POLICE BHAVAN KALABURAGI

POLICE BHAVAN KALABURAGI

13 February 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ  ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:12/02/2019 ರಂದು  ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ ನಂ 12/2019 ನೇದ್ದರಲ್ಲಿ ಆರೋಪಿತರಾದ 1. ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ, 2. ಶಿವಾನಂದ ಅಪ್ಪಾಸಾಬ ಕೂಡಿ 3. ರಮೇಶ ನಾಟೀಕಾರ 4. ಮಹೇಶ ನಾಟಿಕಾರ, 5. ಯಲ್ಲು ಚಿಂಗಾರಿ ಇವರನ್ನು ಪತ್ತೆ ಮಾಡಿಕೊಂಡು ಬರಲು ನನಗೆ, ಮತ್ತು ನಮ್ಮ ಠಾಣೆಯ ಶ್ರೀ ಶಿವಯೋಗಿ ಎ.ಎಸ್.ಐ. ಶ್ರೀ ಚನ್ನಮಲ್ಲಪ್ಪ ಹೆಚ್.ಸಿ 190 ಮತ್ತು ಶ್ರೀ ಗಂಗಾಧರ ಪಿಸಿ 642 ರವರಿಗೆ ಆದೇಶಿಸಿದ್ದು ಇರುತ್ತದೆ. ತಮ್ಮ ಆದೇಶದಂತೆ ನಾನು, ಶ್ರೀ ಶಿವಯೋಗಿ ಎ.ಎಸ್.ಐ. ನಮ್ಮ ಠಾಣೆಯ ಶ್ರೀ ಚನ್ನಮಲ್ಲಪ್ಪ ಹೆಚ್.ಸಿ 190. ಮತ್ತು ಶ್ರೀ ಗಂಗಾಧರ ಪಿಸಿ 642 ರವರು ಕೂಡಿಕೊಂಡು ಇಂದು ದಿನಾಂಕ 12.02.2019 ರಂದು ಬೆಳ್ಳಿಗ್ಗೆ 3:00 ಗಂಟೆಗೆ ಸದರಿ ಗುನ್ನೆಯ ಆರೋಪಿತರಾದ 1. ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ, 2. ಶಿವಾನಂದ ಅಪ್ಪಾಸಾಬ ಕೂಡಿ ಇವರ ಗಂಗಾನಗರ ಬಡಾವಣೆಯಲ್ಲಿರುವ ಮನೆಯ ಹತ್ತಿರ ಹೋಗಿ ಶ್ರೀ ಶಿವಯೋಗಿ ಎ.ಎಸ್.ಐ. ರವರು ತಿಳಿಸಿದಂತೆ ನಾನು ಆರೋಪಿತರ ಮನೆಯ ಬಾಗಿಲ ಮುಂದೆ ನಿಂತುಕೊಂಡು ಶ್ರೀ ಚನ್ನಮಲ್ಲಪ್ಪ ಹೆಚ್.ಸಿ 190 ಮತ್ತು ಗಂಗಾಧರ ಪಿಸಿ 642 ರವರು ಆರೋಪಿತರ ಮನೆಯ ಹಿಂದೆ ಮತ್ತು ಮಗ್ಗಲಿನಲ್ಲಿ ನಿಂತಿದ್ದು ಎ.ಎಸ್.ಐ. ರವರು ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದು ನಾವು ಆರೋಪಿತರಾದ 1. ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ, 2. ಶಿವಾನಂದ ಅಪ್ಪಾಸಾಬ ಕೂಡಿ ಇವರಿಗೆ ಪರಿಶಿಲನೆ ಮಾಡುತ್ತಿದ್ದಾಗ ಆರೋಪಿತನಾದ ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ ಇತನು ಮನೆಯಿಂದ ಹೊರಗೆ ಬಂದು ಮನೆಯ ಬಾಗಿಲ ಮುಂದೆ ನಿಂತ್ತಿದ್ದ ನನಗೆ ನೋಡಿ ಮಗನೆ ನೀನು ನನಗೆ ಹಿಡಿದುಕೊಂಡು ಹೋಗಲು ಬಂದಿದ್ದಿ ಅಂತ ಅನ್ನುತ್ತಾ ನನಗೆ ನೂಕಿ ಕೊಟ್ಟಿದ್ದು, ಆಗ ನಾನು ಆಯ ತಪ್ಪಿ ಕೆಳಗೆ ಬಿದಿದ್ದು. ಸದರಿ ಮಲ್ಲಿಕಾರ್ಜುನ ಇತನು ನನಗೆ ನೂಕಿ ಕೊಟ್ಟಿರುವದನ್ನು ಅಲ್ಲೆ ಇದ್ದ ಶ್ರೀ ಚನ್ನಮಲ್ಲಪ್ಪ ಹೆಚ್.ಸಿ 190 ಮತ್ತು ಗಂಗಾಧರ ಪಿಸಿ 642 ಇವರು ನೋಡಿ ಮಲ್ಲಿಕಾರ್ಜುನ ಇತನು ಹಿಡಿದುಕೊಳ್ಳಲು ಹೊದಾಗ ಸದರಿಯವನು ತನ್ನ ಮನೆಯ ಮಾಳಿಗೆ ಎರಿದ್ದು ಆಗ ಶ್ರೀ ಚನ್ನಮಲ್ಲಪ್ಪ ಹೆಚ್.ಸಿ 190 ಮತ್ತು ಗಂಗಾಧರ ಪಿಸಿ 642 ಇವರು ಸದರಿಯವನ ಬೆನ್ನು ಹತ್ತಿ ಮನೆಯ ಮಾಳಿಗೆ ಮೇಲೆ ಹೊಗಬೇಕು ಎನ್ನುವಷ್ಠರಲ್ಲಿ ಮಲ್ಲಿಕಾರ್ಜುನ ಇತನು ತನ್ನ ಮನೆಯ ಮಾಳಿಗೆ ಮೇಲಿಂದ ಕೆಳಗೆ ಹಾರಿ ಅಲ್ಲೆ ಕುಸಿದು ಬಿದಿದ್ದು ಆಗ ನಾನು, ಶ್ರೀ ಶಿವಯೋಗಿ ಎ.ಎಸ್.ಐ. ಶ್ರೀ ಚನ್ನಮಲ್ಲಪ್ಪ ಹೆಚ್.ಸಿ 190 ಮತ್ತು ಗಂಗಾಧರ ಪಿಸಿ 642 ಕೂಡಿಕೊಂಡು ಸದರಿ ಮಲ್ಲಿಕಾರ್ಜುನ ಹತ್ತಿರ ಹೋಗಿ ನೋಡಲು ಸದರಿಯವನು ಮನೆಯ ಮಾಳಿಗೆ ಮೇಲಿಂದ ಹಾರಿದ್ದರಿಂದ ಅವನ ಎಡಭಾಗದ ಕಪಾಳ ಮೇಲೆ ತರಚಿದ ಗಾಯವಾಗಿದ್ದು, ಅಲಲ್ಲಿ ರಕ್ತ ಬಂದಿದ್ದು, ಮತ್ತು ಎರಡು ಕಾಲುಗಳಿಗೆ ಓಳಪೆಟ್ಟಾಗಿ ಅವನಿಗೆ ಸರಿಯಾಗಿ ನಡೆಯಲು ಬರದಂತಾಗಿದ್ದು ಇರುತ್ತದೆ. ನನಗೆ ಕರ್ತವ್ಯ ನಿರ್ವಹಿಸಲು ಅಡತಡೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುವ ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ ಸಾ: ಗಂಗಾ ನಗರ ಬ್ರಹ್ಮಪೂರ ಕಲಬುರಗಿ ಇತನ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಶ್ರೀ  ಕಿಶೋರ ಪಿಸಿ 1010 ರಾಘವೇಂದ್ರ ನಗರ ಪೊಲೀಸ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ  ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ದಿನಾಂಕ 12.02.2019 ರಂದು ನಮ್ಮ ಇಡ್ಲಿ ಬಂಡಿ ಮೇಲೆ ಶ್ರೀ ವಿನೋದ ತಂದೆ ನಾಗರಾಜ ಜೋಕೆ ಸಾ: ಜೆಂಗೆ ಬ್ರದರ್ಸ್ ಮನೆ ಹತ್ತಿರ ಬ್ರಹ್ಮಪೂರ ಕಲಬುರಗಿ ಮತ್ತು ನನ್ನ ತಮ್ಮ ರೋಹಿತ ಇಬ್ಬರು ವ್ಯಾಪಾರ ಮಾಡಿಕೊಂಡು ಬಂದಿದ್ದು ಇರುತ್ತದೆ. ಗಂಗಾನಗರ ಬಡಾವಣೆಯ 1.ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ, 2.ಶಿವಾನಂದ ಅಪ್ಪಾಸಾಬ ಕೂಡಿ 3.ರಮೇಶ ನಾಟೀಕಾರ 4. ಮಹೇಶ ನಾಟಿಕಾರ, 5. ಯಲ್ಲು ಚಿಂಗಾರಿ ಇವರು ಆಗಾಗ ನಮ್ಮ ಬಂಡಿಯ ಹತ್ತಿರ ಬಂದು ಇಡ್ಲಿ ತಿಂದು ಹಣ ಕೊಡದೆ ಹೊಗುತ್ತಿದ್ದು ಹಣ ಕೇಳಿದರೆ ನಮ್ಮೊಂದಿಗೆ ಜಗಳ ಮಾಡುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 11.02.2019 ರಂದು ಸಾಯಂಕಾಲ 4 ಗಂಟೆಯಿಂದ ನಾನು ನನ್ನ ತಮ್ಮ ರೋಹಿತ ಕೂಡಿಕೊಂಡು ಇಡ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು, ಇಡ್ಲಿ ತಿಂದ ಪ್ಲೇಟಗಳನ್ನು ತೊಳೆಯುತ್ತಿದ್ದು ನನ್ನ ತಮ್ಮ ರೋಹಿತ ಇತನು ವಡಾ ಹಾಕುತ್ತಿದ್ದು ಅದೆ ವೇಳೆಗೆ 1.ಮಲ್ಲಿಕಾರ್ಜುನ ತಂದೆ ಅಪ್ಪಾಸಾಬ ಕೂಡಿ, 2.ಶಿವಾನಂದ ಅಪ್ಪಾಸಾಬ ಕೂಡಿ 3.ರಮೇಶ ನಾಟೀಕಾರ 4. ಮಹೇಶ ನಾಟಿಕಾರ, 5. ಯಲ್ಲು ಚಿಂಗಾರಿ ಹಾಗೂ ಇನ್ನೂ 2-3 ಜನರು ಕೂಡಿಕೊಂಡು ಮೋಟಾರ ಸೈಕಲಗಳ ಮೇಲೆ ನಮ್ಮ ಬಂಡಿ ಹತ್ತಿರ ಬಂದು ಮೊಟಾರ ಸೈಕಲ ನಿಲ್ಲಸಿ, ಬಂಡಿಯ ಮೇಲೆ ಇದ್ದ ನನ್ನ ತಮ್ಮನಾದ ರೋಹಿತ ಇತನಿಗೆ ಇಡ್ಲಿ ಕೊಡಲು ಹೇಳಿದ್ದು ಆಗ ರೋಹಿತ ಇತನು ಸದರಿಯವರಿಗೆ ಈ ಮೊದಲು ಇಡ್ಲಿ ತಿಂದ ಹಣ ಕೂಡುರಿ ನಂತರ ಇಡ್ಲಿ ಕೊಡುತ್ತೆನೆ ಅಂತ ಹೇಳಿದ್ದು. ಆಗ ಮಲ್ಲಿಕಾರ್ಜುನ ಮತ್ತು ಶಿವಾನಂದ ಇಬ್ಬರು ಕೂಡಿಕೊಂಡು ನನ್ನ ತಮ್ಮನಿಗೆ ರಂಡಿ ಮಗನೆ ನಮಗೆ ಹಣ ಕೇಳುತಿ ಈ ಏರಿಯಾದಲ್ಲಿ ನಮಗೆ ಯಾರು ಹಣ ಕೇಳುವದಿಲ್ಲ, ಸೂಳಿ ಮಗನೆ ನೀನು ನಮಗೆ ಹಣ ಕೇಳುವ ಮಟ್ಟಕ್ಕೆ ಬಂದಿದ್ದಿ ರಂಡಿ ಮಗನೆ ಇಂದು ನಿನ್ನ ಕತೆ ಮುಗಿತು  ಸೂಳಿ ಮನಗೆ ಅಂತ ಬೈಯುತ್ತಾ  1. ಮಲ್ಲಿಕಾರ್ಜುನ 2. ಶಿವಾನಂದ 3. ರಮೇಶ ನಾಟೀಕಾರ 4. ಮಹೇಶ ನಾಟಿಕಾರ, 5. ಯಲ್ಲು ಚಿಂಗಾರಿ ಹಾಗೂ ಇನ್ನೂ 2-3 ಜನರು ಕೂಡಿಕೊಂಡು ನನ್ನ ತಮ್ಮನಿಗೆ ಹಿಡಿದುಕೊಂಡು ಕೈಯಿಂದ ಹೊಡೆಬಡೆ ಮಾಡುತ್ತಿದ್ದು ಆಗ ನಾನು ನನ್ನ ತಮ್ಮನಿಗೆ ಬಿಡಿಸಿಕೊಳ್ಳಲು ಹೊದಾಗ, ಶಿವಾನಂದ, ರಮೇಶ ಮತ್ತು ಮಹೇಶ ನಾಟಿಕಾರ ಇವರು ನನಗೆ ನೂಕಿ ಕೊಟ್ಟು, ನನ್ನ ತಮ್ಮನಿಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಮಲ್ಲಿಕಾರ್ಜುನ ಮತ್ತು ಯಲ್ಲು ಚಿಂಗಾರಿ ಇವರು ಮೋಟಾರ ಸೈಕಲಗಳಿಗೆ ಇದ್ದ ಕಬ್ಬಿಣದ ಪೈಪ ತೆಗೆದುಕೊಂಡು ಬಂದು ನನ್ನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ತಲೆಯ ಹಿಂದೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಆಗ ನನ್ನ ತಮ್ಮ ಚಿರಾಡುತ್ತಾ ಕುಸಿದು ನೇಲದೆ ಮೇಲೆ ಬಿದ್ದಿದ್ದು. ನನ್ನ ತಮ್ಮನು ಕುಸಿದು ಬಿದ್ದಾಗ ಮಲ್ಲಿಕಾರ್ಜುನ ಇತನು ಈ ಮಗ ಸಾಯಿತಾನೆ, ಮುಂದೆ ನೀನು ಕೂಡಾ ನಮಗೆ ಎದರು ಆದರೆ ನೀನಗು ಇದೆ ಗತಿ ಆಗುತ್ತಾದೆ ಅಂತ ನನಗೆ ಬೇದರಕೆ ಹಾಕಿ ಬಂಡಿಯಲ್ಲಿ ಇದ್ದ ಇಡ್ಲಿ ಮಾರಾಟ ಮಾಡಿ ಬಂದ ಹಣ 700/- ರೂಪಾಯಿ ಮತ್ತು ನನ್ನ ತಮ್ಮನ ಕೊರಳಲ್ಲಿ ಇದ್ದ 1 ತೋಲೆ ಬೆಳ್ಳಿ ಚೈನ ಕಿತ್ತುಕೊಂಡು ಅವರು ತೆಗೆದುಕೊಂಡು ಬಂದ ಮೊಟಾರ ಸೈಕಲಗಳ ಮೇಲೆ ಕುಳಿತು ಶಹಾಬಜಾರ ನಾಕಾ ಕಡೆಗೆ ಹೋಗಿದ್ದು ಇರುತ್ತದೆ ನಂತರ ನಾನು ಮತ್ತು ಅಲ್ಲೆ ಅಟೊ ಸ್ಟಾಂಡದಲ್ಲಿ ಇದ್ದ ನನಗೆ ಪರಿಚಯದ ನಾಗು ಕೂಡಿಕೊಂಡು ಮಾಳು ಇತನ ಅಟೊದಲ್ಲಿ ನನ್ನ ತಮ್ಮನಿಗೆ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೇಗೆ ತೆಗೆದುಕೊಂಡು ಹೋಗಿದ್ದು ಸರಕಾರಿ ಆಸ್ಪತ್ರೇಯಲ್ಲಿ ಸರಿಯಾಗಿ ಉಪಚಾರ ಆಗುವದಿಲ್ಲ ಅಂತ ತಿಳಿದು ನಂತರ ಯುನೈಟೆಡ್ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಆಕಾಶ ತಂದೆ ಪ್ರಕಾಶ ಸರಡಗಿ ಸಾ:ಮೌಲಾಲಿ ಕಟ್ಟಾ ಹತ್ತಿರ ಅಶೋಕ ನಗರ ಕಲಬುರಗಿ ರವರು ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮ್ಮ ಅಣ್ಣ ರವಿ ಇತನು ಸಹ ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡು ಇರುತ್ತಾನೆ. ನನಗೂ ಮತ್ತು ನಮ್ಮ ಅಣ್ಣ ರವಿ ಇತನಿಗೂ ಪ್ರಶಾಂತ ಐಗೋಳೆ ಹಾಗೂ ನಿತೀನ ಹುಲಸೂರ ಇವರು ಆಗಾಗ ಹಣ ಕೊಡುವಂತೆ ಧಮಕಿ ಹಾಕುತ್ತಾ ಬಂದಿರುತ್ತಾರೆ. ಇಂದು ದಿನಾಂಕ:12/02/19 ರಂದು 3.30 ಪಿ.ಎಂ ಸುಮಾರಿಗೆ ಶಹಾಜಿಲಾನಿ ಸ್ಕೂಲ ಹತ್ತಿರ ಜಿಲಾನಾಬಾದನಲ್ಲಿದ್ದಾಗ ಪ್ರಶಾಂತ ಹಾಗೂ ನಿತೀನ ಇವರು ಬಂದು ನಾನು ಹಾಗೂ ನಮ್ಮ ಅಣ್ಣನಾದ ರವಿ ಇಬ್ಬರೂ ಕೂಡಿಕೊಂಡು ನಿಂತಲ್ಲಿಗೆ ಬಂದು ‘ಏ ರಂಡಿ ಮಕ್ಕಳಾ ನೀವು ಹಣ ಕೋಡು ಅಂದರೆ ಕೊಡುವದಿಲ್ಲಾ ನಿಮ್ಮ ಅಣ್ಣ-ತಮ್ಮರ ಸೋಕ್ಕ ಬಹಳ ಆಗ್ಯಾದ ನಿಮಗೆ ಕೊಲೆ ಮಾಡಿ ಬಿಡುತ್ತೇವೆ ಅಂದವರೆ ತಮ್ಮ ಕೈಯಲ್ಲಿದ್ದ ಬಾಟಲಿಯಿಂದ ಪ್ರಶಾಂತ ಇತನು ನನ್ನ ತಲೆಯ ಮೇಲೆ ಹೊಡೆದನು ತಲೆಯಿಂದ ರಕ್ತ ಬರಹತ್ತಿತ್ತು ನಿತೀನ ಇತನು ಗಾಜಿನ ಬಾಟಲಿಯಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನನ್ನ ಎಡಗೈ ಅಡ್ಡವೈದಾಗ ನನ್ನ ಎಡಗೈ ಮಣಿಕಟ್ಟಿನ ಹತ್ತಿರ ಬಾಟಲಿ ಬಡೆದು ರಕ್ತಗಾಯವಾಗಿದ್ದು ಮತ್ತೆ ನನ್ನ ಬಲಗೈಗೆ ಅದೆ ಬಾಟಲಿಯಿಂದ ಹೊಡೆದಿದ್ದು ತರಚಿದ ಗಾಯಗಳಾದವು ಆಗ ಜಗಳ ನಡೆದ ವಿಷಯ ತಿಳಿದು ನಮ್ಮ ತಂದೆಯವರಾದ ಪ್ರಕಾಶ ಸರಡಗಿರವರು ಬಂದು ನನಗೆ ಹೊಡೆಯುತ್ತಿರುವದನ್ನು ನೋಡಿ ಜಗಳ ಬಿಡಿಸಿಕೊಂಡರು ಪ್ರಶಾಂತ ಇತನು ಈ ಸಲ ನಿಮ್ಮ ಅಪ್ಪ ಬಂದಾನ ಅಂತಾ ಉಳಿದಿದ್ದಿ ಇನ್ನೊಮ್ಮೆ ಸೀಗು ನಿನಗೆ ಕೊಲೆ ಮಾಡುತ್ತೇವೆ ಅಂತಾ ಬೈಯುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಶಾಂತ ತಂದೆ ರಜನಿಕಾಂತ ಐಗೋಳೆ ಸಾ: 7 ನೇ ಕ್ರಾಸ ತಾರಫೈಲ ಕಲಬುರಗಿ ರವರು ನೀತಿನ ಹೂಲಸೂರ ಇತನು ನನ್ನ ಸ್ನೇಹಿತನಿದ್ದು ನೀತಿನ ಹೂಲಸೂರ ಇತನು ನಮಗೆ ಪರಿಚಯದವನಾದ ರವಿ ಸರಡಗಿ ಇತನಿಗೆ ಈ ಮೋದಲು 3000 ರೂಪಾಯಿ ಕೊಟ್ಟಿದ್ದು ಆ ಹಣ ರವಿ ಸರಡಗಿ ಇತನು ಮರಳಿ ಕೊಟ್ಟಿರಲಿಲ್ಲ ಹೀಗಿದ್ದು ಇಂದು ದಿನಾಂಕ 12/02/2019 ರಂದು 3:00 ಪಿಎಮ್‌ ಸೂಮಾರಿಗೆ ನಾನು ಹಾಗೂ ನೀತಿನ ಹೂಲಸೂರ ಇಬ್ಬರು ಕೂಡಿಕೊಂಡು ಬಸವ ನಗರದ ನೀರಿನ ಟ್ಯಾಂಕ ಹತ್ತಿರ ನಿಂತಿದ್ದಾಗ ನನ್ನ ಸ್ನೇಹಿತ ನೀತಿನ ಹೂಲಸೂರ ಈತನ ಮೋಬೈಲಗೆ ಜಾಕೀರ @ ಮಾಮು ಇತನು ಮಾತನಾಡಿ ರವಿ ಸರಡಗಿ ಇತನು ನಿನಗೆ ಕೊಡಬೇಕಾದ ಹಣ ಕೊಡುತ್ತೆವೆ ಪ್ರಶಾಂತನಿಗೆ ಕರೆದುಕೊಂಡು ಬಾ ಅಂತಾ ಅಂದನು ಆಗ ನೀತಿನ ಇತನು ಹೋಗಿ ಹಣ ತೆಗೆದುಕೊಂಡು ಬರೊಣ ನಡಿ ಅಂತಾ ಅಂದನು ಆಗ ನಾನು ಹಾಗೂ ನೀತಿನ ಇಬ್ಬರು ಕೂಡಿಕೊಂಡು ಜೀಲಾಬಾದ ಏರಿಯಾದ ಶಹಾ ಜೀಲಾನಿ ಸ್ಕೂಲ ಹತ್ತಿರ ಹೋದೆವು ಅಲ್ಲಿ 1) ಜಾಕೀರ @ ಮಾಮು 2) ರವಿ 3) ಸಲೀಂ ಗೋಬ್ರೆ 4) ತಬ್ರೇಜ 5) ಹೈರದ 6) ಇಸಾಮ ಹಾಗೂ 7) ಆಕಾಶ ಇದ್ದರು ನೀತಿನ ಇತನು ರವಿಯ ಜೋತೆಗೆ ಮಾತನಾಡುತ್ತಿರುವಾಗ ಮಾಮು @ ಜಾಕೀರ ಇತನು ನನ್ನ ಹತ್ತಿರ ಬಂದವನೆ ರೊಕ್ಕ ಕೇಳಲಾಕ ಬಂದಿರ್ಯ ಮಾದಿಗ ಬೋಸಡಿ ಮಕ್ಕಳೆ ಅಂದವನೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಎರಡು ಸಲ ಹೋಡೆದನು ತಲೆಯಿಂದ ರಕ್ತ ಸೋರಹತ್ತಿತು ಆಗ ರವಿ ಇತನು ಈ ಸೂಳಿಮಗ ಪರಸ್ಯಾಗ ಕೋಲೆ ಮಾಡಿ ಬೀಡಮ ಈತನ ಸೊಕ್ಕ ಬಹಳ ಆಗ್ಯಾದ ಅಂತಾ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದನು ಸಲೀಂ ಗೋಬ್ರೆ ಇತನು ಚಾಕುವಿನಿಂದ ಎಡಗೈ ರಟ್ಟೆಗೆ ಹೊಡೆದು ರಕ್ತಗಾಯ ಗೋಳಿಸಿದನು ತಬರೇಜ ಇತನು ಚಾಕುವಿನಿಂದ ನನ್ನ ಎಡ ಟೊಂಕಕ್ಕೆ ಹೋಡೆದು ರಕ್ತಗಾಯ ಗೊಳಿಸಿದನು ಹೈದರ, ಇಸಾಮ ಹಾಗೂ ಆಕಾಶ ಇವರುಗಳು ಕೈಯಿಂದ ಕಾಲಿನಿಂದ ಹೋಡೆಯುವುದು ಬಡೆಯುವುದು ಮಾಡಹತ್ತಿದರು ಆಗ ಜಗಳ ನಡೆದಿರುವ ಸುದ್ದಿ ತಿಳಿದು ಶಿವಕುಮಾರ ಅಳೊಳ್ಳಿ ಹಾಗೂ ಶಿವಕುಮಾರ ದೂಮನ್‌ಸೂರ ಇವರುಗಳು ಬಂದು ಜಗಳ ನೋಡಿ ನನಗೆ ಹೋಡೆಯು ತ್ತಿರುವುದನ್ನು ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನು ಹೋಡೆ ಬಡೆ ಮಾಡಿ ಕೋಲೆ ಮಾಡುತ್ತಿದ್ದರು ಹೋಗುವಾಗ ರವಿ ಇತನು ಈ ಸರಿ ಉಳಿದಿದ್ದಿ ಮತ್ತೊಮ್ಮೆ ಸೀಗು ನಿನ್ನ ಕೋಲೆ ಮಾಡುತ್ತೆವೆ ಅಂತಾ ಬೈಯುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 12-02-2019 ರಂದು ಬೆಳಿಗ್ಗೆ 10:00 ಗಂಟೆಗೆ ಮಾನ್ಯ ಮಂಜುನಾಥ ಹೂಗಾರ ಪಿ.ಎಸ್.ಐ ಸಾಹೇಬರು ನನಗೆ ಮತ್ತು ನಮ್ಮ ಠಾಣೆಯ ಶ್ರೀ ಮಾರುತಿ ಎ.ಎಸ್.ಐ, ಶಿವಪದ್ಮ ಪಿಸಿ-321, ಗೃಹ ರಕ್ಷಕ ದಳದ ಸಿಬ್ಬಂದಿಯಾದ ರೇವಣಸಿದ್ದ ಹೆಚ್.ಜಿ-1033 ರವರನ್ನು ಸಂಗಡ ಕರೆದುಕೊಂಡು ಎಲ್ಲರೂ ಸಮವಸ್ತ್ರದಲ್ಲಿ ಅಫಜಲಪೂರ – ದುಧನಿ ರೋಡಿಗೆ ಇರುವ ಮಾದಾಬಾಳ ತಾಂಡಾ ಹತ್ತಿರ ರೋಡಿನ ಬದಿಯಲ್ಲಿ ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿದೆವು, ಮಾನ್ಯ ಪಿ.ಎಸ್.ಐ ಸಾಹೇಬರು ನಮಗೆಲ್ಲರಿಗೂ ರೋಡಿಗೆ ಹೋಗಿ ಬರುವ ವಾಹನಗಳನ್ನು ನಿಲ್ಲಿಸಿ ವಾಹನಗಳನ್ನು ತಪಾಸಣೆ ಮಾಡಿ, ವಾಹನದ ದಾಖಲಾತಿಗಳನ್ನು ಚೆಕ್ ಮಾಡಲು ನನ್ನ ಕಡೆಗೆ ಕಳುಹಿಸಿ ಎಂದು ತಿಳಿಸಿದ ಮೇರೆಗೆ ನಾವು ಎಲ್ಲರೂ ವಾಹನಗಳನ್ನು ನಿಲ್ಲಿಸಿ ಚೆಕ್ ಮಾಡಿ, ವಾಹನದ ಚಾಲಕರಿಗೆ ವಾಹನದ ದಾಖಲಾತಿಗಳನ್ನು ತೊರಿಸಲು ಮಾನ್ಯ ಪಿ.ಎಸ್.ಐ ಸಾಹೇಬರ ಹತ್ತಿರ ಕಳುಹಿಸುತ್ತಿದ್ದೇವು. ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ 10:30 ಎ ಎಮ್ ಸುಮಾರಿಗೆ ದುಧನಿ ಕಡೆಯಿಂದ ಒಂದು ಓಮಿನಿ ಬರುತ್ತಿತ್ತು. ಆಗ ನಾನು ರೋಡಿನ ಬದಿಯಲ್ಲಿ ನಿಂತುಕೊಂಡು ಸದರಿ ವಾಹನವನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ, ಸದರಿ ಓಮಿನಿ ವಾಹನದ ಚಾಲಕ ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ನನ್ನ ಮೈ ಮೇಲೆ ತಂದು, ನನ್ನನ್ನು ತಪ್ಪಿಸಲು ಹೋಗಿ ನನ್ನ ಬಾಜು ನಿಂತಿದ್ದ ರೇವಣಸಿದ್ದ ಹೆಚ್.ಜಿ-1033 ಈತನಿಗೆ ಡಿಕ್ಕಿ ಪಡಿಸಿ ವಾಹನವನ್ನು ಮುಂದೆ ಹೋಗಿ ನಿಲ್ಲಿಸಿದನು. ಸದರಿ ಡಿಕ್ಕಿಯಿಂದ ರೇವಣಸಿದ್ದನಿಗೆ  ಮೂಗಿನ ಹತ್ತಿರ ರಕ್ತಗಾಯ, ಬಲಗಾಲು ಮೋಳಕಾಲಿನ ಕೆಳಗೆ ರಕ್ತಗಾಯ, ಏಡಗೈ ಮುಂಗೈ ಹತ್ತಿರ ಭಾರಿ ಒಳಪೆಟ್ಟು ಮತ್ತು ರಕ್ತಗಾಯ ಹಾಗೂ ಎರಡು ಕಪಾಳಿಗೆ ತರಚಿದ ರಕ್ತಗಾಯಗಳು ಆಗಿದ್ದವು. ನಂತರ ಡಿಕ್ಕಿ ಪಡಿಸಿದ ವಾಹನ ನೋಡಲಾಗಿ ಓಮಿನಿ ಕಾರ ಇದ್ದು ಅದರ ನಂ ಎಮ್.ಹೆಚ್-13 ಎಜೆಡ್-2633 ಇರುತ್ತದೆ. ಡಿಕ್ಕಿ ಪಡಿಸಿದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಮೀತುನ ತಂದೆ ಶ್ರೀಮಂತ ದುಲಂಗೆ ಸಾ|| ಕರಜೋಳ ತಾ|| ಅಕ್ಕಲಕೋಟ ಅಂತಾ ತಿಳಿಸಿರುತ್ತಾನೆ. ನಂತರ ಎಲ್ಲರೂ ಕೂಡಿ ಸದರಿ ಗಾಯಗೊಂಡ ರೇವಣಸಿದ್ದನನ್ನು ನಮ್ಮ ಇಲಾಖಾ ವಾಹನದಲ್ಲಿ ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ.  ದಿನಾಂಕ 12-02-2019 ರಂದು 10:30 ಎ ಎಮ್ ಕ್ಕೆ ಅಫಜಲಪೂರ – ದುಧನಿ ರೋಡಿಗೆ ಇರುವ ಮಾದಾಬಾಳ ತಾಂಡಾ ಹತ್ತಿರ ಮಾನ್ಯ ಪಿ.ಎಸ್.ಐ ಸಾಹೇಬರೊಂದಿಗೆ ಸರ್ಕಾರಿ ಕರ್ತವ್ಯದ ಮೇಲೆ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಓಮ್ನಿ ಕಾರ ನಂ ಎಮ್.ಹೆಚ್-13 ಎಜೆಡ್-2633 ನೇದ್ದರ ಚಾಲಕನಾದ ಮೀತುನ ತಂದೆ ಶ್ರೀಮಂತ ದುಲಂಗೆ ಸಾ|| ಕರಜೋಳ ತಾ|| ಅಕ್ಕಲಕೋಟ ಈತನು ಓಮ್ನಿ ಕಾರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಗೃಹ ರಕ್ಷಕ ದಳದ ಸಿಬ್ಬಂದಿಯಾದ ರೇವಣಸಿದ್ದ ತಂದೆ ಸಿದ್ದಪ್ಪ ಕುಲಾಲಿ ಸಾ|| ನಂದರ್ಗಾ (ಹೆಚ್.ಜಿ-1033) ಈತನಿಗೆ ಡಿಕ್ಕಿ ಹೊಡೆದು ಸಾದಾ ರಕ್ತಗಾಯ ಮತ್ತು ಭಾರಿ ಒಳಪೆಟ್ಟು ಪಡಿಸಿರುತ್ತಾನೆ. ಕಾರಣ ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರೂಗಿಸಬೆಕು ಅಂತಾ ಶ್ರೀ ಗುಂಡಪ್ಪ ತಂದೆ ರುಕ್ಕಣ್ಣ ಮಡಿವಾಳ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರಿಮತಿ ಪ್ರಿಯಾಂಕಾ ಗಂಡ ಚೆಕ್ರವರ್ತಿ ನಾಯಕ್ ಸಾ; ಕರಣಖೋಟ್ ಸಿಮೇಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ತಾ; ತಾಂಡೂರ ಜಿ. ವಿಕಾರಾಬಾದ್ ಹಾ.ವ ಲೋಕಾಪೂರ ತಾ; ಮುದೋಳ ಜಿ; ಬಾಗಲಕೋಟ ರವರು ದಿನಾಂಕ; 11/02/2019 ರಂದು ಸಾಯಂಕಾಲ ನಾನು ಪಾವಲೋ ಸ್ಲೀಪರ್ ಕೋಚ್ ಬಸ್ ನಂ: ಎ.ಆರ್-11-ಎ-4755 ನೇದ್ದರ ಮೂಲಕ ಭಾಗಲಕೋಟ ಜಿಲ್ಲೆಯ ಲೋಕಾಪೂರಕ್ಕೆ ಹೋಗುವ ಸಲುವಾಗಿ ಸಿಕಿಂದ್ರಾಬಾದ್ ಪ್ಯಾರಡೈಜ್ ಹೊಟೇಲ್ ದಿಂದ ಬಸ್ಸಿನಲ್ಲಿ ಕುಳಿತುಕೊಂಡು ಕಲಬುರಗಿ ಜೇವರಗಿ ಮಾರ್ಗವಾಗಿ ಹೊರಟಿರುತ್ತೇನೆ. ನನ್ನಂತೆ ಇತರೆ ಪ್ರಯಾಣಿಕರು ಕೂಡ ಬಸ್ಸಿನಲ್ಲಿ ಇದ್ದರು. ದಿನಾಂಕ; 12/02/2019 ರಂದು ರಾತ್ರಿ 12-30 ಎ.ಎಮ್ ವೇಳೆಗೆ ನಾನು ಕಲಬುರಗಿ ಹತ್ತಿರ ಬಂದಾಗ ನನಗೆ ನಿದ್ದೆ ಬಂದಿದ್ದರಿಂದ ನಾನು ನನ್ನ ಹತ್ತಿರ ಇದ್ದ ಒಂದು 18 ಗ್ರಾಂ ಬಂಗಾರದ ನಕ್ಲೇಸ್, ಒಂದು ಜೊತೆ ಬಂಗಾರದ ಕಿವಿ ಮಾಟಿ ಒಟ್ಟು 4 ಗ್ರಾಂ. ಮತ್ತು ಒಂದು ಜೊತೆ ಬಂಗಾರದ ಕಿವಿ ಜುಮಕಿ ಒಟ್ಟು 4 ಗ್ರಾಂ ಆಭರಣಗಳು ಒಂದು ಭಾಕ್ಸ್ ದಲ್ಲಿ ಹಾಕಿ ಅವುಗಳನ್ನು ಬ್ಯಾಗಿನಲ್ಲಿ ಇಟ್ಟು ನನ್ನ ಹತ್ತಿರ ಸೀಟಿನ ಮೇಲೆ ಇಟ್ಟುಕೊಂಡು ನಾನು ಮಲಗಿಕೊಂಡಿರುತ್ತೇನೆ. ರಾತ್ರಿ 01-30 ಎ.ಎಮ್ ಘಂಟೆಯ ಸುಮಾರಿಗೆ ನಾನು ಜೇವರಗಿ ಸಮೀಪ್ ಬಸ್ ನಿಲ್ದಾಣದ ಹತ್ತಿರ ಬಂದಾಗ ನನಗೆ ಎಚ್ಚರವಾಗಿ ನೋಡಲಾಗಿ ನನ್ನ ಹತ್ತಿರ ಇದ್ದ ಬ್ಯಾಗ ನಾನು ಇಟ್ಟ ಜಾಗದಿಂದ ಬೇರೆ ಕಡೆಗೆ ಬಂದಿತ್ತು. ಆಗ ನನಗೆ ಸಂಶಯ ಬಂದು ನಾನು ಬ್ಯಾಗಿನ ಒಂದು ಭಾಕ್ಸ್ ದಲ್ಲಿ ಇಟ್ಟಿದ್ದ 1) ಒಂದು 18 ಗ್ರಾಂ ಬಂಗಾರದ ನಕ್ಲೇಸ್, ಅಕಿ; 54000/- ರೂ 02) ಒಂದು ಜೊತೆ ಬಂಗಾರದ ಕಿವಿ ಮಾಟಿ ಒಟ್ಟು 4 ಗ್ರಾಂ. ಅಕಿ: 12000/- ರೂ ಮತ್ತು 03) ಒಂದು ಜೊತೆ ಬಂಗಾರದ ಕಿವಿ ಜುಮಕಿ ಒಟ್ಟು 4 ಗ್ರಾಂ ಅಕಿ; 12000/- ರೂ ಕಿಮ್ಮತ್ತಿನ ಆಭರಣಗಳು ಬ್ಯಾಗದಲ್ಲಿ ಇರಲಿಲ್ಲ. ನಂತರ ನಾನು ನನ್ನ ಸೀಟಿನ ಮೇಲೆ ಎಲ್ಲಾ ಕಡೆಗೆ ಚೆಕ್ ಮಾಡಿ ನೋಡಲಾಗಿ ಎಲ್ಲಿಯೂ ಸಿಕ್ಕಿರುವದಿಲ್ಲ. ಯಾರೋ ಕಳ್ಳತನ ಮಾಡಿರುತ್ತಾರೆ. ದಿನಾಂಕ; 12/02/2019 ರಂದು ರಾತ್ರಿ 12-30 ಎ.ಎಮ್ ದಿಂದ ರಾತ್ರಿ 01-30 ಎ.ಎಮ್ ವೇಳೆಯ ಮದ್ಯದಲ್ಲಿ ನಾನು ಮಲಗಿಕೊಂಡಿರುವಾಗ ನನ್ನ ಹತ್ತಿರ ಬ್ಯಾಗದಲ್ಲಿ ಇದ್ದ ಈ ಮೇಲೆ ನಮೂದಿಸಿದ ಒಟ್ಟು 78,000/- ರೂ ಕಿಮ್ಮತ್ತಿನ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

12 February 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 10/02/2019 ರಂದು ಬೆಳಗ್ಗೆ ನಮ್ಮೂರಿನಿಂದ ಮಹಾಗಾಂವಕ್ಕೆ ಟಂ ಟಂ ತೆಗೆದುಕೊಂಡು ಹೋಗಿರುತ್ತಾನೆ. ಸಾಯಂಕಾಲ 08.00 ಪಿ.ಎಂ.ಕ್ಕೆ ನಮ್ಮೂರ ರಮೇಶ ತಂದೆ ಬಸಣ್ಣ ಪ್ರಸನ್ ಇವರು ನನಗೆ ಫೋನ್ ಮಾಡಿ ತಿಳಿಸಿದನೆಂದರೆ ನಾನು ಮತ್ತು ಶಿವಕುಮಾರ ತಂದೆ ಬಸಣ್ಣ ಚಿನ್ನಾ ಇಬ್ಬರು ನಮ್ಮ ಕೆಲಸದ ನಿಮಿತ್ಯ ಮೊಟಾರ ಸೈಕಲ್ ಮೇಲೆ ಮಹಾಗಾಂವ ಕ್ರಾಸಿಗೆ ಬಂದಿದ್ದು ಮಹಾಗಾಂವ ಕ್ರಾಸಿನಲ್ಲಿ ನಿಮ್ಮ ಅಣ್ಣ ಶಂಬುಲಿಂಗ ಇತನು ನಮ್ಮೂರ ಗೌತಮ ತಂದೆ ಲಕ್ಷ್ಮಣ ಶಿಲ್ಡ ಇತನಿಗೆ ಟಂ ಟಂ ದಲ್ಲಿ ಕೂಡಿಸಿಕೊಂಡು 07.15 ಪಿ.ಎಂ.ಕ್ಕೆ ಮಹಾಗಾಂವ ಕ್ರಾಸಿನಿಂದ ಹೊಳಕುಂದಾ ಕಡೆಗೆ ಬಂದಿದ್ದು ನಾವು ಕೂಡಾ ಆತನ ಹಿಂದಿನಿಂದ ಮೊಟಾರ ಸೈಕಲ್ ಮೇಲೆ ಹೊಳಕುಂದಾ ಕಡೆಗೆ ಬರುತ್ತಿದ್ದಾಗ ಎನ್.ಹೆಚ್ 218 ರಲ್ಲಿ ಸಿದ್ದಭಾರತಿ ಶಾಲೆಯ ಹತ್ತಿರ ಇರುವ ಪೆಟ್ರೊಲ್ ಪಂಪ ಎದುರುಗಡೆ ಬರುತ್ತಿದ್ದಾಗ ಎದುರುಗಡೆಯಿಂದ ಒಂದು ಕಬ್ಬು ತುಂಬಿದ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೊಗುತ್ತಿದ್ದ ಟಂ ಟಂ ನಂ ಕೆ.ಎ-32 ಬಿ-2913 ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಸದರ ಅಪಘಾತದಿಂದಾಗಿ ಟಂ ಟಂ ಪಲ್ಟಿಯಾಗಿ ರೋಡಿನ ಬದಿಗೆ ಬಿದ್ದಿದ್ದು ಅದರಲ್ಲಿದ್ದ ನಿಮ್ಮ ಅಣ್ಣ ಶಂಬುಲಿಂಗ ಮತ್ತು ಗೌತಮ ಇಬ್ಬರು ರೋಡಿನ ಮೇಲೆ ಬಿದ್ದಿರುತ್ತಾರೆ ಆಗ ನಾನು ಮತ್ತು ಶಿವಕುಮಾರ ಇಬ್ಬರು ನಮ್ಮ ಮೊಟಾರ ಸೈಕಲ್ ನಿಲ್ಲಿಸಿ ಸಮೀಪ ಹೊಗಿ ನೊಡಲಾಗಿ ಶಂಬುಲಿಂಗ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಮುಗಿನ ಹತ್ತಿರ ರಕ್ತಗಾಯಿ ಬಲಗೈ ಮೊಳಕೈ ಕೆಳಗೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ ಬಲಗಾಲ ಹಿಮ್ಮಡಿಗೆ ತರಚಿದ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು ಗೌತಮ ಇತನಿಗೆ ನೊಡಲಾಗಿ ತಲೆಯ ಹಿಂದೆ ಭಾರಿ ರಕ್ತಗಾಯ ಎಡ ಕಿವಿ ಹತ್ತಿರ ರಕ್ತಗಾಯ ಎಡಗೈ ಮಣಿಕಟ್ಟಿನ ಹತ್ತಿರ ರಕ್ತಗಾಯ & ಎಡಗಾಲ ಬೆರಳಿಗೆ ರಕ್ತಗಾಯವಾಗಿ ಬಿದ್ದಿದ್ದಾನೆ ನಾನು ಅಂಬುಲೈನ್ಸಗೆ ಫೋನ ಮಾಡಿದ್ದು ನಿವು ಬೇಗನೆ ಬನ್ನಿ ಅಂತಾ ತಿಳಿಸಿದನು. ಕೂಡಲೆ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಘಟನಾ ಸ್ಥಳಕ್ಕೆ ಬಂದಿದ್ದು ಹಕಿಕತ ನಿಜವಿದ್ದು ಅಪಘಾತ ಪಡಿಸಿದ ಲಾರಿ ಸ್ಥಳದಲ್ಲಿ ನಿಂತಿದ್ದು ಹೊಗಿ ಬರುವ ವಾಹನಗಳ ಲೈಟಿನ ಬೆಳಕಿನಲ್ಲಿ ಲಾರಿ ನಂ ನೊಡಲಾಗಿ ಎಂ ಹೆಚ್. 06 ಎಕ್ಯೂ-5938 ಇದ್ದು ಅದರ ಚಾಲಕನ ಬಗ್ಗೆ ರಮೇಶ ಇವರಿಗೆ ಕೇಳಲಾಗಿ ಲಾರಿ ಚಾಲಕ ಅಪಘಾತ ಪಡಿಸಿದ ನಂತರ ಓಡಿ ಹೊಗಿರುತ್ತಾನೆ, ಅವನಿಗೆ ಪುನಹ ನೊಡಿದರೆ ಗುರುತಿಸುತ್ತೇನೆ. ಅಷ್ಟರಲ್ಲಿ 108 ಅಂಬುಲೈನ್ಸ ಬಂದಿದ್ದು ಅದರಲ್ಲಿ ಗಾಯಾಳು ಗೌತಮ ಇತನಿಗೆ ಹಾಕಿಕೊಂಡು ಅವನ ಸಂಭಂದಿಕರು ಉಪಚಾರ ಕುರಿತು ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ನಮ್ಮ ಅಣ್ಣ ಶಂಬುಲಿಂಗ ಇತನ ಶವ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ನಂತರ ನನಗೆ ಗೊತ್ತಾಗಿದ್ದೆನೆಂದರೆ ರಾತ್ರಿ 10.30 ಪಿ.ಎಂ.ಕ್ಕೆ ಯುನೈಟೆಡ್ ಆಸ್ಪತ್ರೆಯಲ್ಲಿ ಗೌತಮ ತಂದೆ ಲಕ್ಷ್ಮಣ ಶಿಲ್ಡ ಇತನು ಸಹ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆಂದು ಗೊತ್ತಾಗಿರುತ್ತದೆ. ಅಂತಾ ಶ್ರೀ ಗುರುಪುತ್ರ ತಂದೆ ಬಂಡೆಪ್ಪಾ ಚಿನ್ನಾ ಸಾ : ಹೊಳಕುಂದಾ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಸಚಿನ್ ತಂದೆ ಸುರೇಶ ಪಾಟಿಲ್ ಸಾ; ಕಾಚಾಪೂರ ಗ್ರಾಮ ತಾ; ಜೇವರಗಿ ರವರು ದಿನಾಂಕ; 10/02/2019 ರಂದು ಸಾಯಂಕಾಲ ನಾನು ನನ್ನ ಸ್ನೇಹಿತರಿಗೆ ಭೇಟಿಯಾಗಲು ಬೆಳಿಗ್ಗೆ ಜೇವರಗಿಗೆ ಬಂದಿದ್ದೇನು. ಸ್ನೇಹಿತರಿಗೆ ಭೆಟಿಯಾಗಿ ಮರಳಿ ಊರಿಗೆ ಹೋಗಲು ಜೇವರಗಿ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಸಾಯಂಕಾಲ ನಮ್ಮ ಸಂಬಂದಿ ಸುನಿಲ್ ಕುಮಾರ ಈತನು ಭೇಟಿಯಾಗಿ ನಾನು ಊರಿಗೆ ಬರುತ್ತೇನೆ ಎಂದು ಹೇಳಿದ್ದರಿಂದ ನಾವಿಬ್ಬರು ಕೂಡಿ ರಾತ್ರಿ 09-00 ಪಿ.ಎಮ್ ವೇಳೇಗೆ ಮೋಟಾರ ಸೈಕಲ್ ನಂ: ಕೆ.ಎ-04-ಇ.ಕೆ-5797 ನೇದ್ದರ ಮೇಲೆ ಜೇವರಗಿ ಕಡೆಯಿಂದ ಯಡ್ರಾಮಿ ಕಡೆಗೆ ಹೊರಟಿರುತ್ತೇವೆ. ನಾನು ಮೋಟಾರ ಸೈಕಲ್ ಚಲಾಯಿಸುತ್ತಿದ್ದೇನು. ನಾವು ಯಾಳವಾರ ದಾಟಿ ರೋಡಿನ ಮೇಲೆ ಹೋಗುತ್ತಿದ್ದಾಗ ದಿನಾಂಕ; 10/02/2019 ರಂದು ರಾತ್ರಿ 9-30 ಪಿ.ಎಮ್ ವೇಳೆಗೆ ಎದುರಿನಿಂದ ಅಂದರೆ ಯಡ್ರಾಮಿ ಕಡೆಯಿಂದ ಒಂದು ಕಾರ್ ಚಾಲಕನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವು ರೋಡಿನ ಮೇಲೆ ಬಿದ್ದಿರುತ್ತೇವೆ. ಇದರಿಂದ ನನಗೆ ಬಲ ಕೈ ಮೊಂಗೈ ಮೇಲೆ, ಬೆನ್ನಿಗೆ ತರಚಿದ ಗಾಯವಾಗಿರುತ್ತದೆ. ಸುನಿಲ್ ಕುಮಾರ ಈತನಿಗೆ ಮೈ ಮೇಲೆ, ತಲೆಯ ಮೇಲೆ, ಗುಪ್ತಾಂಗದ ಮೇಲೆ, ಕಾರು ಹರಿದು ಹೋಗಿದ್ದರಿಂದ ಬಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯ ಮೃತಪಟ್ಟಿರುತ್ತಾನೆ. ನಮಗೆ ಅಪಘಾತ ಮಾಡಿದ ಕಾರ್ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಂತು ಹೊರಳಿ ನೋಡುತ್ತಿದ್ದಾಗ ಅಪಘಾತ ಮಾಡಿದ ಕಾರ್ ನಂ: ನೋಡಲಾಗಿ ಎಮ್.ಹೆಚ್;02-ಬಿ.ಟಿ-7410 ಬಿಳಿ ಬಣ್ಣದ ಕಾರು ಇತ್ತು. ನಾವು ಗಾಯವಾಗಿ ಬಿದ್ದಿದ್ದು ನೋಡಿ ಕಾರ್ ಚಾಲಕನು ಕಾರ್ ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶಹಾಬಾಜ ತಂದೆ ಮಹಮ್ಮದ ಹಬೀಬ ಇನಮದಾರ ಸಾ;ಇಮ್ಲಿ ಮೊಹಲ್ಲಾ ಮೋಮಿನಪೂರ ಕಲಬುರಗಿ
ದಿನಾಂಕ. 10-02-2019 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂಗಿ ಸಾಲೆಯಾ ಒಂದು ಮೋಟಾರ ಸೈಕಲ್ ಮೇಲೆ ಮತ್ತು ನನ್ನ ತಂದೆ ಮಹಮ್ಮದ ಹಬೀಬ ಮತ್ತು ತಾಯಿ ಖೈರುನಬೇಗಂ ಇವರು ಒಂದು ಮೋಟಾರ ಸೈಕಲ್ ಮೇಲೆ ಮೊಮಿನ ಪೂರದಿಂದ ಬುಲಂದ ಪವರ್ಕಾಲೂನಿಗೆ ಹೋಗಿ ನಮ್ಮ ಅತ್ತಿಗೆ ಆತೀಫಾ ಇವರ ಮನೆಯ ಎದರುಗಡೆ ನಮ್ಮ ಮೋಟಾರ ಸೈಕಲಗಳನ್ನು ನಿಲ್ಲಿಸಿ ಒಳಗಡೆ ಹೋಗಿದ್ದು 8-30 ಗಂಟೆಯ ಸಮಾರಿಗೆ ಒಬ್ಬ ವ್ಯಕ್ತಿ ಬಂದು ರೋಡ ಪಕ್ಕದಲ್ಲಿ ಹಚ್ಚಿರುವ ಮೋಟಾರ ಸೈಕಲ್ಗಳು ಯಾರವು ಅಂತಾ ಕೇಳುತಿದ್ದಾಗ ನಾನು ಮನೆಯಿಂದ ಹೊರಗಡೆ ಬಂದು ಮೋಟಾರ ಸೈಕಲ ನಮ್ಮವು ಇರುತ್ತವೆ ಅಂತಾ ಅಂದಾಗ ಸದರಿ ವ್ಯಕ್ತಿಯ ಎ ರೋಡ ತುಮಾರಿ ಬಾಪಕ ಹೈ ಕ್ಯಾ  ಅಂತಾ ಅವಾಚ್ಯ ಶಬ್ದಗಳಿಂದ ಬೈಯ ಹತ್ತಿದನ್ನು ಆಗ ನಾನು ಸರಿಯಾಗಿ ಮಾತನಾಡಿ ಬೈ ಬೇಡಾ ಅಂತಾ ಅಂದಾಗ ಸದರಿ ವ್ಯಕ್ತಿ ಹೆಸರು ಕೇಳಿ ಗೊತ್ತಾದ ಅಪ್ಸರಬೇಗ  ಇತನು ಬಂದು ನನ್ನ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೋಡೆದನು ಆಗ ನಾನು ಕೂಡಾ ಆ ವ್ಯಕ್ತಿಯನ್ನು ನೂಕಿಸಿಕೊಟ್ಟೆನು ಆಗ ಸದರಿ ವ್ಯಕ್ತಿಯ ಮಕ್ಕಳು ಹೆಸರು ಕೇಳಿ ಗೊತ್ತಾದ ಮುನ್ನಾವರ ಮತ್ತು ಸಲ್ಮಾನ ಇವರಿಬ್ಬರು ಬಂದವರೆ ನನಗೆ ಹೊಡೆಯುತಿದ್ದಾಗ ನಮ್ಮ ತಂದೆ ಮಹಮ್ಮದ ಹಬೀಬ, ನನ್ನ ತಾಯಿ ಖೈರುನ ಬೇಗಂ ಇವರು ನನಗೆ ಮನೆಯೊಳಗೆ ಕರೆದುಕೊಂಡು ಹೋಗಿದ್ದು ಆಗ ಸದರಿ ಮುನ್ನಾವರ, ಸಲ್ಮಾನ ಹಾಗೂ ಅವರ ಇಬ್ಬರು ಗೆಳೆಯರಾದ ಹೆಸರು ಕೇಳಿ ಗೊತ್ತಾದ ಎಂ.ಜೆ. ಮೆಹರಾಜ @ ಮೋಸಿನ ಜೆನ್ ಹಾಗೂ ಮಜರ ಜವಹಾರ ಹಿಂದ ಸ್ಕೂಲ ಹತ್ತಿರ ಕಲಬುರಗಿ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯೊಳಗೆ ಬಂದು  ನನ್ನನ್ನು ಅಂಗಿ ಹಿಡಿದು ಎಳೆದಾಡುತ್ತಿದ್ದಾಗ ನಾವು ಮನೆಯ ಹೊರಗಡೆ ಬಂದಾಗ ಸದರಿ ಮುನ್ನಾವರ ಹಾಗೂ ಸಲ್ಮಾನ ಇಬ್ಬರು ಸಾಲೆ ಹಮಾರ ಬಾಪಕ ಉಪ್ಪರ ಹಾತಕರತೆ ಸುವರ ಮಾಕೆ ಲವಡೇ ಆಜ ತುಮಾರಕೂ ಖತಮ ಕರದುಂಗೆ ಅಂತಾ ಬೈಯುತ್ತಾಸದರಿ ಮುನ್ನಾವರ ಇತನ ಕೈಯಲ್ಲಿದ್ದ ಮಚ್ಚದಿಂದ ತಲೆಯ ಮೇಲೆ ಹೋಡೆದನು ಮತ್ತು ಸಲ್ಮಾನ ಇತನು ಚಾಕುದಿಂದ ನನ್ನ ತಲೆಯ ಎಡಭಾಗದಲ್ಲಿ ಹೊಡೆದನು ಎಂ.ಜೆ.ಮೆಹರಾಜ @ಮೊಸಿನ ಜೆನ ಇತನು ಒಂದು ಬಡಿಗೆಯಿಂದ ನನ್ನ ಎಡಮಗ್ಗಲಲ್ಲಿ ಹೊಡೆದಿದ್ದು , ಮಜರ ಇತನು ಒಂದುಇಟ್ಟಂಗಿಯಿಂದ ನನ್ನತಲೆಯ ಮೇಲೆ ಹಾಕಿಮರಣಾಂತಿಕ ಹಲ್ಲೆ ಮಾಡಿದ್ದು ಇದರಿಂದ ನನ್ನ ತಲೆಯ ಮೇಲೆ ಭಾರಿ ರಕ್ತಸ್ರಾವವಾಗುತಿದ್ದಾಗ ,ಚೀರಾಡುತ್ತಿರುವಾಗ ನನ್ನ ತಂದೆ ಮಹಮ್ಮದ ಹಬೀಬ, ನನ್ನ ತಾಯಿ ಖೈರುನಬಿ , ನನ್ನ ತಂಗಿ ಸಾಲೆಯಾ  ಹಾಗೂ ಅಲ್ಲಿಯೇ ಇದ್ದ ಹೆಸರು ಕೇಳಿ ಗೊತ್ತಾದ ಅಬ್ದುಲ ಸತ್ತಾರ ತಂದೆ ಮಹಮ್ಮದ ಹುಸೇನ, ಹಾಗೂವಿಷಯ ಗೊತ್ತಾಗಿ ಬಂದ ನನ್ನ ಅಣ್ಣ ಮಹಮ್ಮದ ಸೋಹೆಲ್ ಇವರೆಲ್ಲರೂ ನನಗೆ ಹೋಡೆಯುವದನ್ನು ಬಿಡಿಸಿಕೊಂಡರು ಆಗ ಅವರೆಲ್ಲರೂ ಸಾಲೇ ಆಜ ಬಚಗಯಾ ಅಂತಾ ಅಹಿಂದ ಹಮಾರಿ ಬಾಪಕೀ ಸಾತ ಜಗಡ ಕರೆತೋ ಜಾನಸೇ ಮಾರದೆಂಗೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ರಶೀದ ತಂದೆ ನಬಿಲಾಲ ಸಾ: ಮರತೂರ ರವರು ದಿನಾಂಕ: 08-02-2019 ರಂದು ಮುಂಜಾನೆ 9-30 ಗಂಟೆಗೆ ತಮ್ಮ ಮನೆಯ ಮುಂದೆ ನಿಂತಾಗ ಅಣ್ಣನಾದ ಅಬ್ದುಲ ಮತ್ತು ಅವನ ಮಕ್ಕಳಾದ 1) ಖಲೀಲ 2) ಸುಭಾನ ಅವನ ಹೆಂಡತಿ ಜಾಹೀದ ಬೇಗಂ ಇವರು ಮಕ್ಕಳು ಸಂಡಾಸ ಕೂಡಿಸುವ ವಿಷಯದಲ್ಲಿ ಜಗಳ ತೆಗೆದು ಆಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ  ಜೀವದ ಭಯ ಹಾಕಿರುತ್ತಾರೆ  
ಶಾಹಾಬಾದ ನಗರ ಠಾಣೆ : ಶ್ರೀಮತಿ ಜಹೀದಾ ಬೇಗಂ ಗಂಡ ಅಬ್ದುಲ ಜಜಲಬಾದ ಸಾ: ಮರತೂರ ರವರು ದಿನಾಂಕ: 08-02-2019  ರಂದು ಮುಂಜಾನೆ  ತಮ್ಮ ಮನೆಯ ಮುಂದೆ ಮೈದುನನಾದ ರಸೀದ ತಂದೆ ಅಬ್ದುಲ ಮತ್ತು ಅವನ ಅಳಿಯ ಹುಸೇನಸಾಬ ತಂದೆ ಹಾಜಿಸಾಬ ಮತ್ತು ಅವನ ಹೆಂಡತಿ ರಜೀಯಾ ಬೇಗಂ ಅವನ ಮಗಳಾದ ಸಾಹಿನ ಬೇಗಂ ಇವರು ಮಕ್ಕಳು ಸಂಡಾಸ ಕೂಡುವ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಪಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 February 2019

KALABURGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 09.02.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯ ಡಬರಾಬಾದ ಕಡೆಗೆ ಹೊಗುವ ರಸ್ತೆಯ ಮೇಲೆ ಹೊದಾಗ ನನಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯ ಹನುಮಾನದೇವ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ ಎ.ಎಸ್‌‌‌.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂತೋಷ ಕಾಲೋನಿಯ ಹನುಮಾನ ದೇವರ ಗುಡಿ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಹನುಮಾನ ದೇವರ ಗುಡಿಯ ಪಕ್ಕದ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಅನೀಲ ತಂದೆ ನಾಗಪ್ಪ ಮಡಿವಾಳ ಸಾ: ನರೋಣಾ ತಾ: ಆಳಂದ ಹಾ:ವ: ಸಂತೋಷ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 525/-ರೂ  2) 1 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ರಾಘವೇಂದ್ರ ನಗರ ಠಾಣೆ : ದಿನಾಂಕ 09.02.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಖದೀರ ಚೌಕ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಹಣ್ಣಿನ ಬಂಡಿ ಇಟ್ಟುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀಮತಿ ಅಕ್ಕ ಮಹಾದೇವಿ ಪಿ.ಎಸ್‌‌.ಐ. ರಾಘವೇಂದ್ರ ನಗರ ಠಾಣೆ ಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಎಮ್.ಎಸ್.ಕೆ.ಮೀಲ್ ಬಡಾವಣೆಯ ಖದೀರ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಖದೀರ ಚೌಕ ಪಕ್ಕ ಬಸ್ಸ ನಿಲ್ದಾಣ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಹಣ್ಣಿನ ಬಂಡಿ ಇಟ್ಟುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ರಫೀ ತಂದೆ ಸುಲೇಮಾನಸಾಬ ಹೇರೂರ ಸಾ: ಮಿಜಬಾ ನಗರ ಎಮ್.ಎಸ್.ಕೆ.ಮಿಲ್ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1580/-ರೂ  2) 1 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಶಕುಮಾರ ತಂದೆ ಅಶೋಕಕುಮಾರ ಕುಲಕರ್ಣೀ ಸಾ: ರಾಮ ಮಂದಿರ ಬ್ರಹ್ಮಪೂರ ಕಲಬುರಗಿ ರವರು ಹಿರೊ ಸ್ಪೇಂಡರ ಮೊಟಾರ ಸೈಕಲ ನಂ ಕೆಎ 32 ಇಸಿ 2742 ನೇದ್ದು ಖರಿದಿಸಿದ್ದು ಸದರಿ ಮೋಟಾರ ಸೈಕಲನ್ನು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ. ಎಂದಿನಂತೆ ದಿನಾಂಕ 10.01.2019 ರಂದು ರಾತ್ರಿ 10:30 ಗಂಟೆಗೆ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿ ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 11.01.2019 ರಂದು ಬೆಳ್ಳಿಗ್ಗೆ 8:30 ಗಂಟೆಗೆ ಎದ್ದು ನೋಡಲು ನಾನು ಇಟ್ಟಿದ ಮೋಟಾರ ಸೈಕಲ ಇರಲಿಲ್ಲ ನಂತರ ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಮತ್ತು ಎಲ್ಲಾ ಕಡೆಗೆ ಹುಡುಕಾಡಿದ್ದು ಮೋಟಾರ ಸೈಕಲ ಪತ್ತೆ ಯಾಗಿರುವದಿಲ್ಲ. ಅಂದಿನಿಂದ ಇಂದಿನವರೆಗೆ ನಾನು ನನ್ನ ಮೊಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ಯಾರೊ ಕಳ್ಳರು ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.