POLICE BHAVAN KALABURAGI

POLICE BHAVAN KALABURAGI

19 May 2011

GULBARGA DISTRICT REPORTED CRIMES

ಕಳವು ಪ್ರಕರಣ :

ಚೌಕ ಠಾಣೆ : ಶ್ರೀ ಯೋಗೇಶ ರಸಾಳಕರ ಸಾ|| ಸ್ವಸ್ತಿಕ ನಗರ ಗುಲಬರ್ಗಾ ರವರು ದಿನಾಂಕ: 16-17-05-2011 ರಂದು ರಾತ್ರಿ ವೇಳೆಯಲ್ಲಿ ತನ್ನ ಎಸ.ಅರ್. ಹೋಟೆಲ ಹತ್ತಿರವಿರುವ ಪಾನ ಶಾಪದಲ್ಲಿ ಇಟ್ಟಿರುವ ಸಾಮಾನುಗಳು ಮತ್ತು ನಗದು ಹಣ ಒಟ್ಟು 23500-00 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಚೌಕ ಠಾಣೆ : ಅ ಶ್ರೀ ದೀಪಕಸಿಂಗ್ ತಂದೆ ಹಿರಾಸಿಂಗ ಠಾಕೂರ ಸಾ|| ಮಹದಾದೇವ ನಗರ ಗುಲಬರ್ಗಾ ರವರು ದಿನಾಂಕ: 30-04-2011 ರಂದು ಮನೆಯ ಮುಂಎದೆ ನಿಲ್ಲಿಸಿದ ಅಟೋ ಕೆಎ 32 6342 ಅಕಿ|| 47,000=00 ನೇದ್ದು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಗುರುನಾಗರಾಜ ತಂದೆ ಹಣಮಂತಪ್ಪ ಆಲಗೂಡಕರ್‌ ಸಾ: ಆಲಗೂಡ ಹಾ: ವ:ಸಂತ್ರಾಸ ವಾಡಿ ಚೌದರಿ ಮನೆಯ ಹತ್ತಿರ ಗುಲಬರ್ಗಾ ರವರು ದಿ: 25/5/2011 ರಂದು ಮದುವೆ ಪೂರ್ವದ ಕಾರ್ಯಕ್ರಮದ ನಿಮಿತ್ಯವಾಗಿ ನಾನು ಹಾಗು ನನ್ನ ತಂದೆ ತಾಯಿ ಹಾಗೂ ಹೆಂಡತತಿಯೊಂದಿಗೆ ತುಳಜಾಪೂರಕ್ಕೆ ದೇವಿಯ ದರ್ಶನಕ್ಕೆ ತಮ್ಮ ಪರಿಚಯದವರ ಇಂಡಿಕಾ ಕಾರ ನಂ ಎಮ್‌ಹೆಚ್‌ 01 ಡಿಎ- 6422 ನೇದ್ದರ ಕಾರ ಚಾಲಕ ಶರಣು ತಂದೆ ಗುಂಡಪ್ಪ ಜಡಕೆ ಇವನೊಂದಿಗೆ ಹೋಗಿ ದರ್ಶನ ಮಾಡಿಕೊಂಡು ಮರಳಿ ಗುಲಬರ್ಗಾಕ್ಕೆ ಬರುವಾಗ ಕಾರ ಚಾಲಕ ಶರಣು ಇತನು ಕಾರನ್ನು ಅತೀವೇಗವಾಗಿ ನಡೆಸುತ್ತಿದ್ದಾಗ ಅವನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರು ಹಾಗೇಯೇ ವೇಗವಾಗಿ ಕಾರನ್ನು ಚಾಲಾಯಿಸು ಸ್ವಾಮಿ ಸಮರ್ಥ ಗುಡ್ಡದ ಹತ್ತಿರ ಅವರಾದ(ಬಿ) ಸೀಮಾದಲ್ಲಿ ಓವರ ಟೇಕ ಮಾಡಲು ರೋಡಿನ ಬಲಬದಿಗೆ ತೆಗೆದುಕೊಂಡಿದ್ದರಿಂದ ರೋಡಿನ ಬಲಭಾಗದ ಗುಟದ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ತಂದೆಯವರು ಕಾರಲಿನಲ್ಲಿಯೇ ಸ್ಥಳದಲ್ಲಿ ಮೃತಪಟ್ಟಿದ್ದು ತಾಯಿಯ ತಲೆಗೆ ಬಾರಿ ರಕ್ತಗಾಯವಾಗಿ ನಮ್ಮಗೆ ಸಣ್ಣಪುಟ್ಟ ಗಾಯಗಳು ಆಗಿದ್ದು ಅಂತಾ ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಈರಫನ್‌ ತಂದೆ ಚಾಂದಪಟೇಲ ಸಾ: ಮದೀನಾ ಕಾಲನಿ ಗುಲಬರ್ಗಾ ರವರು ನನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ 32 ವ್ಹಿ 5723 ನೇದ್ದನ್ನು ನಿನ್ನೆ ದಿನಾಂಕ; 17/5/2011 ರಂದು ಸಾಯಂಕಾಲ ನನ್ನ ದ್ವೀ ಚಕ್ರ ವಾಹನಗಳ ಗ್ಯಾರೇಜ ರಿಪೇರಿ ಅಂಗಡಿ ಮುಂದೆ ನಿಲ್ಲಿಸಿದ ಮೋಟಾರ ಸೈಕಲನ್ನು ಯಾರೋ ಅಪರಿಚಿತ ವ್ಯಕ್ತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 May 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀಮತಿ. ಕವಿತಾ ಗಂಡ ಜ್ಞಾನೇಶ್ವರ ಅನಂತಯ್ಯ ಸಾ|| ಗೋಸಾ ಮಹಾಲ ಬಾಲಯ್ಯ ಬಾಡಾ ಹೈದ್ರಾಬಾದ ರವರು, ನಾನು ದಿನಾಂಕ: 17-05-2011 ರಂದು ಅಕ್ಕ ಗನಕಮ್ಮ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ಅಕ್ಕಳಾದ ಗನಕಮ್ಮಳ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್‌ ಒಟ್ಟು 2 ತೊಲೆ ಅಂದಾಜು ಕಿಮ್ಮತ್ತು 40,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀ, ಪಿ.ರಾಮಕೃಷ್ಣ ತಂದೆ ಪೋಚಯ್ಯ ಪಂಪರಿ ಸಾ|| ಟೆಂಪಲ್‌ ಅಲ್ವಾಲ್‌ ಸಿಕಿಂದ್ರಾಬಾದ ರವರು, ನಾನು ದಿನಾಂಕ: 18-04-2011 ರಂದು ಹೆಂಡತಿ ಪಿ.ಶಕುಂತಲಾ ಹಾಗೂ ಅವಳ ತಂಗಿ ಭುಜಮ್ಮಾ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ನನ್ನ ಹೆಂಡತಿಯ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್‌ ಒಟ್ಟು 4 ತೊಲೆ ಅಂದಾಜು ಕಿಮ್ಮತ್ತು 80,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾಥ ಪ್ರಕರಣ:

ಅಪಜಲಪೂರ ಠಾಣೆ :
ಲಕ್ಷ್ಮಿಪುತ್ರ ತಂದೆ ಮಲ್ಲಣ್ಣ ಕಲಶೇ್ಟಿ ಸಾ|| ನಿಗಡಿ ಏರಿಯಾ ಪುಣೆ ಮಹಾರಾಷ್ಟ್ರ ರಾಜ್ಯ ರವರು ನಾನು ಮತ್ತು ನನ್ನ ಅಣ್ಣ ಸಂತೋಷ ಇತನು ಕೂಡಿಕೊಂಡು ಮಣ್ಣೂರ ಗ್ರಾಮದ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದು ಊಟಕ್ಕೆ ಕುಳಿತಾಗ 407 ವಾನಹ ಕೆಎ 32- 5900 ನೇದ್ದರೆ ಚಾಲಕ ತನ್ನ ವಾಹನವನ್ನು ಅಲಕ್ಷತನದಿಂದ ನಡೆಯಿಸಿ ಸಂತೋಷ ಇತನ ತಲೆಗೆ ಟಾಯರ ಹರಿದು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

17 May 2011

GULBARGA DISTRICT REPORTED CRIME

ದರೋಡೆ ಪ್ರಕರಣ :

ಎಂ ಬಿ ನಗರ ಠಾಣೆ : ಶ್ರೀಮತಿ. ಸುಮಾ ಗಂಡ ಅಮೀತಕುಮಾರ ಜೀವಣಗಿ ಸಾ|| ಪ್ಲಾಟ ನಂ.112 ಪ್ರಗತಿ ಕಾಲೂನಿ ಗುಲಬರ್ಗಾ ರವರು ದಿನಾಂಕ. 16-05-2011 ರಂದು ರಾತ್ರಿ ಬಡೆಪೂರದಲ್ಲಿರುವ ನಮ್ಮ ತಾಯಿ ಮನೆಗೆ ಹೋಗಿ ಮರಳಿ ಮನೆಗೆ ಬರುವಾಗ ಪ್ರಗತಿ ಕಾಲೂನಿ ಗಾರ್ಡನ ಹತ್ತಿರ 8-00 ಪಿ.ಎಂ.ಕ್ಕೆ ಒಬ್ಬ ಹೀರೊಹಾಂಡಾ ಮೋಟರ ಸೈಕಲ ಸವಾರನು ಮೈಮೇಲೆ ಬಂದಂತೆ ಮಾಡಿ ನನ್ನ ಕೊರಳಿಗೆ ಕೈ ಹಾಕಿ 4 ತೊಲೆ ಬಂಗಾರ ಮಂಗಳ ಸೂತ್ರ ಅಕಿ. 85,800/- ರೂ ಬೆಲೆಬಾಳುವದು ಕಿತ್ತುಕೊಂಡು ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಮತ್ತು ಹಲ್ಲೆ ಪ್ರಕರಣ

ಬ್ರಹ್ಮಪೂರ ಠಾಣೆ : ರಾಹುಲ್ ತಂದೆ ಅಶೋಕ ಹೇರೂರ ಸಾ|| ಸತ್ಯ ಕಾಮ್ ಪ್ರೇಸ್ ಮೇನ ರೋಡ ಗುಲಬರ್ಗಾ ರವರು ನನಗೆ ದಿನಾಂಕ 16-05-2011 ರಂದು ವಿನೋದ ತಂದೆ ಆನಂದ ಸಗರ ಈತನು ಮಚ್ಚಿನಿಂದ ಹೊಡೆದು ಗಾಯ ಪಡಿಸಿ ನನ್ನ ಹತ್ತಿರ ಇದ್ದ ಬಂಗಾರದ ಲಾಕೇಟ ಅಕಿ|| 20,000-00 ಮತ್ತು ನಗದು ಹಣ 3,000-00 ಹೀಗೆ ಒಟ್ಟು 23,000-00 ಮ್ಔಲಯದ್ದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀ ಅಲ್ತಪ್ ತಂದೆ ಯೂಸುಪ್ ಖಾನ ಸಾ|| ಪಡಸಾವಳಗಿ ರವರು ಸರಸಂಭಾ ಗ್ರಾಮದ ಪಾಟಿ ಹತ್ತಿರ ಇದ್ದಾಗ ಚಾಂದಬಿ ಗಂಡ ಅಲ್ತಪ್ ಖಾನ ಮತ್ತು ಮಹಮದ ಹನಿಪ್ ಇಬ್ಬರು ಬಂದು ಬಾಯಿಯಲ್ಲಿ ದಸ್ತಿ ತುರಕಿ ಜೀಪಿನಲ್ಲಿ ಹಾಕಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಲ್ಲಿನಿಂದ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.