮ್ಮ ಮಾವ ಈರಣ್ಣ ತಂದೆ ಸಂಗಣಗೌಡ ಪಾಟೀಲ ಸಾ|| ಮಿಣಜಗಿ ರವರು ಕೂಡಿಕೊಂಡು ನನ್ನ ಹಿರೋ ಹೊಂಡಾ ಮೋಟರ ಸೈಕಲ ನಂ ಎಮ್.ಹೆಚ್-14 ಸಿ.ಟಿ-7147 ನೇದ್ದರ ಮೇಲೆ ನಮ್ಮೂರಿಂದ ಅಫಜಲಪೂರಕ್ಕೆ ಗ್ಯಾಸ ತರಲು ಬಂದಿರುತ್ತೇವೆ. ನಂತರ 4;30 ಗಂಟೆಗೆ ಅಫಜಲಪೂರ ಬಸ್ಸ್ ನಿಲ್ದಾಣದಿಂದ ನಾನು ಮತ್ತು ನಮ್ಮ ಮಾವ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ ಮೇಲೆ ಗ್ಯಾಸ ಅಂಗಡಿಗೆ ಹೋಗುತ್ತಿದ್ದಾಗ ಲಿಂಗದಳ್ಳಿ ಮೋಟರ ಸೈಕಲ್ ಶೋರುಮ ಹತ್ತಿ ಇದ್ದಾಗ ಎದುರುಗಡೆಯಿಂದ ಒಂದು ಕಮಾಂಡರ ಜೀಪ ಬರುತ್ತಿದ್ದು, ಅದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿದನು. ಆಗ ನಾವು ರೋಡಿನ ಮೇಲೆ ಬಿದ್ದಿದ್ದು, ನನ್ನ ಹಣೆಯ ಮೇಲೆ ಭಾರಿ ರಕ್ತಗಾಯ ಹಾಗು ಮೈ ಕೈಗೆ ಗುಪ್ತ ಪೆಟ್ಟುಗಾಳಾದವು ನನ್ನ ಹಿಂದೆ ಕುಳಿತ ನಮ್ಮ ಮಾವನಿಗೆ ಮೂಗಿನ ಮೇಲೆ, ಬಲಗಡೆ ಹಣೆಯ ಮೇಲೆ ಮತ್ತು ಮೆಲಕಿನ ಹತ್ತಿರ ಸಾದಾ ರಕ್ತಗಾಯ ಹಾಗು ಮೈ ಕೈಗೆ ಒಳ ಪೆಟ್ಟು ಆಗಿರುತ್ತವೆ. ನಮಗೆ ಅಪಘಾತ ಪಡಿಸಿದ ಕಮಾಂಡರ ಜೀಪ ಚಾಲಕ ಓಡಿ ಹೋದನು ಸದರಿ ಕಮಾಂಡರ ಜೀಪ ನಂ ನೋಡಲಾಗಿ ಎಮ್.ಹೆಚ್-08 ಸಿ-0806 ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಸಂಜಯಕುಮಾರ ತಂದೆ ಸೂರ್ಯಕಾಂತ ಬಿರಾದಾರ ಸಾ:ಕೊಟಿಗ್ಯಾಳ  ತಾ: ಔರಾದ(ಬಿ) ಜಿ: ಬೀದರ ರವರು  ದಿನಾಂಕ 22-03-2014 ರಂದು ರಾತ್ರಿ 10.30 ಗಂಟೆಗೆ ನಾನು ನಮ್ಮೂರಿಗೆ ಬರುವ ಸಲುವಾಗಿ ನಮ್ಮ ಟ್ರಾನ್ಸಪೋರ್ಟದ ಐಚೆರ ಡಿಸಿಎಮ್ ವಾಹನ ನಂ ಎಪಿ-23 ವಾಯ್-9607 ನೆದ್ದನ್ನು ಕೊಪ್ಪಳದಲ್ಲಿನ ಹಿಂದೂಸ್ಥಾನ ಕೋಕೋ ಕೋಲಾ ಬ್ರೈವರೇಜ ಪ್ರೈವೆಟ ಲಿಮಿಟೆಡ ಕಂಪನಿಯಲ್ಲಿ ಕೋಕೊ ಕೋಲಾ ಲೋಡ ಮಾಡಿಕೊಂಡು ಬೀದರನ ಶಾಮ ಎಜನ್ಸಿಗೆ ತೆಗೆದುಕೊಂಡು ಬರುತ್ತಿದ್ದೆವು.ಸದರಿ ವಾಹನವನ್ನು ಚಲಾಯಿಸುತ್ತಿದ್ದ ಚಾಲಕನ ಹೆಸರು ಗೊತ್ತಿರುವುದಿಲ್ಲಾ. ದಿನಾಂಕ 23-03-2014 ರಂದು ನಸುಕಿನ ಜಾವ 4.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೂಖಾಂತರ ಸರಡಗಿ(ಬಿ) ಕ್ರಾಸ ಹತ್ತಿರ ಬರುತ್ತಿರುವಾಗ ರಸ್ತೆಯ ಎಡಬದಿಗೆ ಯಾವುದೇ ಸೂಚನೆಯಿಲ್ಲದೆ,ಇಂಡಿಕೇಟರ ಹಾಕದೇ ನಿಲ್ಲಿಸಿದ ಲಾರಿಗೆ ನಮ್ಮ ಐಚೆರ ಡಿಸಿಎಮ್ ವಾಹನ ನಂ ಎಪಿ-23 ವಾಯ್-9607  ನೆದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸದರಿ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನನಗೆ ಎಡಗಾಲಿನ ತೊಡೆಗೆ ಭಾರಿ ರಕ್ತಗಾಯ,ಎಡಗೈ ಸಾದಾಗಾಯವಾಗಿದ್ದು ಮತ್ತು ಹಣೆಯ ಮೇಲೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಲಾರಿ ನಂ ನೋಡಲಾಗಿ ಕೆಎ 04-ಎ. 6994 ನೆದ್ದು ಇರುತ್ತದೆ. ಸದರಿ ಚಾಲಕನು ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮೇಲೆ ನಿಲ್ಲಿಸಿ ಯಾವುದೇ ಸೂಚನೆ ,ಇಂಡಿಕೇಟರ ಹಾಕದೇ ನಿಲ್ಲಿಸಿ ಹೋಗಿರುತ್ತಾನೆ.ನಮ್ಮ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಮು ತಂದೆ ಲಕ್ಷ್ಮಣ ರವರು ದಿನಾಂಕ 24-03-2014 ರಂದು ರಾತ್ರಿ ಮನೆಯಿಂದ ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-5387 ರ ಮೇಲೆ ಸುಪರ ಮಾರ್ಕೆಟಕ್ಕೆ ಮನೆಯ ಸಾಮನುಗಳನ್ನು ತರುವ ಸಲುವಾಗಿ ಹೋಗಿ ವಾಪಸ್ಸ ಜಗತ ಸರ್ಕಲ ಮುಖಾಂತರ ಹೋಗುವಾಗ ಡಾ: ಮುರಳಿಧರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ಇಂಡಿಕೇಟರ ಹಾಕಿ ಸನ್ನೆ ಮಾಡಿ ಕೋರ್ಟ ರೋಡ ಕಡೆಗೆ ಮೋಟಾರ ಸೈಕಲ ತಿರುಗಿಸುವಾಗ ಎಸ್.ವಿ.ಪಿ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-03 ಹೆಚ್.ಎಮ್-9434 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತಾನು ಗಾಯಹೊಂದಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:-22-03-2014 ರಂದು ಮದ್ಯಾಹ್ನ 3:30 ಗಂಟೆಗೆ ರಮೇಶ ಆರ್ ಸೆಟ್ಟಿ ಸಾ: ಅಫಜಲಪೂರ ಇವನು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯ ಭಾವ ಚಿತ್ರದ ಜೊತೆಗೆ ಜಾಹೀರಾತು ಮತ್ತು ಪಕ್ಷದ ಯೋಜನೆಗಳು ಹಾಗೂ ಸಾಧನೆಗಳ ಕುರಿತು ತನ್ನ ಎಸ್.ಸಿ.ಎನ್ ಕೇಬಲ್ ಚಾನಲ್ಲಿನಲ್ಲಿ ಪೂರ್ವಾನುಮತಿ ಪಡೆಯದೆ ಜಾಹೀರಾತನ್ನು ಹಾಕಿ ಚುನಾವಣಾ ನೀತಿ ಸಂಹೀತೆ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಶ್ರೀ ಮಹಮ್ಮದ ಯೂಸುಫ ಸಾಹಯಕ ಚುನಾವಣೆ ಅಧಿಕಾರಿಗಳು ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 March 2014

Gulbarga District Reported Crimes


ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ಬಾಜಿರಾವ ದಿವಟೆ ಸಾ : ಅಡಗಾಂವ ಖರಾತ ತಾ: ಮಜಲಗಾಂವ ಜಿ: ಖೇಡ ರವರ ಊರಿನ ಪಕ್ಕದಲ್ಲಿ ಇರುವ ಕಾರಿ ಗ್ರಾಮದ ಮಾಣಿಕ ತಂದೆ ರಾಮರಾವ ಗೋರೆ ಇವನು ಮುಕದಂ ಕೆಲಸ ಮಾಡುತ್ತಿದ್ದು, ನನಗೆ ಮತ್ತು ನನ್ನಂತೆ ನಮ್ಮ ಅಕ್ಕ ಪಕ್ಕದ ಹಳ್ಳಿಯವರನ್ನು ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ಶ್ರೀ ರೇಣುಕಾ ಶುಗರ ಕಾರ್ಖಾನೆ ವತಿಯಿಂದ ರೈತರ ಕಬ್ಬು ಕಟಾವ ಮಾಡಲು ಕರೆದುಕೊಂಡು ಬಂದಿರುತ್ತಾನೆ. ನಾವೆಲ್ಲರು ನಮ್ಮ ಹೆಂಡತಿ ಮಕ್ಕಳೊಂದಿಗೆ ಸುಮಾರು 4-5 ತಿಂಗಳ ಹಿಂದೆ ಬಂದಿರುತ್ತೇವೆ. ಈಗ 2 ತಿಂಗಳ ಹಿಂದೆ ಸರ್ಜಾರಾವನು ತನ್ನ ಹೆಂಡತಿಗೆ ಆರಾಮಿಲ್ಲದ ಕಾರಣ ಅವಳನ್ನು ತಮ್ಮೂರಿಗೆ ಕಳುಹಿಸಿಕೊಟ್ಟಿರುತ್ತಾನೆ. ಘತ್ತರ್ಗಾ ಗ್ರಾಮದ ಸಿಮಾಂತರದ ಶ್ರೀ ನಾರಾಯಣರಾವ ಕುಲಕರ್ಣಿ ರವರ ಹೊಲದಲ್ಲಿ ಕಬ್ಬು ಕಟಾವು ಮಾಡುವ ಸಮಯದಲ್ಲಿ ನಾರಾಯಣರಾವ ಕುಲಕರ್ಣಿ ರವರ ಹೊಲದಲ್ಲಿ ಜೋಪಡಿಗಳು ಹಾಕೊಕೊಂಡಿದ್ದು ಅವರ ಕಬ್ಬು ಕಟಾವು ಮುಗಿದ ನಂತರ ಪಕ್ಕದ ಹೊಲಗಳಲ್ಲಿಯ ಕಬ್ಬು ಕಟಾವು ಮಾಡಿ ರಾತ್ರಿ ನಮ್ಮ ಜೋಪಡಿಗಳಲ್ಲಿ ವಾಸಿಸುತ್ತಿದ್ದೇವು. ದಿನಾಂಕ 16-03-2014 ರಂದು ಸಾಯಂಕಾಲ 5;30 ಗಂಟೆ ಸುಮಾರಿಗೆ ನಾವೆಲ್ಲರು ನಮ್ಮ ಜೋಪಡಿಗಳ ಮುಂದೆ ಇದ್ದಾಗ, ಸರ್ಜಾರಾಮನು ಸರಾಯಿ ಕುಡಿದು ಬಂದು ನಿತಿನ ಸಿರಸಟ್ ಇವನಿಗೆ ಬೈಯ್ಯುತ್ತಿದ್ದನು. ಆಗ ನಿತೀನನು `ಮಲಾ ಕಶಾಲಾ ಸಿವಿದಿಲಿ ತುಜ ಆಯಿಲಾ ತುಲ ಖಲಾಸ ಕರ್ತು ಅಂತಾ ಅಂದು ಒಂದು ಬಡಿಗೆಯಿಂದ ಸರ್ಜಾರಾವ ಇವನ ತಲೆಯ ಮೇಲೆ ಜೋರಾಗಿ ಹೊಡೆದು ಗಾಯ ಪಡಿಸಿದನು ನಂತರ ಎಡಗಡೆ ಪಕ್ಕೆಲುಬಿನ ಮೇಲೆ, ಕೈಗೆ ಹಾಗು ಮುಖದ ಮೇಲೆ ಅದೇ ಬಡಿಗೆಯಿಂದ ಹೊಡೆದನು, ಆಗ ಸರ್ಜಾರಾವ ಇವನು ನೆಲಕ್ಕೆ ಬಿದ್ದನು. ನಂತರ ನಾನು ಮತ್ತು ನಮ್ಮ ಮುಕದಂ ಮಾಣಿಕ ಹಾಗು ನಮ್ಮೊಂದಿಗೆ ಇದ್ದ ಇತರರು ಕೂಡಿ ಜಗಳ ಬಿಡಿಸಿದೆವು. ನಂತರ ಸರ್ಜಾರಾವ ತನ್ನ ಜಪಡಿಯಲ್ಲಿ ಹೋಗಿ ಮಲಗಿಕೊಂಡನು. ನಂತರ ದಿನಾಂಕ 17-03-2014 ರಂದು ಮಧ್ಯ ರಾತ್ರಿ 01;30 ಗಂಟೆ ಸುಮಾರಿಗೆ ಸರ್ಜಾರಾವ ವಾಂತಿ ಮಾಡಿಕೊಳ್ಳುತ್ತಿದ್ದನು. ಆಗ ಟ್ರ್ಯಾಕ್ಟರ್ ಚಾಲಕ ಖಂಡು ಹೋಳಕರ ಮತ್ತು ಗೋರಕ ಹಾಗು ಮಾಣಿಕ ಗೋರೆ ಇವರು ಸರ್ಜಾರಾವನನ್ನು ಉಪಚಾರ ಕುರಿತು ಘತರಗಾಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಬೇರೆಕಡೆಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಪುನಃ ಸರ್ಜಾರಾವನನ್ನು ಸಕ್ಕರೆ ಕಾರ್ಖಾನೆಯಲ್ಲಿರುವ ದವಾಖಾನೆಗೆ ಕರೆದುಕೊಂಡು ಬಂದು ಉಪಚಾರ ಮಾಡಿಸಿದ ನಂತರ ಕಾರಖಾನೆಯಲ್ಲಿಯೆ ಪೊಪಳೆ ಮಕಾದಂ ಈತನ ಕೋಣೆಯಲ್ಲಿ ಮಲಗಿಕೊಂಡನು. ಬೆಳಿಗ್ಗೆ ಮತ್ತೆ ಸರ್ಜಾರಾವನು ವಾಂತಿ ಮಾಡಿಕೊಂಡಿದ್ದರಿಂದ ಗೋರಕ ಮತ್ತು ಮಾಣಿಕ ಗೋರೆ ಇವರು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು, ರಕ್ತ ಮತ್ತು ಮೂತ್ರ ತಪಾಸಣೆ ಮಾಡಿ ಗೋಳಿ ಔಷಧಿ ಕೊಟ್ಟು ಸಾಯಂಕಾಲ ಕಳುಹಿಸಿಕೊಟ್ಟಿರುತ್ತಾರೆ. ಸರ್ಜಾರಾವನನ್ನು ಆಸ್ಪತ್ರೆಯಿಂದ ಕರೆದುಕೊಂಡು ರಾತ್ರಿ 9;30 ಗಂಟೆ ಸುಮಾರಿಗೆ ಕಾರ್ಖಾಯಲ್ಲಿರುವ ಪೊಪಳೆ ಮಕಾದಂ ಈತನ ಕೋಣೆಯ ಹತ್ತಿರ ಬಂದಾಗ ಸರ್ಜಾರಾವ ಇವನು ನಂದು ಮುಗಿತು ಅಂತಾ ಅಂದು ಕೆಳಗಡೆ ಕುಳಿತು ಅಲ್ಲಿಯೆ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಪ್ರಕರಣ :
ಅಶೊಕ ನಗರ ಠಾಣೆ : ಶ್ರೀ ಭಾಷಾ ತಂದೆ ಗೊರಖನಾಥ ಚೌಗುಲೆ ಸಾ|| ಮ.ನಂ. 11-689 ಭಗತಸಿಂಗ ಚೌಕ ಹತ್ತಿರ ವಡ್ಡರಗಲ್ಲಿ ಗುಲಬರ್ಗಾ ರವರ ಮಗನಾದ ಶರಣಬಸಪ್ಪ ರವರು ಅಪ್ಪ ಕಾಲೇಜಿನಲ್ಲಿ ಎಂ.ಬಿ.ಎ ವಿದ್ಯಾಬ್ಯಾಸ ಮಾಡುವಾಗ ಉಷಾ ತಂದೆ ಸುಭಾಶ್ಚಂದ್ರ ರವರೊಂದಿಗೆ ಪ್ರಿತಿ ಮಾಡಿ ರಜಿಸ್ಟರ ಮದುವೆ ಮಾಡಿಕೊಂಡಿದ್ದು ಮದುವೆಯಾದ ನಂತರ ಅವರಿಗೆ ಇಬ್ಬರು ಮಕ್ಕಳಾಗಿರುತ್ತಾರೆ. ಈಗ ಒಂದು ವರ್ಷದ ಹಿಂದೆ ಸೊಸೆ ಉಷಾ ಇವಳು ಜಗಳ ಮಾಡಿಕೊಂಡು ತನ್ನ ತವರು ಮನೆಯಾದ ರಾಯಚೂರಿನ ಯರಮರಸಗೆ ಹೊಗಿರುತ್ತಾಳೆ ನಂತರ ದಿನಾಂಕ 05-03-2014 ರಂದು ನನ್ನ ಮಗ ಮಕ್ಕಳ ಪರೀಕ್ಷೆ ಇರುವದರಿಂದ ತನ್ನ ಹೆಂಡತಿ ಮಕ್ಕಳಿಗೆ ಕರೆಯಲು ಹೊದಾಗ ಕೇಸ ಮಾಡಿ ಜೈಲಿಗೆ ಕಳುಹಿಸಿರುತ್ತಾಳೆ. ಈಗ ನಾವು ಜಾಮಿನಿನ ಮೇಲೆ ಬಂದಿದ್ದು ದಿನಾಂಕ 23-03-2014 ರಂದು ಬೆಳಿಗ್ಗೆ 11 ಗಂಟೆಗೆ ನನ್ನ ಮಗನ ಹೆಂಡತಿಯ ತಾಯಿ ಸುಲೋಚನಾ ಗಂಡ ದಿ: ಸುಭಾಶ್ಚಂದ್ರ ತಮ್ಮ ಗೀರಿಶ ತಂದೆ ಸುಭಾಶ್ಚಂದ್ರ ಅಕ್ಕ ರಾಜೇಶ್ವರಿ ಗಂಡ ಮಹೇಶ ಅವಂತಿ, ಮತ್ತು ಅವರೊಂದಿಗೆ ಪ್ರಮೀಳಾಬಾಯಿ ಗಂಡ ವಿಜಯಕುಮಾರ, ವಿಜಯಕುಮಾರ ಮತ್ತು ಮಹೇಶ ಆವಂತಿ, ಇವರುಗಳು ನಮ್ಮ ಮನೆಗೆ ಬಂದು ಎಲ್ಲಿ ಇದ್ದಾನೆ ಶರಣ್ಯಾ,ಅಲ್ಲಿ ಉಷಾ ಮಕ್ಕಳಿಗಾಗಿ ಚಡಪಡಿಸುತ್ತಿದ್ದಾಳೆ ಇಲ್ಲಿ ಮಕ್ಕಳಿಗೆ ಇಟ್ಟುಕೊಂಡು ಕುಳಿತಿರಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಗೀರಿಶ ಇತನು ನನಗೆ ಕೈಹಿಂದ ಹೊಡೆಯಲು ಬಂದ ಪ್ರಮೀಳಾ ಇವಳು ಹೊಡಿ ನಮ್ಮ ಮಗಳಿಗೆ ಹಾಳ ಮಾಡ್ಯಾರ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಳು ವಿಜಯಕುಮಾರ ಇವನು ತನ್ನ ಕಾಲಲ್ಲಿಯ ಚಪ್ಪಲಿ ತೆಗೆದು ನನ್ನ ಮೇಲೆ ಹೊಡೆಯಲು ಏರಿ ಏರಿ ಬರುತ್ತಿದ್ದರು ಇನ್ನುಳಿದವರು ಹೊಲಸು ಹೊಲಸು ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಭೀಕು ತಂದೆ ಕೇಶು ಪವಾರ  ಸಾ: ನಾಗನಟಗಿ ಮೇಘಾನಾಯ್ಕ ತಾಂಡಾ ತಾ: ಶಾಹಪೂರ ಗುಲಬರ್ಗಾ  ರವರ ಚಿಕ್ಕ ಮಗನಾದ  ಗೇನು ಇತನು ಗುಲಬರ್ಗಾ ಯುನಿವರ್ಸಿಟಿಯಲ್ಲಿ ಎಂ. ಎಡ್‌  ವಿದ್ಯಾಭ್ಯಾಸ ಮಾಡಿಕೊಂಡು ಯುನಿವರ್ಸಿಟಿ ಹಾಸ್ಟೇಲದಲ್ಲಿ ಇರುತ್ತಾನೆ.  2-3  ದಿವಸದ ಹಿಂದೆ  ನಮ್ಮ ತಾಂಡಕ್ಕೆ ಬಂದಿದ್ದನು. ನಿನ್ನೆ ದಿನಾಂಕ 22/03/2014 ರಂದು ಮುಂಜಾನೆ ವೇಳೆಗೆ  ಗೇನು ಮತ್ತು ಗೊಪಾಲ ಪವಾರ ಇಬ್ಬರು ಗುಲಬರ್ಗಾಕ್ಕೆ ಹೊಗುತ್ತಿರುವುದಾಗಿ ಹೇಳಿ ಹೊಗಿದ್ದರು. ನಿನ್ನೆ ರಾತ್ರಿ ವೇಳೆಗೆ  ಗೊಪಾಲ ರವರು ಮರಳಿ ತಾಂಡಾಕ್ಕೆ ಬಂದಾಗ  ನಾನು ಗೇನು ಇತನ ಬಗ್ಗೆ ಕೇಳಿದಾಗ  ಹೇಳಿದೆನೆಂದರೆ  ನಾನು ಮತ್ತು  ಗೇನು ಇಬ್ಬರು  ಸಂಜೆ 7-30 ಗಂಟೆ ಸುಮಾರಿಗೆ ಗುಲಬರ್ಗಾ ಬಸ ಸ್ಟ್ಯಾಂಡ ಕ್ಕೆ ಬಂದು  ನಾನು ಶಾಹಪೂರ ಬಸ್ಸಿನಲ್ಲಿ ಕುಳಿತಿದ್ದು, ಆಗ ಗೇನು ಇತನು  ಶೌಚಾಲಯಕ್ಕೆ ಹೊಗಿ ಬರುವುದಾಗಿ ಹೇಳಿ ಹೊದನು.  ಅರ್ಧ ಗಂಟೆಯಾದರೂ ಬರಲಿಲ್ಲ. ಅವನ ಮೊಬೈಲ ನಂ. 7760751705 ಕ್ಕೆ  ಕರೆ ಮಾಡಿದಾಗ  ಸ್ವಿಚ್ಛ ಆಫ್‌ ಆಗಿತ್ತು. ಆಗ ನಾನು ಒಬ್ಬನೇ ತಾಂಡಾಕ್ಕೆ ಬಂದಿರುವುದಾಗಿ ಹೇಳಿದನು. ನಾವು ಇಲ್ಲಿಯ ವರೆಗೆ  ಅವನ ಮೊಬೈಲಿಗೆ ಕರೆ ಮಾಡಿದ್ದು ಸ್ವಿಚ್ಚ ಆಫ್‌ ಆಗಿರುತ್ತದೆ.  ಗುಲಬರ್ಗಾಕ್ಕೆ ಬಂದು ಹುಡುಕಿದರು ಸಿಕ್ಕಿರುವುದಿಲ್ಲಾ. ನನ್ನ ಮಗ ಗೇನು ಇತನು  ಗುಲಬರ್ಗಾ ಬಸ ನಿಲ್ದಾಣದಿಂದ ಕಾಣೆಯಾಗಿದ್ದು, ಇಂದು ಮುಂಜಾನೆ ವೇಳೆಗೆ ನನ್ನ ಹಿರಿಯ ಮಗನಾದ  ದಾಮು ರವರಿಗೆ ಫೋನ ಮಾಡಿ ನನಗೆ ದೂರ ಕರೆದುಕೊಂಡು ಹೊಗುತ್ತಿದ್ದಾರೆ ಎಂದು ಹೇಳಿ ಫೋನ ಕಟ್‌‌ ಮಾಡಿರುತ್ತಾನೆ. ಎಂದು ಪೂನಾದಿಂದ ನನ್ನ ಮಗ ಫೋನ ಮಾಡಿ ತಿಳಿಸಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.