POLICE BHAVAN KALABURAGI

POLICE BHAVAN KALABURAGI

05 January 2017

Kalaburagi District Reported Crimes

 ಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀ ರತೀಶಕುಮಾರ ತಂದೆ ಶರಣಬಸಪ್ಪಾ ಪಾಟೀಲ ಸಾ: ಚಿತಲಿ ತಾ:ಆಳಂದ ಇವರು ತಂದೆ ತಾಯಿಯೊಂದಿಗೆ ಕಲಬುರಗಿಯಲ್ಲಿ ಜನತಾ ಲೇ ಔಟ್‌ ಮಾರ್ಕೆಟ ರೋಡ ಲಾಲಗಿರಿ ಕ್ರಾಸ್‌ ಹತ್ತಿರ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ಚಿತಲಿ ಗ್ರಾಮದಲ್ಲಿ ನಮ್ಮ ತಂದೆ ಹೆಸದಿನಲ್ಲಿ ಜಮೀನು ಇದ್ದು ಸದರ ಜಮಿನು ನಮ್ಮ ತಂದೆ ಹಾಗು ರಾಮಚಂದ್ರಪ್ಪ ಚಿಕ್ಕಪ್ಪ ಇವರ ಮದ್ಯ ಜಮೀನ ವಿಷಯವಾಗಿ ತಕರಾರು ಇದ್ದು ಈ ಕುರಿತು ಕೊರ್ಟದಲ್ಲಿ ಕೇಸ ನಡೆದಿರುತ್ತದೆ. ಚಿತಲಿ ಸಿಮಾಂತರ ಹೊಲ ಸರ್ವೇ ನಂ 60/3 ರಲ್ಲಿ 4 ಎಕರೆ, 3 ಗುಂಟೆ ಜಮೀನು ನಮ್ಮ ತಂದೆ ಹೆಸರಿನಲ್ಲಿ ಇರುತ್ತದೆ. ನಮ್ಮ ಚಿಕ್ಕಪ್ಪ ರಾಮಚಂದ್ರಪ್ಪ ಇತನು ಈ ಜಮೀನು ನಮಗೆ ಬರುತ್ತದೆ ಎಂದು ತಕರಾರು ಮಾಡುತ್ತಾ ಬಂದು ದ್ವೇಷಸಾದಿಸುತ್ತಾ ಬಂದಿರುತ್ತಾನೆ. ಮತ್ತು ಕೊರ್ಟ ದಲ್ಲಿ ಕೇಸು ನಡೆದು ನಮ್ಮಂತೆ ಆಗಿದ್ದರಿಂದ ನಮಗೆ ಖಲಾಷ ಮಾಡಿ ಜಮೀನು ಕಿತ್ತಿಕೊಳ್ಳಬೇಕೆಂದಿರುತ್ತಾರೆ. ನಮ್ಮ ತಂದೆ ಹಾಗು ಚಿಕ್ಕಪ್ಪ ಹಾಗು ಇತರರ ಮದ್ಯ 8 ಎಕರೆ ಜಮೀನು ಇದ್ದು ಸದರ ಜಮೀನನಲ್ಲಿ ಎಲ್ಲರೂ ಬೆಳೆ ಬೆಳೆದು ಸಮನಾಗಿ ಹಂಚಿಕೊಳ್ಳಬೆಕೆಂದು ಕೊರ್ಟ ಆಧೇಶವಾಗಿರುತ್ತದೆ.ದಿನಾಂಕ 31/12/2016 ರಂದು ಸರ್ವೇ ನಂ 60/3 ರಲ್ಲಿ 4 ಎಕರೆ 3 ಗುಂಟೆ ಜಮೀನನಲ್ಲಿ ತೊಗರೆ ಬೆಳೆ ಬೆಳೆದು ರಾಶಿ ಮಾಡಿಕೊಂಡಿರುತ್ತೇವೆ. ಈ ಜಮೀನು ತಮಗೆ ಬರುತ್ತದೆ ಎಂದುಕೊಂಡು ನಮ್ಮ ಮೇಲೆ ದ್ವೇಷಹೊಂದಿ ಇಂದು ದಿನಾಂಕ 04/01/2017 ರಂದು ಸಾಯಾಂಕಾಲ 6:30 ಗಂಟೆಗೆ ವೇಳೆಗೆ ನಾನು ಮತ್ತು ನಮ್ಮ ತಂದೆ ಶರಣಬಸಪ್ಪ ಪಾಟೀಲ ಇಬ್ಬರು ಕೂಡಿ ಚಿತಲಿ ಗ್ರಾಮದ ಬ್ರಹ್ಮದೇವರ ಗುಡಿ ಹತ್ತಿರ ಕುಳಿತ್ತಿದ್ದಾಗ 1) ರಾಮಚಂದ್ರಪ್ಪ ತಂದೆ ಕಲ್ಯಾಣರಾವ ಪಾಟೀಲ 2) ಆಶಾಲತಾ ಗಂಡ ಉಮೇಶ ಪಾಟೀಲ 3) ಸುಜಾತಾ ಗಂಡ ಬಾಬು ಮೇಳಕುಂದಿ 4) ಶೋಬಾ ಗಂಡ ಜಗನಾಥ ಪೊ. ಪಾಟೀಲ, 5) ನೀಲಮ್ಮಾ ಗಂಡ ಕಲ್ಯಾಣರಾವ ಪಾಟೀಲ ಹಾಗು ರಾಮಚಂದ್ರಪ್ಪ ಇತನ ಹೆಂಡತಿಯ ಅಣ್ಣತಮ್ಮಂದಿರು 3 ಜನರು ಕೂಡಿ ಬಂದವರೇ ಇದೆ ಸುಳೆ ಮಕ್ಕಳು ನಮ್ಮ ಹೊಲದ ರಾಶಿ ಮಾಡಿಕೊಂಡು ಹೊದವರು ಬಿಡಬ್ಯಾಡ್ರಿ ಹೊಡ್ರಿ ಇವರಿಗೆ ಖಲಾಷ ಮಾಡ್ರಿ ಅಂತಾ ಬೈಯುತ್ತಾ ಬಂದವರೇ ರಾಮಚಂದ್ರಪ್ಪ ಇತನು ಕೈಯಿಂದ ನಮ್ಮ ಅಪ್ಪನ ಖಪಾಳ ಮೇಲೆ ಹೊಡೆದನು. ಆಶಾಲತಾ , ಸೂಜಾತಾ ಇವರು ನಮ್ಮ ಅಪ್ಪನ ಎರಡು ಕೈಹಿಡಿದು ನೇಲಕ್ಕೆ ಕೆಡವಿದಾಗ ರಾಮಚಂದ್ರಪ್ಪ ಇತನು ಕೋಲೆ ಮಾಡುವ ಉದ್ಧೇಶದಿಂದ ಚಾಕುದಿಂಧ ಕುತ್ತಿಗೆಗೆ ಹೊಡೆದನು . ಆಗ ನಾನು ನಮ್ಮ ತಂದೆಗೆ ಹೊಡೆಯುದನ್ನು ನೋಡಿ ಬಿಡಿಸಲು ಹೋದಾಗ ಶೋಬಾ ಮತ್ತು ನಿಲಮ್ಮಾ ಇವರು ಕಟ್ಟಿಗೆಯಿಂದ ನನಗೆ ಬೆನ್ನಿಗೆ ಹೊಡೆದರು. ರಾಮಚಂದ್ರಪ್ಪ ಇತನು ನನಗೆ ಕೊಲೆ ಮಾಡಬೇಕೆಂದು ಚಾಕುದಿಂದ ಹೊಟ್ಟೆಗೆ ಹೊಡೆಯಲು ಬಂದಾಗ ಕೈ ಅಡ್ಡ ತಂದಿದಕ್ಕೆ ಎಡಗೈಗೆ ಚಾಕು ಹತ್ತಿದ್ದು ನಂತರ ಮತ್ತೆ ಬೆನ್ನಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಶಾಲತಾ ಮತ್ತು ಶೋಬಾ ನನಗೆ ನೇಲಕ್ಕೆ ಹಾಕಿ ಹೊಡೆಯುವಾಗ ರಾಮಚಂದ್ರಪ್ಪ ಇತನ ಹೆಂಡತಿಯ  ಅಣ್ಣತಮ್ಮಂದಿರು ಮತ್ತು ರಾಮಚಂದ್ರಪ್ಪ ಇವರು ಚಾಕುದಿಂದ ನಮ್ಮ ಅಪ್ಪನ ಹೊಟ್ಟೆಗೆ , ಮೈಗೆ , ಅಲ್ಲಲ್ಲಿ ಚುಚ್ಚಿ ತಿವೃಗಾಯಗೊಳಿಸಿ ಹೊಡೆದು ಕೋಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮೊನಮ್ಮ ಗಂಡ ಅವಿನಾಶ ಮಡಿವಾಳ ಸಾಃ ರಾಜವಾಳ ತಾಃ ಜೇವರಗಿ ಹಾಃವಃ ಹಂದರಕಿ ತಾಃ ಸೇಡಂ ಇವರನ್ನು ಜೇವರಗಿ ತಾಲೂಕಿನ ರಾಜವಾಳ ಗ್ರಾಮದ ಅವಿನಾಶ ಮಡಿವಾಳ ಇತನ್ನೊಂದಿಗೆ ದಿನಾಂಕ 31.03.2016 ರಂದು ನಮ್ಮೂರ ಲೊಕೇಶ್ವರ ಗುಡಿಯಲ್ಲಿ  ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ರಾಜವಾಳ ಗ್ರಾಮದಲ್ಲಿಯೇ ವಾಸವಾಗಿರುತ್ತೆನೆ. ನನ್ನ ಗಂಡನು ಮದುವೆಯಾದ ಎರಡು ತಿಂಗಳವರೆಗೆ ನನ್ನ ಸಂಗಡ ಸರಿಯಾಗಿಯೇ ಇದ್ದು ಅನೋನ್ಯವಾಗಿ ಸಂಸಾರ ಮಾಡುತ್ತಾ ಬಂದಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಸರಿಯಾಗಿಯೇ ಇದ್ದರು. ನಂತರ  ನನ್ನ ಗಂಡನು ಮತ್ತು ಅತ್ತೆ ಮಾವ ಹಾಗೂ ಮೈದುನರು ನೀನಗೆ  ಅಡುಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ, ನೀನು ಸರಿಯಾಗಿ ಇಲ್ಲಾ ನಮ್ಮ ಮನೆಯತನಕ್ಕೆ ತಕ್ಕ ಹೆಣ್ಣು ಇಲ್ಲಾ ಅಂತಾ ಅವಾಚ್ಯವಾಗಿ ಬೈಯುವುದು,  ಹೊಡೆಯುವುದು ಮಾಡುತ್ತಾ ಬಂದಿರುತ್ತಾರೆ ನಾನು ಹಬ್ಬ ಹರಿದಿನಕ್ಕೆ ನನ್ನ ತವರು ಮನೆಗೆ ಹೋದಾಗ ಮನೆಯಲ್ಲಿ ನನ್ನ ತಂದೆ ತಾಯಿಯವರ ಮುಂದೆ ನನ್ನ ಗಂಡ  ಮತ್ತು ಗಂಡನ ಮನೆಯವರು ನನಗೆ ಕಿರುಕುಳ ಕೊಡುತ್ತಿದ್ದ ವಿಷಯ ಹೇಳಿರುತ್ತೆನೆ ಆಗ ನನ್ನ ತಂದೆ ತಾಯಿಯವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ಹೋಗಿರುತ್ತಾರೆ, ಆದರೂ ಸಹ ನನ್ನ ಗಂಡ ಮತ್ತು  ಅತ್ತೆ ಮಾವ ಮೈದುನರು ಅದೇ ರೀತಿ ನನಗೆ ತೊಂದರೆ ಕೊಡುತ್ತಿದ್ದಾಗ ಅವರು ಕೊಡುತ್ತಿದ್ದ  ತೊಂದರೆ ತಾಳಲಾರದೆ  ನಾನು  ಈಗ ಆರು ತಿಂಗಳ ಹಿಂದೆ ರಾಜವಾಳದಿಂದ ನನ್ನ ತವರು ಮನೆಗೆ ಬಂದು ನನ್ನ ತಂದೆಯವರ ಹತ್ತಿರ ವಾಸವಾಗಿದ್ದೆನು. ನಾನು ನಮ್ಮ ಮನೆಯ ಮರ್ಯಾದೆಗಾಗಿ ಅಂಜಿ ಸುಮ್ಮನಿದ್ದೆನು,  ಇಷ್ಟು ದಿನವಾದರೂ ನನ್ನ ಗಂಡನ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನನ್ನ ತಂದೆ ಸುಬ್ಬಣ್ಣಾ ತಂದೆ ಬುಗ್ಗಪ್ಪ ಮಡಿವಾಳ, ತಾಯಿ ಮಹಾದೇವಿ ಗಂಡ ಸುಬ್ಬಣ್ಣ ಮಡಿವಳ, ಅಣ್ಣನಾದ  ಶರಣಪ್ಪ ತಂದೆ ಸುಬ್ಬಣ್ಣ ಮಡಿವಾಳ ಹಾಗು ಸಂಭಂಧಿಕರಾದ ದೇವಪ್ಪ ತಂದೆ ಬುಗ್ಗಪ್ಪ ಮಡಿವಾಳ  ಈಶ್ವರ ತಂದೆ ಶಿವರಾಯ ಮಡಿವಾಳ ಎಲ್ಲರೂ ಕೂಡಿ ನನಗೆ ಗಂಡನ ಮನೆಗೆ ಬಿಡಲು ದಿನಾಂಕ 02.01.2017 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ರಾಜವಾಳಕ್ಕೆ ಕರೆದುಕೊಂಡು ನನ್ನ ಗಂಡನ ಮನೆಗೆ ಬಂದಾಗ ಅಲ್ಲಿ ನನ್ನ ಗಂಡನಾದ 1)  ಅವಿನಾಶ ತಂದೆ ದೇವಿಂದ್ರ ಮಡಿವಾಳ, ಮಾವನಾದ 2) ದೇವಿಂದ್ರ  ತಂದೆ ಯಮನಪ್ಪ ಮಡಿವಾಳ ಅತ್ತೆಯಾದ 3) ನಿರ್ಮಲಾ ಗಂದೆ ದೇವಿಂದ್ರ ಮಡಿವಾಳ, ಮೈದುನರಾದ 4) ರಾಕೇಶ ತಂದೆ ದೇವಿಂದ್ರ ಮಡಿವಾಳ, 5) ಯಮನಪ್ಪ ತಂದೆ ದೇವಿಂದ್ರ ಮಡಿವಾಳ ಎಲ್ಲರೂ ಕೂಡಿಕೊಂಡು ಬಂದು ನಮಗೆ ನೋಡಿ ಅವಾಚ್ಯವಾಗಿ ಬೈಯ ಹತ್ತಿದ್ದರು ನಾನು ಅವರಿಗೆ ನನಗೆ ಗಂಡನ ಮನೆಗೆ ಬಿಡಲು ಬಂದಿರುತ್ತಾರೆ ಯಾಕೆ? ಬೈಯುತ್ತಿದ್ದಿರಿ ಅಂತಾ ಅಂದಾಗ ನನ್ನ ಗಂಡನು ಏ ಬೊಸಡಿ ನೀನಗೆ ಮೊದಲೇ ಮನೆಯಲ್ಲಿ ಅಡುಗೆ ಕೆಲಸ ಮಾಡಲು ಬರುವುದಿಲ್ಲಾ ಹೊಲ ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲಾ ಮತ್ತು ಇಷ್ಠು ದಿನ ತವರು ಮನೆಯಲ್ಲಿ ಇದ್ದು ಇವತ್ತು ಬಂದ್ದಿದಿ ಬೊಸಡಿ ಅಂತಾ ಬೈದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಮತ್ತು ಅತ್ತೆ ಮಾವ ಇವರು ಈ ರಂಡಿಗೆ ಇವತ್ತು ಗಂಡನ ನೇನಪು ಆಗಿದೆ ಅಂತಾ ಬೈಯದಿರುತಾರೆ ಅಲ್ಲದೆ ನನ್ನ ಅತ್ತೆ ನನ್ನ ತಲೆಯ ಕೂದಲು ಹಿಡಿದು ಜಗ್ಗಿರುತ್ತಾಳೆ, ಮತ್ತು ಮೈದುನರು ಈ ಬೋಸಡಿಗೆ ಬಹಳ ಸೊಕ್ಕ ಇದೆ ಇವತ್ತು ಎಲ್ಲರಿಗೂ ಕರೆದುಕೊಂಡು ಗಂಡನ ಮನೆಗೆ ಬಂದಾಳ ಹೊಡೆಯಿರಿ ಅಂತಾ ಬೈದಿರುತ್ತಾರೆ ಅಷ್ಟರಲ್ಲಿಯೇ ನನ್ನ ತಂದೆ ತಾಯಿ ಮತ್ತು ನನ್ನ ಅಣ್ಣ ಹಾಗೂ ಸಂಭಂದಿಕರು ಬಂದು ನನಗೆ ಹೊಡೆಯುವುದು ನೋಡಿ ಬಿಡಿಸಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 04-01-2017 ರಂದು ಮುಂಜಾನೆ ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಟಿಪ್ಪರ್ಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ ಎಸ್.ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಜ್ಯೋತಿ ಹೋಟೆಲ ಹತ್ತಿರ ಮುಂಜಾನೆ  ಹೋಗಿರೋಡಿನ ಪಕ್ಕದಲ್ಲಿ ನಿಂತು ಮರಳು ತುಂಬಿದ ಟಿಪ್ಪರ್ಗಳು ಬರುವದನ್ನು ಕಾಯುತ್ತ ಇದ್ದೆವು. ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಮೂರು ಟಿಪ್ಪರ್ಗಳಿಗೆ ನೋಡಿ ಬ್ರೀಜ್ ಹತ್ತಿರ ರೋಡಿನಲ್ಲಿ ಕೈ ಮಾಡಿ ನಿಲ್ಲಿಸಿ ಟಿಪ್ಪರ್ ಚಾಲಕರಿಗೆ ಹೆಸರು ಕೇಳಲಾಗಿ ಅವರು 1) ದೇವರಾಜ ತಂದೆ ಬಸವರಾಜ ಭೊವಿ ಸಾ|| ಚನ್ನೂರ (ಕೆ) ತಾಃ ಶಹಪೂರ ಜಿಲ್ಲಾಃ ಯಾದಗಿರಿ ಟಿಪ್ಪರ್ ನಂ ಕೆ.ಎ32ಸಿ3705 ನೇದ್ದರ ಚಾಲಕ ಅಂತ ತಿಳಿಸಿದನು 2) ಮಲ್ಲಿಕಾರ್ಜುನ ತಂದೆ ನರಸಪ್ಪ ಕುದರಮಳ್ಳಿ, ಸಾಃ ಚನ್ನೂರ (ಕೆ) ತಾಃ ಶಹಾಪೂರ ಟಿಪ್ಪರ್ ನಂ ಕೆಎ32ಸಿ3704 ನೇದ್ದರ ಚಾಲಕ ಅಂತ ತಿಳಿಸಿದನು 3) ಶಂಕರ ತಂದೆ ಮೈಲಾರ ಮಾದರ @ ಹೊಸಮನಿ ಸಾಃ ಚಟ್ನಳ್ಳಿ ತಾಃ ಸಿಂದಗಿ ಟಿಪ್ಪರ್ ಎಪಿ-28-ಟಿಸಿ-9798 ನೇದ್ದರ ಚಾಲಕ ಅಂತ ತಿಳಿಸಿದನು, ನಂತರ ಅವರಿಗೆ ಟಿಪ್ಪರ್ಗಳಲ್ಲಿ ಮರಳು ತುಂಬಿಕೊಂಡು ಬರಲು ನಿಮ್ಮ ಹತ್ತಿರ ಸಂಭಂದ ಪಟ್ಟ ಇಲಾಖೆಯಿಂದ ರಾಯಲ್ಟಿ/ಪರವಾನಿಗೆ ಪತ್ರ ಇದೇಯೆ ಅಂತ ವಿಚಾರಿಸಲು ಅವರು ನಾವು ಭೀಮಾ ನದಿಯಿಂದ ಮರಳು ತುಂಬಿಕೊಂಡು ಬರುತ್ತಿದ್ದು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಅಂತ ಹೇಳಿದರು. ನಂತರ ಸ್ಥಳದಲ್ಲಿದ್ದ ಟಿಪ್ಪರ್ಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ನಂ ಕೆ.ಎ32ಸಿ3705 ನೇದ್ದು ಇದ್ದು ಅದರಲ್ಲಿ 6 ಬ್ರಾಸ್ ಮರಳು ಅ.ಕಿ 6000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ, ಮತ್ತು 2) ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ನಂ ಕೆಎ32-ಸಿ-3704 ನೇದ್ದು ಇದ್ದು ಅದರಲ್ಲಿ 4 ಬ್ರಾಸ್ ಮರಳು ಅ.ಕಿ 4000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ 3) ಟಾಟಾ ಕಂಪನಿಯ ಟಿಪ್ಪರ ನಂ ಎಪಿ ನಂ 28-ಟಿಸಿ-9798 ನೇದ್ದು ಇದ್ದು ಅದರಲ್ಲಿ 5 ಬ್ರಾಸ್ ಮರಳು ಅ.ಕಿ 5000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ ಸದರಿ ಟಿಪ್ಪರ್ಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಮತ್ತು ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಮೂರು  ಟಿಪ್ಪರ್ಗಳನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

04 January 2017

Kalaburagi District Reported Crimes

ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ವಿಶ್ವನಾಥ ತಂದೆ ಪಾಂಡು ರಾಠೋಡ ಸಾ : ಖಣದಾಳ ತಾಂಡಾ ಇವರು ಕಳೆದ ಗ್ರಾ. ಪಂ. ಚುನಾವಣೆಯಲ್ಲಿ ನಮ್ಮ ಕುಟುಂಬದ ನಡುವೆ ಮತ್ತು ನಮ್ಮ ತಾಂಡಾದ ಪರ್ವತ ತಂದೆ ಮಹೇಶ ಚವ್ಹಾಣ  ಇವರ ಕುಟುಂಬದ ನಡುವೆ ವೈನಸ್ಸು ಬೆಳೆದಿದ್ದು ಅದೇ ವೈಮಸ್ಸಿನಿಂದ  ಪರ್ವತ ಚವ್ಹಾಣ ಇವರ ಕುಟುಂಬದವರು ನಮಗೆ ಬೇರೇಯವರ ಮುಂದೆ ಬೈಯ್ಯುವದು ಮತ್ತು ದ್ವೇಷ ಸಾದಿಸಬೆಕೆಂಬ ಉದ್ದೇಶದಿಂದ ಆಗಾಗ ನಮ್ಮೋಂದಿಗೆ ಬಾಯಿ ಮಾತಿನ ತಕರಾರು ಮಾಡುತ್ತಾ ಬಂದಿರುತ್ತಾರೆ. ನಿನ್ನೆ ದಿನಾಂಕ 02/01/2017 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಣ್ಣನ ಮಗನಾದ ಪವನ ರಾಠೋಡ ಇಬ್ಬರೂ ನಮ್ಮ ಹೋಲದಿಂದ ನಮ್ಮ,ನಮ್ಮ ಎತ್ತೀನ ಬಂಡಿಗಳನ್ನು ಚಲಾಯಿಸಿಕೊಂಡು  ಮನೆಗೆ ಬರುತ್ತೀರುವಾಗ ಶ್ರೀಧರ ಕುಲಕರ್ಣಿಇವರ ಹೋಲದ ಹತ್ತೀರ ಹಣಾದಿಯಲ್ಲಿ ಸದರಿ ಪರ್ವತ ಚವ್ಹಾಣ ಇತನು ತನ್ನ ವಷದಲ್ಲಿರುವ ಟ್ರ್ಯಾಕ್ಟರ ಅನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಒಮ್ಮೇಲೆ ಪವನ ಇತನ ಎತ್ತಿನ ಬಂಡಿಯ ಮೇಲೆ ತಂದಿದ್ದರಿಂದ ಪವನನ ಎತ್ತುಗಳು ಬೆರದಿ (ಅಂಜಿ) ಒಮ್ಮೇಲೆ  ಹಾರಿದ್ದರಿಂದ ಎತ್ತೀನ ಬಂಡಿ ಪಲ್ಟಿಯಾಗಿ ಪವನನ ಎಡಗಾಲು ಮುರಿದು ರಕ್ತಗಾಯವಾಗಿರುತ್ತದೆ. ಆಗ ನಾನು ಪರ್ವತನಿಗೆ  ಯಾಕೆ ನೀನು ಈ ರೀತಿ ಟ್ರ್ಯಾಕ್ಟರ ಒಮ್ಮೇಲೆ ಎತ್ತೀನ ಬಂಡಿಯ  ಮೇಲೆ ತಂದಿರುವಿ ಅಂತ ಕೇಳಿದ್ದಕ್ಕೆ ಅವನು ನನ್ನೊಂದಿಗೆ ತಕರಾರು ಮಾಡುತ್ತಾ ಫೋನ ಮಾಡಿ ತನ್ನ ಸಂಬಂದಿಕರಾದ  ಮೋಹನ ತಂದೆ ಮಹಾದೇವ ರಾಠೋಡ,ಮಹೇಶ ತಂದೆ ಹುನ್ನು ಚವ್ಹಾಣ, ಜಿತೇಂದ್ರ ತಂದೆ ವಿಜಯಕುಮಾರ ಚವ್ಹಾಣ, ಶಂಕರ ತಂದೆ ಹುನ್ನು ಚವ್ಹಾಣ, ವಿಜಯಕುಮಾರ ತಂದೆ ಹುನ್ನುನ ಚವ್ಹಾಣ, ಕೃಷ್ಣಾ ತಂದೆ ಶಂಕರ ಚವ್ಹಾಣ, ಸುಭಾಷ ತಂದೆ ಕಾಳು ರಾಠೋಡ ಇವರೆಲ್ಲರನ್ನು ಕರೆಯಿಸಿದವನೆ  ಇವರೆಲ್ಲರೂ ಬಂದವರೆ ಈ ರಂಡಿ ಮಕ್ಕಳದು ಬಹಳ ಸೋಕ್ಕು ಆಗಿದೆ ಇಂದು ಇವರಿಗೆ ಖಲಾಸ ಮಾಡಿಯೇ ಬಿಡೋಣ ಅಂತಾ ಜೀವದ ಬೆದರಿಕೆ ಹಾಕಿ ನಮ್ಮನ್ನು ಕೋಲೆ ಮಾಡಬೇಕೆಂಬ ಉದ್ದೇಶದಿಂದ  ಮೋಹನ ಮತ್ತು ಮಹೇಶ ಇವರಿಬ್ಬರೂ ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಜಿತೇಂದ್ರ ಇತನು ನನಗೆ ಕೈಯಿಂದ ಹೋಟ್ಟೆಯ ಮೇಲೆ ಗುದ್ದಿ ಹಿಡಿಗಾತ್ರದ ಕಲ್ಲಿನಿಂದ ಬೆನ್ನಲ್ಲಿ ಹೋಡೆದು ಗುಪ್ತಗಾಯ ಮಾಡಿರುತ್ತಾನೆ ಆಗ ನಮ್ಮ ಎತ್ತೀನ ಬಂಡಿಯಲ್ಲಿರುವ ನನ್ನ ಹೆಂಡತಿ ಶರಣಬಾಯಿ ಇವಳು ಬಿಡಿಸಲು ಬಂದಾಗ ಇವಳಿಗೆ ಶಂಕರ ಇತನು ಕೈಯಿಂದ ಮತ್ತು ಕಾಲಿನಿಂದ ಎದೆಗೆ ಒದ್ದು ಗುಪ್ತ ಗಾಯ ,ಮಾಡಿರುತ್ತಾನೆ,ನನ್ನ ತಂಗಿ ಸವಿತಾ ಇವಳಿಗೆ ವಿಜಯಕುಮಾರ ಇತನು ಎಡಗೈ ರಟ್ಟೇಗೆ ಕೈಯಿಂದ ಗುದ್ದಿ ಗುಪ್ತಗಾಯ ಮಾಡಿ ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ.ಕೃಷ್ಣಾ ಚವ್ಹಾಣ ಇತನು ಫಿಕಲಾಬಾಯಿ  ಇವಳಿಗೆ ಎಡಗಣ್ಣಿನ ಹತ್ತೀರ ಕೈಯಿಂದ ಗುದ್ದಿ ಗುಪ್ತಗಾಯ ಮಾಡಿರುತ್ತಾನೆ ,ಸುಬಾಷ ಇತನು ಸವೀತಾ ಗಂಡ ರಾಜು ಇವಳಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಕಳವು ಪ್ರಕರಣ :  
ಸ್ಟೇಷನ ಬಜಾರ ಠಾಣೆ :  ಶ್ರೀ ಬಿ.ರವೀಂದ್ರ ತಂದೆ ಲಕಪತಿ ಉ: ಎಸ್.ಬಿ.ಎಚ್ ಬ್ಯಾಂಕ ವ್ಯವಸ್ಥಾಪಕ ಸಾ: ಪ್ಲಾಟ ನಂ. 46 & 47 ಬೆಂದ್ರೆ ನಗರ ಬಿದ್ದಾಪೂರ ರಸ್ತೆ ಕಲಬುರಗಿ ರವರು ದಿನಾಂಕ 02/01/2017 ರಂದು 8-30 ಪಿ.ಎಂ ಸುಮಾರಿಗೆ ದೈನಂದಿನ ಬ್ಯಾಂಕ ವ್ಯವಹಾರ ಮುಗಿಸಿಕೊಂಡು ಬ್ಯಾಂಕ ಕೀಲಿ ಹಾಕಿಕೊಂಡು ಹೋಗಿದ್ದು ಬೆಳಿಗ್ಗೆ ದಿನಾಂಕ 03/01/2017 ರಂದು 10-10 ಎ.ಎಂ.ಕ್ಕೆ ಬ್ಯಾಂಕಿಗೆ ಬಂದು ನೋಡಲಾಗಿ ಕ್ಯಾಷ ರೂಮದ ಗೊಡೆ ಒಡೆದಿದ್ದನ್ನು ನೋಡಿ ಸಿ.ಸಿ.ಟಿ.ವಿ ಪರಿಶೀಲಿಸಿ ನೋಡಲಾಗಿ 03/01/2017 ರಂದು 1: 17 ಎ.ಎಂ.ದಿಂದ 1: 25 ಎ.ಎಂ.ದ ಅವಧಿಯಲ್ಲಿ ಯಾರೋ ಒಬ್ಬ ಕಳ್ಳ ಬ್ಯಾಂಕಿನ ಗೊಡೆ ಒಡೆದು ಒಳಗಡೆ ಬಂದು ಆಲಮಾರಿಗಳನ್ನು ತೆಗೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಕಂಡು ಬಂದಿರುತ್ತದೆ.  ಸದರಿ ಕಳ್ಳತನಕ್ಕೆ ಪ್ರಯತ್ನಿಸಿದವನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾನಭಂಗ  ಮಾಡಲು ಪ್ರಯತ್ನಿಸಿದ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಬುಗ್ಗಮ್ಮ ಗಂಡ ಚಂದ್ರಪ್ಪ ಸಂದಪೂರಂ ಸಾ : ಶಕಲಾಸಪಲ್ಲಿ ಗ್ರಾಮ. ಇವರಿಗೆ ದಿನಾಂಕ 02-01-2017 ರಂದು ಕಾಶಪ್ಪ ತಂದೆ ಮೊಗಲಪ್ಪ ಸಾ : ಇಟಕಾಲ ಗ್ರಾಮ ಇವನು ರಾತ್ರಿ ಸಮಯದಲ್ಲಿ ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 January 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-01-2017 ರಂದು ಅಫಜಲಪೂರ ಪಟ್ಟಣದ ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹನುಮಾನ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹನುಮಾನ ಗುಡಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಭೀಮಶ್ಯಾ ತಂದೆ ಹಸನಪ್ಪ ಆರೇಕರ ಸಾ || ಜೈ ಭೀಮ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1390/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಒಂದು ಸಮಸಂಗ ಕಂಪನಿಯ ಕಪ್ಪು ಬಣ್ಣದ ಸಾದಾ ಮೋಬೈಲ ಪೋನ್ ಅಕಿ-100/- ರೂ ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-01-2017 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ . ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಿಕಾರ್ಜುನ ತಂದೆ ವಿಠ್ಠಲ ಕಾಮಗೊಂಡ ಸಾ|| ಎಮ್.ಜಿ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2120/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಹಾಗೂ ಒಂದು ನೋಕಿಯಾ ಕಂಪನಿಯ ಸಾದಾ ಮೋಬೈಲ ಪೋನ್ ಅಕಿ-100/- ರೂ ಸದರಿಯವುಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಅಂಬಣ್ಣ ಲೆಂಗಟಿ ಸಾ|| ಕೈಲಾಸ ನಗರ ಕಲಬುರಗಿ ಇವರು ದಿನಾಂಕ: 30-12-2016 ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿ ತಾನು ತನ್ನ ಕುಟುಂಬದೊಂದಿಗೆ ಹೈದರಾಬಾದಿಗೆ ಹೋಗಿದ್ದು  ದಿನಾಂಕ: 31-12-2016 ಬೆಳಗ್ಗೆ 07-00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಶ್ರೀ ಶಂಕರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ. ನಿಮ್ಮ ಮನೆಯ ಬೀಗ ಯಾರೋ ಮುರಿದಿದ್ದು ಇರುತ್ತದೆ ಅಂತಾ ಹೇಳಿದಾಗ ನಾನು ಅದೆ ದಿವಸ ಬೆಳಗ್ಗೆ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬೀಗ ಮುರಿದಿದ್ದು ಮನೆಯ ಒಳಗೆ ಹೋಗಿ ನೋಡಲು ಬೆಡ್‌ರೂಮಿನ ಅಲಮಾರಿ ತೆರೆದಿದ್ದು ಅದರಲ್ಲಿದ್ದ 10 ಗ್ರಾಂ ಬಂಗಾರದ ಲಾಕೀಟ್ ಅದರ ಅಂ.ಕಿ: 24600/-ರೂ ಬೇಲೆಬಾಳುವುದು ಅದರಲ್ಲಿ ಇರಲಿಲ್ಲ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಭೀಮಾಶಂಕರ ಸಿಪಿಸಿ-677 ಬ್ರಹ್ಮಪೂರ ಪೊಲೀಸ ಠಾಣೆ ರವರು ದಿನಾಂಕ:02/01/2017 ರಂದು ನಾನು ಜಿಲ್ಲಾ ಸರಕಾರಿ ಆಸ್ಪತ್ರೆ ಉಕ್ಕಡದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಸುಮಾರು 40 ವರ್ಷದ ಅಪರಿಚಿತ ಗಂಡಸು ವ್ಯಕ್ತಿ ಉಪಚಾರ ಪಡೆಯುತ್ತಾ ಇಂದು ಬೆಳಿಗ್ಗೆ 9:30 ಗಂಟೆಗೆ ಮರಣ ಹೊಂದಿದ್ದು ಈ ಕುರಿತು ಡೆತ್ ಎಂ.ಎಲ್.ಸಿ ಯನ್ನು ಬೆಳಿಗ್ಗೆ 10:15 ಗಂಟೆಗೆ ಪಡೆದುಕೊಂಡಿದ್ದು ನಂತರ ಆಸ್ಪತ್ರೆಯ ದಾಖಲಾತಿಗಳು ನೋಡಿ ಪರಿಶೀಲಿಸಿದ್ದು ಸದರಿ ಮೃತನು ದಿನಾಂಕ:29/12/2016 ರಂದು ಕಲಬುರಗಿ ನಗರದ ಸ್ಟೇಷನ ರಸ್ತೆ ಹಳೆ ಸರಕಾರಿ ಆಸ್ಪತ್ರೆ ಎದುರುಗಡೆ ಸುಸ್ತಾಗಿ ಬಿದ್ದಿದ್ದು ಯಾರೋ ಸಾರ್ವಜನಿಕರು ನೋಡಿ ಅವನನ್ನು ಉಪಚಾರದ ಸಲುವಾಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಮೃತ ವ್ಯಕ್ತಿ ಭೀಕ್ಷುಕನಾಗಿದ್ದು ಅವನ ಹೆಸರು ವಿಳಾಸ ತಿಳಿದು ಬಂದಿಲ್ಲ. ಆದರೆ ಯಾವುದೋ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಅವನ ದೇಹ ಸ್ಥಿತಿ ನೋಡಿದರೆ ಕಂಡು ಬರುತ್ತದೆ. ಆಸ್ಪತ್ರೆ ಹತ್ತಿರ ಅನ್ನಪೂರ್ಣ ಕ್ರಾಸ್ ಕುಳಗೇರಿ ಕ್ರಾಸ್ ಜಗತ ಸರ್ಕಲ್ ತಿರುಗಾಡಿ ಮೃತ ವ್ಯಕ್ತಿಯ ಬಗ್ಗೆ ವಿಚಾರಿಸಿ ಮಾಹಿತಿ ಕಲೆ ಹಾಕಲು ಪ್ರಯತ್ನಸಿದ್ದೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಮೃತ ವ್ಯಕ್ತಿಯ ಹೆಸರು ವಿಳಾಸ ಸದ್ಯ ತಿಳಿದು ಬಂದಿರುವದಿಲ್ಲ. ಸದರಿಯವನ ಮೃತ ಶವವು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಇಡಲಾಗಿದೆ. ಸದರಿಯವನು 40-45 ವರ್ಷ ವಯಸ್ಸಿನವನು ತೆಳ್ಳನೆಯ ಮೈಕಟ್ಟು ಉದ್ದನೆಯ ಮುಖ ಬಣ್ಣ ಸಾದಾಕಪ್ಪು ತಲೆಯಲ್ಲಿ ಕಪ್ಪು ಉದ್ದನೆಯ ಕೂದಲು ಮತ್ತು ದಾಡಿ ಇರುತ್ತದೆ. ಮೈಮೇಲೆ ಬಿಳಿ ಕೆಂಪು ಗೆರೆಉಳ್ಳ ಶರ್ಟ, ಕೆಂಪು ಬಣ್ಣದ ಬನಿಯಾನ, ಹಸಿರು ಬಣ್ಣದ ಬಿಳಿ ಗೆರೆಉಳ್ಳ ಶರ್ಟ, ಬೂದಿ ನಾಶಿ ಬಣ್ಣದ ಪ್ಯಾಂಟ, ಇದ್ದು ಎತ್ತರ ಅಂದಾಜು 5-4 ಇರುತ್ತದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಮತ್ತು ಅವನ ಸಂಬಂಧಿಕರು ಯಾರು ಎಂಬುವದು ತಿಳಿದು ಬಂದಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹಮ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.