POLICE BHAVAN KALABURAGI

POLICE BHAVAN KALABURAGI

10 October 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧೂಳಪ್ಪಾ ಕಡಕೂಳ ಸಾಃ ಭೂಸನೂರ ಗ್ರಾಮ ರವರು ಮತ್ತು ತಮ್ಮಂದಿರಾದ ಶಿವಪ್ಪ, ಹಣಮಂತ ಮೂರು ಜನ ಸಜ್ಜೆ ರಾಶಿ ಇದ್ದುದ್ದರಿಂದ ಮುಂಜಾನೆ ಹೊಲಕ್ಕೆ ಹೋಗಿರುತ್ತೆವೆ ನಂತರ ನನ್ನ ತಾಯಿಯು ಕೂಡ ನಮ್ಮ ದನಗಳನ್ನು ಹೊಡೆದುಕೊಂಡು ಹೊಲಕ್ಕೆ ಬಂದಿರುತ್ತಾರೆ. ಹೊಲದಲ್ಲಿ ಮಳೆ ಬರುತ್ತಿದ್ದರಿಂದ ನನ್ನ ತಾಯಿಯು ದನಗಳನ್ನು ಹೊಡೆದುಕೊಂಡು ಮನೆಗೆ ಹೊಗುತ್ತೆನೆ ಅಂತ ನಮ್ಮ ಹೊಲದಿಂದ ಹೋಗಿರುತ್ತಾರೆ. ನಮ್ಮ ಹೊಲಗಳ ಹತ್ತಿರದಲ್ಲಿ ಇದ್ದ  ಸಂಗಮ್ಮ ಗಂಡ ಗುರುಶಾಂತಪ್ಪ ಅಮರೆ ಇವರ ಬಿಳು ಬಿದ್ದ ಹೊಲದಲ್ಲಿಂದ ಹೋಗುತ್ತಿರುವಾಗ 02.30 ಪಿ,ಎಮ್ ಸುಮಾರಿಗೆ ಮಳೆ ಜೋರಾಗಿ ಆಗಿದ್ದರಿಂದ ನನ್ನ ತಾಯಿಯು ಸಂಗಮ್ಮಾ ಇವರ ಹೊಲದಲ್ಲಿ ಇರುವ ಬೇವಿನ/ಬ್ಯಾಲದ (ಜೊಡಿ ಮರ) ಗಿಡದ ಕೆಳಗಡೆ ಕುಳಿರುತ್ತಾರೆ ನಾವು ನಮ್ಮ ಹೊಲದಲ್ಲಿ ಇರುತ್ತೆವೆ. ಗುಡುಗು ಸಿಡಿಲು ಸಮೇತ ಮಳೆ ಬರುತ್ತಿರುವಾಗ ಒಮ್ಮಿಂದೊಮ್ಮೆಲೆ ಸಿಡಿಲು ಬಿದ್ದಂತಾಗಿ ಹೆಚ್ಚಾಗಿ ಬೆಳಕು ಬಂದಿದ್ದರಿಂದ ನಾನು ನನ್ನ ತಾಯಿ ಕುಳಿತ ಕಡೆಗೆ ನೋಡಲಾಗಿ ನನ್ನ ತಾಯಿಯು ಬಿದ್ದಿದ್ದರು ಆಗ ನಾನು ನನ್ನ ತಮ್ಮಂದಿರು ಎಲ್ಲರು ಗಾಭರಿಯಿಂದ ಹೋಗಿ ನಮ್ಮ ತಾಯಿಯನ್ನು ನೋಡಲಾಗಿ ನಮ್ಮ ತಾಯಿಯ ಮೃತಪಟ್ಟಿದ್ದರು ನಾನು ಹಾಗು ನಮ್ಮ ತಮ್ಮಂದಿರು ಹಾಗು ಅಲ್ಲಿಯೆ ಸಮೀಪದಲ್ಲಿ ಇದ್ದ ಶಂಕರ ತಂದೆ ಶಿವಾಜಿ ಸಾಳುಂಕೆ ಎಲ್ಲರು ನನ್ನ ತಾಯಿಯನ್ನು ನೋಡಲಾಗಿ ನನ್ನ ತಾಯಿಯ ಬಲಗಡೆ ಕಿವಿಯ ಹತ್ತಿರ ಸುಟ್ಟಂತೆ ಆಗಿದ್ದು, ಕಿವಿಯು ಸ್ವಲ್ಪ ಹರಿದಿರುತ್ತದೆ. ಹಾಗು ಎರಡು ಕಿವಿಗಳಿಂದ ರಕ್ತ ಬಂದಿದ್ದು, ಹೊಟ್ಟೆಯ ಬಲಗಡೆ, ಬಲಗಾಲಿನ ತೊಡೆಯಿಂದ ಕಪಗಂಡದ ವರೆಗು ಅಲ್ಲಲ್ಲಿ ಸುಟ್ಟಂತೆ ಗಾಯಗಳಾಗಿದ್ದು ಇರುತ್ತವೆ. ಕಾರಣ ನನ್ನ ತಾಯಿಯು ದಿನಾಂಕಃ 09/10/2019 ರಂದು ದನಗಳು ಮೇಯಿಸುವಾಗ 02.30 ಪಿ,ಎಮ್ ಸುಮಾರಿಗೆ ಜೋರಾಗಿ ಮಳೆ ಬರುತ್ತಿರುವಾಗ ಆಶ್ರಯಕ್ಕಾಗಿ ಸಂಗಮ್ಮ ಅಮರೆ ಇವರ ಬಿಳು ಬಿದ್ದ ಹೊಲದಲ್ಲಿನ ಬೇವಿನ/ಬ್ಯಾಲದ (ಜೊಡಿ ಮರದ) ಗಿಡದ ಕೆಳಗಡೆ ಕುಳಿತಾಗ ಆಕಸ್ಮಿಕವಾಗಿ ಸಿಡಿಲು ಬಡಿದು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರೇವೂರ ಠಾಣೆ : ಶ್ರೀಶರಣಬಸಪ್ಪ ತಂದೆ ವಿಠ್ಠಲ ನಿಲೂರ ಸಾ||ರೇವೂರ (ಬಿ) ರವರು ತಮ್ಮ ಗ್ರಾಮದ ಗಂಡು ಮಕ್ಕಳು ನಮ್ಮೂರಿನ ಅಂಗನವಾಡಿ ಕೇಂದ್ರ ಕಡೆ ಬಹಿರ್ದೆಸೆಗೆ ಹೋಗುತ್ತಾರೆ ನಮ್ಮ ಗ್ರಾಮದ ಎಲ್ಲಾ ಜನಗಳಂತೆ ನಾನು ದಿನಾಂಕ 01/10/2019 ರಂದು 8.00 ಪಿಎಮ್ ಸುಮಾರಿಗೆ  ನನ್ನ ಮೋಬೈಲದಲ್ಲಿ Torch ಹಕಿಕೊಂಡು Torch ಬೆಳಕಿನಲ್ಲಿ ನಮ್ಮ ಗ್ರಾಮದ ಅಂಗನವಾಡಿ ಕೇಂದ್ರದ ಹತ್ತಿರ ಸಿಸಿ ರಸ್ತೆ ಮೇಲೆ ಬಹಿರ್ದೆಸೆಗೆ ಹೋಗುತಿದ್ದಾಗ ಅದೇ ಸಮಯಕ್ಕೆ ನಮ್ಮ ಗ್ರಾಮದ ಮಲಕಾಜಪ್ಪ ತಂದೆ ಗೌಡಪ್ಪ ಮಲ್ಲಿಕಾರ್ಜುನವರ, ಭೀಮಾಶಂಕರ  ತಂದೆ ವಿಠ್ಠಲ ನಾಸಿ, ಮಾಯಪ್ಪ ತಂದೆ ಸಿದ್ದಪ್ಪ ಪೂಜಾರಿ ಮೂರು ಜನರು ಅಂಗನವಾಡಿ ಹತ್ತಿರ ಸಿಸಿ ರಸ್ತೆಯ ಬಾಜು ಮಾತನಾಡುತ್ತಾ ನಿಂತಿದ್ದರು ಅದೇ ಸಮಯಕ್ಕೆ  ನಮ್ಮೂರಿನ ಪ್ರಭು ತಂದೆ ಯಲ್ಲಪ್ಪ ಹವದೆ ಈತನು ತನ್ನ ಕೈಯಲ್ಲಿ ಕಬ್ಬಿಣದ ರಾಡ ಹಿಡಿದುಕೊಂಡು ನನ್ನ ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ರಂಡಿ ಮಗನೆ ಶ್ಯಾಣ್ಯಾ ಕಡೆ ನಮ್ಮ ಸಮಾಜದ ಹೆಣ್ಣು ಮಕ್ಕಳು ಸಂಡಾಸಕ್ಕೆ ಹೋಗುತ್ತಾರೆ ನೀ ದಿನಾಲು ಕಡೆ ಬರುತ್ತಿ ನಿನಗೆ ಎಷ್ಟುಸಲ ಹೇಳಿದ್ರು ಉದ್ದೇಶಪೂರ್ವಕವಾಗಿ ಕಡೆ ಬರುತ್ತಿ ಬೋಸಡಿ ಮಗನೆ ಅಂತ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದಾಗ ಪ್ರಭು ಈತನು ಬೈಯುವದನ್ನು ಕೇಳಿ ಅಲ್ಲೆ ಮಾತನಾಡುತ್ತಾ ನಿಂತಿದ್ದ  ಮಲಕಾಜಪ್ಪ ಮಲ್ಲಿಕಾರ್ಜುನವರ, ಭೀಮಾಶಂಕರ  ನಾಸಿ, ಮಾಯಪ್ಪ ಪೂಜಾರಿ  ರವರು ನಮ್ಮ ಹತ್ತಿರ ಬಂದು ಪ್ರಭು ಈತನಿಗೆ ತಿಳುವಳಿಕೆ ಹೇಳುತಿದ್ದಾಗ ಅವರಿಗೆ ಕೇಳದೆ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿನ ರಾಡಿನಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಸದರಿ ರಾಡ ನನ್ನ ಎದೆಗೆ ಬಡಿದು ಭಾರಿ ಗುಪ್ತಗಾಯವಾಗಿರುತ್ತದೆ ಮತ್ತೆ ಅದೆ ರಾಡಿನಿಂದ ನನಗೆ ಬಿಸಿ ಹೊಡೆದಾಗ ರಾಡ ನನ್ನ ಗುಪ್ತಾಂಗಕ್ಕೆ(ತೊರಡಿಗೆ) ಬಡಿದು ಗುಪ್ತ ಗಾಯವಾಗಿರುತ್ತದೆ. ಆಗ ಮಲಕಾಜಪ್ಪ ಮಲ್ಲಿಕಾರ್ಜುನವರ, ಭೀಮಾಶಂಕರ  ನಾಸಿ, ಮಾಯಪ್ಪ ಪೂಜಾರಿ ಮೂರು ಜನರು  ಪ್ರಭು ಈತನಿಗೆ ಹಿಡಿದು ನನಗೆ ಹೊಡೆಯುವದನ್ನು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ
ನರೋಣಾ ಠಾಣೆ : ದಿನಾಂಕ:04/10/2019 ರಂದು ಎಂದಿನಂತೆ ರಾತ್ರಿ ಊಟಮಾಡಿ 9-30 ಗಂಟೆ ಸುಮಾರಿಗೆ ಮಲಗಿಕೊಂಡೇವು. ದಿನಾಂಕ:05/10/2019 ರಂದು ಮೂಂಜಾನೆ 09-00 ಗಂಟೆ ಸುಮಾರಿಗೆ ನಾನು ಮನೆಯಲ್ಲದ್ದಾಗ ಒಕ್ಕಲುತನ ಕೆಲಸಕ್ಕೆಂದು ಕೂಲಿ ಹಚ್ಚಿದ ಕೂಲಿ ಆಳುಗಳು ಮನೆಗೆ ಬಂದು ಕೂಲಿ ಹಣ ಕೇಳಿದಾಗ ನಾನು ನನ್ನ ಹೆಂಡತಿಗೆ ಅಲ್ಮಾರಿಯಲ್ಲಿದ್ದ ಹಣ ತಾ ಎಂದು ಹೇಳಲು, ನನ್ನ ಹೆಂಡತಿಯು ಅಲ್ಮಾರಿ ತೆರೆಯಲು ಹೋದಾಗ ಅಲ್ಮಾರಿಯ ಹ್ಯಾಂಡಲ್ ಮುರಿದಿದ್ದು ಗೊತ್ತಾಗಿ ನನಗೆ ನನ್ನ ಹೆಂಡತಿ ಯಾರೋ ಮುರಿದ್ದಾರೆಂದು ಗಾಭರಿಯಿಂದ ಹೇಳಲು, ಆಗ ನಾನು ಹೋಗಿ ನೋಡಲು ಯಾರೋ ಅಲ್ಮಾರಿ ಕೀಲಿ ಮುರಿದು ಅಲ್ಮಾರಿಯಲ್ಲಿದ್ದ ನಗದು 15000/- ರೂಗಳು ಇರಲಿಲ್ಲಾ ಮತ್ತು ಬಂಗಾರದ ಆಭರಣಗಳು ಕೂಡ ಇರಲಿಲ್ಲ ಯಾರೋ ಅಪರಿಚಿತ ಕಳ್ಳಲು ದಿನಾಂಕ:04/10/2019 ರಂದು ಮುಂಜಾನೆ 10-00 ಗಂಟೆಯಿಂದ ಸಾಯಾಂಕಾಲ 5-30 ಗಂಟೆಯ ಮಧ್ಯದ ಅವಧಿಯಲ್ಲಿ, ಮನೆಯಲ್ಲಿ ಯಾರು ಇಲ್ಲದ ಸಮುದಲ್ಲಿ ಬಾಗಿಲುಗಳ ಕೀಲಿ ತೆರೆದು, ಅಲ್ಮಾರಿಯ ಕೀಲಿ ಮುರಿದು ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬಂಗಾರದ ಆಭರಣಗಳು ನಗದು ಹಣ 15000/- ಹೀಗೆ ಒಟ್ಟು 1,55,600/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2019

KALABURAGI DISTRICT REPORTED CRIMES

ಆಕ್ರಮವಾಗಿ ಶಶ್ತ್ರಾಸ್ತ್ರ ಹೊಂದಿದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 05-10-2019 ರಂದು ಪ್ರಭು ತಂದೆ ತುಕಾರಾಮ ಜಮಾದಾರ ಸಾ|| ದುದ್ದಣಗಿ ಈತನು, ದುದ್ದಣಗಿ ಸೀಮಾಂತರದಲ್ಲಿನ ತನ್ನ ಹೊಲದಲ್ಲಿನ ಮನೆಯಲ್ಲಿ ಅಕ್ರಮವಾಗಿ ನಾಡ ಪಿಸ್ತೂಲನ್ನು ಇಟ್ಟುಕೊಂಡಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ,  ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದುದ್ದಣಗಿ ಸೀಮಾಂತರದಲ್ಲಿರುವ ಆರೋಪಿತನ ಹೊಲದಲ್ಲಿನ ಮನೆಯ ಬಗ್ಗೆ ಬಾತ್ಮಿದಾರರಿಗೆ ವಿಚಾರಿಸಿ, ಬಾತ್ಮಿದಾರರು ಮನೆಯನ್ನು ತೋರಿಸಿದ ಮೇರೆಗೆ, ಮನಗೆ ಹೋಗಿ, ಮನೆಯಲ್ಲಿದ್ದವರನ್ನು ಹೊರಗೆ ಕರೆಯಲು ಒಬ್ಬ ವ್ಯೆಕ್ತಿ ಹೊರಗೆ ಬಂದು ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಪ್ರಭು ತಂದೆ ತುಕಾರಾಮ ಜಮಾದಾರ ಸಾ|| ದುದ್ದಣಗಿ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಅಕ್ರಮವಾಗಿ ನಾಡ ಪಿಸ್ತೂಲನ್ನು ಇಟ್ಟುಕೊಂಡ ಬಗ್ಗೆ ವಿಚಾರಿಸಲು, ಸದರಿಯವನು ತಡವರಿಸುತ್ತಾ ನನ್ನ ಹತ್ತಿರ ಇರುವುದಿಲ್ಲ ಎಂದು ಅದಲು ಬದಲು ಹೇಳುತ್ತಾ, ನಮ್ಮ ದೃಷ್ಟಿ ಬೇರೆ ಕಡೆಗೆ ಸೇಳೆಯುವಂತೆ ಮಾಡಿ ನಮ್ಮಿಂದ ತಪ್ಪಿಸಿಕೊಂಡು ಓಡ ತೊಡಗಿದನು, ಆಗ ಸದರಿಯವನನ್ನು ಬೆನ್ನಟ್ಟಿ ಹಿಡಿದು, ಪಂಚರ ಸಮಕ್ಷಮ ಪುನ ಪುನ ವಿಚಾರಿಸಿದಾಗ, ಸದರಿ ಪ್ರಭು ಜಮಾದಾರ ಈತನು ನನ್ನ ಹತ್ತಿರ ಪಿಸ್ತೂಲು ಇರುತ್ತದೆ ಎಂದು ಹೇಳಿ ಕೊಟ್ಟಿಗೆಯಲ್ಲಿ ಮುಚ್ಚಿ ಇಟ್ಟಿದ್ದ ಪಿಸ್ತೂಲನ್ನು ತಗೆದು ಹಾಜರು ಪಡಿಸಿದನು, ಸದರಿ ಪಿಸ್ತೂಲನ್ನು ಚೆಕ್ ಮಾಡಲಾಗಿ, ಪಿಸ್ತೂಲು ಮ್ಯಾಗ್ಜಿನ್ ದಲ್ಲಿ 01 ಜಿವಂತ ಗುಂಡು ಇತ್ತು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡು ಬಗ್ಗೆ ವಿಚಾರಿಸಲು, ನಾನು ಹಿಂದೆ ಭಾಗಪ್ಪ ಹರಿಜನ ಈತನಿಗೆ ವಿಜಯಪೂರದ ಕೋರ್ಟಿನಲ್ಲಿ ಗುಂಡು ಹಾರಿಸಿದ ಕೇಸಿನಲ್ಲಿದ್ದರಿಂದ. ಭಾಗಪ್ಪನು ನನಗೆ ಏನಾದರೂ ಮಾಡಿಯಾನು ಎಂಬ ಭಯಕ್ಕಾಗಿ  ಸದರಿ ಪಿಸ್ತೂಲನ್ನು ಕರಜಗಿ ಗ್ರಾಮದ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ಈತನ ಹತ್ತಿರ ಕರಜಗಿ ಗ್ರಾಮದಲ್ಲಿ 40,000/- ರೂಪಾಯಿ ಕೊಟ್ಟು ಖರಿದಿ ಮಾಡಿರುತ್ತೇನೆ ಎಂದು ತಿಳಿಸಿದನು. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ||ಕಿ|| 30,000/- ರೂ ಹಾಗೂ 01 ಜಿವಂತ ಗುಂಡು ||ಕಿ|| 100/- ರೂ ಕಿಮ್ಮತ್ತಿನದು ಇದ್ದು, ಸದರಿ ಪಿಸ್ತೂಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಸದರಿ ನಾಡ ಪಿಸ್ತೂಲನ್ನು ಮತ್ತು ಜಿವಂತ ಗುಂಡನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 05-10-2019 ರಂದು ಹವಳಗಾ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಲಾರಿಯಲ್ಲಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹವಳಗಾ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಹೋಗುತ್ತಿದ್ದಂತೆ, ಗುಡಿಯ ಮುಂದಿನ ಲೈಟಿನ ಬೆಳಕಿನಲ್ಲಿ ನಮ್ಮ ಪೊಲೀಸ ವಾಹನವನ್ನು ನೋಡಿ, ಲಾರಿಯನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು.  ನಂತರ ಸದರಿ ಲಾರಿಯನ್ನು ಪಂಚರ ಸಮಕ್ಷಮ ಚೆಕ್ಕ ಮಾಡಲು ಐಶರ ಕಂಪನಿಯ ಲಾರಿ ಇದ್ದು ಅದರಲ್ಲಿ ಅರ್ದ ಮರಳು ತುಂಬಿದ್ದು ಇತ್ತು. ಅದರ ನಂ ಕೆಎ-28 ಸಿ-1190, ಸದರಿ ಲಾರಿ .ಕಿ 10,00,000/-ರೂ ಇರಬಹುದು. ಸದರಿ ಲಾರಿಯಲ್ಲಿದ್ದ ಮರಳಿನ .ಕಿ 5.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಕುಮಾರ ತಂದೆ ದೇವಿಂದ್ರಪ್ಪ ಪಾಟೀಲ ಸಾ: ಸೊನ್ನ ರವರು ದಿನಾಂಕ 05-10-2019 ರಂದು ನನ್ನ ಹೆಂಡತಿಯಾದ ಪದ್ಮಾವತಿ ಹಾಗೂ ಅವಳ ತಂದೆಯಾದ ಸಿದ್ರಾಮಪ್ಪ ಯಾದಗಿರಿ ಅಣ್ಣನಾದ ವೆಂಕಟೇಶ, ತಾಯಿಯಾದ ಗಂಗಮ್ಮ ಮತ್ತು ಇನ್ನು ಕೆಲವು ಜನರು ಕೂಡಿ ನನಗೂ ಮತ್ತು ನನ್ನ ಹೆಂಡತಿಗೂ ಇದ್ದ ಜಗಳದ ವಿಷಯವಾಗಿ ನ್ಯಾಯ ಪಂಚಾಯತಿ ಮಾಡಿ ರಾಜಿ ಮಾಡಲು ಸೋನ್ನ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದಿರುತ್ತಾರೆ. ನಮ್ಮ ಮನೆಯಲ್ಲಿ ನನಗೂ ಮತ್ತು ಸದರಿಯವರಿಗೂ ನ್ಯಾಯ ಪಂಚಾಯತಿ ಮಾಡುತ್ತಿದ್ದ ಸಮಯದಲ್ಲಿ ಬಾಯಿ ಜಗಳ ಆದಾಗ ನನಗೆ ನಮ್ಮ ಮಾವನಾದ 1) ಸಿದ್ರಾಮಪ್ಪ ಬಾಲಚೇಡ, ನನ್ನ ಹೆಂಡತಿಯ ಅಣ್ಣನಾದ 2) ವೆಂಕಟೇಶ ಬಾಲಚೇಡ, ನನ್ನ ಹೆಂಡತಿಯಾದ 3) ಪದ್ಮಾವತಿ ಪಾಟೀಲ ಹಾಗೂ ನನ್ನ ಅತ್ತೆಯಾದ 4) ಗಂಗಮ್ಮ ಬಾಲಚೇಡ ನಾಲ್ಕು ಜನರು ಕೂಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಯುವುದು, ಕಾಲಿನಿಂದ ಒದೆಯುವುದು ಮಾಡಿರುತ್ತಾರೆ. ಮತ್ತು ನಮ್ಮ ಮಾವ ಸಿದ್ರಾಮಪ್ಪ ಈತನು ನಮ್ಮ ಮನೆಯ ಮೂಲೆಯಲ್ಲಿ ಇಟ್ಟಿದ್ದ ಬಡಿಗೆಯನ್ನು ತಗೆದುಕೊಂಡು, ಬಡಿಗೆಯಿಂದ ಹೊಡೆದಿರುತ್ತಾನೆ. ನನಗೆ ಹೊಡೆಯುತ್ತಿದ್ದಾಗ ನ್ಯಾಯ ಪಂಚಾಯತಿ ಮಾಡಲು ಬಂದ ಬಸವಂತ್ರಾಯ ಪಾಟೀಲ, ಸಂಗನಗೌಡ ಪಾಟೀಲ, ಬಸವರಾಜ ಜಮಾದಾರ, ಶಿವಾನಂದ ತಳವಾರ ರವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ನನಗೆ ಹೊಡೆಯುತ್ತಿದ್ದವರು ನೀನು ನಮ್ಮ ಮಾತನ್ನು ಕೇಳದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದರಿಂದ ನಾನು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ತಗೆದುಕೊಂಡು ದೂರು ನಿಡಲು ಠಾಣೆಗೆ ಬಂದಿರುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರೂಗಿಸಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.