POLICE BHAVAN KALABURAGI

POLICE BHAVAN KALABURAGI

10 October 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 09-10-2018 ರಂದು ಮಣುರ ಗ್ರಾಮದಲ್ಲಿ  ಟಿಪ್ಪರಗಳಲ್ಲಿ ಮರಳು ತುಂಬಿ ಮರಳು ಸಾಗಾಣಿಕೆ ಮಾಡುತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಣುರ ಗ್ರಾಮ ದಾಟಿ ಹೋಗುತಿದ್ದಾಗ ಶೇಷಗಿರಿ ಕ್ರಾಸ ಹತ್ತಿರ ಒಂದು ಮರಳು ತುಂಬಿದ ಟಿಪ್ಪರ ಹೋಗುತಿದ್ದದನ್ನು ನೋಡಿ ನಮ್ಮ ಜೀಪ ಟಿಪ್ಪರ ಮುಂದೆ ಹೋಗಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶೇಖರ ತಂದೆ ಚಂದ್ರಕಾಂತ ಜಾಧವ ಸಾ||ಹೈದ್ರಾ ತಾ||ಅಕ್ಕಲಕೋಟ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು ಅದರ ಮೇಲೆ ನೊಂದಣಿ ನಂಬರ ಇರಲಿಲ್ಲಾ ಅದರ ಇಂಜಿನ ನಂ 400. 952-D-0053058  ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 10,000/- ರೂ ಕಿಮ್ಮತ್ತಿನದು ಇದ್ದು ಸದರಿ ಟಿಪ್ಪರ ಮತ್ತು ಚಾಲಕನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-10-2018 ರಂದು ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರ ಮಾರ್ಗದರ್ಶನದಂತೆ ಅಫಜಲಪೂರ  ಪಟ್ಟಣದ ರೇವಣಸಿದ್ದೇಶ್ವರ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಂಜೀವಕುಮಾರ ತಂದೆ ಶರಣಗೌಡ ಪಾಟೀಲ ಸಾ|| ಗೌರ (ಬಿ) ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 5800/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸುರಜ ತಂದೆ ರಾಮದಾಸ ಪಾಲನಕರ ಸಾ:ಮಹಾಲಕ್ಷ್ಮೀ ಲೇಔಟ ಕಲಬುರಗಿ ರವರಿಗೆ ಸ್ನೇಹಾ :14 ವರುಷ ಮತ್ತು ಸಮರ್ಥ :12 ವರ್ಷ ಅಂತಾ ಇಬ್ಬರೂ ಮಕ್ಕಳಿದ್ದು ಇಬ್ಬರೂ ಶಾಲೆಗೆ ಹೋಗುತ್ತಾರೆ. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಪೂಜಾ ಮತ್ತು ನನ್ನ ಮಕ್ಕಳು ಇರುತ್ತೇವೆ ನನ್ನ ಮಗನಾದ ಸಮರ್ಥ ಇತನ ಪರೀಕ್ಷೆ ನಡೆದಿದ್ದು ಅವನಿಗೆ ಪರೀಕ್ಷೆ ಸಂಬಂಧ ಪ್ರತ್ಯೇಕ ಕೋಣೆ ಮಾಡಿ ಓದಲು ಅನುಕೂರ ಮಾಡಿಕೊಟ್ಟಿದ್ದು ಅದರಂತೆ ನನ್ನ ಮಗನಿಗೆ ಓದಲು ಹೇಳಿದರು ನಿರ್ಲಕ್ಷ ಮಾಡುತ್ತಾ ಬಂದಿದ್ದು ಇರುತ್ತದೆ. ಇಂದು ದಿ:08/10/2018 ರಂದು ಬೆಳಗ್ಗೆ 10.00 ಗಂಟೆಗೆ ನಾನು ನನ್ನ ಕೆಲಸದ ಸಂಬಂಧ ಅಂಗಡಿಗೆ ಹೋಗಿದ್ದು ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದರು ಸಾಯಂಕಾಲ 6.30 ಗಂಟೆಗೆ ನನ್ನ ಹೆಂಡತಿ ಅಳುತ್ತಾ ನನಗೆ ಪೋನ ಮಾಡಿ ನನ್ನ ಮಗ ಸಮರ್ಥ ನೇಣು ಹಾಕಿಕೊಂಡಿದ್ದಾನೆ ಅವನಿಗೆ ಚಿರಾಯು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದು ನಾನು ಗಾಬರಿಗೊಂಡು ಚಿರಾಯು ಆಸ್ಪತ್ರೆಯಲ್ಲಿ ಬಂದು ನೋಡಲು ಆಸ್ಪತ್ರೆಯ ವೈದ್ಯರು ನನ್ನ ಮಗನಿಗೆ ಪರಿಕ್ಷಿಸಿ ಮೃತ ಪಟ್ಟಿದ್ದಾನೆ ಅಂತಾ ತಿಳಿಸಿದ್ದು ಆಗ ನಾನು ನನ್ನ ಹೆಂಡತಿಯನ್ನು ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಸಮರ್ಥ ಇತನು ಓದದೇ ಹೊರಗಡೆ ತಿರುಗಾಡುತ್ತಾ ಸಾಯಂಕಾಲ 5.00 ಗಂಟೆಗೆ ಅವನಿಗೆ ಓದಲು ಹೇಳಿದ್ದು ಆಗ ಅವನು ಪಾನಿಪುರಿ ತೆಗೆದುಕೊಂಡು ಬಾ ನಾನು ಓದುತ್ತೇನೆಂದು ಹೇಳಿದ್ದು ಅದರಂತೆ ನಾನು ಪಾನಿಪುರಿ ತೆಗೆದುಕೊಂಡು ಸಾಯಂಕಾಲ 6.15 ಗಂಟೆ ಸುಮಾರಿಗೆ ಪಾನಿಪುರಿ ತೆಗೆದುಕೊಂಡು ಮನೆಗೆ ಬಂದು ನೋಡಲು ಸಮರ್ಥ ಇತನು ತನ್ನ ಕೋಣೆಯಲ್ಲಿ ಒಳಗಿನ ಕೊಂಡಿ ಹಾಕಿಕೊಂಡಿದ್ದು ನಾನು ಕರೆದರು ಪ್ರತಿಕ್ರೀಯೆ ನೀಡದೆ ಇದ್ದರಿಂದ ರೂಮಿನ ಕಿಡಕಿ ತೆಗೆದು ನೋಡಲು ಸಮರ್ಥ ಇತನು ರೂಮನಲ್ಲಿ ಫ್ಯಾನಗೆ ನೇಣು ಹಾಕಿಕೊಂಡಿದ್ದು ಆಗ ನಾನು ಗಾಬರಿಗೊಂಡು ಚಿರಾಡುತ್ತಿದ್ದಾಗ ಪಕ್ಕದ ಮನೆಯ ತಿವಾರಿ ಮತ್ತು ಅವಳ ಮಗಳು ಬಂದು ನೋಡಿ ನಂತರ ಎಲ್ಲರೂ ಕೂಡಿ ಬಾಗಿಲು ಕೊಂಡಿ ಮುರಿದು ಬಾಗಿಲು ತೆರೆದು ಸಮರ್ಥ ಇತನ ನೇಣಿನ ಕುಡುಕಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನನ್ನ ಮಗನು ಓದಿನಲ್ಲಿ ಆಸಕ್ತಿ ಇರದಕ್ಕೆ ಪರೀಕ್ಷೆಯ ಭಯದಿಂದ ಮತ್ತು ಫಲಿತಾಂಶ ದಿಂದ ಭಯಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 October 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀ ಸಿದ್ದಪ್ಪ ಕಾಳಗೊಂಡ ಸಾ|| ಗೊಬ್ಬೂರ (ಬಿ) ರವರು ಮೇಲೆ ನಮೋದಿಸಿದ ವಿಳಾಸದಲ್ಲಿ ವಾಸವಾಗಿದ್ದು, ಕೂಲಿಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತನೆ ನನಗೆ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ಕಲಬುರಗಿಯಲ್ಲಿ ಕೆ.ಎಸ್.ಆರ್. ಟಿ. ಸಿ ಬಸ್ ಡಿಪೋದಲ್ಲಿ ಅಪ್ರಂಟಿಸ್ ತರಬೇತಿ ಮಾಡುತ್ತಿದ್ದನು, ದಿನಾಂಕ 06-10-2018 ರಂದು ಮುಂಜಾನೆ ನನ್ನ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ನಮ್ಮ ಸಂಬಂದಿಕನಾದ ಬಂಡೆಪ್ಪ ಮಾಯಗೊಂಡ ಎಂಬುವವರ ಸೈಕಲ ಮೋಟಾರ ನಂ ಕೆಎ-32 ಇಆರ್-0166 ನೇದ್ದನ್ನು ತೆಗೆದುಕೊಂಡು ಅಪ್ರಂಟಿಸ್ ತರಬೇತಿಗೆ ಅಂತ ಕಲಬುರಗಿಗೆ ಬಂದಿದ್ದನು.  ದಿನಾಂಕ 06-10-2018 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕನಾದ ಜೇಟ್ಟೆಪ್ಪ ಪೂಜಾರಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ಮಹಿಬೂಬಸಾಬ ಮಕನದಾರ ಇಬ್ಬರು ಕೂಡಿಕೊಂಡು ಮಹಿಬೂಬಸಾಬನ ಸ್ಕಾರ್ಪಿಯೋ ವಾಹನಕ್ಕೆ ಡಿಸೇಲ ಹಾಕಿಸಿಕೊಂಡು ಬರಲು ನಮ್ಮೂರ ಹತ್ತಿರ ಇರುವ ಪೆಟ್ರೊಲ ಪಂಪಿಗೆ ಹೋಗುತ್ತಿದ್ದಾಗ ರಾತ್ರಿ 8-45 ಗಂಟೆಯ ಸುಮಾರಿಗೆ ದೇಶಮುಖ ರವರ ಹೊಲದ ಹತ್ತಿರ ರೊಡಿನ ಮೇಲೆ ನಿಮ್ಮ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ  ಎಂಬಾತನು ಸೈಕಲ ಮೋಟಾರ ನಂ ಕೆಎ -32 ಇಆರ್-0166 ನೇದ್ದರ ಮೇಲೆ ಕಲಬುರಗಿಯಿಂದ ಊರಿಗೆ ಬರುತ್ತಿದ್ದಾಗ ಹಿಂದಿನಿಂದ ಸೈಕಲ ಮೊಟಾರ ನಂ ಕೆಎ-32 ಇಎಫ-7639 ನೇದ್ದರ ಚಾಲಕನು ತನ್ನ ಸೈಕಲ ಮೋಟಾರನ್ನು ಅತೀವೇಗವಾಗಿ ಮತ್ತು ನೀಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಯಲ್ಲಪ್ಪ @ ಯಲ್ಲಾಲಿಂಗನ ಸೈಕಲ ಮೋಟಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಯಲ್ಲಪ್ಪ@ ಯಲ್ಲಾಲಿಂಗನಿಗೆ ತಲೆಗೆ ಭಾರಿ ರಕ್ತಗಾಯ ಎದೆಗೆ ಭಾರಿ ಗುಪ್ತಗಾಯ ಮೊಣಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ತಮ್ಮನಾದ ಬೀರಪ್ಪ ಕಾಳಗೊಂಡ ಮತ್ತು ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ಮತ್ತಿತರರು  ಕೂಡಿಕೊಂಡು ಘಟನಾ ಸ್ಥಳಕ್ಕೆ ಹೊಗಿ ನನ್ನ ಮಗನಿಗೆ ಆದ ಗಾಯಗಳನ್ನು ನೋಡಿರುತ್ತವೆ, ಸೈಕಲ ಮೋಟಾರ ಚಾಲಕನು ತನ್ನ ಸೈಕಲ ಮೋಟಾರನ್ನು ಅಲ್ಲೆ ಬಿಟ್ಟು ಓಡಿ ಹೊಗಿದ್ದನು. ನಂತರ ನನ್ನ ಮಗನಿಗೆ ಉಪಚಾರ ಕುರಿತು ನಮ್ಮೂರ ಸರಕಾರಿ ದವಾಖಾನೆಗೆ ತೆಗೆದುಕೊಂಡು ಬಂದು ನಂತರ ಹೆಚ್ಚಿನ ಉಪಚಾರಕ್ಕಾಗಿ ನಾನು ನಮ್ಮ ತಮ್ಮನಾದ ಬೀರಪ್ಪ ಕಾಳಗೊಂದ ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ರವರೆಲ್ಲಾರು ಕೂಡಿಕೊಂಡು ನನ್ನ ಮಗನಿಗೆ 108 ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಕಲಬುರಗಿಗೆ ಬರುತ್ತಿದ್ದಾಗ, ಮಾರ್ಗಮದ್ಯ ಶರಣ ಶಿರಸಗಿ ಹತ್ತಿರ ಮೃತಪಟ್ಟಿರುತ್ತಾನೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:07/10/18 ರಂದು ಶ್ರೀ ರಾಹುಲ ತಂದೆ ಚಂದ್ರಕಾಂತ ಜಾಲೇಕರ ಸಾ: ಕುರಿಕೊಟಾ ತಾ:ಜಿ: ಕಲಬುರಗಿ ರವರು ತನ್ನ ಮೋ.ಸೈಕಲ ನಂ. ಕೆ.ಎ-32 ಇಕ್ಯೂ-2513ನೇದ್ದರ ಮೇಲೆ ಗಾಯಾಳು ಮೋಹಿತ ಈತನಿಗೆ ಕೂಡಿಸಿಕೊಂಡು ಕುರಿಕೋಟಾ ಹೊಸ ಸೇತುವೆ ಕಟ್ಟಡ ಕಾಮಗಾರಿ ನೋಡಿಕೊಂಡು ಮರಳಿ ಕುರಿಕೋಟಾ ಕಡೆಗೆ ಬರುತ್ತಿರುವಾಗ ಶಿವಪ್ರಭು ಪೆಟ್ರೋಲ ಪಂಪ ಹತ್ತಿರ ಅಪಾದಿತನು ತನ್ನ ಕಾರ ನಂ ಕೆ.ಎ-32 ಎಂ-7494 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಸಾಧಾ ಗಾಯ ಮತ್ತು ಮೋಹಿತ ಇತನಿಗೆ ಭಾರಿ ಗಾಯ ಪಡಿಸಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ:ಚವ್ಹಾಣ ತಾಂಡಾ ಕಮಲಾಪೂರ ಹಾ:ವ:ಹನುಮಾನ ನಗರ ತಾಂಡಾ ಕಲಬುರಗಿ ರವರ ಮದುವೆಯು ಹಿಂದು ಸಂಪ್ರದಾಯದ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3 ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ಅಂದರೆ ದಿನಾಂಕ: 12.06.2017 ರಂದು ಬೆಳಗ್ಗೆ 11 ಗಂಟೆಗೆ  ನನ್ನ ಪತಿಯವರು ನನ್ನ ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದುನ ಎಲ್ಲರೂ ಕಿರುಕುಳ ನೀಡುತ್ತಿರುವ ಪ್ರಯುಕ್ತ  ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1 ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ ಬರುವುದಿಲ್ಲ ನೀ ಏನು  ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1  ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ ನನ್ನ ತಂದ ತಾಯಿಯವರು ಇರುತ್ತಾರೆ.ಪ್ರಯುಕ್ತ ಮಾನ್ಯರು ಈ ನನ್ನ ಮನವಿಗೆ ಸ್ಪಂದಿಸಿ ಈ ಮೇಲೆ ಹೇಳಿರುವ ನನ್ನ ಅತ್ತೆ ಮಾವ ಹಾಗೂ ಮೈದುನನ್ನ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಕೊಂಡು ಅನ್ಯಾಯಕ್ಕೆ ಒಳಗಾಗಿರುವ ನನಗೆ ಸೂಕ್ತ ನ್ಯಾಯ ಒದಗಿಸಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಸೋಮರಾಯ ತಂದೆ ಹಣಮಂತ ಮಾಂಗ ಸಾ: ಕುರನಳ್ಳಿ ಇವರ ಹೊಲ ಇದ್ದು ಅದರ ಸರ್ವೆ ನಂ. 74 ವಿಸ್ತರ್ಣ 3 ಎಕರೆ 6 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ತೊಗರಿ ಬೆಳೆ ಇರುತ್ತದೆ. ದಿನಾಂಕ: 09-09-2018 ರಂದು ರಾತ್ರಿ ಸಮಯದಲ್ಲಿ ನಮ್ಮೂರ 1] ಗುರುನಾಥ ತಂದೆ ಶ್ರೀಮಂತರಾಯಗೌಡ ಮಾಲಿಪಾಟೀಲ, 2] ಯಮನೂರಗೌಡ ತಂದೆ ಭಗವಂತ್ರಾಯಗೌಡ ಮಾಲಿಪಾಟೀಲ, 3] ಶರಣಗೌಡ ತಂದೆ ಹಣಮಂತ್ರಾಯಗೌಡ ಮಾಲಿಪಾಟೀಲ 4] ಶ್ರೀಶೈಲ ತಂದೆ ಅಮೃತಗೌಡ ಮಾಲಿಪಾಟೀಲ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿನ ಎಣೆ ಹೊಡೆದಿರುತ್ತಾರೆ, ನಾನು ಮರುದಿನ ಅಂದರೆ ದಿನಾಂಕ: 10-09-2018 ರಂದು ಬೆಳೀಗ್ಗೆ 08-00 ಗಂಟೆಗೆ ಗುರುನಾಥಗೌಡ ಮತ್ತು ಶರಣಗೌಡ ಇವರ ಮನೆಗೆ ಹೋಗಿ ಅವರಿಗೆ ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಯಾಕೆ ಹೊಡೆದಿರಿ ಅಂತಾ ಕೆಳಿದ್ದಕ್ಕೆ ಗುರುನಾಥಗೌಡ ಮತ್ತು ಶರಣಗೌಡ ಇವರು ಹೋಗಲೆ ಮಾದಿಗ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಕಳುಹಿಸಿದ್ದು ಇರುತ್ತದೆ. ನಾನು ಈ ಬಗ್ಗೆ ನಮ್ಮ ಮನಯವರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತಿದ್ದು ನಮ್ಮ ಹೊಲದಲ್ಲಿ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಹೊಡೆದು ಅಂದಾಜು 1,60,000=00 ರೂ ಕಿಮ್ಮತ್ತಿನಷ್ಟು ಹಾನಿ ಮಾಡಿದ್ದು ಕೇಳಲು ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2018

KALABURAGI DISTRICT REPORTED CRIMES

ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಭಾರತಿಬಾಯಿ ಗಂಡ ದಿ: ಬಾಬು ಗುತ್ತೇದಾರ ಸಾ: ಬಳೂರ್ಗಿ ರವರ ಮಗನಾದ ದತ್ತು ಇತನು ಕಲಬುರಗಿಯ ತಿಮ್ಮಾಪೂರ ವೃತ್ತದಲ್ಲಿರುವ ಸ್ವಂತ ಕಟ್ಟಡದಲ್ಲಿ ವೈನಶಾಪ ಇಟ್ಟುಕೊಂಡು ಕೆಲಸ ಮಾಡುತ್ತಾ ಕಲಬುರಗಿಯ ಶಾಂತಿ ನಗರದಲ್ಲಿ ಸ್ವಂತ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿರುತ್ತಾನೆ. ಬಳೂರ್ಗಿ ಗ್ರಾಮದಲ್ಲಿ ನಾನು ನಮ್ಮ ಹೊಲ ಮನೆ ನೋಡಿಕೊಳ್ಳುತ್ತಾ ಮನೆಯಲ್ಲಿ ನಾನೋಬ್ಬಳೆ ವಾಸವಾಗಿದ್ದು ಆಗಾಗ ನನ್ನ ಮಕ್ಕಳ ಹತ್ತಿರ ಹೋಗಿ ಬರುವುದು ಮಾಡುತ್ತೆನೆ. ನನ್ನ ಮಗನಾದ ದತ್ತು ಇತನು ತನ್ನ ವ್ಯಾಪಾರಕ್ಕಾಗಿ ಈಗ ಕೆಲವು ವರ್ಷಗಳ ಹಿಂದೆ ವೈನಶಾಪ ಇದ್ದ ಕಟ್ಟಡದ ಮೇಲೆ ಕಲಬುರಗಿಯ ವಿಜಯಾ ಬ್ಯಾಂಕ ರವರಲ್ಲಿ ಸುಮಾರು 50 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಸದರಿ ಸಾಲವನ್ನು ತೀರಿಸಲಾಗದೆ ಈಗ ಕೇಲವು ದಿನಗಳಹಿಂದೆ ಕಲಬುರಗಿಯ ವಿಜಯಾ ಬ್ಯಾಂಕನ ಅಧಿಕಾರಿಗಳು ಸಾಲ ಮರುಪಾವತಿ ಮಾಡಿ ಇಲ್ಲವಾದರೆ ನಿಮ್ಮ ಅಂಗಡಿಯನ್ನು ಹರಾಜು ಮಾಡುತ್ತೇವೆ ಅಂತಾ  ನೋಟಿಸ ನೀಡಿರುತ್ತಾರೆ. ಸದರಿ ನೋಟಿಸ್‍ ನೀಡಿದ ವಿಷಯ ನನ್ನ ಮಗ ನನಗೆ ತಿಳಿಸಿದರಿಂದ ನಾನು ಚಿಂತೆ ಮಾಡಬೇಡಾ ಕೇಲವು ವರ್ಷಗಳಿಂದ ಹೊಲದ ಆದಾಯದಲ್ಲಿ ನಾನು ಚಿನ್ನಾಭರಣಗಳನ್ನು ಖರೀದಿ ಮಾಡಿ ಇಟ್ಟಿರುತ್ತೇನೆ, ಅವುಗಳನ್ನು ಮಾರಿ ಹಾಗೂ ಉಳಿದ ಹಣವನ್ನು ಹೇಗದಾರು ಮಾಡಿ ಕೂಡಿಸಿ ಸಾಲ ತೀರಿಸೊಣಾ ಅಂತಾ ನನ್ನ ಮಗನಿಗೆ ಹೇಳಿರುತ್ತೇನೆ. ನನ್ನ ಹತ್ತಿರ ಇದ್ದ ಒಟ್ಟು 28 ತೋಲೆ (280 ಗ್ರಾಂ) ಬಂಗಾರದ ಆಭರಣಗಳನ್ನು ಬಳೂರ್ಗಿ ಗ್ರಾಮದ ನನ್ನ ಮನೆಯ ಟ್ರಜರಿಯಲ್ಲಿಯೇ ಇಟ್ಟಿರುತ್ತೇನೆ. ನನ್ನ ಗಂಡನ ಪುಣ್ಯ ತಿಥಿ ಇರುವುದರಿಂದ ನಾನು & ನನ್ನ ಮಗ ದತ್ತು ಹಾಗೂ ಮೊಮ್ಮಕ್ಕಳು ಕೂಡಿ ಕಾಶಿಗೆ ಹೋಗಲು ದಿನಾಂಕ: 28-09-2018 ರಂದು ನಾನು ಬಳೂರ್ಗಿಯಿಂದ ಕಲಬುರಗಿಗೆ ಹೊಗಿ ಅಲ್ಲಿಂದ ಎಲ್ಲರೂ ಕೂಡಿ ಕಾಶಿಗೆ ಹೋಗಿರುತ್ತೇವೆ ಹೋಗುವಾಗ ನನ್ನ ಹತ್ತಿರವಿದ್ದ ಚಿನ್ನಾಭರಣಗಳನ್ನು ಬಳೂರ್ಗಿ ಗ್ರಾಮದ ನನ್ನ ಮನೆಯ ಟ್ರಜರಿಯಲ್ಲಿಯೇ ಇಟ್ಟು ಮನೆಗೆ ಕೀಲಿ ಹಾಕಿಕೊಂಡು ಹೋಗಿರುತ್ತೇನೆ.  ದಿನಾಂಕ 05-10-2018 ರಂದು ನಾನು ಕಲಬುರಗಿಯ ನನ್ನ ಮಗನ ಮನೆಯಲ್ಲಿದ್ದಾಗ ನಮ್ಮ ಮೈದುನನಾದ ಅಶೋಕ ತಂದೆ ವೇಂಕಯ್ಯಾ ಗುತ್ತೇದಾರ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ: 04-10-2018 ರಂದು ರಾತ್ರಿ 11.30 ಗಂಟೆಯ ಸುಮಾರಿಗೆ ನಾನು ನಂದಿ ಬಸವೇಶ್ವರ ಜಾತ್ರೆಯ ಪುರಾಣ ಮುಗಿಸಿ ಮನೆಗೆ ಬರುತ್ತಿದ್ದಾಗ ಮನೆಯ ಬಾಗಿಲಿಗೆ ಕೀಲಿಯಿದ್ದು ಇಂದು ಬೆಳಿಗ್ಗೆ ನೋಡಲಾಗಿ ಮನೆಯ ಬಾಗಿಲು ತೆರೆದಿತ್ತು ನೀವು ಬಂದಿರ ಬಹುದೆಂದು ತಿಳಿದುಕೊಂಡು ಸುಮ್ಮನಿದ್ದು ಎಷ್ಟೋತ್ತಾದರು ನೀವು ಮನೆಯಿಂದ ಹೊರಗೆ ಬರದೆಯಿದ್ದರಿಂದ ಮನೆಯ ಬಾಗಿಲ ಹತ್ತಿರ ಹೋಗಿ ನೋಡಿದಾಗ ನಿಮ್ಮ ಮನೆಯ ತಲಬಾಗಿಲಿನ ಕೊಂಡಿ ಕತ್ತರಿಸಿದ್ದು ನೋಡಿ ಕೂಗಿದಾಗ ನೀವು ಇಲ್ಲದೇ ಇರುವುದನ್ನು ನೋಡಿ ನಿಮಗೆ ಪೋನ ಹಚ್ಚಿದ್ದೆನೆ ಬಹುಶಃ ನಿಮ್ಮ ಮನೆ ಕಳ್ಳತನವಾಗಿರ ಬಹುದು ನೀವು ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಗ ಸೊಸೆ ಹಾಗೂ ನನ್ನ ಮೊಮ್ಮಕ್ಕಳು ಎಲ್ಲರೂ ಕೂಡಿ ಬಳೂರ್ಗಿಗೆ ಬಂದು ನಮ್ಮ ಮನೆಯನ್ನು ನೋಡಲಾಗಿ ನಮ್ಮ ಮನೆಯ ತೋಲಬಾಗಿಲ ಕೀಲಿಯನ್ನು ಕೊಂಡಿ ಸಮೇತ ಕತ್ತಿರಿಸಿದ್ದು ಹಾಗೂ ಒಳಕೋಣೆಯ ಬಾಗಿಲ ಕೀಲಿಯನ್ನು ಮುರಿದು ಟ್ರಜರಿಯಲ್ಲಿಟ್ಟಿದ್ದ ನಗದು ಹಣ ಬಂಗಾರದ ಹೀಗೆ ಒಟ್ಟು ಅ:ಕಿ: 8,90,000/- ರೂಪಾಯಿ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಫಜಲಪೂರ ಠಾಣೆ : ಶ್ರೀಮತಿ ಶಿ ಸುನಿತಾ ಗಂಡ ಗೌರೀಶ ಮಲ್ಲಿನಾಥ ಸಾ|| ಲಿಂಬಿತೋಟ ಅಫಜಲಪೂರ ರವರು ದಿನಾಂಕ 03-10-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ನನ್ನ ಮಗನನ್ನು ಕರೆದುಕೊಂಡು ಹಾಸ್ಟೇಲಿಗೆ ಹೋಗಿರುತ್ತೇನೆ. ಹೋಗುವಾಗ ಮನೆಯ ಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು ಹೋಗಿರುತ್ತೇನೆ. ನಮ್ಮ ಮನೆಗೆ ಎರಡು ಬಾಗಿಲುಗಳು ಇರುತ್ತವೆ. ನಾನು ಹಾಸ್ಟೇಲಿನಿಂದ ಮರಳಿ ರಾತ್ರಿ 11:00 ಗಂಟೆಗೆ ಮನೆಗೆ ಬಂದು ನೋಡಲಾಗಿ ಯಾರೊ ಕಳ್ಳರು ನನ್ನ ಮನೆಯ ಹಿಂದಿನ ಬಾಗಿಲದ ಕೊಂಡಿಯನ್ನು ಮುರಿದು ತಗೆದು ನನ್ನ ಮನೆಯ ಒಳ ಕೋಣೆಯ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಅಕಿ-75,000/- ರೂ ಇವುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಸದರಿ ಕಳ್ಳತನ ನಿನ್ನೆ ದಿನಾಂಕ 03-10-2018 ರಂದು ರಾತ್ರಿ 8:00 ಗಂಟೆಯಿಂದ ರಾತ್ರಿ 11:00 ಗಂಟೆಯ ಮದ್ಯದ ಅವದಿಯಲ್ಲಿ ನಡೆದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.