POLICE BHAVAN KALABURAGI

POLICE BHAVAN KALABURAGI

15 November 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ತುಕಾರಾಮ ತಂದೆ ಯಶ್ವಂತ ಬಟ್ಟರಕಿ ಸಾ||ವ್ಹಿ.ಕೆ.ಜಿ.ನಗರ ಅಫಜಲಪೂರ ರವರು ಮಗನ ಹೆಸರಿನಲ್ಲಿ ಒಂದು ಮೋಟಾರ ಸೈಕಲ ಖರಿದಿಸಿದ್ದು ಅದರ ನೊಂದಣಿ ಸಂಖ್ಯೆ ಕೆ,ಎ-32 ಇಎಸ್-4453 (ಚೆಸ್ಸಿ ನಂ:MBLHAR073J5D14671) ನೇದ್ದು ಇರುತ್ತದೆ. ದಿನಾಂಕ : 14/11/2019 ರಂದು 5-45 ಪಿ,ಎಮ್,ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಮನೆಯಲ್ಲಿದ್ದಾಗ ನನ್ನ ಮಗನಾದ ವಿಶ್ವುನಾಥ @ ಯಶ್ವಂತನು ತನ್ನ ಮೊಟಾರ ಸೈಕಲ ತಗೆದುಕೊಂಡು ಹೊರಗಡೆ ಹೋಗಿ ಬರುತ್ತೇನೆ ಅಂತ ಹೋಗಿರುತ್ತಾನೆ.ನಂತರ 6-30 ಪಿ,ಎಮ್,ಸುಮಾರಿಗೆ ಅಫಜಲಪೂರ ಪಟ್ಟಣದ ಬಸಣ್ಣ ಆಲಮೇಲೆ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗನಿಗೆ ಅಫಜಲಪೂರ-ಕಲಬುರಗಿ ಮುಖ್ಯ ರಸ್ತೆ ಮೇಲೆ ಶಿವಪ್ಪ ಮ್ಯಾಕೇರಿ ರವರ ಹೊಲದ ಹತ್ತಿರ ಅಪಘಾತವಾಗಿದ್ದು ಸದರಿ ಅಪಘಾತದಿಂದ ನಿಮ್ಮ ಮಗ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನನ್ನ ತಮ್ಮನಾದ ಮನೋಹರ ಮತ್ತಿತರು ಹೋಗಿ ನೋಡಲಾಗಿ ನನ್ನ ಮಗನಿಗೆ  ತಲೆಗೆ ಮತ್ತು ಮುಖಕ್ಕೆ, ಗಂಟಲು ಹತ್ತೀರ ಭಾರಿ ರಕ್ತಗಾಯ ಹಾಗೂ ಮತ್ತು ಕಾಲು ಮುರುದಿದ್ದು ಹಾಗೂ ಹೊಟ್ಟೆಗೆ ತರಚಿದ ಗಾಯ ಮತ್ತು ಇತರೆ ಭಾರಿ ಮತ್ತು ಸಾದಾಗಾಯಗಳಾಗಿರುವದು ಕಂಡು ಬಂತು ಸದರಿ ಅಪಘಾತದಿಂದ ನನ್ನ ಮಗ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ನನ್ನ ಮಗನ ಮೋಟಾರ ಸೈಕಲಗೆ ಅಪಘಾತಪಡಿಸಿದ ಟಾಟಾ ಸುಮೋ ಚಾಲಕನು ಟಾಟಾ ಸುಮೋವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅದರ ನಂಬರ ನೋಡಲಾಗಿ ಕೆ,ಎ-32 ಎನ್-3717 ಅಂತ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 189/2019 ಕಲಂ 279 304 (ಎ) ಐಪಿಸಿ ಮತ್ತು 187  ಐ.ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟೆಂಪೂ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ:14-11-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಮಣ್ಣೂರ ಗ್ರಾಮದ ಭಿಮಾ ನದಿಯಿಂದ ಟೆಂಪೊದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಕರಜಗಿ ಗ್ರಾಮದ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂಂರ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಶಿವೂರ ಕ್ರಾಸ್ ಹತ್ತೀರ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಟೆಂಪೊ ಬಂದಿದ್ದು  ನಿಲ್ಲಿಸಲು ಸೂಚನೆ ಕೊಟ್ಟಾಗ ಅದರ ಚಾಲಕನು ನಮ್ಮನ್ನು ನೋಡಿ ಟೆಂಪೊ ನಿಲ್ಲಿಸಿ ಓಡಿ ಹೋದನು ನಾವು ಸದರಿಯವನನ್ನು ಹಿಡಿಯಲು ಬೆನ್ನು ಹತ್ತೀದರು ಸಿಕ್ಕಿರುವದಿಲ್ಲ ಆಗ ನಾವು ಪಂಚರ ಸಮಕ್ಷಮ ಸದರಿ ಟೆಂಪೊ ಚೆಕ್ಕ ಮಾಡಲು 1) ಟಾಟಾ ಕಂಪನಿಯ ಟೆಂಪೊ ಇದ್ದು ಅದರ ನೊಂದಣಿ ಸಂಖ್ಯೆ ಕೆ,ಎ-37 4248 ಅಂತ ಬರೆದಿದ್ದು ಇರುತ್ತದೆ.ಸದರಿ ಟೆಂಪೊದಲ್ಲಿ ಮರಳು ತುಂಬಿದ್ದು ಇತ್ತು ಸದರಿ ಟೆಂಪೊ ಅ.ಕಿ 2,00,000/-ರೂ  ಇರಬಹುದು ಮತ್ತು ಅದರಲ್ಲಿ ತುಂಬಿದ ಮರಳಿನ ಅ.ಕಿ 3.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟೆಂಪೊವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಅಫರಾಧ ಸಂ 188/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಡ್ಡೆಪ್ಪ ತಂದೆ ಧರೆಪ್ಪ ಕುಂಬಾರ ಸಾ: ಮಣೂರ ರವರು ದಿನಾಂಕ 13-11-2019 ರಂದು ಎಂದಿನಂತೆ ಒಕ್ಕಲುತನದ ಕೆಲಸ ಮಾಡಲು ನಮ್ಮ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನೀರು ತರಲು ನಮ್ಮ ಮನೆಯ ಹತ್ತಿರ ಇರುವ ನಳಕ್ಕೆ ಹೋದಾಗ ನನ್ನ ತಮ್ಮನ ಮಕ್ಕಳಾದ ರುದ್ರಪ್ಪ ಮಾಹಾದೇವ ಕುಂಬಾರ ಮತ್ತು ಮಲ್ಲಪ್ಪ ಮಹಾದೇವ ಕುಂಬಾರ ಇವರು ಅಲ್ಲಿಗೆ ಬಂದವರೇ ಹೊಲದ ಬಾಂದಾರಿಯ ಮೇಲಿನ ಜಾಲಿಯ ಮರದ ವಿಷಯದಲ್ಲಿ ವಿನಾ ಕಾರಣ ಜಗಳ ತಗೆದು ಆ ಗಿಡಕ್ಕೆ ನಿಮ್ಮ ಎಮ್ಮಿ ಕಟ್ಟಬೇಡಿರಿ ಭೋಸಡಿ ಮಕ್ಕಳ್ಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಏಕೆ ಬೈತಿ ಆ ಗಿಡಾ ಏನು ನಿಮ್ಮದಾ ಅಂತಾ ಕೇಳಿದಕ್ಕೆ ನಮಗೆ ಎದುರು ಮಾತನಾಡುತ್ಯಾ ಅಂತಾ ನನಗೆ ಹಿಡೆದು ನಿಲ್ಲಿಸಿ ರುದ್ರಪ್ಪಾ ಇತನು ತನ್ನ ಕೈ ಮುಷ್ಟಿ ಮಾಡಿ ಎದೆಯ ಮೇಲೆ, ಹೊಟ್ಟೆಗೆ, ಬಾಯಿಯ ದವಡೆಯಮೇಲೆ  ಗುದ್ದಿ ನೆಲಕ್ಕೆ ಕೆಡವಿದರು ಮಲ್ಲಪ್ಪ ಇತನು ತನ್ನ ಕೈಯಿಂದ ಕಪಾಳ ಮೇಲೆ, ಬೆನ್ನಿನ  ಮೇಲೆ ಹೊಡೆದು ಒಳ ಪೆಟ್ಟು ಆಗಿರುತ್ತದೆ ನನಗೆ ಈ ಮೋದಲೆ ಹಾಲ್ಟ ಆಪರೇಶನ್ ಆಗಿದ್ದು ನನ್ನ ಎದೆಯ ಮೇಲೆ ಮುಷ್ಟಿ ಗುದ್ದಿದ್ದರಿಂದ ನಾನು ನೋವನ್ನು ತಾಳದೇ ಸುಂದಾಗಿ ನೆಲಕ್ಕೆ ಬಿದ್ದಿರುತ್ತೇನೆ. ನನಗೆ ಹೊಡೆಯುತ್ತಿರುವದನ್ನು ಕಂಡು ನನ್ನ ಮಗ ಮತ್ತು ಹೆಂಡತಿ ನನಗೆ ಹೊಡೆಯುತ್ತಿದ್ದಾಗ ಏಕೆ ಹೊಡೆಯುತ್ತಿದ್ದಿರಿ ಅಂತಾ ಹೇಳಿದಕ್ಕೆ ನಿನಗೆ ಹೊಡೆಯುತ್ತೇನೆ ಸುಳಿ ಮಗನೇ ಅಂತಾ ಕುತ್ತಿಗೆ ಹಿಡೆದು ಒತ್ತಿ ನಿನಗ ಖಲಾಸ ಮಾಡುತ್ತೇನೆ ಮಗನ ಅಂತಾ ಕುತ್ತಿಗೆ ಒತ್ತಿ ಹಿಡೆದು ಕುತ್ತಿಗೆಗೆ ತರಚಿದ ರಕ್ತಗಾಯವಾಗಿದ್ದು ನನ್ನ ಹೆಂಡತಿಗೆ ನುಗಿಸಿದ್ದರಿಂದ ಕಲ್ಲಿನ ಮೇಲೆ ಬೀಳಿಸಿದ್ದರಿಂದ ಮೋಣಕಾಲು ಮತ್ತು ಬಲಗೈಗೆ ತರಚಿದ ಗಾಯವಾಗಿರುತ್ತದೆ. ಈ ರೀತಿಯಾಗಿ ನಮಗೆ ಹೊಡೆ ಬಡೆ ಮಾಡುತ್ತಿದ್ದಾಗ ನಾವು ಚಿರಾಡುವುದು ಕೇಳಿ ನಮ್ಮ ಪಕ್ಕದ ಮನೆಯವರು ಬಂದು ಜಗಳವನ್ನು ಬಿಡಿಸಿರುತ್ತಾರೆ ನಮಗೆ ಹೊಡೆ ಬಡೆ ಮಾಡಿ ಹೋಗುವಾಗ ಇವರು ಬಂದು ಜಗಳ ಬಿಡಿಸಿದ್ದರಿಂದ ಉಳದಿರಿ ಮಕ್ಕಳ್ಯಾ ಇನ್ನೊಂದು ಸಲ ಸಿಕ್ಕಾಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ  190/2019 ಕಲಂ 341, 323, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಕಾಶಿನಾಥ ಜವಳಿ ಸಾ:ಕನಗನಹಳ್ಳಿ ರವರ ಗಂಡನು ಖಾಸಗಿ ನೌಕರಿ ಮಾಡಿಕೊಂಡಿದ್ದು ನನ್ನ ಗಂಡನ ಊರು ಜೇವರ್ಗಿ ತಾಲೂಕಿನ ಜವಳಗಿ ಗ್ರಾಮವಿದ್ದು, ನನ್ನ ತವರು ಮನೆ ಕನಗನಹಳ್ಳಿ ಗ್ರಾಮವಿದ್ದು ಮದುವೆ ಆದಾಗಿನಿಂದ ನಾನು ನನ್ನ ಗಂಡ ಕನಗನಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೆವೆ. ನನ್ನ ಗಂಡನಿಗೆ 04 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಬೇರೆಯಾಗಿರುತ್ತೆವೆ. 2009 ನೇ ಸಾಲಿನಲ್ಲಿ ನಮ್ಮ ತಂದೆಯವರು ಸನ್ನತಿ ಸೀಮಾಂತರದಲ್ಲಿರುವ ಹೊಲ ಸರ್ವೆ ನಂಬರ 117/3 ರಲ್ಲಿ 03 ಎಕರೆ 39 ಗುಂಟೆ ಜಮೀನು ಮಾರಾಟ ಮಾಡುತ್ತಿದ್ದಾಗ ಅವರ ಹೊಲವನ್ನು ನಾವೇ ಖರಿದಿ ಮಾಡಿರುತ್ತೆವೆ. ಸದರಿ ಹೊಲದ ಪಾಣಿ ಪತ್ರಿಕೆ ನನ್ನ ಹೆಸರಿನಲ್ಲಿ ಇರುತ್ತವೆ. ನಂತರ 2016 ನೇ ಸಾಲಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಮ್ಮ ಪೂರ್ತಿ ಹೊಲವನ್ನು ಸರ್ಕಾರ ಸ್ವಾಧಿನ ಪಡಿಸಿಕೊಂಡು ಅದಕ್ಕೆ ಒಟ್ಟು 25 ಲಕ್ಷ ರೂಪಾಯಿ ಮಂಜೂರು ಮಾಡಿದ್ದು ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ತಯ್ಯಾರಿಸಿ ಬಿ ಗುಡಿಯಲ್ಲಿರುವ SLO ಆಫೀಸಗೆ ಸಲ್ಲಿಸಿದ್ದು ನಂತರ ಒಟ್ಟು ಹಣ 25 ಲಕ್ಷ ರೂಪಾಯಿ ಮಂಜೂರು ಆಗಿದ್ದು ಹಣವನ್ನು ನಾವು ಪಡೆಯಬೇಕೆನ್ನುವಷ್ಟರಲ್ಲಿ ನಮ್ಮ ಭಾವ ಕೆಂಚಪ್ಪ ಇವರ 2 ನೇ ಹೆಂಡತಿಯಾದ ವಿಜಯಲಕ್ಷ್ಮೀ ಇವಳು ಸಂಬಂಧಪಟ್ಟ ಇಲಾಖೆಯಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದಳು. ನಂತರ ಅಧಿಕಾರಿಗಳು ನಿಮ್ಮ ನಿಮ್ಮಲ್ಲಿಯ ಸಮಸ್ಯೆಯನ್ನು ಬಗೆಹರಿಸಿಕೊಂಡು ಬಂದು ಅವರ ಅರ್ಜಿಯನ್ನು ವಾಪಸ್ಸು ತೆಗೆದುಕೊಂಡರೆ ನಾವು ಹಣ ನಿಮಗೆ ಮಂಜೂರು ಮಾಡುತ್ತೆವೆ ಅಂತಾ ಹೇಳಿದರು. ವಿಷಯದಲ್ಲಿ ವಿಜಯಲಕ್ಷ್ಮೀ ಇವಳಿಗೆ ವಿಚಾರಿಸಿದರೆ ನನಗೂ ಅದರಲ್ಲಿ ಪಾಲು ಕೊಡು ಅಂತಾ ತಕರಾರು ಮಾಡುತ್ತ ಬಂದಿದ್ದು ಅಲ್ಲದೇ ಸದರಿ ಹೊಲವು ಪಿತ್ರಾರ್ಜಿದ ಆಸ್ತಿ ಅಲ್ಲದೇ ನಾವು ಸ್ವಂತ ಖರೀದಿ ಮಾಡಿರುತ್ತೆವೆ ಅಂತಾ ಹೇಳಿದರು ಸಹ ತಕರಾರು ಮಾಡುತ್ತ ಬಂದಿದ್ದು ಅಲ್ಲದೇ ಅವಳಿಗೆ ಅವಳ ತಮ್ಮ ಬಸವರಾಜ ತಂದೆ ಮುದಿಗೌಡ ಸಾ:ಭಂಕೂರ, ಬಸವರಾಜ ತಂದೆ ಚಂದ್ರಶೇಖರ ಪೊಲೀಸ ಪಾಟೀಲ ಮು:ಕನಗನಹಳ್ಳಿ, ರವಿ ಕುಮಾರ ಮು:ಭಂಕೂರ ರವರು ಅವಳಿಗೆ ಆಸ್ತಿಯಲ್ಲಿ ಪಾಲು ಬೀಡಬೇಡಾ ನಾವು ನಿನ್ನ ಹಿಂದೆ ಇದ್ದೆವೆ ಅಂತಾ ಪ್ರಚೋದನೆ ಮಾಡುತ್ತ ಬಂದಿರುತ್ತಾರೆ. ಅಲ್ಲದೇ ವಿಷಯದಲ್ಲಿ ವಿನಾಕಾರಣ ಜೇರ್ವಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ಓಎಸ್ ನಂಬರ 126/16 ನೇದ್ದನ್ನು ನೀಡಿದ್ದು ಇರುತ್ತದೆ. ಹಣದ ವಿಷಯದಲ್ಲಿ ನಾನು ಮತ್ತು ನನ್ನ ಗಂಡ ಅನೇಕ ಸಲ ವಿಜಯಲಕ್ಷ್ಮೀ ಇವಳಿಗೆ ಸಮಜಾಯಿಸಿ ಹೇಳಿದ್ದು ಅಲ್ಲದೇ ಅದರಲ್ಲಿ ಬೇಕಾದರೆ ಸ್ವಲ್ಪ ನಿನಗೆ ದುಡ್ಡು ಕೊಡುತ್ತೆವೆ ಅಂತಾ ಹೇಳಿದರು ಸಹ ನನಗೆ ವಿನಾಕಾರಣ ಸತಾಯಿಸುತ್ತ ಬಂದು ನನಗೆ ಸರ್ಕಾರದಿಂದ ಸೀಗಬೇಕಾದ 25 ಲಕ್ಷ ರೂಪಾಯಿ ಹಣವನ್ನು ಬರದಂತೆ ತಡೆ ಮಾಡಿರುತ್ತಾಳೆ.ಗ್ರಾಮದ ಕೆಲವು ಹಿರಿಯರು ಸಹ ಹೇಳಿದರು ಸಹ ಕೇಳದೆ ಬಸವರಾಜ, ರವಿಕುಮಾರ ಬಸವರಾಜ ತಂದೆ ಚಂದ್ರಶೇಖರ ರವರು ಕುಮ್ಮಕ್ಕು ನೀಡಿ ಹಣ ಬಿಡುಗಡೆ  ಮಾಡಲು ಒಪ್ಪಬೇಡಾ ಅಂತಾ ಹೇಳುತ್ತ ಬಂದಿರುತ್ತಾರೆ. ನಂತರ ದಿನಾಂಕ 22/09/2019 ರಂದು ಬೆಳಗ್ಗೆ 11-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ಜಯಲಕ್ಷ್ಮೀ ಗಂಡ ಕೆಂಚಪ್ಪ , ಬಸವರಾಜ ತಂದೆ ಚಂದ್ರಶೇಖರ, ರವಿಕುಮಾರ, ಬಸವರಾಜ ತಂದೆ ಮುದಿಗೌಡ ರವರು ಕೂಡಿಕೊಂಡು ನನ್ನ ಮನೆಯ ಹತ್ತಿರ ಬಂದು ವಿಜಯಲಕ್ಷ್ಮೀ ಇವಳು ನನಗೆ ಮನೆಯ ಹೊರಗೆ ಕರೆದಾಗ ನಾನು ಹೊರಗಡೆ ಬಂದು ಯಾಕೇ ಅಂತಾ ವಿಚಾರಿಸಿದ್ದಕ್ಕೆ ‘’ ರಂಡಿ ನೀನು ಹಣ ಕೊಡಿಸು ಅಂತಾ ಬೇರೆಯವರ ಎದರು ಹೇಳುತ್ತಿದ್ದಿ ಅಂತೆ ನಾನು ನಿನಗೆ ಬರುವ ಹಣವನ್ನು ಬಿಡುಗಡೆ ಮಾಡಲು ಬಿಡುವದಿಲ್ಲ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ವಿನಾಕಾರಣ ನನ್ನೊಂದಿಗೆ ತಕರಾರು ಮಾಡುತ್ತಿ ಅಂತಾ ಕೇಳುತ್ತಿದ್ದಂತೆ ಬಸವರಾಜ ತಂದೆ ಚಂದ್ರಶೇಖರ, ಬಸವರಾಜ ತಂದೆ ಮುದಿಗೌಡ ರವರು ‘’ ರಂಡಿ ನಿನಗೆ ಹಣ ಬರಲು ಬಿಡುವದಿಲ್ಲ ನೀನು ಜೀವಂತ ಕೊರಗಿ ಕೊರಗಿ ಸಾಯಬೇಕು ಅಂತಾ ಅನ್ನುತ್ತಿದ್ದು ಆಗ ನಮ್ಮ ಮನೆಯಲ್ಲಿದ್ದ ತಾಯಿ ಮತ್ತು ದೊಡ್ಡಪ್ಪ ತಂದೆ ಮಲ್ಲಪ್ಪ ಹೋಳಿ , ಚಂದ್ರಶೇಖರ ತಂದೆ ದೇವಿಂದ್ರಪ್ಪ ಬಮಚಟ್ನಳ್ಳಿ ರವರು ಬಂದು ಜಗಳ ಬಿಡಿಸಿದರು. ಆಗ ನಾನು ಪೊಲೀಸ ಸ್ಟೇಷನಗೆ ಹೋಗುತ್ತೆನೆ ಅಂತಾ ಹೊರಟರೆ ವಿಜಯಲಕ್ಷ್ಮೀ ಇವಳು ನನಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ. ರವಿಕುಮಾರ ಇತನು ಇವಳಿಗೆ ಖಲಾಸ ಮಾಡಿ ಬೀಡು ನಾನು ಬಂದಿದ್ದು ನೋಡಿಕೊಳ್ಳುತ್ತೆನೆ ಅಂತಾ ವಿಜಯಲಕ್ಷ್ಮೀ ಇವಳಿಗೆ ಪ್ರಚೋದನೆ ನೀಡಿದ್ದು ಇರುತ್ತದೆ. ದಿನಾಂಕ 13/11/2019 ರಂದು  ಬೆಳಗ್ಗೆ 09-00 ಸುಮಾರು ನಾವು ಮನೆಯಲ್ಲಿದ್ದಾಗ ವಿಜಯಲಕ್ಷ್ಮೀ ಮತ್ತು ಬಸವರಾಜ ತಂದೆ ಚಂದ್ರಶೇಖರ ಪೊಲೀಸ ಪಾಟೀಲ ಇವರು ನಮ್ಮ ಮನೆಯ ಹತ್ತಿರ ಬಂದು ‘’ ಮಕ್ಕಳೇ ನೀವು ನಾವು ಹೇಳಿದ ಹಾಗೆ ಕೇಳದೆ ಇದ್ದರೆ ನಿಮಗೆ ಊರು ಬಿಡಿಸಿ ಓಡಿಸಿ ಹಾಕುತ್ತೆವೆ’’ ಅಂತಾ ಬೆದರಿಕೆ ಹಾಕುತ್ತ ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 November 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಖಾಸಿಂಬಿ .ಪಿ.ಸಿ 1197 ಯಡ್ರಾಮಿ ಪೊಲೀಸ ಠಾಣೆ ರವರು ದಿನಾಂಕ 04-11-2019 ರಂದು ಸ್ಥಳಿಯ ಯಡ್ರಾಮಿ ಪಟ್ಟಣದಲ್ಲಿ ಸಂತೆ ಇದ್ದ ಪ್ರಯುಕ್ತ ನನಗೆ ಮತ್ತು ನಮ್ಮ ಠಾಣೆಯ ವಿಶ್ವರಾದ್ಯ ಪಿಸಿ 1261, ಅಣ್ಣಪ್ಪ ಪಿಸಿ 124 ರವರಿಗೆ ಬಜಾರ ಪೆಟ್ರೋಲಿಂಗ ಕರ್ತವ್ಯಕ್ಕೆ ನೇಮಿಸಿದ್ದು ಇರುತ್ತದೆ, ಅದರಂತೆ ನಾವು ಮೂರು ಜನರು ಬಜಾರ ಪೆಟ್ರೋಲಿಂಗ ಕರ್ತವ್ಯಕ್ಕೆ ಹೋಗಿರುತ್ತೇವೆ, ನಂತರ 1;00 ಪಿ.ಎಂ ಸುಮಾರಿಗೆ ನಾವು ಸಿಂಡಿಕೇಟ ಬ್ಯಾಂಕ ಹತ್ತಿರ ಇದ್ದಾಗ ಯಡ್ರಾಮಿ ಪಟ್ಟಣದ ನಿಂಗಮ್ಮ ಗಂಡ ಗುರುಲಿಂಗಪ್ಪ ಮಾಲಿಪಾಟೀಲ ಎಂಬುವರು ತಮ್ಮ ಸೇಬು ಹಣ್ಣಿನ ತಳ್ಳುವ ಬಂಡಿಯನ್ನು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಡಚಣೆಯಾಗುವಂತೆ ರಸ್ತೆಯ ಮೇಲೆ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದರಿಂದ ರಸ್ತೆ ಜಾಮ ಆಗಿತ್ತು, ಆಗ ನಾವುಗಳು ಅವರ ಹತ್ತಿರ ಹೋಗಿ ನಿಮ್ಮಿಂದ ಸಾರ್ಜವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೇ, ನೀವು ನಿಮ್ಮ ಬಂಡಿಯನ್ನು ರಸ್ತೆಬಿಟ್ಟು ಬೇರೆ ಕಡೆ ನಿಲ್ಲಿಸಿ ವ್ಯಾಪಾರ ಮಾಡಿಕೊಳ್ಳಿ ಅಂತಾ ಹೇಳಿದಾಗ, ನಿಂಗಮ್ಮ ಇವರು ನಮಗೆ ಏರು ಧ್ವನಿಯಲ್ಲಿ, ನಾನು ಇಲ್ಲಿಂದ ನನ್ನ ಬಂಡಿ ತೆಗೆಯುವುದಿಲ್ಲಾ, ಬೇಕಾದರೆ ನೀವೇ ನನ್ನ ಬಂಡಿಯನ್ನು ತೆಗೆದುಕೊಂಡು ಹೋಗರಿ, ನಾನು ಮುಂದೆ ನಿಮಗ ನೋಡಿಕೊಳ್ಳುತ್ತೇನೆ ಅಂತಾ ಅಂದಳು, ಆಗ ನಾನು ಸರಿಯಾಗಿ ಮಾತನಾಡು, ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿಬೇಡ ನಿನ್ನಿಂದ ಸಾರ್ವಜನಿಕರಿಗೆ ಮತ್ತು ತಿರುಗಾಡುವ ವಾಹನಗಳಿಗೆ ತುಂಬಾ ತೊಂದರೆ ಆಗುತ್ತಿದೇ ಅಂತಾ ಹೇಳಿ ನಾನು ಬಂಡಿಯನ್ನು ತೆಗೆಯಲು ಹೋದಾಗ ನಿಂಗಮ್ಮ ಇವಳು ನನ್ನ ಕೈಹಿಡಿದು ತಡೆದು ನಿಲ್ಲಿಸಿ ಒಮ್ಮೇಲೆ ನೂಕಿಕೊಟ್ಟು, ಏ ರಂಡಿ ನೀ ಯಾರೇ ನನ್ನ ಬಂಡಿ ಹಿಡಿಲಾಕ ಅಂತಾ ಅಂದು ನನಗೆ ಅವಾಚ್ಯವಾಗಿ ನಿಂದಿಸುತ್ತಾ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ನನ್ನ ಸಂಗಡ ಇದ್ದ ನಮ್ಮ ಸಿಬ್ಬಂದಿಯವರಿಗೆ ನಿಂಗಮ್ಮ ಇವಳು ನನ್ನ ಗಂಡ ತಹಸೀಲ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ, ಅವರನ್ನು ಹೇಳಿ ನಿಮ್ಮ ಮೇಲೆ ಕೇಸು ಮಾಡಿಸುತ್ತೇನೆ, ನಿವೂ ಪೊಲೀಸನವರ ವಿಷಯ ನನಗೆ ಚನ್ನಾಗಿ ಗೊತ್ತು ಅಂತಾ ಅವರಿಗು ಸಹ ಏರು ಧ್ವನಿಯಲ್ಲಿ ಮಾತನಾಡಿದಳು, ಆಗ ಅಲ್ಲೆ ಇನ್ನು ಕೆಲವು ವ್ಯಾಪರಸ್ತರಾದ 1] ಅಬ್ದುಲಸಾಬ ತಂದೆ ಅಮೀರಸಾಬ ಸೌದಾಗರ ಸಾ|| ಇಜೇರಿ, 2] ಇಮಾಮಬಿ ಗಂಡ ಇಸ್ಮಾಯಿಲ್ ಗಣಿಯಾರ ಸಾ|| ಯಡ್ರಾಮಿ, 3] ರಜಾಕ ತಂದೆ ದಾವಲಸಾಬ ಸಾ|| ಸಿಂದಗಿ, 4] ಈರಣ್ಣ ತಂದೆ ಮಹಾದೇವ ಗಜಕೋಶ ಸಾ|| ಇಜೇರಿ ಹಾಗು ಇತರರು ಕೂಡಿ ಬಿಡಿಸಿಕೊಂಡು ನಿಂಗಮ್ಮಳಿಗೆ ತಿಳವಳಿಕೆ ಹೇಳಿರುತ್ತಾರೆ, ಸದರಿ ನಿಂಗಮ್ಮ ಗಂಡ ಗುರುಲಿಂಗಪ್ಪ ಮಾಲಿಪಾಟೀಲ ಸಾ|| ಯಡ್ರಾಮಿ ಇವರು ಸೇಬು ಹಣ್ಣಿನ ತಳ್ಳುವ ಬಂಡಿಯನ್ನು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಡಚಣೆಯಾಗುವಂತೆ ರಸ್ತೆಯ ಮೇಲೆ ನಿಲ್ಲಿಸಿ ರಸ್ತೆ ಜಾಮ ಮಾಡಿ ವ್ಯಾಪಾರ ಮಾಡುತ್ತಿದ್ದರಿಂದ ನಾವು ಕೇಳಿದ್ದಕ್ಕೆ ನಮಗೆ ಏರು ಧ್ವನಿಯಲ್ಲಿ ಮಾತನಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ನಮಗೆ ಅವಾಚ್ಯವಾಗಿ ಬೈದಿರುತ್ತಾಳೆ, ಆದ್ದರಿಂದ ನಿಂಗಮ್ಮಳ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುನೀತಾ ಗಂಡ ಮಹೇಶ ಸೊನಾರ ಸಾ||ಎಸ್,ಬಿ.ಐ.ಕಾಲೋನಿ ಕಲಬುರಗಿ ರವರ ಮಗಳಾದ ಮಮತಾ ಇವಳಿಗೆ 17 ವರ್ಷ ನನ್ನ ಮಗಳೂ ಪಿ.ಯು.ಸಿ ಪ್ರಥಮ ವರ್ಷದಲ್ಲಿ ಪೇಲ್ ಆಗಿದ್ದರಿಂದ ಕಾಲೇಜು ಬಿಡಿಸಿರುತ್ತೇವೆ.  ಈಗ ಒಂದು ತಿಂಗಳ ಹಿಂದೆ ನನ್ನ ಮಗಳು ಮಮತಾ ಇವಳು ನನಗೆ ಮತ್ತು ನನ್ನ ಗಂಡ ಮಹೇಶನಿಗೆ ತಿಳಿಸಿದ್ದೆನಂದರೆ ಪರ್ದಿನ ತಂದೆ ಗೌಸ ಇನಾಮದಾರ ಎಂಬಾತನು ನನಗೆ ನಾನು ನಿನ್ನ ಪ್ರೀತಿಸುತ್ತಿದ್ದು ನಿನ್ನ ಮದುವೆ ಮಾಡಿಕೊಳ್ಳುನತ್ತೇನೆ ಅಂತ ನನ್ನ ಹಿಂದೆ ಬಿದ್ದಿರುತ್ತಾನೆ ಅಂತ ತಿಳಿಸಿರುತ್ತಾಳೆ ಆಗ ನಾನು ನನ್ನ ಗಂಡ ಮತ್ತು ನನ್ನ ತಮ್ಮನಾದ ದೀಲಿಪ ಮೂರು ಜನರು ಕೂಡಿಕೊಂಡು ಪರ್ದಿನ ಈತನ ವಿಳಾಸ ತಿಳಿದುಕೊಂಡು ಸದರಿಯವನಿಗೆ ನನ್ನ ಮಗಳ ಹಿಂದೆ ಬಿಳಬೇಡ ಅವಳು ಇನ್ನು ಅಪ್ರಾಪತ್ತೆ ಇರುತ್ತಾಳೆ ನೀನು ಈ ರಿತಿ ಮಾಡುವದು ಸರಿ ಇರುವದಿಲ್ಲ ಅಂತ ತಿಳಿಸಿ ಹೇಳಿರುತ್ತೇವೆ.ಆದರು ಕೂಡ ಅವನು ನನ್ನ ಮಗಳ ಬೇನ್ನು ಬಿಟ್ಟಿರುವದಿಲ್ಲ ಆದ್ದರಿಂದ ನನ್ನ ಮಗಳು ಮಮತಾ ಈವಳಿಗೆ ನನ್ನ ತವರೂರಾದ ಬಳೂರಗಿ ಗ್ರಾಮದಲ್ಲಿ ಕರೆದುಕೊಂಡು ಹೋಗಿ ಬೇಡಬೇಕೆಂದು ನನ್ನ ಗಂಡನು ದಿನಾಂಕ:01-11-2019 ರಂದು ಮಮತಾಳಿಗೆ ಬಳೂರಗಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ನನ್ನ ಅಣ್ಣ ದಿಲೀಪನ ಮನೆಯಲ್ಲಿ ಬಿಟ್ಟು ಬಂದಿರುತ್ತಾನೆ. ದಿನಾಂಕ: 04-11-2019 ರಂದು ನನ್ನ ಅಣ್ಣ ದಿಲೀಪ ಈತನು ನನಗ ಪೊನ ಮಾಡಿ ತಿಳಿಸಿದ್ದೆನಂದರೆ ಪರ್ದಿನ ಇನಾಮದಾರ ಈತನು ಕಾರ ನಂಬರ ಕೆ,ಎ-32 ಎಮ್-7274 ನೇದ್ದರಲ್ಲಿ ತನ್ನ ಗೇಳಯರೊಂದಿಗೆ ನಮ್ಮ ಮನೆಗೆ ಬಂದು ಮಮತಾ ಇವಳಿಗೆ ನಾನು ಮದುವೆಯಾದರೆ ನಿನ್ನೆ ಮದುವೆಯಾಗುತ್ತೇನೆ ಬಾ ನನ್ನ ಜೋತೆ ಅಂತ ಹೇಳಿ ಒತ್ತಾಯ ಪೂರ್ವಕವಾಗಿ ನಾನು ಬಿಡಿಸಲು ಹೋದರು ಜಬರದಸ್ತಿಯಿಂದ ಮಮತಾಳನ್ನು ಅಪಹರಸಿಕೊಂಡು ಹೋಗಿರುತ್ತಾನೆ  ಸದರಿ ಪರ್ದಿನ ತಂದೆ ಗೌಸ ಇನಾಮದಾರ ಸಾ||ಪಿ,ಡಿ,ಐ.ಕಾಲೇಜು ಎದುರುಗಡೆ ಐವಾನ ಶಾಹಿ ಹತ್ತಿರ ಕಲಬುರಗಿ  ಈತನು ಅಫ್ರಾಪ್ತ ವಯಸ್ಸಿನ ನನ್ನ ಮಗಳಾದ ಮಮತಾ ಇವಳು ಅಪ್ರಾಪತ್ತ ವಯಸ್ಸಿನವಳು ಇರುತ್ತಾಳೆ ಎಂದು ತಿಳಿದೂ, ಮದುವೆಯಾಗುತ್ತೇನೆ ಅಂತ ಹೇಳಿ ಪುಸಲಾಯಿಸಿ ಇಬ್ಬರು ಮೂರು ಜನರೊಂದಿಗೆ ಕಾರ ನಂಬರ ಕೆ,ಎ-32 ಎಮ್-7274 ನೇದ್ದರಲ್ಲಿ ಅವಳನ್ನು ಅಫಹರಿಸಿಕೊಂಡು ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 November 2019

KALABURAGI DISTRICT REPORTED CRIMES

ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ರಾಜು ಹಡಪಾದ್ ಸಾ; ಬಸವನಕಟ್ಟಿ ಹಾ.ವ ವಿದ್ಯಾನಗರ ನಗರ ಜೇವರ್ಗಿ ರವರ ಗಂಡನ ಮನೆ ವಾಡಿ ಗ್ರಾಮ ಇದ್ದು, ನನ್ನ ತವರು ಮನೆ ಜೇವರ್ಗಿ ಇರುತ್ತದೆ. ನಮಗೆ ಶೃತಿ 19 ವರ್ಷದ ಮಗಳಿದ್ದು ಜೇವರ್ಗಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನಾನು ಮತ್ತು ನನ್ನ ಮಗಳು ವಾಸವಾಗಿರುತ್ತೇವೆ. ನನ್ನ ಮಗಳು ಶೃತಿ ಇವಳು ವಿನ್ನರ್ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಇವಳಿಗೆ ಹುಣಸಗಿ ಗ್ರಾಮದ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದು ದಿನಾಂಕ; 04/11/2019 ರಂದು ಮದುವೆ ಮಾಡಲು ಸಿದ್ದತೆ ನಡೆಸಿರುತ್ತೇವೆ. ದಿನಾಂಕ; 26/10/2019 ರಂದು ಶನಿವಾರ ಬೆಳಿಗ್ಗೆ ನಾನು ಮತ್ತು ನನ್ನ ಮಗಳು ಶೃತಿ ಕೂಡಿಕೊಂಡು ಜಾಲಾದಿಗೆ ದೇವರ ಕಾರ್ಯಾಕ್ರಮಕ್ಕೆ ಹೋಗಿದ್ದೇವು. ಅಲ್ಲಿ ದೇವರ ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಸಾಯಂಕಾಲ 4-00 ಘಂಟೆಯ ಸುಮಾರಿಗೆ ಜೇವರ್ಗಿಗೆ ಬಂದೇವು. ನಂತರ ನಾನು ಜೇವರ್ಗಿ ಪಟ್ಟಣದಲ್ಲಿ ತಿರುಗಾಡಿ ಸಂಬಂದಿಕರಿಗೆ ಮದುವೆ ಕಾರ್ಡ ಹಂಚಲು ಹೋಗಿರುತ್ತೇನೆ. ಮರಳಿ ನಾನು ರಾತ್ರಿ 10-00 ಘಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು  ಇರಲಿಲ್ಲ, ಆಗ ನಾನು ಎಲ್ಲಿಯಾದರು ನಮ್ಮ ತಾಯಿಯ ಮನೆಗೆ ಹೋಗಿರಬಹುದು ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬರಬಹುದು ಎಂದು ಸುಮ್ಮನಿದ್ದೇನು. ನಂತರ ನನಗೆ ದಿನಪೂರ್ತಿ ತಿರುಗಾಡಿ ಸುಸ್ತಾಗಿದ್ದರಿಂದ ಮನೆಯಲ್ಲಿ ನಿದ್ದೇ ಹೋದೆನು. ದಿನಾಂಕ; 27.10.19 ರಂದು ನಾನು ಬೆಳಿಗ್ಗೆ ಎದ್ದು ನೋಡಲಾಗಿ ನಮ್ಮ ಮಗಳು ಮನೆಗೆ ಬಂದಿರಿಲಿಲ್ಲ. ಆಗ ನಾನು ನಮ್ಮ ಬೀಗರು ನೆಂಟರಲ್ಲಿ ಪೋನ್ ಮಾಡಿ ವಿಚಾರಿಸಿ ನಮ್ಮ ಮಗಳಿಗೆ ಹುಡುಕಾಡಲಾಗಿ ಎಲ್ಲಿ ಹೋಗಿದ್ದಾಳೆ ಎನ್ನುವ ಕುರಿತು ಸುಳಿಯು ಸಿಕ್ಕಿರುವದಿಲ್ಲ, ನಂತರ ನಾನು ಜೇವರ್ಗಿ ಪಟ್ಟಣದಲ್ಲಿ ಮತ್ತು ಕಲಬುರಗಿ ಶಹಾಪೂರ ಹುಣಸಗಿ ಮೊದಲಾದ ಕಡೆಯಲ್ಲಿ ನಮ್ಮ ಮಗಳಿಗೆ ಹುಡುಕಾಡಿದರು ಕೂಡ ಅವಳು ಸಿಕ್ಕಿರುವದಿಲ್ಲ. ಕಾಣೆಯಾಗಿರುತ್ತಾಳೆ  ಕಾಣೆಯಾದ ಮಗಳ ಚಹರಾ ಪಟ್ಟಿ ಈ ಕೆಳಕಂಡಂತೆ ಇರುತ್ತದೆ. ಕಾಣೆಯಾದವಳ ಹೆಸರು; ಶೃತಿ ತಂದೆ ರಾಜು ಹಡಪಾದ್ ವಯ; 19 ವರ್ಷ, ಎತ್ತರ 5. 2 ಅಡಿ, ಸಾದಗಪ್ಪು ಮೈ ಬಣ್ಣ, ತೆಳ್ಳನೆ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ, ಭಾಷೆ ಬಲ್ಲವಾಳಾಗಿದ್ದು, ಮನೆಯಿಂದ ಹೋಗುವಾಗ ಪೈಜಾಮ್ ಚುಡಿದಾರ ಧರಿಸಿರುತ್ತಾಳೆ.. ಮತ್ತು ಅವಳಿಗೆ ಬೆನ್ನಿನ ಮೇಲೆ ಮುಂಗೈ ಮೇಲೆ ಸುಟ್ಟ ಹಳೆಯ ಘಾಯದ ಗುರುತು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಹಾನಿ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಂದ್ರಕಾಂತ ತಂದೆ ಶಿವಪ್ಪ ದೊಡ್ಡಮನಿ ಸಾ||ಬನ್ನಟ್ಟಿ ಹಾ||ವಾ||ಅಫಜಲಪೂರ ರವರು ಹಿರೊ ಪ್ಯಾಶನ ಪ್ರೋ ಕಂಪನಿಯ ಮೋಟಾರ ಸೈಕಲ ನಂಬರ ಕೆ,ಎ-32 ಈಜೆ-5777 ಇರುತ್ತದೆ.ಇದರ ಅಂದಾಜು ಕಿಮ್ಮತ್ತು 20,000/- ಇರಬಹುದು ಸದರಿ ನನ್ನ ಮೋಟಾರ ಸೈಕಲನ್ನು  ಪ್ರತಿದಿವಸ ಅಫಜಲಪೂರ ಪಟ್ಟಣದ ನನ್ನ ಮನೆಯ ಮುಂದೆ ನಿಲ್ಲಿಸುತ್ತೇನೆ.  ದಿನಾಂಕ 01-11-2019 ರಂದು ರಾತ್ರಿ 10:00 ಗಂಟೆಗೆ ನನ್ನ ಮೋಟಾರ ಸೈಕಲ್ ಅನ್ನು ನನ್ನ ಮನೆಯ ಮುಂದೆ ನಿಲ್ಲಿಸಿ ನಾನು ನನ್ನ ಹೆಂಡತಿ ಮಕ್ಕಳೋಡನೆ ಮನೆಯಲ್ಲಿ ಇರುತ್ತೇನೆ. ಸುಮಾರು ರಾತ್ರಿ 11:30 ಪಿ.ಎಮ್ ಸುಮಾರಿಗೆ ನಾನು ಮಲಗಿದ್ದಾಗ ನಮ್ಮ ಮನೆಯ ಮುಂದೆ ಡಭ್ ಅಂತಾ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಬೆಂಕಿ ಹತ್ತಿ ಉರಿಯುತ್ತಿದ್ದು ಹತ್ತಿರ ಹೋಗಿ ನೋಡಲಾಗಿ ಅಲ್ಲೇ ಸಮೀಪದಲ್ಲಿ ಒಂದು ನೀರಿನ ಬಾಟಲಿಯಲ್ಲಿ ಅರ್ಧ ಪೇಟ್ರೋಲ್ ಇತ್ತು ಯಾರೋ ದುಷ್ಕರ್ಮಿಗಳು ನನ್ನ ಮೇಲಿನ ಸಿಟ್ಟಿನಿಂದ ಅಥವಾ ಹೊಟ್ಟೆಕಿಚ್ಚಿನಿಂದ ನನ್ನ ಮೋಟಾರ ಸೈಕಲ್ ಮೇಲೆ ಪೇಟ್ರೋಲ್ ಹಾಕಿ ಬೆಂಕಿ ಹಚ್ಚಿ ನನ್ನ ಮೋಟಾರ ಸೈಕಲ್ ಅನ್ನು ಸುಟ್ಟು ನನಗೆ 20000/- ರೂ ಹಾನಿ ಮಾಡಿರುತ್ತಾರೆ ನನ್ನ ಮೋಟಾರ ಸೈಕಲ್ ಸುಡುವಾಗ ನಾನು ಮತ್ತು ನಮ್ಮ ಓಣಿಯ ರಾವುತಪ್ಪ ಬ್ಯಾಡಗಿಹಾಳ ಮತ್ತು ಇನ್ನಿತರರು ಕೂಡಿ ಬೆಂಕಿಯನ್ನು ಆರಿಸಿರುತ್ತೇವೆ ಕಾರಣ ನನ್ನ ಮೋಟಾರ ಸೈಕಲ್ ಅನ್ನು ಸುಟ್ಟು ಹಾನಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.