POLICE BHAVAN KALABURAGI

POLICE BHAVAN KALABURAGI

11 February 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಹರಿಶ್ಚಂದ್ರ  ತಂದೆ ಶಂಕರ ಚವ್ಹಾಣ  ಸಾ||ಭೂಸನೂರ ತಾಂಡಾ ತಾ||ಆಳಂದ ರವರು ನಾನು ಮತ್ತು ನನ್ನ ಹೆಂಡತಿ ದುಮಕಾಬಾಯಿ ದಿನಾಂಕ:10-02-2013 ರಂದು ಮುಂಜಾನೆ  10-00 ಗಂಟೆಗೆ ಮನೆಯಲ್ಲಿದ್ದಾಗ ಮಲ್ಲಿನಾಥ ತಂದೆ ರಾಮದಾಸ , ವಾಸುದೇವ ತಂದೆ ರಾಮದಾಸ   ಇಬ್ಬರೂ ನನ್ನ ಮನೆಯ ಒಳಗೆ ಬಂದು ಅವಾಚ್ಯವಾಗಿ  ಬೈದು ಜಗದೇವಿ  ಇವಳು ಕರೆಂಟ ಹಿಡಿದು ಸತ್ತಿರುವ ವಿಷಯದ ಸಂಬಂ  ನಿನಾಗಲಿ  ಮತ್ತು  ನಿನ್ನ ಹೆಂಡತಿಯಾಗಲಿ  ಸಾಕ್ಷಿ ಹೇಳಿದ್ದರೆ ? ನೋಡು ಬೇದಿರಿಕೆ  ಕೈಯಿಂದ  ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.12/2013 ಕಲಂ 448, 323, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು  ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ದೇವಲಗಾಣಗಾಪೂರ ಪೊಲೀಸ್ ಠಾಣೆ:ದಿನಾಂಕ:10-02-2013 ರಂದು 00:30 ಗಂಟೆಗೆ ಸಂಗಾಪುರ ಗ್ರಾಮದ ಸರಕಾರಿ  ಪ್ರಾಥಮಿಕ ಶಾಲೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 5 ಜನರು ಇಸ್ಪೇಟ ಆಡುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಪ್ರದೀಪ ಕೊಳ್ಳ ದೇವಲಗಾಣಗಾಪುರ ಠಾಣೆ ಮತ್ತು ಸಿಬ್ಬಿಂದಿಯವರು ಕೂಡಿಕೊಂಡು ದಾಳಿ ಮಾಡಿ ವಿಠ್ಠಲ ತಂದೆ ಸಿದ್ದಪ್ಪ ವಾಳಿ ಮತ್ತು ಇನ್ನೂ 4 ಜನರರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 16,446-00 ರೂ ಮತ್ತು ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:15/2013 87 ಕೆಪಿ ಆಕ್ಟ್  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.   
ಅಪಘಾತ ಪ್ರಕರಣ:
ಹೆಚ್ಚುವರಿ ಪೊಲೀಸ್ ಠಾಣೆ:ಶ್ರೀ ಶೇರು ಖಾನ  ತಂದೆ ಅಬ್ಬಾಸ ಖಾನ  ಸಾ: ಹುದಾ ಮಜೀದ ಹತ್ತಿರ ರಹಿಮತ ನಗರ  ಗುಲಬರ್ಗಾ ರವರು   ನಾನು  ದಿನಾಂಕ:09-02-2013 ರಂದು   ರಾತ್ರಿ 11=00 ಗಂಟೆಗೆ   ಎಸ್.ವಿ.ಪಿ.ಸರ್ಕಲ್  ದಿಂದ ರೇಲ್ವೆ ಸ್ಟೇಷನ ಕಡೆಗೆ ಮನೆಗೆ ಹೋಗುವ ನಡೆದುಕೊಂಡು ಹೋಗುತ್ತಿದ್ದಾಗ ಬಸವ ಭವನ ಖಾನಾವಳಿ ಹತ್ತಿರ ಅಟೋರೀಕ್ಷಾ ನಂಬರ ಕೆಎ-32 ಬಿ-6285 ರ ಚಾಲಕನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ   ಠಾಣೆ ಗುನ್ನೆ ನಂ:11/2013 ಕಲಂ: 279,338  ಐ.ಪಿ.ಸಿ. ಸಂ 187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸಿಲೆಂಡರ್ ವಶ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ:ದಿನಾಂಕ 08/02/2013 ರಂದು ಮಧ್ಯಾಹ್ನ ಶ್ರೀಮಂತ ಇಲ್ಲಾಳ ಪಿ.ಎಸ.ಐ (ಕಾ.ಸು) ಎಂ.ಬಿ ನಗರ ಪೊಲೀಸ ಠಾಣೆಯವರು ಅವರ ಪೆಟ್ರೋಲಿಂಗ್ ಕರ್ತವ್ಯಕ್ಕೆ ಹೋಗಿದ್ದಾಗ ಕೆ.ಎನ್.ಝಡ್ ಫಂಕ್ಷನ್ ಹಾಲ್ ಮುಂದುಗಡೆ ಮುಖ್ಯ ರಸ್ತೆಯ ಪಕ್ಕದಲ್ಲಿ 3 ಜನರು ನಿಂತಿದ್ದು, ಅದರಲ್ಲಿ ಒಬ್ಬನು ಸಿಲಿಂಡರ್ ಹಿಡಿದುಕೊಂಡು ನಿಂತಿದ್ದನ್ನು ಕಂಡು ಯಾಕೆ ನಿಂತಿರುತ್ತೀರಿ ಅಂತಾ ವಿಚಾರಿಸಲು ಸಮರ್ಪಕವಾದ ಉತ್ತರ ನೀಡಲಿಲ್ಲ. ಕೃಷ್ಣಯ್ಯ ತಂದೆ ಭೀಮಾಶಂಕರ್ ಗುತ್ತೇದಾರ,ಸಿದ್ದಯ್ಯ ತಂದೆ ಭೀಮಾಶಂಕರ ಗುತ್ತೆದಾರ ಶರಣಬಸಪ್ಪ ತಂದೆ ಭೀಮಶಾ ಗುತ್ತೆದಾರ ಎಲ್ಲರೂ ಸಾ||ಚುಂಗಿ ಗ್ರಾಮ ತಾಃ ಅಕ್ಕಲಕೋಟ್ ಜಿ||ಸೊಲ್ಲಾಪೂರ್ ಅಂತಾ ತಿಳಿದು ಬಂದಿದ್ದು, ಸದರಿಯವರ ಹತ್ತಿರವಿದ್ದ ಸಿಲಿಂಡರ್ ಬಗ್ಗೆ ಯಾವುದೇ ದಾಖಲಾತಿ ತೋರಿಸಲಿಲ್ಲ. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಠಾಣೆ ಗುನ್ನೆ ನಂ:22/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ಹಾಗೂ ಸದರಿಯವರು ಗುಲಬರ್ಗಾ ನಗರ ವ್ಯಾಪ್ತಿಯಲ್ಲಿ ಬರುವ ಆರ್.ಜಿ ನಗರ ಪೊಲೀಸ ಠಾಣೆಯ ಗುನ್ನೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ವೀರಭದ್ರ ತಂದೆ ರಾಮಚಂದ್ರ ಸಾವಳಗಿ ಸಾ:ಕಡಗಂಚಿ ತಾ||ಆಳಂದ ಜಿ||ಗುಲಬರ್ಗಾರವರು ನಾನು ನನ್ನ ತಮ್ಮನೊಂದಿಗೆ ದಿನಾಂಕ:10/2/2013 ರಂದು ಮೋಟಾರ ಸೈಕಲ್ ನಂಬರ ಕೆಎ-32 ಇಎ-1717 ನೇದ್ದರ ಮೇಲೆ ಕಡಗಂಚಿಗೆ ಹೊರಟಾಗ ಸುಂಟನೂರ ಕ್ರಾಸ ಸಮೀಪ ಕಾರ ನಂ ಕೆಎ-05 ಎಮ್‌ಎಪ್‌-2009 ನೇದ್ದರ ಚಾಲಕ ತನ್ನ ಕಾರನ್ನು  ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು  ಡಿಕ್ಕಿ ಪಡಿಸಿ ಕಾರ ಅಲ್ಲಿಯೇ ಬಿಟ್ಟು ಓಡಿ  ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 91/2013 ಕಲಂ, 279, 283, ಸಂಗಡ 187 ಐ.ಎಮ.ವಿ.ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:10/02/2013 ರಂದು ಸಾಯಂಕಾಲ  ಪಟ್ಟಣ್ಣ ಗ್ರಾಮದ ದತ್ತು ಹಂಗರಗಿ ಇವರ ಹೊಲದ ಹಳ್ಳದಲ್ಲಿ ಜೂಜಾಟ ಆಡುತ್ತಿದ್ದ ಭಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ, ಆನಂದರಾವ ಎಸ್‌ ಎನ್‌ ಪಿಎಸ್‌ಐ ಮತ್ತು ಅವರು  ಸಿಬ್ಬಂದಿಯವರು ದಾಳಿ ಮಾಡಿ ನಾಗೇಶ ತಂದೆ ದತ್ತು ಸಾಬಸೂದೆ ಸಾ||ಶಹಾಬಜಾರ ಗುಲಬರ್ಗಾ  ಸಂಗಡ ಇನ್ನೂ 11 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 12330/- ರೂಪಾಯಿಗಳು ಮತ್ತು  ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 92/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

09 February 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಸದಾಶಿವ  ತಂದೆ ವಿಶ್ವನಾಥ ಗಲಿಗಲಿ  ಸಾ: ಮಲ್ಲಿಕಾರ್ಜುನ ಗುಡಿ ಹತ್ತಿರ ಹಿರಾಪೂರ    ಗುಲಬರ್ಗಾರವರು ನಾನು ದಿನಾಂಕ:08-02-2013 ರಂದು  ಮಧ್ಯಾಹ್ನ 1=30 ಗಂಟೆಗೆ   ನನ್ನ ಅಟೋರಿಕ್ಷಾ ನಂಬರ ಕೆಎ-32 ಎ-4784 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಸುಪರ ಮಾರ್ಕೆಟ ಕಡೆಯಿಂದ ರೇಲ್ವೆ ಸ್ಟೇಷನ ಕಡೆಗೆ ಹೋಗುತ್ತಿದ್ದಾಗ ಜಿಲ್ಲಾ ಪಂಚಾಯತ ಕಾರ್ಯಾಲಯದ ಎದುರುಗಡೆ  ಕಾರ ನಂಬರ ಕೆಎ-32 ಟಿ ಎಕ್ಸ-8195 ರ ಚಾಲಕನ್ನು ಜಗತ ಸರ್ಕಲ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಟೋರಿಕ್ಷಾಗೆ ಡಿಕ್ಕಿ ಪಡಿಸಿದನು.  ಅಪಘಾತ ಪಡಿಸಿದ್ದರಿಂದ  ನನಗೆ ಗಾಯಗಳಾಗಿರುತ್ತವೆ. ಅಂತಾ ಸದಾಶಿವ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ   ಠಾಣೆ ಗುನ್ನೆ ನಂ:10/2013 ಕಲಂ: 279, 337  ಐ.ಪಿ.ಸಿ. ಸಂ 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಸುಭಾಷ್‌ ತಂದೆ ಭೀಮಯ್ಯ ಗುತ್ತೇದಾರ್‌‌ ಸಾ: ತಾವರಗೇರಾ ರವರು  ನಾನು ತಹಶೀಲ್ ಆಫೀಸ್ ಗುಲಬರ್ಗಾಕ್ಕೆ ಹೋಗಿ ಕಂದಾಯ ಇಲಾಖೆಯಲ್ಲಿ ವಿಚಾರಣೆ ಮಾಡಿದಾಗ ತಾವರಗೇರಾ ಜಮೀನ ಸರ್ವೆ ನಂ: 2/93 ನೇದ್ದರ ದಾಖಲಾತಿಯಲ್ಲಿ ಮಾಲಿಕತ್ವವನ್ನು ಬದಲಾಯಿಸಲಾಗಿದೆ. ರಾಜೇಂದ್ರ ತಂದೆ ತಿಪ್ಪಯ್ಯ ಗುತ್ತೇದಾರ್‌‌,ಪ್ರಭಾವತಿ ಗಂಡ ರಾಜೇಂದ್ರ ಗುತ್ತೇದಾರ,ಶಿವಶಂಕರ ತಂದೆ ರಾಜೇಂದ್ರ ಗುತ್ತೇದಾರ,ಸುಮಿತ್ರಾಬಾಯಿ ತಂದೆ ರಾಜೇಂದ್ರ ಗುತ್ತೇದಾರ, ಸಾ;ಎಲ್ಲರೂ ತಾವರಗೇರಾ ರವರು ನಂಬಿಕೆ ದ್ರೋಹ ಮಾಡಿರುತ್ತಾರೆ. ಕೇಳಲು ಹೋದಾಗ ನನಗೆ ಬಡಿಗೆಯಿಂದ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 87/2013 ಕಲಂ, 323, 324, 504, 506, 403, 406, 417, 419, 489 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ದಿನಾಂಕ 08-02-13 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮೃತ ಮಾಳಿಂಗರಾಯ ಮತ್ತು ರಾಜೇಂದ್ರ ಇವರಿಬ್ಬರು ಬಜಾಜ ಡಿಸ್ಕವರಿ ಕೆಎ-32 ಇಬಿ 1653 ಮೇಲೆ ಬನ್ನೂರದಿಂದ ಗುಲಬರ್ಗಾಕ್ಕೆ ಜೆ.ಸಿ.ಬಿ. ಸಾಮಾನು ಮತ್ತು ಡಿಜೇಲ ಖರೀದಿ ಮಾಡಿಕೊಂಡು ಮರಳಿ ಬನ್ನೂರ ಗ್ರಾಮಕ್ಕೆ ಮೋಟಾರ ಸೈಕಲ  ಮೇಲೆ  ಬರುತ್ತಿರುವಾಗ ಮಧ್ಯರಾತ್ರಿ 12-30 ಗಂಟೆ ಸುಮಾರಿಗೆ ತಾವರಗೇರಾ ಕ್ರಾಸ ಸಮೀಪ ಎದುರುನಿಂದ ಟಾಟಾ ಇಂಡಿಕಾ ಕಾರ ಚಾಲಕ ಕೆಎ-32 ಎಮ್-9278 ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ ತಿಡ್ಡಿ ನಡೆಸುತ್ತಾ ಡಿಕ್ಕಿ ಹೊಡೆದಿದ್ದರಿಂದ, ನನ್ನ ಮಗ ಮತ್ತು ರಾಜೇಂದ್ರ ಗಾಡಿಯ ಮೇಲಿಂದ ಪುಟಿದು ರೋಡಿಗೆ ಬಿದ್ದಿದ್ದು, ಇದರಿಂದಾಗಿ ರಾಜೇಂದ್ರ ಮರ್ಮಾಂಗಕ್ಕೆ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಮತ್ತು ಮಾಳಿಂಗಾರಯನ ಎರಡು ಕಾಲು ಮುರಿದು ಭಾರಿ ರಕ್ತಗಾಯವಾಗಿದ್ದಲ್ಲದೇ  ಮೋಟಾರ ಸೈಕಲ ಕಾರಿಗೆ ಸಿಕ್ಕಿ ಬಿದ್ದಿದ್ದರಿಂದ ಸ್ವಲ್ಪ ದೂರದವರೆಗೆ ಎಳಿದುಕೊಂಡು ಹೋಗಿದ್ದರಿಂದ ಎರಡು ವಾಹನಗಳ ಘರ್ಷಣೆಯಿಂದಾಗಿ ಬೆಂಕಿ ಹತ್ತಿ ಮೋಟಾರ ಸೈಕಲಿಗೆ ಕಟ್ಟಿದ ಡಿಜೇಲ ಡಬ್ಬಿ ಬೆಂಕಿ ಹತ್ತಿ ಪೂರ್ತಿ ಗಾಡಿ ಸುಟ್ಟಿದ್ದು. ಮಾಳಿಂಗರಾಯನಿಗೆ ಆಸ್ಪತ್ರೆ ಸಾಗಿಸುವ ಸಮಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ  ಶ್ರೀ ಶಂಕ್ರೆಪ್ಪ  ತಂದೆ ಚಂದ್ರಾಮಪ್ಪ ಹಳಿಮನಿ  ಸಾ|| ಬನ್ನೂರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 88/2013 ಕಲಂ 279, 304 (ಎ) ಐಪಿಸಿ ಸಂಗಡ 187 ಎಂ.ವಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ದಿನಾಂಕ: 07/02/2013 ರಂದು ರಾತ್ರಿ 11-30 ಗಂಟೆ ಸುಮರಿಗೆ ಜೇವರ್ಗಿ ಪಟ್ಟಣದ ಲಕ್ಕಿ ದಾಬದ ಹತ್ತಿರ ರೋಡಿನಲ್ಲಿ ನನ್ನ ಮಾವ ಸುರೇಂದ್ರಪ್ರಸಾದ  ತಂದೆ ನರೇಂದ್ರ ಪ್ರಸಾದ ತ್ರಿವೇದಿ ಇವರು ರೋಡ ಕ್ರಾಸ ಹೋದಾಗ ಯಾವುದೊ ವಾಹನ ಚಾಲಕನು ಶಹಾಪೂರದ ಕಡೆಯಿಂದ ಜೇವರ್ಗಿ ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಸುರೇಂದ್ರಪ್ರಸಾದ ಇತನಿಗೆ ಡಿಕ್ಕಿ ಪಡಿಸಿ ತನ್ನ ವಾಹನ ನಿಲ್ಲಿಸಿದೆ ಓಡಿ ಹೋಗಿದ್ದು ಸುರೇಂದ್ರ ಪ್ರಸಾದ ಇವರು ಭಾರಿ ಗಾಯಾಳಾಗಿ  ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ. ಅಪಘಾತ ಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಪವನಕುಮಾರ ತಂದೆ ರಾಜೇಂದ್ರಪ್ರಸಾದ ಸುಭೇದಾರ ಸಾ: ಹಳ್ಳಿಖೇಡ (ಬಿ) ರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ:18/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

08 February 2013

GULBARGA DISTRICT REPORTED CRIMES


ಜೂಜು ಅಡ್ಡೆಯ ಮೇಲೆ ದಾಳಿ 14 ಜನರ ಬಂಧನ, 3.5 ಲಕ್ಷ್ಯ ರೂಪಾಯಿಗಳ ಮೌಲ್ಯದ ನಗದು ಹಣ, ಬಂಗಾರದ ಆಭರಣಗಳು, ಮೊಬೈಲ್ ಮತ್ತು ಮೋಟಾರ ಸೈಕಳಗಳ ಜಪ್ತಿ.
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ದಿನಾಂಕಃ 07/02/2013 ರಂದು ಗುಲಬರ್ಗಾ ನಗರದ ಎಂ.ಬಿ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಆಸ್ಪತ್ರೆಯ ಮುಂದುಗಡೆ ಕನಿಷ್ಕಾ ಬಾರ್ & ರೆಸ್ಟೋರೆಂಟ್ ನಲ್ಲಿ ಜೂಜಾಟ ನಡೆದಿರುವ  ಬಗ್ಗೆ ಖಚಿತ ಮಾಹಿತಿ ಅನ್ವಯ ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾರವರು, ಮತ್ತು ಡಿ.ಎಸ್.ಪಿ ಬಿ ಉಪ ವಿಭಾಗ ಪ್ರಭಾರಿ ಗ್ರಾಮಾಂತರ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ ಎಸ್. ಅಸ್ಲಾಂ ಬಾಷಾ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ ಹಾಗು ಸಿಬ್ಬಂದಿ ಜನರಾದ ಶ್ರೀಮಂತ ಹೆಚ್.ಸಿ, ಮತ್ತು ಪಿಸಿ ಜನರಾದ  ಶ್ರೀನಿವಾಸರೆಡ್ಡಿ,ಗಂಗಾಧರ,ಸಿದ್ರಾಮಯ್ಯ, ಪಂಡಿತರಾವ,ಮಸೂದ ಅಹ್ಮದ,ಸಿದ್ದಲಿಂಗಪ್ಪ ರವರೆಲ್ಲರೂ ಕನಿಷ್ಕಾ ಬಾರ್ & ರೆಸ್ಟೋರೆಂಟ್ ನಲ್ಲಿ ಜೂಜಾಟದಲ್ಲಿ ತೊಡಗಿದ ಜೂಜುಕೋರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ  ವಿಶೇತ ತಂದೆ ಶಿವಲಾಲಸಿಂಗ್ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ, ವರ್ಧನ ತಂದೆ ಮಾರುತಿ ಹಡಗಿಲ ಸಾಃ ರಾಜಾಪೂರ ಗುಲಬರ್ಗಾ, ಶಕೀಲ ಅಹ್ಮದ ತಂದೆ ಶಫಿಯೂದ್ದಿನ ಅಹ್ಮದ ಸಾಃ ಆದರ್ಶ ನಗರ ಗುಲಬರ್ಗಾ, ಬಸವರಾಜ ತಂದೆ ಯಮನಪ್ಪಾ ಪಾಟೀಲ ಸಾಃ ಬಡೆಪೂರ ಕಾಲೋನಿ ಗುಲಬರ್ಗಾ, ಅಮಿತ ತಂದೆ ಶೇಖರ ಪಾಟೀಲ ಸಾಃಬ್ರಹ್ಮಪೂರ ಲಾಲಗಿರಿ ಗುಲಬರ್ಗಾ, ವಿಕಾಸ ತಂದೆ ಸುಭಾಷ ನೌರಂಗ ಸಾಃ ನೌರಂಗದಾಳ ಜಗತ್ ಗುಲಬರ್ಗಾ,ಮಂಜಲೆ ಸಾಬ ತಂದೆ ಚಾಂದಸಾಬ ಹಿರನಾಗಾಂವ್ ಸಾಃ ಹೆಬ್ಬಾಳ ಚಿಂಚೋಳಿ,ಚಂದ್ರಕಾಂತ ತಂದೆ ನಿಂಗಯ್ಯ ಗುತ್ತೆದಾರ ಸಾಃ ಹೆಬ್ಬಾಳ ಚಿಂಚೋಳಿ,ವಿರೇಶ ತಂದೆ ಜಗದೇವ ಪಾಟೀಲ ಸಾಃ ಬಡೆಪೂರ ಕಾಲೋನಿ ಗುಲಬರ್ಗಾ, ಸಿದ್ರಾಮಪ್ಪ ತಂದೆ ಜಗದೇವಪ್ಪ ಪಾಟೀಲ ಸಾಃ ಭಕ್ತಂಪೂರ ಗುಲಬರ್ಗಾ, ಕಲ್ಯಾಣಿ ತಂದೆ ಭಗವಂತಪ್ಪ ಸ್ವಂತ ತಾಃ ಗುಲಬರ್ಗಾ,  ಮಲ್ಲಿಕಾರ್ಜುನ, ತಂದೆ ಬಡೆಪ್ಪ ಜೀವಣಗಿ ಸಾಃ ಶಹಬಜಾರ ನಾಕಾ ಗುಲಬರ್ಗಾ, ವಿನೋದ ತಂದೆ ರಾಮಚಂದ್ರ ಸೇಡಂ ಸಾಃ ಸುಂದರ ನಗರ ಗುಲಬರ್ಗಾ, ಅನೀಲಕುಮಾರ ತಂದೆ ಶಿವಲಿಂಗಪ್ಪ ಬೊಮ್ಮ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ,ರವರನ್ನು ದಸ್ತಗಿರಿ ಮಾಡಿ ಜೂಜಾಟದ ಪಣಕ್ಕೆ ಹಚ್ಚಿದ ನಗದು ಹಣ 92,054/- ರೂಪಾಯಿಗಳು, ಇಸ್ಪೇಟ್ ಎಲೆಗಳು,ಜೂಜಾಟಕ್ಕೆ ಉಪಯೋಗಿಸಿದ ಬಂಗಾರದ ಉಂಗುರ ಮತ್ತು ಚೈನ್ ಗಳು ಒಟ್ಟು ನಾಲ್ಕುವರೆ ತೊಲೆ ಅಃಕಿಃ 1,15,000/- ರೂ. 18 ಮೊಬೈಲ್ ಗಳು ಹಾಗೂ 5 ಮೋಟಾರ ಸೈಕಗಳು ನೇದ್ದವುಗಳು ಜಪ್ತಿ ಮಾಡಿಕೊಂಡಿದ್ದರಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂ:21/2013 ಕಲಂ, 79, 80 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಪರವಾನಿಗೆ ಪಡೆಯದೆ ಕೇಬಲ್ ಚಾಲನಗಳ ಸಂಪರ್ಕ ಕಲ್ಪಿಸಿದ ಬಗ್ಗೆ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ಸಂತೋಷ ತಂದೆ ಸುಭಾನರಾವ ಸಾ||ಬೆಳಗಾವ ರವರು  ನಾನು 3 ತಿಂಗಳನಿಂದ ಎಸ್.ಸಿ ಎಂಟರ ಪ್ರೇಸ್ಸನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕಂಪನಿಯ ಅಧೀಕೃತ ವಿತರಕರಾಗಿರುತ್ತೇವೆ, ಎಂಟರ ಪ್ರೇಸ್ಸ್ ವ್ಯಾಪ್ತಿ ಬೆಳಗಾವ, ಬಿಜಾಪೂರ, ಬಾಗಲಕೋಟ, ಗುಲಬರ್ಗಾ, ಬೀದರ ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳ ಕೇಬಲ್ ನೇಟ್ವರ್ಕ ಬಳಕೆದಾರರು ಮೇಡಿಯಾ ಪ್ರೋ ಕಂಪನಿಯಿಂದ ಟಿವ್ಹಿ ಚಾನಲ್ ಗಳ ಪರವಾನಿಗೆಗಾಗಿ ಹಣ ಪಾವತಿ ಮಾಡಿ ಬಿತ್ತರಿಸಲು ಪರವಾನಿಗೆ ಪಡೆದುಕೊಳ್ಳುತ್ತಾರೆ, ಶಿವಾನಂದ ತಂದೆ ಬಸಪ್ಪ ಮಾಳಿ ಶ್ರೀ ಭಾಗ್ಯವಂತಿ ಕೇಬಲ ನೇಟ್ ವರ್ಕ ಇವನು ಗೊಬ್ಬೂರ[ಬಿ] ಗ್ರಾಮದಲ್ಲಿ ಮಾತ್ರ ಸುವರ್ಣ, ಸ್ಟಾರ ಗೋಲ್ಡ, ಜಿ ಕನ್ನಡ, ಸ್ಟಾರ ಪ್ಲಸ್, ಜಿ ಸಿನಿಮಾ, ಜಿ ಟಿವ್ಹಿ, ಚಲನಗಳನ್ನು ಬಿತ್ತರಿಸಲು ಮೇಡಿಯಾ ಪ್ರೋ ಕಂಪನಿಯಿಂದ ಪರವಾನಿಗೆ ಪಡೆದುಕೊಂಡಿದ್ದು ಇರುತ್ತದೆ. ದಿನಾಂಕ:28-01-2013 ರಿಂದ ಇವತ್ತಿನವರೆಗೆ ಗುಲಬರ್ಗಾ ಪಟ್ಟಣದ 17 ಕೇಬಲ್ ಆಪರೇಟರಗಳಿಗೆ ಗೊಬ್ಬೂರ[ಬಿ] ದಿಂದ ಮೇಡಿಯಾ ಪ್ರೋ ಪೇ ಚಲನಗಳಾದ ಸುವರ್ಣ, ಸ್ಟಾರ ಗೋಲ್ಡ, ಜಿ ಕನ್ನಡ, ಸ್ಟಾರ ಪ್ಲಸ್, ಜಿ ಸಿನಿಮಾ, ಜಿ ಟಿವ್ಹಿ, ಚಲನಗಳನ್ನು ಬಿತ್ತರಿಸುತಿದ್ದು, ಅವುಗಳಲ್ಲಿ ಗುಲಬರ್ಗಾ ಪಟ್ಟಣದ ಐವನಶಾಹಿ, ಬ್ರಹ್ಮಪೂರ, ಪಿ.ಎನ್.ಟಿ ಹೌಸಿಂಗ್ ಬೋಡ್, ಗಾಂಧಿ ನಗರ, ಎಮ್.ಬಿ.ನಗರ ಏರಿಯಾಗಳಲ್ಲಿ ಬಿತ್ತರಿಸಿದ ಬಗ್ಗೆ ವಿಡಿಯೋ ರಿಕಾರ್ಡ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಮೇಡಿಯಾ ಪ್ರೊ ಕಂಪನಿಯವರು ಶಿವಾನಂದ ಮಾಳಿ ಇವನಿಗೆ ನೋಟಿಸ ನೀಡಿ, ಗೊಬ್ಬೂರ[ಬಿ] ಗ್ರಾಮದಿಂದ ಗುಲಬರ್ಗಾ ಪಟ್ಟಣಕ್ಕೆ ಬಿತ್ತರಿಸುವುದು ಕಾನೂನು ಪ್ರಕಾರ ಅಪರಾದವಾಗುತ್ತದೆ ಅಂತಾ ತಿಳಿಸಿದರು ಸಹ ಶಿವಾನಂದ ಮಾಳಿ ಕಂಪನಿಯವರಿಂದ ಯಾವುದೆ ಪರವಾನಿಗೆ ಪಡೆಯದೆ ಗೊಬ್ಬೂರ[ಬಿ] ಗ್ರಾಮದಿಂದ ಮೇಡಿಯಾ ಪ್ರೊ ಕಂಪನಿಯ ಪೇ ಚಲನಗಳಾದ ಸುವರ್ಣ, ಸ್ಟಾರ ಗೋಲ್ಡ, ಜಿ ಕನ್ನಡ, ಸ್ಟಾರ ಪ್ಲಸ್, ಜಿ ಸಿನಿಮಾ, ಜಿ ಟಿವ್ಹಿ, ಚಲನಗಳನ್ನು ಪ್ರಸಾರ ಮಾಡಿ ಮೇಡಿಯಾ ಪ್ರೊ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ. ಆತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 14/2013 ಕಲಂ.66(B), 66(E) IT Act and 420 IPC ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.