POLICE BHAVAN KALABURAGI

POLICE BHAVAN KALABURAGI

28 September 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮುಧೋಳ ಠಾಣೆ : ದಿನಾಂಕ; 27-09-2018 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ನಮ್ಮ  ಅಣ್ಣಾನಾದ ಶಾಮಪ್ಪಾ ತಂದೆ ಭೀಮಪ್ಪಾ ಮುನ್ನೂರ ಇತನು ಆಡಕಿ ಸಿಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 269 ನ್ನೆದ್ದರಲ್ಲಿ ಹೊಲಕ್ಕೆ ಗಳ್ಯಾ ಹೊಡೆಯಲು ಹೊಗಿದ್ದು ನಂತರ  ನಾನು ಮತ್ತು ನನ್ನ ಹೆಂಡತಿ ಜಗಮ್ಮಾ ಗಂಡ ಶರಣಪ್ಪಾ ಮತ್ತು ನಮ್ಮ ಅಣ್ಣಾನ  ಹೆಂಡತಿ ಸಾವೀತ್ರಮ್ಮಾ ಗಂಡ ಶಾಮಪ್ಪಾ ಮುನ್ನೂರ ಮುರು ಜನರು ಕೂಡಿ ಇಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನಮ್ಮ ಹೊಲ ಸರ್ವೆ ನಂ 269 ರಲ್ಲಿ ಹೊದಾಗ  ಹೊಲದಲ್ಲಿ ನಮ್ಮ ಅಣ್ಣಹೊಲದಲ್ಲಿ ಗಳ್ಯಾ ಕಟ್ಟಿ 2-3 ಸುತ್ತು ಗಳ್ಯಾ ಹೊಡೆದಿದ್ದು, ಎತ್ತುಗಳು ಹೊಲದಲ್ಲಿ ಇದ್ದು ನಮ್ಮ ಅಣ್ಣನು ಹೊಲದಲ್ಲಿ ಕಾಣಿಸಲಿಲ್ಲಾ. ನಾವು ನಮ್ಮ ಅಣ್ಣಾ ಎಲ್ಲಿ ಹೊದನು ಎತ್ತುಗಳು ಮಾತ್ರ ಇರುತ್ತವೆ ಅಂತಾ ಅನುಮಾನ ಬಂದು ಮನೆಗೆನಾದರು ಹೊಗಿರುಬಹುದು ಅಂತಾ ತಿಳಿದು ನಮ್ಮ ತಾಯಿಗೆ ಪೋನ ಮಾಡಿ ಕೇಳಿದಾಗ ನಮ್ಮ ತಾಯಿ ನಿಮ್ಮ  ಅಣ್ಣಾ ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ನಂತರ ನಮಗೆ ಭಯವಾಗಿ ನಾನು ಮತ್ತು ನನ್ನ ಹೆಂಡತಿ ಹಾಗು ನಮ್ಮ ಅಣ್ಣನ ಹೆಂಡತಿ ಮೂರು ಜನರು ಕೂಡಿ ನಮ್ಮ ಹೊಲದಲ್ಲಿ ಕುಂಟಿಯ  ಹತ್ತಿರ ಹೊಗಿ ನೊಡಲಾಗಿ ಎತ್ತುಗಳು ಕುಂಟಿಯನ್ನು ಮುಂದಕ್ಕೆ ಎಳೆದುಕೊಂಡು ಹೊಗಿದ್ದು  ಕಂಡು ಬಂದಿದ್ದು ಮತ್ತು ಸಾಗು ಮಾಡಿದ ಸಾಲಿನಲ್ಲಿ ತಲೆಯ ಕುದಲು ಹಾಗು ಸ್ವಲ್ಪ ರಕ್ತ ಬಿದ್ದಿದ್ದು ಕಂಡು ಬಂದು ಇದನ್ನು ನೋಡಿ ನಾವು ಭಯ ಪಟ್ಟು ನಮ್ಮ ಹೊಲದ ಸೂತ್ತ ಮುತ್ತಲು ತಿರುಗಾಡಿ ನೊಡುತಿದ್ದಾಗ, ನಮ್ಮ ಪಕ್ಕದ ಸಿದ್ದಪ್ಪ ವಾಲಿಕಾರ್ ಇವರ ತೊಗರಿ ಹೊಲದ ಬಂದಾರಿಯ ಪಕ್ಕದಲ್ಲಿ ಹೆಚ್ಚಿಗೆ ರಕ್ತ ಬಿದಿದ್ದು ಕಂಡು ಅನುಮಾನ ಬಂದು ಹಾಗೆ ಸುತ್ತಾಮುತ್ತಾ ತಿರುಗಾಡುತ್ತಿದ್ದಾಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಹೊಲದಿಂದ ಎರಡು  ಹೊಲ ಬಿಟ್ಟು ರಾಮುಲು ತಂದೆ ನರಸಪ್ಪಾ ಗಡ್ಡಮಿದಿ ಸಾ|| ಕೊಂತನಪಲ್ಲಿ ಇವರ ತೊಗರಿ ಹೊಲದ  ಸಾಲಿನಲ್ಲಿ ನಮ್ಮ ಅಣ್ಣಾ ಶಾಮಪ್ಪಾ ಇತನು ಕೊಲೆಯಾಗಿ ಸತ್ತು ಬಿದ್ದಿದ್ದು ನಾವು ಹತ್ತಿರ ಹೊಗಿ ನೊಡಲಾಗಿ ನಮ್ಮ ಅಣ್ಣಾ ಶಾಮಪ್ಪಾ ಇವರಿಗೆ ಕುತ್ತಿಗೆಗೆ ಹಾಗು ಮುಖದ ಮೆಲೆ ಎರಡು  ಕಫಾಳಕ್ಕೆ ಹಾಗು ಬಲ ಭುಜಕ್ಕೆ   ಇತರಕಡೆ ಹರಿತವಾದ ಅಯುಧದಿಂದ ಹೊಡೆದು ಭಾರಿ ಗಾಯ ಪಡಿಸಿ  ಕೊಲೆ ಮಾಡಿದ್ದು ಕಂಡು ಬಂದಿದ್ದು ಇರುತ್ತದೆ.ನಾವು ಈ ಬಗ್ಗೆ ನಮ್ಮ ಹೊಲದ ಹತ್ತಿರ ಸುತ್ತ ಮುತ್ತಲಿನ ಹೊಲದಲ್ಲಿ ಕೆಲಸ ಮಾಡು ಜನರಿಗೆ  ವಿಚಾರಿಸಲು ಇಂದು ಮುಂಜಾನೆ 10-00 ಗಂಟೆ ಸುಮಾರಿಗೆ ಇಲ್ಲಿ ನಾಲದಿಂದ ಯಾರೋ 2-3 ಜನರು ಓಡಿ ಹೊದರು ನಾವು ದೋರದಿಂದ ನೊಡಿರುತ್ತವೆ ಅಂತಾ ತಿಳಿಸಿದರು. ಸದರಿ ನಮ್ಮ ಅಣ್ಣಾ ಶಾಮಪ್ಪಾ ಇವರು ಇಂದು ಬೆಳಗ್ಗೆ 0900 ಗಂಟೆ ಸುಮಾರಿಗೆ ಮನೆಯಿಂದ ಹೊಲಕ್ಕೆ ಬಂದು ಆಡಕಿ ಸಿಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 269 ಕುಂಟಿ ಹೊಡೆಯುತ್ತಿದ್ದಾಗ ನಮ್ಮೂರ 1] ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಮತ್ತು ಅವರ ತಮ್ಮಂದಿರಾದ 2] ನರಸರೆಡ್ಡಿ ತಂದೆ ರಾಮರೆಡ್ಡಿ ಹಾಗು 3] ಬಸರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಇವರುಗಳೂ ನಮ್ಮ ಹೊಲದಲ್ಲಿ ಅಕ್ರಮವಾಗಿ ಬಂದು ನಮ್ಮ ಅಣ್ಣ ಶಾಮಪ್ಪ ಇತನು ಅವರ ಅಣ್ಣನಾದ ಮಲ್ಲರೆಡ್ಡಿ ಇವರಿಗೆ ಹೊದ ವರ್ಷ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ತಿಳಿದು ಅದೇ ವೈಮನಸ್ಸಿನಿಂದ ನಮ್ಮ ಅಣ್ಣ ಶಾಮಪ್ಪ ಇತನಿಗೆ ಇವರು 3 ಜನರು ಕೂಡಿ ಇಂದು ಬೆಳಗ್ಗೆ 0900 ಗಂಟೆಯಿಂದ ಮಧ್ಯಾಹ್ನ 1200 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಅಣ್ಣ ನಿಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ನಮ್ಮ ಹೊಲದಿಂದ 2 ಎರಡು ಹೊಲ ಬಿಟ್ಟು ರಾಮುಲು ಗಡ್ಡಾಮಿದಾ ಇವರ ತೊಗರಿ ಹೊಲದ ಸಾಲಿನಲ್ಲಿ ನಮ್ಮ ಅಣ್ಣ ಶವವನ್ನು ಹಾಕಿ ಹೋಗಿದ್ದು ಇರುತ್ತದೆ. ಸದರಿ ನಮ್ಮ ಅಣ್ಣ ಶಾಮಪ್ಪ ಇತನಿಗೆ ಹೊಡೆದು ಕೊಲೆ ಮಾಡುವಂತೆ ಭೀಮರೆಡ್ಡಿ ಇತನ ತಾಯಿಯಾದ ಸೌಭಾಗ್ಯಮ್ಮ ಇವಳು ಪ್ರಚೋದನೆ ನೀಡಿದ್ದು ಇರುತ್ತದೆ. ಕಾರಣ ಸದರಿ 1] ಭೀಮರೆಡ್ಡಿ ತಂದೆ ರಾಮರೆಡ್ಡಿ  ಪಲ್ಯಾ ಮತ್ತು ಅವರ ತಮ್ಮಂದಿರಾದ 2] ನರಸರೆಡ್ಡಿ ತಂದೆ ರಾಮರೆಡ್ಡಿ ಹಾಗು 3] ಬಸರೆಡ್ಡಿ ತಂದೆ ರಾಮರೆಡ್ಡಿ  ಪಲ್ಯಾ ಹಾಗು ಇವರ ತಾಯಿಯಾದ 4] ಸೌಭಾಗ್ಯಮ್ಮ ಗಂಡ ರಾಮರೆಡ್ಡಿ ಸಾ: ಎಲ್ಲರೂ ಸೊಮಪಲ್ಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶರಣಪ್ಪಾ ತಂದೆ ಭೀಮಪ್ಪಾ ಮುನ್ನೂರ ಸಾ|| ಸೋಮಪಲ್ಲಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.09.2018 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರದ ಸುರೇಶ ದಿಗ್ಗಾವಿ ಇವರ ಮನೆಯ ಹತ್ತಿರ ಹೋಗಿ ಜೀಪ ನಿಲ್ಲಿಸಿ, ನಾವು ಜೀಪಿನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಿಲ್ಲಿ ನಿಂತು ನೋಡಲು ಹಿಟ್ಟಿನ ಗಿರಣಿ ಮುಂದೆ ರಸ್ತೆಗೆ ಹೊಂದಿಕೊಂಡಿರುವ ಪಾನ ಶ್ಯಾಪ ಪಕ್ಕದಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಸವರಾಜ ತಂದೆ ಶಂಕರ ನಾಯಿಕೊಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 300/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 60 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 30. ರೂ 32 ಪೈಸೆ. ಒಟ್ಟು ಕಿಮ್ಮತ್ತು 1819ರೂ. 20ಪೈಸೆ. ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ವೇಂಕಟೇಶ ತಂದೆ ಶಿವಾಜಿ ಜಾಧವ್ ಸಾ|| ಕೀರ್ತಿ ನಗರ ಕಲಬುರಗಿ ಹಾ;ವ: ಕೃಷ್ಣಾ ನಗರ ಪಿಂಕಿ ಆಡಿಯೋ ಸೆಂಟರ ಎದುರುಗಡೆ ಕಲಬುರಗಿ ಇವರು ದಿನಾಂಕ; 26/09/2018 ರಂದು ರಾತ್ರಿ  ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ; KA32EF8759 ಚಸ್ಸಿ ನಂ; MBLHA10AMEHC45453 ಇಂಜಿನ ನಂ; HA10EJEHC64707 ಅ;ಕಿ; 25000/- ರೂ ನೇದ್ದನ್ನು ಕೃಷ್ಣಾ ನಗರ ಪಿಂಕಿ ಆಡಿಯೋ ಸೆಂಟರ್ ಎದುರುಗಡೆ ಕಲಬುರಗಿಯ ಮನೆಯ ಮುಂದುಗಡೆ ನಿಲುಗಡೆ ಮಾಡಿದ್ದು. ದಿನಾಂಕ; 27/09/2018 ರಂದು ಬೆಳಗ್ಗೆ 6;00ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ಸದರಿ ನನ್ನ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು ಇಲ್ಲಿಯವರೆಗೂ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ.  ಕಾರಣ ನನ್ನ ಮೋಟಾರ ಸೈಕಲ್ ಕಳ್ಳತನಮಾಡಿದವರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಂಬರೇಷ ತಂದೆ ಚಂದ್ರಪ್ಪ ಯಾದವ ಸಾ: ಗಂಗಾ ನಗರ ಕಲಬುರಗಿ ರವರು ತನ್ನ ಕೆಲಸ ಸಂಬಂದ ಒಂದು ಹಿರೋ ಸ್ಪೆಂಡರ ಮೋಟಾರ ಸೈಕಲ ನಂ ಕೆಎ 32 ಇಕೆ 0425 ನೇದ್ದು ಖರಿದಿಸಿದ್ದು ಸದರಿ ಮೋಟಾರ ಸೈಕಲನ್ನು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ. ಈ ಹಿಂದೆ ದಿನಾಂಕ 24.08.2018 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 25.08.2018 ರಂದು ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ನಾನು ಎದ್ದು ಮನೆಯಿಂದ ಹೊರಗೆ ಬಂದು ನೋಡಲು ಮನೆಯ ಮುಂದೆ ನಿಲ್ಲಿಸಿದ ನನ್ನ ಹಿರೋ ಸ್ಪೆಂಡರ ಮೋಟಾರ ಸೈಕಲ ನಂ ಕೆಎ 32 ಇಕೆ 0425 ನೇದ್ದು ಇರಲಿಲ್ಲ ನಂತರ ನಾನು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಅಂದಿನಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಯಾರೊ ಕಳ್ಳರು ನನ್ನ ಮೋಟಾರ ಸೈಕಲನ್ನು ದಿನಾಂಕ 24.08.2018 ರಂದು ರಾತ್ತಿ 10 ಗಂಟೆಯಿಂದ ದಿನಾಂಕ 25.08.2018 ರಂದು ಬೆಳ್ಳಿಗ್ಗೆ 06:00 ಗಂಟೆಯ ಮಧ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಗುರುಪಾದ ತಂದೆ ರಾಮಲಿಂಗ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ದಿನಾಂಕ 25.09.2018 ರಂದು ತಮ್ಮೂರಲ್ಲಿ ಮಹಾಂತೇಶ @ ಯೊಗೇಶ ಇತನು ನಮ್ಮ ಕಾಕನ ಮಗನಾದ ಶಿವಪುತ್ರ ಇತನ ಸಂಗಡ ಜಗಳ ಮಾಡಿದಕ್ಕೆ. ನಾನು ಮಹಾಂತೇಶನಿಗೆ ಶಿವಪುತ್ರನ ಸಂಗಡ ಯಾಕೆ ಜಗಳ ಮಾಡಿದ್ದಿ ಎಂದು ಕೇಳಿದಕ್ಕೆ ಅವನಿಗೂ ನನಗೂ ಜಗಳ ಆಗಿರುತ್ತದೆ ಮಹಾಂತೇಶನು ನನಗೆ ನೀನು ಜೇವರಗಿಗೆ ಬಾ ಒಂದು ಕೈ ನೊಡಿಕೊಳುತ್ತೆನೆ ಎಂದು ನನಗೆ ಬೇದರಿಕೆ ಹಾಕಿ ಹೋಗಿರುತ್ತಾನೆ.  ದಿನಾಂಕ .25.09.2018 ರಂದು ನಾನು ನಮ್ಮೂರಿನಿಂದ ಜೇವರಗಿಗೆ ಬಜಾರ ಮಾಡಲು ಬಂದು ಜೇವರಗಿ ಪಟ್ಟಣದ ಜ್ಯೋತಿ ಹೊಟೇಲ ಎದುರುಗಡೆ ಇದ್ದಾಗ, 1) ಮಹಾಂತೇಶ @ ಯೋಗೇಶ ತಂದೆ ಲಕ್ಷ್ಮಣ ಹಂಚಿನಾಳ ಸಾಃ ರೇವನೂರ, 2) ಶ್ರೀನಿವಾಸ @ ಕುಮಾರ ತಂದೆ ಶರಣಪ್ಪ ಹೊಸಮನಿ ಸಾಃ ಹರನೂರ ಇವರು ನಾನು ಇದ್ದಲ್ಲಿಗೆ ಬಂದು ನೀನ್ನೆಯ ಜಗಳದ ವಿಷಯದಲ್ಲಿ ಮಾತನಾಡೊಣ ನಡೆ ಎಂದು ಹೇಳಿ ನನಗೆ ಒಂದು ಅಟೋ ವಾಹನದಲ್ಲಿ ಕುಳಿಸಿಕೊಂಡು ಜೇವರಗಿ ಪಟ್ಟಣದ ಹೊರ ವಲಯದ ಕೆ.ಎಸ್.ಆರ್.ಟಿ.ಸಿ ಬಸ್ಸ ಡೀಪೊ ಹಿಂದಿನ ಹಳ್ಳದ ಹತ್ತಿರ ಕರೆದುಕೊಂಡು ಹೋಗಿ ಅಟೋದಿಂದ ಇಳಿಸಿ ಅಲ್ಲಿ ಅವರು ನನಗೆ ಬೈಯಹತ್ತಿದ್ದರು. ಅವರಿಬ್ಬರೂ ಅಲ್ಲದೆ ಇನ್ನೂ ಇತರೆ ಆರು ಜನರು ಅಲ್ಲಿಗೇ ಬಂದರು. ಅವರು ಕೂಡಾ ನನಗೆ ಏ ಬೊಸಡಿಮಗನೆ ನಮ್ಮ ಗೆಳೆಯ ಮಹಾಂತೇಶನ ಸಂಗಡ ಊರಲ್ಲಿ ಜಗಳ ಮಾಡುತಿ ರಂಡೀ ಮಗನೆ ಎಂದು ಅವಾಚ್ಯವಾಗಿ ಬೈಹತ್ತಿದ್ದರು, ನಾನು ಅವರಿಗೆ ಊರಿಗೆ ನಡೆರಿ ಅಲ್ಲಿಯೇ ಮಾತಾಡೊಣಾ ಎಂದಾಗ ಶ್ರೀನಿವಾಸ @ ಕುಮಾರ ಹೊಸಮನಿ ಇತನು ಏ ಬೊಸಡಿಮಗನೆ ಹೊಲೆಯ ಎಲ್ಲಿಗೆ ಹೋಗುತಿ ಎಂದು ನನಗೆ ಮುಂದಕ್ಕೆ ಹೋಗದಂತೆ ತಡೆದು ಹಿಡಿದುಕೊಂಡನು. ಮಹಾಂತೇಶ @ ಯೋಗೇಶ ಹಂಚಿನಾಳ ಇತನು ಊರಲ್ಲಿ ನನ್ನ ಸಂಗಡ ಜಗಳ ಮಾಡುತಿ ರಂಡಿ ಮಗನೆ ಎಂದು ಬಡಿಗೆಯಿಂದ ನನ್ನ ಬೇನ್ನು ಮೇಲೆ, ಎರಡು ಕೈಗಳ ಮತ್ತು ಕಾಲಿನ ಮೇಲೆ ಬಾಯಿ ಮೇಲೆ ತಲೆಯ ಮೇಲೆ ಹೋಡೆದನು. ಮತ್ತು ಶ್ರೀನಿವಾಸ @ ಕುಮಾರ ಇತನು ಕಲ್ಲು ತೆಗೆದುಕೊಂಡು ನನ್ನ ಬೇನ್ನು ಮೇಲೆ ಹೋಡೆದಿರುತ್ತಾನೆ. ಅವನ ಸಂಗಡ ಬಂದವರು ಈ ಸೂಳೆ ಮಗನಿಗೆ ಜೀವ ಸಹಿತ ಬಿಡಬಾರದು ಎಂದು ಅವಾಚ್ಯವಾಗಿ ಬೈಯುತ್ತಿದ್ದರು. ಮಹಾಂತೇಶನು ಏ ಸೂಳೆ ಮಗನೆ ನಮ್ಮ ತಂಟೆಗೆನಾದರೂ ಬಂದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಜಗನ್ನಾಥ ತಂದೆ ದೇವೀಂದ್ರಪ್ಪ ಮಡಿವಾಳ ಮತ್ತು ಮೃತನಾದ ಅಜಯಕುಮಾರ ಹಾಗೂ ತಮ್ಮರಿನ ಗಂಗಾಧರ  ಇವರಿಬ್ಬರು ಹಾಗೂ ಜಗನ್ನಾಥ ಈ ಮೂವರು ಕೂಡಿಕೊಂಡು ಗಂಗಾಧರನ ಹತ್ತಿರ ದ್ದ ಇನೋವಾ ಕೆ.ಎ-51 ಎನ್. 7506 ನೇದ್ದರ ವಾಹನದಲ್ಲಿ ಖಾಸಗಿ ಕೆಲಸ ಸಂಬಂದ ಕುಳಿತು ಗುಂಡಗುರ್ತಿ ಗ್ರಾಮಕ್ಕೆ ಹೊರಟಿದ್ದು. ವಾಹನವನ್ನು ಗಂಗಾಧರ ಇತನು ದಿನಾಂಕ: 25-09-2018 ರಂದು  4:30 ಪಿ.ಎಮ್. ಸುಮಾರಿಗೆ ಕಲಬುರಗಿ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ್ ಸಮೀಪದ ವೇರಹೌಸ ಹತ್ತಿರ ರೋಡಿನ ಮೇಲೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬಲಭಾಗದ ಗಿಡಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಮುಂದೆ ಕೆ.ಇ.ಬಿ. ಕಂಬಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿ ಮಾಡಿರುತ್ತಾನೆ. ಈ ಅಪಘಾತದಲ್ಲಿ ಮೃತನ ತಲೆಗೆ ಭಾರಿ ರಕ್ತಗಾಯ ಹಣೆಯ ಮೇಲೆ ರಕ್ತಗಾಯ ಏಡ ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿ ಹರಿದು ಸ್ಳಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಹಾಗೂ ಜಗನ್ನಾಥ ಮತ್ತು ಗಂಗಾಧರ ಇವರಿಬ್ಬರಿಗೂ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

22 September 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬುತುಲ್‌‌ ಫಾತಿಮಾ ಗಂಡ ಸೈಯದ ಜಮೀಲ್‌ ಅಹ್ಮದ ಸಾ:ಆರೀಫ ಕಾಲೋನಿ ಕಲಬುರಗಿ  ರವರ ಗಂಡನಾದ ಸೈಯದ ಜಮೀಲ್ ಇವರು ಸೌಧಿ ಅರಬಿಯಲ್ಲಿ ಕೆಲಸ ಮಾಡುತ್ತಿದ್ದು ನಾನು, ನಮ್ಮ ತಂದೆ ಮತ್ತು ನನ್ನ ನಾಲ್ಕು (4) ಜನ ಮಕ್ಕಳು ಇರುತ್ತೆವೆ ನನ್ನ ತಾಯಿಯವರ ಮನೆಯ ಎಮ್.ಎಸ್.ಕೆ. ಮೀಲ್ ಬಡವಾವಣೆಯ ಮಹ್ಮದಿ ಮಜ್ಜಿದ ಹತ್ತಿರ ಇದ್ದು ನಾನು ಆಗಾಗ ನನ್ನ ತಾಯಿ ಮನೆಗೆ ಹೋಗಿ ಬರುವದು ಮಾಡುತ್ತಾ ಇರುತ್ತೆನೆ.ದಿನಾಂಕ 20.09.2018 ರಂದು ಮೊಹರಮ ಹಬ್ಬ ಇದ್ದ ಪ್ರಯುಕ್ತ ನಾನು, ನನ್ನ ಮಕ್ಕಳು ಹಾಗೂ ನಮ್ಮ ತಂದೆ ಕೂಡಿಕೊಂಡು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಾಗಿಲಕ್ಕೆ ಕೀಲಿ ಹಾಕಿ ನಮ್ಮ ತಾಯಿಯ ಮನೆಗೆ ಹೋಗಿ ನಮ್ಮ ತಾಯಿ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದು ಇರುತ್ತದೆ. ಇಂದು ದಿನಾಂಕ 21.09.2018 ರಂದು ಬೆಳ್ಳಿಗ್ಗೆ 11:30 ಗಂಟೆಗೆ ನಾನು ನನ್ನ ಮನೆಗೆ ಬಂದು ನೋಡಲು ನಮ್ಮ ಮನೆಗೆ ಬಂದು ಮನೆಯ ಗೇಟ ಕೀಲಿ ತೆರೆದು ಒಳಗೆ ಹೋಗಿ ನೋಡಲು ನಮ್ಮ ಮನೆಯ ಮುಖ್ಯ ದ್ವಾರದ ಬಾಗೀಲ ಕೊಂಡಿ ಕತ್ತರಿಸಿದ್ದು, ಗಾಬರಿಗೊಂಡು ನಾನು ಒಳಗೆ ಹೋಗಿ ನೋಡಲು ಮನೆಯಲ್ಲಿ ಇದ್ದ ಅಲಮಾರಿಗಳು ತೆರೆದಿದ್ದು ಅದರಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ. ಆಗ ನಾನು ಅಲಮಾರಿಯಲ್ಲಿ ಪರಿಶಿಲಿಸಿ ನೋಡಲು ಅಲಮಾರಿಯಲ್ಲಿ ಇಟ್ಟಿದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  3,97,000/- ರೂ ಕಿಮ್ಮತ್ತಿನವುಘಳನ್ನು . ದಿನಾಂಕ 20.09.2018 ರಂದು ಸಾಯಂಕಾಲ 4 ಗಂಟೆಯಿಂದ ದಿನಾಂಕ 21.09.2018 ರಂದು ಬೆಳ್ಳಿಗ್ಗೆ 11:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬಾಗೀಲ ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮೇಲೆ ನಮೂದಿಸಿದ ಬಂಗಾರ, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವೀಣಾ ಗಂಡ ಬಾಲಾಜಿ ಘನಾತೆ ಸಾ: ವಿಶ್ವರಾಧ್ಯ ಕಾಲೋನಿ ಕಲಬುರಗಿ ರವರು ವಿಶ್ವರಾಧ್ಯ ಕಾಲೋನಿಯ ಶಟ್ಟಿ ಕಾಂಪ್ಲೇಕ್ಸ ಪಕ್ಕದಲ್ಲಿ ನಮ್ಮ ಸ್ವಂತ ಮನೆ ಇದ್ದು ನಮ್ಮ ಮನೆಯ ಕೆಳಗೆ ಶ್ರೀನಿವಾಸ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು ನಮ್ಮ ಅಂಗಡಿಯ ವ್ಯವಹಾರವನ್ನು ನನ್ನ ಗಂಡನೆ ನೋಡಿಕೊಂಡು ಬಂದಿರುತ್ತಾರೆ. ನಮ್ಮ ಅಂಗಡಿಯ ಮೇಲಿನ ಅಂತಸ್ಥಿನಲ್ಲಿ ನಾವು ಮನೆ ಮಾಡಿಕೊಂಡು ವಾಸವಾಗಿರುತ್ತೆವೆ. ನನ್ನ ಗಂಡನಾದ ಶ್ರೀ ಬಾಲಾಜಿ ತಂದೆ ಅಂಬಾಜಿರಾವ ಘನಾತೆ ರವರು ಈಗ ಸುಮಾರು ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡಿಕೊಂಡು ಬಂದಿದ್ದು ವ್ಯಾಪಾರ ಸಂಬಂದ ಬ್ಯಾಂಕಿನಲ್ಲಿ ಸಾಲ ಮತ್ತು ನನ್ನ ಗಂಡನಿಗೆ ಪರಿಚಯಸ್ಥರಲ್ಲಿ ವ್ಯಾಪಾರದ ಸಂಬಂದ ಸಾಲ ಮಾಡಿದ್ದು ಇರುತ್ತದೆ. ಹಣ ಮರಳಿಸುವ ಕುರಿತು ಯಾರು ಕೂಡಾ ನನ್ನ ಗಂಡನಿಗೆ ಒತ್ತಾಯ ಮಾಡಿರುವದಿಲ್ಲ. ನನ್ನ ಗಂಡನು ಸಾಲದ ವಿಷಯವಾಗಿ ಪ್ರತಿ ದಿವಸ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು. ನಾನು, ನಮ್ಮ ಮಾವ ಹಾಗೂ ನಮ್ಮ ಮನೆಯವರು ನನ್ನ ಗಂಡನಿಗೆ ಮಧ್ಯ ಸೇವನೆ ಮಾಡದಂತೆ ತಿಳಿ ಹೇಳಿದರು ಕುಡಾ ನನ್ನ ಗಂಡ ಮಧ್ಯ ಸೇವೆನೆ ಮಾಡುತ್ತಾ ಬಂದಿದ್ದು ಇರುತ್ತದೆ. ಇತಿತ್ತಲಾಗಿ ಹಗಲು ಹೊತ್ತಿನಲ್ಲಿ ಕೂಡಾ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು ಇರುತ್ತದೆ. ಮೊನ್ನೆ ದಿನಾಂಕ 19.09.2018 ರಂದು ಬೆಳ್ಳಿಗ್ಗೆ 9:30 ಗಂಟೆಯ ಸುಮಾರಿಗೆ ನನ್ನ ಗಂಡನು ನಮ್ಮ ಅಂಗಡಿಯ ಪಕ್ಕದಲ್ಲಿರುವ ಶಟ್ಟಿ ಕಾಂಪ್ಲೇಕ್ಸ ಹತ್ತಿರ ಹೋಗಿ ಬರುತ್ತೆನೆ ಅಂತ ಹೇಳಿ ಹೋಗಿದ್ದು ಬೆಳ್ಳಿಗ್ಗೆ 10:30 ಗಂಟೆಯಾದರು ನನ್ನ ಗಂಡನು ಬರದೆ ಇದ್ದಾಗ ನಾನು ನನ್ನ ಗಂಡನ ಮೊನಂ 8310968774, 9008014351 ನೇದ್ದಕ್ಕೆ ಕರೆ ಮಾಡಿದ್ದು ಆಗ ನನ್ನ ಗಂಡನು ಕರೆ ಸ್ವಿಕರಿಸಿ ಮನೆಗೆ ಬರುತ್ತೆನೆ ಅಂತ ಹೇಳಿದ್ದು ಅದೆ ರೀತಿ ನಾನು ಆಗಾಗ ನನ್ನ ಗಂಡನಿಗೆ ಪೋನ ಮಾಡಿದ್ದು ಮನೆಗೆ ಬರುತ್ತೆನೆ ಅಂತ ಹೇಳುತ್ತಾ ಬಂದಿದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮತ್ತೆ ಪೋನ ಮಾಡಿದಾಗ ನನ್ನ ಗಂಡ ಮನೆಗೆ ಬರುತ್ತಾ ಇದ್ದೆನೆ ಅಂತ ಹೇಳಿದ್ದು ನಂತರ ಅವರ ಪೋನಿಗೆ ಕರೆ ಮಾಡಿದಾಗ ಸ್ವಿಚ್ ಆಪ್ ಅಂತ ಬಂದಿದ್ದು ಇರುತ್ತದೆ. ಸಾಯಂಕಾಲ 5 ಗಂಟೆಯಾದರು ನನ್ನ ಗಂಡನು ಮನೆಗೆ ಬರದೆ ಇದ್ದಾಗ ನಾನು ನಮ್ಮ ಮಾವ ಮತ್ತು ಮನೆಯವರೆಲ್ಲರು ಕೂಡಿಕೊಂಡು ನಮಗೆ ಪರಿಚಯಸ್ಥರಲ್ಲಿ ವಿಚರಿಸಿದ್ದು ಮತ್ತು ಕಲಬುರಗಿ ನಗರದ ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಗಂಡನು ಪತ್ತೆಯಾಗಿರುವದಿಲ್ಲ ಮತ್ತು ಇಲ್ಲಿಯವರೆಗೆ ನನ್ನ ಗಂಡನು ಮರಳಿ ನಮ್ಮ ಮನೆಗೆ ಬಂದಿರುವದಿಲ್ಲ. ನಾನು ನನ್ನ ಗಂಡನ ಮೊಬೈಲ ನಂಬರಗಳಿಗೆ ಪದೆ ಪದೆ ಕರೆ ಮಾಡುತ್ತಿದ್ದು ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತಿದೆ. ದಿನಾಂಕ 19.09.2018 ರಂದು ಬೆಳ್ಳಿಗ್ಗೆ 9:30 ಗಂಟೆಯಿಂದ ನನ್ನ ಗಂಡನು ಕಾಣೆಯಾಗಿದ್ದು ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ನನ್ನ ಗಂಡನ ಚಹರಾ ಪಟ್ಟಿ ಈ ಕೆಳಗಿನಂತಿರುತ್ತದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:10/08/2018 ರಂದು ಜೇವರ್ಗಿ ತಾಲ್ಲೂಕಿನ ಮುತ್ತಕೋಡ ತಾಂಡಾದಲ್ಲಿಯ ನವಜಾತ ಹೆಣ್ಣುಮಗು ನಮ್ಮ ಶಿಶುಗೃಹದಲ್ಲಿ ಪಾಲನೆ ಪೋಷಣೆಗಾಗಿ ಸೇರ್ಪಡೆಯಾಗಿದ್ದು ಆ ಮಗುವಿಗೆ ಶ್ರಾವ್ಯ ಅಂತಾ ಹೆಸರಿಟ್ಟಿದ್ದು ಸದ್ಯ ಆ ಮಗುವಿಗೆ 40 ದಿವಸವಾಗಿದ್ದು ದಿನಾಂಕ:10/09/2018 ರಂದು ಮಗುವಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಸದರಿ ಮಗು ಇಂದು ದಿನಾಂಕ:21/09/2018 ರಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ವೈದ್ಯರ ಸಲಹೆ ಮೇರೆಗೆ ಕೀಡ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮಗು 4.30 ಪಿ.ಎಂ ಸುಮಾರಿಗೆ ಮೃತ ಪಟ್ಟಿದ್ದು ಸದರಿ ಮಗುವಿನ ಮೃತದೇಹ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ ಕಾರಣ ಶ್ರಾವ್ಯ 40 ದಿವಸದ ಹೆಣ್ಣುಮಗು ಅನಾರೋಗ್ಯದಿಂದ ಬಳಲಿ ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತದೆ ಅಂತಾ ದ್ದು ಈ ಬಗ್ಗೆ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರ ಹಲಕರಣಿ ಮಠ ಉ:ಅಮೂಲ್ಯ ಶಿಶುಗೃಹದ ಅಧೀಕ್ಷಕರು ಸಾ:ವಿಜಯನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ. 23-7-2018  ರಂದು ಮದ್ಯಾನ ನಾನು ಮತ್ತು ನನ್ನ ಹೆಂಡತಿ ನಾಗಮ್ಮ ಇಬ್ಬರು ಕೂಡಿಕೊಂಡು ಮದ್ಯಾನ 1-00 ಗಂಟೆಯ ಸುಮಾರಿಗೆ ನಾವು ಕಣ್ಣಿ ಮಾರ್ಕಟನಲ್ಲಿ ನಮ್ಮ ಬ್ಯಾಗಗಳನ್ನು ಇಟ್ಟು ಹೀರಾಪೂರದಲ್ಲಿರುವ ನಮ್ಮ ಸಮ್ಮಂದಿಕರಿಗೆ ಮಾತಾಡಿಸಿಕೊಂಡು ಬರಲು ನಾವಿಬ್ಬರು ಕೂಡಿಕೊಂಡು ಕಣ್ಣಿ ಮಾರ್ಕೆಟದಿಂದ ಹೀರಾಪೂರಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾನ 1-40 ಗಂಟೆಯ ಸುಮಾರಿಗೆ ಹೀರಾಪೂರ ಸರ್ಕಲದಲ್ಲಿ ರೋಡ ಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ವೇಳಗೆ ನಮ್ಮ ಹಿಂದಿನಿಂದ ಅಂದರೆ ಬಸ್ಸ ಸ್ಟ್ಯಾಂಡ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.38 ಎಫ್. 930 ನೆದ್ದರ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಇತನು ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನಿಂದ ನಡೆಯಿಸಿಕೊಂಡು ಬಂದು ನನ್ನ ಪಕ್ಕದಲ್ಲಿ ಬರುತಿದ್ದ ನನ್ನ ಹೆಂಡತಿಗೆ ಡಿಕ್ಕಿ ಹೊಡೆದಾಗ ನನ್ನ ಹೆಂಡತಿ ಜೋರಾಗಿ ಕೆಳಗೆ ಬಿದ್ದಳು ಆಗ ಅವಳ ತಲೆಗೆ ಬಾರಿ ಗುಪ್ತ ಪೆಟ್ಟಾಗಿದ್ದು ಅಲಲ್ಲಿ ತರಚಿದ ಗಾಯಗಳಾಗಿದ್ದು,  ಆಗ ಸದರಿ ಬಸ್ಸ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಡಿಪೂ ನಂ.1 ಬೀದರ ಹಾಗೂ ಕಂಡಕ್ಟರ ಲಕ್ಷ್ಮಣ ತಂದೆ ವೈನಾಥ ವಗ್ಗೆ ಡಿ.ಪೂನಂ.1 ಬೀದರ ಮೂರು ಜನರು ಕೂಡಿಕೊಂಡು ನನ್ನ  ಹೆಂಡತಿ ಅದೇ ಬಸ್ಸಿನಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಸದ್ಯ ನನ್ನ ನಾಗಮ್ಮಾ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ.ಕಾರಣ ಸದರಿ ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.38 ಎಫ್. 930 ನೆದ್ದರ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ್ದು  ನನ್ನ ಹೆಂಡತಿ ನಾಗಮ್ಮ ಇವಳು ದಿನಾಂಕ. 23-7-2018 ರಿಂದ ಇವತ್ತಿನವೆರೆಗೆ ಸದರಿ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದು   ಉಪಚಾರದಲ್ಲಿ ಗುಣ ಮುಖಳಾಗದೆ ಇಂದು ದಿನಾಂಕ. 21-8-2018 ರಂದು ಮದ್ಯಾನ 2-00 ಪಿ.ಎಂ.ಕ್ಕೆ. ಗಂಗಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.  ಅಂತಾ  ಕಾರಣ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಹಣಮಂತ  ತಂದೆ ಹಿರಗೆಪ್ಪಾ ಮುಗಡಿ ಸಾ/ ತಾವರಗೇರಾ ತಾಜಿ/ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಹಾಂತೇಶ ತಂದೆ ಗಿರೇಪ್ಪ ಚನ್ನೂರ ಸಾ||ಹಳ್ಯಾಳ ತಾ||ಅಫಜಲಪೂರ ರವರು ದಿನಾಂಕ 18/09/2018 ರಂದು ನಾನು ಹಾಗು ನನ್ನ ತಮ್ಮನಾದ ಸಂತೋಷ ಇಬ್ಬರು ಕೂಡಿಕೊಂಡು ಅಫಜಲಪೂರದ ಬಸಡಿಪೋದಲ್ಲಿ ಮೆಕ್ಯಾನಿಕ್ ಅಂತ ಕೆಲಸ ಮಾಡುತಿದ್ದ ನಮ್ಮೂರ ಪ್ರಕಾಶನಿಗೆ ನಾವಿಬ್ಬರು ಬೇಟಿಯಾಗಿ ಬಸ ಡಿಪೋದಿಂದ ಅಫಜಲಫೂರದ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದಾಗ ಬಸಡಿಪೋ ಹತ್ತಿರ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ ಸವಾರನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಾದ ಸಂತೋಷನಿಗೆ ಡಿಕ್ಕಿಪಡಿಸಿದನು ಎಬ್ಬಿಸಿ ನೋಡಲು ಬಲ ತಲೆಗೆ ಮೆಲಕಿಗೆ ಮುಖದ ಮೇಲೆ ಭಾರಿ ರಕ್ತಗಾಯವಾಗಿದ್ದು ಮೋಟಾರ್ ಸೈಕಲ ಸವಾರನು ಸ್ವಲ್ಪ ಮುಂದೆ ಹೋಗಿ ನಿಂತನು ಸದರಿ ಮೋಟಾರ್ ಸೈಕಲ್ ನಂಬರ ಕೆಎ-32 ಇಆರ್ -5455 ನೇದ್ದು ಇದ್ದು ಸದರಿಯವನಿಗೆ ಹೆಸರು ಕೆಳಲು ತನ್ನ ಹೆಸರನ್ನು ಹೆಳದೆ ಮೋಟಾರ್ ಸೈಕಲ್ ಸಮೇತ ಹೋದನು ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ನಂತರ ಅಫಜಲಪೂರದ ಖಾಸಗಿ ದವಾಖಾನೆಯಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ  ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀಮತಿ ನಿರ್ಮಲಾ ಗಂಡ ರಮೇಶ ಜಗದಿ ಸಾ: ಚಿಂಚೋಳಿ ಹಾ:ವ: ಅಫಜಲಪೂರ ರವರು ದಿನಾಂಕ 20-09-2018: ರಂದು ತನ್ನ ಮಗಳಾದ ಲಕ್ಷ್ಮಿ ಇವಳನ್ನು ಕರೆದುಕೊಂಡು ಮೋಟಾರ ಸೈಕಲ್ ನಂ ಕೆಎ-33-ಕೆ-3656 ನೇದ್ದರ ಮೇಲೆ ಪ್ರತಿ ದಿನದಂತೆ  ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗುತ್ತಿದ್ದಾಗ ಬೆಳಿಗ್ಗೆ 8:30 ಗಂಟೆಗೆಯ ಸುಮಾರಿಗೆ ಮನೆಯಿಂದ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಸೇವಾ ಗ್ಯಾಸ್ ಎಜನ್ಸಿ ಹತ್ತಿರ ಎಡ ರೋಡಿಗೆ ಇಂಡಿಕಾ ಕಾರ ನಂ ಕೆಎ-29-ಪಿ-500 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಡಿಕ್ಕಿ ಪಡೆಸಿ ವಾಹನ ನಿಲ್ಲಿಸದೇ ಓಡಿ ಹೋಗಿ ಅಫಜಲಪೂರ ಹತ್ತಿರ ಇರುವ ನೀರಾವರಿ ಆಫೀಸ್ ಹತ್ತಿರ ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ವಾಹನ ಚಾಲಕನ ಮೇಲೆ ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:19/09/2018 ರಂದು ನಾನು ಕೂಲಿಕೆಲಸ ಮೂಗಿಸಿಕೊಂಡು ಸಯಂಕಾಲ ಮನೆಗೆ ಬಂದಿದ್ದು ನಾನು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ಮಹಾದೇವ ತಂದೆ ನಿಂಗರಾಜ ಸಾವಳಗಿ ಇವರು ನನಗೆ ಫೋನಮಾಡಿ ತಿಳಿಸಿದ್ದೇನಂದರೆ ನಿನ್ನ ಮಗನಾದ ರುತಿಕನು ದೀಪಕ ಖಂಡೊಳ ಇವರ ಮನೆಯ ಮುಂದಿನ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಮೊಟಾರ್ ಸೈಕಲ್ ಸವಾರನು ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಿನ್ನ ಮಗ ರುತಿಕನ ಎಡಗಾಲ ಮೊಳಕಾಲ ಎಡಗಹಣೆಗೆ ತರಚಿದ ರಕ್ತಗಾಯ ಹಾಗೂ ತಲೆಯ ಹಿಂಭಾಗಕ್ಕೆ ಗುಪ್ತಗಾಯವಾಗಿ ಎಡಗ ಕಿವಿಯಿಂದ ರಕ್ತ ಸೊರುತಿದೆ. ಅಂತಾ ತಿಳಿಸಿದ್ದರಿಂದ ನಾನು ಹಾಗೂ ನನ್ನ ಹೆಂಡತಿಯಾದ ಮಹಾದೇವಿ ಇಬ್ಬರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಅಪಾಘತವಾಗಿದ್ದು ನಿಜವಿದ್ದು ನನ್ನ ಮಗನ ತಲೆಯ ಹಿಂಭಾಗಗಕ್ಕೆ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿತ್ತು ಹಾಗೂ ಎಡಗಾಲ ಮೊಳಕಾಲಿಗೆ ಎಡಹಣೆಗೆ ತರಚಿದ ರಕ್ತಗಾಯವಾಗಿದ್ದು ಈ ಘಟನೆಯಾದಾಗ ಸಾಯಂಕಾಲ 6-00 ಗಂಟೆ ಆಗಿರುತ್ತದೆ ಅಂತಾ ಮಹಾದೇವನು ತಿಳಿಸಿರುತ್ತಾನೆ. ಅಪಘಾತ ಪಡಿಸಿದ ಮೊ.ಸೈ ನೋಡಲಾಗಿ ಬಜಾಜ್ ಕಂಪನಿಯ ಅವೆಂಜರ್ ನಂಬರ್, ಕೆಎ32-ಇಎಲ್0195 ಕಪ್ಪು ಬಣ್ಣದದಿದ್ದು ಅದರ ಚಾಲಕನು ಅಲ್ಲಿ ಜನರು ಸೇರುವುದನ್ನು ಕಂಡು ಮೊಟಾರ್ ಸೈಕಲ್ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟಿ ಓಡಿಹೊಗಿರುತ್ತಾನೆ. ಮತ್ತೆ ನೊಡಿದ್ದಲ್ಲಿ ಅವನನ್ನು ಗುರ್ತಿಸುತ್ತೇನೆ. ನನ್ನ ಮಗನಿಗೆ ಉಪಚಾರ ಕುರಿತು ನಾನು ನನ್ನ ಹೆಂಡತಿ ಹಾಗೂ ನಮ್ಮೂರಿನ ಮಹಾದೇವ ಸಾವಳಗಿ ಹಾಗೂ ಅನೀಲ ಹೊಸಮನಿ ಸೇರಿಕೊಂಡು ಬಂದು ಖಾಸಗಿ ವಾಹನದಲ್ಲಿ ಯುನಿಟೇಡ್ ಆಸ್ಪತ್ರೆ ಕಲಬುರಗಿಗೆ ತಂದು ಉಪಚಾರ ಕುರಿತು ಮಾಡಿರುತ್ತೇವೆ. ಕಾರಣ ನನ್ನ ಮಗನಿಗೆ ಅಪಘಾತ ಪಡಿಸಿದ ವಾಹನ ಹಾಗೂ ಅದರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಶ್ರೀ ರುತಿಕನ ತಂದೆ  ಹಣಮಂತ ತಂದೆ ಹವಳಪ್ಪಾ ಭಾವಿಕಟ್ಟಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.