POLICE BHAVAN KALABURAGI

POLICE BHAVAN KALABURAGI

08 July 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ನಾನು ದಿನಾಂಕ:25-06-2013 ರಂದು 7 ಪಿಎಮ್ ದಿಂದ ಸಂತೋಷ ಕಾಲೋನಿಯ ಉದನೂರ ರಸ್ತೆಗೆ ಇರುವ ಶಾಂಗ್ರಿಲಾ ಅಪಾರ್ಟಮೆಂಟ್ಸ ಪಕ್ಕದ ಬಿಲ್ಡಿಂಗನಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡುತ್ತಿದ್ದೇ ರಾತ್ರಿ ದಿನಾಂಕ :26-06-2013 ರಂದು ರಾತ್ರಿ 3-00  ಗಂಟೆ ಸುಮಾರಿಗೆ 4 ಜನ ಕಳ್ಳರು ಮುಖದ ಮೇಲೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಚೂಪಾದ ರಾಡ ಹಿಡಿದುಕೊಂಡು  ಬಂದು ರಾಡಿನಿಂದ ಅಂಜಿಸಿ ಹಿಂದಿ ಬಾಷೆಯಲ್ಲಿ  ಬೇದರಿಸಿ  ನನ್ನ ಕೈಗಳನ್ನು ಹಿಡಿದುಕೊಂಡು ಅಲ್ಲೇ ನನ್ನ ಹಾಸಿಗೆ ಹತ್ತಿರ ಇದ್ದ ಬಟ್ಟೆಯಿಂದ ಬಲಗೈ ಮತ್ತು ಕಾಲನ್ನು ಕಟ್ಟಿ ಬಾಯಿಯಲ್ಲಿ ಬಟ್ಟೆ ತುರುಕಿ ನನ್ನ ಜೇಬಿನಲ್ಲಿದ್ದ  150 ರೂಪಾಯಿ ಮತ್ತು  ಒಂದು ನೊಕೀಯಾ ಮೊಬಾಯಲ ಸಿಮ ಕಸಿದುಕೊಂಡು ಅದರಲ್ಲಿ ಒಬ್ಬನು ನನ್ನ ಹತ್ತಿರ ಕಾಯತ್ತಾ ನಿಂತಿದ್ದು 3 ಜನರು ಅಪಾರ್ಟಮೆಂಟ ಒಳಗೆಡೆ ಹೋಗಿ ಚಾವಿ ಹಾಕಿದ ಮನೆಗಳ ಬೀಗಗಳನ್ನು ಮುರಿದು ಕಳ್ಳತನ ಮಾಡಲು ಯತ್ನಿಸಿರುತ್ತಾರೆ.  ಅಷ್ಟರಲ್ಲಿ ಅವಿನಾಶ ಕಕ್ಕೇರಿ ಸರ್ ರವರು ಕಳ್ಳರು ಕಳ್ಳರು  ಅಂತಾ ಚಿರಾಡಲಿಕ್ಕೆ ಹತ್ತಿದ್ದಾಗ ಆ 4 ಜನರು ಓಡಿ ಹೋಗಿರುತ್ತಾರೆ ಅಂತಾ ಶ್ರೀ  ಮ್ಯಾಥ್ಯೂವ @ ಮಲ್ಲಿಕಾರ್ಜುನ ತಂದೆ ದಿ:ಪ್ರಕಾಶ ಯಾದಗೀರ ವ-23 ವರ್ಷ ಉ-ಸೆಕ್ಯೂರಿಟಿ ಗಾರ್ಡ ವರ್ಗಿಸ್ಸ ಅಪಾರ್ಟಮೆಂಟ ಸಾ:ಅಂಬೇಡ್ಕರ ಚೌಕ ಹತ್ತಿರ ಯಾದಗೀರ ಹಾ:ವ: ಪ್ಲಾಟ ನಂ 9 ಸಿದ್ದೇಶ್ವರ ಕಾಲೋನಿ  ವಿಶ್ವವಿದ್ಯಾಲಯ ಗೇಟ ಎದುರುಗಡೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:104/2013 ಕಲಂ, 392, 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗಂಡನ ಕಿರುಕುಳದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ:
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಬಂಗಾರಿ ಗಂಡ ಕಲ್ಯಾಣಿ ಪೂಜಾರಿ ಸಾ;ಕಲ್ಲಹಂಗರಗಾ ತಾ;ಜಿ;ಗುಲಬರ್ಗಾ ರವರು ರವರು ನನ್ನ ಮದುವೆಯಾದ ಮೇ 2013 ನೇ ಸಾಲೀನಲ್ಲಿ ಕಲ್ಲಹಂಗರಗಾ ಗ್ರಾಮದ  ಕಲ್ಯಾಣಿ ತಂದೆ ನಾಗಣ್ಣಾ ಪೂಜಾರಿ ಇತನೊಂದಿಗೆ ಮೇ 2013 ರಂದು ನೇರವೆರಿದ್ದು, ಮದುವೆಯ ನಂತರ ನನ್ನ ಗಂಡ ಕಲ್ಯಾಣಿ ಇತನು  ಸಣ್ಣ ಪುಟ್ಟ ಕಾರಣಗಳಿಗೆ ಕಿಟಲೆ ಮಾಡುವದು ಮತ್ತು ಕರೆದಾಗ ಬೇಗನೆ ಹೋಗದಿದ್ದಕ್ಕೆ  ಬೈಯುವದು  ಹೊಡೆಬಡಿ ಮಾಡುತ್ತಿದ್ದನು. ದಿನಾಂಕ:05-07-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಮನೆಯಲ್ಲಿ ಎಲ್ಲರೂ ಊಟ ಮಾಡಿದ ನಂತರ ನನ್ನ ಗಂಡ  ನನಗೆ ಬೇಗನೆ ಬಾ ಅಂತಾ ಕರೆದನು ಆಗ ನಾನು ಬೇಗನ ಹೋಗಲಿಲ್ಲಾ ತಡಮಾಡಿ ಹೋದೇನು. ಆಗ ನನ್ನ ಗಂಡ ನಾನು ಬಾ ಅಂದಾಗ ಬರುವದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ  ಕೈಯಿಂದ ನನ್ನ ಕಪಾಳ ಮೇಲೆ ಹೋಡೆದನು , ದಿನಾಂಕ:6-7-2013 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ,ರಾತ್ರಿ ನನ್ನ ಗಂಡ ಕಲ್ಯಾಣಿ ಇತನು ನನಗೆ ಬೈಯ್ದು ಹೊಡೆದಿದ್ದು ಅದನ್ನೆ ಮನಸಿನ ಮೇಲೆ ಬೇಜಾರು ಮಾಡಿಕೊಂಡು ಅಡುಗೆ ಮನೆಯಲ್ಲಿದ್ದ ಸೀಮೆ ಎಣ್ಣಿ ಮೈ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ನಾನು ಚೀರಾಡುವದನ್ನು ನೋಡಿ ನನ್ನ ನೆಗೆಣಿ , ಗಂಡ ಮತ್ತು ಭಾವ ಹಾಗೂ ಮಾವನವರು ಬಂದು ಬೆಂಕಿ ಆರಿಸಿದರು, ಇದರಿಂದ ನನ್ನ ಮೈ ಪೂರ್ತಿ ಸುಟ್ಟಿರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:335/2013 ಕಲಂ.498 (ಎ),323,504, 306 ,511 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ನಂತರ ದಿನಾಂಕ:07-07-2013 ರಂದು 3-00 ಪಿ.ಎಂ.ಕ್ಕೆ  ಅವಳ ತಂದೆಯಾದ ಲಕ್ಷ್ಮಣ ತಂದೆ ಶಿವರಾಯ ಮಳಗಿ ಪೂಜಾರಿ ಸಾ;ತಡಕಲ ತಾ;ಆಳಂದ ಜಿ;ಗುಲಬರ್ಗಾ ರವರು ನನ್ನ ಮಗಳು ಉಪಚಾರ ಫಲಕಾರಿಯಾಗದೆ ದಿನಾಂಕ:07-07-2013 ರಂದು 1-40 ಪಿ.ಎಂಕ್ಕೆ ಮೃತ ಪಟ್ಟಿರುತ್ತಾಳೆ  ಅಂತಾ ಹೇಳಿಕೆ ಸಾರಂಶದ ಮೇಲಿಂದ ಪ್ರಕರಣದಲ್ಲಿ ಕಲಂ. 306  ಐಪಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ. 

06 July 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ.ದಸ್ತಗೀರ ತಂದೆ ಮಹಮ್ಮದ ಜಾನಿ ಆಳಂದ ವಯ;60 ಜ್ಯಾತಿ;ಮುಸ್ಲಿಂ ಉ;ಒಕ್ಕಲುತನ ಸಾ;ಸುಂಟನೂರ ಗ್ರಾಮ ತಾ;ಆಳಂದ   ಜಿ;ಗುಲಬರ್ಗಾ  ರವರು  ನನ್ನ ಅಣ್ಣನ ಮಗನಾದ ಲಾಲಾ ಸಾಹೇಬ ತಂದೆ ಬಾಬುಸಾಬ ಆಳಂದ ವಯಾ||36 ವರ್ಷ ಸಾ;ಸುಂಟನೂರ ತಾ;ಆಳಂದ  ಇತನು   ದಿನಾಂಕ:05-07-2013 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಗುಲಬರ್ಗಾಕ್ಕೆ ಹೋಗಬೇಕೆಂದು ಸುಂಟನೂರ ಕ್ರಾಸಿ ಹತ್ತಿರ ನಿಂತಾಗ ಆಳಂದ ರೋಡ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ ಚಾಲಕನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಬಂದವನೆ ರೋಡ ಬದಿಗೆ ನಿಂತ ಲಾಲಾಸಾಹೇಬ ಇತನಿಗೆ  ಡಿಕ್ಕಿ ಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ಸ್ಥಳದಲ್ಲಿಯೇ ಮೃತ ಪಟ್ಟನು, ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.32 ಎಫ್. 947 ನೆದ್ದು ಇದ್ದು ಅದರ ಚಾಲಕನ ಹೆಸರು ಸಿದ್ದರಾಮ  ಅಂತಾ ತಿಳಿದಿರುತ್ತದೆ ಅಂತಾ ಶ್ರೀ.ದಸ್ತಗೀರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 334/2013 ಕಲಂ.279,304(ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:05/07/2013 ರಂದು ಮಧ್ಯಾಹ್ನಬಸವರಾಜ ತಂದೆ ಶಿವಶರಣಪ್ಪ,ಗುಂಡಪ್ಪಾ ತಂದೆಶಂಕ್ರೆಪ್ಪ,ಶರಣಪ್ಪ@ಶ್ಯಾಣು ಸಾ:ಹೊನಗುಂಟಿ,ಶಾಣು ಸಾ:ಗಂವಾರ ಹಾ:ವ:ಶಾಂತನಗರ,)ಶಿವಲೀಲಾ ಗಂಡ ಶಿವಶರಣಪ್ಪ ರವರೆಲ್ಲರೂ ಕೈಯಲ್ಲಿ ಬಡಿಗೆಮತ್ತು ಕಲ್ಲುಗಳನ್ನು ತೆಗೆದುಕೊಂಡು ನನ್ನ ತಮ್ಮ ಶಂಕರ & ಮಗ ಶರಣಬಸಪ್ಪ ಇಬ್ಬರನ್ನು ಹಿಡಿದು ಕೊಂಡು ಟ್ಯಾಕ್ಟರನಿಂದಹೊಲದಲ್ಲಿ ನೇಗಿಲ ಹೊಡೆಯಬೇಡಿರಿ ಅಂತಾ ತಕರಾರುಮಾಡಿನನ್ನ ತಮ್ಮ ಶಂಕರ & ಮಗ ಶರಣಬಸಪ್ಪ ನನ್ನನ್ನು ಬಿಡಿಸಲುಬಂದಾಗ ಅವರಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದಕಟ್ಟಿಗೆಯಿಂದ ಹೊಡೆದಿರುತ್ತಾರೆ.  ಸದರಿಯವರು ಹೊಡೆದರಿಂದ ನನಗೆಬಾಯಿಗೆ ರಕ್ತಗಾಯ & ಮುಂದಿನ  ಹಲ್ಲುಗಳು ಅಲುಗಾಡುತ್ತಿವೆ ಮತ್ತು ಒಳಪೆಟ್ಟಾಗಿರುತ್ತದೆ ಅಂತಾ ಶ್ರೀ ಶಿವಲಿಂಗಪ್ಪಾ ತಂದೆ ಪಂಪಣ್ಣಾ ತಿಪ್ಪನವರ ಸಾ:ಹಳೆ ಶಹಾಬಾದ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 133/2013 ಕಲಂ:504,506,147,148,149,323,324,325 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಬಸವರಾಜ ತಂದೆ ಶಿವಶರಣಪ್ಪ ತಿಪ್ಪನವರ ಸಾ:ಭಂಕೂರ ರವರು ನಾನು ದಿನಾಂಕ:05/03/2013 ರಂದು ಮಧ್ಯಾಹ್ನ ಹಳೆ ಶಹಾಬಾದದ ಹನುಮಾನ ಗುಡಿಯ ಹತ್ತಿರ  ಇರುವಾಗ ಶಿವಲಿಂಗಪ್ಪ, ಅಂಜನಾದೇವಿ, ದ್ರೌಪತಿ, ವಿದ್ಯಾವತಿ, ಶಂಕರ, ಮತ್ತು ಶರಣಬಸಪ್ಪಾ ಇವರುಗಳು ಬಂದು ನಮ್ಮ ಹೊಲದಲ್ಲಿ ಟ್ರಾಕ್ಟರನಿಂದ ನೇಗಿಲು ಹೊಡೆಯುವದನ್ನು ಏಕೆ ನಿಲ್ಲಿಸಿದ್ದು ಅಂತಾಅವಾಚ್ಯವಾಗಿ ಬೈದು ಕಟ್ಟಿಗೆಯಿಂದ, ಕಲ್ಲಿನಿಂದ, ಕೈಯಿಂದ ಹೊಡೆದರು ಮತ್ತು ಅಂಜನಾದೇವಿ, ದ್ರೌಪತಿ ಮತ್ತು ವಿದ್ಯಾವತಿ ಕೂಡಿಕೊಂಡು ನಮ್ಮ ತಾಯಿಗೆ ಅವಾಚ್ಯವಾಗಿ ಬೈದು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2013 ಕಲಂ:147,323,324,504 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:05/07/2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಭೀಮಾಶಂಕರ ಕಾಂಬಳೆ ಅವರಿಗೆ ನಾನು ಕೊಟ್ಟಂತಹ 2 ತೊಲೆ ಬಂಗಾರ ಹಾಗೂ 80,000/-ರೂಪಾಯಿಗಳು ಕೇಳಲು ಹೋದಾಗ ಭೀಮಾಶಂಕರನ ಅಣ್ಣ ವಸಂತ ಕಾಂಬಳೆ ಇತನು ಅವಾಚ್ಯವಾಗಿ ಬೈದು ಮಾನಭಂಗ ಮಾಡಲು ಪ್ರಯತ್ನಿಸಿದಾಗ ನಾನು ಚಿರಾಡುತ್ತಿದ್ದಾಗ ಮನೆಯಲ್ಲಿದ್ದ ನಾಗಮ್ಮಾ ಕಾಂಬಳೆ, ಮಾದೇವಿ ಕಾಂಬಳೆ ರವರು ಬೆದರಿಕೆ ಹಾಕಿ ಕೈಯಿಂದ ಹೊಡೆದಿರುತ್ತಾರೆ ಅಂತಾ ಶ್ರೀ ಮರೇಮ್ಮಾ ಗಂಡ ದೇವಪುತ್ರ ಸೋಮನ ಸಾ:ಮಿಲ್ಲತ ನಗರ ಶಹಾಬಾದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಗುನ್ನೆ ನಂ:135/2013 ಕಲಂ:323,354,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:05/07/2013 ರಂದು ಸಾಯಂಕಾಲ6.00 ಗಂಟೆ ಸುಮಾರಿಗೆ ನಮ್ಮ ಮನೆಯ ಎದರುಗಡೆ ನಮ್ಮ ತಮ್ಮ ಇಸ್ಮಾಯಿಲ್‌ ಇತನಿಗೆ ನಮ್ಮ ಕಾಕಂದಿರರಾದ ಲಾಲಬಾ ತಂದೆ ಮೋದಿನಸಾಬ,ಅಜೀಜ ತಂದೆ ಮೋದಿನಸಾಬ ಕೂಡಿ ವಿನಾಃಕಾರಣ ಜಗಳ ತೆಗೆಯುತ್ತಿದ್ದಾಗ ನಾನು ಹೋಗಿ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ನನಗೆ ಮತ್ತು ನನ್ನ ತಮ್ಮ ಇಸ್ಮಾಯಿಲ್‌ಗೆ ಹೊಡೆದು ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಇಬ್ರಾಹಿಂ ತಂದೆ ಅಬ್ದುಲ ನಬಿ ಸಾ:ದೇವನ ತೆಗನೂರ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:136/2013 ಕಲಂ: 324,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:05/07/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ ತಂದೆ ದ್ಯಾವಣ್ಣಾ ಕೂಡಿ ನಮ್ಮ ಮನೆಯ ಎದರುಗಡೆ ಹೋಗುತ್ತಿರುವಾಗ ನಮ್ಮ ಅಣ್ಣ  ಅಬ್ದುಲ ಸಾಬ ಮತ್ತು ಆತನ ಮಕ್ಕಳಾದ  ಇಬ್ರಾಹಿಂ, ಇಸ್ಮಾಯಿಲ್‌,ಮೋದಿನಸಾಬ,ವಾಹೀದ ರವರೆಲ್ಲರೂ ಕೂಡಿಕೊಂಡು ಸದರಿ ಹೊಲ ನನಗೆ ಮತ್ತು ಅಜೀಜ್‌ ಇಬ್ಬರಿಗೂ ಸಮನಾಗಿ ಹಂಚು ನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ, ಕೈಯಿಂದ ಹೊಡೆದರು 8 ಎಕರೆ ಹೊಲದಲ್ಲಿ ಅರ್ಧ ಹೊಲ ನಮ್ಮ ಹೆಸರಿಗೆ ಮಾಡದಿದ್ದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಶ್ರೀ ಲಾಲ ಅಹ್ಮದ ತಂದೆ ಮೋದಿನಸಾಬ ಕೊಟನೂರ ಸಾ:ದೇವನತೆಗನೂರ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 137/2013 ಕಲಂ:143,147,323,324,504,506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

05 July 2013

GULBARGA DISTRICT REPORTED CRIMES

ಎತ್ತುಗಳು ಕಳ್ಳತನ ಪ್ರಕರಣ:
ನೆಲೋಗಿ  ಪೊಲೀಸ್ ಠಾಣೆ: ಬಿಲ್ಲಾಡ ಗ್ರಾಮದ ಶ್ರೀ ಮಲ್ಲೇಶಪ್ಪ ತಂದೆ ಸಿದ್ರಾಮಪ್ಪ ಪಾಟೀಲ ರವರು ನಮ್ಮ ಹೊಲ ಸರ್ವೆ ನಂ 23 ರಲ್ಲಿ ದಿನಾಂಕ:01/07/2013 ರಂದು  ಎರಡು ಬಿಳಿಯ ಬಣ್ಣದ ಎತ್ತುಗಳು ಇದ್ದು ಯಾರೋ ಕಳ್ಳರು ರಾತ್ರಿಯ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನಮ್ಮ ಆಳು ಮಗನಾದ ಶ್ರೀ ಪದ್ಮಣ್ಣ ಪೂಜಾರಿ ಸಾ:ಬಂದೇನಮಡವ ಹಾ:ವ:ಬಿಲ್ಲಾಡ ಇತನು ತಿಳಿಸಿದನು. ನಮ್ಮ ಆಳು ಮಗ ಹೊಲದಲ್ಲಿ ಮಲಗಿಕೊಂಡಿದ್ದಾಗ ಜೋಡಿ ಎತ್ತುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:102/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶರಣಪ್ಪ ತಂದೆ ಮಾರುತಿ ಕಟ್ಟಿಮನಿ ಸಾ: ಹಳ್ಳಿಖೇಡ  (ಕೆ) ತಾ: ಹುಮನಾಬಾದ ಜಿ: ಬೀದರ ರವರು ದಿನಾಂಕ:04/07/2013 ರಂದು ಮುಂಜಾನೆ ನಾನು ಮತ್ತು ಸುರೇಶ ತಂದೆ ದೇವಿಂದ್ರಪ್ಪ ತಡೋಳಕರ ಸಾ: ಕಲ್ಲೂರ ಇಬ್ಬರೂ ಕೂಡಿಕೊಂಡು ಟಾಟಾ ಎಸಿಇ ವಾಹನ ನಂಬರ ಕೆಎ 39/7694 ನೇದ್ದನ್ನು ತೆಗೆದುಕೊಂಡು ಹುಮನಾಬಾದಕ್ಕೆ ಆಲಗೂಡ ಕ್ರಾಸ ಹತ್ತಿರ ಹೋಗುತ್ತಿರುವಾಗ ಎಸಿಇ ವಾಹನ ಚಾಲಕ ತನ್ನ  ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿ ಮುಂದೆ ಹೊರಟ ರೋಡ ರೂಲರಗೆ ಡಿಕ್ಕಿ ಪಡೆಯಿಸಿದ್ದರಿಂದ ವಾಹನದಲ್ಲಿದ್ದ ನನಗೆ ಆತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ರೋಡ ರೂಲರ ಚಾಲಕನು ತನ್ನ ವಾಹನವನ್ನು ರಸ್ತೆಯ ಮೇಲೆ ಸಂಚಾರಕ್ಕೆ ಅಡ ತಡೆಯಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗುತ್ತಾ ಯಾವುದೇ ಮುನ್ಸೂಚನೆಯನ್ನು ನೀಡದ ಒಮ್ಮೇಲೆ ತನ್ನ ವಾಹವನ್ನು ನಿಲ್ಲಿಸಿದ್ದರಿಂದ ಟಾಟಾ ಎಸಿಇ ವಾಹನದ ಚಾಲಕ ಹಿಂದೆ ಡಿಕ್ಕಿ ಹೊಡೆದಿದ್ದರಿಂದ ಗಾಯಗಳಾಗಿರುತ್ತವೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:333/13 ಕಲಂ 279,338,283 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿರುತ್ತಾರೆ.