POLICE BHAVAN KALABURAGI

POLICE BHAVAN KALABURAGI

29 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 29-11-2013 ರಂದು ಶ್ರೀ ಸಂಜೀವರೆಡ್ಡಿ ತಂ ಕೋನರೆಡ್ಡಿ ಪಾಟೀಲ ಸಾ : ಕಿಟ್ಟಾ ತಾ : ಬಸವಕಲ್ಯಾಣ ಜಿ: ಬೀದರ  ರವರು ತನ್ನ ಊರಿನ ಸಂಬಂದಿಕರ ಸಂಗಡ ಗುಲಬರ್ಗಾದಲ್ಲಿ ನಿನ್ನೆ  ಮದುವೆ ಮುಗಿಸಿಕೊಂಡು ಟವೇರಾ ನಂ ಕೆ,ಎ, 39 ಎಮ್, 1292 ನೇದ್ದರಲ್ಲಿ ಕುಳಿತು ಗುಲಬರ್ಗಾದಿಂದ ರಾತ್ರಿ 11.45 ಪಿ,ಎಮ್,ಕ್ಕೆ ಹೊರಟು ಕಿಟ್ಟಾ ಗ್ರಾಮಕ್ಕೆ ಹೋಗುತ್ತಿರುವಾಗ ಸದರ ಕಾರ ಚಾಲಕ ಮಹೇಶ ತಂ ಬಸವರಾಜ ಬಿರಾದಾರ ಸಾ|| ರಟಕಲ ಇತನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಿದ್ದಭಾರತಿ ಶಾಲೆಯ ಎದುರುಗಡೆ ಎಡಗಡೆಯಿಂದ 00.15 ಎ,ಎಮ್,ಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿ ನಂ  ಎ,ಪಿ, 15 ವಾಯ 3654 ನೇದ್ದು ಅತಿವೇಗ ಮತ್ತು ಅಲಕ್ಷತನಿದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ನಮ್ಮ ಕಾರಿನ ಮೈಮೇಲೆ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾಗ ಕಾರಿನ ಮುಂಬಾಗ ಮತ್ತು ಬಲಗಡೆಯ ಭಾಗ ಜಖಂ ಗೊಂಡಿದ್ದರಿಂದ ಎಲ್ಲರು ಒಳಗೆ ಸಿಕ್ಕಿಕೊಂಡಿದ್ದು ಈ ಅಪಘಾತದಲ್ಲಿ 1. ನಾಗನಾಥರೆಡ್ಡಿ ತಂ ಗೋವಿಂದರೆಡ್ಡಿ ಗೋರೆ 2. ಅವಿನಾಶರೆಡ್ಡಿ ತಂ ಸಂಜೀವರೆಡ್ಡಿ ಪಾಟೀಲ 3.ವಿಮಲಾ ಗಂ ಗುರುನಾಥರೆಡ್ಡಿ ಪಾಟೀಲ 4.ನೀಲಮ್ಮ ಗಂ ಮುಕುಂದರೆಡ್ಡಿ ಬೊಗಲೆ ಸಾ : ಎಲ್ಲರು ಕಿಟ್ಟಾ ತಾ : ಬಸವಕಲ್ಯಾಣ ಜಿ : ಬೀದರ 5.ಮಹೇಶ ತಂ ಬಸವರಾಜ ಬಿರಾದಾರ ಸಾ : ರಟಕಲ ತಾ|| ಚಿಂಚೋಳಿ ರವರು ಸ್ಥಳದಲ್ಲೆ ಮೃತಪಟ್ಟಿದ್ದು 1. ಸಂಜೀವರೆಡ್ಡಿ ತಂ ಕೋನರೆಡ್ಡಿ ಪಾಟೀಲ 2. ನಾಗರೆಡ್ಡಿ ತಂ ಸಂಗಾರೆಡ್ಡಿ ಬಂದೆ 3.ಗುರುನಾಥರೆಡ್ಡಿ ತಂ ಕಾಮರೆಡ್ಡಿ ಪಾಟೀಲ 4. ಮುಕುಂದರೆಡ್ಡಿ ತಂ ಗೋವಿಂದರೆಡ್ಡಿ ಬೋಗಲೆ ಸಾ : ಎಲ್ಲರು ಕಿಟ್ಟಾ ತಾ : ಬಸವಕಲ್ಯಾಣ ಜಿ: ಬೀದರ  ರವರಿಗೆ  ಸಾಧ ಮತ್ತ ಭಾರಿ  ರಕ್ತಗಾಯಳಾಗಿರುತ್ತವೆ ಅಪಘಾತದ ನಂತರ ಲಾರಿ ಚಾಲಕ ನಿಂತಂತೆ ಮಾಡಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ: 27-11-13 ರಂದು ರಾತ್ರಿ 8:30 ಪಿ.ಎಮ್ ಸುಮಾರಿಗೆ ಖಾದರ ತಂ ಬಸೀರೊದ್ದಿನ ಶೇಖ ಸಾ|| ಶ್ರೀನಿವಾಸ ಸರಡಗಿ ತಾ||ಜಿ|| ಗುಲಬರ್ಗಾ ರವರು ತನ್ನ ಅಪಾಚಿ ಮೋಟಾರ ಸೈಕಲ್ ಕೆ.ಎ-56-ಇ-0274 ನೇದ್ದರ ಮೇಲೆ ಗುಲಬರ್ಗಾದಿಂದ ಮಹಾಗಾಂವ ವಾಡಿಗೆ ರೋಡಿನ ಎಡಗಡೆಯಿಂದ ಬರುವಾಗ ಅಂಕಲಗಿ ಗ್ರಾಮದ ಹಳೆಯ ಕ್ರಾಸ ಹತ್ತಿರ ಮಹಾಗಾಂವ ಕಡೆಯಿಂದ ಆಟೋ ನಂ: ಕೆ.ಎ-32-ಬಿ-7316 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೋಂಡು ಬಂದವನೇ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರಿಂದ ರೋಡಿನ ಎಡಗಡೆ ಬಿದ್ದಾಗ ಬಾಯಿಗೆ ಭಾರಿರಕ್ತಗಾಯವಾಗಿ 2 ಹಲ್ಲುಗಳು ಬಿದ್ದಿದ್ದು ತುಟಿ ಸೀಳಿರುತ್ತದೆ ಬಲಗಣ್ಣಿನ ಹುಬ್ಬಿನ ಹತ್ತಿರ ಬಲಗಾಲ ಪಾದಕ್ಕೆ ಹಸ್ತಕ್ಕೆ ಹೊಟ್ಟೆಯ ಎಡಭಾಗಕ್ಕೆ ಭಾರಿರಕ್ತಗಾಯವಾಗಿದ್ದು ಬಲಮುಂಡಿ ಮುರಿದಂತೆ ಆಗಿರುತ್ತದೆ ಅಪಘಾತವಾದ ನಂತರ ಆಟೋ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಸಾಯಿ ವೈಭವ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ವೀರಭದ್ರಪ್ಪ ತಂದೆ ಬೀದೆಪ್ಪ ಗಡ್ಡದ ಉ-ವೈನ್ ಶಾಪ ಮ್ಯಾನೇಜರ ಸಾ;ಯುವಣಿ ತಾ:ಚಿತ್ತಾಪೂರ ಹಾವ:ಮನೆ ನಂ:4-601/771 ಬಸವೇಶ್ವರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಮಾಯಾ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ಜಗದೀಶ ತಂದೆ ಚಂದ್ರಶಾ ಮಾವೀನಕರ್ ಉ-ವೈನ್ ಶಾಪ ಮ್ಯಾನೇಜರ ಸಾ:ಮಹಾಗಾಂವ ಕ್ರಾಸ ಹಾ.ವ:ಮನೆ ನಂ:29 ಬಿದ್ದಾಪೂರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪುಜಾ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ರಾಘವೇಂದ್ರ ತಂದೆ ಶಿವಶರಣಪ್ಪ ಸೇಡಂಕರ್ ವಯ-34 ಉ-ವೈನ್ ಶಾಪ ಮ್ಯಾನೇಜರ ಸಾ:ಮನೆ ನಂ:11-862/12 ಅಶೋಕ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ನವರಂಗ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ನಾಗರಾಜ ತಂದೆ ರುಕ್ಮುನಸಾ ಹಬೀಬ ಉ-ವೈನ್ ಶಾಪ ಮ್ಯಾನೇಜರ ಸಾ:ಮನೆ ನಂ:9-545/2/ಎ ಮಹಾದೇವ ನಗರ ಶಹಾಬಜಾರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪುರ್ಣಿಮಾ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ಬಾಲಯ್ಯ ತಂದೆ ತುಳಜಯ್ಯ ಉ-ವೈನ್ ಶಾಪ ಮ್ಯಾನೇಜರ ಸಾ:ಸಾಲಹಳ್ಳಿ ತಾ:ಚಿತ್ತಾಪೂರ ಹಾವ: ವೀರತಪಸ್ವಿ ಶಾಲೆ ಹತ್ತಿರ ಬಿದ್ದಾಪೂರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಶಕ್ತಿ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ಸಂತೋಷ ತಂದೆ ಬಾಪುರಾಯ ಪಾಟೀಲ ವಯ-26 ಉ-ವೈನ್ ಶಾಪ ಮ್ಯಾನೇಜರ ಸಾ:ಸಿದ್ದರಾಮೇಶ್ವರ ಕಾಲೋನಿ ಅಳಂದ ಚೆಕ್ ಪೋಸ್ಟ್ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಷೇಷನ ಬಜಾರ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ಯಶ್ವಂತ ಬನ್ನೂರ ಸಾ: ಬಬಲಾದ (ಐಕೆ) ತಾ|| ಜಿ|| ಗುಲಬರ್ಗಾ ರವರು ತನ್ನ ಸೈಕಲ್ ಮೋಟಾರ ಹೊಂಡಾ ಸ್ಪ್ಲೆಂಡರ ಪ್ಲಸ್ ಸಿಲ್ವರ ಕಲರ ನಂ; ಕೆಎ 32 ಇಸಿ 7897 ನೇದ್ದು ಮೋಹನ ಲಾಡ್ಜ ಎದುರಗಡೆ ದಿನಾಂಕ; 27-11-2013 ರಂದು ರಾತ್ರಿ 9;30 ಗಂಟೆಯ ಸುಮಾರಿಗೆ ನಿಲುಗಡೆ ಮಾಡಿ ಟೀ ಕುಡಿದು ಮರಳಿ ರಾತ್ರಿ 10-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಸದರಿ ಸೈಕಲ್ ಮೋಟಾರ ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ ಸೈಕಲ್ ಮೋಟಾರ ಸಿಕ್ಕಿರುವದಿಲ್ಲ.  ನನ್ನ ಸೈಕಲ್ ಮೋಟಾರ ಹೊಂಡಾ ಸ್ಪ್ಲೆಂಡರ ಪ್ಲಸ್ ಸಿಲ್ವರ ಕಲರ ನಂ; ಕೆಎ 32 ಇಸಿ 7897  ಚಸ್ಸಿ ನಂ; MBLHA10AMCHM08167 ಇಂಜಿನ್ ನಂ  HA10EJCHM30278 || ಕಿ|| 42 ,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಬಿ.ಬಿ ಪಟೇಲ ಪಿ.ಐ ಕರ್ನಾಟಕ ಲೊಕಾಯುಕ್ತ ಘಟಕ ಯಾದಗಿರಿ ಸಾ|| ನ್ಯೂ ಗಾಲಿಬ ಕಾಲೋನಿ ಎಂ.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ರವರು ದಿನಾಂಕ: 29-11-2013 ರಂದು 9:00 ಎಎಮ್ ಕ್ಕೆ ಕೇಂಧ್ರ ಬಸ್ ನಿಲ್ದಾಣಕ್ಕೆ ಬಂದು ಶಹಾಪೂರಕ್ಕೆ ಹೋಗಲು ಗದಗ ಬಸ್ ನಲ್ಲಿ ಕುಳಿತಿದ್ದು ನಂತರ ರಾಮಮಂದಿರ ಹತ್ತಿರ ಹೋಗಿ ನೋಡಲಾಗಿ ನನ್ನ ಕಪ್ಪು ಬಣ್ಣದ ಏಫ್ ಗೇರ ಲ್ಯಾಪಟಾಪ ಬ್ಯಾಗ ಕಾಣಲಿಲ್ಲ. ಆಗ ನಾನು ನನ್ನ ಬ್ಯಾಗ ಹುಡುಕಾಡುತಿದ್ದಾಗ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಯಾರೋ ಒಬ್ಬ ವ್ಯಕ್ತಿ ಕೇಂದ್ರ ಬಸ್ ನಿಲ್ದಾಣ ಗುಲಬರ್ಗಾದಲ್ಲಿ ಒಂದು ಬ್ಯಾಗನ್ನು ಕಿಟಕಿಯಿಂದ ಕೆಳಗೆ ಬಿಸಾಕಿದ್ದು ಇನ್ನೊಬ್ಬ ವ್ಯಕ್ತಿ ಅದನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ. ಅಂತಾ ತಿಳಿಸಿದರು. ನಂತರ ನಾನು ರಾಮಂದಿರದಿಂದ ಬಸ್ ನಿಲ್ದಾಣಕ್ಕೆ ಬಂದು ನನ್ನ ಬ್ಯಾಗ ಅದರಲಿದ್ದ 1) (ಎಫ್) ಗೇರ ಲಾಪಟ್ಯಾಪ ಬ್ಯಾಗ 2) 20122013 ನೇ ಸಾಲೀನ ಡೈರಿಗಳು3) 2 ಕನ್ನಡಕಗಳು 11,000=00 ರು ಗಳು 4) ವೈಲೇನಿ ಸ್ಪ್ರೈ  5) ಆಫಿಸದ ಅಲಮಾರಿ ಚಾವಿಗಳು ಮತ್ತು ಟೇಬಲ್ ಡಸ್ಕ ಚಾವಿಗಳು 6) ನಗದು ಚಿಲ್ಲರೆ ಹಣ  ಅ.ಕಿ. 200 ರೂ. ಹೀಗೆ ಒಟ್ಟು 11,200 ರೂ. ಕಿಮ್ಮತ್ತಿನ ವಸ್ತುಗಳು. ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತು ಗಂಡು ಶಿಸುವನ್ನು ಬಿಸಾಕಿ ಹೋದ ಪ್ರಕರಣ :

ಫರತಾಬಾದ ಠಾಣೆ : ದಿನಾಂಕ 28-11-2013 ರಂದು ಬೆಳ್ಳಿಗೆ 9 :00 ಗಂಟೆಯ ಸುಮಾರಿಗೆ ಅಂಗನವಾಡಿ ಕೇಂದ್ರಕ್ಕೆ ಬಂದು ಕರ್ತವ್ಯದಲ್ಲಿದಾಗ ಗ್ರಾಮದಲ್ಲಿನ ಜನರು ಗುಲಬರ್ಗಾ-ಅಫಜಲಪೂರ ರೋಡಿನ ಕೆ.ಈ.ಬಿ ಹತ್ತಿರ ಇರುವ ಒಂದು ಸೆತುವೆ ಕೇಳಗೆ ಆಗ ತಾನೆ ಜನಿಸಿದ ಒಂದು ಗಂಡು ಮಗುವನ್ನು ಒಂದು ಕೈಚಿಲದಲ್ಲಿ ಹಾಕಿ ಇಟ್ಟು ಹೋಗಿರುತ್ತಾರೆ ಎಂದು ಜನರು ಮಾತನಾಡುವದನ್ನು ಕೇಳಿ ನಾನು ಮತ್ತು ಹಡಗಿಲ ಹಾರುತಿ ಕ್ರಾಸದಲ್ಲಿರುವ ಹೋಟೆಲಿನ ನಿಂಗಮ್ಮ ಗಂಡ ಶ್ರೀಮಂತ ಜಂಬೆನಾಳ ಸಾ: ಹಾರುತಿ ಹಡಗಿಲ ಇಬ್ಬರು ಕೂಡಿಕೊಂಡು ಕೆ.ಈ.ಬಿ ಆಫಿಸಿನ ಹತ್ತಿರ ಇರುವ ಅಫಜಲಪೂರ-ಗುಲಬರ್ಗಾ  ರೋಡಿನ ಸೆತುವೆ ಕೇಳಗೆ ಕೈ ಚಿಲದಲ್ಲಿ ಅಂದಾಜು ಒಂದು ದಿನದ ಮಗು (ಗಂಡು) ಇದ್ದಿರುತ್ತದೆ. ಸದರಿ ಮಗುವಿಗೆ ಹೊಕ್ಕಳದಿಂದ ರಕ್ತ ಬರುತ್ತಿದ್ದು ದೇಹದ ಇತರೆ ಕಡೆ ಯಾವುದೆ ಗಾಯ ವಗೈರೆ ಇರುವದಿಲ್ಲ. ಮಗು ಜಿವಂತ ಇರುತ್ತದೆ. ಸದರಿ ಮಗುವಿನ ತಂದೆ ತಾಯಿಯು ಅಥವಾ ಲಾಲನೆ-ಪಾಲನೆ ಮಾಡುವ ಜವಾಬ್ದಾರಿ ಇರುವ ಇನ್ಯಾವುದೆ ವ್ಯಕ್ತಿಯು ಮಗುವನ್ನು ಅಪಾಯಕೊಡ್ಡುವ ಅಥವಾ ತೋರೆದು ಬಿಡುವ ಅಥವಾ ಜನನ ಮುಚ್ಚಿಡುವ ಉದೇಶದಿಂದಲು ಮಗುವನ್ನು ಇಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಕೈಚಿಲದಲ್ಲಿ ಹಾಕಿ ಬಿಸಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

28 November 2013

Gulbarga District Reported Crimes

ಸುಲಿಗೆ ಪ್ರಕರಣ : 
ಬ್ರಹ್ಮಪೂರ ಠಾಣೆ : ಶ್ರೀ. ರಘುರಾಜ ತಂದೆ ನಾಗಪ್ಪ ಮಡಿವಾಳ ಸಾ|| ಗಣೇಶ ನಗರ ಜಿ.ಡಿ.ಎ ಕಾಲೋನಿ ಬಾರೆಹಿಲ್ಸ್ ಗುಲಬರ್ಗಾ ರವರು ದಿನಾಂಕ: 26-11-2013 ರಂದು 4:00 ಪಿ.ಎಮ್.ಸುಮಾರಿಗೆ ತಹಸೀಲ ಕಾರ್ಯಾಲಯದಿಂದ ಹೊರಗಡೆ ಬರುತ್ತಿರುವಾಗ ಎದರುನಿಂದ ಇಬ್ಬರೂ ಹಿರೋ ಹೊಂಡಾ ಸೈಕಲ್ ಮೋಟರ ಸೈಕಲ ಮೇಲೆ ಬಂದವರೆ ಏ ಭೋಸಡಿ ಮಗನೆ ನಿಲ್ಲು ಅಂತಾ ಬೈದಾಗ ಅವರಿಗೆ ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ಅವರಿಬ್ಬರೂ ನನಗೆ ಗಟ್ಟಿಯಾಗಿ ಹಿಡಿದು ಒಬ್ಬನು ಚಾಕು ತೋರಿಸಿ ನನ್ನ ಪ್ಯಾಟಿನ ಜೇಬಿನಲ್ಲಿದ್ದ ಹಣ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಚಿರಾಡಲು ಅಲ್ಲಿಯ ತಸೀಲ ಕಾರ್ಯಾಲಯದ ಹತ್ತಿರ ನಿಂತ ಮೈನೋದ್ದೀನ ಮತ್ತು ಧನರಾಜ ಅನ್ನುವವರು ಬರುವದನ್ನು ನೋಡಿ ಬಿಟ್ಟು ಓಡಿ ಹೊಗಿರುತ್ತಾರೆ. ಅವರನ್ನು ನಾವು 3 ಜನ ಕೂಡಿಕೊಂಡು ಹುಡಕಾಡಿದರು ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಚೆನ್ನಮ್ಮ ಗಂಡ ಸಂತೋಷ ಕಿಣ್ಣಿ ಸಾ:ರಾಜಾಪೂರ ತಾ:ಚಿತ್ತಾಪೂರ, ಹಾ.ವ:ಬಟಗೆರಾ(ಕೆ) ಗ್ರಾಮ, ತಾ:ಸೇಡಂ ಇವರನ್ನು 10 ವರ್ಷಗಳ ಹಿಂದೆ ರಾಜಾಪೂರ ಗ್ರಾಮದ ಸಂತೋಷ ಕಿಣ್ಣಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಬಳಿಕ ಒಂದು ವರ್ಷ ಅಲ್ಲಿಯೇ ಇದ್ದು ನಂತರ ತವರು ಮನೆ ಬಟಗೆರಾ(ಕೆ) ಗೇಟಗೆ ಬಂದು ವಾಸವಾಗಿದ್ದು ಇರುತ್ತದೆ. ಇಲ್ಲಿ ನನ್ನ ಗಂಡ ಕುಡಿತ ಚಟ ಹಚ್ಚಿಕೊಂಡು, ವಾಸವದತ್ತಾ ಸಿಮೆಂಟ್ ಕಂಪನಿಯಲ್ಲಿ ಕೆಲಸದಿಂದಲೂ ತೆಗಿಸಲ್ಪಟ್ಟು ನಿರುದ್ಯೋಗಿಯಾಗಿ, ವಿಪರೀತ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆಯವರು ಸಾಲ ತೀರಿಸಿದ್ದರು, ನನ್ನ ಗಂಡ, ನನಗೆ ಕೆಲಸ ಇಲ್ಲ ನಾನು ನಿರುದ್ಯೋಗಿ ಇದ್ದೇನೆ ಅಂತ ಅಂದಾಡುತ್ತಿದ್ದರು. ಹೀಗಿದ್ದು ದಿನಾಂಕ :27-11-2013 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ನಾನು ನನ್ನ ಅಣ್ಣ ತಮ್ಮಕ್ಕಿಯವರ ಮನೆಗೆ ಹೋದಾಗ ನನ್ನ ಗಂಡ ಒಬ್ಬನೇ ಮನೆಯಲ್ಲಿ ಇದ್ದರು. ಮರಳಿ ಸಾಯಂಕಾಲ 05-30 ಕ್ಕೆ ಮನೆಗೆ ಬಂದಾಗ ನನ್ನ ಗಂಡ ಮನೆಯ ಬಾಗಿಲು ಮುಚ್ಚಿಕೊಂಡಿದ್ದರು, ನಾನು ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ ನಂತರ ನಮ್ಮ ಅಣ್ಣಂದಿರಾದ ನಾಗೇಶ ಮತ್ತು ಶಂಕರ ಇವರಿಗೆ ಕರೆಯಿಸಿ ಬಾಗಿಲು, ಕಿಡಕಿ ಮುರಿದು ಒಳಗೆ ನೋಡಲು ನನ್ನ ಗಂಡ ಸಂತೋXಷ ಇವರು ಕೆಲಸವಿಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ರೇಣುಕಾ ಗಂಡ ಶಿವಪುತ್ರ ಸಾಮನೆ ನಂ 161 ಎ ಗ್ರಾಮೀಣ ಲೈನ ರವರು ಪತಿಯಾದ ಶಿವಪುತ್ರ ರವರು ದಿನಾಂಕ 27-11-2013 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂಬರ ಕೆಎ-37 ಹೆಚ್-8167 ರ ಮೇಲೆ ಹೋಗುವಾಗ ಸರಕಾರಿ ಕನ್ಯಾ ಕಾಲೇಜು ಮತ್ತು ಹಳೆ ಡಿ.ಪಿ.ಓ ಮಧ್ಯದ ರೋಡಿನಲ್ಲಿ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ-32 ಆರ್-3872 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಪೆಟ್ಟುಗೊಳಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 November 2013

Gulbarga District Reported Crimes

ಕೊಲೆ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಸಿದ್ದಾರಾಮ ತಂದೆ ಶಿವಲಿಂಗಪ್ಪಾ ಕಲಶಟ್ಟಿ ಸಾ: ನಾಗಲೇಗಾಂವ ಇವರ ಅಣ್ಣ-ತಮ್ಮಕೀಯ ಹಾಗೂ ನಮ್ಮೂರಿನ ನಾಮದೇವ ತಂದೆ ಸಿದ್ರಾಮ ಗೋಡಕೆ ಇವರ ಮದ್ಯ ಹಿರೋಳ್ಳಿ ಸೀಮಾಂತರ ಹೊಲ ಸರವೆ ನಂ: 133,144 ರ ಸಂಬಂಧವಾಗಿ ತಕರಾರು ಇದ್ದು ಇಬ್ಬರಲ್ಲಿ ವೈಮನಸ್ಸು ಇರುತ್ತದೆ. ಹೀಗಿದ್ದು ಇಂದು ದಿನಾಂಕ 26-11-2013 ರಂದು ಮದ್ಯಾಹ್ನ 12 ಗಂಟೆಗೆ ನಾನು ಮತ್ತು ನನ್ನ ಅಣ್ಣ-ತಮ್ಮಕೀಯವರು ಕೂಡಿ ನಾಮದೇವ ಗೋಡಕೆ ರವರ ಕೊಂಪೀ ಮನೆ ಹತ್ತಿರ ಹೊಲದ ಸಮಸ್ಯೆ ಬಗೆಹರಿಸಿಕೊಳ್ಳಲು ಹೋಗಿದ್ದಾಗ ನಮ್ಮಿಬ್ಬರಲ್ಲಿ ವಿವಾದವಾಗಿದ್ದು  1) ಸಿದ್ದಾರಾಮ ತಂದೆ ನಾಮದೇವ ಗೋಡಕೆ 2) ನಾಮದೇವ ತಂದೆ ಸಿದ್ದಾರಾಮ ಗೋಡಕೆ 3) ದತ್ತಾತ್ರೇಯ ತಂದೆ ಸಿದ್ದಾರಾಮ ಗೋಡಕೆ 4) ಸುವರ್ಣ ತಂದೆ ನಾಮದೇವ ಗೋಡಕೆ 5) ಶಾರದಾಬಾಯಿ ಗಂಡ ನಾಮದೇವ ಗೋಡಕೆ 6) ರಮಾಬಾಯಿ ಗಂಡ ದತ್ತಾತ್ತೇಯ ಗೋಡಕೆ ಮತ್ತು ಸರುಬಾಯಿ ಗಂಡ ದತ್ತಾತ್ತೇಯ ಗೋಡಕೆ ಎಲ್ಲರೂ ಸಾ: ನಾಗಲೇಗಾಂವ ಇವರು ಕೂಡಿಕೊಂಡು ನಾಮದೇವ ಇತನು ಕೊಡಲಿಯಿಂದ ಶರಣಪ್ಪನ ತಲೆಗೆ ಜೋರಾಗಿ ಹೊಡೆದು ರಕ್ತಗಾಯ ಮಾಡಿರುತ್ತಾನೆ ಮತ್ತು ಸಿದ್ದಾರಾಮ ಗೋಡಕೆ ಇತನು ಸಿದ್ರಾಮಪ್ಪಾ ತಂದೆ ಮಾರುತಿ ಕಲಶಟ್ಟಿ ಇವನ ತಲೆಗೆ ಜೋರಾಗಿ ಹೊಡೆದಿದ್ದರಿಂದ ಹೆಚ್ಚಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ದತ್ತಾತ್ರೇಯ ಇತನು ಚಂದ್ರಕಾಂತನ ತಲೆಗೆ ಮೂಗಿಗೆ ತೊಡೆಗೆ ಕೊಡಲಿಯಿಂದ ಹೊಡೆದು ಗಾಯ ಮಾಡಿರುತ್ತಾನೆ. ಸಿದ್ದಾರಾಮ ಗೋಡಕೆ ತನ್ನ ಕೈಯಲ್ಲಿದ ಕೊಡಲಿಯಿಂದ ಚಂದ್ರಮನ ತಲೆಗೆ ಹೊಡೆದಿರುತ್ತಾನೆ. ಆಗ ನಾನು ಬಿಡಿಸಲು ಹೋದಾಗ ನನಗೂ ಸಹ ದತ್ತಾತ್ರೇಯನು ಕೊಡಲಿಯಿಂದ ನನ್ನ ಬಲಗೈ ಅಂಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಶಾರದಾಬಾಯಿ ಕೊಯಿತಾದಿಂದ ಶರಣಪ್ಪನಿಗೆ ಹೊಡೆದಿರುತ್ತಾಳೆ.ರಮಾಬಾಯಿ ಮತ್ತು ಸರುಬಾಯಿ ಖರದಪುಡಿ ನಮ್ಮ ಕಣ್ಣಿಗೆ ಎರೆಚ್ಚಿರುತ್ತಾಳೆ. ನಾಮದೇವ ಮತ್ತು ಅವನ ಸಂಗಡ ಇದ್ದವರು ಕೂಡಿ ಸಿದ್ರಾಮಪ್ಪಾ ಇವರಿಗೆ ಕೊಲೆ ಮಾಡಿ ನಮ್ಮ ಮೇಲೆ ಮಾರಣಾಂತೀಕ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಶಿವರಾಯ ತಂದೆ ಸಿದ್ರಾಮಪ್ಪ ಕೆಳಗಿನಮನಿ. ಸಾ:ಹಣಮನಳ್ಳಿ. ತಾ: ಸೇಡಂ ದಿನಾಂಕ: 26-11-2013 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ತಮ್ಮನಾದ ರಾಜು ತಂದೆ ಸಿದ್ರಾಮಪ್ಪ ಈತನು ಬಂದು ತಿಳಿಸಿದ್ದೆನೆಂದರೆ ನನಗೂ ಹಾಗೂ ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಹೂಗಾರ ಈತನಿಗೂ ಇಂದು ಸೇಡಂ ಪಟ್ಟಣದಲ್ಲಿ ಟಂಟಂ ಪಾಳೆ ನಿಲ್ಲಿಸುವ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರಿಂದ ನಾನು ಊರಿಗೆ ಬಂದ ಬಳಿಕ ಊರಲ್ಲಿಯೂ ಸಹ ನನಗೆ ಮಲ್ಲಿಕಾರ್ಜುನ ಹೂಗಾರ ಹಾಗೂ ಅವರ ಮನೆಯವರು ಕೂಡಿಕೊಂಡು ಹೊಡಿಬಡಿ ಮಾಡಿರುತ್ತಾರೆ ಅಂತಾ ತಿಳಿಸಿದನು. ಆಗ ನಾನು ಈ ವಿಷಯದ ಬಗ್ಗೆ ಮಲ್ಲಿಕಾರ್ಜುನ ಇವರ ಮನೆಯವರಿಗೆ ವಿಚಾರಿಸೋಣ ಅಂತಾ ಮನೆಯಿಂದ ಹೊರಟಾಗ ನಮ್ಮೂರ ಅಗಸಿ ಹತ್ತಿರ ಕುಳಿತಿದ್ದ 1)ನಾಗೇಂದ್ರಪ್ಪ ತಂದೆ ಮಹಾದೇವಪ್ಪ ಹೂಗಾರ, 2)ಶಿವಕುಮಾರ ತಂದೆ ಮಹಾದೇವಪ್ಪ ಹೂಗಾರ, 3)ತಿಪ್ಪಣ್ಣ ತಂದೆ ಮಹಾದೇವಪ್ಪ ಹೂಗಾರ ಮತ್ತು 4) ಮಹಾದೇವಪ್ಪ ತಂದೆ ಮಲ್ಲಪ್ಪ ಕೊಟ್ರಕಿ 5) ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಹೂಗಾರ ಇವರುಗಳ ಪೈಕಿ ನಾಗೇಂದ್ರಪ್ಪ ಹೂಗಾರ ಈತನಿಗೆ ನಮ್ಮ ತಮ್ಮನಿಗೆ ಏಕೆ ಹೊಡೆದಿರುವಿರಿ ಏನು ತಪ್ಪು ಮಾಡಿದ್ದಾನೆ ಅಂತಾ ಕೇಳಿದ್ದಕ್ಕೆ ಆಗ ಅವರೆಲ್ಲರೂ ಕೂಡಿಕೊಂಡು ಅವಾಚ್ಯ ಶ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿ ಹೊಡೆಬಡೆ ಮಾಡಿ ಛಾಜುವಿನಿಂದ ಹೊಡೆದು ರಕ್ತಗಾಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 22-11-2013  ರಂದು 02-00 ಪಿ.ಎಮ್ ಕ್ಕೆ ಶ್ರೀ ಕಪಿಲದೇವ ತಂದೆ  ಚಂದ್ರಕಾಂತ ಚಕ್ರವರ್ತಿ, ಸಾಃ ನಿಂಬರ್ಗಾ, ತಾಃ ಆಳಂದ ರವರು ಸೇಡಂ ರೋಡಿಗೆ ಇರುವ ವಾತ್ಸಲ್ಯ ಆಸ್ಪತ್ರೆಯ ಎದರುಗಡೆ ರೋಡಿನ ಮೇಲೆ ತನ್ನ ಹೊಂಡಾ ಎಕ್ಟೀವಾ ನಂ. ಕೆ.ಎ 32 ಇ.ಡಿ 3922 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕಡೆಯಿಂದ ಆರೋಪಿತನು ತನ್ನ ಅಟೋರಿಕ್ಷಾ ನಂ. ಕೆ.ಎ 32  3434 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಯ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.