POLICE BHAVAN KALABURAGI

POLICE BHAVAN KALABURAGI

26 May 2017

Kalaburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಇಕ್ಬಾಲ್‌ ತಂದೆ ಶಮಶುದ್ದಿನ್‌ ಬಿಲಗುಂದಿ ಸಾ: ಖಾಜಿಗಲ್ಲಿ ಆಳಂದ ರವರು ದಿನಾಂಕ;25/05/2017 ರಂದು ಸಾಯಂಕಾಲ ಉಮರ್ಗಾದಲ್ಲಿ ನಮ್ಮ ದೋಸ್ತ ಸುನಿಲ್‌ ಈತನ ಮಗನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದ್ದರಿಂದ ನಾನು ಮಾತಾಡಿಸಿಕೊಂಡು ಬರುವ ಸಲುವಾಗಿ ಉಮರ್ಗಾಕ್ಕೆ ಹೋಗಬೇಕೆಂದು ಹೋಗುತ್ತಿದ್ದೇನು. ನನ್ನ ಮುಂದೆ ಒಬ್ಬ ಮೋಟಾರ ಸೈಕಲ್ ಚಲಾಯಿಸಿಕೊಂಡು ಉಮರ್ಗಾ ಕಡೆಗೆ ಹೋಗುತ್ತಿದ್ದನು. ನಾವು ಆಳಂದದಿಂದ ತಲೆಕುಣಿ ಚಡಾನದ ಹತ್ತಿರ ಸಂದೀಪ್ ಢಗೆ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಸಾಯಂಕಾಲ ಎದುರಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಓಡಿಸುತ್ತಾ ಬಂದವನೆ ನನ್ನ ಮುಂದೆ ಹೋಗುತ್ತಿದ್ದ ಒಬ್ಬ ಮೋಟಾರ ಸೈಕಲ್ ಚಾಲಕನಿಗೆ ಎದುರಿನಿಂದ ಡಿಕ್ಕಿ ಪಡಿಸಿದರಿಂದ ಮೋಟಾರ ಸೈಕಲ್‌ ಸಮೇತ ಕೆಳಗಡೆ ಬಿದ್ದನು. ಆಗ ಲಾರಿ ಚಾಲಕನು ನಾನು ಕೈ ಮಾಡಿದರು ಕೂಡ ನಿಲ್ಲಿಸದೆ ಹಾಗೇ ವಾಹನ ಓಡಿಸಿಕೊಂಡು ಹೋದನು. ನಾನು ಲಾರಿಯ ಹಿಂದಿನ ನಂಬರ ನೋಡಿ ಬರೆದುಕೊಂಡಿದ್ದು ಲಾರಿ ನಂಬರ್‌; ಎಮ್‌.ಹೆಚ್‌-12-ಹೆಚ್‌.ಡಿ 7707 ಇರುತ್ತದೆ. ನಂತರ ಅಪಘಾತವಾಗಿ ಬಿದ್ದಿದ್ದ ಮೋಟಾರ್ ಸೈಕಲ್‌ ಚಾಲಕನಿಗೆ ನೋಡಲಾಗಿ ಅವನಿಗೆ ಎರಡು ಕಾಲು ಮೊಳಕಾಲ ಹತ್ತಿರ ಮುರಿದು ಮೂಳೆ ಹೊರ ಬಂದಿದ್ದು ತಲೆಗೆ ಕೈಗೆ ಭಾರಿ ರಕ್ತ ಗಾಯವಾಗಿದ್ದು ಎದೆಗೆ ಗುಪ್ತ ಪೆಟ್ಟಾಗಿ ಬೇಹೋಷ ಆಗಿ ಬಿದ್ದಿದ್ದನು. ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಅವನ ಪರಿಚಯ ಕೂಡ ಇರುವದಿಲ್ಲ ಅವನ ಅಂದಾಜು ವಯಸ್ಸು 30-35 ವರ್ಷ ಇರುತ್ತದೆ. ನಂತರ ನಾನು ಮತ್ತು ರೋಡಿಗೆ ಹೋಗುವ ದಯಾನಂದ ತಂದೆ ಶಿವಕಾಂತ ಜಮದಾರ ಇವರು ಕೂಡಿ 108 ಅಂಬುಲೆನ್ಸ ಗೆ ಫೋನ್‌ ಮಾಡಿ ಕರೆಯಿಸಿದೇವು. ಅವರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಅಲ್ಲೆ ಬಿದ್ದಿದ್ದ ಮೋಟಾರ ಸೈಕಲ್‌ ನಂಬರ ನೋಡಲು ಕೆ.ಎ-50-ಹೆಚ್‌-3367 ಹಿರೋ ಹೊಂಡಾ ಸ್ಪ್ಲೇಂಡರ್‌ ಇರುತ್ತದೆ.ನಂತರ ಗೊತ್ತಾಗಿದ್ದೇನೆಂದರೆ ಲಾರಿ ಅಪಘಾತದಲ್ಲಿ ಘಾಯ ಹೊಂದಿದ ಅಪರಿಚಿತ ಗಂಡು ಮನುಷ್ಯನು ಅಂಬುಲೆನ್ಸದಲ್ಲಿ ಆಳಂದ ಆಸ್ಪತ್ರೆಗೆ ಒಯ್ಯುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿಕೊಂಡು ಹೋದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಪೀರಸ ಪಟೇಲ ತಂದೆ ನಬೀ ಪಟೆಲ  ಸಾ:ಮಯೂರ ತಾ:ಜೇವರ್ಗಿ ಇವರು ನಾಲ್ಕು ಜನ ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ.ಅದರಲ್ಲಿ ಗಂಡು ಮಕ್ಕಳಾದ ನಾಲ್ಕು ಜನ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಿರುತ್ತಾರೆ .ಮತ್ತು ಇಬ್ಬರು ಹೆಣ್ಣು ಮಕ್ಕಳಲ್ಲಿ ದೊಡ್ಡವಳಾದ ಜೈನಾಬಿ ಇವಳನ್ನು ಮದುವೆಮಾಡಿಕೊಟ್ಟಿದ್ದು  ಸಣ್ಣವಳಾದ ಶೈನಾಜಿ ಇವಳು ನಮ್ಮೊಂದಿಗೆ ಮನೆಗೆಲಸ ಮಾಡಿಕೊಂಡು ಇರುತ್ತಾಳೆ .ಹೀಗಿದ್ದು ದಿನಾಂಕ:22/05/2017 ರಂದು ಬೆಳಿಗ್ಗೆ 5:00 ಗಂಟೆಗೆ ನನ್ನ ಮಗಳು ಬರ್ಹಿದೆಸೆಗೆ ಹೊಗಿದ್ದಳು ಬಹಳ ಹೊತ್ತಾದರು ಅವಳು  ಮನೆಗೆ ವಾಪಸ ಆಗದಿದ್ದಾಗ ನಾವು ಗಾಬರಿಗೊಂಡು ಅವಳನ್ನು ಹುಡುಕಾಡತೋಡಗಿದೆವು ಆಗ ನನ್ನ ಅಣ್ಣನಾದ ಶ್ರಿ ಚಾಂದ ಪಟೇಲ ನಮಗೆ ತೀಳೀಸಿದ್ದೆನೆಂದರೆ ಶೈನಾಜಿ ಇವಳು ಬರ್ಹಿದೆಸೆಯಿಂದ ವಾಪಸ ಮನೆಗೆ ಬರುವಾಗ ಇವಳನ್ನು ನಮ್ಮೂರಿನ ರಾಜು ತಂದೆ ಶರಣಪ್ಪ ಹರಿಜನ  ಈತನು ಒಂದು ಬೋಲೆರೋ ವಾಹನದಲ್ಲಿ ಅವಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗುತ್ತಿದ್ದು ಅವನ ಜೊತೆಗೆ ಅಪಹರಣಕ್ಕೆ ಸಹಕರಿಸುತ್ತಿದ್ದ್ ನಮ್ಮುರಿನ ಬಸವರಾಜ ತಂದೆ ಕಾಶಪ್ಪ , ಶಿವುಕುಮಾರ ತಂದೆ ಶರಣಪ್ಪ ,ಚಂದ್ರಕಾಂತ ತಂದೆ ಶರಣಪ್ಪ ,ಖಾಜಪ್ಪ ತಂದೆ ಬೀಮಶ್ಯಾ ಇವರೆಲ್ಲರೂ ಅವಳನ್ನು ಬಲವಂತವಾಗಿ ಬೋಲೆರೋ ವಾಹನದಲ್ಲಿ ರಾಜು ಎಂಬಾತ ಅಪಹರಿಸಿಕೊಂಡು ಹೋಗಿರುತ್ತಾನೆ.ಅಪಹರಿಸಿಕೊಂಡ ಹೋದ ರಾಜು ತಂದೆ ಶರಣಪ್ಪ ಹಾಗೂ ಅಪಹರಣಕ್ಕೆ ಸಹಕರಿಸಿದವರ ಈ ನಾಲ್ಕು ಜನರ ಮೇಲೆ ಕಾನೂನು ರಿತ್ಯ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಅಂತಾ 03 ಜನ ಅಣ್ಣ ತಮ್ಮರು ಇದ್ದು. ನಮಗೆಲ್ಲರಿಗೂ ತಲಾ 8 - 8 ಎಕರೆ ಜಮೀನು ಪಾಲಿಗೆ ಬಂದಿರುತ್ತದೆ. ನಾವೆಲ್ಲರೂ ಸುಮಾರು 20 ವರ್ಷಗಳ ಹಿಂದೆಯೆ ಬೇರೆಯಾಗಿರುತ್ತೇವೆ. ನನ್ನ ಪಾಲಿಗೆ ಬಂದ ಹೊಲದ ಸರ್ವೆ ನಂ 120 ಇದ್ದು ಸದರಿ ಹೊಲದಲ್ಲಿ ಈಗ 4-5 ವರ್ಷಗಳ ಹಿಂದೆ 2 ಎಕರೆ ಜಮೀನು ಹೊಳೆಯಲ್ಲಿ ಹೋಗಿ ಮುಳುಗಡೆಯಾಗಿರುತ್ತದೆ. ನನ್ನ ಹೊಲ ಮುಳುಗಡೆಯಾದ ಬಗ್ಗೆ ಈ ಹಿಂದೆ ಸರ್ಕಾರದಿಂದ 10 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ಹಣವನ್ನು ನಾನು ನಮ್ಮ ತಂದೆ ತಾಯಿ ನನ್ನ ತಮ್ಮಂದಿರ ಹತ್ತಿರ ಇದ್ದಿದ್ದರಿಂದ ನಾನು ಆ ಹಣವನ್ನು ನನ್ನ ತಮ್ಮಂದಿರಿಗೆ ಕೊಟ್ಟಿರುತ್ತೇನೆ. ಸದ್ಯ ನಮ್ಮ ತಂದೆ ತಾಯಿ ತೀರಿಕೊಂಡಿರುತ್ತಾರೆ. ಸದರಿ ನನ್ನ ಹೊಲ ಮುಳುಗಡೆಯಾದ ಬಗ್ಗೆ ಸರ್ಕಾರದಿಂದ ಈಗ ಪುನ 7 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ನನ್ನ ತಮ್ಮಂದಿರು ಬಂದ ಹಣದಲ್ಲಿ ನಮಗೂ ಪಾಲು ಕೊಡು ಅಂತಾ ನಮ್ಮೊಂದಿಗೆ ಜಗಳ ತಗೆಯುತ್ತಿದ್ದು ದಿನಾಂಕ 25-05-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗನಾದ ಮಲ್ಲಿಕಾರ್ಜುನ ಇಬ್ಬರು ಶಿವೂರ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 120 ನೇದ್ದರಲ್ಲಿ ಕೆಲಸ ಮಾಡುತ್ತಿದ್ದಾಗನನ್ನ ತಮ್ಮನ ಮಕ್ಕಳಾದ ಸಚೀನ, ಸುನೀಲ, ಅನೀಲ ಹಾಗೂ ನನ್ನ ತಮ್ಮಂದಿರಾದ ವಿಠೋಬಾ ಮತ್ತು ಸಿದ್ದಾರಾಮ ಎಲ್ಲರೂ ಕೂಡಿ ನಮ್ಮ ಹೊಲದಲ್ಲಿ ಕೂಡಿಸಿದ ಮೊಟಾರ ಹತ್ತಿರ ಬಂದವರೆ, ಮೋಟಾರನ್ನು ನೋಡಿಕೊಂಡು ಬಂದು ಏನೊ ಬೋಸಡಿ ಮಕ್ಕಳ್ಯಾ ನಮ್ಮ ಕರೆಂಟ ಮೋಟರ ವಾಯರ್ ಹರೀತಿರಿ ಅಂತಾ ಹೊಲಸು ಹೊಲಸು ಬೈಯುತ್ತಾ ಬಂದವರೆ, ಸುನೀಲ ಈತನು ಕೊಡಲಿಯಿಂದ ನನ್ನ ಮಗ ಮಲ್ಲಿಕಾರ್ಜುನನ ಬಲಗಾಲು ಮೀನಗಂಡದ ಹತ್ತಿರ ಹೊಡೆದಿದ್ದು, ತರಚಿದ ರಕ್ತಗಾಯ ಆಗಿರುತ್ತದೆ. ಹಾಗೂ ಸುನೀಲನು ಬಡಿಗೆಯಿಂದ ಮತ್ತು ಅನೀಲನು ಕಲ್ಲಿನಿಂದ ಇಬ್ಬರು ನನ್ನ ಬೆನ್ನಿನ ಮೇಲೆ ಹಾಗೂ ಮೈ ಕೈಗೆ ಹೊಡೆದಿರುತ್ತಾರೆ. ಹಾಗೂ ನನ್ನ ತಮ್ಮಂದಿರಾದ ವಿಠೋಬಾ ಮತ್ತು ಸಿದ್ದಾರಾಮ ಇವರಿಬ್ಬರು ನನಗೆ ಮತ್ತು ನನ್ನ ಮಗ ಮಲ್ಲಿಕಾರರ್ಜುನನಿಗೆ ನೇಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ, ನಂತರ ಸದರಿ 05 ಜನರು ಕೂಡಿ ನನಗೆ ಮತ್ತು ನನ್ನ ಮಗನಿಗೆ ಹೊಲದಿಂದ ಹೊಡೆಯುತ್ತಾ ಊರಿಗೆ ಕರೆದುಕೊಂಡು ಬಂದು ನಮ್ಮ ಮನೆಯ ಮುಂದೆ ಹೊಡೆಯುತ್ತಿದ್ದಾಗ, ಸುನೀಲನು ಬಡಿಗೆಯಿಂದ ನನಗೆ ಹೊಡೆಯಲು ಬರುತ್ತಿದ್ದಾಗ ನನ್ನ ಹೆಂಡತಿ ಅಡ್ಡ ಬಂದಿದ್ದು, ಆಗ ಸುನೀಲನು ಅದೆ ಬಡಿಗೆಯಿಂದ ನನ್ನ ಹೆಂಡತಿಯ ಹೆಡಕಿನ ಮೇಲೆ ಹೊಡೆದಿದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ವಿಠೋಬಾ ತಂದೆ ರಾಮಣ್ಣ ಪಟ್ನೆ ಸಾ|| ಶಿವೂರ ಇವರು ಮತ್ತು ಬಸವರಾಜ) ಸಿದ್ದಪ್ಪ @ ಸಿದ್ದಾರಾಮ ಈ ರೀತಿ ಒಟ್ಟು 03 ಜನ ಅಣ್ಣ ತಮ್ಮರು ಇದ್ದು. ನಮಗೆಲ್ಲರಿಗೂ ತಲಾ 8 - 8 ಎಕರೆ ಜಮೀನು ಪಾಲಿಗೆ ಬಂದಿರುತ್ತದೆ. ನಾವೆಲ್ಲರೂ ಸುಮಾರು 20 ವರ್ಷಗಳ ಹಿಂದೆಯೆ ಬೇರೆಯಾಗಿರುತ್ತೇವೆ. ನಮ್ಮ ನಡುವೆ ಇದ್ದ ಹೊಲದಲ್ಲಿ ಈಗ 4-5 ವರ್ಷಗಳ ಹಿಂದೆ 2 ಎಕರೆ ಜಮೀನು ಹೊಳೆಯಲ್ಲಿ ಹೋಗಿ ಮುಳುಗಡೆಯಾಗಿರುತ್ತದೆ. ಹೊಲ ಮುಳುಗಡೆಯಾದ ಬಗ್ಗೆ ಸರ್ಕಾರದಿಂದ ಈಗ 7 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ಹಣ ನಮ್ಮ ಅಣ್ಣನಾದ ಬಸವರಾಜ ಇತನು ತಗೆದುಕೊಂಡಿರುತ್ತಾನೆ ಬಂದ ಹಣದಲ್ಲಿ ನಮಗೂ ಪಾಲು ಕೊಡು ಅಂತಾ ಕೇಳಿದರು ಕೊಟ್ಟಿರುವುದಿಲ್ಲ. ದಿನಾಂಕ 25-05-2017 ರಂದು ಬೆಳಿಗ್ಗೆ ನಾನು ನನ್ನ ತಮ್ಮನಾದ ಸಿದ್ದರಾಮ ಇಬ್ಬರು ಹೊಳೆಯಲಿದ್ದ ನಮ್ಮ ಮೋಟಾರ ತಗೆದಿಡಲು ಶಿವೂರ ಸೀಮಾಂತರದಲ್ಲಿರುವ ನಮ್ಮ  ಅಣ್ಣನ ಹೊಲ ಸರ್ವೆ ನಂ 120 ನೇದ್ದರಲ್ಲಿನಿಂದ ಹೋಗುತಿದ್ದಾಗ  ಅಲ್ಲೆ ಕೆಲಸ ಮಾಡುತಿದ್ದ ನಮ್ಮ ಅಣ್ಣನಾದ ಬಸವರಾಜ ತಂದೆ ರಾಮಣ್ಣ ಪಟ್ನೆ ಅವರ ಹೆಂಡತಿಯಾದ ಮಹಾನಂದ ಗಂಡ ಬಸವರಾಜ ಮಗನಾದ ಮಲ್ಲಿಕಾರ್ಜುನ ತಂದೆ ಬಸವರಾಜ ಇವರು ನಮ್ಮ ಹತ್ತಿರ ಬಂದವರೆ, ನನಗೆ ನಮ್ಮ ಅಣ್ಣ ತಡೆದು ನಿಲ್ಲಿಸಿ ಏನೊ ಬೋಸಡಿ ಮಕ್ಕಳ್ಯಾ ನನಗೆ ಬಂದ ಹಣದಲ್ಲಿ ಪಾಲಾ ಕೇಳ್ತಿರಿ ಅಂತಾ ಹೊಲಸು ಹೊಲಸು ಬೈಯುತಿದ್ದಾಗ, ಮಲ್ಲಿಕಾರ್ಜುನ ಈತನು ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಸಿದ್ದರಾಮ ಇತನು ಬಿಡಿಸಲು ಬಂದಾಗ ಬಸವರಾಜನು ಮಲ್ಲಿಕಾರ್ಜುನ ಕೈಯಲ್ಲಿನ ಬಡಿಗೆ ತಗೆದುಕೊಂಡು ಅದೇ ಬಡಿಗೆಯಿಂದ  ಟೊಂಕದ ಮೇಲೆ ಹೊಡೆದಿರುತ್ತಾನೆ. ಆಗ ಮಹಾನಂದ ಇವಳು ಈ ಹಾಟ್ಯಾಗಳಿಗೆ ಇವತ್ತ ಬಿಡಬ್ಯಾಡ್ರಿ ಖಲಾಸ ಮಾಡ್ರಿ ಅಂತ ಅಂದಾಗ ನಮ್ಮ ಅಣ್ಣ ಹಾಗು ಮಲ್ಲಿಕಾರ್ಜುನ ಇವರಿಬ್ಬರು ನನಗೆ ಮತ್ತು ನನ್ನ ತಮ್ಮ ಸಿದ್ದರಾಮ ಇಬ್ಬರಿಗೂ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ, ನಂತರ ಸದರಿ ಇಬ್ಬರು ಕೂಡಿ ನನಗೆ ಮತ್ತು ನನ್ನ ತಮ್ಮನಿಗೆ ಹೊಲದಿಂದ ಹೊಡೆಯುತ್ತಾ ಊರಿಗೆ ಕರೆದುಕೊಂಡು ಬಂದಿರುತ್ತಾರೆ, ನಮಗೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಹಣಮರೆಡ್ಡಿ  ತಂದೆ ತಿಪ್ಪಾರೆಡ್ಡಿ ಪೊತುಲ್ ಸಾ : ಮಲ್ಕಾಪಲ್ಲಿ ತಾ : ಸೇಡಂ ರವರೊಂದಿಗೆ ಶ್ರೀನಿವಾಸರೆಡ್ಡಿ ತಂದೆ ಸಿದ್ರಾಮರೆಡ್ಡಿ ಪೊತುಲ್ ಸಂಗಡ ಮೂರು ಜನರು ಸಾ : ಮಲ್ಕಾಪಲ್ಲಿ ತಾ : ಸೇಡಂ ಸೇರಿಕೊಂಡು ತಮ್ಮ ಮನೆಯ ಹೆಣ್ಣುಮಗಳೊಂದಿಗೆ ಫಿರ್ಯಾದಾರನ ಮಗನು ಜಗಳಾ ತೆಗೆದಿದ್ದರ ಅಂತಾ ವೈಮನಸ್ಸು ಮಾಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀನಿವಾಸರೆಡ್ಡಿ ತಂದೆ ಸಿದ್ರಾಮರೆಡ್ಡಿ ಪೊತುಲ್ ಸಾ : ಮಲ್ಕಾಪಲ್ಲಿ ತಾ : ಸೇಡಂ ರವರೊಂದಿಗೆ ಶ್ರೀ ಹಣಮರೆಡ್ಡಿ  ತಂದೆ ತಿಪ್ಪಾರೆಡ್ಡಿ ಪೊತುಲ್ ಸಂಗಡ ಮೂರು ಜನರು ಸಾ : ಮಲ್ಕಾಪಲ್ಲಿ ತಾ : ಸೇಡಂ ಸೇರಿಕೊಂಡು ತಮ್ಮ ಸೇರಿಕೊಂಡು ತಮ್ಮ ಮನೆಯ ಹೆಣ್ಣುಮಗಳೊಂದಿಗೆ ಆರೋಪಿತರು ಜಗಳಾ ತೆಗೆದಿದ್ದಾರೆ ಅಂತಾ ವೈಮನಸ್ಸು ಮಾಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ಶ್ರೀ ರಾಮರೆಡ್ಡಿ ತಂದೆ ಆಶರೆಡ್ಡಿ ಸಾ : ತುನ್ನೂರ ಗ್ರಾಮ ರವರು ದಿನಾಂಕ 24-05-2015 ರಂದು ರಾತ್ರಿ ತುನ್ನೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಇರುವ ಬೋರವೆಲ್ ಕೈಪಂಪನ್ನು ಜೋರಾಗಿ ಹೊಡೆಯುವಾಗ ಮಹಿಪಾಲ ತಂದೆ ಭೀಮಶಪ್ಪಾ ಹರಿಜನ ಇವರಿಗೆ ಫಿರ್ಯಾದಿಯು ಜೋರಾಗಿ ಹೋಡೆಯಬೇಡಿರಿ ಅಂತಾ ಅಂದಿದ್ದಕ್ಕೆ ಮಹಿಪಾಲ ತಂದೆ ಭೀಮಶಪ್ಪಾ ಹರಿಜನ ಸಂಗಡ 3 ಜನರು ಸಾ : ಎಲ್ಲರು ತುನ್ನೂರ ಗ್ರಾಮ ರವರು ಕುಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ರವೀಂದ್ರ ತಂದೆ ಸಾಯಪ್ಪಾ ಕಾಂಬಳೆ ಸಾ ತುನ್ನೂರ ಇವರು ದಿನಾಂಕ 24-05-2017 ರಂದು ರಾತ್ರಿ ತುನ್ನೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಇರುವ ಬೋರವೆಲ್ ಗೆ ನೀರು ತರಲು  ಹೋದಾಗ  ರಾಮರೆಡ್ಡಿ ತಂದೆ ಆಶರೆಡ್ಡಿ ಸಂಗಡ 8 ಜನರು ಸಾ : ಎಲ್ಲರು ತುನ್ನೂರ ಗ್ರಾಮ ರವರು ಸೇರಿಕೊಂಡು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆ ಬಡೆ ಮಾಡಿ ದೌರ್ಜನ್ಯ ಎಸಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 May 2017

Kalaburagi District Reported Crimes

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 05.12.2015 ರಂದು ನನ್ನ ಮಗ ಜಗಧೀಶ ತಂದೆ ಅಣ್ಣಪ್ಪ ಭರಣಿ ವಯ: 25 ವರ್ಷ ಇತನ ಮೃತ ಪಟ್ಟಿದ್ದು ಸದರಿ ನನ್ನ ಮಗನ ಸಾವಿನಲ್ಲಿ ಸಂಶಯ ಕಂಡುಬರುತ್ತಿದ್ದೆ.  4 ದಿವಸಗಳ ನಂತರ ನನ್ನ ಮಗಳಾದ ವಿಜಯಲಕ್ಷ್ಮಿ ಇವಳು ನನಗೆ ತಿಳಿಸಿದ್ದೆನೆಂದರೆ ದಿನಾಂಕ 04.12.2015 ರಂದು ಮಧ್ಯಾನ 12:30 ಗಂಟೆಯ ಸುಮಾರಿಗೆ ಅಣ್ಣ ಜಗದೀಶ ಇತನು ಮನೆಯಲ್ಲಿ ಮಲಗಿದಾಗ ನಮ್ಮ ಗ್ರಾಮದ 1. ಅಂಬರೀಶ ತಂದೆ ಶರಣಪ್ಪ ಬಾಜಿನವರ 2. ಸಚೀನ ತಂದೆ ಚಂದ್ರಪ್ಪ ದಮ್ಮೂರ ಮತ್ತು 3. ಈಶ್ವರ ತಂದೆ ಗುರುನಾಥ ಪಸಪೂಲ ಇವರು ಮನೆಗೆ ಬಂದಿದ್ದು ಆಗ ನಾನು ಅವರಿಗೆ ವಿಚಾರಿಸಲು ಅವರಲ್ಲಿ ಅಂಬರೀಶ ಇತನು ತಿಳಿಸಿದ್ದೆನೆಂದರೆ ಜಗದೀಶ ಇತನು ನನಗೆ ಲಗ್ನದ ಸಂಬಂದ 1 ಲಕ್ಷ 50 ಸಾವೀರ ರೂಪಾಯಿ ಕೊಟ್ಟಿದ್ದು ಅವನು ಕೊಟ್ಟ ಹಣಕ್ಕೆ ಕಾಗದ ಬರೆದು ಕುಡಬೇಕಾಗಿದೆ ಅಂತ ತಿಳಿಸಿದ್ದು ಆಗ ನಾನು ಅಣ್ಣ ಜಗದೀಶನಿಗೆ ಎಬ್ಬದಿಸಿದ್ದು ನಂತರ ಸದರಿ ಮೂರು ಜನರು ನಮ್ಮ ಅಣ್ಣ ಜಗದೀಶನಿಗೆ ಈಶ್ವರ ಇವರ ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತ ತಿಳಿಸಿದ್ದು. ನಂತರ ನನಗೆ ಗೊತ್ತಾಗಿದ್ದೆನೆಂದರೆ ನನ್ನ ಮಗ ಜಗದೀಶ ಇತನು ಈಶ್ವರ ಇತನ ಮನೆಗೆ ಹೋದಾಗ ಮಧ್ಯಾನ 3 ಗಂಟೆಯ ಸುಮಾರಿಗೆ ನನ್ನ ಮಗ ಜಗದೀಶ ಇತನು ಅಂಬರೀಶ ಇತನಿಗೆ ಹಣ ಕೊಟ್ಟ ಬಗ್ಗೆ ಕಾಗದ ಬರೆದು ಕುಡಲು ಕೇಳಿಕೊಂಡಿದ್ದು ಆಗ ಅಂಬರೀಶ ಇತನು ನನ್ನ ಮಗನಿಗೆ ಕಾಗದ ಬರೆದು ಕುಡಲು ನಿರಾಕರಿಸಿದಕ್ಕೆ ನನ್ನ ಮಗ ಜಗದೀಶ ಹಾಗೂ ಸದರಿ ಮೂರು ಜನರ ನಡುವೆ ಜಗಳಮಾಡುತ್ತಿದ್ದಾಗ ಈಶ್ವರ ಇತನ ಮನೆಯ ಪಕ್ಕದಲ್ಲಿರುವ ನಾಗಮ್ಮ ಗಂಡ ಬಂಡೆಪ್ಪ ರಾಜನಾಳ ಇವಳು ಹೋಗಿ ನೋಡಿದ್ದು ಆಗ ಅಂಬರೀಶ ಇತನು ಈ ರಂಡಿ ಮಗನಿಗೆ ಖಲಾಸ ಮಾಡಿದರೆ ಇವನಿಗೆ ಹಣ ಮರಳಿ ಕುಡುವದು ತಪ್ಪುತ್ತದೆ ಅಂತ ಸಚೀನ ಮತ್ತು ಈಶ್ವರ ಇವರ ಸಂಗಡ ಚಚರ್ೆ ಮಾಡಿ ಅದರಂತೆ ಅವರು ನನ್ನ ಮಗನಿಗೆ ಮಧ್ಯ ಸೇವನೆ ಮಾಡಿಸಿ ಅಂಬರೀಶ ಇತನು ಈಶ್ವರ ಇವರ ಮನೆಯಲ್ಲಿ ಇದ್ದ ಬಡಿಗೆ ತೆಗೆದುಕೊಂಡು ನನ್ನ ಮಗ ಜಗದೀಶ ಇತನ ತೆಲೆಯ ಮೇಲೆ ಜೋರಾಗಿ ಹೊಡೆದಿದ್ದು ಸದರಿಯವರು ಹೊಡೆದ ಪರಿಣಾಮ ನನ್ನ ಮಗ ಕುಸಿದು ಬಿದಿದ್ದು ಆಗ ಅಂಬರೀಶ ಮತ್ತು ಸಚೀನ ಇಬ್ಬರು ಅಲ್ಲಿಂದ ಹೋಗಿದ್ದು ಸ್ವಲ್ಪ ಸಮಯದ ನಂತರ ನನ್ನ ಮಗನಿಗೆ ಪ್ರಜ್ಞೆ ಬಂದು ಒದ್ದಾಡುತ್ತಿದ್ದಾಗ ಈಶ್ವರ ಇತನು ನನ್ನ ಮಗನಿಗೆ ಒಂದು ಅಟೋದಲ್ಲಿ ಹಾಕಿಕೊಂಡು ಕಮಲಾಪೂರದಲ್ಲಿರುವ ಶ್ರೀ ಚಂದ್ರಕಾಂತ ಚಿಂಚೂರ ಇವರ ಆಸ್ಪತ್ರೇಗೆ ತೆಗೆದುಕೊಂಡು ಬಂದಿರುವ ವಿಷಯ ನಂತರ ನನಗೆ ಗೊತ್ತಾಗಿ ನಾನು ಚಂದ್ರಕಾಂತ ಚಿಂಚೂರ ಇವರ ಆಸ್ಪತ್ರೆಗೆ ಹೋಗಿ ನನ್ನ ಮಗನಿಗೆ ನೋಡಿದ್ದು ಇರುತ್ತದೆ. ನನ್ನ ಮಗನಿಗೆ 1. ಅಂಬರೀಶ ತಂದೆ ಶರಣಪ್ಪ ಬಾಜಿನವರ 2. ಸಚೀನ ತಂದೆ ಚಂದ್ರಪ್ಪ ದಮ್ಮೂರ ಮತ್ತು 3. ಈಶ್ವರ ತಂದೆ ಗುರುನಾಥ ಪಸಪೂಲ ಇವರು ಕರೆದುಕೊಂಡು ಹೋಗಿ ಹಣ ವಿಷಯವಾಗಿ ನನ್ನ ಮಗನ ಸಂಗಡ ಜಗಳ ಮಾಡಿ ಸದರಿ ಮೂರು ಜನರು ಕೂಡಿಕೊಂಡು ನನ್ನ ಮಗನಿಗೆ ಬಡಿಗೆಯಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ  ಅಂತಾ ಶ್ರೀಮತಿ ಯಸುಬಾಯಿ @ ಯಶೊದಾ ಗಂಡ ಅಣ್ಣಪ್ಪ ಭರಣಿ ಸಾ;ಕಮಲಾಪೂರ ತಾ:ಜಿ:ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 24/05/2017 ರಂದು ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶರಣಸಿರಸಗಿ ಸೀಮಾಂತರದಲ್ಲಿ ಇರುವ ಅಫಜಲಪೂರ ರೋಡಿಗೆ ಇರುವ ನಾಗಲಿಂಗೇಶ್ವರ ಗುಡಿ ಎದುರುಗಡೆ ಇಬ್ಬರು ತಮ್ಮ ಹತ್ತಿರ  ಅಕ್ರಮವಾಗಿ ಆಯುಧಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳಕ್ಕೆ ಹೋಗಿ ನಾಗಲಿಂಗೇಶ್ವರ ಗುಡಿ ಎದುರುಗಡೆ ಕುಳಿತು ಆರೋಪಿತರಾದ ಶ್ರೀಪಾದ ಹುನ್ನುರು ಮತ್ತು ರವಿ ಕಟ್ಟಿ ಇವರಿಗೆ ದಾಳಿ ಮಾಡಿ ಹಿಡಿದು ಅವರಿಂದ ಅಧಿಕೃತ ಪರವಾನಿಗೆ ಇಲ್ಲದೇ ಅಕ್ರಮ ಆಯುಧ ಹೊಂದಿದ ಒಂದು ನಾಡ ಪಿಸ್ತೂಲ ಅ:ಕಿ: 10,000/-ರೂ. ಮತ್ತು ರಿವಾಲ್ವರ ಅ:ಕಿ: 10,000/-ರೂ. ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸದರಿ ಆಯುಧಗಳು ಪ್ರಭು ತಂದೆ ಬಾಬು  ಮತ್ತು ಖಯ್ಯುಮ ಪಟೇಲ ಇವರು ಇಟ್ಟುಕೊಳ್ಳುವುದಾಗಿ ಹೇಳಿದ್ದರಿಂದ ತಮ್ಮ ಹತ್ತಿರ ಇಟ್ಟುಕೊಂಡಿರುವುದಾಗಿ ತಿಳಿಸಿದ್ದು ಇರುತ್ತದೆ.  ಸದರು ನಾಲ್ಕು ಜನರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಆಯುಧ ಇಟ್ಟುಕೊಂಡಿದ್ದರಿಂದ  ಸಿಕ್ಕಿ ಬಿದ್ದ ಶ್ರೀಪಾದ ಮತ್ತು ರವಿ ಕಟ್ಟಿ ಇವರಿಬ್ಬರಿಗೆ  ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಮುದ್ದೆ ಮಾಲಿನೊಂದಿಗೆ ಠಾಣೆಗೆ ಕರೆ ತಂದಿದ್ದು, ಸದರಿ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 May 2017

KALABURAGI DISTRICT REPRTED CRIMES

ಕೊಲೆ ಯತ್ನ ಪ್ರಕರಣ:-
ಸೇಡಂ ಪೊಲೀಸ್ ಠಾಣೆ:- ದಿನಾಂಕ:23-05-2017  ರಂದು ಶ್ರೀ  ಮೊಹ್ಮದ್ ಮತೀನ್ ತಂದೆ ಮೊಹ್ಮದ್ ಮಲಂಗ, , ಸಾ:ಶಹಾಬಾದ ರವರು ತಮ್ಮ ಹೇಳಿಕೆ ಫಿರ್ಯಾದಿಯಲ್ಲಿ ತಾನು ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದು ಪ್ರತಿದಿನ ಹೋಗಿಬರುವ ಕುರಿತು ತನ್ನ ಫಾರಚೂನರ್ ಕಾರ ನಂಬರ್ KA32N9544 ಉಪಯೋಗಿಸುತ್ತಿದ್ದು. ಹೀಗೆ ದಿ:20-05-2017 ರಂದು ಎಂದಿನಂತೆ ಶ್ರೀ.ಸಿಮೆಂಟ್ ಫ್ಯಾಕ್ಟರಿಗೆ ತನ್ನ ಫಾರಚೂನರ ಕಾರಿನಲ್ಲಿ ಶ್ರೀ ಸಿಮೆಂಟ್ ಕಂಪನಿಯ ಗೇಟ್ ಮುಂದುಗಡೆ ನಿಂತಾಗ ಬೆನಕನಹಳ್ಳಿ ಗ್ರಾಮದ 20 ರಿಂದ 25 ಜನರು ಬಂದು ನಿಮ್ಮೊಂದಿಗೆ ಮಾತಾಡಬೇಕಾಗಿದೆ ನೀವು ನಮ್ಮೊಂದಿಗೆ ನಮ್ಮ ಊರಿಗೆ ಬನ್ನಿ ಎಂದಾಗ ನಾನು ನನ್ನ ಕಾರಿನಲ್ಲಿ ಬರುತ್ತೇನೆ ನೀವು ನಡೆಯಿರಿ ಎಂದರೊ ಅವರುಗಳು ನನ್ನ ಮಾತು ಕೇಳದೇ ನನಗೆ ಜಬರದಸ್ತಿಯಿಂದ ನನ್ನನ್ನು ಅಪಹರಿಸಿ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು, ನಂತರ ನನ್ನ ಫಾರಚೂನರ ಕಾರ ಚಾಲಕ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇತನಿಗೆ ಹೆದರಿಸಿ ಆತನಿಗೆ ಸಹ ಕರೆದುಕೊಂಡು ನನ್ನ ಕಾರ ತೆಗೆದುಕೊಂಡು ಇಬ್ಬರಿಗೊ ಬೆನಕನಹಳ್ಳಿ ಗ್ರಾಮದ ದರ್ಗಾದ ಮುಂದುಗಡೆ ಕರೆದುಕೊಂಡು ಬಂದು ನಿಲ್ಲಿಸಿ ಆ 20-25 ಜನರಲ್ಲಿ ಕೆಲವು ಜನರು ನನಗೆ ನೋಡಿ ಅವಛ್ಯ ಶಬ್ದಗಳಿಂದ ಬಯ್ಯುತ್ತಾ ಈತ  ನನ್ನ ಮಗನಿಗೆ ಹಾವು ಕಚ್ಚಿದಾಗ ಹಾವು ಕಚ್ಚಿದ್ದ ಜಾಗಕ್ಕೆ ದಸ್ತಿ ಕಟ್ಟಿದ್ದರಿಂದ ನನ್ನ ಮಗ ಸತ್ತಿರುತ್ತಾನೆ ಇವನಿಗೆ ಬಿಡಬ್ಯಾಡರಿ ಅಂತ ಹೇಳುತ್ತಾ 5-6 ಜನ ನನಗೆ ಹಿಡಿದುಕೊಂಡು ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿದರು. ಹಾಗೊ ಉಳಿದವರು ಹೊಟ್ಟೆಯಲ್ಲಿ ಬೆನ್ನಿಗೆ, ಮುಖಕ್ಕೆ, ಬಲಗಣ್ಣಿಗೆ, ಭುಜಕ್ಕೆ ಹೊಡೆದು ಭಾರಿ ಗುಪ್ತ ಪೆಟ್ಟು ಪಡೆಯಿಸದರು. ನಂತರ ಕೆಲವು ಜನರು  ಕಾರು ನಡೆಯಿಸುತ್ತಿದ್ದ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇವನಿಗೆ ಸಹ ಹೊಡೆದು ಗುಪ್ತ ಪೆಟ್ಟು ಮಾಡಿ ನಮಗೆ ಕೊಲೆ ಮಾಡಲು ಪ್ರಯತ್ನ ಮಾಡಿ. ನನ್ನ ಹತ್ತಿರ ಇದ್ದ ಎ.ಟಿ.ಎಮ್. ಕಾರ್ಡ, ಪ್ಯಾನ ಕಾರ್ಡ, ಡ್ರೈವಿಂಗ್ ಲೈಸೆನ್ಸ, ಮೂರು ಮೊಬೈಲ್ ಫೋನಗಳು ಹಾಗೂ ನನ್ನ ಅಳಿಯನ ಹತ್ತಿರ ಇದ್ದ ಒಂದು ಮೊಬೈಲ್ ಫೋನ ತೆಗೆದುಕೊಂಡಿರುತ್ತಾರೆ. ನಂತರ ನಮಗೆ ದರ್ಗಾದಲ್ಲಿ ಕೂಡಿ ಹಾಕಿ. ಫಾರಚೂನರ್ ಕಾರನ್ನು ಅದೇ ಜನರು ಕಲ್ಲುಗಳಿಂದ ಕಾರಿನ ಗ್ಲಾಸ್ ಒಡೆದು ಹಾಕಿರುತ್ತಾರೆ. ನಾನು ಶ್ರೀಸಿಮೆಂಟ್ ಕಂಪನಿಯಲ್ಲಿ ಕಾಂಟ್ರಕ್ಟರ್ ಕೆಲಸ ಮಾಡುತ್ತಿದ್ದ ಬಗ್ಗೆ ಸಹಿಸದ ಕೆಲವರು ನನ್ನ ಜೊತೆ ವೈಶಮ್ಯ ಬೆಳೆಯಿಸಿ ಈ ರೀತಿ ಹೊಡೆಬಡೆ ಮಾಡಿ ನನಗೆ ಕೊಲೆ ಯತ್ನ ಪ್ರಯತ್ನಿಸಿದವರ ವಿರುದ್ದ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:-

ಶಹಾಬಾದ ನಗರ ಪೊಲೀಸ್ ಠಾಣೆ :- ದಿನಾಂಕ: 23/05/2017 ರಂದು ಶ್ರೀಮತಿ ಸಕ್ರಿಬಾಯಿ ಗಂಡ ಜಗನ್ನ ರಾಠೋಡ ಸಾ: ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 20/05/2017 ರಂದು ಮುಂಜಾನೆ ತನ್ನ ಮಗನಾದ ದೀಪಕ ವಯಾ: 34 ವರ್ಷ ಇತನು ಶಹಾಬಾದನ ಬಜಾರಕ್ಕೆ ಹೋಗುತ್ತಿದ್ದಾಗ ಮಡ್ಡಿ ಏರಿಯಾದ ಕಟ್ಟಿಗೆ ಅಡ್ಡಾದ ಹತ್ತಿರ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬರುತ್ತಿದ್ದ ಕ್ರೋಜರ ನಂಬರ ಕೆ.ಎ. 32 ಎ 3489 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮಗ ದೀಪಕ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನ ಎರಡು ಕಾಲುಗಳಿಗೆ ರಕ್ತಗಾಯಾ ಮತ್ತು ತರಚಿದಂತಾ ಬಲಗಡೆ ಹಣೆ ಗುಪ್ತಪೆಟ್ಟಾಗಿ ಸ್ಥಳದಲ್ಲಿ ಬೇಹುಷ ಆಗಿದ್ದು . ಅಪಘಾತದ ನಂತರ ಕ್ರೋಜರ ಚಾಲಕನು ತನ್ನ ಕ್ರೋಜರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ತನ್ನ ಮಗನಿಗೆ ಅಪಘಾತ ಪಡಿಸಿದ ಕ್ರೋಜರ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಪಿರ್ಯಾದಿ ಸಾರಂಶದ ಮೇಲಿಂದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.