POLICE BHAVAN KALABURAGI

POLICE BHAVAN KALABURAGI

23 December 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 22.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಹೊರ ವಲಯದ ಸೊಮಣ್ಣಾ ಕಲ್ಲಾ ಇವರ ಹೊಲದ ಭಂಡಿ ದಾರಿ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣ ಪಣಕ್ಕೆ ಇಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ  ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ ಎಸ್.ಭಿಸೆ ಪಿ.ಎಸ್.ಐ . ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್. ಇಂಗಳೇಶ್ವರ ಸಿಪಿಐ ಜೇವರಗಿ ವೃತ್ತ ರವರ ಮಾರ್ಗದರ್ಶನದಲ್ಲಿ  ಬಾತ್ಮೀ ಇದ್ದ ಸ್ಥಳದ ಸಮೀಪ ಹೋಗಿ ಬಂಡಿ ರಸ್ತೆ  ಪಕ್ಕದ ಗಿಡಕಂಠಿಗಳ ಮರೆಯಲ್ಲಿ  ನಿಂತು ನೋಡಲು  ಸದರಿ ರಸ್ತೆಯ  ಪಕ್ಕದಲ್ಲಿ ಖುಲ್ಲಾ ಸಾರ್ವಜನಿಕ  ಜಾಗೆಯಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ  ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಕ್ಕೆ ದಾಳಿ ಮಾಡಿ ಅವರಿಗೆ ಹಿಡಿದುಕೊಳಲು ಹೋದಾಗ ಅವರಲ್ಲಿ ಒಬ್ಬನು ಓಡಿ ಹೋದನು ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ  1) ಖಾಲೀದ ತಂದೆ ಅಬ್ದುಲ್ ಸತ್ತಾರ  ಗುತ್ತೆದಾರ  ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ 2) ಗುಂಡಪ್ಪ ತಂದೆ ಮರೆಪ್ಪ ಕುನ್ನೂರ  ಸಾ: ಕನಕದಾಸಚೌಕ ಜೇವರಗಿ . 3) ದೇವಿಂದ್ರಪ್ಪ ತಂದೆ ಶರಣಪ್ಪ ಗಂವ್ಹಾರ   ಸಾ: ಲಕ್ಮೀಚೌಕ ಜೇವರಗಿ  ಓಡಿ ಹೋದವನ ಹೆಸರು ಕೇಳಲಾಗಿ ಹೋಡಿ ಹೋದವನು ಶಿವಶಂಕರ ತಂದೆ ಮಲ್ಲಪ್ಪ ನಾಟೀಕಾರ ಸಾಃ ತಳವಾರ ಓಣಿ ಜೇವರಗಿ ಅಂತಾ ತಿಳಿಸಿದ್ದು ಜೂಜಾಟಕ್ಕೆ ಬಳಸಿದ ನಗದು ಹಣ 1150=00 ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.22-12-2016 ರಂದು  ಮದ್ಯಾನ 1-00 ಗಂಟೆಯ ಸುಮಾರಿಗೆ ರಾಮತೀರ್ಥ ಗುಡಿಯ ಕಡೆಗೆ ಹೋಗುತ್ತಿರುವಾಗ ರೋಡಿನ ಪಕ್ಕದಲ್ಲಿ ಜಾಲಿ ಗಿಡದ ಕೆಳಗೆ ಒಬ್ಬ ವ್ಯಕ್ತಿ ಮಲಗಿದ್ದು ಮೃತ ಪಟ್ಟಿರುವ ಬಗ್ಗೆ ಜನರು ನೋಡುತಿದ್ದರು ಆಗ ನಾನು ಕೂಡಾ ಹೋಗಿ ನೋಡಲಾಗಿ ಒಬ್ಬ ಭೀಕ್ಷುಕನಂತೆ ಇರುವ  ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತ ಪಟ್ಟಿದ್ದು, ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 60-65 ವರ್ಷದವನಿದ್ದು   ಬಡಕಲು ಶರೀರ ಹೊಂದಿದ್ದು ,ಎತ್ತರ 5 ಫೀಟ, 2 ಇಂಚು ಇದ್ದು, ಸಾಧಗಪ್ಪು ಮೈಬಣ್ಣ ಹೊಂದಿದ್ದು ,ಮೈ ಮೇಲೆ  ಚಾಕಲೇಟ ಕಲರ ಅಂಗಿ ಮತ್ತು ಒಂದು ಮಾಸಿದ ಬನಿಯಾನ ಮಾತ್ರ ಇದ್ದು, ಸದರಿಯವನು ಅಶಕ್ತನಾಗಿದ್ದು,  ಯಾವುದೋ ಕಾಯಿಲೆಯಿಂದ, ಮಲಗಿದ ಸ್ಥಳದಲ್ಲಿಯೇ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಅಂತಾ ಶ್ರೀ ಬ್ರಹ್ಮಮಾನಂದ ತಂದೆ ವಿಷ್ಣ ಕೋತುಳೆ ಸಾ;ರಾಮತೀರ್ಥ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 20-12-2016 ರಂದು ನಾನು ನನ್ನ ಹೆಂಡತಿಯಾದ ಲಲೀತಾ ಇಬ್ಬರು ಕೂಡಿಕೊಂಡು ನನ್ನ ಹೆಂಡತಿಯ ಅಕ್ಕನ ಮಗಳಾದ ಜ್ಯೋತಿ ಇವರಿಗೆ ವರ ನೊಡಿಕೊಂಡು ಬರಲು ಹೋಗೊಣ ಅಂತಾ ನನ್ನ ಹೆಂಡತಿಯ ಅಕ್ಕನವರು ಹೇಳಿದ್ದರಿಂದ ಸಾಯಂಕಾಲ 6 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆ ಮತ್ತು ಅಂಗಡಿಗಳಿಗೆ ಕೀಲಿ ಹಾಕಿಕೊಂಡು ಸಿಂದಗಿಗೆ ಹೋಗಿ ಅಲ್ಲಿಂದ ಒಂದು ಖಾಸಗಿ ವಾಹನ ತೆಗೆದುಕೊಂಡು ಸಿಂದಗಿಯಿಂದ ಬೆಂಗಳೂರಿಗೆ ದಿನಾಂಕ 21-12-2016 ರಂದು ಬೇಳಿಗ್ಗೆ ಹೊದೆವು ಅಲ್ಲಿ ಹೋಗುತ್ತಿದ್ದಂತೆ ನಮ್ಮೂರಿನ ಭೀಮಣ್ಣಗೌಡ ಇವರು ನನಗೆ ಫೋನ್ ಮಾಡಿ ಹೇಳಿದ್ದೆನೆಂದರೆ ನಿಮ್ಮ ಮನೆಯ ಎಲ್ಲಾ ಬಾಗಿಲಗಳು ತೆರದಂತಾಗಿವೆ  ಮನೆಯು ಕಳವು ಆದಂತೆ ಕಂಡುಬರುತ್ತದೆ ಅಂತಾ ಹೇಳಿದ ಕೂಡಲೆ ನಾವು ಬೆಂಗಳೂರಿನಿಂದ ಅದೆ ವಾಹನದಲ್ಲಿ ಕುಳಿತು ದಿನಾಂಕ 22-12-2016 ರಂದು ಬೆಳಿಗ್ಗೆ ಬಂದು ಮನೆಗೆ ಹೋಗಿ ನೊಡಲಾಗಿ ಮನೆಯ ಎಲ್ಲಾ ಬಾಗಲಿಗೆ ಹಾಕಿದ ಕೀಲಿಗಳು ಇರಲಿಲ್ಲ. ಬೆಡ್ ರೂಮ ಪಕ್ಕದ ರೂಮಿನಲ್ಲಿದ್ದ ಅಲಮಾರ ಕೆಳಗೆ ಹಾಕಿ ಅಲಮಾರದ ಬಾಗಿಲು ಕಿತ್ತಿ ಅಲಮಾರದಲ್ಲಿಟ್ಟ 1) 4 ತೊಲೆ ಬಂಗಾರದ ಪಾಟಲಿ (ಎರಡು ಬಂಗಾರದ ಬಳೆಗಳು)  ಅ.ಕಿ. 72,000/- ರೂ. 2)  3. ½  ತೊಲೆಯ ಬಂಗಾರದ ತಾಳಿಸರ ಅ.ಕಿ. 63,000/- ರೂ. 3) ಒಂದು ತೊಲೆಯ ಬಂಗಾರದ ಲಾಕಿಟು ಅ.ಕಿ. 20,000/- ರೂ. 4) 1. ½ ತೊಲೆಯ ಬಂಗಾರದ ನೆಕ್ಲೆಸ್ ಅ.ಕಿ. 30,000/- ರೂ ಆಗಿನ ಬೆಲೆಬಾಳುವ ವಸ್ತುಗಳು.   5) ಟ್ರಜರಿಯಲ್ಲಿದ್ದ ನಗದು ಹಣ 52,500/- ರೂ. ಗಳು ಹೀಗೆ ಒಟ್ಟು 2,37,500/- ರೂ ಗಳ ಮೌಲ್ಯದ ಬಂಗಾರ ಮತ್ತು ನಗದು ಹಣ ದಿನಾಂಕ 20-12-2016 ರಂದು ರಾತ್ರಿ 11-30 ರಿಂದ ದಿನಾಂಕ 21-12-2016 ರ ಬೆಳಿಗಿನ ಜಾವ 4 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಈರಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ|| ಅಲ್ಲಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಂಬ್ರೀಶ ತಂದೆ ಶಿವಶರಣಪ್ಪಾ ದಂಡರಗೋಳ ಸಾ: ಸರಡಗಿ (ಬಿ) ತಾ: ಕಲಬುರಗಿ ರವರು ದಿನಾಂಕ 21-12-2016 ರಂದು ರಾತ್ರಿ ತಮ್ಮೂರಾದ ಸರಡಗಿ (ಬಿ) ಗ್ರಾಮ್ಕಕೆ ಹೋಗವ ಕುರಿತು ರಸ್ತೆಯ ಬಂದಿಯಲ್ಲಿ ಸುರಬೀ ಧಾಬಾದ ಮುಂದೆ ನಿಂತಾಗ ಕಲಬುರಗಿ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ 32 ಇಹೆಚ್ 4945 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿ  ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಮರೇಪ್ಪ ತಂದೆ ಮಲ್ಲಪ್ಪ ಚಲವಾದಿ ಸಾ|| ಕೀರ್ತಿ ಕಾಲೇಜ ಹತ್ತಿರ ಪ್ರಶಾಂತ ನಗರ ರಾಜಾಪೂರ ರೋಡ ಕಲಬುರಗಿ ಇವರು ದಿನಾಂಕ: 20-12-2016 ರಂದು ರಾತ್ರಿ ತನ್ನ ಗೆಳೆಯನಾದ ಸಂಜುಕುಮಾರ ಯಳವಂತಗಿ ಇವರ ಮನೆಗೆ ಬಿಡಲು ನನ್ನ ಬೈಕ್ ಮೇಲೆ ಆಳಂದ ರೋಡ ದೇವಿನಗರ ಬಡಾವಣೆಗೆ ಹೋಗಿ ಗೆಳೆಯನನ್ನು ಮನೆಗೆ ಬಿಟ್ಟು ವಾಪಸ ಗೋವಾ ಹೋಟೆಲ ಮುಖಾಂತರ ಮನೆಗೆ ಹೊರಟ್ಟಿದೆ ರಾತ್ರಿ 11:30 ಗಂಟೆಗೆ ಟ್ಯಾಂಕ್ ಬಂಡ ರೋಡ ವಿಜ್ಞಾನ ಕೇಂದ್ರದ ಹತ್ತಿರ ಇಬ್ಬರು ಅಪರಿಚಿತರು ಪಲ್ಸರ್ ಗಾಡಿಯ ಮೇಲೆ ನನ್ನ ಹಿಂದೆ ಬಂದಿದ್ದು ಇನ್ನೋಬ್ಬ ಗಾರ್ಡನ ಓಳಗಡೆಯಿಂದ ಬಂದಿದ್ದು, ಬೈಕ್ ಮೇಲೆ ಇದ್ದವನು ನನ್ನ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡು ನನಗೆ ಏ ಮಗನೆ ಸಿದಾ ಹೋಗು ಅಂತಾ ಅಂದವನೆ ಎಲ್ಲಾ 3 ಜನ ಕೂಡಿ ನನಗೆ ಕೈಗಳಿಂದ ಹೊಟ್ಟೆ, ಎದೆ, ಮುಖದ ಮೇಲೆ ಹೊಡೆದು ಗುದ್ದುತ್ತಾ ಓಳಪೆಟ್ಟು ಮಾಡಿ ನೆಲಕ್ಕೆ ಹಾಕಿದ್ದು, ಹಣೆಯ ಬಲಭಾಗ ರಕ್ತಗಾಯ ಆಗಿದ್ದು ಬಲವಂತವಾಗಿ ನನ್ನಲ್ಲಿದ್ದ 1)ಬಂಗಾರದ ಉಂಗುರ ತೂಕ 8 ಗ್ರಾಂ ಅ.ಕಿ:15000/- , 2) ನಗದು ಹಣ 11000/- ರೂ (2000 ನೋಟು-4 , 500-ನೋಟು 3, 100 ನೋಟು-15) 3)ಸ್ಯಾಮಸಂಗ್ ಜೆ-2 ಮೊಬೈಲ್ ಅದರಲ್ಲಿ ಸಿಮ್ ನಂ: 9845629564 ಮತ್ತು 8660505968 ಇದ್ದದ್ದು ಅ.ಕಿ:8500/- 4) ಸಿಟಿಜನ್ ಕೈ ಗಡಿಯಾರ ಅ.ಕಿ-1800/-  ಈ ಪ್ರಕಾರ ನನ್ನಲ್ಲಿದ್ದ ಬೆಲೆಬಾಳುವ ವಸ್ತುಗಳು ಹೆದರಿಸಿ ನನ್ನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 23.12.2016 ರಂದು ಕಟ್ಟಿಸಂಗಾವಿ ಗ್ರಾಮದ ಭೀಮಾದನದಿಯಲ್ಲಿ ಮರಳು ಟ್ರ್ಯಾಕ್ಟರ್ಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ  ಜೇವರ್ಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಜೇವರಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಕಟ್ಟಿಸಂಗಾವವಿ ಕಡೆಗೆ ಹೊರಟು ಕಟ್ಟಿ ಸಂಗಾವಿ ಗ್ರಾಮದ ಸಮೀಪ ಬ್ರೀಡ್ಜ ಹತ್ತಿರ ರೋಡಿನ ಪಕ್ಕದಲ್ಲಿ ನಿಂತು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬರುವದನ್ನು ಕಾಯುತ್ತ ನಿಂತು ನೋಡಲಾಗಿ, ಕಟ್ಟಿಸಂಗಾವಿ ಗ್ರಾಮದ ಕಡೆಯಿಂದ  ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರನ್ನು ನೋಡಿ ಕೈ ಮಾಡಿ ನಿಲ್ಲಿಸಲು ಹೋದಾಗ  ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋದನು ನಾವು ಬೆನ್ನು ಹತ್ತಿ ಹಿಡಯಲು ಪ್ರಯತ್ನ ಮಾಡಿದರೂ ಸಿಕ್ಕಿರುವುದಿಲ್ಲಾ  ನಂತರ ಸ್ಥಳದಲ್ಲಿದ್ದ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಸ್ವರಾಜ ಕಂಪನಿ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಇಂಜೀನ ನಂ 433008/SWL19321, ಚೆಸ್ಸಿ ನಂ WYCL43906152077 ನೇದ್ದು ಅದರ ಟ್ಯಾಲಿ ನಂ ಕೆಎ-32-ಟಿಎ- 5828 ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಅ.ಕಿ. 1000/- ರೂ ಮತ್ತು ಟ್ರ್ಯಾಕ್ಟರ್ ಅ.ಕಿ. 3,00,000/- ರೂ ಆಗಬಹುದದು ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕ ಸರಕಾದಿಂದ ಅಥವಾ ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮಾಡಿ ಕಳ್ಳತನದಿಂದ ಕಟ್ಟಿ ಸಂಗಾವಿ ಭೀಮಾ ನದಿಯಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ್ ನ್ನು ಮರಳು ಸಮೇತ ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

22 December 2016

KALABURAGI DISTRICT REPORTED CRIME

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:  ದಿನಾಂಕ: 21/12/2016 ರಂದು ಶ್ರೀ ಮಹೇಶ ಶಾಖಾಧಿಕಾರಿ ಜೆ.ಎಸ್ ಕಂ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 19/12/2016 ರಂದು ಶಹಾಬಾದ ಏರಿಯಾದಲ್ಲಿ ಕೆ.ಇ.ಬಿ ಕಂಬ ಪರಿಶೀಲನೆ ಮಾಡುತ್ತಾ ಹೋದಾಗ ಶಹಾಬಾದ ವಾಡಿ ರಸ್ತೆಯ ಗುರುನಾಥ ಪೆಟ್ರೊಲ ಪಂಪ ಹತ್ತಿರ ರಸ್ತೆಯಲ್ಲಿ ಕೆ.ಇ.ಬಿ ಕಂಬಕ್ಕೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಕೆ.ಇ ಬಿ ಕಂಬಕ್ಕೆ ಡಿಕ್ಕಿ ಪಡಿಸಿದ್ದರಿಂದ ಕೆ.ಇ.ಬಿ ಯ ಕಂಬ ಮತ್ತು ವೈರ ಒಟ್ಟು ಅ.ಕಿ 40,000-00 ರೂ ಕಿಮ್ಮತಿನ ಮಾಲು ಜೆ.ಎಸ್ ಕಂ ಇಲಾಖೆಗೆ ನಷ್ಟವಾಗಿರುತ್ತದೆ ಸದರಿ ವಾಹನದ ಚಾಲಕನು ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ಸದರಿ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮ ಹತ್ಯೆ ಪ್ರಕರಣ:

ನರೋಣಾ ಪೊಲೀಸ್ ಠಾಣೆ: ಶ್ರೀಮತಿ.ಸುಗಲಾಬಾಯಿ ಗಂಡ ಹಣಮಂತರಾಯ ಹತ್ತರಕಿ ಸಾ: ವ್ಹಿ ಕೆ ಸಲಗರ ರವರು ಫಿಯಾದಿ ಸಲ್ಲಿಸಿದ್ದೇನೆಂಧರೆ ತನ್ನ ಪತಿ ಹಣಮಂತರಾಯ ಇವರಿಗೆ ಒಟ್ಟು 17 ಎಕರೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ಒಂದು ಲಕ್ಷ ರೂಪಾಯಿ ಕೆ.ಜಿ.ಬಿ ಬ್ಯಾಂಕಿನಿಂದ ಬೆಳೆಸಾಲ ಹಾಗೂ ಸಂಬಂಧಿಕರಲ್ಲಿ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಕೈಗಡ ತಂದು ವ್ಯವಸಾಯಕ್ಕಾಗಿ ಖರ್ಚು ಮಾಡಿದ್ದು ಹೋದ ವರ್ಷ ಮಳೆ ಬಾರದಿದ್ದರಿಂದ ಬೆಳೆ ವಿಫಲವಾಗಿದ್ದು ಈ ವರ್ಷ ಹೆಚ್ಚಿನ ಪ್ರಮಾಣದ ಮಳೆ ಬಂದು ಹೊಲದಲ್ಲಿ ನೀರು ನಿಂತು ತೋಗರಿ ಸಜ್ಜೆ ಹಾಗೂ ಉದ್ದಿನ ಬೆಳೆ ಹಾನಿಯಾಗಿದ್ದು ಸಾಲ ತೀರಿಸಲು ಕೃಷಿಯೇ ಆಧಾರವಾಗಿದ್ದರಿಂದ ಈ ಎಲ್ಲಾ ಸಾಲವನ್ನು ಹೇಗೆ ತೀರಿಸಬೇಕೆಂದು ನನ್ನ ಪತಿ ಹಣಮಂತರಾಯನು ದಿಕ್ಕು ತೋಚದೆ ಮನನೊಂದುಕೊಂಡು ಹೊಲದಲ್ಲಿ ಕ್ರಿಮಿನಾಷಕ ಔಷದಿ ಸೇವನೆಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಲ್ಲಿಸಿದ ದೂರು ಶಋಆಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

20 December 2016

Kalburgi District Reported Crime

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿಠಲ ತಂದೆ ಶರಣಪ್ಪಾ ಸಾಗರ ಸಾ; ಸುಂಠನೂರ ತಾ;ಆಳಂದ ಜಿ;ಕಲಬುರಗಿ ಹಾವ/ ಶರಣಸಿರಸಗಿ ಮಡ್ಡಿ ಅಂಬೇಡ್ಕರ ನಗರ ಕಲಬುರಗಿ  ಇವರು ದಿನಾಂಕ. 19-12-2016 ರಂದು ಅಫಜಲಪೂರ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ನನ್ನಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದಕಾರಣ ಕ್ರೋಜರವಾಹನವನ್ನು ಕಟ್ಟಿಕೊಂಡು ನಮ್ಮ ಸಮ್ಮಂದಿಕರು ಮತ್ತು ಬಳಗದವರು ಹಾಗೂ  ಹೀರಾಪೂರ ಮತ್ತು ಶರಣಸಿರಸಗಿವರಿಗೆ ಕರೆದುಕೊಂಡು ತೆಗೆಳ್ಳಿಗೆ ಹೋಗಿ ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಬರುವಾಗ ಕ್ರೋಜರದಲ್ಲಿ ಜಾಗೆ ಸಾಲದಕ್ಕೆ ನಮ್ಮ ಸಮ್ಮಂದಿಕರ ಹೊಂಡಾ ಶೈನ ಮೋಟಾರ ಸೈಕಲ್ ನಂ.ಕೆ.ಎ.32 ಇ.ಇ. 7227 ನೆದ್ದನ್ನು ತೆಗೆದುಕೊಂಡು ನಾನು ಮತ್ತು ನಮ್ಮ ಸಮ್ಮಂದಿಕನಾದ  ಯಲ್ಲಪ್ಪಾ ತಾಯಿ;ನಾಗಮ್ಮ ತಳಕೇರಿ ಸಾ;ಚಿಣಮಗೇರಿ ತಾ;ಅಫಜಲಪೂರ ಹಾವ; ಹೀರಾಪೂರ ಕಲಬುರಗಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ್ ಮೇಲೆ ಬರುತ್ತಿದ್ದು ಮೋಟಾರ ಸೈಕಲ ನಾನು ನಡೆಯಿಸುತ್ತಿದ್ದೆ ಯಲ್ಲಪ್ಪಾ ತಳಕೇರಿ ಇತನು ನನ್ನ ಹಿಂದೆ ಕುಳಿತಿದ್ದನು.  ರಾತ್ರಿ 8-30 ಗಂಟೆಯ ಸುಮಾರಿಗೆ ಅಫಜಲಪೂರ ರೋಡಿನ ಶರಣಸಿರಸಗಿ ಅಂಬೇಡ್ಕರ ಕಾಲೂನಿಯ ಜಂಪ ಹತ್ತಿರ ನಾನು ಮೋಟಾರ ಸೈಕಲನ್ನು ಎಡಗಡೆ ಟರ್ನ ಮಾಡಿಕೊಳ್ಳುವಾಗ ಅದೇವೇಳೆಗೆ ನಮ್ಮ ಹಿಂದಿನಿಂದ ಅಂದರೆ ಅಫಜಲಪೂರ ಕಡೆಯಿಂದ ಒಂದು ಲಾರಿಯ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಹೊಡೆದನು ಇದರಿಂದ ನಾನು ಮೋಟಾರ ಸೈಕಲ್ ಮೇಲಿಂದ ರೋಡಿನ ಎಡಭಾಗದಲ್ಲಿ ಬಿದ್ದೇನು ಮತ್ತು ಯಲಪ್ಪಾ ತಳಕೇರಿ ಇತನು ರೋಡಿನ ಮದ್ಯದಲ್ಲಿ ಬಿದ್ದಾಗ ಸದರಿ ಅಪಘಾತ ಪಡಿಸಿದ್ದ ಲಾರಿಯು ಆತನ ತಲೆಯ ಮೇಲಿಂದ ಹೋಯಿತು ಆಗ ನಾನು ಚೀರುವಷ್ಟರಲ್ಲಿ ಸದರಿ ಲಾರಿಯ ಚಾಲಕ ಸ್ವಲ್ಪ ನಿಲ್ಲಿಸಿದಂತೆ ಮಾಡಿ ತನ್ನ ವಾಹವನ್ನು ನಿಲ್ಲಿಸದೇ  ಹಾಗೆ ಓಡಿಸಿಕೊಂಡು ಹೋದನು . ರಾತ್ರಿ ಕತ್ತಲಿದ್ದ ಪ್ರಯುಕ್ತ ಲಾರಿಯ ನಂಬರ ಸರಿಯಾಗಿ ಕಂಡಿರುವದಿಲ್ಲಾ ಅದರ ಚಾಲಕನಿಗೆ  ಮತ್ತು ಲಾರಿಯನ್ನು ನೋಡಿದಲ್ಲಿ ಗುರ್ತಿಸುತ್ತೇನೆ.   ಈ ಘಟನೆಯಿಂದ ಯಲ್ಲಪ್ಪನ ತಲೆ ಒಡೆದಿದ್ದು ತಲೆಯಿಂದ ಮಾಂಸ ಖಂಡಗಳು ಹೋರಬಂದಿದ್ದು ಮತ್ತು ಬಲಗೈ ಮುಂಗೈ ಹತ್ತಿರ ರಕ್ತಗಾಯ ತರಚಿದಗಾಯಗಳಾಗಿ  ಸ್ಥಳದಲ್ಲಿ ಮೃತ ಪಟ್ಟಿದ್ದನು ಮತ್ತು   ಮತ್ತು ನನಗೆ  ಬಲಗೈ ಅಂಗೈಯಲ್ಲಿ , ಬಲಗಾಲುಮೋಳಕಾಲು ಪಾದದ ಹತ್ತಿರ ತರಚಿದ ರಕ್ತಗಾಯಗಳಾಗಿ ರುತ್ತವೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಮಾಡಿಕೊಂಡು ಹೋಗಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಳೇಪ್ಪ ತಂದೆ ಗುರುಶಾಂತಪ್ಪ ರಾಂಪೂರ ಸಾ|| ಅಫಜಲಪೂರ ರವರು ದಿನಾಂಕ: 31-10-2016 ರಂದು ಸಾಯಂಕಾಲ ನಮ್ಮ ಮನೆಗೆ ಈರಪ್ಪ ತಂದೆ ಗುರುಶಾಂತಪ್ಪ ರಾಂಪೂರೆ ಮತ್ತು ಅವನ ಹೆಂಡತಿ ಜಗದೇವಿ ಗಂಡ  ಈರಪ್ಪ ರಾಂಪೂರೆ ಇಬ್ಬರು ನಮ್ಮ ಮನೆಗೆ ಬಂದು ನಮ್ಮಿಬ್ಬರ ಜೋತೆ ಜಗಳವಾಡಿ ನಿನ್ನ ಹೆಂಡತಿಯನ್ನು ಯಾಕೆ ಮನೆಯೊಳಗೆ ತಗೊಂಡಿದಿಯಾ ನನ್ನಂತವನಾದರೆ ಜೀವ ಹೊಡೆಯುತಿದ್ದೆ ಎಂದು ಜಗಳವಾಡಿ ಹೋಗುವಾಗ ನಿಮ್ಮಿಬ್ಬರ ಜೀವ ಹೊಡೆಸುತ್ತೇನೆ ಎಂದು ಹೋಗಿದ್ದಾನೆ. ಆ ಸಮಯದಲ್ಲಿ ನಮ್ಮ ತಂದೆಯಾದ ಗುರುಶಾಂತಪ್ಪ ರವರು ಮನೆಯಲ್ಲಿಯೇ ಇದ್ದರು ದಿನಾಂಕ 01-11-2016  ರಂದು ರಾತ್ರಿ ನಾನು ನನ್ನ ಹೆಂಡತಿ ಭುವನೇಶ್ವರಿ ಹಾಗು ನಮ್ಮ ಮಕ್ಕಳಾದ ಆಕಾಶ, ಸುವಾಸನಿ, ಅಭಿಷೇಕ ಎಲ್ಲರು ಮನೆಯಲ್ಲಿ ಮಲಗಿಕೊಂಡಾಗ 4 ಜನ ಅಪರಿಚಿತರು ಕಪ್ಪು ಜಾಕೇಟ ಧರಿಸಿದರು ಬಿಳಿ ಸಿಪ್ಟ ಕಾರು ಒಂದು ಶೈನ ಮೋಟಾರ ಬಯ್ಕ ಎಮ್ ಹೆಚ್ 13 ಎವ್ಹಿ 4868 4 ಜನ ಮನೆಯ ಬಾಗಿಲು ತಟ್ಟಿ ನಾವು ಪೊಲೀಸರಿದ್ದೆವೆ ಎಂದರು ನಾನು ಬಾಗಿಲು ತೆರೆದೆ ನಿನನ್ನು ಸಾಹೇಬರು ಬಾ ಎಂದು ಹೇಳಿದ್ದಾರೆ ಎಂದು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ ಕಾರಿನಲ್ಲಿ 3 ಜನ ಬೈಕಲ್ಲಿ ಒಬ್ಬ ಬಂದಿದ್ದು ಅಲಿಂದ ಸಿಂದಗಿ ತಾಲೂಕು ರಾಂಪುರ ಗ್ರಾಮದ ಹತ್ತಿರ ಸೈಡಲ್ಲಿ ಕಾರನ್ನು ನಿಲ್ಲಿಸಿ ಕಣ್ಣಿಗೆ ಬಟ್ಟೆ ಕಟ್ಟಿದರು ಸ್ವಲ್ಪ ದುರ ಸೈಡಲ್ಲಿ ತಗೊಂಡೊಗಿ ತೊಗರಿ ಹೊಲದಲ್ಲಿ ನನ್ನನ್ನು ಇಡಿ ರಾತ್ರಿ ಕೈ ಕಾಲು ಕಟ್ಟಿ ಇಟ್ಟಿದ್ದಾರೆ ನನ್ನ ಕೈಯಲಿದ್ದ ಒಂದು ತೊಲೆ ಬಂಗಾರದ ಉಂಗುರ ಅಲ್ಲೆ ಎಲ್ಲೋ ಬಿದ್ದಿರುತ್ತದೆ. ದಿನಾಂಕ 02-11-2016 ರಂದು ಬೆಳಿಗ್ಗೆ ನನ್ನನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ತುಂಬಾ ತ್ರಾಸ ಮಾಡಿರುತ್ತಾರೆ ನಿನ್ನ ತಮ್ಮನಾದ ಈರಪ್ಪ ತಂದೆ ಗುರುಶಾಂತಪ್ಪ ರಾಂಪುರ ಐವತ್ತು ಸಾವಿರ ರೂಪಾಯಿಯನ್ನು ಅಡವನ್ಸವಾಗಿ ಕೊಟ್ಟಿದ್ದಾನೆ ಇನ್ನೂ ಉಳಿದ ಹಣ ಎರಡುವರೆ ಲಕ್ಷ ಮದ್ಯಾಹ್ನ ನಂತರ ಕೊಡುತ್ತೇನೆ ಎಂದು ಹೇಳಿದರು ಆ ನಂತರ ರಾತ್ರಿ 9 ಗಂಟೆಗೆ ಟಾ ಟಾ ಸುಮೋದಲ್ಲಿ ಇಬ್ಬರು ನನ್ನನ್ನು ಕರೆದುಕೊಂಡು ಅಫಜಲಪೂರ ತಾಲೂಕಿನ ಗೌರ ಗ್ರಾಮದ ಹತ್ತಿರ ಜೋಳದ ಹೊಲದಲ್ಲಿ ವಿಸವನ್ನು  ಕುಡಿಸಿ ಕುತ್ತಿಗೆಗೆ ಹಗ್ಗವನ್ನು ಹಾಕಿ ಜಗ್ಗಿ ಬಿಟ್ಟು ಹೋಗಿದ್ದಾರೆ ಸ್ವಲ್ಪ ಸಮಯದ ನಂತರ ನನಗೆ ಎಚ್ಚರವಾಗಿದೆ ನಾನು ಅಫಜಲಪೂರಕ್ಕೆ ಬಂದಿದ್ದೆನೆ ರಾತ್ರಿ 12 ಗಂಟೆಗೆ ಉಪೇಂದ್ರ ದವಾಖಾನೆಯಲ್ಲಿ ಚಿಕಿತ್ಸೆ ಪಡೆದಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.