POLICE BHAVAN KALABURAGI

POLICE BHAVAN KALABURAGI

25 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ,ಸಿದ್ದು ತಂದೆ ರಾಜಶೇಖರ ಪಾಟೀಲ್ ಸಾ:ಹೋಳಿ ಮೈದಾನ ತಾ:ಸೇಡಂ ರವರು ನಾನು ಮನೆಯಲ್ಲಿದ್ದಾಗ ದಿ:24-04-2013 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ನಮ್ಮ ತಾತನಾದ ನಾಗಣ್ಣ ತಂದೆ ಸಂಗಪ್ಪ ಪರಗಿ ಇವರು ಲೈಟಿನ ಬಿಲ್ ಕಟ್ಟಲು ಕೆ.ಇ.ಬಿ ಆಫೀಸಗೆ ಹೋದರು ನಾನು ನಮ್ಮ ಕಿರಾಣ ಅಂಗಡಿಗೆ ಹೋಗಿ ಅಂಗಡಿ ತೆರೆಯುತ್ತಿದ್ದಾಗ, ರೇವಣಸಿದ್ದಪ್ಪ ಅನ್ನವವರು ಫೋನ ಮುಖಾಂತರ ನಿಮ್ಮ ತಾತಾ ನಾಗಣ್ಣ ಇವರಿಗೆ ಕೆ.ಇ.ಬಿ ಆಫೀಸ್ ಎದುರುಗಡೆ ಮಹೀಂದ್ರ ಕಂಪನಿಯ ಹೊಸ ಟಂ-ಟಂ ನೇದ್ದರ ಚಾಲಕನು ಡಿಕ್ಕಿ ಪಡಿಸಿದ್ದರಿಂದ ಅವರ ತಲೆಯ ಹಿಂಬಾಗಕ್ಕೆ, ಎಡಗಣ್ಣಿನ ಹುಬ್ಬಿಗೆ ಹಾಗೂ ಮೂಗಿಗೆ ರಕ್ತಗಾಯವಾಗಿದ್ದಲ್ಲದೇ, ಬಲಕಿವಿಯಿಂದ ರಕ್ತ ಬರುತ್ತಿದೆ ಅಂತ ತಿಳಿಸಿದನು. ನಾನು ಹೋಗಿ ನೋಡಲು ನನ್ನ ತಾತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವಾಹನದ ಚಾಲಕನಾದ ಶ್ರೀನಿವಾಸರೆಡ್ಡಿ ತಂದೆ ವೆಂಕಟರೆಡ್ಡಿ ತುಳೇರ ಸಾ|| ಸಣ್ಣಅಗಸಿ ಸೇಡಂ ಇತನು ಉಪಚಾರ ಕುರಿತು ಅದೇ ವಾಹನದಲ್ಲಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆ. ಸಾಯಂಕಾಂಲ 4-00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:99/2013 ಕಲಂ-279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಕಲಂ, 304 (ಎ) ಅಳವಡಿಸಿಕೊಂಡಿರುತ್ತಾರೆ.
ದರೋಡೆ ಮಾಡಲು ಪ್ರಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ನಸುಕಿನ ಜಾವ 4-30 ಗಂಟೆ ಸುಮಾರಿಗೆ ನಮ್ಮ ಠಾಣಾ ಸರಹದ್ದಿನ ಕೆರೆ ಭೋಸಗಾ ಬಸ್ಸ ಸ್ಟಾಂಡ ಹಿಂದುಗಡೆ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು  ಮಾರಕ ಅಸ್ತ್ರಗಳು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ಜನರಿಗೆ ಮತ್ತು ವಾಹನಗಳಿಗೆ ನಿಲ್ಲಿಸಿ ದರೋಡೆ ಮಾಡಲು ನಿಂತಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದ ಮೇರೆಗೆ ಪಿ.ಎಸ.ಐ ಆನಂದರಾವ ರವರು  ಮತ್ತು ಸಿಬ್ಬಂದಿಯವರು ಹೋಗಿ ದರೋಡೆ ಮಾಡಲು  ಯತ್ನಿಸುತ್ತಿರುವ ಆರೋಪಿಗಳಾದ  1) ಶೇಖ್ಯಾ ತಂದೆ ಹಣಮಂತ ಖೇರತಿ ವಯಾ|| 24 ಸಾ|| ರಾಮತಿರ್ಥ  ಹತ್ತಿರ ಗುಲಬರ್ಗಾ, ಸಂಗಡ 4 ಜನರು  ವಶಕ್ಕೆ ತೆಗೆದುಕೊಂಡು ಠಾಣೆ ಗುನ್ನೆ ನಂ:213/2013 ಕಲಂ,399,402 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಹೀರಾಪೂರ ಸೀಮೆಯಲ್ಲಿ  ಬರುವ ಬಾಬುಮಿಯ್ಯಾ ತೋಟದ ಹೊಲದಲ್ಲಿ ಸಮೀಪ ಕೆಲವು ಜನರು ಇಸ್ಪೀಟ ಜೂಜಾಟ  ಆಡುತ್ತಿದ್ದಾರೆ  ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರಾದ ಆನಂದರಾವ ರವರು ಮತ್ತು ಅವರು ಸಿಬ್ಬಂದಿಯವರು ದಾಳಿ ಮಾಡಿ ನವಾಬ ಅಲಿ ತಂದೆ ಅಮೀರ ಅಲಿ ವ:38 ವರ್ಷ ಉ: ಚಹಾ ಪತ್ತಿ ವ್ಯಾಪರ ಸಾ: ಎಂ.ಎಸ್.ಕೆ.ಮಿಲ್ಲ ಜಿಲಾನಾಬಾದ ಗುಲಬರ್ಗಾ  2) ಕಲ್ಯಾಣರಾವ ತಂದೆ ದೇವಿಂದ್ರಪ್ಪ ಹೀರಾಪೂರ ವ:53 ವರ್ಷ ಉ: ವಾಚಮ್ಯಾನ ಕೆಲಸ  ಸಾ: ಹೀರಾಪೂರ ಗ್ರಾಮ   3) ಸಾಬೀರ ಹುಸೇನ ತಂದೆ ಮಹೆಬೂಬಸಾಬ ವ:35 ವರ್ಷ ಉ: ಸೆಂಟ್ರಿಂಗ ಕೆಲಸ  ಸಾ: ಎಂ.ಎಸ್.ಕೆ.ಮಿಲ್ಲ ಗುಲಬರ್ಗಾ  4) ನಿಜಾಮೋದ್ದಿನ ತಂದೆ ನಸಿರೋದ್ದಿನ ವ:45 ವರ್ಷ ಉ:ಲಾರಿ ಮೆಕ್ಯಾನಿಕ ಸಾ:ಬಿಲಾಲಬಾದ ಗುಲಬರ್ಗಾ  5) ಮಹ್ಮದ ಖಾಜಾ ತಂದೆ ಇಸ್ಮಾಯಿಲ್  ಮೈದರಗಿ ವ:23 ವರ್ಷ ಉ: ಆಟೋ ಚಾಲಕ ಸಾ: ಹೀರಾಪೂರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4,580/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡ ಮೇರೆಗೆ ಠಾಣೆ ಗುನ್ನೆ ನಂ:214/2013 ಕಲಂ, 87 ಕ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ, 

24 April 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಮಾಡಿದ ಬಗ್ಗೆ: :
ಅಶೋಕ ನಗರ ಪೊಲೀಸ್ ಠಾಣೆ:ಶ್ರೀಮತಿ ಪ್ರತಿಭಾ ಗಂಡ ಅಶೋಕ ತಾಳಿಕೋಟಿ ಸಾ|| ಎಸ್.ಬಿ.ಎಚ್ ಕಾಲೋನಿ ಗೋದುತಾಯಿ ನಗರ ಗುಲಬರ್ಗಾರವರು ನಾನು ಮತ್ತು ನನ್ನ ಅತ್ತೆ ಹಾಗೂ ದೊಡ್ಡ ಅತ್ತೆ ಶಾಂತಿಬಾಯಿ ಯಾದಗಿರಿ ಮೂರು ಜನರು ದಿನಾಂಕ:23/04/2013 ರಂದು  ನಮ್ಮ ಸಂಬಂಧಿಕರ ಮಗುವಿನ ತೊಟ್ಟಿಲ್  ಕಾರ್ಯಕ್ರಮ ಮುಗಿಸಿಕೊಂಡು ಗಂಜದಿಂದ ನೃಪತುಂಗ ನಗರ ಸಾರಿಗೆ ಬಸ್ಸಿನಲ್ಲಿ ಕುಳಿತು ಕೊಠಾರಿ ಭವನ ಹತ್ತಿರ ಇಳಿದು ನಡೆದುಕೊಂಡು ಮದರ ತೆರಿಸಾ ಶಾಲೆಯ ಕ್ರಾಸಿನ ಹತ್ತಿರ ಹೋಗುತ್ತಿರುವಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಎದುರುಗಡೆಯಿಂದ ಒಂದು ಕಪ್ಪು ಬಣ್ಣದ ಮೋಟಾರ ಸೈಕಲ್ ಮೇಲೆ ಇಬ್ಬರೂ ಸವಾರರು ಕುಳಿತುಕೊಂಡು ಬಂದವರೇ ಒಮ್ಮೇಲೆ ನನ್ನ ಮೈಮೇಲೆ ಬಂದು ಮೋಟಾರ ಸೈಕಲ್ ಹಿಂದೆ ಕುಳಿತ ವ್ಯಕ್ತಿಯು ನನ್ನ ಕೊರಳಿಗೆ ಕೈಹಾಕಿ ಬಂಗಾರದ ಮಂಗಳಸೂತ್ರ ಸರ್ ಕಿತ್ತುಕೊಂಡು ಹೋಗಿದ್ದು ಕಿತ್ತುಕೊಳ್ಳುವಾಗ ನಾನು ಮಂಗಳಸೂತ್ರ ಪದಕ ಹಿಡಿದಿದ್ದಕ್ಕೆ 1 ತೊಲೆ ಪದಕ ಮಾತ್ರ ಕೈಯಲ್ಲಿ ಉಳಿದಿದ್ದು ಇನ್ನೋಳಿದ 3 ತೊಲೆಯ ಬಂಗಾರದ ಮಂಗಳಸೂತ್ರ ಸರ್ ಕಿತ್ತುಕೊಂಡು ಓಡಿ ಹೋಗಿರುತ್ತಾರೆ. ಅದರ ಮೌಲ್ಯ 75,000/- ರೂಪಾಯಿಗಳಾಗುತ್ತದೆ. ಮಂಗಳಸೂತ್ರ ಕಿತ್ತುಕೊಂಡು ಹೋಗಿದ್ದ ಹಿಂದೆ ಕುಳಿತ ವ್ಯಕ್ತಿಯು ಬ್ಲೂ ಜಿನ್ಸ ಪ್ಯಾಂಟ, ಎಲ್ಲೋ ಚಕ್ಸ ಟಿ-ಶರ್ಟ ಮತ್ತು ಕಣ್ಣಿಗೆ ಚಸ್ಮಾ, ಕ್ಯಾಪ್ ಹಾಕಿಕೊಂಡಿದ್ದು ಆತನಿಗೆ ನೋಡಿದರೆ ಗುರುತಿಸುತ್ತೆನೆ. ಅಂತಾ ಶ್ರೀಮತಿ, ಪ್ರತಿಭಾ ಗಂಡ ಅಶೋಕ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:70/2013  ಕಲಂ.392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ: ದಿನಾಂಕ:20/04/2013 ರಂದು ರಾತ್ರಿ  9.00 ಗಂಟೆಯ ಸುಮಾರಿಗೆ ನಾನು ಹಾಗೂ ಗಂಡ ಮನೆಯಲ್ಲಿ ಮಾತನಾಡುತ್ತ  ಕುಳಿತಿದ್ದಾಗ ನಮ್ಮ ಅಣ್ಣ ತಮ್ಮಕೀಯ ಮಲ್ಲಣ್ಣ ತಂದೆ ರುದ್ರಗೌಡ ಹಾಗೂ ಬಸಲಿಂಗಪ್ಪ ತಂದೆ ರುದ್ರಗೌಡ ಬಂದು ಮನೆಯ ಭಾಗಿಲ ಬಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಮಲ್ಲಪ್ಪ ಮತ್ತು ಬಸಲಿಂಗಪ್ಪನು ಕೇಳಿ ಜಗಳ ಬಿಡಿಸಲು ಬಂದ  ನನ್ನ ಗಂಡನ ಬೆನ್ನಿಗೆ ಮತ್ತು ಕೈಗೆ ಬಡಿಗೆಯಿಂದ ಹೋಡೆದಿರುತ್ತಾರೆ ಅಂತಾ ಶ್ರೀಮತಿ  ಲಲೀತಾಬಾಯಿ ಗಂಡ ಶಿವಶರಣಪ್ಪ ಪೊಲೀಸ್ ಪಾಟೀಲ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ:63/2013 ಕಲಂ 448,323,324,354,504.506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಬಾಷಾ ತಂದೆ ಮಕ್ಸೂದ @ ಮಲಿಕ್ ಮುಜಾವರ ಸಾ; ನೆಲ್ಲೂರ ತಾ:ಆಳಂದ ಜಿ;ಗುಲಬರ್ಗಾ ರವರು ದಿನಾಂಕ:22-04-2013 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಜವಳಿ ದಾಬಾದ ಎದುರುಗಡೆ  ನಾನು ಮತ್ತು ನನ್ನ ತಂಗಿಯ ಗಂಡ ಜಾವೇದ ಇಬ್ಬರು ಕೂಡಿಕೊಂಡು ನಮ್ಮ ಬಜಾಜ ಪಲ್ಸರ್  ಮೋಟಾರ ಸೈಕಲ್ ನಂ.ಕೆಎ.32 ಡಬ್ಲೂ.7225 ನೇದ್ದರ ಮೇಲೆ ನೆಲ್ಲೂರದಿಂದ ಪಟ್ಟಣ ಗ್ರಾಮಕ್ಕೆ ಬರುತ್ತಿರುವಾಗ  ನಮ್ಮ ಹಿಂದಿನಿಂದ ಕಾರ ನಂ.ಎಂ.ಹೆಚ-03 ಎಎಫ್. 4060 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೋಡೆದು ಕಾರ ಅಲ್ಲಿಯೇ ನಿಲ್ಲಿಸಿ ಓಡಿಹೋದನು. ನನಗೆ ತಲೆಗೆ, ಬಲಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು  ಮತ್ತು ಮೋಟಾರ ಸೈಕಲ್ ನಡೆಯಿಸುತಿದ್ದ ಜಾವೇದ ತಂದೆ ಬಕ್ಸೊದ್ದಿನ  ಇತನಿಗೆ  ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ,ಕಿವಿಯಿಂದ, ಮೂಗಿನಿಂದ, ಬಾಯಿಂದ ರಕ್ತಸ್ರಾವವಾಗುತ್ತಿತ್ತು. 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲಾಗಿದ್ದು, ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಜಾವೇದ ಇತನು ಉಪಚಾಕ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:210/2013 ಕಲಂ.279,338, 304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ನಂತರ 

23 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 22-04-2013 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಕೆರಿಬೋಸಗಾ ಕ್ರಾಸ ಹತ್ತಿರ  ಆಟೋರಿಕ್ಷಾ ನಂ.ಕೆಎ.32 ಬಿ-6843 ನೇದ್ದರಲ್ಲಿ  ಮಹಾಂತೇಶ ತಂದೆ ಭೀಮರಾಯ ಪೂಜಾರಿ ವಯಾ||14 ವರ್ಷ , 2) ನವನೀತ ತಂದೆ ಅಂಬರಾಯ ಪೂಜಾರಿ ವಯಾ||6 ವರ್ಷ ಇವರನ್ನು ಚಾಲಕನಾದ ಬಸವರಾಜ ತಂದೆ ಪರಮೇಶ್ವರ ನಾಟೀಕಾರ ಇತನು ಭೀಮಳ್ಳಿ ಗ್ರಾಮದಿಂದ ಕೆರಿಬೋಸಗಾಕ್ಕೆ ಕರೆದುಕೊಂಡು ಬರುತ್ತಿದ್ದು,  ಆಟೋರಿಕ್ಷಾ ಚಾಲಕ ಅತೀವೇಗವಾಗಿ ಚಲಾಯಿಸುತ್ತಿರುವಾಗ ಗುಲಬರ್ಗಾ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ.ಕೆ.ಎ.32 ಎಫ್. 1661 ನೇದ್ದರ ಚಾಲಕನು ಸಹ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದ್ದರಿಂದ ಎರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದರಿಂದ ಆಟೋ ರಿಕ್ಷಾದಲ್ಲಿ ಕುಳಿತಿದ್ದ ಭೀಮರಾಯ ಪೂಜಾರಿ ಮತ್ತು 2) ನವನೀತ ತಂದೆ ಅಂಬರಾಯ ಪೂಜಾರಿ ಇವರುಗಳಿಗೆ ತಲೆಗೆ ,ಹಣೆಗೆ, ಭಾರಿಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ.  ಆಟೋ ಚಾಲಕ ಬಸವರಾಜ ನಾಟೀಕಾರ ಇತನಿಗೆ ಭಾರಿ ಗುಪ್ತಗಾಯಗಳಾಗಿದ್ದು, ಬಸ್ಸ ಚಾಲಕ ಓಡಿಹೋಗಿರುತ್ತಾನೆ ಅಂತಾ ಶ್ರೀ ಅಂಬರಾಯ ತಂದೆ ಶಿವರಾಯ ಪೂಜಾರಿ ಉ;ಆಟೋ ಚಾಲಕ ಸಾ;ಕೆರಿಬೋಸಗಾ ತಾ;ಜಿ;ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ:208/2013 ಕಲಂ.279,338,304 (ಎ) ಐಪಿಸಿ. ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಅನೀಲ ತಂದೆ ವಿಠಲ ಶಹಾಬಾದ   ಸಾ|| ಕುಮಸಿ ತಾ ||ಗುಲಬರ್ಗಾರವರು ನಾನು ದಿನಾಂಕ:22-04-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಲಕ್ಷ್ಮಿನಿವಾಸ ಕಾಂಪ್ಲೆಕ್ಸ ಎದುರುಗಡೆ ರೋಡಿನ ಮೇಲೆ ಹೊರಟಾಗ ಲಾರಿ ನಂಬರ ಕೆಎ-32 ಎ-5943 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಜ ಬಸ್ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಮುಂದೆ ಮೋಟಾರ ಸೈಕಲ ನಂಬರ ಕೆಎ-36 ಎಸ್-7090 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸುರೇಶ ತಂದೆ ಶರಣಪ್ಪಾ ಜಮಗಾ ಸಾ||ಕುಮಸಿ ಇವರಿಗೆ ಭಾರಿಗಾಯಗಳಾಗಿರುತ್ತವೆ. ಲಾರಿ ಚಾಲಕ ತನ್ನ ಲಾರಿಯನ್ನು  ಅಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:ದಿನಾಂಕ: 22/04/2013 ರಂದು ರಾತ್ರಿ 10-25 ಗಂಟೆ ಸುಮಾರಿಗೆ  ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಾಯನಗಲ್ಲಿಗೆ ಬಂದಾಗ ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಕೆ.ಜೆ.ಪಿ ಪಕ್ಷದ  ಅಭ್ಯರ್ಥಿಯಾದ ಶ್ರೀ ಉಸ್ತಾದ ನಾಸೀರ ಹುಸೇನ ರವರು ಯಾವದೇ ಪರವಾನಿಗೆ ಪಡೆಯದೆ, ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಚುನಾವಣೆ ಪ್ರಚಾರದ ಸಮಯ ಮುಗಿದ ಮೇಲೆ ಸಹ ಸಭೆಯನ್ನು ನಡೆಸಿದ್ದರಿಂದ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಅಂತಾ ಅನೀಲಕುಮಾರ ಪ್ಲಾಯಿಂಗ್ ಸ್ವ್ಕಾಡ ಆಪೀಸರ್  ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 30/2013 ಕಲಂ, 171, (ಹೆಚ) 1951 ಆರ.ಪಿ.ಆಕ್ಟ ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.