POLICE BHAVAN KALABURAGI

POLICE BHAVAN KALABURAGI

28 January 2017

Kalburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರೋಜಾ ಠಾಣೆ : ದಿನಾಂಕ: 27-01-2017 ಸಂಜೆ ಪೀರಬಂಗಾಲಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಮೇರೆಗೆ ಶ್ರೀ ಘಾಳೆಪ್ಪಾ ಪೆನಾಗ. ಪಿ.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪೀರಬಂಗಾಲಿ ದರ್ಗಾ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ಕುತ್ಬೋದ್ದೀನ ತಂದೆ ಮರಗುಬ ಅಹ್ಮದ ಸಾ: ನೂರಾನಿಮೊಹಲ್ಲಾ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಶೋಧಿಸಲಾಗಿ ಅವನ ಹತ್ತಿರ ನಗದು ಹಣ 1280/-ರೂಪಾಯಿ, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನನ್ನಗಳನ್ನು ವಶಪಡಿಸಿಕೊಂಡ ಸದರಿಯವನೊಂದಿಗೆ ರೋಜಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಮಿಶಾದ್ ಬೇಗಂ ಗಂಡ ಶಾಬುದ್ದೀನ ಜಮಾದಾರ ಸಾ:ಅಲ್ಲಾಪೂರ ತಾ||ಆಳಂದ  ಹಾ|| || ತೆಲ್ಲೂಣಗಿ ತಾ|| ಅಫಜಲಪೂರ  ರವರಿಗೆ  10 ವರ್ಷದ ಹಿಂದೆ ಆಳಂದ ತಾಲೂಕಿನ ಅಲ್ಲಾಪೂರ ಗ್ರಾಮದ ಶಾಬುದ್ದೀನ್ ತಂದೆ ಖಾದರಸಾಬ ಜಮಾದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಇನ್ನೂ ಮಕ್ಕಳಾಗಿರುವುದಿಲ್ಲ. ಮದುವೆಯಾದ ಎರಡು ವರ್ಷದ ವರೆಗೆ ನನಗೆ ನನ್ನ ಗಂಡ ಮತ್ತು ನಮ್ಮ ಅತ್ತೆಯಾದ ರಸೂಲಬೀ ಗಂಡ ಖಾದರಸಾಬ ಜಮಾದಾರ, ಮಾವನಾದ ಖಾದರಸಾಬ ತಂದೆ ನಬಿಲಾಲ ಜಮಾದಾರ, ಮೈದುನರಾದ ಸೈಫನ, ಲಾಲಸಾಬ ಹಾಗು ನಾದುನಿಯಾದ ಶಕೀನಾ ಗಂಡ ಮಹ್ಮದ ಜಮಾದಾರ ಇವರೆಲ್ಲರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 8 ವರ್ಷದಿಂದ ನನ್ನ ಗಂಡ ಮತ್ತು ನಮ್ಮ ಅತ್ತೆ, ಮಾವ, ಮೈದುನರು ಹಾಗು ನಾದುನಿ ಎಲ್ಲರು ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನಮ್ಮ ಅತ್ತೆ  ನಿನು ನೋಡಲು ಚೆನ್ನಾಗಿಲ್ಲ,ನಿನಗೆ ಇನ್ನೂ ಮಕ್ಕಳಾಗಿಲ್ಲಾ ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ನಾನು ಸದರಿ ವಿಷಯ ನಮ್ಮ ತಾಯಿಗೆ ತಿಳಿಸಿರುತ್ತೆನೆ.ನನ್ನ ಗಂಡ ಹಾಗೂ ಅತ್ತೆ, ಮಾವ, ಮೈದುನರು ಹಾಗು ನಾದುನಿ ಕೊಡುವ ಕಿರುಕುಳ ತಾಳಲಾರದೆ ನಾನು ಈಗ 4 ವರ್ಷದಿಂದ ನನ್ನ ತವರು ಮನೆಯಾದ ತೆಲ್ಲೂಣಗಿ ಗ್ರಾಮಕ್ಕೆ ಬಂದು ನನ್ನ ತವರು ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಇದ್ದಿರುತ್ತೇನೆ.ನಮ್ಮ ನಾದುನಿಯಾದ ಶಕೀನಾ ಇವಳಿಗೆ ನನ್ನ ತವರುಮನೆಯಾದ ತೆಲ್ಲೂಣಗಿ ಗ್ರಾಮ ಮಹ್ಮದ ಜಮಾದಾರ ರವರಿಗೆ  ಕೊಟ್ಟು ಮದುವೆ ಮಾಡಿರುತ್ತಾರೆ  ದಿನಾಂಕ 29/11/2016 ರಂದು ಸಂಜೆ 6.00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿಯಾದ ಮದಿನಾ  ಮನೆಯಲಿದ್ದಾಗ ನನ್ನ ಗಂಡ ಶಾಬುದ್ದೀನ ನಮ್ಮ ಅತ್ತೆ ರಸೂಲಬೀ ಹಾಗು ಮೈದುನರಾದ ಸೈಫನ, ಲಾಲಸಾಬ ಹಾಗೂ ನಮ್ಮ ಮಾವನಾದ ಖಾದರಸಾಬ ಇವರು ಅಲ್ಲಾಪೂರ ಗ್ರಾಮದಿಂದ ನನ್ನ ತವರು ಮನೆಗೆ ಬಂದಿದ್ದು ಇವರೊಂದಿಗೆ ನಮ್ಮ ನಾದುನಿಯಾದ ಶಕೀರಾ ಬಂದಿದ್ದು ನಾನು ಸದರಿಯವರಿಗೆ ನೋಡಿ ಕುಡಿಯಲು ನೀರು ತಗೆದುಕೊಂಡು ಹೊರಗೆ ಬಂದಾಗ ನನ್ನ ಗಂಡ ನನಗೆ ಏನೇ ರಂಡಿ ನೀನು ಯಾರಿಗಿ ಕೇಳಿ ನಿನ್ನ ತವರಮನಿಗಿ ಬಂದಿದಿ ಬೊಸಡಿ ಅಂತ ಬೈಯುತಿದ್ದಾಗ ನನ್ನ ಗಂಡ ಬಾಯಿ ಮಾಡುವ ಸಪ್ಪಳ ಕೇಳಿ ಅದೆ ಸಮಯಕ್ಕೆ ನಮ್ಮ ಗ್ರಾಮದ ಬಾಬುಸಾಬ ತಂದೆ ಲಾಡ್ಲೇಮಶಾಕ, ದಾವೂದ್ ತಂದೆ ಲಾಡ್ಲೆಸಾಬ, ಶಿವರಾಯಗೌಡ ತಂದೆ ಹಣಮಂತ್ರಾವ ಪಾಟೀಲ, ಶರಣಗೌಡ ತಂದೆ ಶಾಮರಾವಗೌಡ ಪಾಟೀಲ, ಭಗುಗೌಡ ತಂದೆ ರೇವಣಸಿದ್ದಪ್ಪ ಪಾಟೀಲ, ಶ್ರೀಶೈಲ ತಂದೆ ಸೊಮಣ್ಣ ಕೋಳಿ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ಬಾಯಿ ಮಾಡುಕತ್ತಿರಿ ಅಂತ ಕೇಳುತಿದ್ದಾಗ ನಮ್ಮ ಅತ್ತೆ ರಸೂಲ್ ಬೀ ಇವಳು ನನಗೆ ರಂಡಿ ಯಾರಿಗೂ ಹೇಳದೆ ಕೇಳದೆ ನಮ್ಮ ಮನಿ ಬಿಟ್ಟು ತವರ ಮನಿಗಿ ಬಂದಾಳ ಅಂತ ಅಂದು ತನ್ನ ಕೈಯಿಂದ ನನ್ನ ಕಪಾಳ ಮ್ಯಾಲ ಹೊಡೆಯುತಿದ್ದಾಗ ನಮ್ಮ ಮೈದುನರು, ನಾದುನಿ ಹಾಗು ಮಾವ ಇವರು ಇವತ್ತ ರಂಡಿಗಿ ಖಲಾಸ ಮಾಡೆ ಹೋಗೋಣ ಅಂತ ಅಂದಾಗ ನಮ್ಮ ಅತ್ತೆ ರಂಡಿ ಇಲ್ಲೇ ಇರ್ಲಿ ನಮ್ಮ ಮನಿಗೆ ಬಂದರೆ ಜಿವಾನೆ ಹೊಡಿತಿವಿ ಬೋಸಡಿಗೆ ಅಂತ ಅನ್ನುತಿದ್ದಾಗ ನನ್ನ ಗಂಡನು ರಂಡಿಗಿ ನಾವು ಇನ್ನ ಮುಂದೆ ನಮ್ಮ ಮನ್ಯಾಗ ಇಟ್ಕೊಳಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೊಡೆಯುತಿದ್ದಾಗ ನಮ್ಮ ಅತ್ತೆ ಕಾಲಿನಿಂದ ನನಗೆ ಒದ್ದು ಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 January 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಮೋನಿಕಾ ಗಂಡ ದತ್ತಾತ್ರೇಯ ಮುನಗಾ ಪಾಟೀಲ ಸಾ:ಶಹಾಬಾದ. ರವರು ತಾನು & ತನ್ನ ಗಂಡ ದತ್ತಾತ್ರೇಯ ಇಬ್ಬರೂ ಒಬ್ಬರಿಗೋಬ್ಬರು ಪ್ರಿತಿಸಿ ದಿನಾಂಕ 14/11/2014 ರಂದು ಮದುವೆಯಾಗಿದ್ದು, ನಂತರ 6-7 ತಿಂಗಳವರೆಗೆ ಪಿರ್ಯಾಧಿ ಗಂಡ, ಅತ್ತೆ, ಬಾವ, ನೆಗಣಿ ಇವರೆಲ್ಲರೂ ಚನ್ನಾಗಿ ನೋಡಿಕೊಂಡು ನಂತರ ಎಲ್ಲರೂ ಕೂಡಿಕೊಂಡು ನನಗೆ ಮದುವೆಯಲ್ಲಿ ಬಂಗಾರ & ವರದಕ್ಷಿಣೆ ನೀಡಿರುವುದಿಲ್ಲಾ ಪುಕ್ಕಟಿಯಾಗಿ ಖರ್ಚು ವೆಚ್ಚ ಎಲ್ಲದೆ ಮದುವೆಯಾಗಿದಿ. ತವರು ಮನೆಯಿಂದ ಹಣ & ಬಂಗಾರ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಿದ್ದರಿಂದ ನಾನು ನನ್ನ ಗಂಡನಿಗೆ ಒಂದು ಲಕ್ಷ ರೂ ತಂದು ಕೊಟ್ಟಿದ್ದರೂ ಸಹ ಇನ್ನೂ ಹಣ ಬಂಗಾರ ವರದಕ್ಷಿಣೆ ತೆಗೆದುಕೊಂಡು ಬರಬೇಕು ಎಂದು ಮಾನಸಿಕ & ದೈಹಿಕ ಕಿರುಕುಳ ಕೊಡುತ್ತಿದ್ದರು ನಾನು ಸಹಿಸಿಕೊಂಡು ಬಂದಿರುತ್ತೇನೆ.  ಒಂದು ವೇಳೆ ನೀನು ಹಣ ಬಂಗಾರ ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿ ಅವಾಚ್ಯವಾಗಿ ಬೈದಿರುತ್ತಾರೆ.  ನಾನು ದಿನಾಂಕ 17/1/16 ರಂದು ಕಲಬುರಗಿಯಿಂದ ಶಹಾಬಾದಕ್ಕೆ ಬಂದು ಮನೆಗೆ ಹೋಗುವ ಸಂದರ್ಭದಲ್ಲಿ ನನ್ನ ಗಂಡ ಕೈಯಿಂದ ಹೊಡೆಬಡೆ ಮಾಡಿರುತ್ತಾನೆ.  ಕಾರಣ ನನಗೆ ವರದಕ್ಷಿಣೆ ತರುವಂತೆ ಮಾನಿಕ & ದೈಹಿಕ ಕಿರುಕುಳ ಕೊಟ್ಟು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಹೊಡೆ ಬಡೆ ಮಾಡಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಪುತ್ರ ತಂದೆ ಸಾಯಿಬಣ್ಣ ಸಾ: ದೇವನ ತೆಗನೂರ ಇವರು ಅದೇ ಗ್ರಾಮದ ಭೀಮರಾಯ ತಂದೆ ನಾಗಪ್ಪ ಇತನ ಮಗನಾದ ರಾಕೇಶ ಇತನಿಗೆ ವೈಯಕ್ತಿಕ ಸಾಲದ ಸಲುವಾಗಿ ಒಂದು ತೊಲೆ ಬಂಗಾರ ಕೊಟ್ಟಿದ್ದು ಅದನ್ನು ವಾಪಸ ಕೊಡಲು ಕೇಳಿದರೆ ಅರೋಪಿತರಾದ ಭೀಮರಾಯ ,ಅವನ ಹೆಂಡತಿ ತಾರಾಬಾಯಿ , ಅವನ ಮಗ ಸತೀಶ ರವರೆಲ್ಲರು ಕೂಡಿ ಪಿರ್ಯಾದಿಗೆ ದಿನಾಂಕ: 02/08/2016 ರಂದು ಮದ್ಯಾಹ್ನ 12-30 ಗಂಟೆಗೆ ದೇವನ ತೆಗನೂರ ಗ್ರಾಮದ ಕರಿಗೂಳಿಶ್ವರ ಗುಡಿಯ ಹತ್ತಿರ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 January 2017

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24/01/2017 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನನ್ನ ಗಂಡನಾದ ಸಂತೋಷ ತಂದೆ ಸಿದ್ದಾರಾಮ ಕಿರಣಗಿ ಇವರು ಮಣುರ ಗ್ರಾಮದಲ್ಲಿ ಸ್ವಲ್ಪ ಕೆಲಸ ಇದೆ ಹೋಗಿ ಬರುತ್ತೇನೆ ಮತ್ತು ಬರುವಾಗ ಕರಜಗಿ ಗ್ರಾಮದಲ್ಲಿರುವ ಅಕ್ಕನನ್ನು ಬೆಟ್ಟಿಯಾಗಿ ಬರುತ್ತೇನೆ ಅಂತಾ ಹೇಳಿ ತನ್ನ ಗೆಳೆಯನ ಮೋಟರ ಸೈಕಲ ನಂ ಕೆಎ-28 ಯು-8073 ನೇದ್ದರ ಮೇಲೆ ಮಣೂರ ಗ್ರಾಮಕ್ಕೆ ಹೋಗಿರುತ್ತಾನೆ. ರಾತ್ರಿ 7:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮೋಬೈಲಿಗೆ ನನ್ನ ಗಂಡನ ಮೋಬೈಲನಿಂದ ಅಪ್ಪಾರಾಯ ತಂದೆ ಭಿಮಶಾ ಕಲಶೇಟ್ಟಿ ಸಾ|| ಕರಜಗಿ ಎಂಬುವವರು ಪೋನ ಮಾಡಿ ತಮ್ಮ ಹೆಸರನ್ನು ಹೇಳಿ ಮೋಬೈಲ ಹೊಂದಿದವರು ಸಾಯಂಕಾಲ 7:30 ಗಂಟೆ ಸುಮಾರಿಗೆ ಅಫಜಲಪೂರ ಕರಜಗಿ ರೋಡಿಗೆ ಇರುವ ನಮ್ಮ ಹೊಲದ ಹತ್ತಿರ ರೋಡಿನ ಮೇಲೆ ಮೋಟರ ಸೈಕಲ ಸ್ಕೀಡ್ ಆಗಿ ಬಿದ್ದಿರುತ್ತಾನೆ. ಸದರಿಯವನಿಗೆ ಬಹಳ ಪೆಟ್ಟಾಗಿರುತ್ತದೆ ಅಂತಾ ತಿಳಿಸಿದ ಮೇರೆಗೆ ನಾನು ಕರಜಗಿ ಗ್ರಾಮದಲ್ಲಿರುವ ನಮ್ಮ ನಾದನಿಯ ಗಂಡ ಗುರು ಕಲಶೆಟ್ಟಿ ರವರಿಗೆ ಪೋನ ಮಾಡಿ ಸ್ಥಳಕ್ಕೆ ಹೋಗಲು ತಿಳಿಸಿದೆನು. ನಂತರ ನಾನು ಮತ್ತು ನಮ್ಮ ಮಾವ ಸಿದ್ದಾರಾಮ ಹಾಗೂ ಅತ್ತೆ ಶಿವಕಾಂತಾಬಾಯಿ ಮೂರು ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ, ನನ್ನ ಗಂಡನ ತಲೆಗೆ ಮತ್ತು ಹಣೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುರೇಖಾ ಗಂಡ ಸಂತೋಷ ಕಿರಣಗಿ ಸಾ|| ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.