POLICE BHAVAN KALABURAGI

POLICE BHAVAN KALABURAGI

14 February 2017

Kalaburagi District Reported Crimes.

ಜೇವರಗಿ  ಠಾಣೆ. : ದಿ 12.02.2017 ರಂದು 22:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯರವರಲ್ಲಿ ನಾನು ಭೀಮರಾಯ ತಂದೆ ಶಂಕರ ಗಾಣಿಗೇರ ವಯಾಃ 40 ವರ್ಷ, ಉಃ ಒಕ್ಕಲುತನ ಜಾತಿಃ ಗಾಣಿಗೇರ ಸಾಃ ನೇಲೊಗಿ ತಾಃ ಜೇವರಗಿ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ, ನನ್ನ ತಮ್ಮನಾದ ಚಂದ್ರಕಾಂತ ಗಾಣೀಗೇರ ವಯಾಃ 28 ವರ್ಷ, ಇವನ ಹೆಂಡತಿಯಾದ ಅಕ್ಕಮ್ಮ ಇವಳಿಗೆ ಮೂರನೇ ಹೇರಿಗೆ ಸಲುವಾಗಿ ನಿನ್ನೆ ದಿನಾಂಕ 12.02.2017 ರಂದು ಮುಂಜಾನೆ ಕಲಬುರಗಿಗೆ ಕರೆದುಕೊಂಡು ಹೋಗಿ ಹರವಾಳಕರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಅದಕ್ಕಾಗಿ ನಿನ್ನೆ ರಾತ್ರಿ 10.00 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನನ್ನ ತಮ್ಮನಾದ ಚಂದ್ರಕಾಂತ ಇತನು ನಮ್ಮ ಮೊಟಾರ್ ಸೈಕಲ ನಂ ಕೆಎ-36-ಯು-5200 ನೇದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಕಲಬುರಗಿಗೆ ಹೋಗುವದಾಗಿ ಬಂದಿದ್ದನು. ರಾತ್ರಿ ಅಂದಾಜ 10.45 ಗಂಟೆ ಸುಮಾರಿಗೆ  ನನಗೆ ಪರಿಚಯದ ಜೇವರಗಿ ಪಟ್ಟಣದ ನಿಂಗಣ್ಣಾ ಪೂಜಾರಿ, ಇವರು ಪೊನ ಮಾಡಿ ರೇವನೂರ ಕ್ರಾಸ್ ಹತ್ತಿರ ನೀಮ್ಮ ತಮ್ಮ ಚಂಧ್ರಕಾಂತನ ಮೊಟಾರ್ ಸೈಕಲಿಗೆ ಕಾರ ಡಿಕ್ಕಿಯಾಗಿ ಅವನು ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತಾ ಹೇಳಿದನು. ಆ ಮೇಲೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಮಲ್ಕಣ್ಣ ಗಾಣೀಗೇರ ನಮ್ಮೂರ ಸೋಮರಾಯ ಗುಜಗೊಂಡ ಕೂಡಿಕೊಂಡು ರೇವನೂರ ಕ್ರಾಸ್ ಹತ್ತಿರ ಸ್ಥಳಕ್ಕೆ ಬಂದು ನೋಡಲಾಗಿ ರೋಡಿನ ಮೇಲೆ ನನ್ನ ತಮ್ಮನ ಹೆಣ ಬಿದ್ದಿತ್ತು ಅವನ ಮೊಟಾರ್ ಸೈಕಲ್ ಕೂಡಾ ಸ್ಥಳದಲ್ಲಿಯೇ ಜಖಂಗೊಂಡು ಬಿದ್ದಿತ್ತು. ನನ್ನ ತಮ್ಮನಿಗೆ ನೋಡಲು ಅವನ ಹಣೆಗೆ, ಮುಖಕ್ಕೆ ಬಾರಿ ರಕ್ತಗಾಯ, ಬಲಗಾಲ ತೊಡೆಯ ಹತ್ತಿರ ಮುರಿದಂತೆ ಗಾಯವಾಗಿದಕ್ಕೆ ಮೃತ ಪಟ್ಟಿದ್ದನು ಘಟನೆ ಸ್ಥಳದಲ್ಲಿ ನಿಂಗಣ್ಣ ಪೂಜಾರಿ ಹಾಗೂ ವಜಿಯೋದ್ದಿನ ಜಮಾದಾರ ಇದ್ದರು. ಘಟನೆಯ ಬಗ್ಗೆ ನಾವು ನಿಂಗಣ್ಣ ಪೂಜಾರಿ ಇತನಿಗೆ ಕೇಳಲು ಹೇಳಿದ್ದೇನಂದರೆ, ದಿ. 12.02.2017 ರಂದು ನಾನು ಮತ್ತು ನನ್ನ ಗೆಳೆಯನಾದ ವಜೀಯೊದ್ದೀನ್ ಜಮಾದಾರ  ಕೂಡಿ  ಮೊಟಾರ್ ಸೈಕಲ ಮೇಲೆ  ಸೊನ್ನ ಕ್ರಾಸ್ ದಿಂದ  ಜೇವರಗಿಗೆ ಕಡೆಗೆ ಹೊರಟಿದ್ದೇವು.  ರಾತ್ರಿ 10.30 ಗಂಟೆಗೆ  ಸುಮಾರಿಗೆ ನಾವು ಜೇವರಗಿ -ಸಿಂದಗಿ ಮೇನ್ ರೊಡ ರೇವನೂರ ಕ್ರಾಸ್ ಹತ್ತಿರ  ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ರೊಡಿನ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದುಗಡೆಯಿಂದಲೇ ಜೇವರಗಿ ಕಡೆಗೆ ಹೋಗುತ್ತಿದ ಒಬ್ಬ ಮೊಟಾರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ಕಾರ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದನು. ಇದರಿಂದ ಮೊಟಾರ್ ಸೈಕಲ್ ಸವಾರ ಮೊಟಾರ್ ಸೈಕಲ್ ಸಮೇತ ರೋಡಿನಲ್ಲಿ ಬಿದ್ದನು. ನಾವು ಅವನ ಹತ್ತಿರ ಹೋಗಿ ನೋಡಲು ಆತನು ನಿಮ್ಮ ತಮ್ಮ ಚಂದ್ರಕಾಂತ ಇದ್ದನು. ಅವನಿಗೆ ಬಾರಿ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೇ ಸತ್ತಿದ್ದನು. ಕಾರಿನ ಚಾಲಕ ಆತನು ಸತ್ತಿದ್ದನ್ನು ನೋಡಿ ತನ್ನ ಕಾರ ತೆಗೆದುಕೊಂಡು ಸಿಂದಗಿ ರೊಡಿನ ಕಡೆಗೆ ಓಡಿಸಿಕೊಂಡು ಹೋದನು. ಕಾರ ನಂ ಕೆ.-32-ಎನ್-6916 ಇತ್ತು ಅದರ ಚಾಲಕನ ಹೆಸರು ಗೊತ್ತಿರುವುದಿಲ್ಲಾ ಅಂತಾ ಹೇಳಿದನು. ನಂತರ ನಾವು ನಮ್ಮ ತಮ್ಮನ ಹೆಣವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ದವಾಖಾನೆಯಲ್ಲಿ ತಂದು ಹಾಕಿರುತ್ತೆವೆ. ಕಾರ ನಂ ಕೆಎ-32-ಎನ್-6916 ನೇದ್ದರ ಚಾಲಕನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ತಮ್ಮ ನಡೆಸಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಕ್ಕೆ ಈ ಘಟನೆ ಸಂಭಂವಿಸಿದ್ದು, ಘಟನೆ ನಂತರ ಕಾರ ಚಾಲಕ ಕಾರ ಸಮೇತ ಓಡಿ ಹೋಗಿದ್ದು ಅವನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ಕ್ರಮ ಕೈಕೊಳಲು ವಿನಂತಿ  ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 24/2017 ಕಲಂ 279. 304() ಐಪಿಸಿ ಮತ್ತು ಕಲಂ 187 .ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿ.  
ಜೇವರಗಿ ಪೊಲೀಸ್ ಠಾಣೆ : ದಿನಾಂಕ:13/02/2017 ರಂದು ಬೆಳಗ್ಗೆ 10.30 ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಹೊಂದುತ್ತಿದ್ದ  ಶ್ರೀ ನಿಂಗಣ್ಣ ತಂದೆ ಬಸವಣಪ್ಪಾ ಹೊನಗೊಂಡ ವ:55 ಜಾ:ಲಿಂಗಾಯತ ಉ:ಹಾಲಿನ ವ್ಯಾಪಾರ ಸಾ:ಜೆ.ಆರ್‌.ನಗರ ಕಲಬುರಗಿ ಇವರಿಗೆ ಭೇಟಿಯಾಗಿ ಘಟನೆ ಬಗ್ಗೆ ವಿಚಾರಿಸಿದ್ದು ಸದರಿಯವರು ಒಂದು ಲಿಖಿತ ದೂರು ಹಾಜರ ಪಡಿಸಿದ್ದು ದೂರಿನ ಸಾರಾಂಶವೆನೆಂದರೆ, ನಾನು ಕಲಬುರಗಿ ನಗರದ ದೇವಿನಗರ ಕಮಾನ ಹತ್ತಿರ ಹಾಲಿನ ಡೀಲರಾದ ನಿಂಗರಾಜ ಇತನ ಹತ್ತಿರ ಹಾಲು ತೆಗೆದುಕೊಂಡು ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತೇನೆ. ನನ್ನಂತೆ ಆಳಂದ ಕಾಲೋನಿಯ ವಿಜಯಕುಮಾರ ಎಂಬುವರು ಅದೆ ಮಾಲಿಕನ ಹತ್ತಿರ ಹಾಲು ತೆಗೆದುಕೊಂಡು ವ್ಯಾಪಾರ ಮಾಡುತ್ತಾ ಬರುತ್ತಾನೆ. ಇಂದು ದಿನಾಂಕ:13/02/2017 ರಂದು ಬೆಳಗ್ಗೆ 5.30 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ನಾನು ಹಾಲಿನ ಪಾಕಿಟಗಳನ್ನು ತೆಗೆದುಕೊಂಡು ಇಡುತ್ತಿರುವಾಗ ಸದರಿ ವಿಜಯಕುಮಾರ ಈತನು ನೀನು ಬೇರೆಕಡೆ ಹಾಲಿನ ಟ್ರೇಯಗಳು ಇಡಬೇಕು ಅಂತಾ ಕಾಲಿನಿಂದ ಒದ್ದು ಸರಿಸುತ್ತಿದ್ದನು ಆಗ ನನ್ನ ಹಾಲಿನ ಟ್ರೇಯಗಳಿಗೆ ಏಕೆ ಸರಿಸುತ್ತಿರಿ ಎಂದು ಕೇಳಿದಾಗ ಅವನು ನೀನು ಇಲ್ಲಿ ಏಕೆ ಹಾಲಿ ಇಡುತ್ತಿ ಸೂಳೆ ಮಗನೆ ರಂಡಿ ಮಗನೆ ಅಂತಾ ಬೈದು ಅಲ್ಲೆ ಇದ್ದ ನನ್ನ ಒಂದು ಹಾಲು ಹಾಕುವ ಪ್ಲಾಸ್ಟೀಕ ಟ್ರೇಯ ಇಂದ ನನ್ನ ತಲೆಯ ಮೇಲೆ ಬಲಗಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಅದೆ ಟ್ರೇಯದಿಂದ ಬೆನ್ನಿನ ಮೇಲೆ ಟೊಂಕದ ಮೇಲೆ ಹೊಡೆಯುತ್ತಿರುವಾಗ ಸದರಿ ಲಿಂಗರಾಜ ಮತ್ತು ರೇವಣಸಿದ್ದಪ್ಪಾ ಇವರು ಜಗಳ ಬಿಡಿಸಿರುತ್ತಾರೆ. ಅವರು ಬಿಡಿಸದೆ ಇದ್ದಲ್ಲಿ ಇನ್ನೂ ನನಗೆ ಬಹಳ ಹೊಡೆಬಡೆ ಮಾಡುತ್ತಿದ್ದರು ನನಗೆ ರಕ್ತಗಾಯ ಮತ್ತು ಗುಪ್ತಗಾಯ ಆಗಿರುವದರಿಂದ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ಆತನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು ನೀಡಿದ್ದು ಸದರಿ ದೂರಿನೊಂದಿಗೆ ಮರಳಿ ಬೆಳಗ್ಗೆ 11.30 ಗಂಟೆಗೆ ಠಾಣೆಗೆ ಬಂದು ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.26/17 ಕಲಂ:323,324,504 ಐಪಿಸಿ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ 13-02-2017 ರಂದು 5:00 ಪಿ ಎಮ್ ಕ್ಕೆ ಶ್ರೀ ಶರಣಪ್ಪ ತಂದೆ ಪೀರಪ್ಪ ಗೌಂಡಿ ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನೀಡಿದ್ದು, ಸದರ ಪಿರ್ಯಾದಿಯ ಸಾರಾಂಶವೇನೆಂದರೆ ನಾನು ಮೇಲ್ಕಾಣಿಸಿದ ವಿಳಾಸದವನಿದ್ದು ಗೌಂಡಿ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತೇನೆ. ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ನನ್ನ ಸೋದರ ಅತ್ತೆ ಕಸ್ತೂರಬಾಯಿ ಗಂಡ ಮಲ್ಲಪ್ಪ ವಿಜಾಪೂರೆ ವಯಾ|| 65 ವರ್ಷ ಎಂಬಾಕೆ ಇರುತ್ತಾಳೆ. ಸದರಿಯವಳು ಹೈದ್ರಾ ಗ್ರಾಮದಲ್ಲಿರುವ ಖಾಜಾಸಾಬ ದರ್ಗಾಕ್ಕೆ ಹೋಗುವ ಸಂಬಂದ ದಿನಾಂಕ 27-01-2017 ರಂದು ಬೆಳಿಗ್ಗೆ ನಮ್ಮ ಮನೆಗೆ ಬಂದಿರುತ್ತಾಳೆ. ನಾನು ನಮ್ಮ ಅತ್ತೆಯನ್ನು ನನ್ನ ಮೋಟರ ಸೈಕಲ ನಂ ಎಮ್.ಹೆಚ್-13 ಬಿ.ಜೆ-0609 ನೇದ್ದರ ಮೇಲೆ ಕೂಡಿಸಿಕೊಂಡು ಹೈದ್ರಾ ಗ್ರಾಮಕ್ಕೆ ಹೊರಟಿದ್ದೆನು. ಮಾರ್ಗ ಮದ್ಯದಲ್ಲಿ ಬೆಳಿಗ್ಗೆ 11:20 ಗಂಟೆ ಸುಮಾರಿಗೆ ಮಾಶಾಳ ಗ್ರಾಮದಿಂದ ಹೈದ್ರಾ ಗ್ರಾಮಕ್ಕೆ ಹೊಗುವ ರೋಡಿನ ಪಕ್ಕದಲ್ಲಿರುವ ಹಿಪ್ಪರಗಿ ರವರ ಹೊಲದ ಹತ್ತಿರ ಮೂತ್ರ ವಿಸರ್ಜನೆಗೆಂದು ರೋಡಿನ ಪಕ್ಕದಲ್ಲಿ ನನ್ನ ಮೋಟಾರ ಸೈಕಲ ನಿಲ್ಲಿಸಿರುತ್ತೇನೆ. ಅದೆ ಸಮಯಕ್ಕೆ ಮಾಶಾಳ ಗ್ರಾಮದಿಂದ ಹೈದ್ರಾ ಗ್ರಾಮದ ಕಡೆಗೆ ನನ್ನ ಹಿಂದಿನಿಂದ ಲಾರಿ ನಂ ಕೆಎ-32 7392 ನೇದ್ದು ಬರುತ್ತಿದ್ದು, ಅದರ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ ಪಕ್ಕದಲ್ಲಿ ನಿಂತಿದ್ದ ನನ್ನ ಮೋಟಾರ ಸೈಕಲಿಗೂ ಮತ್ತು ನನ್ನ ಸೋದರ ಅತ್ತೆಗೂ ಜೋರಾಗಿ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆ. ಸಮಯದಲ್ಲಿ ಸದರಿ ಲಾರಿಯ ಹಿಂದೆ ಮೋಟರ ಸೈಕಲ ಮೇಲೆ ಬರುತ್ತಿದ್ದ ಹೈದ್ರಾ ಗ್ರಾಮದ ಶ್ರೀಮಂತ ತಂದೆ ಈರಣ್ಣ ರೂಗಿ ರವರು ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿರುತ್ತಾರೆ. ಸದರಿ ಘಟನೆಯಲ್ಲಿ ನನ್ನ ಸೋದರ ಅತ್ತೆಗೆ ಎರಡು ಕಾಲುಗಳಿಗೂ ಮತ್ತು ಹೊಟ್ಟೆಗೆ ಬಾರಿ ರಕ್ತಗಾಯವಾಗಿ ತಲೆಗೆ ಬಾರಿ ಒಳಪೆಟ್ಟಾಗಿರುತ್ತದೆ. ಮತ್ತು ನನ್ನ ಮೋಟರ ಸೈಕಲ ಸಹ ಜಕಂ ಗೊಂಡಿರುತ್ತದೆ. ಆಗ ನಾನು ಸದರಿ ಘಟನೆಯ ಬಗ್ಗೆ ನನ್ನ ಸೋದರತ್ತೆಯ ಮಗನಾದ ಕಾಶಿನಾಥ ತಂದೆ ಮಲ್ಲಪ್ಪ ವಿಜಾಪೂರೆ ಪೋನ ಮೂಲಕ ವಿಷಯ ತಿಳಿಸಿರುತ್ತೇನೆ. ನಂತರ ಕಾಶಿನಾಥ ವಿಜಾಪೂರೆ, ಪ್ರಕಾಶ ಗೌಂಡಿ, ವಿಜಯಕುಮಾರ ಗೌಂಡಿ ಮತ್ತಿತರರು ಒಂದು ಖಾಸಗಿ ಬೋಲೆರೊ ವಾಹನದಲ್ಲಿ ಘಟನೆ ಸ್ಥಳಕ್ಕೆ ಬಂದಿರುತ್ತಾರೆ. ನಾವೆಲ್ಲರೂ ಗಾಯಹೊಂದಿದ ನಮ್ಮ ಸೋದರತ್ತೆಯನ್ನು ಬೋಲೆರೊ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಅಕ್ಕಲಕೋಟಕ್ಕೆ ಕರೆದುಕೊಂಡು ಹೋಗಿರುತ್ತೇವೆ. 1:00 ಪಿ ಎಮ್ ಸುಮಾರಿಗೆ ನಮ್ಮ ಅತ್ತೆಯನ್ನು ಪರಿಕ್ಷೀಸಿದ ಅಕ್ಕಲಕೋಟ ಸರ್ಕಾರಿ ಆಸ್ಪತ್ರೆಯ ವೈದ್ಯಾದಿಕಾರಿಯವರು ಸದರಿಯವಳು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ಅಕ್ಕಲಕೋಟ ಪೊಲೀಸನವರು ಆಸ್ಪತ್ರೆಗೆ ಬಂದು ಶವ ಪಂಚನಾಮೆ ಕೈಕೊಂಡು ಪಿ.ಎಮ್. ಮಾಡಿಸಿಕೊಟ್ಟ ನಂತರ ಮೃತಳ ಶವವನ್ನು ಸರಸಂಬಾ ಗ್ರಾಮಕ್ಕೆ ತಗೆದುಕೊಂಡು ಶವ ಸಂಸ್ಕಾರ ಮಾಡಿರುತ್ತೇವೆ. ನನ್ನ ಅತ್ತೆ ರಸ್ತೆ ಅಫಘಾತದಲ್ಲಿ ಮೃತಪಟ್ಟ ಬಗ್ಗೆ ಅಕ್ಕಲಕೋಟ ಪೊಲೀಸನವರಿಂದ ದಾಖಲೆ ಪತ್ರಗಳು ಅಫಜಲಪೂರ ಪೊಲೀಸ್ ಠಾಣೆಗೆ ಬರಲು ತಡವಾಗಿದ್ದರಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯ ರವರು ಲಾರಿ ನಂ ಕೆಎ-32 7392 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರೂಗಿಸಬೆಕೆಂದು ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆಅಂತಾ ಕೊಟ್ಟ ಹೇಳಿಕೆಯ ಫೀರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2017 ಕಲಂ 279. 304 () ಐಪಿಸಿ ಮತ್ತು ಕಲಂ 187 ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲಾದ ಬಗ್ಗೆ ವರದಿ.

13 February 2017

Kalaburagi District Reported Crimes

ಬುಲೆರೋ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ. ನಿಲಕಂಠ ತಂದೆ ಜಗದೇವ ಗುತ್ತೆದಾರ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ 10-2-2017 ರಂದು ರಾತ್ರಿ10-30 ಗಂಟೆಗೆ ತಮ್ಮ ಮಹಿಂದ್ರಾ ಬುಲೋರೊ  ಜೀಪ ನಂ. KA 56 M 9099 ನೇದ್ದನ್ನು ನಾನು ನಮ್ಮ ಬಡಾವಣೆಯ ಮರಗಮ್ಮ ಗುಡಿಯ ಹತ್ತಿರ ನಿಲ್ಲಿಸಿ ಡೊರ ಲಾಕ್ ಮಾಡಿ ಮನೆಗೆ ಹೊಗಿದ್ದು ದಿನಾಂಕ 11-2-2016 ರಂದು ಬೆಳಿಗ್ಗೆ 6-30 ಗಂಟೆಗೆ ನಾನು ನನ್ನ ಜಿಪ್ ಹತ್ತಿರ ಹೊದಾಗ ಅಲ್ಲಿ ನನ್ನ ಜೀಪ ಇರಲಿಲ್ಲಾ ನಾನು ಗಾಬರಿಯಾಗಿ ಕಲಬುರಗಿ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಯಾರೊ ಕಳ್ಳರು ನಮ್ಮ ಮಹಿಂದ್ರಾ ಬುಲೋರೊ ಜೀಪ್ ಬಿಳಿ ಬಣ್ಣ ಉಳ್ಳದು ಇದ್ದು  ನಂ.KA 56 M 9099, Engine No.GHB4A35334, Chassis No.MA1PS2GHKB5B64179 ಅದರ ಅಂ.ಕಿ- 5,00,000/-ರೂ ಬೇಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೋಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 12-02-2017 ರಂದು ಬೆಳಿಗ್ಗೆ ನಾನು ನಮ್ಮೂರ ಬಸ್ಸ ನಿಲ್ದಾಣದ ಹತ್ತಿರ ಇದ್ದಾಗ ನಮ್ಮೂರಿನ ಮಹಾಂತಗೌಡ ತಂದೆ ಭಾಗಣ್ಣ ಮಾಲಿಪಾಟೀಲ ಈತನ ಟಂಟಂ ನಂ ಕೆ.-32/ಬಿ-6812 ನೇದ್ದರಲ್ಲಿ ನಮ್ಮ ಚಿಕ್ಕಮ್ಮ  ಸೋಮವ್ವ ಹಾಗು ಇತರೆ ನಮ್ಮೂರಿನ 1] ಲಕ್ಷ್ಮೀಬಾಯಿ ಗಂಡ ಮಲ್ಲಿನಾಥ ಮಾಲಿಪಾಟೀಲ, 2] ನೀಲಮ್ಮ ಗಂಡ ಮಲ್ಲಿನಾಥ ಹರವಾಳ, 3] ಪಾರ್ವತಿ ಗಂಡ ಶಂಕ್ರೆಪ್ಪ ಜಾಲವಾದಿ, 4] ಗೌರಮ್ಮ ಗಂಡ ನಿಂಬೆಣ್ಣ ಕರನಾಳ, 5] ಶಾಂತಮ್ಮ ಗಂಡ ಸಿದ್ದಣ್ಣ ಪೂಜಾರಿ, 6] ಮಂಜುಳಾ ಗಂಡ ಗೌಡಪ್ಪಗೌಡ ಮಾಲಿಪಾಟೀಲ, 7] ಸಿದ್ದಮ್ಮ ಗಂಡ ಮೌನೇಶ ಮಾಲಿಪಾಟೀಲ, 8] ಶೋಭಾ ಗಂಡ ಶಂಕರ ಮಾಲಿಪಾಟೀಲ ಹೀಗೆಲ್ಲರು ಕೂಡಿಕೊಂಡು ಟಂಟಂ ನಲ್ಲಿ ಕೂಳಿತು ಹಂಗರಗಾ(ಬಿ) ಕಡೆ ಹೋದರು. ಆಗ ಟಂಟಂ ಮಹಾಂತಗೌಡ ಈತನು ನಡೆಸುತ್ತಿದ್ದನು. ಸ್ವಲ್ಪ ಸಮಯದ ನಂತರ ಯಲಗೋಡ ಮತ್ತು ಹಂಗರಗಾ (ಬಿ) ಗ್ರಾಮ ಮದ್ಯ ಸಿದ್ದಣ್ಣಗೌಡ ಪಾಟೀಲ ಎಂಬುವರ ಹೊಲದ ಹತ್ತಿರ ಟಂಟಂ ಪಲ್ಟಿಯಾಗಿದೆ ಅಂತಾ ಗೊತ್ತಾಗಿ ನಾನು ಮತ್ತು ನಮ್ಮೂರಿನ ಈರಣ್ಣ ತಂದೆ ಬಸವಂತ್ರಾಯ ಪೊಲೀಸ ಪಾಟೀಲ, ಪರಮಣಗೌಡ ತಂದೆ ಬಸವಂತ್ರಾಯ ಪೊಲೀಸ ಪಾಟೀಲ, ದೇವಿಂದ್ರ ತಂದೆ ಸಿದ್ದಣ್ಣ ಹರವಾಳ, ದೇವಿಂದ್ರಪ್ಪ ತಂದೆ ಸಾಯಬಣ್ಣ ನಾಯ್ಕೋಡಿ ರವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮೂರ ಮಹಾಂತಗೌಡನ ಟಂಟಂ ಇದ್ದು, ರಸ್ತೆಯ ಎಡಗಡೆ ತೆಗ್ಗಿನಲ್ಲಿ ಪಲ್ಟಿಯಾಗಿತ್ತು, ಕೆಳಗೆ ಹೋಗಿ ನೋಡಲಾಗಿ ನಮ್ಮ ಚಿಕ್ಕಮ್ಮ ಸೋಮವ್ವಳಿಗೆ ಎಡಗಡೆ ತೆಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯ ಮತ್ತು ಎಡಗಾಲ ಮೊಳಕಾಲ ಹ್ತತಿರ ಭಾರಿ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿರುತ್ತಾಳೆ. ಇನ್ನುಳಿ 8 ಜನರಿಗೆ ಅಲ್ಲಲ್ಲಿ ಸದಾ ಮತ್ತು ಭಾರಿ ಗಾಯಗಳಾಗಿರುತ್ತವೆ.  ಅಂತಾ ಶ್ರೀ ರೇವಣಸಿದ್ದಪ್ಪ ತಂದೆ ಸಿದ್ರಾಮಪ್ಪಗೌಡ ಪೊಲೀಸಪಾಟೀಲ ಸಾ : ಅಣಜಗಿ ತಾ : ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 0-02-2017  ರಂದು ನನ್ನ ಗಂಡನಾದ ವಿಜಯಕುಮಾರ ತಂದೆ ಸಾಯಬಣ್ಣಾ ಸೋನೆಗಾರ ಉ: ದಿನಗೂಲಿ ನೌಕರ ಮಹನಗರ ಪಾಲಿಕೆ ಕಲಬುರಗಿ ಸಾ: ಬೋರಾಬಾಯಿ ನಗರ ಕಲಬುರಗಿ ರವರು ಮನೆಯಿಂದ ಊರಿಗೆ ಹೋಗುವದಾಗ ಹೇಳಿ ಹೋಗಿದ್ದು ನಂತರ ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ ನಂತರ ಸಂಬಂದಿಕರ ಮನೆಗೆ ಪೋನ ಮಾಡಿ ಕೇಳಿದರು ಮಾಹಿತಿ ಸಿಕ್ಕಿರುವುದಿಲ್ಲಾ ನಂತರ ದಿನಾಂಕ 11-02-2017 ರಂದು ರಾತ್ರಿ 11 ಗಂಟೆಗೆ ಮಾಹಿತಿ ಗೊತ್ತಾಗಿದ್ದು ಸದರಿ ನನ್ನ ಗಂಡನು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಿ ಕೊಂಡಿದ್ದು ನೌಕರಿ ಖಾಯಂ ಆಗಿಲ್ಲಾ ಅಂತಾ ಮಾನಸಿಕವಾಗಿ ನೊಂದು ಸದರಿ ಈ ಮೇಲಿನ ಅವಧಿಯಲ್ಲಿ ಸರಡಗಿ (ಬಿ) ಗ್ರಾಮದ ಬೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುವರ್ಣಾ ಗಂಡ ವಿಜಯಕುಮಾರ ಸೋನೆಗಾರ ಸಾ: ಬೋರಾಬಾಯಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 12-02-2017 ರಂದು ನನ್ನ ಗಂಡ ಸಂತೋಷ ತಂದೆ ತಂದೆ ಶಿವಶರಣಪ್ಪಾ ಶೀಲವಂತ(ಹೆಬ್ಬಾಳ) ರವರು ಫರತಾಬಾದ ವೈನ ಶಾಪ ಮ್ಯಾನೇಜರ ಕೆಲಸಕ್ಕೆ ಹೋಗಿದ್ದು ನಂತರ ಮದ್ಯಾಹ್ನ 1 ಗಂಟೆ ಯ ಸುಮಾರಿಗೆ ನನ್ನ ಗಂಡನೊಂದಿಗೆ ಕೆಲಸ ಮಾಡುವ ಶಕ್ತಿ ವೈನ ಶಾಪದಲ್ಲಿಯ ಕೆಲಸಗಾರ ವಿರೇಶ ಇತನು ಪೋನ ಮಾಡಿ ಸಂತೋಷ ವೈನ ಶಾಪ ಹಿಂದಿನ ರೂಮಿನಲ್ಲಿ ನೇಣು ಹಾಕಿ ಕೊಂಡಿದ್ದಾನೆ ಅಂತಾ ತಿಳಿಸಿದ್ದರಿಂದ ನಾವು ಕುಟುಂಬದವರು ಬಂದು ನೋಡಲಾಗಿ ನೇಣು ಹಾಕಿ ಕೊಂಡು ಮೃತಪಟ್ಟಿದ್ದು. ಸದರಿ ನನ್ನ ಗಂಡನಿಗೆ ಸುಮಾರು 15 ಲಕ್ಷ 30 ಸಾವಿರ ರೂಪಾಯಿ ಸಾಲ ಮಾಡಿದ್ದು ಆ ಸಾಲ ಮೇ ತಿಂಗಳಲ್ಲಿ ಮುಟ್ಟಿಸುವದು ಹೇಗೆ ಅಂತಾ ಚಿಂತೆಯಲ್ಲಿ ವಿಷಯ ಪಿರ್ಯಾದಿ ಅತ್ತೆಗೆಗೆ ತಿಳಿಸಿದ್ದು ಸದರಿ ಪಿರ್ಯಾದಿಯ ಗಂಡನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದು ಇರುತ್ತದೆ. ಅಂತಾ ಶ್ರೀಮತಿ ಸುಧಾ ಗಂಡ ಸಂತೋಷ ಶೀಲವಂತ (ಹೆಬ್ಬಾಳ) ಸಾ: ಓಂ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 11-02-2017 ರಂದು ಶ್ರೀ ನೀಲಕಂಠ ತಂದೆ ನಿಂಗಪ್ಪಾ ಅಳಗುಣಕಿ ಸಾ : ಚಂದ್ರನಗರ ಇವರು ತಮ್ಮ ಅಕ್ಕಳ ಮನೆಯಲ್ಲಿ ದ್ದಾಗ ಭೀಮಣ್ಣಾ ತಂದೆ ಹಣಮಂತ ನಾಯ್ಕಲ್ ಸಂಗಡ 5 ಜನರು ಸಾ : ಎಲ್ಲರು ಚಂ್ದರನಗರ ಕಲಬುರಗಿ  ಇವರು ಕೂಡಿಕೊಂಡು ಬಂದು ನಮಗೆ ಯಾಕೆ ಬೈದಿರುವಿರಿ ಅಂತಾ ವಿನಾ:ಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12 February 2017

KALABURAGI DISTRICT POLICE PRESS NOTE

ಪತ್ರಿಕಾ ಪ್ರಕಟಣೆ:

ಕೋರ್ಸ ಕಂಪನಿಯ ವೈಟ್ನರಗಳನ್ನು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಅಮಲಿನ ಪದಾರ್ಥದ ರೂಪದಲ್ಲಿ ಬಳಸುವುದನ್ನು ಗಮನಿಸಲಾಗಿದೆ. ಇದನ್ನು ದ್ರವ ರೂಪದಲ್ಲಿ ಮಾರಾಟ ಮಾಡುವುದು ಈಗಾಗಲೇ ನಿಷೇಧಿಸಲಾಗಿದ್ದು ಇರುತ್ತದೆ. ದ್ರವರೂಪದ ವೈಟ್ನರಗಳ ಮಾರಟ ಮಾಡುವುದು ನಿಷೇಧಿಸಿದ್ದರು ಸಹ ಪುಸ್ತಕ ಮಳಿಗೆಯಲ್ಲಿ, ದಿನಸಿ ಅಂಗಡಗಳಲ್ಲಿ ಸುಲಬವಾಗಿ ಸಿಗುತ್ತಿರುವುದು ಕಂಡು ಬಂದಿರುತ್ತದೆ.
ಕೋರ್ಸ ಕಂಪನಿಯ ವೈಟ್ನರಗಳನ್ನು, ದ್ರವ ರೂಪದ ವೈಟ್ನರಗಳನ್ನು ಶಾಲಾ ಕಾಲೇಜಿಗಳ ಆವರಣದಿಂದ 100 ಯಾರ್ಡ ಅಂತರದಲ್ಲಿ ನಿಷೇದಿಸಿದೆ. ಮತ್ತು ಪುಸ್ತಕ ಮಳಿಗೆಯಲ್ಲಿ, ದಿನಸಿ ಅಂಗಡಗಳಲ್ಲಿಯೂ ಸಹ ನಿಷೇಧಿಸಲಾಗಿದೆ. ಒಂದು ಸಮಯ ಮಾರಾಟ ಮಾಡಿದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಎಂದು ಈ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

                                     ಪೊಲೀಸ್ ಅಧೀಕ್ಷಕರು
                                           ಕಲಬುರಗಿ