POLICE BHAVAN KALABURAGI

POLICE BHAVAN KALABURAGI

02 March 2012

GULBARGA DIST REPORTED CRIMES

ದರೋಡೆ ಪ್ರಕರಣ:
ಎಂ.ಬಿ.ನಗರ ಠಾಣೆ:
ಶ್ರೀಮತಿ ಜಗದೇವಿ ಗಂಡ ದಿ:ರಾಮಲಿಂಗ್ ವಯ:40 ವರ್ಷ ಜಾತಿಃ ಪೂಜಾರಿ ಉಃ ಕೂಲಿಕೆಲಸ ಸಾಃಜಿಡಿಎ ಕಾಲೋನಿ ಕೆ.ಎನ.ಜಡ್ಜ ಪಂಕ್ಷನ ಹಾಲ್ ಹಿಂದುಗಡೆ ಆದರ್ಶ ನಗರ ಗುಲಬರ್ಗಾರವರು ನಾನು ಇಂದು ಮುಂಜಾನೆ 9-30 ಗಂಟೆಗೆ ಮನೆಯಿಂದ ನಡೆದುಕೊಂಡು ಕೂಲಿ ಕೆಲಸಗೋಸ್ಕರ ಬಸವೇಶ್ವರ ಕಾಲೋನಿ ಹೋಸ ಬಡಾವಣೆಯ ಶಿವ ಮಂದಿರ ಹತ್ತಿರದ ಮನೆ ಕಟ್ಟಡದ ಕೆಲಸ ಮಾಡುವ ಸಲುವಾಗಿ ನಡೆದುಕೊಂಡು ಹೊಗುತ್ತಿರುವಾಗ ಬಸವೇಶ್ವರ ಕಾಲೋನಿಯ ಹೊಸ ಬಡಾವಣೆಯ ಶ್ರೀ ನಂದಿ ಇವರ ಮನೆಯ ಎದುರುಗಡೆ ರೊಡಿನ ಮೇಲೆ ಹೋಗುತ್ತಿರುವಾಗ ಎದುರಿನಿಂದ ಒಬ್ಬ ಹುಡುಗನು ಬಂದವನೆ ನನಗೆ ನೀನು ನನ್ನ ಮೋಬೈಲಿಗೆ ಏಕೆ ಮೇಸೇಜ್ ಕಳುಹಿಸಿದ್ದಿ ಅಂತ ಕೇಳಿದನು, ನಾನು, ನನಗೆ ಮೇಸೆಜ್ ಕಳಿಸಲಿಕ್ಕೆ ಬರಲ್ಲಾ ನಾನೆಕೆ ಮೇಸೆಜ್ ಕಳಿಸಲಿ ಅಂದೆ ಅಷ್ಟರಲ್ಲಿ ನನಗೆ ಬಲ ಕಪಾಳದ ಮೇಲೆ ಕೈಯಿಂದ ಹೊಡೆದನು. ನಾನು ಸಿಟ್ಟಿನಿಂದ ಆತನ ಎದೆಯ ಮೇಲಿನ ಅಂಗಿಹಿಡಿದೆನು ಆತನು ನನ್ನ ಕುತ್ತಿಗೆ ಹೀಡಿದು ಕುತ್ತಿಗೆಯಲ್ಲಿರುವ ಆರು ಗ್ರಾಂ ಬಂಗಾರದ ಜೀರಾ ಮಣಿ ಅ.ಕಿ.13,000/- ರೂ ಬೆಲೆಬಾಳುವದನ್ನು ಕಿತ್ತಿಕೊಂಡು ಹೋದನು ಸದರಿಯವನು ಅಂದಾಜು 20 ವರ್ಷದವನಾಗಿದ್ದು ತೆಳ್ಳಗೆ ಮೈಕಟ್ಟು, ಕಪ್ಪು ಮೈ ಬಣ್ಣ , ಜೀನ್ಸ್ ಪ್ಯಾಂಟ್, ನಾಸಿ ಬಣ್ಣದ ಶರ್ಟ್ ಧರಿಸಿರುತ್ತಾನೆ. ಬಲ ಕಿವಿಯಲ್ಲಿ ರಿಂಗ್ ಇರುತ್ತದೆ. ಸದರಿವನಿಗೆ ನೊಡಿದ್ದಲ್ಲಿ ಗುರುತಿಸುತ್ತನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 23/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀ ಬಸಯ್ಯ ತಂದೆ ಶಂಕ್ರಯ್ಯ ಮಠಪತಿ ಸಾ ಹಸರಗುಂಡಗಿ ಗ್ರಾಮ ತಾ ಚಿಂಚೋಳಿ ಜಿ ಗುಲಬರ್ಗಾರವರು ನನ್ನದೊಂದು ಜೀಪ್ ಎಂ.ಹೆಚ್-10 ಸಿ-0408 ನೇದ್ದು 1,00,000/- ರೂ ಖರಿದಿಸಿದ್ದು ಸುಮಾರು 3 ತಿಂಗಳ ಹಿಂದೆ ರಮೇಶ ಮನ್ನಾಯಖೇಳ್ಳಿ ಇವರಿಗೆ ಮಾರಾಟ ಮಾಡಿದ್ದು ಪೈನಾನ್ಸ ಲೋನ ಇಲ್ಲದ ಕಾರಣ ಇನ್ನೂ ವರ್ಗಾವಣೆ ಕಾಗದ ಪತ್ರಗಳು ಮಾಡಿಕೊಟ್ಟಿರುವದಿಲ್ಲ ದಿನಾಂಕ: 26/02/2012 ರಂದು ನಾನು ಮತ್ತು ರಮೇಶ ಚಿಮ್ಮೊನ ಚೋಡದಲ್ಲಿರುವಾಗ ಒಬ್ಬ ವ್ಯಕ್ತಿ ಕೋಳಿ ಗೊಬ್ಬುರ ಪ್ರಚಾರ ಕುರಿತು ಬಾಡಿಗೆ ಜೀಪ ಕೇಳಿದ್ದು ಒಂದು ದಿನಕ್ಕೆ 400/- ರೂ ಡ್ರೈವರೆಗೆ 100/- ರೂ. ಭತ್ಯೆ ಡಿಸೇಲ ಹಾಕಿಕೊಳ್ಳುವ ಬಗ್ಗೆ ಮಾತಾಗಿ ಕೊಟ್ಟಿದ್ದು ದಿನಾಂಕ : 27/02/2012 ರಂದು ಬೆಳಿಗ್ಗೆ 8 ಗಂಟೆಗೆ ಮನ್ನಾಯಖೆಳ್ಳಿಗೆ ಹೋಗಿದ್ದು ಭೀಮಶಾ ಇತನು ಆರಾಮ ಇಲ್ಲದಕ್ಕೆ ಚಾಲಕ ಒಮನಾಥ ಎಂಬುವವರಿಗೆ ಕೊಟ್ಟಿದ್ದು ಕೆಲಸ ಮುಗಿಸಿಕೊಂಡು ರಾತ್ರಿ ಗುಲಬರ್ಗಾಕ್ಕೆ ಯಾತ್ರಿಕ ನಿವಾಸದಲ್ಲಿ ಬಂದು ಉಳಿದು ಜೀಪ ಪಾರ್ಕಿನಲ್ಲಿ ಇಟ್ಟಿದ್ದು ಅಪರಿಚಿತ ವ್ಯಕ್ತಿ ತನಗೆ ಮೀಟಿಂಗ ಇರುತ್ತದೆ ಅಂತಾ ಅಂದು ಸದರಿ ಜೀಪ್ ಕಳವು ಮಾಡಿಕೊಂಡು ಹೋಗಿರುತ್ತಾನೆ 1992 ನೇ ಸಾಲಿನ ಜೀಪ ಇದ್ದು 1,00,000/- ರೂ. ಬೆಲೆ ಬಾಳುತ್ತಿದ್ದು ಬೂದು ಬಣ್ಣದಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2012 ಕಲಂ 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಹರಣ, ಅತ್ಯಾಚಾರ ಪ್ರಕರಣ:

ಆಳಂದ ಪೊಲೀಸ ಠಾಣೆ: ಆಳಂದ ತಾಲೂಕಿನ ಸಾ|| ಸೀಡ್ಸ್ ಪಾರಂ ತಾಂಡಾದ ಹುಡಗಿಯಾದ ನಾನು, ನಾನು ಮತ್ತು ನನ್ನ ತಾಯಿ ಸೋನಾಬಾಯಿ ಮನೆಯಲ್ಲಿ ಇರುತ್ತೆವೆ. ನನ್ನ ತಂದೆ ತಾಯಿ ಹಾಗೂ ಇಬ್ಬರು ಆಣ್ಣಂದಿರು ಹೊಟ್ಟೆ ಉಪಜೀವನಕ್ಕಾಗಿ ಮುಂಬೈಯಿಗೆ ಹೋಗಿದ್ದು ಆಗಾಗ ಬಂದು ಹೋಗುವದು ಮಾಡುತ್ತಾರೆ ನಮ್ಮ ಮನೆಗೆ ಹತ್ತಿ ಭೀಬಾಬಾಯಿ ಬಂದು ಇವಳು ತನ್ನ ಮಕ್ಕಳೊಂದಿಗೆ ಇರುತ್ತಾಳೆ. ಹರವಾಳ ತಾಂಡದಿಂದ ಆಕೆಯ ಮೈದುನ ಕುಪೇಂದ್ರ ತಂದೆ ಗೇಮು  ರಾಠೋಡ, ಅವನೊಂದಿಗೆ ಅದೆ ತಾಂಡಾದ ಸಂಜು ತಂದೆ ಗೇಮು ರಾಠೋಡ, ಸುನಿಲ ತಂದೆ ಜೈರಾಮ ರಾಠೋಡ, ಸಂತೋಷ ರಾಠೋಡ, ಹಾಗೂ ಜೀಪ ಚಾಲಕ ಪ್ರಕಾಶ ರಾಠೋಡ ಎಲ್ಲರೂ ಬಿಬಾಬಾಯಿ ಹತ್ತಿರ ಕ್ರೂಜರ ವಾಹನದಲ್ಲಿ ಬಂದು ಹೋಗುವದು ಮಾಡುತ್ತಿದರು ದಿನಾಂಕ 18/02/2012 ರಂದು ಶನಿವಾರ ನಾನು ರಾತ್ರಿ ಮನೆಯಲ್ಲಿ ಮಲಗಿದಾಗ 11.00 ಗಂಟೆ ಸುಮಾರಿಗೆ ಮನೆಯ ಬಾಗಿಲ ಬಡಿದ ಸಪ್ಪಳ ಕೇಳಿದಾಗ ನಾನು ಯಾರು ಎಂದು ಕೇಳಿದಾಗ ನಿಮ್ಮ ಆಣ್ಣ ಕಂಠು ಇದ್ದೆನೆ ಎಂದಾಗ ನಾನು ಬಾಗಿಲು ತೆರೆದು ನೋಡಲು ಬಾಗಿಲ ಹತ್ತಿರ ನಿಂತಿದ್ದ ಕುಪೇಂದ್ರ ತಂದೆ ಗೇಮು ರಾಠೋಡ, ಸಂಜು ರಾಠೋಡ, ಸುನಿಲ ರಾಠೋಡ, ಸಂತೋಷ ರಾಠೋಡ, ಹಾಗೂ ಜೀಪ ಚಾಲಕ ಪ್ರಕಾಶ ರಾಠೋಡ, ಸಾ: ಹರವಾಳ ತಾಂಡಾ ಇವರು ಇದ್ದು ನನಗೆ ಕುಪೇಂದ್ರನು ಒತ್ತಿಹಿಡಿದ್ದು ಮುಖಕ್ಕೆ ಬಟ್ಟೆಯಿಂದ ಬಿಗಿದು ಚಿರಾಡಿದರೆ ಖಲಾಸ ಮಾಡುತ್ತೆವೆ ಎಂದು ಅಂಜಿಸಿ ಜೀಪಿನಲ್ಲಿ ಹಾಕಿ ಜೇವರ್ಗಿ ಬಸ್ಸ ಸ್ಟಾಂಡ ಹತ್ತಿರ ಹೋದಾಗ ಕುಪೇಂದ್ರನು ಒಂದು ಜೋಗೆರ ಹತ್ತಿರ ಖರೀದಿ ಮಾಡಿದ (ರೆಡಿಮೆಡ್ ತಾಳಿ) ತಾಳಿ ನನ್ನ ಕೋರಳಲ್ಲಿ ಹಾಕಿ ಬಸ್ಸ ಸ್ಟಾಂಡ ಹತ್ತಿರ ಇದ್ದ ಲಾಡ್ಜನಲ್ಲಿ ಕರೆದುಕೊಂಡು ಹೋಗಿ ಹಗಲು ರಾತ್ರಿ ಜಬರಿ ಸಂಭೋಗ ಮಾಡಿ ನಂತರ ಸಂತೋಷ ರಾಠೋಡ ಈತನು ಒಂದು ಮೋಟರ ಸೈಕಲ ತಂದು ಕುಪೇಂದ್ರನಿಗೆ ಕೊಟ್ಟು ಹೋದನು ನನ್ನ ಬಾಳನ್ನೆ ಹಾಳು ಮಾಡಿದನೆಂದು ಅವನ ಬೆನ್ನ ಹತ್ತಿ ಅವನ ಹಿಂದೆ ಮೋಟರ ಸೈಕಲಿನ ಮೇಲೆ ಕುಳಿತುಕೊಂಡು ಹರವಾಳ ತಾಂಡಾದಲ್ಲಿ ಇರುವ ಅವರ ಮನೆಗೆ ಹೋದೆವು ಅಲ್ಲಿ 4 ದಿವಸ ಅವರ ಮನೆಯಲ್ಲಿ ಉಳಿದಾಗ ಅವನ ತಂದೆ ತಾಯಿಯವರು ಆಣ್ಣಂದಿರು ಯಾರೆಂದು ಕೇಳಿದರು ಚಿಕ್ಕಮ್ಮಳ ಮಗಳೆಂದು ಹೇಳು ಅಂತಾ ಕುಪೇಂದ್ರನು ಹೇಳಿದಕ್ಕೆ ನಾನು ಅದೆ ರೀತಿ ಹೇಳಿದಾಗ ಸದರಿ ಯವರು ಈಕೆಯನ್ನು ಅವರ ತಾಂಡಾಕ್ಕೆ ಒಯ್ದು ಬಿಡು ಎಂದು ಹೇಳಿದಾಗ ದಿನಾಂಕ 24/02/2012 ರಂದು ಶುಕ್ರವಾರ ದಿನ ನನಗೆ ರಾತ್ರಿ 10-11 ಗಂಟೆಯ ಸುಮಾರಿಗೆ ನಮ್ಮತಾಂಡಾದಲ್ಲಿರುವ ನಮ್ಮ ಮನೆಗೆ ಬಿಟ್ಟಿರುತ್ತಾರೆ ನನಗೆ ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ಅಂಜಿಸಿ ನನಗೆ ಬಲಾತ್ಕಾರ ಸಂಬೋಗ ಮಾಡಿದ ಕುಪೇಂದ್ರನ ಮೇಲೆ ಹಾಗೂ ಆತನಿಗೆ ಸಹಾಯ ಮಾಡಿ ನನ್ನ ಬದುಕು ಹಾಳು ಮಾಡಿದವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ 366,376,342, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


GULBARGA DIST REPORTED CRIMES

ವರದಕ್ಷೀಣೆ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ: ಜರೀನಾ ಬೇಗಂ ಬಾಹೋದ್ದೀನ ಸಾ||ಇಸ್ಲಾಮಾಬಾ ಕಾಲೋನಿ ಗುಲಬರ್ಗಾ ರವರು ನನಗೆ 4 ಜನ ಹೆಣ್ಣು ಮಕ್ಕಳಿದ್ದು ಮೊದಲನೇ ಮಗಳಾದ ಸಫಿಯಾ ಬೇಗಂಳಿಗೆ ನನ್ನ ನಾದಿನಿಯ ಮಗನಾದ ಮಹ್ಮದ ಅಕ್ಬರ ಇತನಿಗೆ ಕೊಟ್ಟು ಈಗ 4 ವರ್ಷಗಳ ಹಿಂದೆ ಲಗ್ನ ಮಾಡಿದ್ದು ಲಗ್ನದ ಸಮಯದಲ್ಲಿ ಮಾತುಕತೆ ಆಡಿದ ಪ್ರಕಾರ ಬಂಗಾರ ಮತ್ತು ನಗದು ಹಣ 10,000 ಸಾವಿರ ರೂಪಾಯಿ ಕೊಟ್ಟು ಸಂಪ್ರದಾಯದಂತೆ ಲಗ್ನ ಮಾಡಿದ್ದು ಅದೆ. ನನ್ನ ಅಳಿಯ ಬೇರೆ ಹೆಣ್ಣಿನ್ನೊಂದಿಗೆ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದರಿಂದ ನನ್ನ ಮಗಳೊಂದಿಗೆ ಅಳಿಯ ಕಿರಿಕಿರಿ ಮಾಡುತ್ತಿದ್ದನು. ಒಂದೊಂದು ದಿನ ಮನೆಗೆ ಬರುತ್ತಿರಲ್ಲಿಲ್ಲಾ. ಮನೆಗೆ ಯಾಕೆ ಬರುವುದಿಲ್ಲಾ ಅಂತಾ ಕೇಳಿದರೆ ನೀನೇನು ಕೇಳುತ್ತಿ ಅಂತಾ ಹೊಡೆ ಬಡೆ ಮಾಡುತ್ತಿದ್ದನು. ಪಕ್ಕದ ಮನೆಯವರು ಮತ್ತು ಹಿರಿಯರಾದ ಅಬ್ದುಲ ಅಜೀಮ, ಡಾ|| ಮಹ್ಮದ ಖುರಮ ಇವರೆಲ್ಲರು ಅಳಿಯನಿಗೆ ತಿಳಿಸಿ ಹೇಳಿದರು. ದಿನಾಂಕ: 01.03.2012 ರಂದು ನನ್ನ ಮಗಳು ನನ್ನ ಮನೆಗೆ ಬಂದು ನನ್ನ ಗಂಡ ನನಗೆ ನೀನು ತವರು ಮನೆಗೆ ಹೋಗು ನಾನು ಬೇರೆ ಲಗ್ನವಾಗುತ್ತೇನೆ. ಅಂತಾ ಹೊಡೆದು ಹೊರಗೆ ಹಾಕಿದ್ದಾನೆ ಅಂತಾ ಹೇಳಿದಳು. ರಾತ್ರಿ 8-00 ಗಂಟೆ ಸುಮಾರಿಗೆ ನನ್ನ ಮಗಳು ಸುಟ್ಟಿಕೊಂಡಿದ್ದಾಳೆ ಬಸವೇಶ್ವರ ಆಸ್ಪತ್ರೆಯಲ್ಲಿದ್ದಾಳೆಂದು ತಿಳಿದು ನಾನು ಮತ್ತು ನನ್ನ ಕುಟುಂಬದವರೆಲ್ಲರೂ ಆಸ್ಪತ್ರೆಗೆ ಬಂದು ವಿಚಾರಿಸಿದಾಗ, ನನ್ನ ಗಂಡನಿಗೆ ಒಂದು ಫೋನ್ ಕಾಲ ಬಂತು ಮಾತನಾಡಿ ಹೊರಗೆ ಹೋಗುತ್ತಿರುವಾಗ ಎಲ್ಲಿಗೆ ಹೋಗುತ್ತಿರಿ ಅಂತಾ ಕೇಳಿದ್ದಕ್ಕೆ ನೀನು ಯಾಕೆ ಕೇಳುತ್ತಿ ನಾನು ಎಲ್ಲಿಗಾದರೂ ಹೋಗುತ್ತೇನೆಂದರು ನಾನು ಬೇಡ ಅಂದರೆ ನನಗೆ ಕೈಯಿಂದ ಹೊಡೆದು ದಬ್ಬಿಕೊಟ್ಟು ನೀನು ಸಾಯಿ ನಾನು ಬೇರೆ ಲಗ್ನವಾಗುತ್ತೇನೆ ಅಂತಾ ಹೇಳಿ ಹೋದನು. ನಾನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಇರುವುದಕ್ಕಿಂತ ಸಾಯುವುದೇ ಲೇಸು ಅಂತಾ ನಾನೇ ಸೀಮೇ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡೇನು ಅಂತಾ ಹೇಳಿದಳು.ನನ್ನ ಮಗಳು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಅಳಿಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 20/2012 ಕಲಂ.498(ಎ), ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ರೋಜಾ ಪೊಲೀಸ್ ಠಾಣೆ: ಶ್ರೀಮತಿ ಮಹ್ಮದಿ ಬೇಗಂ ಗಂಡ ಜೆ. ಶಾಹಾಬುದ್ದಿನ ಉ:ಸಹ ಶಿಕ್ಷಕಿ ನ್ಯಾಶನಲ್ ಹೈಸ್ಕೂಲ್ ಗುಲಬರ್ಗಾ ರವರು ನಾನು ದಿನಾಂಕ:01/03/2012 ರಂದು ನ್ಯಾಶನಲ ಹೈಸ್ಕೂಲ್ ಶಾಲೆಗೆ ಕರ್ತವ್ಯಕ್ಕೆ ಹೋಗಿದ್ದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ 7ನೇ ತರಗತಿಯ ಕ್ಲಾಸದಲ್ಲಿ ಹೋಗಿ ವ್ಯಾನಿಟಿ ಬ್ಯಾಗನ್ನು ಕುರ್ಚಿಯ ಮೇಲೆ ಇಟ್ಟು ಮುಖ ತೊಳೆದುಕೊಂಡು ನೀರು ಕುಡಿದು ಬರುವಷ್ಟರಲ್ಲಿ ಹುಡುಗರೆಲ್ಲರೂ ಇರಲಿಲ್ಲ ಅಲ್ಲಿ ನನ್ನ ಬ್ಯಾಗ ನೋಡಿದಾಗ ಅದು ಸಹ ಇರಲಿಲ್ಲಾ ವ್ಯಾನಿಟ ಬ್ಯಾಗಿನಲ್ಲಿ ಬಂಗಾರದ ಆಭರಣ ಮತ್ತು ಒಂದು ಮೋಬಾಯಿಲ್ ಹಾಗು ನಗದು ಹಣ ಅಂದಾಜು 1000/-ರೂ. ಹೀಗೆ ಒಟ್ಟು 82500/-ರೂ. ಬೆಲೆ ಬಾಳುವವುಗಳು ಯಾರೋ ಕಳವು ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.19/2012 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

01 March 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಮಳಖೇಡ ಠಾಣೆ:
ಶಂಕರ ತಂದೆ ರಾಜಶೇಖರ ಮುತ್ತಂಗಿ ಸಾ ಕರಚಖೇಡ ತಾ ಚಿಂಚೋಳರವರು ನಾನು ಮತ್ತು ನರೇಶ ತಂದೆ ಜಗಪ್ಪಾ ಸಾ ಕರಚಖೇಡ ಚಿಂಚೊಳಿ ಇಬ್ಬರೂ ಕೂಡಿಕೊಂಡು ದಿನಾಂಕ: 29-02-2012 ರಂದು ಮಧ್ಯಾಹ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-1303 ನೇದ್ದರ ಮೇಲೆ ಮಳಖೇಡದಿಂದ ಸೇಡಂ ಕಡೆಗೆ ಹೋರಟಾಗ ಸೇಡಂ ಕಡೆಯಿಂದ ಲಾರಿ ನಂಬರ MH-12 FZ-8351 ನೇದ್ದರ ಚಾಲಕ ಶಿವಾಜಿ ತಂದೆ ಮಹಾದೇವ ಸಾ ವರವಡ ತಾ ಮಾಡಾ ಜಿ:ಸೋಲ್ಲಾಪೂರ (ಮಹಾರಾಷ್ಟ್ರ) ಇವನು ತನ್ನ ಲಾರಿಯನ್ನು ಅತೀ ವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗಾಲು ಮೋಳಕಾಲಿಗೆ ರಕ್ತಗಾಯ ಗೊಳಿಸಿ ಮತ್ತು ಮುಖಕ್ಕೆ ಹಾಗೂ ಎರಡು ಕೈಗಳಿಗೆ ತರಚಿದ ಗಾಯಗೊಳಾಗಿದ್ದು ನನ್ನ ಮೋಟಾರ ಸೈಕಲ ಹಿಂದೆ ಕುಳಿತ ನರೇಶ ಇತನಿಗೆ ಇವನಿಗೆ ತಲೆಗೆ ಭಾರಿ ರಕ್ತಗಾಯ ಹೊಂದಿ ಹಾಗೂ ಬಲಗಾಲು ತೋಡೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐಎವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ.
ಶ್ರೀ ಅನಿಲ ತಂದೆ ಶರಣಗೌಡ ಪಾಟಿಲ ಸಾ ಶಹಾಪೂರ ರವರು ನಾನು ಮತ್ತು ಮಾವನಾದ ಜಗದೀಶ ಪಾಟಿಲ್ ಇಬ್ಬರೂ ಕೂಡಿಕೊಂಡು ದಿನಾಂಕ: 29-02-2012 ರಂದು ಕಾರ ನಂ ಕೆ.ಎ 19 ಪಿ 5239 ನೇದ್ದರಲ್ಲಿ ಕಾರ್ಪೊರೇಶನ ಬ್ಯಾಂಕಿಗೆ ಹೋಗಿ 5,00000/- ರೂ ಅದರಲ್ಲಿ 1,14 ಸಾವಿರ ಸನ್ ಸೂಜಿ ಉದ್ಯೋಗ ಪ್ರಾವೇಟ ಇವರ ಹೆಸರಿಗೆ ಆರ್.ಟಿ.ಜಿ.ಎಸ್ ಮಾಡಿಸಿ ಉಳಿದ 3 ಲಕ್ಷ 86 ಸಾವಿರ ತೆಗೆದುಕೊಂಡು ಕಾರಿನಲ್ಲಿ ಕನ್ನಡ ಭವನ ಹತ್ತಿರ ಬಂದು ಆರ್.ಕೆ ಎಂಟರ್ ಪ್ರೇಸಸ್ ಗೆ ಹೋಗಿ ಸಿಸಿ ಟಿವಿ ಬಗ್ಗೆ ವಿಚಾರಿಸಿ ಮರಳಿ ಬರುವಷ್ಟರಲ್ಲಿ ಕಾರಿನಲ್ಲಿಟ್ಟ ಹಣ ಕಳ್ಳತನವಾಗಿದ್ದು ಡ್ರೈವರನಿಗೆ ವಿಚಾರಿಸಿದಾಗ ಗುಡಕಾ ತರಲು ಹೋಗಿರುವುದಾಗಿ ತಿಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 20/12 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ:
ದಿನಾಂಕ 29-2-2012 ರಂದು ಮಧ್ಯಾಹ್ನ ಕಪನೂರ ಏರಿಯಾದ ಮಾಸಾಫ್ತಿ ದರ್ಗಾದ ಹಿಂದುಗಡೆ ಪ್ರಬು ವಾಡಿ ಇವರ ಹೋಟೆಲದಲ್ಲಿ ಶ್ರೀ ಪ್ರಭು ತಂದೆ ಶ್ರೀಮಂತರಾವ ಬೇಲೂರೆ ಸಾ: ಮಹಾಗಾಂವ ವಾಡಿ ಹಾವರಾಮನಗರ ಗುಲಬರ್ಗಾ ಇತನು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆತನನ್ನು ವಶಕ್ಕೆ ತೆಗೆದುಕೊಂಡು ಮಟಜಾ ಜೂಜಾಟಕ್ಕೆ ಉಪಯೋಗಿಸಿದ ನೋಕಿಯಾ ಮೋಬಾಯಿಲ್ ಒಂದು ಕಾರ್ಬನ ಮೋಬಾಯಿಲ್ ನಗದು ಹಣ 1060-00 ಮತ್ತು ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 63/2012 ಕಲಂ 73 (3) ಕೆಪಿಆಕ್ಟ ಪ್ಕರಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.