POLICE BHAVAN KALABURAGI

POLICE BHAVAN KALABURAGI

30 December 2016

Kalaburagi District Reported Crimes.

ಫರಹತಾಬಾದ ಠಾಣೆ : ದಿನಾಂಕ 29/12/2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದಲ್ಲಿ ಆರೋಪಿತರು ಫಿರ್ಯಾದಿಯೊಂದಿಗೆ ನಿನ್ನೆ ದಿನಾಂಕ 28/12/2016 ರಂದು ನಿನ್ನ ತಾಯಿ ನಮ್ಮ ಮನೆಯ ಹತ್ತೀರ ಬಟ್ಟೆ ತೊಳೆಯಲು ಬೆರಬೆಡ ಅಂತಾಅಂದ್ರೂ ಬಟ್ಟೆತೋಲೆಯಲು  ಬ್ರುತ್ತಿದ್ದಾಳೆ ಅಂತಾಅವಾಚ್ಯ ಶಬ್ದಗಳಿಂದ ಬೈದು ತಲೆಗೆ  ಕಲ್ಲಿನಿಂದ ಹೋಡೆದು ರಕ್ತಗಾಯ  ಮಾಡಿ ಜೀವದಬೆದರಿಕೆ  ಹಾಕಿರುತ್ತಾರೆ ಅಂತಾ ಇತ್ಯಾದಿ ಸಾರಾಂಸವಿರುತ್ತದೆ ಆರೋಪಿತರು ಅರುಣಕುಮಾರ ತಂದೆ ಶರಣಗೌಡ ಪೊಲೀಸ್ ಪಾಟೀಲ ಸಂಗಡ ಇನ್ನು ಒಬ್ಬ ಸಾ// ಇಬ್ಬರೂ ಸೀತನೂರ ಸದರಿ ರವರ ವಿರುದ್ದ ಪ್ರಕರಣ ವರಿದಯಾದ ಬಗ್ಗೆ .
ಜೇವರ್ಗಿ ಠಾಣೆ : ದಿನಾಂಕ 29.12.2016 ರಂದು 14:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯರವರಲ್ಲಿ ನಾನು ಮುನ್ನಾ ತಂದೆ ಮಹ್ಮದ್ ರಫೀ ವಯಾಃ 22 ವರ್ಷ, ಜಾತಿಃ ಮುಸ್ಲಿಂ ಉಃ ಗ್ಯಾರೇಜ ಕೆಲಸ ಸಾಃ ಬಿ.ಡಿ. ಕ್ವಾರ್ಟಸ್ ಮಂಡ್ಯ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ ನನಗೆ ಪರಿಚಯದ ಅಬ್ದುಲ್ ಖಾದರ ಇತನು ತನ್ನ ಲಾರಿ ನಂ ಕೆಎ-45-3807 ನೇದ್ದರಲ್ಲಿ ಎಳೆನೀರು ತೆಂಗಿನ ಕಾಯಿ ತುಂಬಿಕೊಂಡು ಮಂಡ್ಯದಿಂದ ಕಲಬುರಗಿಗೆ ಹೋಗಿ ಬಂದು ಮಾಡುತ್ತಾನೆ. ನಾನು ಕಲಬುರಗಿ ಬಂದೇ ನವಾಜ ದರ್ಗಾಕ್ಕೆ ಹೋಗಿ ನೊಡಿಕೊಂಡು ಬರುವ ಸಲುವಾಗಿ ಮೇಲೆ ನಮೂದಿಸಿದ ಎಳೆ ನೀರು ತೆಂಗಿನ ಕಾಯಿ  ತುಂಬಿದ ಲಾರಿಯಲ್ಲಿ ಕುಳಿತುಕೊಂಡು ದಿನಾಂಕ 26.12.2016 ರಂದು ರಾತ್ರಿ ಮಂಡ್ಯದಿಂದ ಕಲಬುರಗಿಗೆ ಬರುತ್ತಿದ್ದೆನುಲಾರಿಯಲ್ಲಿ ಅದರ ಕ್ಲೀನರ್ ಯಾಸೀನ ಸಹ ಇದ್ದನು, ಲಾರಿಯನ್ನು ಅಬ್ದುಲ್ ಖಾದರ ತಂದೆ ಕೆ.ಬಿ. ಮೊಹ್ಮದ್ ಈತನು ನಡೆಯಿಸುತ್ತಿದ್ದನು. ದಿ. 27.12.2016 ರಂದು ಶಹಾಪೂರ ಜೇವರಗಿ ಮಾರ್ಗವಾಗಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ಜೇವರಗಿ-ಶಹಾಪೂರ ಮೇನ್ ರೋಡ ಚಿಗರಳ್ಳಿ ಕ್ರಾಸ್ ಪೆಟ್ರೊಲ್ ಪಂಪ ಹತ್ತಿರ ರೋಡಿನಲ್ಲಿ ರಾತ್ರಿ 11.15 ಗಂಟೆಯ ಸುಮಾರಿಗೆ ನಾನು ಕುಳಿತು ಬರುತ್ತಿದ್ದ ಲಾರಿ ಚಾಲಕ ಅಬ್ದುಲ್ ಖಾದರ್ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಂದೆ ರೋಡಿನಲ್ಲಿ ಬರುತ್ತಿದ್ದ ಒಂದು ವಾಹನಕ್ಕೆ ಸೈಡ ಕೊಡಲು ಒಮ್ಮೇಲೆ ಕಟ್ ಹೊಡೆದಾಗ ಲಾರಿ ರೋಡಿನ ಸೈಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಆಗ ನನಗೆ ಎಡ ಕೈ ಮಣಿ ಕಟ್ ಹತ್ತಿರ ಮತ್ತು ಎಡ ಗಲ್ಲದ ಮೇಲೆ ಗಾಯವಾಗಿರುತ್ತದೆ. ಲಾರಿ ಮುಂದಿನ ಬಾಗ ಜಖಂಗೊಂಡಿರುತ್ತದೆ. ನಂತರ ಲಾರಿ ಕ್ಲೀನರ್ನು 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿದನು. ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ವಾಹನದಲ್ಲಿ ನಾನು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು  ಉಪಚಾರ ಪಡೆದುಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಅದೇ ಅಂಬ್ಯುಲೆನ್ಸ್ ವಾಹನದಲ್ಲಿ ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರ ಮಾಡಿ ತಡಮಾಡಿ ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿರುತ್ತೇನೆ ಮತ್ತು ಲಾರಿ ಕ್ಲೀನರನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಮೇಲೆ ನಮೂದಿಸಿದ ಲಾರಿ ನಂ ಕೆಎ-45-3807 ನೇದ್ದರ ಚಾಲಕ ಅಬ್ದುಲ್ ಖಾದರ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದರಿಂದ ಲಾರಿ ಪಲ್ಟಿಯಾಗಿರುತ್ತದೆ ಅದರಿಂದ ನನಗೆ ಗಾಯವಾಗಿದ್ದು ಕಾರಣ ಸದರಿ ಲಾರಿ ಚಾಲಕನ ವಿರುದ್ದ ಪ್ರಕರಣ ವರದಿಯಾದ ಬಗ್ಗೆ. 

29 December 2016

Kalaburagi District Reported Crimes.

ಚೌಕ ಪೊಲೀಸ್‌  ಠಾಣೆ : ದಿನಾಂಕ 28.12.2016 ರಂದು ನಸುಕಿನ ಜಾವ 2.00 ಗಂಟೆಯ ಸುಮಾರಿಗೆ ಚೌಕ ಪೋಲೀಸ ಠಾಣೆ ವ್ಯಾಪ್ತಿಯ ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ ಮೇಲೆ 7-8 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಡಕಾಯಿತಿದಾರರು, ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲಗಳು ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಭಾತ್ಮಿ ಬಂದ ಮೇರೆಗೆ ನಾನು ಕೂಡಲೇ ನಮ್ಮ ಠಾಣೆಯ ಶ್ರೀ ಜಾಫರ ಅಲಿ ಎಎಸ್ಐ, ವಿಶ್ವನಾಥ ಪಿಸಿ 686, ಮೀರಯಾಸಿನ್ ಪಿಸಿ 948, ಬಂದೇನವಾಜ ಪಿಸಿ 429, ರಮೇಶ ಪಿಸಿ 1239,  ಪ್ರೇಮಸಿಂಗ್‌ ಪಿಸಿ 972, ಕನಯ್ಯಾಲಾಲ ಪಿಇಸ 438, ನರೇಂದ್ರ ಹೆಚ್‌ಜಿ 30 ರವರಿಗೆ ಠಾಣೆಗೆ ಬರಮಾಡಿಕೊಂಡು ಮತ್ತು ಇಬ್ಬರು ಪಂಚಜನರಾದ 1) ಶ್ರೀ ಮಹ್ಮದ ಜಾವೀದ @ ಪಪ್ಪು ತಂದೆ ಮಹ್ಮದ ಜಿಲಾನಿ ಶೇಕ ವಯಃ 23 ವರ್ಷ ಜಾಃ ಮುಸ್ಲಿಂ ಉಃ ಸೆಂಟರಿಂಗ್‌ ಕೆಲಸ ಸಾಃ ಫಿಲ್ಟರ್‌ ಬೆಡ್‌ ಆಶ್ರಯ ಕಾಲೋನಿ ಕಲಬುರಗಿ 2) ಶ್ರೀ ಅಂಬರೇಶ ತಂದೆ ಭಗವಾನರಾವ ಪುರಮಕರ ವ: 32 ಜಾತಿ: ಭೋವಿ ಉ: ವ್ಯಾಪಾರ ಸಾ: ಬಂಬು ಬಜಾರ ಕಲಬುರಗಿ ರವರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೂ ಸಹ ಮೇಲಿನ ವಿಷಯ ತಿಳಿಸಿ ಪಂಚರಾಗಲು ವಿನಂತಿಸಿಕೊಂಡಿದ್ದು ಅವರು ಒಪ್ಪಿಕೊಂಡ ನಂತರ ಈ ಮೇಲಿನ ಎಲ್ಲಾ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಅಪರ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಬಿ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ, ನಮ್ಮ ಠಾಣೆಯ ಸರಕಾರಿ ಜೀಪಿ ನಂ ಕೆಎ-32 ಜಿ-668 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 2.30 ಎಎಮ್ ಕ್ಕೆ  ಹೋರಟು, ಬಾತ್ಮೀ ಬಂದ ಸ್ಥಳದ ಸಮೀಪದಲ್ಲಿ 2.45 ಗಂಟೆಗೆ ತಲುಪಿ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ  ಪಕ್ಕದಲ್ಲಿ ಮರೆಯಾಗಿ ಹೊಗಿ ಜಾಡು ಹಿಡಿದು ನೋಡಲು ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು  ಒಮ್ಮಲೆ ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ಧಾಳಿ ಮಾಡಿ ಹಿಡಿಯುವಷ್ಟರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು, ನಾಲ್ಕು ಜನರು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ  ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು  ತನ್ನ ಹೆಸರು 1) ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 4) ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು, ಓಡಿ ಹೋದ ಆರೋಪಿತರ ಬಗ್ಗೆ ಕುಮಾರ ಜಾಧವ ಇತನಿಗೆ ವಿಚಾರಿಸಲು  1] ಕಿರಣ 2) ಜಾಫರ 3) ಆಕಾಶ 4) ಹೀರಾ  ಅಂತಾ  ಕುಮಾರ ಇತನು ತಿಳಿಸಿದ್ದು ಇರುತ್ತದೆ. ನಂತರ ಇಬ್ಬರು ಪಂಚರ ಸಮಕ್ಷಮ ಕಚೇರಿಗೆ ಒದಗಿಸಿದ ಪವರ ರ್ಫುಲ್ ಸರ್ಚಲೈಟ  ಬೆಳಕಿನಲ್ಲಿ ಮತ್ತು ನಮ್ಮ ಪೊಲೀಸ್ ವಾಹನದ ಲೈಟಿನ ಬೆಳಕಿನಲ್ಲಿ ನಾವೆಲ್ಲರು ಹಿಡಿದ 4 ಜನ ದರೊಡೆ ಮಾಡಲು ಸಂಚು ರೂಪಿಸಿ ಪ್ರಯತ್ನಿಸಿದವರನ್ನು ಅಂಗ ಶೋದನೆಯನ್ನು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಮಾಡಲಾಗಿ 1]  ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 20 ರೂ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00 ಹಾಗೂ ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಜೆ-1746 ಅಃಕಿಃ 30,000/- ನೇದ್ದು, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ,  ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 25 ರೂ  ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಬಿ-4736 ಅಃಕಿಃ 30,000/-, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಎಂಬುವವನ ಹತ್ತಿರ ಒಂದು ಲಾಂಗ ಅಃಕಿಃ 20 ರೂ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಹಾಗು ಖಾರದ ಪುಡಿ ಪ್ಯಾಕೇಟ ಅಃಕಿಃ 00 4)  ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಎಂಬುವವನ ಹತ್ತಿರ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳು ಅಃಕಿಃ 00 ಹಾಗು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಮುಖವಾಡ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹಗ್ಗ ಅಃಕಿಃ 00, ದೊರೆತಿದ್ದು ಮತ್ತು ಅಲ್ಲೇ ಇದ್ದ ಎರಡು ಮೋಟಾರ ಸೈಕಿಲ್‌ಗಳ ಬಗ್ಗೆ ಸದರಿ ಆರೋಪಿತರಿಗೆ ವಿಚಾರಿಸಿದ್ದಾಗ ಸದರಿ ಮೋಟಾರ ಸೈಕಿಲ್‌ಗಳಲ್ಲಿ ಈ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ನೇದ್ದು ಕಿರಣ ಇತನು ಉಪಯೋಗಿಸಿದ್ದು  ಹಾಗೂ ಮತ್ತು ಈ  ಹೊಂಡಾ ಸೈನ್‌ ಕೆಎ-32 ಯು-1513 ನೇದ್ದು  ಜಾಫರ  ಇತನು ಉಪಯೋಗಿಸಿದ್ದು ಇರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ.   ಸ್ಥಳದಲ್ಲಿಯೆ ಬಿದ್ದಿರುವ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ಅಃಕಿಃ 30,000/- ಹಾಗೂ ಹೊಂಡಾ ಸೈನ್‌ ಕೆಎ-32 ಯು-1513  ಅಃಕಿಃ 40,000/-  ರೂ  ಹೀಗೆ ದರೊಡೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಕೊಂಡಿರುವವರಿಂದ ಒಟ್ಟು ಅಂದಾಜು 1,30,065/- ರೂ ಬೆಲೆ ಬಾಳುವದನ್ನು  ಪಂಚರ ಸಮಕ್ಷಮ ಇಂದು ದಿನಾಂಕ 28.12.2016 ರಂದು ಬೆಳಗಿನ ಜಾವ 03-00 ಗಂಟೆಯಿಂದ 04.30 ಗಂಟೆಯವರೆಗೆ ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರಗಿಸಿ ನಂತರ ಸದರಿ ವಸ್ತಗಳನ್ನು ಪ್ರತ್ಯೇಕವಾಗಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ, ಈ  ಮೇಲೆ ನಮೂದ ಮಾಡಿದ 8  ಜನ ಆರೋಪಿತರಲ್ಲಿ ಓಡಿಹೋದವ 4 ಜನರ ಆರೋಪಿತರನ್ನು ಬಿಟ್ಟು ನಾಲ್ಕು ಜನರನ್ನು ಸಿಬ್ಬಂದಿಯವರ ಬೆಂಗಾವಲಿನಲ್ಲಿ ದಿನಾಂಕ: 28.12.2016 ರಂದು ಬೆಳಗಿನ ಜಾವ 05.15 ಗಂಟೆಗೆ ಠಾಣೆಗೆ ತಂದು ಈ ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಜಪ್ತಿ ಮಾಡಲಾದ ಮುದ್ದೆ ಮಾಲನ್ನು ಠಾಣಾಧಿಕಾರಿ ಚೌಕ ಪೊಲೀಸ ಠಾಣೆ ರವರಿಗೆ ಒಪ್ಪಿಸಿದ್ದು ಅಲ್ಲದೆ ಇವರೆಲ್ಲರು ಈ ಮೊದಲಿನಿಂದಲೂ ಇಂತಹ ಕೃತ್ಯವನ್ನು ಮಾಡುವ ಅಪರಾಧ ಹಿನ್ನಲೆ ವುಳ್ಳವರಾಗಿರುವದ್ದಾರೆಂದು ವಿಚಾರಣೆಯಿಂದ ತಿಳಿದು ಬಂದಿದ್ದು  ಸದರಿ 8 ಜನರ  ವಿರುದ್ಧ ಕಾನೂನು ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:28/12/2016 ರಂದು ಮದ್ಯಾನ 3.30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರೀನ್‌ ಸಕಲ್‌‌ ಹತ್ತಿರ ಒಬ್ಬ ವ್ಯಕ್ತಿ  ರಸ್ತೆಯ ಪಕ್ಕದಲ್ಲಿ  ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹೀತಿ ಬಂದಿದ್ದು ಆತನ ಮೇಲೆ ದಾಳಿ ಮಾಡುವುದು ಗೋಸ್ಕರ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಜೊತೆಯಲ್ಲಿ ಸಿಬ್ಬಂದಿ ಜನರಾದ 1)ಕಿಶೋರ ಪಿಸಿ.1010 2) ಗಂಗಾಧರ ಪಿ,ಸಿ, 642  ಮತ್ತು ಜೀಪ ಚಾಲಕ 3)ಶಿವಲಿಂಗಪ್ಪ ಪಿ,ಸಿ, 1241 ರವರನ್ನು ಜೊತೆಯಲ್ಲಿ ಕರೆದುಕೊಂಡು  ಜೀಪಿನಲ್ಲಿ ಕುಳಿತು ಮದ್ಯಾನ 3.45 ಗಂಟೆಗೆ ಠಾಣೆಯಿಂದ ಹೋರಟು ಮದೀನಾ ಕಾಲೋನಿ ಗ್ರೀನ್‌ ಸರ್ಕಲ್‌‌  ಸ್ವಲ ಮುಂದೆ ಇದ್ದಂತೆ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ತನ್ನ ಹತ್ತಿ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಿದ್ದನು ಇದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.15 ಗಂಟೆಗೆ ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತಜಮಲ್‌‌‌ ತಂದೆ ಫಕ್ರುದ್ದಿನ ಕಮಲಾಪುರವಾಲೆ  ||36 || ಆಟೋ ಚಾಲಕ ಸಾ|| ಇಲಾಹಿ ಮಜೀದ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದನು  ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 780=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಮುಂದಿನ ಪುರಾವೆ ಕುರಿತು ವಶಕ್ಕೆ ತೆಗೆದುಕೊಂಡಿದ್ದು ಒಪ್ಪಿಸಿದ್ದು ಸದರಿಯವನ ಮೇಲೆ ಕಲಂ 78(3) ಕೆ.ಪಿ ಆಕ್ಟ್‌ ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ. 

28 December 2016

Kalaburagi District Reported Crimes.

ಆಳಂದ ಪೊಲೀಸ್ ಠಾಣೆ : ದಿನಾಂಕ:27/12/2016 ರಂದು 08:30 ಪಿ.ಎಂ.ಕ್ಕೆ ಪಿರ್ಯಾದಿ ಶ್ರೀ.ರಾಜಾಬಾಹು ತಂದೆ ಶ್ರೀರಂಗ ಕಾಂಬಳೆ ವಯ: 51 ವರ್ಷ ಜಾ: ಬುದ್ದಿಷ್ಟ್‌ ಉ: ಟ್ರಾನ್ಸಪೋರ್ಟ ವ್ಯಾಪಾರ ಸಾ: ವೈಶಾಲಿ ಬುದ್ದ ವಿಹಾರ ಬೌದ್ದನಗರ ತಾ;ಜಿ ಲಾತೂರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಅರ್ಜಿ ತಂದು ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಮಾನ್ಯರಲ್ಲಿ ದೂರು ಸಲ್ಲಿಸುವದೇನೆಂದರೆ ನನ್ನದೊಂದು ಸೌತ್‌ ಇಂಡಿಯಾ ಟ್ರಾನ್ಸಪೋರ್ಟ ಸೈಲಾನಿ ಬಾಬಾ ದರ್ಗಾ ಎದರುಗಡೆ ಹೌಸಾ ರೋಡ  ಖೋಪೆಗಾಂವ ಲಾತೂರ ದಲ್ಲಿ ನನ್ನದೊಂದು ಟ್ರಾನ್ಸಪೋರ್ಟ ಇದ್ದು ಲಾರಿಯಲ್ಲಿ ಮಾಲು ತುಂಬಿ ಕಳುಹಿಸುತ್ತಾ ಬಂದಿರುತ್ತೇನೆ. ದಿನಾಂಕ: 22/12/2016 ರಂದು ರಾತ್ರಿ  11-30 ಗಂಟೆಯ ಸುಮಾರಿಗೆ ನಾನು ಲಾರಿ ನಂ:ಟಿ.ಎನ್‌ 88-ವಾಯ್‌-4199 ನೇದ್ದರಲ್ಲಿ ಲಾತೂರದಿಂದ ಸದರ ಲಾರಿಯ ಒಳಗಡೆ 70 ಕ್ವಿಂಟಲ್‌ ಹೆಸರು, ಮತ್ತು 30 ಕ್ವಿಂಟಲ್‌ ಉದ್ದು ಹಾಗು 110 ಕ್ವಿಂಟಲ್‌ ತೊಗರೆ ಹೀಗೆ ಒಟ್ಟು 21 ಟನ್‌ ದಾನ್ಯಗಳು ಅಕಿ: 12,80,000/- ರೂ ಕಿಮ್ಮತ್ತಿನ ಮಾಲು ತುಂಬಿರುತ್ತೇನೆ. ಸದರ ಲಾರಿಯ ಮೇಲೆ ಚಾಲಕ ಎಂದು ಸತೀಶಕುಮಾರ ತಂದೆ ಕಾರ್ತಿಯನ್‌ ವಯ: 36 ವರ್ಷ ಜಾ: ಮುತ್ತುರಾಜ ಉ: ಲಾರಿ ಚಾಲಕ ಸಾ: ಮೀನಾಕ್ಷಿಪುರಂ ಪೋಷ್ಟ್‌ ಕರಟಾಮಡ್ಡಿ ತಾ: ಮುಸರಿ ಜಿ: ತ್ರಿಚಿರಾಪಲ್ಲಿ ತಮಿಳುನಾಡು ಈತನಿರುತ್ತಾನೆ, ಈತನು ವಿಶ್ರಾತಿ ಮಾಢಿ ಬೆಳಗ್ಗೆ ಹೋಗುತ್ತೇನೆ ಎಂದು ಹೇಳಿದ್ದರಿಂದ 23/12/2016 ರಂದು ಬೆಳಗ್ಗೆ 10-00 ಎಎಮ್ ವೇಳೆಗೆ ಲಾತೂರದಿಂದ ತೂತ್ತುಕುಡಿ( ತುತ್ತುಕೋರಿನ್‌) ದಲ್ಲಿ ಧಾನ್ಯಗಳು ಮಾಲು ಕೊಟ್ಟು ಬರಲು ಹೇಳಿ ಕಳುಹಿಸಿರುತ್ತೇನೆ. ನಂತರ ದಿನಾಂಕ: 24/12/2016 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಗೆ ಯಾರೋ ಮೋಬೈಲ್‌ ನಂ: 9960524408 ನೇದ್ದರಿಂದ ನನಗೆ ಮೊಬೈಲ್ ನಂ: 9156588555 ನೇದ್ದಕ್ಕೆ ಫೊನ್‌ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ಲಾರಿ ನಂ: ಟಿ.ಎನ್‌ 88-ವಾಯ್‌-4199 ನೇದ್ದು  ಹಂಗರಗಾ ನಳ್‌ ನಂದಗಾಂವ ರೋಡ ಹತ್ತಿರ ನಿಂತಿದ್ದು ನಿಮ್ಮ ಲಾರಿ ಚಾಲಕನಿಗೆ ಯಾರೋ ಬಹಳಷ್ಟು ಹೊಡೆದಿದ್ದಾರೆ ಆತನಿಗೆ ಮಾತಾಡಲು ಬರುತ್ತಿಲ್ಲ ಕೂಡಲೆ ಬರಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಪಾರ್ಟನರ್‌ ಇಕ್ರಾಮ್‌ ಸೈಯದ್‌, ತಂದೆ ಸಮ್‌ದಾನಿ ಸೈಯದ್‌ ಹಾಗು ಸತೀಶ ಸಾಟೆ (ಮಾಸ್ತರ್‌), ಸೇಂದಿಲ್‌ ತಂದೆ ಚಂದ್ರಶೇಖರ್ ನಾಡರ ಇವರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನಮ್ಮ ಚಾಲಕನಿಗೆ ಎಡ ಕೈ ಮೆಲೆ ರಕ್ತಗಾಯವಾಗಿದ್ದು ಹೆಡಕಿಗೆ ಹೊಡೆದಿದ್ದರಿಂದ ಮಾತಾಡಲು ಸರಿಯಾಗಿ ಬರುತ್ತಿರಲಲ್ಲ ನಂತರ ನಮ್ಮ ಲಾರಿ ಚಾಲಕ ಸತೀಶಕುಮಾರ ಈತನಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ; ದಿನಾಂಕ: 23/12/2016 ರಂದು ಸಾಯಂಕಾಲ 630 ಗಂಟೆಯ ಸುಮಾರಿಗೆ ಆಳಂದ ಆರ್‌ಟಿಓ ಚೆಕ್‌ಪೋಷ್ಟ ದಾಟಿ ಮುಂದೆ ಸ್ವಲ್ಪ ದೂರದಲ್ಲಿ  ಹೋದಾಗ ಯಾರೋ ಇಬ್ಬರು ಜನರು ಮೋಟಾರ್ ಸೈಕಲ್ ಮೇಲೆ ಬಂದು ನಮ್ಮ ಲಾರಿಯ ಎದುರಿಗೆ  ಅಡ್ಡ ಹಾಕಿ ಲಾರಿ ನಿಲ್ಲಿಸಿ ಲಾರಿಯಲ್ಲಿ ಹತ್ತಿ ಭೋಸಡಿ ಮಗನೆ ಸೂಳೆ ಮಗನೆ ನೀನು ಲಾರಿ ಸೀದಾ ನಡೆಸಲು ಬರುವದಿಲ್ಲ ಎಂದು ಬೈದು ನನಗೆ ಕೈಯಿಂದ ಹೊಡೆದರು. ಮತ್ತು ಇನ್ನು 4 ಜನರು ಬಂದು ನನಗೆ ಬಾಯಿ ಒತ್ತಿ ಹಿಡಿದು ಚಾಕು ತೋರಿಸಿ ಆವಾಜ ಮಾಡಿದಿ  ಎಂದರೆ ನನಿಗೆ ಖಲಾಸ್‌ ಮಾಡುತ್ತೇವೆ ಎಂದು ಹೆದರಿಸಿ ನನ್ನ ಎರಡು ಕೈಗಳು ಹಿಂದೆ ಕಟ್ಟಿ ನನ್ನ ಲುಂಗಿಯಿಂದ ಎರಡು ಕಣ್ಣುಗಳು ಕಟ್ಟಿ ನನಗೆ ಕೆಳಗೆ ಹಾಕಿ ಇಬ್ಬರು ನನ್ನ ಮೇಲೆ ಕುಳಿತು ಒಬ್ಬನು ಲಾರಿಯನ್ನು ಚಲಾಯಸಿಕೊಂಡು ಹೋಗಿ ಎಲ್ಲಿಯೋ ಒಂದು ಕಡೆ ಲಾರಿ ನಿಲ್ಲಿಸಿ ಲಾರಿಯಲ್ಲಿದ್ದ 21 ಟನ್‌ ಧಾನ್ಯಗಳು ಖಾಲಿ ಮಾಡಿ ನಂತರ ನನಗೆ ನಳದುರ್ಗದ ಹತ್ತಿರ ಇರುವ ಹಂಗರಗಾ-ನಳ್ ಗ್ರಾಮ ನಂದಗಾಂವ ರೋಡ ಹತ್ತಿರ ನನಗೆ ಹೊಡದು ಇಲ್ಲಿಯೆ ಲಾರಿಯಲ್ಲಿ ಬಿಟ್ಟು ಹೋಗಿರುತ್ತಾರೆ ನಾನು ಲಾರಿಯಲ್ಲಿ ಟೂಲ್‌ ಭಾಕ್ಸದಲ್ಲಿಟ್ಟಿದ್ದ 20,000/- ನಗದು ಹಣ ಮತ್ತು 30,680/-ರೂ ಬೆಲೆ ಬಾಳುವ ಚೆಕ್‌ ಹಣ ಮತ್ತು ಓರಿಜನಲ್‌ ಲೈಸನ್ಸ ಹಾಗು 03 ತಾಡಪತ್ರೆಗಳು ಅಕಿ: 12000/- ರೂ ಇರಲಿಲ್ಲ ಎಲ್ಲ ತೆಗೆದುಕೊಂಡು ಹೋಗಿರುತ್ತಾರೆ. ಎಂದು ತಿಳಿಸಿದನು. ನಂತರ ನಾವು ಲಾರಿ ಚೆಕ್‌ ಮಾಡಲಾಗಿ ಲಾರಿಯಲ್ಲಿ ಯಾವುದೆ ಧಾನ್ಯಗಳು ಮತ್ತು ಹಣವಾಗಲಿ ಚೆಕ್ಕಾಗಲಿ ಇರಲಿಲ್ಲ. ನಂತರ ನಾವು ನಳದುರ್ಗ ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದಾಗ ಅವರು ಆಳಂದಕ್ಕೆ ಹೋಗಿ ದೂರು ಕೊಡಲು ತಿಳಿಸಿದ್ದರಿಂದ ನಾವು ಮಾಲಿನವರೊಂದಿಗೆ ವಿಚಾರಿಸಿಕೊಂಡು ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಯಾರೋ 6 ಜನರು ಕೂಡಿ ಆಳಂದ ಚೆಕ್‌ ಪೋಷ್ಟ ದಾಟಿ ಸ್ವಲ್ಪ ಮುಂದೆ ಹೋದಾಗ ಅಡ್ಡಗಟ್ಟಿ ಲಾರಿ ನಿಲ್ಲಿಸಿ ನಮ್ಮ ಲಾರಿ ನಂ; ಟಿ.ಎನ್‌ 88-ವಾಯ್‌-4199 ನೇದ್ದರ ಚಾಲಕನಿಗೆ ಹೊಡೆದು ಲಾರಿಯ ಒಳಗಡೆ ಇದ್ದ 70 ಕ್ವಿಂಟಲ್‌ ಹೆಸರು ಮತ್ತು 30 ಕ್ವಿಂಟಲ್‌ ಉದ್ದು ಹಾಗು 110 ಕ್ವಿಂಟಲ್‌ ತೊಗರೆ ಹೀಗೆ ಒಟ್ಟು 21 ಟನ್‌ ಧಾನ್ಯಗಳು ಅಕಿ: 12,80,000/- ರೂ ಮತ್ತು ಲಾರಿಯಲ್ಲಿ ಟೂಲ್‌ ಭಾಕ್ಸದಲ್ಲಿಟ್ಟಿದ್ದ 20,000/- ನಗದು ಹಣ ಮತ್ತು 30,680/- ರೂ ಬೆಲೆ ಬಾಳುವ ಚೆಕ್‌ ಹಣ ಹಾಗು 03 ತಾಡಪತ್ರೆಗಳು ಅಕಿ: 12000/- ರೂ ಬೆಲೆ ಬಾಳುವ ಮಾಲು ದರೋಡೆ  ಮಾಡಿಕೊಂಡು ಹೋಗಿರುತ್ತಾರೆ. ಸದರ ದರೋಡೆಕೋರರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಿಲಾದ ಬಗ್ಗೆ ವರದಿ.           
ಅಫಜಲಪೊರ ಪೊಲೀಸ್ ಠಾಣೆ : ದಿನಾಂಕ 27-12-2016 ರಂದು 07:00 ಪಿ.ಎಮ್ ಕ್ಕೆ ಶ್ರೀ ಲಕ್ಷ್ಮಿಕಾಂತ ವಿತ್ರಾ ಸಹಾಯಕ ಕಾರ್ಯನಿರ್ವಾಹ ಅಭಿಯಂತರರು ಲೋಕಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ-ವಿಭಾಗ ಅಫಜಲಪೂರ ರವರ ಠಾಣೆಗೆ ಹಾಜರಾಗಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೇನೆಂದರೆ ಶೀವಪೂರ ಸೀಮಾಂತರದ ಹೊಲ ಸರ್ವೇ ನಂ 5, 2/2/4 ರಲ್ಲಿ  330.00 ಘನ ಮೀಟರ ಮರಳು  ಅಂದಾಜು ಕಿಮ್ಮತ್ತು 2,14,500/- ನೇದ್ದು ಅಕ್ರಮ ಮರಳಿನ ಗುಡ್ಡೆಗಳನ್ನು ಸಂಗ್ರಹಿಸಿದ್ದು ಸದರಿ ಭೂ ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೊರಿಕೊಂಡ ಮೇರೆಗೆ ಪ್ರಕಾರ ಪ್ರಕರಣ ದಾಖಿಲಾದ ಬಗ್ಗೆ ವರದಿ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ :ದಿನಾಂಕ. 27/12/2016 ರಂದು 11-30 ಪಿ.ಎಮ್ ಕ್ಕೆ ಪಿರ್ಯಾಧಿ ರಾಜಕುಮಾರ ತಂದೆ ಧರ್ಮಪಾಲ ಕಿವುಡೆ ವ: 52 ಉ: ಖಾಸಗಿ ಕೆಲಸ ಜಾತಿ: ಜೈನ್ ಸಾ: ಮನೆ ನಂ. 8-589 ಭಗವಾನ ಮಾಹಾವೀರ ಮಾರ್ಗ ಆಸೀಪ್ ಗಂಜ ಮೇನ್ ರೋಡ ಕಲಬುರಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ದಿನಾಂಕ. 15/10/2016  ರಂದು 9.00 ಪಿ.ಎಂ ಸುಮಾರಿಗೆ ನಾನು ನನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. KA-32 VB-8442  ಚೆಸ್ಸಿನಂ. ME4JC365H98082675, .ನಂ. JC36E0172217 ,ಕಿ|| 25,000/- ರೂ ನೇದ್ದು ರೇಲ್ವೆ ಸ್ಟೇಷನ ಹತ್ತಿರ ಇರುವ ಮಾಹಾರಾಜ ಹೊಟೇಲ ಮುಂದುಗಡೆ ನಿಲ್ಲಿಸಿ ಹೊಟೇಲದಲ್ಲಿ ಚಹಾ ಕುಡಿದು ಮರಳಿ 9:20 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹೊಂಡಾ ಶೈನ್ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹೊಂಡಾ ಶೈನ್ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಗೈರೆ ಪಿರ್ಯಾಧಿಯ ಪ್ರಕಾರ ದಾಖಿಲಾದ ಬಗ್ಗೆ ವರದಿ.