POLICE BHAVAN KALABURAGI

POLICE BHAVAN KALABURAGI

27 August 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ದತ್ತಪ್ಪಾ ತಂದೆ ಶಿವಣ್ಣಾ ಕಣ್ಣಿ ಸಾ:ಚಿಂಚೋಳಿ (ಬಿ) ತಾ:ಆಳಂದ ಹಾ:ವ:ಕೈಲಾಸ ನಗರ ಈಶ್ವರ ಗುಡಿಯ ಹತ್ತಿರ ಕಲಬುರಗಿ ರವರು ದಿನಾಂಕ:25/08/2018 ರಂದು ನಮ್ಮ ಅತ್ತೆಯವರಾದ ಶ್ರೀಮತಿ ಲಕ್ಷ್ಮೀಬಾಯಿ ಹಾಗೂ ನಮ್ಮ ಮಗಳು ಅಂಕಿತಾ ಇವರು ನಮ್ಮ ಮನೆಗೆ 10.30 ಪಿ.ಎಂಕ್ಕೆ ಕೀಲಿ ಹಾಕಿಕೊಂಡು ಪಕ್ಕದ ರಾಜೇಂದ್ರ ಬಡಗೇರ ಅವರ ಮನೆಯಲ್ಲಿ ಮಲಗಿಕೊಂಡು ಬೆಳಗ್ಗೆ ದಿನಾಂಕ:26/08/2018 ರಂದು 8.00 ಎ.ಎಂಕ್ಕೆ ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಕೀಲಿ ಮುರಿದಿದ್ದನ್ನು ಕಂಡು ನನಗೆ ಪೋನ ಮಾಡಿ ಹೇಳಿದ್ದು ನಾನು ನಮ್ಮ ಊರಿನಿಂದ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದಿದ್ದು ಮನೆಯಲ್ಲಿನ ಟ್ರಂಕ್‌ ಕೀಲಿ ಕೊಂಡಿ ಮುರಿದು ಅದರಲ್ಲಿದ್ದ ಬಂಗಾರದ ಬೆಳ್ಳೀಯ ಆಭರಣಗಳು ಒಟ್ಟು 2,04,500/-ರೂ ಬೆಲೆ  ಬಾಳುವ ಬಂಗಾರ ಬೆಳ್ಳಿ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಕಾಶಿನಾಥ ತಂದೆ ಮಾಪಣ್ಣಾ ಗವಾರೆ ಸಾ : ಬ್ಯಾಲಹಳ್ಳಿ  (ಕೆ) ತಾ : ಬಾಲ್ಕಿ ಜಿ : ಬೀದರ  ರವರ ಮಗ ಪ್ರಕಾಶ ಈತನು ದಿನಾಂಕ 25/08/2018 ರಂದು ತಮ್ಮೋರಿನ  ಬಾಲಾಜಿ ತಂದೆ ಗಂಗಾರಾಮ  ಇತನ ಜೋತೆಯಲ್ಲಿ   ಸಾಯಬಣ್ಣಾ ಇತನ ಹೇಸರಿನಲ್ಲಿದ್ದ ಟ್ರ್ಯಾಕ್ಟರ  ಇಂಜಿನ ನಂ  ಕೆಎ-39-ಟಿ-5346 ಟ್ರ್ಯಾಲಿ ನಂ ಕೆಎ-39-ಟಿ-5347 ನೇದ್ದರಲ್ಲಿ ಓಳಕಲ್ಲು ತುಂಬಿಕೊಂಡು ಬರುವು ಗೋಸ್ಕರ  ತಮ್ಮ ಗ್ರಾಮದಿಂದ ಟ್ರ್ಯಾಕ್ಟರ ಚಲಾಯಿಸಿಕೊಂಡು ಹೇಬ್ಬಾಳ ಸಿಮಾಂತರದ  ಕಲ್ಲು ಬಂಡೆ ಸಿಗುವ ಹಾಳು ಬಿದ್ದ  ಜಮೀನಿಗೆ ಬಂದು ಅಲ್ಲಿ ಅರ್ಧಾ ಟ್ರ್ಯಾಲಿ  ಓಳಕಲ್ಲು ತುಂಬಿದ್ದ ಟ್ರ್ಯಾಕ್ಟರನ್ನು  3-00 ಪಿ,ಎಂ ದ ಸುಮಾರಿಗೆ  ಟ್ರ್ಯಾಕ್ಟರನ್ನು  ಚಾಲು ಮಾಡಿ ಹೋಡ್ಡು  ಏರಿಸುವಾಗ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಕಲ್ಲು  ಹೆಚ್ಚಾಗಿದ್ದ  ಪ್ರಯುಕ್ತ   ಒಮ್ಮಲ್ಲೇ  ಟ್ರ್ಯಾಕ್ಟರ  ಇಂಜಿನ  ಮುಂದಿನ ಭಾಗ ಟಾಯರೆ ಸಮೇತ  ಮೇಲೆದ್ದು ಹಿಂದಿನ ಟ್ರ್ಯಾಲಿಗೆ  ಹೋಗಿ ಹತ್ತಿದ್ದರಿಂದ ಮೃತನು  ಇಂಜೀನ ಮತ್ತು ಟ್ರ್ಯಾಲಿ ಮದ್ಯ ಸಿಕ್ಕಿಕಾಕೊಂಡು ಟ್ರ್ಯಾಕ್ಟರ  ಸ್ಠೇರಿಂಗ  ಮೃತನ  ಎದೆ ಹಾಗೂ ಕುತ್ತಿಗೆ ಮೇಲೆ  ಜೋರಾಗಿ ಹತ್ತಿಕೊಂಡಿದ್ದರಿಂದ    ಉಸಿರುಗಟ್ಟಿ  ಗುಪ್ತಗಾಯವಾಗಿ  ಅಲ್ಲೆ   ಮೃತ ಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಶಮಶುನ್ನಿಸಾಬೇಗಂ ಗಂಡ ಅಬ್ದುಲ್‌ ಖಾದರ ಸಾ:ಮದೀನಾ ಕಾಲೋನಿ ಕಲಬುರಗಿ ರವರು ದಿನಾಂಕ:21/05/2018 ರಂದು ನಾನು ನನ್ನ ಗಂಡ ಅಬ್ದುಲ್‌ ಖಾದರ ನನ್ನ ಸೊಸೆ ಸಣ್ಣ ಸೊಸೆ ಸೈಯದಾ ಅಹ್ಮದಿ ಹುಸನಾ ಪೀರಾನಿ ಕೂಡಿಕೊಂಡು ನಮ್ಮ ಮನೆಯಲ್ಲಿ ಇದ್ದು ಅಂದು ಮಧ್ಯಾನ 2.30 ಗಂಟೆಗೆ ನನ್ನ ಸೊಸೆಯಾದ ಸೈಯದಾ ಅಹ್ಮದಿ ಹುಸನಾ ಪೀರಾನಿ ಇವಳ ತಂದೆಯಾದ ಸೈಯದ ಖಮರುದ್ದಿನ ಖಾದ್ರಿ, ಅವಳ ಚಿಕ್ಕಪ್ಪ ಸೈಯದ ಜಹೀರ ಖಾದ್ರಿ ಅವಳ ತಾಯಿಯಾದ ಸೈಯದಾ ಸಭೀಯಾಬೇಗಂ ಅವಳ ಚಿಕ್ಕಪ್ಪ ಸೈಯದ ನಜೀರ ಖಾದ್ರಿ ಮತ್ತು ಅವರ ಸಂಬಂಧಿಕರಾದ ಜೀಯಾ, ಸಾಲೇಹಾ ಹಾಗೂ ಇನ್ನೂ ಕೆಲವು ಜನರು ಕೂಡಿಕೊಂಡು ಟಾಟಾ ಸುಮೊ ಮತ್ತು ಆಟೋ ತೆಗೆದುಕೊಂಡು ನಮ್ಮ ಮನೆಗೆ ಬಂದಿದ್ದು ಆಗ ನನ್ನ ಗಂಡ ಬೀಗರು ಬಂದಿದ್ದಾರೆ ಅಂತ ತಿಳಿದು ಅವರಿಗೆ ಮನೆಯಲ್ಲಿ ಕೂಡಲು ಹೇಳಿದ್ದು ಸದರಿಯವರು ಅದನ್ನು ಲೆಕ್ಕಿಸದೆ ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಮಗಳಿಗೆ ಮದುವೆಯಲ್ಲಿ ಹಾಕಿದ ಬಂಗಾರ ನಮಗೆ ಕೊಡಿರಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅವರಲ್ಲಿ ಜಹೀರ ಇತನು ತನ್ನ ಹತ್ತಿರ ಇದ್ದ ಮಾರಕಾಸ್ತ್ರವನ್ನು ನನ್ನ ಗಂಡನಿಗೆ ತೋರಿಸಿ ನಮ್ಮ ಬಂಗಾರ ನಮಗೆ ಕೊಡಿ ಅಂತಾ ಬೆದರಿಕೆ ಹಾಕಿದ್ದು ಮತ್ತು ನನ್ನ ಗಂಡನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಗಂಡನಿಗೆ ಎಳೆದಾಡಿದ್ದು ಆಗ ಸೈಯದ ಖಮರುದ್ದಿನ ಖದ್ರಿ ಇತನು ಕೈಯಿಂದ ನನ್ನ ಗಂಡನ ಕಪಾಳ ಮೇಲೆ ಹೊಡೆದು ನನ್ನ ಗಂಡನಿಗೆ ನೇಲಕ್ಕೆ ಕೆಡವಿದನು. ಆಗ ನನ್ನ ಸೊಸೆಯ ಸಂಬಂಧಿಕರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ಸೈಯದ ಖಮರುದ್ದಿನ ಖಾದ್ರಿ ಇತನು ನನ್ನ ಕುತ್ತಿಗೆ ಹಿಡಿದು ಬುಡ್ಡಿ ರಾಂಡ ತೇರೆಕೊ ತೆರೆ ಮರದಕೊ ತೆರೆ ಬಚ್ಚೊಕೊ ಚೋಡತಾನಹಿ ಸಬಕೊ ಖತಮ ಕರಕೇಹಿ ಚೋಡತಾ ಅಂತಾ ಬೈಯುತ್ತಾ ದಬ್ಬಿಕೊಟ್ಟಿದ್ದು ಆಗ ನಾನು ನೆಲದ ಮೇಲೆ ಬಿದ್ದಾಗ ನನ್ನ ಬಲ ಹಲ್ಲು ಜಖಮ ಆಗಿರುತ್ತದೆ. ಸದರಿಯವರು ನನಗೆ ನನ್ನ ಗಂಡನಿಗೆ ಹೊಡೆಬಡೆ ಮಾಡುತ್ತಿದ್ದರಿಂದ ನಾನು ಮನೆಯ ಹೊರಗೆ ಬಂದು ಚಿರಾಡಿದ್ದು ಆಗ ನಮ್ಮ ಬಡಾವಣೆ ಜನರು ನಮ್ಮ ಮನೆಯ ಹತ್ತಿರ ಬಂದಾಗ ನನ್ನ ಸೊಸೆಯ ಸಂಬಂಧಿಕರು ನಮಗೆ ಹೊಡೆಯುವದನ್ನು ಬಿಟ್ಟು ಮನೆಯಲ್ಲಿದ್ದ ನಮ್ಮ ಸೊಸೆಯನ್ನು ಕರೆದುಕೊಂಡು ಹೋಗಿದ್ದು ಇರುತ್ತದೆ. ನನ್ನ ಸೊಸೆ ಅವರ ಸಂಗಡ ಹೋಗುವಾಗ ಮನೆಯಲ್ಲಿದ್ದ ನಗದು ಹಣ 30000/-ರೂ ಮತ್ತು 10 ತೊಲೆ ಬಂಗಾರದ ಆಭರಣಗಳು ತೆಗೆದುಕೊಂಡು ಹೋಗಿದ್ದು ಇರುತ್ತದೆ. ನನ್ನ ಮಗ ಅಬ್ದುಲ್‌ ಗಫಾರ ಇತನಿಗೆ ರಾಯಚೂರ ಜಿಲ್ಲೆಯ ಮಾನ್ವಿ ಪಟ್ಟಣದ ಸೈಯದ ಖಮರುದ್ದಿನ ಖಾದ್ರಿ ಇವಳ ಮಗಳಾದ ಸೈಯದಾ ಅಹ್ಮದಿ ಹುಸನಾ ಪೀರಾನಿ ಇವಳೊಂದಿಗೆ 2017 ನೇ ಸಾಲಿನ ನವ್ಹಂಬರ ತಿಂಗಳಿನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಮಾಡಿದ್ದು ಮದುವೆ ನಂತರ ಸೊಸೆ ಮಗಾ ಸುಮಾರು ಸಲ ತನ್ನ ತವರು ಮನೆಗೆ ಹೋಗಿ ಬರುವದು ಮಾಡುತ್ತಿದ್ದರು ಒಟ್ಟಾರೆ ಮಗ ಮತ್ತು ಸೊಸೆ ವೈವಾಹಿಕ ಜೀವನವು ತುಂಬಾ ಸಂತೋಷಕರವಾಗಿತ್ತು ಆದರೂ ಕೂಡಾ ಸದರಿಯವರು ನಮ್ಮ ಮನೆಗೆ ಬಂದು ನಮ್ಮ ಸಂಗಡ ಜಗಳ ಮಾಡಿ ಹೊಡೆಬಡೆ ಮಾಡಿ ನಮಗೆ ತೊಂದರೆ ಕೊಟ್ಟವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಕುಸುಮಾವತಿ ಗಂಡ ಚಂದ್ರಕಾಂತ ಬಿರಾದಾರ ಸಾ||ಭೋಸಗಾ ತಾ||ಅಫಜಲಪೂರ ರವರ ಗಂಡನಾದ ಚಂದ್ರಕಾಂತ ಇವರಿಗೆನಾವು ಇಬ್ಬರು ಹೆಂಡತಿಯರಿದ್ದು 1) ಮಹಾದೇವಿ 2) ನಾನು ಇರುತ್ತೇನೆ ಮಹಾದೇವಿ ರವರಿಗೆ ಮಕ್ಕಳಾಗದ ಕಾರಣ ನನಗೆ ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದು ಈಗ ನಮಗೆ ಎರಡು ವರ್ಷದ ಲಕ್ಷ್ಮಿಕಾಂತ ಅಂತ ಮಗ ಇರುತ್ತಾನೆ ನನ್ನ ಗಂಡನು ದಿನಾಲು ಮದ್ಯಪಾನ ಸೇವನೆ ಮಾಡುತಿದ್ದನು ನಾನು ಹಾಗು ನಮ್ಮ ಅಕ್ಕಳಾದ ಮಹಾದೇವಿ ಇಬ್ಬರು ನನ್ನ ಗಂಡನಿಗೆ ಈ ರೀತಿ ದಿನಾಲು ಕುಡಿದರೆ ಸಂಸಾರ ಹಾಳಾಗುತ್ತೆ ಕುಡಿಯ ಬೇಡಿ ಅಂತ ಹೇಳಿದರು ಕೇಳದೆ ಹಾಗೇಯೆ ಮಾಡುತಿದ್ದನು.ನಮ್ಮ ಅಕ್ಕಳಾದ ಮಹಾದೇವಿ ಇವಳು ಈಗ ಕೆಲವು ದಿನಗಳಿಂದ ತನ್ನ ತಂದೆಯವರಿಗೆ ಮಾತನಾಡಿಸಲು ತನ್ನ ತವರು ಮನೆಗೆ ಹೋಗಿರುತ್ತಾಳೆ. ನನ್ನ ತವರು ಮನೆ ಕೋಗನೂರ ಗ್ರಾಮ ಇದ್ದು ಈಗ ಕೆಲವು ದಿನಗಳಿಂದ ನಮ್ಮ ತಾಯಿ ನಮ್ಮ ಗ್ರಾಮದಲ್ಲಿಯೇ ಕೂಲಿಕೆಲಸ ಮಾಡಿಕೊಂಡು ಬೇರೆ ಮನೆ ಮಾಡಿ ವಾಸವಾಗಿರುತ್ತಾರೆ ಈಗ ನಾಲ್ಕು ದಿನಗಳ ಹಿಂದೆ ನಮ್ಮ ತಾಯಿ ಚಂಪಾವತಿ ನಮ್ಮ ಮನೆಗೆ ಬಂದಿದ್ದು  ನಾನು ನಮ್ಮ ತಾಯಿ ಇಬ್ಬರು ನನ್ನ ಗಂಡನಿಗೆ ದಿನಾಂಕ 25/08/2018 ರಂದು 10 00 ಎಎಮ್ ಸುಮಾರಿಗೆ ನಮ್ಮ ಮನೆಯಲ್ಲಿ ನನ್ನ ಗಂಡನಿಗೆ ಈ ರೀತಿ ಸರಾಯಿ ಕುಡಿಯುವದು ಒಳ್ಳೆಯದಲ್ಲ ಸಂಸಾರ ಕೆಡುತ್ತೆ ಅಂತ ಬುದ್ದಿ ಮಾತು ಹೇಳಿದಾಗ ನನ್ನ ಗಂಡ ನನಗೆ ಜೀವನ ಸಾಕಾಗಿದೆ ನಾನು ಸರಾಯಿ ಕುಡಿದು ಸಾಯುತ್ತೇನೆ ನೀವು ನನಗೆ ಏನು ಹೇಳಬೇಡಿ ಅಂತ ಅಂದು  ಅಲ್ಲಿಂದ ಹೋದನು. ನಂತರ ರಾತ್ರಿಯಾದರು ನನ್ನ ಗಂಡ ಮನೆಗೆ ಬಾರದ ಕಾರಣ ನಾನು ನನ್ನ ತಾಯಿಯೊಂದಿಗೆ ನಮ್ಮ ಭೋಸಗಾ ಗ್ರಾಮದ ನಮ್ಮ ತಾಯಿ ಮನೆಗೆ ಹೋಗಿರುತ್ತೇನೆ ನಂತರ ರಾತ್ರಿ 9.30 ಪಿಎಮ್ ಸುಮಾರಿಗೆ ನಮ್ಮ ಅಣ್ಣ ತಮ್ಮಕ್ಕಿಯ ನಮ್ಮ ಮನೆಯ ಬಾಜು ಮನೆಯವರಾದ ದತ್ತು ತಂದೆ ಸಾಯಿಬಣ್ಣ ಬಿರಾದಾರ ಈತನು ಓಡಿ ಬಂದು ನಮಗೆ ತಿಳಿಸಿದ್ದೆನೆಂದರೆ ನಾನು 8.30 ಪಿಎಮ್ ಸುಮಾರಿಗೆ ಮನೆಯ ಹತ್ತಿರ ಇದ್ದಾಗ ಚಂದ್ರಕಾಂತ ಈತನು ನಾನು ನೇಣು ಹಾಕಿಕೊಂಡು ಸಾಯುತ್ತೇನೆ ಅಂತ ಅನ್ನುತ್ತಾ ನಿಮ್ಮ ಮನೆಯಲ್ಲಿ ಬಾಗಿಲು ಮುಚ್ಚಿಕೊಂಡಿರುತ್ತಾನೆ ನಂತರ ನಾನು ಬಾಗಿಲು ಬಡಿದು ಕೂಗಿದರು ಬಾಗಿಲು ತರೆದಿರುವುದಿಲ್ಲ ಅಂತ ತಿಳಿಸಿದ ಬಳಿಕ ನಾನು ನಮ್ಮ ತಾಯಿ ಹಾಗು ಶಂಕರ ತಂದೆ ಬಾಪಣ್ಣ ಬಿರಾದಾರ ಎಲ್ಲರು  ಹೋಗಿ  ನಮ್ಮ  ಮನೆಯ ಬಾಗಿಲು  ಮುರಿದು  ನೋಡಲಾಗಿ  ನನ್ನ ಗಂಡನು  ಹಗ್ಗದಿಂದ  ಮನೆಯ  ಜಂತಿಗೆ  ನೇಣು  ಹಾಕಿಕೊಂಡು ಮೃತಪಟ್ಟಿರುತ್ತಾನೆ ನನ್ನ ಗಂಡನಾದ ಚಂದ್ರಕಾಂತ ತಂದೆ ಗುರುದೇವ ಬಿರಾದಾರ ವ||40 ವರ್ಷ ಇವರು ಸರಾಯಿ  ಕುಡಿತಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 25/08/2018 ರಂದು 8.30 ಪಿಎಮ್ ದಿಂದ 9.00 ಪಿಎಮ್ ಮದ್ಯದ ಅವದಿಯಲ್ಲಿ ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 August 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 23-08-2013 ರಂದು  ವಾತ್ಸಲ್ಯ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ, ಪಿ.ಎಸ್,ಐ. ಎಮ್.ಬಿ. ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ವಾತ್ಸಲ್ಯ ಆಸ್ಪತ್ರೆಯ ಕಂಪೌಂಡ  ಇನ್ನು ಸ್ವಲ್ಪ ದೂರ ಇರುವಾಗಲೇ ಜೀಪನ್ನು ನಿಲ್ಲಿಸಿ ಎಲ್ಲರು ಇಳಿದು ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಇಸ್ಪಿಟ್ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ  14 ಜನರನ್ನು ಹಿಡಿದು  ಅವರ ಹೆಸರು ವಗೈರಾ ವಿಚಾರಿಸಲಾಗಿ 1) ಕುಮಾರ ತಂದೆ ಸಿದ್ದಣ್ಣ ಬೆಳಮಗಿ ಸಾ. ಎಸ್.ಬಿ.ಟೆಂಪಲ್ ರೋಡ ಕಲಬುರಗಿ, 2) ಭರತ ತಂದೆ ಉಮೇಶ ಪಾಟೀಲ ಸಾ. ಲಾಲಗಿರಿ ಕ್ರಾಸ್ ಕಲಬುರಗಿ, 3) ನಾಗರಾಜ ತಂದೆ ಸಿದ್ದಣ್ಣ ಮೆಳಕುಂದಿ, ಸಾ. ಖಾದ್ರಿ ಚೌಕ ಕಲಬುರಗಿ 4) ಮನೋಜಕುಮಾರ ತಂದೆ ಸ್ವರಾಜ ಬ್ಯಾಟಿ ಸಾ: ಮಾಣಿಕೇಶ್ವರ ನಗರ  ಕಲಬುರಗಿ 5) ನಾಗೇಶ ತಂದೆ ಶ್ರೀಮಂತ ಪರೀಟ ಸಾ.ಪೂಜಾ ಕಾಲೊನಿ ಕಲಬುರಗಿ 6) ಸಿದ್ದು  ತಂದೆ ಮಲಕಯ್ಯ ಮಠಪತಿ  ಸಾ: ಮಾಣಿಕೇಶ್ವರ ನಗರ  ಕಲಬುರಗಿ 7) ರಾಜು ತಂದೆ ಶಿವಶರಣ ಸಲಗರ ಸಾ: ಗಂಜ್ ಕಾಲೊನಿ  ಕಲಬುರಗಿ 8) ಅನಿಲ ತಂದೆ ವಿನಾಯಕರಾವ ಪಾಟೀಲ ಸಾ: ಬಸವೇಶ್ವರ ಕಾಲೊನಿ ಕಲಬುರಗಿ 9) ಆನಂದ  ತಂದೆ ಪಾಪಯ್ಯ  ಸಾ: ಸಿದ್ದೇಶ್ವರ ಕಾಲೊನಿ  ಕಲಬುರಗಿ 10) ಶಿವರಾಜ ತಂದೆ ಹಣಮಂತ್ರಾವ ಪಾಟೀಲ ಸಾ: ರಾಘವೇಂದ್ರ ಕಾಲೊನಿ  ಕಲಬುರಗಿ 11) ನಾಗರಾಜ ತಂದೆ ಶರಣಪ್ಪ ಪಾಟೀಲ ಸಾ: ರಾಜಾಪೂರ  ಕಲಬುರಗಿ 12) ಸಾಗರ ತಂದೆ ಸುಭಾಷ ಜಾಜಿ ಸಾ: ಐವಾನ ಏ ಷಾಹಿ ನಗರ  ಕಲಬುರಗಿ 13) ಅಮಿತ ತಂದೆ ಶಂಕರ ಪಾಟೀಲ ಸಾ: ಬ್ರಹ್ಮಪೂರ  ಕಲಬುರಗಿ 14) ಅಜಯ ತಂದೆ ಹನುಮಂತಯ್ಯ ಬದ್ರಿ ಸಾ: ಬಿದ್ದಾಪೂ ಕಾಲೊನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1.90.960/- ರೂ  ಹಾಗೂ 52 ಇಸ್ಪೀಟ್ ಎಲೆಗಳನ್ನು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಮಾಹಾತ್ಮಾ ಬಸವೇಶ್ವರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಲಕ್ಷ್ಮಣ ತಂದೆ ಮೈಲಾರಿ ಜಮದಾರ ಸಾ : ಕಲ್ಲಹಂಗರಗಾ ರವರು ದಿನಾಂಕ.25-8-2018 ರಂದು ರಾತ್ರಿ. 9-30 ಪಿ.ಎಂ.ಕ್ಕೆ. ಭೀಮಳ್ಳಿ ಗ್ರಾಮದ ನನ್ನ ಸಮ್ಮಂದಿಕರಾದ ಶಿವಾನಂದ ತಂದೆ ಕಾಶಪ್ಪಾ ನಾಟೀಕಾರ ಇತನು ಬಂದು ನನಗೆ ತಿಳಿಸಿದ್ದು ಏನೆಂದರೆ ತಾನು ಮತ್ತು ಪೀರಪ್ಪಾ ನಾಟೀಕಾರ ಇಬ್ಬರು ಕಲಬುರಗಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಭೀಮಳ್ಳಿಗೆ ಹೋಗುತಿರುವಾಗ ವಿಶ್ವರಾಧ್ಯ ಗುಡಿಯ ನಂತರ ಏಷಿಯನ ಪೇಂಟ ಗೋಡಾನ ಕ್ರಾಸ ಹತ್ತಿರ ಆಳಂದರೋಡಿಗೆ  ರಾತ್ರಿ ರೋಡಿಗೆ ಜನರು ವಾಹನ ಅಪಘಾತವಾಗಿದೆ ಅಂತಾ ಜನರು ನೆರೆದಿದ್ದು ಆಗ ನಾವಿಬ್ಬರು ಹೋಗಿ ನೋಡಲು ನನ್ನ ಮಗ  ಅಂಬರಾಯ ಜಮದಾರ ನಿದ್ದು   ವಿಚಾರಿಸಲು ಗೊತ್ತಾಗಿದ್ದು ಏನೆಂದರೆ 7-30 ಪಿ.ಎಂ.ದ ಸುಮಾರಿಗೆ ಆತನಿಗೆ ಯಾವುದೋ ಒಂದು ವಾಹನ ಅಪಘಾತ ಪಡಿಸಿದ್ದು ಎಡಗಾಲು ಮೋಳಕಾಲು ಕೆಳಗೆ ಭಾರಿ ರಕ್ತಗಾಯ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಸರಕಾರಿ ದವಾಖಾನೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದನು ನಂತರ ನಾನು ಮತ್ತು ಶಿವಾನಂದ ನಾಟೀಕಾರ ಇಬ್ಬರು ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಅಂಬರಾಯನಿದ್ದು  ಅವನ  ಎಡಗಾಲು ಮೋಳಕಾಲು ಕೆಳಗೆ  ಯಾವುದೋ  ಭಾರಿವಾಹನವು ಅಪಘಾತ ಮಾಡಿ ಆತನ ಕಾಲು ಮೇಲೆ ಹಾಯಿದು ಹೋಗಿದ್ದರಿಂದ ಭಾರಿಗಾಯವಾಗಿ ಮಾಂಸಖಂಡ ಕಾಣುತಿದ್ದು ಭಾರಿ ರಕ್ತಸ್ರಾವವಾಗಿರುತ್ತದೆ.  ಮತ್ತು ತಲೆಯ ಬಲಬಾಗದಲ್ಲಿ ಭಾರಿ ರಕ್ತಗಾಯಗಳಾಗಿರುತ್ತೆವೆ.  ಆದುದರಿಂದ ನನ್ನ ಮಗ ಅಂಬರಾಯ ಜಮಾದಾರ ಇತನು ಮಾನಸಿಕವಾಗಿ ಆಶ್ವಸ್ಥನಾಗಿದ್ದು   ರೋಡಿಗೆ ಅಲ್ಲಲ್ಲಿ ಬೇಡಿಕೊಂಡು ತಿನ್ನುತಿದ್ದು  ರೋಡಿಗೆ ಹೋಗುತ್ತಿದ್ದಾಗ ಯಾವುದೋ ಭಾರಿ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು  ನನ್ನ ಮಗ ಅಂಬರಾಯನಿಗೆ ಡಿಕ್ಕಿ ಹೊಡೆದು ಆತನ ಎಡಗಾಲು ಮೋಳಕಾಲು ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಆತನಿಗೆ ಎಡಗಾಲು ಮೋಳಕಾಲಿಗೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಕಾಣುತಿದ್ದವು  ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ 21-08-2018 ರಂದು ಮದ್ಯಾಹ್ನ ಶ್ರೀ. ಕಪೀಲದೇವ ಪಿಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಫರಹತಾಬಾದ ಪೊಲೀಸ ಠಾಣೆ ವ್ಯಾಪ್ತಿಯ ಸರಡಗಿ(ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ಹಾಳು ಬಿದ್ದ ಮಿಕ್ ಸಿಮೆಂಟ ಪ್ಯಾಕ್ಟರಿಯ ಖುಲ್ಲಾ ಜಾಗೆಯ ಗಿಡದ ಕೆಳಗೆ ಸಾರ್ವಜನಿಕ  ಸ್ಥಳದಲ್ಲಿ ಹಣವನ್ನು ಪಟ್ಟಕ್ಕಿಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ದೈವಲೀಲೇಯ ಇಸ್ಪಿಟ್‌ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿರುತ್ತದೆ ಸದರಿಯವರ ಮೇಲೆ ದಾಳಿ ಮಾಡುವುದಿದೆ ಅಂತಾ ತಿಳಿಸಿದ ಮೇರೆಗೆ ಶ್ರೀ ವಾಹೀದ, ಹೆಚ್‌‌, ಕೊತವಾಲ ಪಿಎಸ್‌ಐ  ಫರಹತಾಬಾದ ಪೊಲೀಸ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ , ಹಾಗೂ ಮಾನ್ಯ ಡಿ.ಎಸ್.ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಕಲಬುರಗಿ ಹಾಗೂ ಮಾನ್ಯ ಸಿಪಿಐ ಎಮ್‌, ಬಿ ನಗರ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಭಾತ್ಮಿ ಬಂದ ಸ್ಥಳ ಸ್ವಲ್ಪ ದೂರ ಇರುವಂತೆ ಜೀಪಗಳನ್ನು ನಿಲ್ಲಿಸಿ ಎಲ್ಲರು ಇಳಿದು ನಡೆದುಕೊಂಡು ಹೊಗಿ  ಬಾತ್ಮಿ ಬಂದ ಸ್ಥಳದಿಂದ  ಸ್ವಲ್ಪ ದೂರ ಮರೆಯಲ್ಲಿ  ನಿಂತು ನೋಡಲಾಗಿ ಸರಡಗಿ(ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ಹಾಳು ಬಿದ್ದ ಮಿಕ್ ಸಿಮೆಂಟ ಪ್ಯಾಕ್ಟರಿಯ ಖುಲ್ಲಾ ಜಾಗೆಯ ಗಿಡದ ಕೆಳಗೆ ಸಾರ್ವಜನಿಕ  ಸ್ಥಳದಲ್ಲಿ ಕೇಲವು  ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ  ಇಸ್ಪಿಟ್‌ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಂಆಡಿದಾಗ  ಅವರಲ್ಲಿ ಇಬ್ಬರು ವ್ಯಕ್ತಿಗಳು ಓಡಿ ಹೊಗಿದ್ದು,  11 ಜನರು ಸೆರೆ ಸಿಕ್ಕಿದ್ದು, ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಸುರೇಶ ತಂದೆ ಭೀಮರಾಯ ತಳವಾರ ಸಾಃ ವಿದ್ಯಾ ನಗರ ಜೇವರ್ಗಿ ಜಿಃ ಕಲಬುರಗಿ 2) ಸುಧಾಕರ್ ತಂದೆ ಶಾಂತಪ್ಪ ಕಡಚರಲಾ ಸಾಃ ಅಂಬಾಬಾಯಿ ಗುಡಿಯ ಹತ್ತಿರ ನೇಹರು ಗಂಜ ಕಲಬುರಗಿ 3) ಪ್ರಕಾಶ ತಂದೆ ಮಡಿವಾಳಯ್ಯ ಪುರಾಣಿಕ ಸಾಃ ಬಸವೇಶ್ವರ ನಗರ ಜೇವರ್ಗಿ ಜಿಃ ಕಲಬುರಗಿ 4) ಬಸವರಾಜ ತಂದೆ ಈರಣ್ಣ ಸೂಗೂರ ಸಾಃ ಖಾಜಾಕಾಲೋನಿ ಜೇವರ್ಗಿ ಜಿಃ ಕಲಬುರಗಿ 5) ಸುರೇಂದ್ರ ತಂದೆ ನಾಗೇಂದ್ರ ಆಲಗೂಡಕರ್ ಸಾಃ ಭವಾನಿ ನಗರ ಕಲಬುರಗಿ 6) ಶಂಕರ ತಂದೆ ಸಿದ್ದಪ್ಪಾ ಜೇವರ್ಗಿ ಸಾಃ ಗುರು ನಗರ ಜೇವರ್ಗಿ ಜಿಃ ಕಲಬುರಗಿ 7) ಅಖಂಡಪ್ಪಾ ತಂದೆ ಈರಪ್ಪಾ ಪಾಟೀಲ ಸಾಃ ವಿದ್ಯಾ ನಗರ ಜೇವರ್ಗಿ ಜಿಃ ಕಲಬುರಗಿ 8) ಶರಣಪ್ಪಾ ತಂದೆ ದೌಲಪ್ಪ ಗುತ್ತೆದಾರ ಸಾಃ ಚೆನ್ನೂರ ಗ್ರಾಮ ತಾಃ ಜೇವರ್ಗಿ ಜಿಃ ಕಲಬುರಗಿ 9) ಸೈಬಣ್ಣ ತಂದೆ ಶಿವಣ್ಣ ಸಾಗನೂರ ಸಾಃ ಫರಹತಾಬಾದ ಗ್ರಾಮ ತಾ.ಜಿಃ ಕಲಬುರಗಿ 10) ಚಂದನಕುಮಾರ ತಂದೆ ಬಾಬುರಾವ ಸರಡಗಿ(ಬಿ) ಸಾಃ ಸರಡಗಿ(ಬಿ) ಗ್ರಾಮ ತಾ.ಜಿಃ ಕಲಬುರಗಿ 11) ರೇವಣಸಿದ್ದಪ್ಪ ತಂದೆ ಶರಣಪ್ಪಾ ಹೊಸಳ್ಳಿ ಸಾಃ ವಿದ್ಯಾ ನಗರ ಕಪನೂರ ಕಲಬುರಗಿ ಅಂತಾ ತಿಳಿಸಿದ್ದು, ನಂತರ ಓಡಿ ಹೋದವರ ಬಗ್ಗೆ ಸೆರೆ ಸಿಕ್ಕವರಿಗೆ ವಿಚಾರಿಸಲಾಗಿ ಅವರುಗಳು ಹೆಸರು 1) ನಾಗು ನಾಟಿಕರ  2) ಸಾಬು ನಾಟಿಕರ್ ಸಾಃ ಇಬ್ಬರು ಫಿರೋಜಾಬಾದ ಗ್ರಾಮ ತಾ.ಜಿಃ ಕಲಬುರಗಿ  ಅಂತಾ ತಿಳಿಸಿದರು. ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 42,110/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ಗುರಪ್ಪ ಸೋಮಾ ಸಾ:ಸಾವಳಗಿ (ಬಿ) ತಾ:ಜಿ:ಕಲಬುರಗಿ ರವರು ದಿನಾಂಕ:- 18-08-2018 ರಂದು ತನ್ನ ಹೋಲದಲ್ಲಿ ಬಂದಾರಿ ಸ್ವಚ್ಚ ಮಾಡಲು ಆರೋಪಿತರು ಪಾಲಿಗೆ ಮಾಡಿದ ಹೋಲದಿಂದ ಇಟಾಚಿ ತೆಗೆದುಕೊಂಡು ಹೋಗಿದ್ದಕ್ಕೆ ಅದೇ ವೈಮಸ್ಸಿನಿಂದ ದಿನಾಂಕ:- 21/08/2018 ರಂದು ಸಾಯಂಕಾಲ 06:00 ಗಂಟೆ ಸುಮಾರಿಗೆ ಫಿರ್ಯಾದಿ ತನ್ನ ಮನೆಯ ಮುಂದೆ ನಿಂತುಕೊಂಡಾಗ ಆಗ ಆರೋಪಿ ಬಸವರಾಜ ಮತ್ತು ಭೀಮಾಶಂಕರ ಇಬ್ಬರು ಕೂಡಿಕೊಂಡು ಬಂದು ಫಿರ್ಯದಿಯೊಂದಿಗೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಗೆ ಅವಾಚ್ಯವಾಗಿ ಬೈಯ್ದು ಕಬ್ಬಿಣದ ರಾಡದಿಂದ ಮತ್ತು ಕಭಿಣ್ಣದ ಪೈಪನಿಂದ ಫಿರ್ಯಾದಿಯ ತಲೆಗೆ ಮತ್ತು ಎಡಗೈ ಮುಂಗೈಗೆ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.