POLICE BHAVAN KALABURAGI

POLICE BHAVAN KALABURAGI

25 March 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 24/03/2017 ರಂದು ಸಾಯಂಕಾಲ ಶಹಾಬಾದ ಪಟ್ಟಣದ ಮಿಲತ್ ನಗರ ಮಜೀದ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಬಾಷ ಪಿ ಐ ಶಹಾಬಾದ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಶ್ರೀಧರ ತಂದೆ ನಾಗಪ್ಪಾ ಅಲಬನೂರು ಈತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1820 - 00 ರೂ,  ಒಂದು ಮಟಕಾ ನಂಬರ್ ಬರೆದ ಚೀಟಿ , ಒಂದು ಬಾಲ್ ಪೆನ್ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಲಕ್ಷ್ಮಣ ಮಾಲಿಪಾಟೀಲ ಸಾ|| ಮೋಗನಟಗಾ ಇವರ ಅಣ್ಣತಮ್ಮಕಿಯ ಸಿದ್ದಪ್ಪ ತಂದೆ ಪಂಡೆಪ್ಪ ಮಾಲಿ ಪಾಟೀಲ ಇವರ ಹೊಲ ಹೋಳೆಗೆ ಹೋಗುವ ದಾರಿಯಲ್ಲಿ ಇರುತ್ತದೆ ಅವರ ಹೊಲದಲ್ಲಿ ಕೆನಲ ಹಾಯಿದಿದ್ದು ಅದರ ಪಕ್ಕದಲ್ಲಿ ರಸ್ತೆಯ ಮೇಲೆ ನಮ್ಮೂರ ಹೊಳೆಯಿಂದ ಉಸುಕು ತುಂಬಿದ ವಾಹನಗಳು ಹಾಯಿದು ಹೋಗುತ್ತಿದ್ದರಿಂದ ಕಾಲುವೆ ಮುಚ್ಚಿದ್ದು ನಂತರ ಆ ಕಾಲುವೆ ರಿಪೇರಿ ಮಾಡಿದ್ದು ಇರುತ್ತದೆ. ಆದರೆ ಅದೇ ದಾರಿಯಲ್ಲಿ ಪೈಪಲೈನ ಪೈಪಗಳು ಹಾಳಾಗಿದ್ದು ಅದಕ್ಕೆ ರಿಪೇರಿ ಮಾಡಿಸಿರುದಿಲ್ಲಾ ಈ ವಿಚಾರದಲ್ಲಿ ನಾನು ಊರಲ್ಲಿ ಉಸುಕು ಹೊಡೆವರಿಗೆ ಪೈಪು ರಿಪೇರಿ ಮಾಡಿಸಿರಿ ಅಂದಿದಕ್ಕೆ ದಿನಾಂಕ: 22/03/2017 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಮ್ಮೂರ ಕನಕದಾಸ ಚೌಕ ಹತ್ತಿರ ನಿಂತಾಗ ನಮ್ಮೂರ ದ್ಯಾವಪ್ಪ ತಂದೆ ಶಿವರಾಯ ಮಾಲಿಪಾಟೀಲ, ಚಂದ್ರಶ್ಯಾ ತಂದೆ ಶಿವರಾಯ ಮಾಲಿಪಾಟೀಲ, ಹಣಮಂತ ತಂದೆ ದ್ಯಾವಪ್ಪ ಮಾಲಿಪಾಟೀಲ ಇವರೆಲ್ಲರೂ ನನ್ನ ಹತ್ತಿರ ಬಂದು ಏ ರಂಡಿ ಮಗನೆ ಏ ಲಚ್ಯಾ ಊರ ಮುಸಾಬರಿ ಮಾಡಬೇಕಲೆ ಅಂತ ಬೈದು ಹಣಮಂತನು ಬಡಿಗೆಯಿಂದ ಹೊಟ್ಟೆಗೆ ಹೋಡೆದನು ದ್ಯಾವಪ್ಪ ಬೆನ್ನ ಮೇಲೆ ಕೈಯಿಂದ ಹೋಡೆದನು. ಕಾಲಿನಿಂದ ಟೊಂಕಕ್ಕೆ ಒದ್ದನು. ಚಂದ್ರಶ್ಯಾ ಇವನು ನನಗೆ ಈ ರಂಡಿ ಮಗನಿಗೆ ಬಿಡಬ್ಯಾಡ್ರಿ ಹೋಡೆದು ಖಲಾಸ ಮಾಡಿರಿ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಸಿದ್ದಪ್ಪ ಪೊಲೀಸ್ ಬಿರಾದರ ಸಾ|| ಕೂಕನೂರ ತಾ|| ಜೆವರ್ಗಿ ರವರ ಮಗಳಾದ ದೇವಕ್ಕಿ ವಯಸ್ಸು 22 ವರ್ಷ ಇವಳಿಗೆ ಅರಳಗುಂಡಗಿ ಗ್ರಾಮದ ಶಂಕ್ರೆಪ್ಪ ಮುದಬಸಪ್ಪಗೋಳ ಇವರ ಮಗನಾದ ಮಲ್ಲು @ ಮಲ್ಲಿನಾಥ ಇವನಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಊರಿನ ಹಿರಿಯರ ಪ್ರಕಾರ ಮಾತುಕತೆ ಮಾಡಿ 9 .1/2 ಬಂಗಾರ ಮಾತಾಡಿ ಮದುವೆಯ ಕಾಲಕ್ಕೆ 9.1/2 ಬಂಗಾರ , ಹಾಗು ಗೃಹ ಬಳಕೆ ಸಾಮಾನುಗಳು ಮತ್ತು ಬಟ್ಟೆ-ಬರೆ ಇತ್ಯಾದಿ  ಕೊಟ್ಟು ಮದುವೆಯನ್ನು ದಿನಾಂಕ 01-05-2014 ರಲ್ಲಿ ಅರಳಗುಂಡಗಿ ಗ್ರಾಮದ ವರನ ಮನೆಯ ಮುಂದೆ ಮದುವೆ ಮಾಡಿಕೊಟ್ಟಿರುತ್ತೆವೆ. ನಂತರ ನನ್ನ ಮಗಳಾದ ದೇವಕ್ಕಿ ಇವಳಿಗೆ ಮದುವೆಯಾದ 1 ವರ್ಷದ ವರೆಗೆ ಆಕೆಯ ಗಂಡ ಮತ್ತು ಮನೆಯವರೆಲ್ಲರೂ ಅನ್ಯೋನ್ಯವಾಗಿದ್ದರು. ತದನಂತರ ನನ್ನ ಮಗಳಾದ ದೇವಕ್ಕಿ ಇವಳಿಗೆ 1) ಮಲ್ಲಿನಾಥ @ ಮಲ್ಲು ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 2) ಭಾವ ಧರೆಪ್ಪ ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 3) ಮಾವ ಶೆಂಕ್ರೆಪ್ಪ ತಂದೆ ಧರೆಪ್ಪ ಮುದಬಸಪ್ಪಗೋಳ, 4) ಅತ್ತೆ ಕಸ್ತೂರಿಬಾಯಿ ಗಂಡ ಶೇಂಕ್ರೆಪ್ಪ ಮುದಬಸಪ್ಪಗೋಳ, 5) ನೇಗೆಣಿ ಮಲ್ಲಮ್ಮ ಗಂಡ ಧರೆಪ್ಪ ಮುದಬಸಪ್ಪಗೋಳ ಹೀಗೆಲ್ಲರೂನಾವು ಹೊಲದಲ್ಲಿ ಬಾವಿ ಹೊಡಿಸಬೇಕಾಗಿದೆ ನೀನು ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ”  ಅಂತಾ ಎಲ್ಲರೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದ ಬಗ್ಗೆ ನನ್ನ ಮಗಳು ಊರಿಗೆ ಬಂದಾಗ ನನಗೂ ನನ್ನ ಹೆಂಡಿತಿಯಾದ ಮಹಾಂತಮ್ಮ, ಹಾಗು ನನ್ನ ಮಕ್ಕಳಾದ ಶರಣಗೌಡ, ನಾನಾಗೌಡ ಹೀಗೆಲ್ಲರ ಎದುರಿಗೆ ನೆಡೆದ ಘಟನೆಯ ಬಗ್ಗೆ ಹೇಳುತ್ತಿದ್ದಾಗ ನಾನು ನನ್ನ ಮಗಳಿಗೆ ಈಗಾಗಲೆ ಎಲ್ಲ ಮಕ್ಕಳಿಗೆ ಮದುವೆ ಮಾಡಿಕೊಟ್ಟು ಖಾಲಿಯಾಗಿದ್ದೆನೆ ಅವರೂ ಕೆಳಿದಷ್ಟು ಹಣ ನಾನು ಎಲ್ಲಿಂದ ತಂದು ಕೊಡಲಿ ಅಂತಾ ಸಮಾಧಾನ ಪಡಿಸಿದೆನು ಈ ಬಗ್ಗೆ ಕೊಣಸಿರಸಗಿ ಗ್ರಾಮದ ಚೆಂದಪ್ಪಗೌಡ ಹಾಗು ಅರಳಗುಂಡಗಿ ಗ್ರಾಮದ ಹುಲಿಕಂಠರಾಯಗೌಡ ಮತ್ತು ನಾನು, ನನ್ನ ಮಗಳಾದ ದೇವಕ್ಕಿ ಹಿಗೇಲ್ಲರೂ ಕೂಡಿಕೊಂಡು ಬೀಗರ ಮನೆಗೆ ಹೋಗಿ ಆಕೆಯ ಗಂಡ ಹಾಗು ಮನೆಯವರೆಲ್ಲರಿಗೂ ಇನ್ನು ಮುಂದೆ ದೇವಕ್ಕಿ ಇವಳಿಗೆ ಸರಿಯಾಗಿ ನೆಡೆಸಿಕೊಂಡು ಹೋಗುವಂತೆ ತಿಳುವಳಿಕೆ ಹೇಳಿ ನನ್ನ ಮಗಳಿಗೆ ಅಲ್ಲಿಯೇ ಬಿಟ್ಟು ಬಂದಿರುತ್ತೆವೆ. ದಿನಾಂಕ 23-03-2017 ರಂದು ನಾನು ನನ್ನ ಹೆಂಡತಿ ಮಕ್ಕಳು  ಮದ್ಯಾನ 2 ಗಂಟೆಗೆ ಮನೆಯಲ್ಲಿದ್ದಾಗ, ನಮ್ಮ ಅಣ್ಣ ತಮ್ಮಕೀಯಾ ಬಾಪುಗೌಡ ತಂದೆ ಸಾಯಬಣ್ಣಗೌಡ ಪೊಲೀಸ್ ಪಾಟೀಲ್ ಇತನು ನಮ್ಮ ಮನಗೆ ಬಂದು ಹೇಳಿದ್ದೆನೆಂದರೆ ನಿಮ್ಮ ಮಗಳಾದ ದೇವಕ್ಕಿ ಇವಳು ಶರಣಗೌಡ ಹಿರೇಗೌಡರ ಇವರ ಹೊಲದ ಬಾವಿಯಲ್ಲಿ ಬಿದ್ದಿರುತ್ತಾಳೆ ಅಂತಾ ಹೇಳಿದ ಕೂಡಲೆ ಗಾಭರಿಗೊಂಡು ನಾನು, ನನ್ನ ಹೆಂಡಿತಿಯಾದ ಮಹಾಂತಮ್ಮ, ಹಾಗು ನನ್ನ ಮಗನಾದ ನಾನಾಗೌಡ ಮತ್ತು ನನ್ನ ಅಣ್ಣತಮ್ಮಕೀಯಾ ಶರಣಗೌಡ, ಊರಿನ ಜನರೊಂದಿಗೆ ಅರಳಗುಂಡಗಿ ಗ್ರಾಮದ ಶರಣಗೌಡ ಹಿರೇಗೌಡ ಇವರ ಹೊಲದ ಬಾವಿ ಹತ್ತಿರ ಹೋಗಿ ನೋಡಲಾಗಿ ಬಾವಿಯ ನೀರಲ್ಲಿ ಶವವು ಮುಳಿಗಿದ್ದು ನನ್ನ ಮಗನಾದ ನಾನಾಗೌಡ ಹಾಗು ಕೊಣಶಿರಸಗಿ ಗ್ರಾಮದ ಮಡಿವಾಳಪ್ಪಗೌಡ ತಂದೆ ಚೆಂದಪ್ಪಗೌಡ ಮಾಲಿ ಪಾಟೀಲ್ ಇಬ್ಬರು ಕೂಡಿಕೊಂಡು ಬಾವಿಯಿಂದ ಶವವನ್ನು ಮೇಲೆ ತಂದು ಹಾಕಿದರು. ಆಗ ನಾನು ನೋಡಲಾಗಿ ನನ್ನ ಮಗಳಿಗೆ ಮುಖಕ್ಕೆ ಗುದ್ದಿದ್ದರಿಂದ ಅಲ್ಲಲ್ಲಿ ಗಾಯಗಳಾಗಿ ಹಲ್ಲಿನಿಂದ ರಕ್ತ ಸೊರುತ್ತಿತ್ತು, ಕೀವಿಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು, ತೆಲೆಯ ಮೇಲೆ ಭಾವು ಬಂದಿತ್ತು. ನನ್ನ ಮಗಳಿಗೆ ಮೇಲ್ಕಂಡ 1) ಮಲ್ಲಿನಾಥ @ ಮಲ್ಲು ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 2) ಭಾವ ಧರೆಪ್ಪ ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 3) ಮಾವ ಶೆಂಕ್ರೆಪ್ಪ ತಂದೆ ಧರೆಪ್ಪ ಮುದಬಸಪ್ಪಗೋಳ, 4) ಅತ್ತೆ ಕಸ್ತೂರಿಬಾಯಿ ಗಂಡ ಶೇಂಕ್ರೆಪ್ಪ ಮುದಬಸಪ್ಪಗೋಳ, 5) ನೇಗೆಣಿ ಮಲ್ಲಮ್ಮ ಗಂಡ ಧರೆಪ್ಪ ಮುದಬಸಪ್ಪ ಗೋಳ ಹೀಗೆಲ್ಲರೂ ವರದಕ್ಷಣೆ ರೂಪದಲ್ಲಿ ಹಣ ತರುವಂತೆ ಪೀಡಿಸಿ ನನ್ನ ಮಗಳಿಗೆ ಈಜು ಬರುತ್ತಿದ್ದು ಅವರಿಗೆ ಗೊತ್ತಿದ್ದರಿಂದ ಅವಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೈಯಿಂದ ಮತ್ತು ಯಾವುದೋ ವಸ್ತುವಿನಿಂದ ಎಲ್ಲಿಯೋ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬಾವಿಯಲ್ಲಿ ಒಗೆದಿರುತ್ತಾರೆ. ಸದರಿ ಘಟನೆಯು ಬೆಳ್ಳಿಗ್ಗೆ 10 ಗಂಟೆಯಿಂದ 11 ಗಂಟೆಯ ಅವಧಿಯಲ್ಲಿ ಆಗಿರಬಹುದು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 March 2017

Kalaburagi District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಫಕರೊದ್ದಿನ್ ಸಾಬ ತಂದೆ ಮಹಿಬೂಬಸಾಬ ಖುರೇಶಿ ಸಾ: ಕಮಲಾಪೂರ ತಾ.ಜಿ  ಕಲಬುರಗಿ  ಇವರು ಕಮಲಾಪೂರ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ನಾನು ಮಟನ ಅಂಗಡಿ ಇಟ್ಟುಕೊಂಡಿದ್ದು ನನ್ನಂತೆ ನಮ್ಮ ಅಣ್ಣತಮ್ಮಕಿಯ 1. ಗೌಸ @ ಗೌಸೊದಿನ್ ತಂದೆ ಮಕಬುಲಸಾಬ ಖುರೇಶ 2. ಮೈನೊದಿನ್ ತಂದೆ ಯಾಕುಬಸಾಬ ಖುರೇಶ 3. ಶಬ್ಬಿರ ತಂದೆ ಯಾಕುಬಸಾಬ ಖುರೇಶ 4. ಸಲೀಮ ತಂದೆ ಆದಮಸಾಬ ಖುರೇಶ ಇವರು ಕೂಡಾ ಮಟನ ಅಂಗಡಿ ಹಾಕಿಕೊಂಡಿದ್ದು ಮತ್ತು ಚಂದ್ರಕಾಂತ ವರನಾಳ ಇವರು ಕಟಿಂಗ್ ಅಂಗಡಿ, ಶ್ರೀಮತಿ ಭೀಮಾದೇವಿ ಕೊರವೇರ ಮತ್ತು ಬಬ್ಬು ತಂದೆ ಜಾಫರ ಪಿರಾ ಇವರು ಓಕಳಿ ಕ್ರಾಸ ಹತ್ತರಿ ಜ್ಯೂಸ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ಇರುತ್ತದೆ ಹಾಗೂ ಹಣಮಂತ ಗೌಡ ಇವರು ಬೇಕರಿ ಅಂಗಡಿ ಇಟ್ಟುಕೊಂಡಿದ್ದು ಇರುತ್ತದೆ. ಎಂದಿನಂತೆ ಈ ಹಿಂದೆ ದಿನಾಂಕ 20.03.2017 ರಂದು ಬೆಳ್ಳಿಗ್ಗೆ 8 ಗಂಟೆಯ ನಾನು ನನ್ನ ಅಂಗಡಿಗೆ ಬಂದು ವ್ಯಾಪಾರ ಮಾಡಿಕೊಂಡಿದ್ದು ನನ್ನಂತೆ ಉಳಿದವರು ಕೂಡಾ ತಮ್ಮ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು ಅಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಓಕಳಿ ಕ್ರಾಸ ಹತ್ತಿರ ಇರುವ ಬಬ್ಬು ಪಿರಾ ಇವರ ಅಂಗಡಿಯ ಮುಂದೆ ಒಂದು ಟಾಟಾ ಸುಮೊ ನಂ ಕೆಎ 32 ಎಮ್ 5195 ನೇದ್ದು ನಿಂತ್ತಿದ್ದು ಅದರಲ್ಲಿದ್ದ 4-5 ಜನರು ಕೆಳಗೆ ಇಳಿದು ಬಬ್ಬು ಇವರ ಅಂಗಡಿಯಲ್ಲಿ ಜ್ಯೂಸ ಕುಡಿದಿದ್ದು ಕುಡಿದ ಸ್ವಲ್ಪ ಸಮಯದಲ್ಲಿ ಸದರಿ ಟಾಟಾ ಸುಮೊದಲ್ಲಿ ಬಂದಿರುವವರು ಹಣ ಕುಡುವ ವಿಷಯವಾಗಿ ಬಬ್ಬು ಸಂಗಡ ಜಗಳ ಮಾಡುತ್ತಿದ್ದು ಅವರಲ್ಲಿ ಕೆಲವರು ಬಬ್ಬು ಇವರ ಜೋಸ ಅಂಗಡಿಯಲ್ಲಿ ಇದ್ದ ಖುರ್ಚಿ ಗ್ಲಾಸಗಳನ್ನು ಒಡೆದು ಹಾಕುತ್ತಿದ್ದು ಮತ್ತು ಪಕ್ಕದಲ್ಲಿದ್ದ ಹಣಮಂತ ಗೌಡ ಇವರ ಬೇಕರಿ ಮುಂದೆ ಇಟ್ಟಿದ ಸೊಡಾ ಬಾಟಲಿಗಳನ್ನು ತೆಗೆದುಕೊಂಡು ರಸ್ತೆಯ ಮೇಲೆ ಒಡೆದು ಹಾಕುತ್ತಿದ್ದು ಆಗ ನಾನು ಮೈನೊದಿನ್, ಶಬ್ಬೀರ, ಸಲೀಮ ಇತರರು ಕೂಡಿಕೊಂಡು ಸದರಿಯವರ ಹತ್ತಿರ ಹೋಗಿ ಯಾಕಿ ಜಗಳ ಮಾಡುತ್ತಿರಿ ನೀವು ಹೀಗೆ ಮಾಡುವದು ಸರಿ ಇರುವದಿಲ್ಲ ಅಂತ ನಾವು ಹೇಳಿದ್ದು ಅಗ ಅವರಲ್ಲಿ ಒಬ್ಬನು ನನ್ನನು ಹಿಡಿದುಕೊಂಡು ಏ ರಂಡಿ ಮಗನೆ ನೀನು ಯಾರು ಕೇಳುವವನು ಅಂತ ಬೈಯುತ್ತಾ ನನಗೆ ಹಿಡಿದುಕೊಂಡಿದ್ದು ಉಳಿದ 4 ಜನರು ನನ್ನ ಸಂಗಡ ಬಂದವರ ಕಡೆಗೆ ಸೊಡಾ ಬಾಟಲಿಗಳು ಬಿಸಾಡಿ ಅವರಿಗೆ ಓಡಿಸಿದ್ದು ನಂತರ ಎಲ್ಲರು ಕೂಡಿಕೊಂಡು ಈ ರಂಡಿ ಮಗನ ಸೊಕ್ಕು ಇದ್ದ ಹಾಗೆ ಕಾಣುತ್ತದೆ ಇವನಿಗೆ ಖಲಾಸ ಮಾಡಿದರೆ ಕಮಲಾಪೂರದಲ್ಲಿ ನಮ್ಮ ಹವಾ ಆಗುತ್ತದೆ ಅಂತ ಅನ್ನುತ್ತಾ ನನಗೆ ಹಿಡಿದುಕೊಂಡವನು ನನ್ನ ಕುತ್ತಿಗೆಯನ್ನು ಒತ್ತಿಯಾಗಿ ಹಿಡಿದು ನನಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಆಗ ನನಗೆ ಉಸಿರಾಡಲು ಬಹಳ ತೊಂದರೆ ಯಾಗುತ್ತಿದ್ದರಿಂದ ನಾನು ನನ್ನಲ್ಲಿಯ ಎಲ್ಲಾ ಶಕ್ತಿಯನ್ನು ಉಪಯೋಗಿ ಅವನಿಗೆ ನೋಕಿ ಕೊಟ್ಟು ಅಲ್ಲಿಂದ ಓಡಿ ಬಸ್ಸ ನಿಲ್ದಾಣಕ್ಕೆ ಹೋಗಿದ್ದು ಅದೆ ವೇಳೆಗೆ ಬಸ್ಸ ನಿಲ್ದಾಣದಲ್ಲಿ ಇದ್ದ ಬಸ್ಸಿಗೆ ಕುಳಿತು ಕಲಬುರಗಿಗೆ ಹೋಗಿ ಅಂಜಿ ಕಲಬುರಗಿಯಲ್ಲಿ ಉಳಿದುಕೊಡಿದ್ದು ಇರುತ್ತದೆ. ಇಂದು ದಿನಾಂಕ 23.03.2017 ರಂದು ಮಧ್ಯಾನ 1 ಗಂಟೆಯ ನಾನು ಕಮಲಾಪೂರಕ್ಕೆ ಬಂದು ನಮ್ಮ ಅಂಗಡಿ ಹೋಗಿ ನೋಡಲು ಬಬ್ಬು ಇವರ ಅಂಗಡಿಯ ಪಕ್ಕದಲ್ಲಿ ಅದೆ ಟಾಟಾ ಸೊಮೊ ತೆಗೆದುಕೊಂಡು ಬಂದವರು ಟಾಟಾ ಸೊಮೊವನ್ನು ಅಲ್ಲೆ ಬಿಟ್ಟು ಹೋಗಿದ್ದು ಈಗ ಸಧ್ಯ ಸದರಿ ಟಾಟಾ ಸೊಮೊ ಅಲ್ಲೆ ಇದ್ದು ಅದರ ಮುಂದಿನ ಗ್ಲಾಸ ಒಡೆದಿದ್ದು ಇರುತ್ತದೆ. ನನ್ನಗೆ ಕೊಲೆ ಮಾಡಲು ಪ್ರಯತ್ನಿಸಿದವರನ್ನು ನೋಡಿದರೆ ಗುರುತಿಸುತ್ತೆನೆ. ನನ್ನ ಕುತ್ತಿಗೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿದ ಮತ್ತು ಬಬ್ಬು ಹಾಗೂ ಹಣಮಂತ ಗೌಡ ಇವರ ಅಂಗಡಿಯ ಖುರ್ಚಿಗಳು ಮತ್ತು ಸೊಡಾ ಬಾಟಲಿಗಳನ್ನು ಓಡೆದು ಹಾಳು ಮಾಡಿದ ಟಾಟಾ ಸುಮೊ ನಂ ಕೆಎ 32 ಎಮ್ 5195 ನೇದ್ದರಲ್ಲಿ ಬಂದ ಅಪರಿಚಿ 5 ಜನರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಹತ್ತಿ ಫ್ಯಾಕ್ಟರಿ ಸುಟ್ಟ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶೈಲೇಶ ತಂದೆ ಬಳಿರಾಮ ವಾಕೊಡೆ ಸಾ: ಎನ್.ವಿ ಲೇಔಟ ಕಲಬುರಗಿ ರವರ ಅಣ್ಣ ತಮ್ಮಕಿಯ ಮಾರುತಿ ತಂದೆ ಗಂಗಾಧರ ವಾಕೊಡೆ ಇವರು ಕಮಲಾಪೂರ ಗ್ರಾಮದ ಸರ್ವೆ  ನಂ 339/2 ನೇದ್ದರಲ್ಲಿ ದಿನಾಂಕ 30.06.2016 ರಿಂದ ಮಂಗಲಂ ಇಂಡಸ್ಟ್ರೀಜ್ ಹೆಸರಿನ ಟೈರ ಪೇರೊಸಿಸ್ ಆಯಲ್ ಪ್ಯಾಕ್ಟರಿ ಹಾಕಿದ್ದು. ಸದರಿ ಪ್ಯಾಕ್ಟರಿಯನ್ನು ಮಾಲಿಕಾರ ಮಾರುತಿ ಇವರು ಬಾಂಬೆಯಲ್ಲಿ ಇರುತ್ತಿದ್ದರಿಂದ ಸದರಿ ಪ್ಯಾಕ್ಟರಿಯನ್ನು ನಾನೆ ನೋಡಿಕೊಂಡು ಬಂದಿದ್ದು ಇರುತ್ತದೆ.  ನಮ್ಮ ಫ್ಯಾಕ್ಟರಿಯಲ್ಲಿ 1. ಪಿಂಟು ತಂದೆ ಚಂದರ ಯಾದವ ಸಾ: ಬಿಹಾರ 2. ಮಹೇಂದ್ರ ತಂದೆ ಮಿಸ್ಟರ ಯಾದವ, 3, ರಾಮರೂಪ ಯಾದವ ತಂದೆ ಕಾಮೂ ಯಾದವ 4. ಲಖನ ಯಾದವ ತಂದೆ ಕೈಲಯಾದವ 5. ಜೋಗಿಂದರ ತಂದೆ ಬೇಚುಯಾದವ 6. ಪಿಂಟು ತಂದೆ ರಾಮಚಂದ್ರ ಯಾದವ 7. ಸಂಜಯ ತಂದೆ ಗಣೇಶ ಯಾದವ ಹಾಗೂ ಇನ್ನು ಕೆಲವರು ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು ಇರುತ್ತದೆ. ನಮ್ಮ ಪ್ಯಾಕ್ಟರಿಯ ವಾಚಮ ಅಂತ ರಮೇಶ ತಂದೆ ದಸ್ತಯ್ಯ ಗುತ್ತೆದಾರ ಸಾ:ಬ್ಯೂಯಾರ ಇವರು ಕೆಲಸ ಮಾಡಿಕೊಂಡು ಬಂದಿದ್ದು ದಿನಾಂಕ 21.03.2017 ರಿಂದ ನಿನ್ನೆ ದಿನಾಂಕ 22.03.2017 ರಂದು ಬೆಳ್ಳಿಗ್ಗೆ 11 ಗಂಟೆಯವರೆಗೆ ಪ್ರಾರಂಭ ನಂತರ ಪ್ಯಾಕ್ಟರ ಬಂದ ಮಾಡಿದ್ದು ಇರುತ್ತದೆ. ನಿನ್ನೆ ಮಧ್ಯಾನ 2:30 ಗಂಟೆಯ ಸುಮಾರಿಗೆ ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 1. ಪಿಂಟು ಭಾರತಿ ತಂದೆ ಭಿವನ ಭಾರತಿ ಸಾ: ಬಿಹಾರ ಮತ್ತು 2 ಸಂಜಯ ತಂದೆ ಶ್ರೀಗಣೇಶ ಯಾದವ ಸಾ: ಬಿಹಾರ ಇವರು ರಿಯಾಕ್ಟರ ನಂಬರ 2 ನೇದ್ದು ತೆಗೆಯಲು ಹೊದಾಗ ಆಕಸ್ಮಿಕವಾರಿ ರಿಯಾಕ್ಟರದಿಂದ ಬೆಂಕಿ ಹೊರಗೆ ಪ್ಯಾಕ್ಟರಿಗೆ ಬಂಕಿ ಹತ್ತಿದ್ದರಿಂದ ಇಬ್ಬರು ಬೆಂಕಿ ಹತ್ತಿ ಪ್ಯಾಕ್ಟರಿಗು ಬೆಂಕಿ ಹತ್ತಿದ್ದು ಪ್ಯಾಕ್ಟರಿಯಲ್ಲಿ ಇದ್ದ ಉಳಿದ ಕೆಲಸಗಾರಗು ಹೊರಗೆ ಓಡಿ ಹೋಗಿದ್ದು ಪಿಂಟು ಮತ್ತು ಸಂಜಯ ಇವರ ಮೈಗೆ ಬೆಂಕಿ ಹತ್ತಿದ್ದರಿಂದ ಅವರ ಮೈ ಮೇಲೆ ಸುಟ್ಟಗಾಯಗಳಾಗಿದ್ದು ಇರುತ್ತದೆ. ನಂತರ ನಾನು 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದು ಮತ್ತು ಬೆಂಕಿ ಆರಿಸುವ ಕುರಿತು ಅಗ್ನಿಶಾಮಕ ಠಾಣೆಗೆ ಪೋನ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು ಆಗ ನಾನು ಪಿಂಟು ಮತ್ತು ಸಂಜಯ ಇವರಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೇಗೆ ಕರೆದುಕೊಂಡು ನಂತರ ಅಗ್ನಿಶಾಮಕ ಸಿಬ್ಬಂದಿಯವರು ಬಂದು ನಮ್ಮ ಪ್ಯಾಕ್ಟರಿಗೆ ಹತ್ತಿದ ಬೆಂಕಿಯನ್ನು ಆರಿಸಿದ್ದು ಇರುತ್ತದೆ. ಬೆಳ್ಳಿಗ್ಗೆ ನಾನು ಫ್ಯಾಕ್ಟರಿಗೆ ಬಂದು ನೋಡಲು ಪ್ಯಾಕ್ಟರಿಗೆ ಬಂಕಿ ಹತ್ತಿದ್ದರಿಂದ ಪ್ಯಾಕ್ಟರಿಯಲ್ಲಿ ಇದ್ದ 1. ರಿಯಾಕ್ಟರ ಕೂಲಿಂಗ್ ಮಶೀನ್ ಅಂದಾಜ ಕಿಮ್ಮತ್ತು 3 ಲಕ್ಷ ರೂಪಾಯಿ 2. ಎರಡು ವಿಂಚ್ ಮಷೀನ್ಗಳು ಅಂದಾಜ ಕಿಮ್ಮತ್ತು 36,000/- ರೂಪಾಯಿ 3. 30 ಟನ್ ಟೈರಗಳಗು ಅಂದಾಜ ಕಿಮ್ಮತ್ತು 2,70,000/- ರೂಪಾಯಿ. ವೈಯರ್, ಲೈಟಿಂಗ್ ಮತ್ತು ಇತರೆ ಸಲಕರಣೆಗಳು ಅಂದಾಜ ಕಿಮ್ಮತ್ತು 20,000/- ರೂಪಾಯಿ ಹೀಗೆ ಒಟ್ಟು 6 ಲಕ್ಷ 26 ಸಾವೀರ ರುಪಾಯಿ ಸಾಮಾನುಗಳು ಸಂಪೂರ್ಣ ಸುಟ್ಟು ಹಾಳಾಗಿದ್ದು ಇರುತ್ತದೆ. ಅಂತಾ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

23 March 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ :ದಿನಾಂಕ: 22/03/2017 ರಂದು ಬಸಮ್ಮಾ ಕಿರಣಗಿ ಇವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ದಿನಾಂಕ: 21/03/2017 ರಂದು ತಾನು ಮಾವನೂರ ಗ್ರಾಮಕ್ಕೆ ಬಂದು ಅಲ್ಲಿಂದ ಜೇವರ್ಗಿಗೆ ಹೋಗುವ ಕುರಿತು ಮಾವನೂರ ಬಸ ನಿಲ್ದಾಣದಲ್ಲಿ ರಾಜು ಕಿರಣಗಿ ಇವರ ಟಂಟಂ ನಂ: ಕೆಎ 32 ಬಿ 3502 ರಲ್ಲಿ ರಾಯಪ್ಪ ತಂದೆ ನಿಂಗಪ್ಪ ಯಲಗೊಂಡ, ಅರ್ಜುನ ತಂದೆ ಭೀರಪ್ಪ ಕಿರಣಗಿ ಇವರೊಂದಿಗೆ ಕುಳಿತು  ಹೋಗುತ್ತಿರುವಾಗ ಒಂದು ಬೊಲೆರೋ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಯಿಸಿಕೊಂಡು ನಾವು ಕುಳಿತ ಟಂಟಂಕ್ಕೆ ಅಪಘಾತ ಪಡಿಸಿದ್ದು  ಆಗ ನನಗೆ ಭಾರಿ ಗಾಯಗಳಾಗಿದ್ದು ಕಲಬುರಗಿಯ  ಗಂಗಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಮ್ಮ ಟಂಟಂಕ್ಕೆ ಅಪಘಾತ ಪಡಿಸಿದ ಬೋಲೇರೋ ಪಿಕಪ ವಾಹನ ನಂ: ಕೆಎ 32 ಡಿ 6902 ಅಂತ ಇದ್ದು ಬೊಲೆರೋ ಪಿಕಪ ನಂ. ಕೆಎ 32 ಡಿ 6902 ನೇದ್ದರ ಚಾಲಕನ ಮೇಲೆ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರರ ಬಂಧನ:

ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ 22/03/2017 ರಂದು ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಶಹಾಬಾದ ಪಟ್ಟಣದ ಭಾರತ ಚೌಕ್ದಲ್ಲಿ ಮಟಕಾ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಟೆದು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದು ಚೀಟಿ ಬರೆದುಕೊಳ್ಳುತ್ತಿದ್ದ ರಾಜಶೇಖರ್ ತಂದೆ ಗುರುಲಿಂಗಪ್ಪಾ ಸಾ: ಶಹಾಬಾದ ಈತನಿಗೆ ದಸ್ತಗೀರ ಮಾಡಿ ಆತನಿಂದ ನಗದು ಹಣ 610 ರೂ ಒಂದು ಮಟಕಾ ಚೀಟಿ, ಒಂದು ಪೆನ್ ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಶಹಾಬಾದ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.