POLICE BHAVAN KALABURAGI

POLICE BHAVAN KALABURAGI

10 June 2011

GULBARGA DIST REPORTED CRIMES

ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ಶ್ರಿಮಂತ ತಂದೆ ಸೈಬಣ್ಣ ಪಟ್ಟೇದಾರ ಹಾವ|| ಪಿ.ಡಬ್ಲು.ಡಿ ಕ್ವಾಟರ್ಸ ಹಳೇ ಜೇವರ್ಗಿ ರಸ್ತೆ ಗುಲಬರ್ಗಾ ರವರು, ದಿ: 08-06-11 ರಂದು ಅಮರನಾಥ.ಎನ್.ಪಾಟೀಲ ಅಧ್ಯಕ್ಷರು (ಹೆಚ್.ಕೆ.ಎ.ಡಿ.ಬಿ) ಕಛೇರಿ ಗುಲಬರ್ಗಾ ಸಂಗಡ 15-20 ಜನರು ನನಗೆ ಮನೆಗೆ ಕರೆದು ಅವಾಚ್ಯ ಶಬ್ದಗಳಿಂದ ಬೈಯ್ದು ನಿನಗೆ ಎಷ್ಟು ಸೊಕ್ಕು, ಕರೆದರು ಬರುತ್ತಿಲ್ಲಾ ಮೇಡಂ ಇವರಿಗೆ ನಾನು ಬಂದಿದ್ದು ತಿಳಿಸು ಅಂತಾ ಹೇಳಿದರೂ ನೀನು ಯಾಕೆ ತಿಳಿಸಲಿಲ್ಲಾ ಅಂದಾಗ ನಿವೇನು ನನಗೆ ಹೇಳಿಲ್ಲಾ ಸರ್ ಆದ್ದರಿಂದ ತಿಳಿಸಿಲ್ಲಾ ಅಂತಾ ನಾನು ಹೇಳಿದ್ದು, ಆಗ ಅದ್ಯಕ್ಷರು ಮತ್ತೆ ಅವಾಚ್ಯ ಶಬ್ದಗಳಿಂದ ಬೈಯ್ದು, ಜಾತಿ ನಿಂದನೆ ಮಾಡಿ ಹೊಡೆ-ಬಡೆ ಮಾಡಿದ್ದು ಅಲ್ಲದೇ, ಕೆಳಗಡೆ ನಿಂತ 15-20 ಜನರಿಗೆ ಕರೆಯಿಸಿ ಹೊಡೆಬಡೆ ಮಾಡಿಸಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ಚಿಂಚೋಳಿ ಠಾಣೆ :
ಶ್ರೀ ಶಂಕರ ತಂದೆ ಕುಮ್ಲಾನಾಯಕ ರಾಠೋಡ ಸಾ|| ಕುಮ್ಲಾನಾಯಕ ತಾಂಡಾ ಚೆನ್ನೂರ ರವರು, ನಾನು ಮತ್ತು ನನ್ನ ತಾಯಿ ಪುನಿಬಾಯಿ ಮತ್ತು ತಂದೆ ಕುಮ್ಲಾನಾಯಕ ರಾಠೋಡ, ಮೂರು ಜನ ನಮ್ಮ ಹೊಲದಲ್ಲಿ ಬಿತ್ತುದ್ದಿದ್ದಾಗ ಬಾಜು ಹೋಲದವರಾದ ಚನ್ನೂರ ಗ್ರಾಮದ ರಾಜೇಪ್ಪಾ ತಂದೆ ವಿಠ್ಠಲ್ ಮುಸ್ತರಿ , ಹಣಮಂತ ತಂದೆ ವೀಠ್ಠಲ್ ಮುಸ್ತರಿ, ಶಾಂತಪ್ಪಾ ತಂದೆ ವೀಠ್ಠಲ್ ಮುಸ್ತರಿ, ಪ್ರಭಾವತಿ ಗಂಡ ರಾಜೇಪ್ಪಾ ಮುಸ್ತರಿ, ಜಗದೇವಿ ಗಂಡ ಪುಂಡಲೀಕ ಮುಸ್ತರಿ, ಹಾಗೂ ರೇಣುಖಾ ಗಂಡ ವೈಜೇಪ್ಪಾ ಮುಸ್ತರಿ ಈ ಆರು ಜನರು ಕೂಡಿಕೊಂಡು ನಮ್ಮ ಹೊಲದೊಳಗೆ ಅತೀಕ್ರಮ ಪ್ರವೇಶ ಮಾಡಿ ನಿನ್ನ ಎತ್ತುಗಳು ನನ್ನ ಹೋಲದಲ್ಲಿ ಯಾಕೇ ಬಂದಿವೆ? ಅಂತಾ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು, ಹೊಡೆ ಬಡೆ ಮಾಡಿದ್ದು, ಬಿಡಿಸಲು ಬಂದ ನಮ್ಮ ತಂಗಿಯಾದ ಅಂಜುನಾಬಾಯಿ ಇವಳಿಗೂ ಹೊಡೆ ಬಡೆ ಮಾಡಿರುತ್ತಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತುತ್ತಾರೆ. ಕಾರಣ ನಮಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ಎಂ.ಬಿ.ನಗರ ಠಾಣೆ :
ಶ್ರೀ.ಮಾಬುಸಾಬ ತಂದೆ ಗೋಕುಲಸಾಬ ಅರಗಂಜಿ ಸಾ|| ಮುದುಗಲ್ ತಾ;ಲಿಂಗಸೂರ ಜಿ:ರಾಯಚೂರ ಹಾವ. ಜಾಗೃತಿ ಕಾಲೋನಿ ಗುಲಬರ್ಗಾ.ರವರು, ದಿ: 28-05-11 ರಂದು ಸ್ಪಂದನ ಸ್ಪೂರ್ತಿ ಫೈನಾನ್ಸ ಗುಲಬರ್ಗಾ-3 ನೆದ್ದರ ಬ್ರ್ಯಾಂಚಗೆ ಸಿಬಾಜಿ ಅನಿಮಿ ಎಂಬುವವರು ಮುಖ್ಯ ಕಛೇರಿಯಿಂದ ( ಹೆಚ.ಓ) ಬ್ಯ್ರಾಂಚ ಮ್ಯಾನೇಜರ ಆಗಿ ತರಬೇತಿಗಾಗಿ ಬಂದಿದ್ದು ರಾತ್ರಿ ನನ್ನೊಂದಿಗೆ ಇರುತ್ತಿದ್ದು . ಹೀಗಿದ್ದು ದಿನಾಂಕ.8-6-2011 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ನಮ್ಮ ಬ್ಯಾಂಕನಲ್ಲಿ ಸಿಬ್ಬಂದಿಯವರಾದ ಅನೀಲ್ , ಪ್ರಕಾಶ , ಬನದೇಶ್ವರ ಎಲ್ಲರೂ ಒಂದು ರೂಮಿನಲ್ಲಿ ಮಲಗಿಕೊಂಡರು ನಾನು ಮತ್ತು ಸಿಬಾಜಿ ಅನಿಮಿ ಇಬ್ಬರು ಲಾಕರ ರೂಮಿನಲ್ಲಿ ಮಲಗಿಕೊಂಡಾಗ ರಾತ್ರಿ ವೇಳೆ ನನ್ನ ತಲೆದಿಂಬಿನ ಕೆಳಗೆ ಇದ್ದ ಲಾಕರ ಚಾವಿಯನ್ನು ಸಿಬಾಜಿ ಅನಿಮಿ ತೆಗೆದುಕೊಂಡು, ಲಾಕರದಲ್ಲಿ ಇದ್ದ 2,32,360=50/- ರೂ ಮತ್ತು ನನ್ನ ಮೋಬಾಲ ಅಕಿ.1000/- ರೂ ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಕಾರಣ ಅವನನ್ನು ಪತ್ತೆ ಹಚ್ಚಿ ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ಚೌಕ ಠಾಣೆ :
ಶ್ರೀ ಶಿವಪುತ್ರಪ್ಪಾ ತಂದೆ ಚೆನ್ನಪ್ಪ ಚಿಂಚೋಳಿ ಸಾ: ಮಹಾಂತ ನಗರ ಗುಲಬರ್ಗಾ ರವರು, ನಾನು ದಿ: 09-06-11 ರಂದು ನೆಹರು ಗಂಜದ ಹೆಚ್ ಬಿ & ಕಂಪನಿಯ ಮಾಲಿಕರಿಗೆ ಭೇಟಿಯಾಗಲು ನನ್ನ ಕಾರಿನಲ್ಲಿ ಹೋಗಿದ್ದು, ಭೇಟಿಯಾಗಿ ಮರಳಿ ಬರುವಷ್ಟರಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಕಾರಿನ ಗ್ಲಾಸನ್ನು ಒಡೆದು ಕಾರನಲ್ಲಿದ್ದ ನಗದು ಹಣ 61,550/- ರೂ. ಇದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಶವ ಪತ್ತೆ :-
ಜೇವರ್ಗಿ ಠಾಣೆ :
ಶ್ರೀ ಮಲ್ಲಯ್ಯ ತಂದೆ ಸೈದಪ್ಪಾ ಗುತ್ತೆದಾರ ಸಾ: ಇಜೇರಿ ತಾ: ಜೇವರ್ಗಿ ರವರು, ಜೇವರ್ಗಿ – ಶಹಾಪುರ ರೋಡಿನ ಪೂರ್ವಕ್ಕೆ ಚಿಗರಳ್ಳಿ ಸೀಮೇಯಲ್ಲಿರುವ ಅರಣ್ಯ ಇಲಾಖೆಯ ಜಮೀನಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಅಪರಿಚಿತ ಹೆಣ್ಣು ಮಗಳನ್ನು ಕೊಲೆ ಮಾಡಿ ಶವವನ್ನು ತಂದು ಹಾಕಿದ್ದು, ಮೈಮೇಲೆ ಹಸಿರು ಬಣ್ಣದ ಒಳಗೆ ಕಪ್ಪು ಚೌಕಡಿಯ ಗೆರೆಯಿದ್ದ ಪಾಲಿಸ್ಟರ ಸೀರೆ, ಬಿಳಿ ಬಣ್ಣದ ಜಂಪರ, ಬಿಳಿ ಬಣ್ಣದ ಲಂಗಾ ಧರಿಸಿದ್ದು, ಅಂದಾಜು 40 ರಿಂದ 45 ವರ್ಷ ವಯಸ್ಸಿನವಳಿರಬಹುದು. ಕಾರಣ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 June 2011

GULBARGA DIST REPORTED CRIMES

ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿದ ಪ್ರಕರಣ :-

ಬ್ರಹ್ಮಪುರ ಠಾಣೆ : ಶ್ರೀಮತಿ ರಮಾದೇವಿ ಮಾಡಗಿ ಸಾ|| ಜಗತ್ ಗುಲಬರ್ಗಾ ರವರು, ಮಹ್ಮದ ಹಾರುನ ಖಾದರ ಮತ್ತು ಇಮ್ರಾನ್ ತಂದೆ ಜಾವಿದ ಇವರು ಸುಮಾರು ವರ್ಷಗಳಿಂದ ನಮ್ಮ ಕಾಂಪ್ಲೆಕ್ಸನಲ್ಲಿ ಅನಧಿಕೃತವಾಗಿ ಬಾಡಿಗೆ ಇರುತ್ತಾರೆ. ನಾನು ಬಾಡಿಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದು ಬಾಡಿಗೆ ಕೊಡುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ವಿರುದ್ದ ದೂರು ಕೊಟ್ಟಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶ ಇಬ್ಬರ ಬಂಧನ :-
ರೋಜಾ ಠಾಣೆ :
ರಾಮಜಿ ನಗರದ ಬುದ್ದ ಮಂದಿರದ ಗಲ್ಲಿಯಲ್ಲಿ ಯಾವುದೇ ದಾಖಲಾತಿ ಇಲ್ಲದೇ ಅನಧಿಕೃತವಾಗಿ ಕ್ವಾಟರ ಬಾಟಲ್ ಗಳನ್ನು ಮಾರಾಟ ಮಾಡುತ್ತಿದ್ದ ಅರ್ಜುನ್ ತಂದೆ ಮಲಕಪ್ಪ ಕುಂಟೆ ಮತ್ತು ನೀಲಕಂಠ ತಂದೆ ಹಣಮಂತರಾಯ ಇಬ್ಬರೂ ಸಾ|| ರಾಮಜಿ ನಗೆರ ಗುಲಬರ್ಗಾ ರವರನ್ನು ಬಂಧಿಸಿದ್ದು, ಬಂಧಿತರಿಂದ ಯು.ಎಸ್ ವಿಸ್ಕಿಯ 180 ಎಮ್ಎಲ್ ದ ಬಾಟಲ್ ಗಳನ್ನು ಮತ್ತು ನಗದು ಹಣ 1075/- ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯರ ನಿರ್ಲಕ್ಷತನದಿಂದ ಸಾವು ಸಂಭವಿಸಿದ ಪ್ರಕರಣ :-
ಅಶೋಕ ನಗರ ಠಾಣೆ :ಶ್ರೀ ಅಮೃತ ತಂದೆ ಬಾಪಣ್ಣ ಸಿಂಧೆ ಸಾ|| ರಾಮನಗರ ರಿಂಗ ರೋಡ ಗುಲಬರ್ಗಾ ರವರು ತಮ್ಮ ಹೆಂಡತಿ ಸರಸ್ವತಿ ಇವರಿಗೆ ಹೆರಿಗೆ ಕುರಿತು ಸಂಗಮೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿಸಿ ನಂತರ ಅದೇ ಆಸ್ಪತ್ರೆಯಲ್ಲಿ ದಿ:
16/03/2011 ರಂದು ಡಾ|| ಇಂದಿರಾ ಹಾಗೂ ಸಹ ವೈದ್ಯಾದಿಕಾರಿಗಳು ಪ್ಯಾಮಿಲಿ ಪ್ಲಾನಿಂಗ ಆಫರೆಶನ್ ಮಾಡಿ ಡಿಚಾರ್ಜ ಮಾಡಿದ ನಂತರ ಆಫರೆಶನ್ ಮಾಡಿದ ಸ್ಥಳದಲ್ಲಿ ಹೊಲಿಗೆ ಬಿಚ್ಚಿದ್ದರಿಂದ ಪುನಃ ಸಂಗಮೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿ ಮತ್ತೊಮ್ಮೆ ಆಫರೆಶನ್ ಮಾಡಿದ್ದು ನಂತರ ಐದಾರು ದಿವಸಗಳ ನಂತರ ಎದೆ ಕೆಳಗಡೆ ಗುಳ್ಳಿ ಆಗಿದ್ದು ಅದು ಬೆಳೆಯುತ್ತಾ ದೊಡ್ಡದಾಗಿ ಅದಕ್ಕೂ ಸಹ ಆಫರೆಶನ್ ಮಾಡಬೆಕಾಗಿದೆ ಎಂದು ದಿ:05- 04-11 ರಂದು ಮತ್ತೊಮ್ಮೆ ಆಫರೆಶನ್ ಮಾಡಿದ್ದು ಹೀಗೆ 3 ಭಾರಿ ಆಫರೆಶನ್ ಮಾಡಿದ್ದರಿಂದ ನನ್ನ ಹೆಂಡತಿ ಸರಸ್ವತಿ ಪರಸ್ಥಿತಿ ತುಂಬಾ ಕೆಟ್ಟು ಹೊಗಿದ್ದು ಗುಣಮುಖ ಆಗದೆ ಇರುವದರಿಂದ ದಿ:11/04/2011 ರಂದು ಡಾ||ಇಂದಿರಾರವರು ಬಸವೇಶ್ವರ ಆಸ್ಪತ್ರೆಗೆ ಪತ್ರ ಬರೆದು ಕಳುಹಿಸಿಕೊಟ್ಟಿದ್ದು ಬಸವೇಶ್ವರ ಆಸ್ಪತ್ರೆಯಲ್ಲಿ ಡಾ|| ಸುರೇಶ ಚಿಂಚೋಳಿಕರ ಮತ್ತು ಅವರ ಸಹಾಯಕರು ನನಗೆ ಪೆಸೆಂಟಗೆ ಎನಾಗಿದೆ ಅಂತಾ ಯಾವುದೆ ವಿಷಯ ಅಲ್ಲಿಯೂ ಸಹ ತಿಳಿಸದೆ ಐ.ಸಿ.ಯು ರೂಂನಲ್ಲಿ 2 ದಿವಸ ಉಪಚಾರ ಮಾಡಿ ಮತ್ತೆ ಪರಸ್ಥೀತಿ ಬಿಗಡಾಯಿದ್ದರಿಂದ ಹೆಚ್ಚಿನ ಉಪಚಾರಕ್ಕಾಗಿ ದಿ:13/04/2011 ರಂದು ಬಸವೇಶ್ವರ ಆಸ್ಪತ್ರೆಯಿಂದ ನನ್ನ ಹೆಂಡತಿಗೆ ಸೊಲ್ಲಾಪೂರದ ಯಶೋಧರಾ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು ಅಲ್ಲಿಯ ವೈದ್ಯಾಧಿಕಾರಿಗಳು ನನ್ನ ಹೆಂಡತಿಗೆ ಪರಿಕ್ಷಿಸಿ ನಿಮ್ಮ ಹೆಂಡತಿಗೆ 3 ಬಾರಿ ಆಫರೆಶನ ಮಾಡಿದ್ದರಿಂದ ಬಾಡಿ ತುಂಬಾ ಇನ್ ಪೆಕ್ಷನ್ ಆಗಿದೆ ಪೆಸೆಂಟ ತುಂಬಾ ಸಿರಿಯಸ್ ಆಗಿದೆ ಅಂತಾ ತಿಳಿಸಿ ತಮ್ಮ ಆಸ್ಪತ್ರೆಯಲ್ಲಿ 2 ದಿವಸಗಳ ಕಾಲ ಉಪಚಾರ ಮಾಡಿದರೂ ಸಹ ಸರಸ್ವತಿಗೆ ಉಪಚಾರ ಪಲಕಾರಿಯಾಗದೆ ದಿ:15/04/2011 ರಂದು ಮೃತಪಟ್ಟಿರುತ್ತಾಳೆ. ನನ್ನ ಹೆಂಡತಿಗೆ 3 ಬಾರಿ ಆಫರೆಶನ್ ಮಾಡಿ ಯಾವುದೆ ವಿಷಯವನ್ನು ಸರಿಯಾಗಿ ತಿಳಿಸದೆ ಅಲಕ್ಷತನದಿಂದ ಮತ್ತು ನಿಸ್ಕಾಳಜಿತನದಿಂದ ಆಫರೆಶನ ಮಾಡಿದ ಡಾ||ಇಂದಿರಾ ಮತ್ತು ಪೆಸೆಂಟಗೆ ಎನಾಗಿರುತ್ತದೆ ಎನ್ನುವ ವಿಷಯ ತಿಳಿಸದೆ 2 ದಿವಸ ನಿಸ್ಕಾಳಜಿತನದಿಂದ ಉಪಚಾರ ಮಾಡಿದ ಬಸವೇಶ್ವರ ಆಸ್ಪತ್ರೆಯ ಡಾ|| ಸುರೇಶ ಚಿಂಚೋಳಿಕರ ರವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


08 June 2011

GULBARGA DIST REPORTED CRIMES

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ಗುರುನಾಥ ತಂದೆ ಬಸವಣಪ್ಪಾ ಮೆಡಗುದೇ ಸಾ|| ತೊನಸಳ್ಳಿ [ಎಸ್‌] ರವರು, ದಿ:07-06-11 ರಂದು 11.00 ಎಎಂ ಸುಮಾರಿಗೆ ನಾನು ಸರೋಜಾ ವೈನ ಶಾಪ ಹತ್ತಿರ ಹೋಗುತ್ತಿರುವಾಗ ಮಾಣೆಕರಾವ ಮ್ಯಾನೇಜರ ಸರೋಜಾ ವೈನ ಶಾಪ ಇವನು ಬಂದು ನನಗೆ ತಡೆದು ವಿನಾ ಕಾರಣ ಜಗಳ ತೆಗೆದು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಕೊಡಬೇಕಾದ ಹಣ ಕೊಡು ಅಂತಾ ಹೇಳಿದೆನು. ನಾನೆಲ್ಲಿ ನಿನಗೆ ದುಡ್ಡು ಕೊಡುವದಿದೆ ಅಂತಾ ಅಂದಿದ್ದಕ್ಕೆ ಸದರಿ ಮಾಣೆಕರಾವ ಇವನು ನನ್ನ ಸಂಗಡ ಜಗಳ ತೆಗೆದು ಒಡೆದ ಬಾಟಲಿಯಿಂದ ನನ್ನ ಹೊಟ್ಟೆಗೆ ಹೊಡೆದನು. ಹಾಗೂ ನನಗೆ ಹಣ ಕೊಡಲಿಲ್ಲ ವೆಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಸದರಿಯವನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಯತ್ನ :-
ರಾಘವೇಂದ್ರ ನಗರ ಠಾಣೆ :
ಶ್ರೀ ಮಹ್ಮದ ಇರ್ಫಾನ್ ತಂದೆ ಮಹ್ಮದ ಜಾವೀದ ಶೇಖ ಸಾ|| ಹಿರಾಪೂರ ಗುಲಬರ್ಗಾ ರವರು, ನಾನು ಬಹುಮನಿ ಈದಗಾ ಹತ್ತಿರ ಇದ್ದಾಗ 1) ಕಲಿಂ ಮಿರ್ಜಾ, 2) ಫಯ್ಯುಮ ಮಿರ್ಜಾ, 3) ಸೈಬಾಜ ಅಲಿ, 4) ಅಮೀರ, 5) ರಿಯಾಜ್ ಸಾ|| ಎಲ್ಲರೂ ಬಿಲಾಲಬಾದ ಕಾಲೋನಿ ಗುಲಬರ್ಗಾ ಇವರೆಲ್ಲರೂ ನನಗೆ ಖರ್ಚಿಗೆ ಹಣ ಕೊಡು ಅಂತ ಒತ್ತಾಯಪಡಿಸಿದ್ದು, ಅದಕ್ಕೆ ನಾನು ನನ್ನ ಹತ್ತಿರ ಹಣ ಇಲ್ಲಾ ಅಂದಾಗ, ಆರೋಪಿತರೆಲ್ಲರು ಕೂಡಿಕೊಂಡು ತಲವಾರ, ಚಾಕು, ಕೈಯಿಂದ, ಹಾಗು ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :-
ಫರಹತಾಬಾದ ಠಾಣೆ :
ಶ್ರೀ ಅರ್ಜುನ ತಂದೆ ಈರಪ್ಪಾ ಬೆಳಗೇರಿ ಸಾ: ಅಲ್ಲೂರ(ಬಿ), ತಾ: ಚಿತ್ತಾಪೂರ, ಜಿ:ಗುಲಬರ್ಗಾ ರವರು, ನನ್ನ ಮಗಳಾದ ಮಹಾದೇವಿ ಇವಳಿಗೆ ನಡಿವಿನ ಹಳ್ಳಿ ಗ್ರಾಮದ ಬಸವರಾಜ ತಂದೆ ಯಲ್ಲಪ್ಪಾ ಶಹಾಪೂರ ಈತನಿಗೆ 2 ವರ್ಷಗಳ ಹಿಂದೆ ಲಗ್ನ ಮಾಡಿ ಕೊಟ್ಟಿರುತ್ತೇವೆ. ಈಗ ನನ್ನ ಮಗಳಿಗೆ ಒಂದುವರೆ ತಿಂಗಳಿನ ಗಂಡು ಮಗು ಇರುತ್ತದೆ. ಈಗ ಒಂದೂವರೆ ವರ್ಷದಿಂದ ಸದರಿ ನನ್ನ ಮಗಳಿಗೆ ಆಕೆಯ ಗಂಡನಾದ ಬಸವರಾಜ ಈತನು ಸಂಸಾರದ ವಿಷಯದಲ್ಲಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡುತ್ತಿದ್ದನು. ಈ ವಿಷಯ ನನ್ನ ಮಗಳು ನಮಗೆ ಹೇಳಿದ್ದರಿಂದ ಈಗ 6 ತಿಂಗಳ ಹಿಂದೆ ನಾನು ನನ್ನ ಮಗ ಬಸವರಾಜ ನನ್ನ ಹೆಂಡತಿ ಮೂರು ಜನ ಕೂಡಿಕೊಂಡು ನನ್ನ ಅಳಿಯನಿಗೆ ಚೆನ್ನಾಗಿ ಇರುವಂತೆ ತಿಳಿ ಹೇಳಿದ್ದು ಇರುತ್ತದೆ. ನಂತರ ನನ್ನ ಮಗಳು ಮಹಾದೇವಿ ಹೆರಿಗೆ ಆದ ನಂತರ ನಡವಿನ ಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಟ್ಟ 3, 4 ದಿನಗಳಲ್ಲಿ ಬಸವರಾಜ ಈತನು ದಿ: 1-6-11 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನನ್ನ ಮಗಳೊಂದಿಗೆ ಜಗಳ ತೆಗೆದು ಆಕೆಯ ಮೈಮೇಲೆ ಸೀಮೆ ಎಣ್ಣೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಆಕೆಗೆ ಬೆಂಕಿ ಹಚ್ಚಿರುತ್ತಾನೆ. ನನ್ನ ಮಗಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಉಪಚಾರ ಪಡೆಯುವ ವೇಳೆಯಲ್ಲಿ ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳನ್ನು ಕೊಲೆ ಮಾಡಿದ ಆತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.