POLICE BHAVAN KALABURAGI

POLICE BHAVAN KALABURAGI

28 May 2019

KALABURAGI DISTRICT REPORTED CRIMES

ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಸಂಜಯಕುಮಾರ ತಂದೆ ಬಾಬುರಾವ ಶೇರಿಕಾರ ಸಾ|| ಪಡಸಾವಳಿ ತಾ|| ಆಳಂದ ರವರು ದಿನಾಂಕ 26/05/2019 ರಂದು ರಾತ್ರಿ 11-00 ಗಂಟೆಯವರೆಗೆ ಮನೆಯಲ್ಲಿ ಊಟ ಮಾಡಿ ನಮ್ಮ ಮನೆಯ ಮುಂದಿನ ಕಂಪೌಂಡಕ್ಕೆ ಹತ್ತಿದ್ದ ಕಬ್ಬಿಣದ ಗೇಟಿಗೆ & ಮನೆಯ ಮುಂದಿನ ಬಾಗಿಲಿಗೆ ಕೀಲಿ ಹಾಕಿಕೊಂಡು ಬೇಸಿಗೆ ಇದ್ದ ಪ್ರಯುಕ್ತ ರಾತ್ರಿ 11-30 ಗಂಟೆಯ ಸುಮಾರಿಗೆ ನಾವೆಲ್ಲರೂ ಕೂಡಿಕೊಂಡು ಮನೆಯ ಮಾಳಿಗೆ ಮೇಲೆ ಹೋಗಿ ಮಲಗಿಕೊಂಡಿದ್ದು ನಂತರ ದಿನಾಂಕ 27/05/2019 ರಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ನಾನು & ನನ್ನ ಹೆಂಡತಿ ಹಾಗೂ ನನ್ನ ತಾಯಿ ಮಾಳಿಗೆಯಿಂದ ಕೆಳಗೆ ಇಳಿದು ನಮ್ಮ ಕಬ್ಬಿಣದ ಗೇಟಿಗೆ ಹಾಕಿದ ಕೀಲಿಯನ್ನು ನೋಡಲಾಗಿ ಮುರಿದು ಗೇಟ್ ಅರ್ಧ ತೆರೆದಿದ್ದು ಮುಂದಿನ ಬಾಗಿಲಗೆ ನೋಡಲಾಗಿ ಕೀಲಿ ಮುರಿದು ಕೊಂಡಿಯನ್ನು ಮುರಿದಿದ್ದು ಆಗ ಗಾಬರಿಯಾಗಿ ನಾವೆಲ್ಲರೂ ಕೂಡಿಕೊಂಡು ಒಳಗಡೆ ಹೋಗಿ ನೋಡಲಾಗಿ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಅಲಮಾರಿಯ ಲಾಕರ ಮುರಿದು ಒಳಗಡೆ ಇಟ್ಟಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  ಒಟ್ಟು 2.35,000/- ರೂಪಾಯಿಗಳು ಬೆಲೆ ಬಾಳುವ ಬಂಗಾರದ & ಬೆಳ್ಳಿ ಆಭರಣ ಹಾಗು ನಗದು ಹಣವನ್ನು ನಿನ್ನೆ ರಾತ್ರಿ 11-45 ಪಿ ಎಮ್ ದಿಂದ ಇಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಗೇಟಿನ ಕೀಲಿ ಹಾಗು ಮನೆಯ ಮುಖ್ಯ ಬಾಗಿಲಿನ ಕೀಲಿಯನ್ನು ಕಬ್ಬಿಣದ ರಾಡಿನಿಂದ ಮುರಿದು ಮನೆಯೊಳಗೆ ಪ್ರವೇಶ ಮಾಡಿ ರಾತ್ರಿ ವೇಳೆಯಲ್ಲಿ ಈ ಮೆಲ್ಕಂಡ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಡಾ.ಶಿವಲಿಂಗಪ್ಪಾ ತಂದೆ ವಿಠ್ಠಲ ಗೌಳಿ, ಸಾ: ಮನೆ ನಂ.9-953/12ಜಿ, ಪ್ಲಾಟ್ ನಂ.25 ಸಿದ್ದಾರೋಡ ಮಠದ ಹತ್ತಿರ ಜನತಾ ಲೇಔಟ್ ಕಲಬುರಗಿ ರವರು ರಾಜಾಪೂರ ಗ್ರಾಮ, ತಾ: ಶಿರೋಳ, ಜಿ: ಕೊಲ್ಹಾಪೂರ, ಮಹಾರಾಷ್ಟ್ರ ರಾಜ್ಯದ ದುಳಪ್ಪಾ ತಂದೆ ಮಹಾನಿಂಗಪ್ಪಾ ಧಿವಟೆ ಇವರ ಮಗನಾಗಿರುವ ಧಯಾನಂದ ದುಳಪ್ಪಾ ಧಿವಟೆ ಇವರೊಂದಿಗೆ ಹಿಂದೆ ಸಂಬಂದವಾಗಿದ್ದು ಪ್ರಕಾರ ದುಳಪ್ಪಾ ಇವರ ಮಗಳಾದ, ಮನೀಷಾ ಅನ್ನುವವಳನ್ನು ನನ್ನ ತಮ್ಮನ ಮಗನಾಗಿರುವ ಈಶ್ವರ ಇತನಿಗೆ ಮದುವೆ ಮಾಡುವ ಪ್ರಯುಕ್ತ ನಿಶ್ಚಯದ ಮಾತುಕತೆ ಸಮಾಜದ ಮುಖಂಡರ ಮುಂದೆ ಕಳೆದ ಎರಡು ವರ್ಷಗಳ ಹಿಂದೆ ಮಾತುಕತೆಯಾಗಿದ್ದು ಆದರೆ ದುಳಪ್ಪಾ ಇವರು ಸದ್ಯದ ಪರಸ್ಥಿತಿಯಲ್ಲಿ ನನ್ನ ತಮ್ಮನ ಮಗನಿಗೆ ಮದುವೆ ಮಾಡಿಕೊಡುವುದಿಲ್ಲ ಅಂತಾ ತಕರಾರು ನಡೆದಿರುತ್ತದೆ. ಹೀಗಿದ್ದು, ದಿನಾಂಕ.24.05.2019 ರಂದು ರಾತ್ರಿ 7.30 ಗಂಟೆಯಿಂದ 8.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮ ಮನೆಯಲ್ಲಿದ್ದಾಗ ನಮ್ಮ ನೆಂಟಸ್ಥರೆ ಆಗಿರುವಂತಹ 1) ಶ್ರೀ ದುಳಪ್ಪಾ ತಂದೆ ಮಹಾನಿಂಗಪ್ಪಾ ದಿವಟೆ ಅವರ ಹೆಂಡತಿಯಾದ 2) ಶ್ರೀಮತಿ ಗೀತಾ ಗಂಡ  ದುಳಪ್ಪಾ ದಿವಟೆ, ತಮ್ಮನಾದ 3) ಅನೀಲ ತಂದೆ ಮಹಾನಿಂಗಪ್ಪಾ ದಿವಟೆ, ಮಗನಾದ, 4) ಧಯಾನಂದ ತಂದೆ ದುಳಪ್ಪಾ ದಿವಟೆ, ದುಳಪ್ಪ ವರ ಮಾಮನಾದ 5) ಪಾಂಡು (ಪಂಡೀತ ಪೂಜಾರಿ) ದಿವಟೆ, ದುಳಪ್ಪ ಇವರ ತಂಗಿಯಾದ 6) ಇಠಾಬಾಯಿ ಗಂಡ ಬಾಳು ದಿವಟೆ, ಅವರ ಹೆಣ್ಣುಮಕ್ಕಳಾದ 7) ಕುಮಾರಿ ಮನೀಷಾ ತಂದೆ ದುಳಪ್ಪಾ ದಿವಟೆ, 8) ಕುಮಾರಿ ಮನಾಲಿ ತಂದೆ ದುಳಪ್ಪಾ ದಿವಟೆ ಮತ್ತು ಅವರ ಜೊತೆಯಲ್ಲಿ ಇನ್ನು ಕೆಲವರು ಕೂಡಿಕೊಂಡು ನಮ್ಮ ಮನೆಯಲ್ಲಿ ನೆಂಟಸ್ಥನ ಮಾಡುವ ಬಗ್ಗೆ ನೆಪಮಾಡಿಕೊಂಡು ಮನೆಯಲ್ಲಿ ಏಕಾಏಕಿಯಾಗಿ ನುಗ್ಗಿದವರೆ ನನಗೆ ಹೊಡೆಯಲು ಬಂದರು ಯಾಕೆ ಯಾಕೆ ಎನಾಗಿದೆ ಹೇಳಿ ಅಂತಾ ಅಂದಾಗ ಸುಳಿ ಮಕ್ಕಳ್ರ್ಯಾ ನೀವು ಚಪ್ಪಲಿ ಹೊಲಿಯುವವರು, ಖಂಡ ಮಾಂಸ ತಿನ್ನುವ ಹೊಲಸು ಸುಳೆ ಮಕ್ಕಳಿದ್ದಿರಿ, ನೀವು ನಮ್ಮ ಮಕ್ಕಳಾದ ಕುಮಾರಿ ಮನೀಷಾ ಮತ್ತು ಮನಾಲಿ ಇವರಿಗೆ ನಿಮ್ಮ ಕುಟುಂಬಕ್ಕೆ ಕೊಡು ಅಂತಾ ಕೇಳುತ್ತಿರಿ ಸುಳೆ ಮಕ್ಕಳೆ ಅಂತಾ ಅನ್ನುತ್ತಾ ನನಗೆ 2-3 ಜನ ಹಿಡಿದುಕೊಂಡು ಮರಣಾಂತಿಕ ಹಲ್ಲೆ ಮಾಡಿದ್ದಾರೆ ಕಾಲಿಗೆ ಕಟ್ಟಿಗೆಯಿಂದ, ರಾಡನಿಂದ ನಾಜುಕು ಜಾಗಗಳಿಗೆ ಹೊಡೆದು ಹಮ್ಲಾ ಮಾಡಿದ್ದಾರೆ, ವಯಸ್ಸಾದ ನನ್ನ ತಾಯಿ ಅಂಬವ್ವಾ ಗಂಡ ವಿಠ್ಠಲ ಗೌಳಿ, ಇವರಿಗು ಸಹ ಕೈ ಹಿಡಿದು ಎಳೆದಾಡಿ ಅವಮಾನಪಡಿಸಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಬಿಡಿಸಲು ಬಂದ ನಮ್ಮ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಲಿಂಗಪ್ಪಾ ಗೌಳಿ ಇವರಿಗೂ ಸಹ ರಂಡೆ ಮುಂಡೆ ಅಂತಾ ಅವ್ಯಾಚ ಶಬ್ದಗಳಿಂದ ಬೈದಾಡಿ ಕೈ ಹಿಡಿದು ಎಳೆದಾಡಿ ಅವಮಾನಪಡಿಸಿದ್ದು ಅಲ್ಲದೇ ರಂಡೆರೆ ನಮ್ಮ ಜಾತಿ ಬಹಳ ಶ್ರೇಷ್ಠ ಜಾತಿ ನಾವು ಪಂಡಿತ ಪುರೋಹಿತ ಕಿರ್ತನೆ ಮತ್ತು ಬಜನೆ ಮಾಡುವವರಿದ್ದು ಅದಕ್ಕೆ ನಮಗೆ ದಿವಟೆಗಳೆಂದು ಕರೆಯುತ್ತಾರೆ. ನಿಮಗೆ ಹೊಲಸು ತಿನ್ನುವ ಸಮಗಾರಂತ ಕರೆಯುತ್ತಾರೆ ಅಂತಾ ಹೊಡೆದಿರುತ್ತಾರೆ. ಇದನ್ನು ಕಂಡು ಬಿಡಿಸಲು ಬಂದ ನನ್ನ ಅಳಿಯ  ಶಿವಾನಂದ ತಂದೆ ಚಂದ್ರಶ್ಯಾ ಹರಳಯ್ಯ ಇವರಿಗೆ ಕೈಯಿಂದ ಹೊಡೆಬಡೆ ಮಾಡಿ ಎಡಕೈ ಒಡ್ಡುಮುರಿದು ಗುಪ್ತಗಾಯಪಡಿಸಿರುತ್ತಾರೆ. ಇವರೆಲ್ಲರೂ ರೀತಿ ನಮ್ಮ ಮನೆಯಲ್ಲಿ ಏಕಾಏಕಿಯಾಗಿ ನುಗ್ಗಿ ಯಾವುದೇ ಮಾತನು ಕೇಳದೇ ಹಳೆಯ ವೈಮನಸ್ಸಿನಿಂದ ನಮ್ಮ ಮನೆಯಲ್ಲಿ ಬಂದು ನಮಗೆ ರೀತಿ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 May 2019

KALABURAGI DISTRICT REPORTED CRIMES

ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ಶರಣಪ್ಪ ಮಳ್ಳಿ ಸಾಃ ಸಂಗಮತಾಯಿ ಕಾಲೋನಿ ಕಲಬುರಗಿ ರವರು ಸಂಗಮ ತಾಯಿ ಕಾಲೋನಿಯಲ್ಲಿ ನಮ್ಮದು ಒಂದು ಸ್ವಂತ ಮನೆ ಇದ್ದು  ನಮ್ಮ ಮನೆಯಲ್ಲಿ ಕೆಲವೋಂದು ಕೋಣೆಗಳು ನಾವು ಉಪಯೋಗ ಮಾಡಿಕೊಂಡು ಬಂದಿದ್ದು ಒಂದು ಪೋರ್ಶನ ಸಿದ್ರಮಾ ರೆಡ್ಡಿ ಎಂಬುವರಿಗೆ ಬಾಡಿಗೆಯಲ್ಲಿ ಕೊಟ್ಟಿದ್ದು ಅವರು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಮನೆಯಲ್ಲೆ ವಾಸವಾಗಿರುತ್ತಾರೆ. ಬೇಸಿಗೆ ಇರುವ ಪ್ರಯುಕ್ತ ರಾತ್ರಿ ವೇಳೆ ನಮ್ಮ ಮನೆಗಳಿಗೆ ಕೀಲಿ ಹಾಕಿಕೊಂಡು ನಮ್ಮ ಮನೆ ಮೇಲಗಡೆ ಮಲಗುತ್ತಾ ಬಂದಿರುತ್ತೇವೆ. ಹೀಗೆ ಇರುವಾಗ ಪ್ರತಿ ದಿನದಂತೆ ದಿನಾಂಕಃ 24.05.2019 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಬೇಸಿಗೆ ಇರುವ ಪ್ರಯುಕ್ತ ನಮ್ಮ ಮನೆಯ ಬಾಗಿಲಕ್ಕೆ ಸರಿಯಾಗಿ ಚಿಲಕ ಹಾಕಿಕೊಂಡು ನಮ್ಮ ಮನೆಯ ಮೇಲಛಾವಣಿ ಮೇಲಗಡೆ ಮಲಗಿ ಕೊಂಡಿರುತ್ತೇವೆ.  ಅದರಂತೆ ನಮ್ಮ ಮನೆಯಲ್ಲಿ ಬಾಡಿಗಿ ಇರುವ ಸಿದ್ರಾಮ ರೆಡ್ಡಿ ತಂದೆ ಚಂದ್ರರೆಡ್ಡಿ ರಸ್ತಾಪೂರ ಇವರು ಸಹ ರಾತ್ರಿ ಅವರ ಬಾಡಿಗೆ ಇರುವ ಮನೆಯ ಬಾಗಿಲಕ್ಕೆ ಬೀಗ ಹಾಕಿಕೊಂಡು ಮನೆಯ ಮೇಲಗಡೆ ಬಂದು ಮಲಗಿಕೊಂಡಿರುತ್ತಾರೆ. ನಂತರ ದಿನಾಂಕಃ 25.05.2019 ರಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಬಾಡಿಗೆ ಇರುವ ಸಿದ್ರಾಮ ರೆಡ್ಡಿ ರವರು ಕೆಳಗಡೆ ಬಂದು ನೋಡಿದಾಗ ನಮ್ಮ ಮನೆ ಹಾಗೂ ಬಾಡಿಗೆದಾರರ ಮನೆಯ ಎರಡು ಬಾಗಿಲು ಖುಲ್ಲಾ ಇರುವದನ್ನು ನೋಡಿ ನಮ್ಮನ್ನು ಕರೆದಾಗ ನಾವು ಕೆಳಗಡೆ ಬಂದು ನೋಡಿದ್ದಾಗ ನಮ್ಮ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿಗಳು ಮುರಿದಿದ್ದು  ನಮ್ಮ ಮನೆಯೋಳಗಡೆ ಹೋಗಿ ನೋಡಲು ನಮ್ಮ ಮನೆಯ ಅಲಮಾರಿಯಲ್ಲಿಟ್ಟಿರುವ  ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳು  ಒಟ್ಟು 4,02,000 ರೂ ಬೆಲೆ ಬಾಳುವ ಬಂಗಾರ ಮತ್ತು ಬೆಳಿ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಅಲ್ಲದೆ ನಮ್ಮ ಮನೆಯಲ್ಲೆ ಬಾಡಿಗೆ ಇರುವ ಶ್ರೀ ಸಿದ್ರಾಮ ರೆಡ್ಡಿ ತಂದೆ ಚಂದ್ರರೆಡ್ಡಿ ರಸ್ತಾಪೂರ ಇವರ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿ ಮುರಿದ್ದು ಅವರ ಮನೆಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣ ಹಾಗೂ ಮನೆಯೆ ಮುಂದೆ ನಿಲ್ಲಿಸಿರುವ ಮೋಟಾರ ಸೈಕಲ್ ನಂ ಕೆಎ-32 ವಾಯಿ-8493 ಅಃಕಿಃ 30,000/-  ಹೀಗೆ ಒಟ್ಟು 5,09,000 ಬೆಳೆಬಾಳುವ ಬಂಗಾರ ಮತ್ತು ಬೆಳಿ ಆಭರಣಗಳು ಮತ್ತು 36700 ನಗದು ಹಣ ಮತ್ತು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಖೇಮಲಿಂಗ ತಂದೆ ಗುರಣ್ಣಾ ಬಿರಾದಾರ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನ ಘತ್ತರಗಾ ರವರಿಗೆ ಭಾಗ್ಯವಂತಿ ದೇವಸ್ಥಾನದಲ್ಲಿ ದ್ವಿ.ದ.ಸಹಾಯಾಕನಾಗಿ ಕೇಲಸ ನಿರ್ವಹಿಸುತ್ತೀರುವ ಭಿಮರಾಯ ತಂದೆ ಮರೇಪ್ಪ ದೊಡ್ಡಮನಿ ಮತ್ತು ಮಹಾಂತಪ್ಪ ತಂದೆ ಸಿದ್ರಾಮಪ್ಪ ಮೂಗಿನ ಡಿ.ದರ್ಜೆ ನೌಕರ ಇವರು ದಿನಾಂಕ:10/05/2019 ರಂದು 11-30 ಎ.ಎಮ್.ಸುಮಾರಿಗೆ ನನಗೆ ಪೊನ ಮಾಡಿ ಒಬ್ಬರು ಯಾತ್ರಿಕರು ಕಾರ್ಯಾಲಯಕ್ಕೆ ಬಂದು ನನ್ನ ಹೆಂಡತಿಯ ಘಂಟಣ ಸರ ಈಗ 10 ನಿಮೀಷದ ಹಿಂದೆ ದರ್ಶನ ಲೈನಿನಲ್ಲಿ ನಿಂತಿದ್ದಾಗ ಕಳೆದುಹೊಗಿರುತ್ತದೆ ಸ್ವಲ್ಪ ಸಿ.ಸಿ.ಕ್ಯಾಮರಾ ಚೆಕ್ ಮಾಡಿ ನೋಡಿ ಅಂತ ಕೇಳಿಕೊಳ್ಳುತ್ತಿದ್ದಾರೆ ಅಂತ ತಿಳಿಸಿದನು ಆಗ ಸದರಿಯವರಿಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ತೊರಿಸು ಅಂತ ತಿಳಿಸಿರುತ್ತೇನೆ ನಂತರ ಭಿಮರಾಯನು 50 ನಿಮೀಷ ಬಿಟ್ಟು ನನಗೆ ಮತ್ತೊಮ್ಮೆ ಪೊನ ಮಾಡಿ ಸರ್ ಸದರಿಯವರಿಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ತೊರಿಸಿದ್ದು ಅವರು ಕಳೆದುಕೊಂಡ ಸರದ ಬಗ್ಗೆ ಯಾವುದೆ ಉಪಯುಕ್ತ ಮಾಹಿತಿ ಸೆರೆಯಾಗಿರುವದಿಲ್ಲ ಆದರೆ ದಿನಾಂಕ:26/04/2019 ರಂದು ಸಾಯಂಕಾಲ 4-27 ಪಿ,ಎಮ್.ಸುಮಾರಿಗೆ ದೇವಸ್ಥಾನದ ಹಿಂದುಗಡೆ ಇರುವ ಹುಂಡಿಗಳ ಪೈಕಿ ಚಿಕ್ಕ ಹುಂಡಿಯಲ್ಲಿಯ ಹಣ ಘತ್ತರ್ಗಿ ಗ್ರಾಮದ ಸದ್ಯ ಪ್ರಸಕ್ತ ಸಾಲಿನ ಭಾಗ್ಯವಂತಿ ದೇವಸ್ಥಾನದ ಪೂಜಾರಿಗಳಾದ 1)ರಾಜಕುಮಾರ ತಂದೆ ಬಸಣ್ಣ ರಮಗಾ 2)ನಾಗೇಶ ತಂದೆ ಶ್ರೀಮಂತ ರಮಗಾ 3)ಸಿದ್ದು ತಂದೆ ಶ್ರೀಮಂತ ರಮಗಾ ಈ ಮೂರು ಜನರು ಹುಂಡಿಯಲ್ಲಿರುವ ಹಣ ಯಾವುದೊ ವಸ್ತುವನ್ನು ಒಳಗಡೆ ಹಾಕಿ ಅದರ ಸಹಾಯದಿಂದ ಹುಂಡಿಯಲ್ಲಿರುವ ಹಣ ಕಳ್ಳತನ ಮಾಡಿರುವ ಬಗ್ಗೆ ಮತ್ತು ದಿನಾಂಕ:27/04/2019 ರಂದು 05-47 ಪಿ,ಎಮ್.ಸುಮಾರಿಗೆ ದೇವಸ್ಥಾನದ ಮಂಟಪದಲ್ಲಿ ದರ್ಶನಕ್ಕೆ ಹೊಗುವಾಗ ಬಲಗಡೆ ಇರುವ ಹುಂಡಿಯಲ್ಲಿಯ ಹಣ ಘತ್ತರ್ಗಿ ಗ್ರಾಮದ ಸದ್ಯ ಪ್ರಸಕ್ತ ಸಾಲಿನ ಪೂಜಾರಿಗಳಾದ 1)ರಾಜಕುಮಾರ ತಂದೆ ಬಸಣ್ಣ ರಮಗಾ 2)ಸಿದ್ದು ತಂದೆ ಶ್ರೀಮಂತ ರಮಗಾ ಈ ಇಬ್ಬರು ಹುಂಡಿಯಲ್ಲಿರುವ ಹಣ ಯಾವುದೊ ವಸ್ತುವನ್ನು ಒಳಗಡೆ ಹಾಕಿ ಅದರ ಸಹಾಯದಿಂದ ಹುಂಡಿಯಲ್ಲಿರುವ ಹಣ ಕಳ್ಳತನ ಮಾಡಿರುವ ಬಗ್ಗೆ  ಸಿ,ಸಿ.ಟಿ.ವ್ಹಿ.ಯ ಕ್ಯಾಮರಾದ ದೃಶ್ಯಾವಳಿಯಲ್ಲಿ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ದೇವಸ್ಥಾನಕ್ಕೆ ಬಂದು ಸಿ.ಸಿ.ಟಿ.ವ್ಹಿ.ಯ ದೃಶ್ಯಾ ವಳಿಗಳು ಪರಿಶೀಲಿಸಲಾಗಿ ಸದರಿ ದೃಶ್ಯಾವಳಿಗಳು ನೀಜವಿದ್ದು ಈ ವಿಷಯದ ಬಗ್ಗೆ ನಮ್ಮ ಮೇಲಾದಿಕಾರಿಗಳಿಗೆ ತಿಳಿಸಿ ಮತ್ತು ಸಿ.ಸಿ.ಟಿ.ವ್ಹಿಯಲ್ಲಿ ಸೆರೆಯಾದ ದೃಶ್ಯಾವಳಿಗಳ ಪುಟೇಜ ಪಡೆದುಕೊಂಡು ದೇವಸ್ಥಾನಕ್ಕೆ ಭಕ್ತರು ಹುಂಡಿಯಲ್ಲಿ ಕಾಣಿಕೆಯಾಗಿ ಹಾಕಿದ ಹಣವನ್ನು ಅಂದಾಜು 15,000/- ರೂ ಕಳ್ಳತನ ಮಾಡಿದವರ ಮೇಲೆ ಕೂಡಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರೂಗಿಸಬೇಕು. ಅಂತ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಮಲ್ಲಿನಾಥ ತಂದೆ ಶರಣಗೌಡ ಪಾಟೀಲ ಸಾ : ಮಂದೇವಾಲ ರವರು ದಿನಾಂಕ:25.05.2019 ರಂದು ರಾತ್ರಿ ತನ್ನ ಕೆಸವನ್ನು ಮುಗಿಸಿಕೊಂಡು ಕಲಬುರಗಿಯಿಂದ ಜೇವರಗಿಗೆ ತನ್ನ ಫ್ಯಾಶನ ಪ್ಲಸ್ ಮೋ.ಸೈಕಲ್ ನಂ.ಕೆಎ.32 ಇಟಿ.5348 ಬೈಕನಲ್ಲಿ ಹೋಗುವಾಗ 10.50 ಪಿ.ಎಮ್.ಕ್ಕೆ ರಾಷ್ಟ್ರೀಯ ಹೆದ್ದಾರಿ ಸಂ.218 ರ ಸರಡಗಿ ಬಿ ಪೆಟ್ರೊಲ ಪಂಪ ದಾಟಿ ಅಂದಾಜು 2 ಕಿ.ಮಿ ದೂರ ರೋಡಿನ ಮೇಲೆ ಯಾರೋ 3 ಜನ ಅಪರಿಚಿತರು ಒಂದು ಮೋ.ಸೈಕಲ ಮೇಲೆ ಬಂದು ನನಗೆ ಅಡ್ಡಗಟ್ಟಿ ಪರ್ಸಿಯಿಂದ ಮತ್ತು ಚಾಕುವಿನಿಂದ ಹೋಡೆಬಡೆ ಮಾಡಿ ನನ್ನ ಹತ್ತೀರ ಇದ್ದ ಪರ್ಸ ಮತ್ತು ಮೋಬಾಯಿಲನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ ಕಾರಣ ಮಾನ್ಯರವರು ಸದರಿ 3 ಜನ ಅಪರಿಚಿತರ ವಿರುದ್ದ ಸೂಕ್ತ ಕಾನೂನ ರಿತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ಜಗದೇವಪ್ಪ ತಂದೆ ಅಣ್ಣರಾಯ  ಸಾಃ ಟೆಂಗಳಿ ಲೇಔಟ್ ಹುಮ್ನಾಬಾದ ರಿಂಗ ರೋಡ ಕಲಬುರಗಿ ರವರು ದಿನಾಂಕಃ 24/05/2019 ರಂದು ಮಧ್ಯಾಹ್ನ 6:00 ಗಂಟೆಯ ಸುಮಾರಿಗೆ ದರ್ಗಾದ ದರ್ಶನಕ್ಕಾಗಿ ನನ್ನ ಮೋಟಾರ್ ಸೈಕಲನ್ನು ದರ್ಗಾಸ ಆವರಣದಲ್ಲಿ ನನ್ನ ದ್ವೀಚಕ್ರ ವಾಹನಕ್ಕೆ ಸೈಡ್ ಲಾಕ್ ಹಾಕಿಕೊಂಡು ಒಳಗೆ ಹೋಗಿ ದರ್ಶನ ಪಡೆದುಕೊಂಡು ಪುನಃ 6.30 ಪಿಎಮ ಕ್ಕೆ ನಾನು ದರ್ಗಾದ ಆವರಣದಲ್ಲಿ ನಾನು ನಿಲ್ಲಿಸಿದ ನನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆಎ-32 ಇಇ-9590 ಬಂದು ನೋಡಿದ್ದಾಗ ನನ್ನ ಮೋಟಾರ ಸೈಕಲ್ ಇರಲಿಲ್ಲ. ನಾನು ಗಾಬರಿಗೊಂಡು ಮತ್ತು ನಮ್ಮ ಸಂಬಂದಿಕರು ಹಾಗೂ ನನ್ನ ಸ್ನೇಹಿತನಾದ ಶಿವಲಿಂಗಪ್ಪ ಇಬ್ಬರೂ ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಿದ್ದು ಮತ್ತು ಸ್ನೇಹಿತರ ಕಡೆ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ನನ್ನ ಸ್ನೇಹಿತರು ಮತ್ತು ಸಂಬಂಧಿಕರ ಕಡೆ ವಿಚಾರಣೆ ಮಾಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಶಾಂತಪ್ಪಾ ತಂದೆ ನಿಂಗಪ್ಪಾ ಹಿರೇಕುರುಬ ಸಾ||ಕಡಗಂಚಿ ಗ್ರಾಮ ರವರ ಊರಿನ ಮಲ್ಲಪ್ಪಾ ತಂದೆ ಶಾಂತಪ್ಪಾ ವಗ್ಗಿ, ಈತನು ನನಗೆ ಸುಮಾರು 4-5 ತಿಂಗಳಿಂದ ನಮ್ಮೂರಿನಲ್ಲಿ ಆಗಾಗ ಸಿಕ್ಕಾಗ ತನಗೆ ಖಚರ್ಿಗೆ, ಸಾರಾಯಿ ಕುಡಿಯಲು ಹಣ ನೀಡುವಂತೆ ಪೀಡಿಸುತ್ತಾ ಅಂಜಿಸುತ್ತಾ ಬಂದಿದ್ದು, ನಾನು ಆತನಿಗೆ ಹೆದರಿ ಆಗಾಗ 100, 200, ರೂಪಾಯಿಗಳನ್ನು ಕೊಡುತ್ತಾ ಬಂದಿರುತ್ತೇನೆ. ದಿನಾಂಕ:25/05/2019 ರಂದು ಸಾಯಂಕಾಲ ನಾನು ನಮ್ಮೂರಿನ ಹನುಮಾನು ದೇವಸ್ಥಾನದ ಹತ್ತಿರ ನಿಂತಾಗ ಮಲ್ಲಪ್ಪಾ ಈತನು ಅಲ್ಲಿಗೆ ಬಂದು ತನಗೆ 200 ರೂಪಾಯಿ ಕೊಡು ಅಂತಾ ಕೇಳಿದನು ಅದಕ್ಕೆ ನಾನು ನನ್ನ ಹತ್ತಿರ ಈಗ ಹಣವಿಲ್ಲ ಅಂತಾ ಹೇಳಿದಾಗ ಆತನು ರಂಡಿಮಗನೆ ಹಣ ಕೊಡದೆ ಹೋದರೆ ನಿನಗೆ ಇವತ್ತು ಖಲಾಸ ಮಾಡುವುದಾಗಿ ಅಂತಾ ಬೈದು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗಂಟಲಿಗೆ ತನ್ನ ಕೈಯಿಂದ ಜೋರಾಗಿ ಹಿಡಿದು ಹಿಚುಕುತ್ತಾ ನನಗೆ ತನ್ನ ಕಾಲಿನಿಂದ ಹೊಟ್ಟೆಗೆ ಒದೆಯುತ್ತಿದ್ದಾಗ ನಾನು ನನ್ನ ಕೈಗಳಿಂದ ಅವನಿಂದ ಬಿಡಿಸಿಕೊಂಡು ನಮ್ಮ ಮನೆಯ ಕಡೆಗೆ ಓಡುತ್ತಿರುವಾಗ ಆತನು ಅಲ್ಲೆ ಬಿದ್ದಿದ್ದ ಒಂದು ಕಲ್ಲು ತಗೆದುಕೊಂಡು ಬೀಸಿ ನನ್ನ ತಲೆಗೆ ಹೊಡೆದನು ನನಗೆ ತಲೆಗೆ ಭಾರಿ ರಕ್ತಗಾಯವಾಗಿ ಚಿರಾಡುತ್ತಿದ್ದಾಗ ನಮ್ಮೂರಿನ ಚಿದಪ್ಪಾ ತಂದೆ ಮೈಲಾರಿ ಹೊಸಕುರುಬ, ಬೀರಪ್ಪಾ ತಂದೆ ಶರಣಪ್ಪಾ ಚಿತಲಿ ಇವರು ನೋಡಿ ಓಡಿಬಂದು ಬಿಡಿಸಿರುತ್ತಾರೆ. ಒಂದುವೇಳೆ ಸದರಿಯವರು ಬಿಡಿಸದೇ ಹೊದಲ್ಲಿ ಮಲ್ಲಪ್ಪನು ನನಗೆ ಕೊಲೆ ಮಾಡಿಯೇ ಬಿಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಸಂತೋಷ ತಂದೆ ಶಿವಶರಣಪ್ಪ ಸಿಂಧೆ ಸಾ|| ಮ.ನಂ. ಬಿ1 ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಕಲಬುರಗಿ ರವರು ದಿನಾಂಕ:24.05.2019 ರಂದು ರಾತ್ರಿ ಊಟ ಮುಗಿಸಿಕೊಂಡು 10:00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಜ್ಯೋತಿ ಇಬ್ಬರು ಮನೆಯ ಮುಂದೆ ಮಾತಾಡುತ್ತಾ ವಾಕಿಂಗ್ ಮಾಡುತ್ತಿದ್ದಾಗ  ಯಾರೊ ಇಬ್ಬರು ಅಪರಿಚಿತ ದ್ವಿ-ಚಕ್ರ ವಾಹನ ಸವಾರರು ಬಂದು ನನಗೆ ತಡೆದು ನಿಲ್ಲಿಸಿ  ಏ ಭೋಸಡಿ ಮಗನೆ ಇಲ್ಲಿ ಏಕೆ ತಿರುಗಾಡುತ್ತಿ ಅಂತ ಕೇಳಿದಾಗ ಇಲ್ಲಿಯೇ ಪಕ್ಕದಲ್ಲಿ ನಮ್ಮ ಮನೆ ಇರುತ್ತದೆ, ನೀವು ಯಾರು ಕೇಳುವವರು ಅಂತ ಅಂದಾಗ, ಏ ರಂಡಿ ಮಗನೆ ನಮಗೆ ಎದರು ಮಾತಾಡುತ್ತಿಯಾ ಅಂತ ಇಬ್ಬರು ದ್ವಿ-ಚಕ್ರ ವಾಹನದಿಂದ ಕೆಳಗೆ ಇಳಿದು ಬಂದು ನನಗೆ ಕೈಯಿಂದ ಹೊಡೆಯಲು ಪ್ರಾರಂಭಿಸಿದರು ನನ್ನ ಹೆಂಡತಿ ಮತ್ತು  ನಾನು ಚಿರಾಡುತ್ತಿದ್ದಾಗ ಅವರಲ್ಲಿ ಒಬ್ಬನು ತನ್ನ ಹತ್ತಿರ ಇದ್ದ ಒಂದು ಸಣ್ಣ ಚಾಕುವಿನಿಂದ ನನ್ನ ಎಡಗೈಗೆ ಹೊಡೆದಿರುತ್ತಾನೆ, ನಾನು ಜೋರಾಗಿ ಕಿರುಚುವುದನ್ನು ಕೇಳಿ ಮನೆಯ ಒಳಗಿನಿಂದ ನನ್ನ ಅಣ್ಣ ಅಶೋಕ ಸಿಂಧೆ ಮತ್ತು ತಮ್ಮ ಅನೀಲ ಸಿಂಧೆ ಇವರು ಓಡಿ ಬರುವುದನ್ನು ನೋಡಿ ಅಪರಿಚಿತ ದ್ವಿ-ಚಕ್ರ ವಾಹನ ಸವಾರರು ತಮ್ಮ ಹಿರೊ ಹೊಂಡಾ ವಾಹನ ಸಂ. ಕೆ.ಎ.-32 ಇ.ಹೆಚ್.-6907 ನೇದ್ದನ್ನು ನಮ್ಮ ಮನೆಯ ಮುಂದೆಯೆ ಬಿಟ್ಟು ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 May 2019

KALABURAGI DISTRICT REPORTED CRIMES

ಮೊಸ ಮಾಡಿ ಸರಕಾರದ ಹಣ ದುರುಪಯೋಗಪಡಿಸಿಕೊಂಡ ಪ್ರಕರಣ :
ರಾಘವೇಂದ್ರ ನಗರ ಠಾಣೆ : ನಿರ್ಮತಿ ಕೇಂದ್ರವು ಒಂದು ನೊಂದಾಯಿತ ಸಂಸ್ಥೆಯಾಗಿದ್ದು ಇದರ ಅಧ್ಯಕ್ಷರು ಮಾನ್ಯ ಜಿಲ್ಲಾಧಿಕಾರಿಗಳಾಗಿರುತ್ತಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ಮತ್ತು ಇತರೆ ಕಾಮಗಾರಿಗಳನ್ನು ನಿರ್ವಹಿಸಿಕೊಂಡುತ್ತಾರೆ. ಅದರೆಂತೆ ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ವಿವಿಧ ಕಾಮಗಾರಿಗಳನ್ನು ನಿರ್ಮಿತಿಕೇಂದ್ರಕ್ಕೆ ವಹಿಸಿಕೊಟ್ಟಿರುತ್ತಾರೆ. ವಿವರಗಳನ್ನು ಅನುಬಂದ ಅ ದಲ್ಲಿ ಕಾಣಬಹುದು ಅ ಅನುಬಂದದಲ್ಲಿ ವಿವರಿಸಿದ ಕಾಮಗಾರಿಗಳನ್ನು  ನಿರ್ಮಿತಿ ಕೇಂದ್ರ ಕಲಬುರಗಿ ಯೋಜಾನ ವವ್ಯಾಸ್ದಾಪಕರಿಂದ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ  ಕೇಂದ್ರ ಕಲಬುರಗಿ ರವರಿಗೆ ವಹಿಸಿಕೊಡಲಾಗಿದೆ. ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ಕಲಬುರಗಿ ರವರಿಗೆ ಒಟ್ಟು ಕಾಮಗಾರಿಗಳಲ್ಲಿ (33) ಸುಮಾರು ರೂ 1,52,58,430 ರೂ ( ಒಂದು ಕೋಟಿ ಐವತ್ತೆರಡು ಲಕ್ಷ ಐವತ್ತೆಂಟು ಸಾವಿರದ ನಾಲ್ಕನೂರಾ ಮುವತ್ತು ರೂ) ಹೆಚ್ಚಿನ ಹಣವನ್ನು ಸಾಮಾಗ್ರಿಗಳ ಖರೀದಿ ಮತ್ತು ಕೂಲಿ  ಕಾರ್ಮಿಕರ ಓಚರಗಳನ್ನು ಸಲ್ಲಿಸಿ ಹಣ ಸಂದಾಯಿಸಿದೆ ಆದರೆ ಕಾಮಗಾರಿ ಪೋರ್ಣಗೊಂಡಿಲ್ಲಿ ಸದರಿ ಕಾಮಗಾರಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಡಿಎಂಎಫ್ ಕೋಶದ ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳಿಂದ ಖುದ್ದಾಗಿ ಪರಿಶೀಲಿಸಲಾಗಿದೆ. ಸಂಬಂದಿಸಿದ ಕಾಮಗಾರಿಗಳಿಗೆ ತಾಂತ್ರಿಕ ಅಧಿಕಾರಿಗಳೊಂದಿಗೆ ಶ್ರೀ ಶಿವಯೋಗಿ ಯಳವಾರರವರಿಗೆ ಸ್ಥಳಗಳಿಗೆ ಹೋಗಲು ಸೂಚಿಲಾಗಿತ್ತು. ಅದರಂತೆ ಶ್ರೀವಯೋಗಿ ಮೇಲ್ವಿಚಾರಿಕರಿಗೆ ಕೆಲವು ಸ್ಥಳಗಳಿಗೆ ಹೋಗಿರುತ್ತಾರೆ. ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಿಕೊಟ್ಟಿರುವ ವರದಿ ಪರಿಶೀಲಿಸಲಾಗಿ ಕಾಮಾಗಾರಿ ಪರೆಬಾರಿಯವರು ಕೈಕೊಂಡ ಕಾಮಗಾರಿಗಳು ಹಾಗೂ ನಿರ್ಮಿತಿ ಕೇಂದ್ರದಿಂದ ಸಂದಾಯಿಸಿದ ಮೊತ್ತಕ್ಕೂ ಬಹಾಳಷ್ಟು ವ್ಯತ್ಯಾಸ ಇರುತ್ತದೆ. ಆದುದ್ದರಿಂದ ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ಸದರಿ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಹಣ ವಸೂಲಿ (ರಿಕವರಿ)  ಮಾಡಲು ಆದೇಶಿಸುರುತ್ತಾರೆ. ಇದರೊಂದಿಗೆ ಲಗತ್ತಿಸಿದ ಅನುಂಬದದಲ್ಲಿನ ಕಾಮಗಾರಿಗಳನು ಪೂರ್ಣಗೋಳ್ಳಿಸಲು ಸಾಕಷ್ಟು ಸಲ ಸೂಚಿಸಿದರು ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ಕಾಮಗಾರಿಗಳನ್ನು ಪೂರ್ಣಗೋಳಸಿರುವದಿಲ್ಲ ಮತ್ತು ಸಂದಾಯಿಸಿರುವ  ಹಣ ಮರುಪಾವತಿಸಿರುವದಿಲ್ಲ. ಇದರಿಂದ ಸರ್ಕಾರದಹಣ ದುರ್ಬಳಿಕೆ ಮಾಡಿಕೊಂಡಂತಾಗಿದ್ದು ಬ್ರೀಚ್ ಆಪ್ ಟ್ರಸ್ಟ್  ಕೂಡಾ ಆಗಿರುತ್ತದೆ. ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ಉಲ್ಲೇಖಿತ ಪತ್ರದ ಮೂಲಕ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ರವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲು ಮತ್ತು ಕೋಟ್ಯಾಂತರ ಹಣ ಮರುಪಾವತಿಸಿ ಕೋಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರಿಗೆ ಸೂಚಿಸಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಅಧ್ಯಕ್ಷರು ನಿರ್ಮಿತಿ ಕೇಂದ್ರ ಕಲಬುರಗಿರವರು ನಿರ್ಮತಿ ಕೇಂದ್ರ ಕಡತದಲ್ಲಿ ಸದರಿ ಶಿವಯೋಗಿ ಯಳವಾರ ಮೇಲ್ವಿಚಾರಕರು ಇವರ ವಿರುದ್ಧ ಕ್ರೀಮಿನಲ್ ಪ್ರಕರಣವನ್ನು ದಾಖಲಿಸಲು ಮತ್ತು ಹಣ ವಸೂಲಿ ಕ್ರಮ ಕೈಕೋಳ್ಳಲು ಆದೇಶಿಸುರುತ್ತಾರೆ. ಆದದ್ದರಿಂದ ದಯಾ ಮಾಡಿ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ಕಲಬುರಗಿ ರವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಕೋಳ್ಳಬೇಕು ಅಂತಾ  ಶ್ರೀ ವಾಮನರಾವ ತಂದೆ ಮಾಣಿಕರಾವ ದೇಶಪಾಂಡೆ ಉಃ ಇಂಜನಿಯರ  ನಿರ್ಮಿತಿ ಕೇಂದ್ರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 24-05-2019 ರಂದು ಸೊನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬಳೂಂಡಗಿ ಮಾರ್ಗವಾಗಿ ಕರಜಗಿ ರೋಡಿನ ಕಡೆಗೆ ಬರುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಕರಜಗಿ ರೋಡಿಗೆ ಹೋಗುತ್ತಿದ್ದಾಗ ಅಳ್ಳಗಿ (ಕೆ) ಕ್ರಾಸ ದಾಟಿ ಮುಂದೆ ಇರುವ ಕ್ಯಾನಾಲ ರೋಡಿಗೆ ಬಳೂಂಡಗಿ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ಬ್ರೀಜ್ ಹತ್ತಿರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು, ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಅರ್ಜುನ ಮಹೇಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ನಂಬರ ಕೆಎ-32 ಟಿಎ-4575 ಅಂತಾ ಬರೆದಿದ್ದು, ಸದರಿ ಟ್ಯಾಕ್ಟರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ Engine NO :- NJCU3835 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ 07:00 ಎಎಮ್ ದಿಂದ 08:00 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-24/05/2019 ರಂದು ಬೆಳಿಗ್ಗೆ ಜಿಜಿಹೆಚ್ ಸರ್ಕಲ ದಿಂದ ಸೇಡಂ ರಿಂಗ್ ರೋಡ ನಲ್ಲಿ ಬರುವ ಬಸವೇಶ್ವರ ಆಸ್ಪತ್ರೆ ಎದುರಿನ ರೋಡ ಬದಿಯಲ್ಲಿ ಶ್ರೀ ಮಹಮ್ಮದ ರಫೀಕ ತಂದೆ ಮಹ್ಮದ ಖಾಸಿಂ ಸಾ ಉಮರ ಕಾಲೋನಿ ಅಜಾದಪೂರ ರೋಡ ಕಲಬುರಗಿ ರವರ ಹೆಂಡತ್ತಿಯಾದ ಸುಲ್ತಾನಾ ಬೇಗಂ ಇವರು ತನ್ನ ಮಗಳಾದ ಇನಶೀರಾ ಮಹ್ಮದಿ ವ: 4 ತಿಂಗಳು ಇವಳಿಗೆ ಎತ್ತಿಕೊಂಡು  ಮೆಡಿಕಲಗೆ ಹೋಗಿ ಮಾತ್ರೆ ತೆಗೆದುಕೊಂಡು ಫಿರ್ಯಾಧಿ ನಿಲ್ಲಿಸಿದ ಮೋಟಾರ ಸೈಕಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಆರ್.ಟಿ.ಓ ಕ್ರಾಸ್ ಕಡೆಯಿಂದ ಮಹಾನಗರ ಪಾಲಿಕೆಯ ಟ್ರಕ್ ನಂ ಕೆಎ-32 ಸಿ-5692 ನೇದ್ದರ ಚಾಲಕ  ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಹೆಂಡತ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸುಲ್ತಾನಾ ಬೇಗಂ ಇವಳ ತೆಲೆಯ ಮೇಲಿಂದ ಹಿಂದಿನ ಟೈರ್ ಹಾಯಿಸಿ ಫಿರ್ಯಾಧಿ ಮಗಳ ತೆಲೆಗೆ ಭಾರಿಗಾಯಗೊಳಿಸಿ ಹಾಗೆ ಟ್ರಕ್ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಫಿರ್ಯಾಧಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಫಿರ್ಯಾಧಿ ಮಗಳಾದ ಸಾಯಮಾ ನಾಜಾ ಇವಳಿಗೆ ಭಾರಿಗಾಯಗೊಳಿಸಿದ್ದು ಸದರ ಘಟನೆಯಿಂದ ಸುಲ್ತಾನಾ ಬೇಗಂ ಇವರ ತೆಲೆಗೆ ಮತ್ತು ಮುಖಕ್ಕೆ ಭಾರಿ ಪೆಟ್ಟಾಗಿ ತೆಲೆಯಿಂದ ಮೆದಳು ಹೋರಗೆ ಬಂದು ಸ್ಥಳದಲ್ಲಿ ಮೃತ ಪಟ್ಟಿದ್ದು ಅವರ ಮಗಳಾದ ಇನಿಶೀರಾ ಮಹ್ಮದಿ ಇವಳ ತೆಲೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಟ್ರಕ್ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 24-05-2019 ರಂದು ಮುಂಜಾನೆ  ನಾನು ಮತ್ತು ನನ್ನ ಅಣ್ಣನ ಮಗನಾದ ರಾಹುಲ ಇಬ್ಬರೂ ಮನೆಯಿಂದ ಪಬ್ಲಿಕ ಗಾರ್ಡನನಲ್ಲಿ  ವಾಕಿಂಗ ಮಾಡಲು ನಮ್ಮ ಬಡಾವಣೆಯ ರಸ್ತೆಯಿಂದ ಏಷಿಯನ ಮಹಲ ಕಡೆಗೆ ಹೋಗುವ ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಎನಫಿಲ್ಡ್ ಮೋಟಾರ ಸೈಕಲ ನಂ ಕೆಎ-32/ಇಎನ್-2636 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ರಾಹುಲ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಚಂದ್ರಶೇಖರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಆಕಾಶ ತಂದೆ ಧೂಳಪ್ಪ ಹಂಚನಾಳ ಸಾ: ಖುದ್ದಿ ಹೋಟೆಲ ಹಿಂದುಗಡೆ ಶಿವಾಜಿ ನಗರ ಕಲಬುರಗಿ ಈ  ಮೇಲ್ಕಾಣಿಸಿದ ವಿಳಾಸದ ನಿವಾಸಿತನಿದ್ದು ಸಂದೀಪ ಇವನು ನಮ್ಮ ಶಿವಾಜಿನಗರದಲ್ಲಿ ವಾಸವಾಗಿದ್ದು ಈತನ ಪರಿಚಯ ಇರುತ್ತದೆ ಈತನ ಗೆಳೆಯರಾಗಿರುವ ಅಜೇಯ ಅನ್ನುವನು ಸಂದೀಪ ಈತನಿಗೆ ಮೊಬೈಲದಲ್ಲಿ ಫೋಟೋ ಹಾಕಿ ಸ್ಟೇಟಸ್ ಇಟ್ಟುಕೊಂಡಿದ್ದು ಈ ವಿಷಯದಲ್ಲಿ ಸಂದೀಪ ಈತನೊಂದಿಗೆ ತಕರಾರು ಆಗಿರುತ್ತದೆ. ದಿನಾಂಕ: 24.05.2019 ರಂದು ಸಾಯಂಕಾಲ ನಾನು ಮನೆಯಿಂದ ಬಂದು ಶಿವಾಜಿ ನಗರದ ಮಸೂದಿಯ ಹತ್ತಿರ ಇರುವ ಶಾಂತು ಹೋಟೆಲ ಎದುರುಗಡೆ ನಿಂತಾಗ ಆ ವೇಳೆಯಲ್ಲಿ ಅಜೇಯ ಮತ್ತು ಅಭಿ ಇಬ್ಬರೂ ಬಂದವರೆ ನಿಂತಿದ್ದ ನನಗೆ ಅಜೇಯ ಈತನು ನನಗೆ ಬಾ ಅಂತಾ ಕರೆದನು ಅದಕ್ಕೆ ನಾನು ಯಾಕೇ ಅಂತಾ ಕೇಳಿದೆನು ನೀನು ಸಂದೀಪ ಈತನಿಗೆ ಸ್ಟೇಟಸ್ ಹಾಕಿದ್ದರಿಂದ ಅವನಿಗೆ ಯಾಕೆ ಬೈದಿರುವಿ ಅಂತಾ ಕೇಳಿದ್ದು ಅದಕ್ಕೆ ನಾನು ಯಾರಿಗೂ ಕೂಡಾ ಬೈದಿಲ್ಲ ಅಂತಾ ಹೇಳಿದೆ ಅದಕ್ಕೆ ಅಜೇಯ ಮತ್ತು ಅಭಿ @ ಅಭ್ಯಾ ಇಬ್ಬರೂ ನಿನಗೆ ಶಿವು ಅಣ್ಣ ಕರೆಯುತ್ತಿದ್ದಾನೆ ಅವನ ಹತ್ತಿರ ನಡೆ ಅಂತಾ ಹೇಳಿದ್ದರಿಂದ ನಾನು ಸದರಿ ಶಾಂತು ಈತನ ಹೋಟೆಲ ಎದುರುಗಡೆಯಿಂದ ಅವರ ಜೊತೆಯಲ್ಲಿಯೇ ರಾಜೀವ ಗಾಂಧಿನಗರ ಹತ್ತಿರ ಇರುವ ನೀರಿನ ಟಾಕಿಯ ಖುಲ್ಲಾ ಜಾಗೆಯಲ್ಲಿ ಹೋಗಿದ್ದು ಅಲ್ಲಿ ಆಗಲೇ ಸೈನಿಕ, ಶಿವು, ಲಚ್ಯಾ @ ಲಕ್ಷ್ಮಿಕಾಂತ, ಇಸ್ಮಾಯಿಲ್, ಇತರ ಜನರು ಗ್ರೌಂಡದಲ್ಲಿ ಕೈಯಲ್ಲಿ ಬ್ಯಾಟ, ಸ್ಟಂಪ, ಬಡಿಗೆ, ಹಿಡಿದುಕೊಂಡು ನಿಂತಿದ್ದು ನಾನು ಅಲ್ಲಿ ಹೋದ ಕೂಡಲೆ ಲಚ್ಯಾ @ ಲಕ್ಷ್ಮಿಕಾಂತ ಈತನು ಕೈಯಿಂದ ನನ್ನ ಬಲ ಕಣ್ಣಿನ ಹುಬ್ಬಿನ ಮೇಲೆ ಮುಷ್ಟಿ ಮಾಡಿ ಜೋರಾಗಿ ಹೊಡೆದನು ಮತ್ತು ತನ್ನ ಕೈಯಲ್ಲಿದ್ದ ಬ್ಯಾಟಿನಿಂದ ಬೆನ್ನಿಗೆ ಹೊಡೆದನು ನಂತರ ಶಿವು ಈತನು ರಂಡಿ ಮಗನೇ ನಿನಗೆ ಬಹಳ ಸೊಕ್ಕು ಬಂದಿದೆ ಮಗನೇ ನೀನು ಸಂದೀಪ ಈತನಿಗೆ ಅಂಜಿಸುತ್ತಿ ಸೂಳೆ ಮಗನೇ ಅಂತಾ ಅಂದವನೆ ಅವನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮಾಡಿದನು ಸೈನಿಕ ಈತನು ಕೈಯಿಂದ ಹೊಟ್ಟೆಯಲ್ಲಿ ಮತ್ತು ಬೆನ್ನಿನ ಮೇಲೆ ಮುಷ್ಟಿಮಾಡಿ ಹೊಡೆದನು ಇಸ್ಮಾಯಿಲ್ ಈತನು ಸ್ಟಂಪದಿಂದ ನನ್ನ ಎಡಗಾಲಿನ ತೊಡೆಯ ಮೇಲೆ ಹೊಡೆದು ಭಾರಿ ಗುಪ್ತಗಾಯ ಪಡಿಸಿದ್ದು ಇದರಿಂದ ಒಮ್ಮೇಲೆ ನನ್ನ ಕಾಲಿಗೆ ಬಾವು ಬಂದಿದೆ ನಂತರ ಇನ್ನುಳಿದ 8-10 ಜನ ಹುಡುಗರು ಎಲ್ಲರೂ ಸೇರಿಕೊಂಡು ಕೈಯಿಂದ ಕಾಲಿನಿಂದ ನನಗೆ ನೆಲಕ್ಕೆ ಕೆಡವಿ ಹಾಕಿ ಸಿಕ್ಕಾ ಪಟ್ಟೆಯಾಗಿ ಹೊಡೆ-ಬಡೆ ಮಾಡಿದ್ದು ಇವರೆಲ್ಲರೂ ನನಗೆ ಸುತ್ತುಗಟ್ಟಿ ಹೊಡೆಯುವುದನ್ನು ಕಂಡು ನನ್ನ ಗೆಳೆಯನಾದ ಸಾಗರ ತಂದೆ ಪ್ರಭಾಕರ ಹಾಗೂ ಅಲ್ಲಿಂದ ಬರುತ್ತಿದ್ದ ಅನೀಲ ತಂದೆ ಶಿವಾನಂದ ಎನ್ನುವವರು ಓಡಿ ಬಂದು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ನನಗೆ ಇನ್ನೂ ಹೆಚ್ಚಿಗೆ ಹೊಡೆಯುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.