POLICE BHAVAN KALABURAGI

POLICE BHAVAN KALABURAGI

22 November 2016

Kalaburagi District Press Note

ಪತ್ರಿಕಾ ಪ್ರಕರಟಣೆ
                 ದಿನಾಂಕ:21.11.2016 ರಂದು ಫಿರ್ಯಾದಿ ಶ್ರೀ ರಾಜಶೇಖರ ತಂದೆ ದೇವಿಂದ್ರಪ್ಪ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 20.11.2016 ರಂದು ಎಂದಿನಂತೆ ಶನಿವಾರ ಸಾಯಂಕಾಲ 06:30 ಗಂಟೆಗೆ ಸಂಗೀತ ಪಾಠಕ್ಕಾಗಿ ನನ್ನ 3 ಜನ ಮಕ್ಕಳು ಮತ್ತು ಓಣಿಯಲ್ಲಿರುವ ಮಕ್ಕಳು ಕೂಡಿಕೊಂಡು ಸಾಯಿ ಮಂದಿರಕ್ಕೆ ಹೋಗಿದ್ದು ಇರುತ್ತದೆ. ಸಾಯಂಕಾಲ 07:30 ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯ ಹುಡುಗನಾದ ಶಶಿಕಾಂತ ಇವರ ತಾಯಿಯವರಾದ ಜಗದೇವಿ ಇವರು ನಮ್ಮ ಮನೆಗೆ ಫೋನಮಾಡಿ ತಿಳಿಸಿದ್ದೆನೆಂದರೆ,  ಸಾಯಂಕಾಲ 07:00 ಗಂಟೆಗೆ ನಮ್ಮ ಮಗ ಶಶಿಕಾಂತ ಮತ್ತು ನಿಮ್ಮ ಮಗ ದೇವಕುಮಾರ ಇಬ್ಬರು ಕೂಡಿ ಸಂಗೀತ ಪಾಠಕ್ಕೆ ಹೋಗುತ್ತಿರುವಾಗ ಸಾಯಿ ಮಂದಿರ ಹತ್ತಿರ ಹೋಗುತ್ತಿದ್ದಂತೆ ಒಂದು ಆಟೋ ಬಂದಿದ್ದು, ಅದರಲ್ಲಿದ್ದ ಆಟೋ ಚಾಲಕ ಮತ್ತು ಆಟೋದಲ್ಲಿ ಕುಳಿತಿದ್ದ 3 ಜನರು ನಿಮ್ಮ ಹುಡುಗನಿಗೆ ಧನ್ವಂತರಿ ಆಸ್ಪತ್ರೆ ತೋರಿಸುವಂತೆ ಹೇಳಿ ಅವನನ್ನು ಆಟೋದಲ್ಲಿ ಕೂಡಿಸಿಕೊಂಡು ಹೋಗಿರುತ್ತಾರೆ ಇಲ್ಲಿಯ ವರೆಗೆ ದೇವಕುಮಾರ ಈತನು ಮರಳಿ ಬಂದಿರುವುದಿಲ್ಲ ಅಂತ ನನ್ನ ಮಗ ಶಶಿಕಾಂತ ತಿಳಿಸಿರುತ್ತಾನೆ ಅಂತ ಅವರು ನಮ್ಮ ಮನೆಗೆ ಫೋನಮಾಡಿ ವಿಷಯನ್ನು ತಿಳಿಸಿರುತ್ತಾರೆ.  ವಿಷಯನ್ನು ತಿಳಿದು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಗಾಭರಿಯಾಗಿ ಸಾಯಿ ಮಂದಿರ ಹತ್ತಿರ ಧನ್ವಂತರಿ ಆಸ್ಪತ್ರೆ ಹತ್ತಿರ ಹೋಗಿ ನೋಡಲು ನಮ್ಮ ಮಗನು ಪತ್ತೆಯಾಗಿರುವುದಿಲ್ಲ. ಯಾರೋ ಅಪರಿಚಿತ 4 ಜನರು ನಿನ್ನೆ 07:00 ಪಿ.ಎಂ.ಕ್ಕೆ ನಮ್ಮ ಮಗನನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.  ಮಗನನ್ನು ಅಪಹರಣ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿ  ಮಗನನ್ನು ಪತ್ತೆಮಾಡಿಕೊಡಲು  ನೀಡಿದ ಮೇಲಿಂದ   ಅಶೋಕ ನಗರ ಪೊಲೀಸ  ಠಾಣೆ ಗುನ್ನೆ ನಂ. 254/2016 ಕಲಂ 363 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ:21.11.2016 ರಂದು ಅಪಹರಣಕಾರರು ಫಿರ್ಯಾದಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಮಗನನ್ನು ಬಿಡುಗಡೆ ಮಾಡುವ ಸಂಬಂಧ ರೂ. 20,00,000/- ಲಕ್ಷಗಳನ್ನು ನೀಡುವಂತೆ ಬೇಡಿಕೆ ಇಟ್ಟಿರುವದರಿಂದ  ಈ ಪ್ರಕರಣವನ್ನು  ಮಾನ್ಯ ಎಸ್.ಪಿ ಸಾಹೇಬರು ಗಂಭಿರವಾಗಿ ಪರಿಗಣಿಸಿ ಅಪಹಣಕಾರಿಂದ ಅಪಹರಣಕ್ಕೆ ಒಳಗಾದ ಮಗುವನ್ನು ರಕ್ಷಿಸುವ ಸಲುವಾಗಿ, ಮಾನ್ಯ ಆರಕ್ಷಕ ಅಧೀಕ್ಷಕು ಕಲಬುರಗಿ ಜಿಲ್ಲೆರರವರ ಮಾರ್ಗದರ್ಶನದಲ್ಲಿ, ಮಾನ್ಯ ಡಿ.ಎಸ್.ಪಿ. ಉಪ ವಿಭಾಗ ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ. ಡಿ.ಸಿ.ಆರ್.ಬಿ. ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಮತ್ತು ಪಿ.ಐ. ಅಶೋಕ ನಗರ, ಪಿ.ಐ.  ಚೌಕ, ಸ್ಟೇಷನ ಬಜಾರ, ಪಿ.ಐ. ಬ್ರಹ್ಮಪೂರ, ಪಿ.ಐ ರೋಜಾ, ಪಿ.ಐ. ಟ್ರಾಫೀಕ , ಪಿ..ಎಸ್.ಐ ಮಹಿಳಾ ಪೊಲೀಸ ಠಾಣೆರವರು ಮತ್ತು ಸಿಬ್ಬಂದಿ ಜನರನ್ನು ಕೂಡಿ 8 ತಂಡವನ್ನು ರಚಿಸಿದ್ದು, ತನಿಖಾ ತಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ರಾಣಸಪೀರ ದರ್ಗಾ, ಆಶ್ರಯ ಕಾಲನಿ, ಡಬರಾಬಾದ. ಸಿಂದಗಿ, ಮಿಸಬಾ ನಗರ, ಇತ್ಯಾದಿ ಕಡೆ ಸಂಚರಿಸಿ ಸಾರ್ವಜನಿಕರಿಂದ ಹಾಗೂ ಪೊಲೀಸ ಬಾತ್ಮಿದಾರರಿಂದ ಅಪರಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು,  ಸಾರ್ವಜನಿಕರು ಮತ್ತು ಪೊಲೀಸ ಬಾತ್ಮಿದಾರು ಆರೋಪಿಗಳ ಬಗ್ಗೆ  ನೀಡಿರುವ ಮಾಹಿತಿಯನ್ನು ಆಧರಿಸಿ ಮತ್ತು ಆರೋಪಿತರು ಉಪಯೋಗಿಸಿದ ಮೊಬೈಲ್ ನಂಬರಗಳ ಟಾವರ ಲೊಕೇಶನ ಆಧರಿಸಿ  ದಿನಾಂಕ:21.11.2016 ರಂದು ರಾತ್ರಿ 11:00 ಗಂಟೆಗ ಕಪನೂರ ಇಂಡಸ್ಟ್ರೀಯಲ್ ಏರಿಯಾದ ಕಡೆಗೆ  ಓಡಿ ಹೋಗುತ್ತಿದ್ದಾಗ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆನ್ನಟ್ಟಿ ಅಪಹರಣಕಾರರಾದ 1)  ಶ್ರೀಧರ  ತಂದೆ ಶಿವಶರಣಪ್ಪ ಸಂಗೋಳಗಿ ಸಾಃ ಪಿ.& ಟಿ ಕಾಲನಿ ಕಲಬುರಗಿ 2) ವಿನೋದ ತಂದೆ  ಅಶೋಕಕೊಟಗಿಸಾಃ ಇಂದಿರಾನಗರ  ಕಲಬುರಗಿ 3)  ವಿಜಯ ತಂದೆ ದಶರಥ ಕೊಟಗಾ ಸಾಃ ಆಶ್ರಯ ಕಾಲನಿ ಕಲಬುರಗಿ 4) ತ್ರೀಮೂರ್ತಿ @ ಮೂರ್ತಿ ತಂದೆ  ಅಪ್ಪಾಸಾಬ  ಅವುಟಿ ಸಾಃ ತ ಸಂಪಿಗೆ ನಗರ ಪಿ& ಟಿ ಕ್ವಾಟರ್ಸ ಕಲಬುರಗಿ ಇವರನ್ನು  ಹೀಡಿದು ಅಪಹರಣಕ್ಕೆ ಒಳಗಾದ ಬಾಲಕ  ದೇವಕುಮಾರ ವಯಃ 12 ವರ್ಷ ಇತನ್ನನು ರಕ್ಷಿಸಿದ್ದು ಇರುತ್ತದೆ. ಈ ಕಾರ್ಯಾಚರಣೆಯಲ್ಲಿ ಮಗುವಿಗೆ ಯಾವುದೇ ರೀತಿಯ ತೊಂದರೆ ಆಗಿರುವುದಿಲ್ಲ. ಮಗುವನ್ನು ಸುರಕ್ಷಿತವಾಗಿ ತಂದೆ-ತಾಯಿಯವರ ಮಡಲಿಗೆ ಒಪ್ಪಿಸಿದ್ದು ಇರುತ್ತದೆ. 
           ಈ ಪ್ರಕರಣವು ಸುಖ್ಯಾಂತ ಕಾಣುವಲ್ಲಿ ಸಾರ್ವಜನಿಕರು, ಪೊಲೀಸ ಬಾತ್ಮಿದಾರರು ಮತ್ತು ಮಾದ್ಯಮದವರುಯ ಸಹಕರಿಸಿದಕ್ಕೆ ಅವರನ್ನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಶ್ಲಾಘಿಸಿ  ಧನ್ಯವಾದಗಳನ್ನು  ತಿಳಿಸಿರುತ್ತಾರೆ ಮತ್ತು ತನಿಖಾ ತಂಡದ  ಅಧಿಕಾರಿ ಸಿಬ್ಬಂದಿಯವರಿಗೆ  ಪ್ರಸಂಶಿಸಿರುತ್ತಾರೆ.
            ಮಕ್ಕಳ ಹೆತ್ತವರು ಮತ್ತು ಪಾಲಕರು ಗಾಬರಿಯಾಗದೆ ಎಚ್ಚೆತಕೊಂಡು ಮಕ್ಕಳನ್ನು ಶಾಲೆಗೆ ,  ಟ್ಯೂಷನಗೆ, ಸಂಗಿತ ಶಾಲೆಗೆ ಕಳುಹಿಸುವ ಸಂಧರ್ಭದಲ್ಲಿ ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಅಪಹರಣ ಮಾಡುವವರು ಕಂಡು ಬಂದರೆ ಕೂಡಲೆ ಪೊಲೀಸ ರಿಗೆ  ತಿಳಿಸಬೇಕು ಎಂದು  ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ
ಅಪಘತಾ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಜಂಬಣ್ಣ ತಂದೆ ಶಂಕರೆಪ್ಪ ಅವಂಟಿ ಸಾ: ಅಸ್ಕಿ ತಾ: ಸಿಂದಗಿ ಜಿಲ್ಲಾ ವಿಜಯಪೂರ ರವರು ದಿನಾಂಕ: 21.11.2016 ರಂದು ಮುಂಜಾನೆ ನಮ್ಮ ಸಂಸ್ಥೆಯ ಮಾನೆಂಜರ ರವರು ನನಗೆ ಚಾಲಕ ಅಂತ ಮತ್ತು ಪ್ರಭು ತಂದೆ ದರ್ಮು ಕೋಲಕರ್ ಇವರಿಗೆ ಕಂಡಕ್ಟರ ಅಂತ ನೇಮಿಸಿದ ಪ್ರಕಾರ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-28-ಎಫ್-2080 ನೇದ್ದನ್ನು ತಗೆದುಕೊಂಡು ವಿಜಯಪೂರದಿಂದ ಪ್ರಯಾಣಿಕರನ್ನು ಕೂಡಿಸಿಕೊಂಡು ಜೇವರಗಿ ಮಾರ್ಗವಾಗಿ ಕಲಬುರಗಿಗೆ ಬರುತ್ತಿದ್ದೇವು. ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರ ವಲಯದಲ್ಲಿರುವ ಬಸ್ ಡಿಪೋ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅವನ ಮುಂದೆ ಬರುತ್ತಿದ್ದ ಡಿಸೆಲ ಟ್ಯಾಂಕರ ಲಾರಿಗೆ ಓವರಟೇಕ ಮಾಡಿ ಆ ಲಾರಿಯ ಮಗ್ಗಲಿಗೆ ಡಿಕ್ಕಿ ಪಡಿಸಿ ನಂತರ ನಮ್ಮ ಬಸ್ಸಿಗೆ ಎದುರಾಗಿ ಡಿಕ್ಕಿ ಪಡಿಸಿ ಬಸ್ ಜಖಂ ಗೊಳಿಸಿದನು. ನಾವು ಕೆಳಗೆ ಇಳಿದು ನೋಡಲು ನಮ್ಮ ಬಸ್ಸಿನ ಮುಂಭಾಗದ ಸೈಡಿನಲ್ಲಿ ಜಖಂಗೊಂಡಿದ್ದು ನನಗೆ ಬಲಗಾಲ ಹತ್ತಿರ ಒಳಪೆಟ್ಟು ಆಗಿರುತ್ತದೆ. ನಮ್ಮ ಕಂಡಕ್ಟರನಿಗೆ ಹಾಗೂ ಪ್ರಯಾಣಿಕರಿಗೆ ಯಾವುದೆ ಗಾಯ ಆಗಿರಲಿಲ್ಲಾ ಟ್ಯಾಂಕರ ಲಾರಿ ಚಾಲಕನಿಗೆ ಮತ್ತು ಕ್ಲೀನರನಿಗೆ ಯಾವುದೇ ಗಾಯ ಆಗಿರಲಿಲ್ಲಾ. ಅವರ ಹೆಸರು ಕೇಳಲು ಚಾಲಕನ ಹೆಸರು ಚಂದ್ರಕಾಂತ ಅಂತ ಕ್ಲೀನರನ ಹೆಸರು ಚಿದಾನಂದ ಅಂತ ಹೇಳಿದರು. ಟ್ಯಾಂಕರ ಲಾರಿ ನಂ ಕೆಎ-32-ಸಿ-4286 ಇತ್ತು. ನಮ್ಮ ಬಸ್ಸಿಗೆ ಮತ್ತು ಟ್ಯಾಂಕರ ಲಾರಿಗೆ ಡಿಕ್ಕಿ ಪಡಿಸಿದ ಲಾರಿ ನಂಬರ ನೋಡಲು ಅದು ಕೆಎ-32-ಬಿ-9332 ಇತ್ತು ಅದರ ಚಾಲಕನಿಗೆ ಹೆಸರು ಕೇಳುಲು ಚಂದ್ರಶೇಖರಯ್ಯಾ ತಂದೆ ಭೀಮಯ್ಯಾ ಸಾ: ಶಹಾಬಾದ ಅಂತ ಹೇಳಿದನು ಅವನು ಕುಡಿದ ಅಮಲಿನಲ್ಲಿದ್ದನು. ಸದರಿ ಚಾಲಕನಿಗೂ ಕೂಡಾ ಠಾಣೆಗೆ ಕರೆದುಕೊಂಡು ಬಂದಿರುತ್ತೇವೆ. ಕಾರಣ ಮೇಲೆ ನಮೂದಿಸಿದ ಲಾರಿ ನಂ ಕೆಎ-32-ಬಿ-9332 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಬಸವರಾಜ ತಂದೆ ಮೈಲಾರಿ ನಾಟೀಕರ ವ: 29 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಮಿಣಜಗಿ  ರವರು  ದಿನಾಂಕ 19/11/16 ರಂದು ಮಧ್ಯಾಹ್ನ ತನ್ನ ಮೋ. ಸೈಕಲ್ ನಂ. ಕೆಎ-32 ಇಡಿ-3321 ನೇದ್ದರ ಹಿಂದೆ ಶ್ರೀಕಾಂತನಿಗೆ ಕೂಡಿಸಿಕೊಂಡು ಕಲಬುರಗಿ ಕಡೆಗೆ ಹೋಗುವಾಗ ನಂದಿಕೂರ  ತಾಂಡಾ ದಾಟಿದಾಗ ಹಿಂದಿನಿಂದ ಕ್ರೂಜರ ಜೀಪ ನಂ. ಕೆಎ-40 ಎಮ್ 0605 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ಓಡಿಸುತ್ತ ಬಂದು ಸದರಿ ಮೋ. ಸೈ. ಹಿಂದುಗಡೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸದರಿಯವರಿಗೆ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

21 November 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ರೇವೂರ ಠಾಣೆ : ಶ್ರೀಮತಿ ಹೀರಾಬಾಯಿ ಗಂಡ ಜಗದೇವಪ್ಪ ಬಿರಾದಾರ ಸಾ|| ಅತನೂರ ತಾ|| ಅಫಜಲಪೂರ ಇವರ ಗಂಡನಾದ ಜಗದೇವಪ್ಪ ಬಿರಾದಾರ ಈತನು ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದು ನನಗೆ 1) ರೇಷ್ಮಾ 2) ಭಾಗ್ಯಶ್ರೀ 3) ಸಾವಿತ್ರಿ 4) ಸಂಗೀತಾ 5) ಗೌಡಪ್ಪಗೌಡ ಅಂತಾ ಹೀಗೆ ಒಟ್ಟು 05 ಜನರು ಮಕ್ಕಳಿದ್ದು ನನ್ನ ಎರಡನೆಯ ಮಗಳಾದ ಭಾಗ್ಯಶ್ರೀ ಇವಳಿಗೆ ದಿನಾಂಕ 17-02-2016 ರಂದು ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕೂಡಲಗಿ ಗ್ರಾಮದ ಪ್ರಭುಲಿಂಗ ಸಾಹು ಕೊ‍ಣ್ಣೂರ ಇವರ ಮಗನಾದ ಶಶಿಕುಮಾರ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಶಶಿಕುಮಾರನು ಬೆಂಗಳೂರಿನ ಕೋರಮಂಗಲ ಕೆ.ಎಸ್.ಆರ್.ಪಿ ಯಲ್ಲಿ ಪೊಲೀಸ್ ಪೇದೆ ಅಂತಾ ಕೆಲಸ ಮಾಡುತ್ತಾನೆ. ನನ್ನ ಮಗಳ ಮದುವೆಗಿಂತ ಮುಂಚೆ ಮಾತುಕತೆ ವರನ ಮನೆಯಲ್ಲಿ ನಡೆದಿದ್ದು ನಿಶ್ಚೀತಾರ್ತ ಕಾರ್ಯಕ್ರಮವು ಮದುವೆಗಿಂತ 4-5 ತಿಂಗಳ ಮೊದಲು ಅತನೂರ ಗ್ರಾಮದಲ್ಲಿಯೆ ಆಗಿರುತ್ತದೆ. ಆ ಸಮಯದಲ್ಲಿ ವರನಿಗೆ ನಾವು ಹಾಕುವ ಬಂಗಾರ, ಬಟ್ಟೆ ಮತ್ತು ಗೃಹ ಬಳಕೆಯ ವಸ್ತುಗಳಿಗೆ ವರ ಮತ್ತು ವರನ ಮನೆಯವರು ಒಪ್ಪಿಕೊಂಡಿರುತ್ತಾರೆ. ನಮ್ಮ ಮಗಳ ಮೈ ಮೇಲೆ ವರನ ಮನೆಯವರು ಹಾಕುವ ಆಬರಣಗಳಿಗೆ ನಾವು ನಮ್ಮ ಒಪ್ಪಿಗೆ ನೀಡಿರುತ್ತೇವೆ. ದಿನಾಂಕ 17-02-2016 ರಂದು ಸುರಪೂರ ತಾಲೂಕಿನ ಕೂಡಲಗಿ ಗ್ರಾಮದ ಶ್ರೀ ಸದ್ಗುರು ಶಾಂತಾನಂದ ಸರಸ್ವತಿಸ್ವಾಮಿ ಬಾಬಾ ಮಾಹಾರಾಜರ ಶ್ರೀ ಮಠದಲ್ಲಿ ನಮ್ಮ ಹಿಂದೂ ಸಂಪ್ರದಾಯದಂತೆ ಮದುವೆ ಆಗಿರುತ್ತದೆ. ಮದುವೆಯಾದ ಒಂದು ತಿಂಗಳ ವರೆಗೆ ನನ್ನ ಮಗಳ ಗಂಡನಾದ 1) ಶಶಿಕಾಂತ ತಂದೆ ಪ್ರಭುಲಿಂಗ ಸಾಹು ಕೊಣ್ಣೂರ, ಅತ್ತೆಯಾದ 2) ವಿಜಯಲಕ್ಷ್ಮೀ ಗಂಡ ಪ್ರಭುಲಿಂಗ ಸಾಹು ಕೊಣ್ಣೂರ, ಮಾವನಾದ 3) ಪ್ರಭುಲಿಂಗ ಸಾಹು ಕೊಣ್ಣೂರ, ನಾದನಿಯಾದ 4) ಶೃತಿ ಗಂಡ ಶಂಕರಗೌಡ ಹಾಗೂ ನಾದನಿಯ ಗಂಡನಾದ 5) ಶಂಕರಗೌಡ ಇವರೆಲ್ಲರೂ ನನ್ನ ಮಗಳಿಗೆ, ಅವಳ ಗಂಡನಾದ ಶಶಿಕಾಂತನ ಪಿ.ಎಸ್.ಐ ಮತ್ತು ಪಿ,ಡಿ,ಒ ನೌಕರಿ ಸಲುವಾಗಿ ತವರು ಮನೆಯಿಂದ 50,00,000/- ರೂ (ಐವತ್ತು ಲಕ್ಷ ರೂಪಾಯಿ) ಹಣ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ. ಈ ವಿಷಯ ನಮ್ಮ ಮಗಳು ನನಗೆ ತಿಳಿಸಿದ್ದರಿಂದ ಈಗ ಒಂದು ತಿಂಗಳ ಹಿಂದೆ ನಾನು ಸಿದ್ದಾರಾಮ ಹೇರೂರ ಮತ್ತು ಸಿದ್ದಮ್ಮ ಚನ್ನೂರ ಇವರ ಸಮ್ಮುಖದಲ್ಲಿ ನನ್ನ ಮಗಳ ಗಂಡನಿಗೆ ಹತ್ತು ಲಕ್ಷ ರೂಪಾಯಿ ಹಣ ಕೊಟ್ಟಿರುತ್ತೇನೆ. ಆದರೂ ನನ್ನ ಮಗಳ ಗಂಡ ಹಾಗೂ ಗಂಡನ ಮನೆಯವರು ಇನ್ನು 40 ಲಕ್ಷ ರೂಪಾಯಿ ಹಣ ತರುವಂತೆ ಕಿರುಕುಳ ಕೊಡುವುದು ನಿಲ್ಲಿಸದ ಮತ್ತೆ ನನ್ನ ಮಗಳನ್ನು ಕಳುಹಿಸಿದ್ದರು ಆಗ ನಾನು ಮತ್ತು ಸಿದ್ದಾರಾಮ ಹೇರೂರ, ವಿಠಲ ಜಾಮಗೊಂಡ ಹಾಗು ನನ್ನ ಅಕ್ಕ ಚನ್ನಮ್ಮಾ ಅತನೂರ ರವರೆಲ್ಲರೂ ನನ್ನ ಮಗಳ ಗಂಡನಾದ ಶಶಿಕಾಂತನಿಗೆ ಕರೆಯಿಸಿ ನನ್ನ ಮಗಳಿಗೆ ಕಿರುಕುಳ ಕೊಡದೆ ಸರಿಯಾಗಿ ಇಟ್ಟಿಕೊಳ್ಳುವಂತೆ ತಿಳುವಳಿಕೆ ಹೆಳಿ ಕಳುಹಿಸಿಕೊಟ್ಟಿರುತ್ತೆವೆ. ಸುಮಾರು 15 ದಿವಸಗಳ ಹಿಂದೆ ನನ್ನ ಮಗಳ ಗಂಡ, ಅತ್ತೆ, ಮಾವ, ನಾದಿನಿ, ಮತ್ತು ನಾದಿನಿ ಗಂಡ ಇವರೆಲ್ಲರೂ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 40 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಂದರೆ ನಿನಗೆ ನಮ್ಮ ಮನೆಯಲ್ಲಿ ಜೀವನ ಮಾಡಲು ಅವಕಾಶ ಇರುತ್ತದೆ. ಇಲ್ಲದಿದ್ದರೆ ನಿನ್ನ ಕೊಲೆ ಮಾಡಿ ಮತ್ತೊಂದು ಮದುವೆ ಮಾಡುತ್ತೆವೆ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಾರೆ ಅಂತಾ ನನ್ನ ಮಗಳು ನನಗೆ ಫೋನ ಮೂಲಕ ತಿಳಿಸಿದ್ದರಿಂದ ದಿನಾಂಕ;06/11/2016 ರಂದು ನನ್ನ ಹಿರಿಯ ಮಗಳ ಗಂಡನಾದ ಗುರುರಾಜ ದ್ಯಾಮಾ ಈತನಿಗೆ ನನ್ನ ಮಗಳನ್ನು ಕರೆದುಕೊಂಡು ಬರಲು ಕೂಡಲಗಿಗೆ ಕಳುಹಿಸಿದ್ದು ಅವನು ದಿನಾಂಕ;07/11/2016 ರಂದು ನನ್ನ ಮಗಳು ಭಾಗ್ಯಶ್ರಿ ಇವಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ದಿನಾಂಕ;12/11/2016 ರಂದು ಬೆಳಗ್ಗೆ ನನ್ನ ಮಗಳ ಗಂಡ ಶಶಿಕುಮಾರ ನಮ್ಮ ಮನೆಗೆ ಬಂದು ದಿನಾಂಕ;16/11/2016 ರವರೆಗೆ ನಮ್ಮ ಮನೆಯಲ್ಲಿ ಇದ್ದು ನನ್ನ ಮಗಳಿಗೆ ರಂಡಿ ಎಷ್ಟು ದಿವಸಗಳ ವರೆಗೆ ನೀನು ನಿನ್ನ ತವರು ಮನೆಯಲ್ಲಿಯೆ ಇರುವಿ ನನಗೆ ಪಿ,ಎಸ್,ಐ ಪಿ,ಡಿ.ಒ ನೌಕರಿ ಸಲುವಾಗಿ 40 ಲಕ್ಷ ರೂಪಾಯಿ ಹಣ ಬೇಕು. ನಿನ್ನ ತಾಯಿಗೆ ಹೇಳಿ ಹಣ ತೆಗೆದುಕೊಂಡು ಈಗಲೆ ನನ್ನೊಂದಿಗೆ ನಡೆ ಅಂತಾ ದಿನಾಂಕ;16/11/2016 ರಂದು ಕೈಯಿಂದ ಹೊಡೆದು ಚಿನ್ನದ ಮಂಗಳ ಸೂತ್ರ ಹರಿದುಕೊಂಡು ಹೊಗಿರುತ್ತಾನೆ. ಇಲ್ಲಿಂದ ಹೊದಾಗಿನಿಂದಲು ದಿನಾಲು ನನ್ನ ಮಗಳಿಗೆ ಫೊನ ಮಾಡಿ ಫೋನಿನಲ್ಲಿ ಹಣದ ಸಲುವಾಗಿ ಅಶ್ಲೀಲ ಶಬ್ದಗಳಿಂದ ಬೈಯ್ದು ಮಾನಶೀಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ತನ್ನ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ;18/11/2016 ರಂದು ಸಾಯಂಕಾಲ 05.00 ಗಂಟೆ ಸುಮಾರಿಗೆ ನನ್ನ ಮಗಳು ನಮ್ಮ ಮನೆಯಲ್ಲಿಯೆ ತಾನು ಧರಿಸುವ ಓಡ್ನಿ ಬಟ್ಟೆಯಿಂದ ಮನೇಯ ಮೇಲ್ಚಾವಣಿಯ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ಬಾಗಿರತಿ ಗಂಡ ರಾಜಶೇಖರ ಉಡಗೇನವರ ರವರು   ದಿನಾಂಕ;19/11/2016 ರಂದು ನಾನು ಮತ್ತು ನನ್ನ ಮಕ್ಕಳಾದ ಸವಿತಾ ಪ್ರಿಯಾಂಕಾ ಹಾಗು ಶಿವಕುಮಾರ ಮನೆಯಲ್ಲಿದ್ದೇವೂ ನಾನು ಮುಂಜಾನೆ 07.00 ಗಂಟೆ ಸುಮಾರಿಗೆ ಸ್ನಾನ ಮಾಡಲು ಒತ್ತಲದಲ್ಲಿ ನೀರು ಕಾಯಿಸುತ್ತಿರುವಾಗ ನನ್ನ ಮೈದುನನಾದ ಉಲ್ಲಾಸ ಈತನ ಹೆಂಡತಿಯಾದ ಜಗದೇವಿ ಇವಳು ನಾನು ಕಾಯಿಸುತಿದ್ದ ಒತ್ತಲು ಸಮೀಪ ನೀರು ಚೆಲ್ಲಿದರು ಆಗ ನಾನು ನೀನು ನೀರು ನಮ್ಮ ಜಾಗದಲ್ಲಿ ಚೆಲ್ಲಬೇಡಾ ಅಂತಾ ಅಂದಿದ್ದಕ್ಕೆ ಜಗದೇವಿಯ ಗಂಡನಾದ ಉಲ್ಲಾಸ ಇವರು ಅಲ್ಲೆ ಇದ್ದ ಒಂದು ಬಡಿಗೆಯಿಂದ ಎಡಗೈ ಬೆರಳುಗಳಮೇಲೆ, ಕೈಮೇಲೆ, ಬಲಗಾಲ ಮೇಲೆ, ಹಾಗು ಎಡಗಾಲ ತೊಡೆಯ ಮೇಲೆ ಹೊಡದನು ಹಾಗು ಕೈಯಿಂದ ಬೆನ್ನ ಮೇಲೆ ಹೊಡೆಯುತಿದ್ದಾಗ ನನ್ನ ಇನ್ನೊಬ್ಬ ಮೈದುನನಾದ ಮಹಾಂತೇಶ ಇವನು ಬಂದವನೆ ಈ ರಂಡಿಗ ಬಿಡಬ್ಯಾಡ ಹೊಡಿ ಇಕಿದು ಬಹಳ ಆಗ್ಯಾದ ಸುಮ್ಮನೆ ಸುಮ್ಮನೆ ಜಗಳ ತೆಗಿತಾಳ ಅಂತಾ ಅಂದು ಕೈಯಿಂದ ಬೆನ್ನ ಮೇಲೆ ಹಾಗು ಪಕ್ಕಲೆಬ ಮೇಲೆ ಹೊಡದನು. ಉಲ್ಲಾಸ ಹಾಗು ಮಲ್ಲಿಕಾರ್ಜನ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ : ಶ್ರೀ ಉಲ್ಲಾಸ ತಂದೆ ಮಲ್ಲಿಕಾರ್ಜುನ ಉಡಗೇನವರ ರವರು ಒಕ್ಕಲುತನ ಕೆಸಲ ಮಾಡಿಕೊಂಡು ಕುಟುಂಬ ಪರಿವಾರದೊಂದಿಗೆ ವಾಸಿಸುತ್ತಿದ್ದೆನೆ. ನಮ್ಮ ತಂದೆಗೆ ನಾವೂ ಮೂರು ಜನ ಗಂಡು ಮಕ್ಕಳು ಇರುತ್ತೆವೆ. ಮನೆಯ ಜಾಗದ ಹಂಚಿಕೇಯ ಸಲುವಾಗಿ ನನಗು ಹಾಗು ಅಣ್ಣನಾದ ರಾಜಶೇಕರ ಹಾಗು ತಮ್ಮನಾದ ಊಲ್ಲಾಸ ರವರ ಮದ್ಯ ಮೊದಲಿನಿಂದ ವೈಮನಸ್ಸು ಇರುತ್ತದೆ. ರಾಜಶೇಖರ ಈತನು ಹುಚ್ಚನಂತೆ ಇದ್ದು ಇವನ ಹೆಂಡತಿಯಾದ ಭಾಗಿರಥಿ ನಮ್ಮ ಜೊತೆ ಹಗೆತನ ಸಾಗಿಸುತ್ತಾ ಬಂದಿದ್ದು  ದಿನಾಂಕ;19/11/2016 ರಂದು ಮುಂಜಾನೆ ನಾನು ನಮ್ಮ ತಮ್ಮನಾದ ಮಹಾಂತೇಶ ಹಾಗು ನನ್ನ ಹೆಂಡತಿಯಾದ ಜಗದೆವಿ ಮನೆಯಲ್ಲಿ ಇದ್ದೆವೂ. ನನ್ನ ಹೆಂಡತಿಯಾದ ಜಗದೇವಿ ಇವಳು ಮನೇಯ ಬಾಂಡ್ಯಾ ತಿಕ್ಕಿ ನಮ್ಮ ಜಾಗದಲ್ಲಿ ನೀರು ಹಾಕಿರುತ್ತಾಳೆ. ಆಗ ನಮ್ಮ ಅಣ್ಣ ರಾಜಶೇಖರನ ಹೆಂಡತಿಯಾದ ಭಾಗಿರಥಿ ಇವಳು ಇಲ್ಲಿ ಯಾಕ ನೀರು ಚೆಲ್ಲುತ್ತಿ ನಿಮ್ಮ ಜಾಗನಾಗ ಚೆಲ್ಲಿದರೆ ನಮ್ಮ ಜಾಗದಾಗ ನೀರು ಬರ್ತಾವ ರಂಡಿ ಇಲ್ಲಿ ಚೆಲ್ಲಬ್ಯಾಡ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹಾಗೆ ಅವಾಚ್ಯವಾಗಿ ಬೈಬೇಡಾ ಅಂತಾ ನಾನು ಹೇಳಿದಾಗ ನನಗೆನು ಹೇಳತಿ ನನ್ನ ಹಾಟ್ಯಾ ಅಂತಾ ನನಗೆ ಕೈಯಿಂದ ಕಪಾಳ ಮೇಲೆ ಹೊಡೆದಳು. ಆಗ ನನ್ನ ತಮ್ಮನಾದ ಮಹಾಂತೇಶ ಈತನು ಹೊಡೆಯಬೇಡಾ ಅಂತಾ ಜಗಳ ಬಿಡಿಸಲು ಬಂದಾಗ ಆತನನ್ನು ಕೈಯಿಂದ ಎಡಗೈ ಮೇಲೆ ಹೊಡೆದು ನುಗಿಸಿದಳು ಆಗ ನನ್ನ ತಮ್ಮನ ಕೈಗೆ ತೇರಚಿದ ಗಾಯ ಹಾಗು ಗುಪ್ತ ಗಾಯ ವಾಗಿರುತ್ತದೆ. ಆಗ ನಾನು ನನ್ನ ತಮ್ಮ ನನ್ನು ಎಬ್ಬಿಸಲು ಹೊಗುತ್ತಿದ್ದಾಗ ನನ್ನನ್ನು ತಡೆದು ನಿಲ್ಲಿಸಿ ನನ್ನ ಬಲಗೈ ಮೇಲೆ ಹೊಡೆದು ನನ್ನ ಕಣ್ಣಿನ ಮೇಲೆ ಚೂರಿ ಗಾಯಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

20 November 2016

KALABURAGI DISTRICT REPORTED CRIMES

ಸುಲಿಗೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ. 19-11-2016 ರಂದು  ಶ್ರೀ ಗುರುಶಾಂತಪ್ಪ ತಂ. ಮಾಣಿಕಪ್ಪಾ ಶಾ:ಜಳಕಿ ರವರು ಹಾಜರಾಗಿ ದಿನಾಂಕ: 06/11/2016 ರಂದು ತನ್ನ ಮೋಟರ ಸೈಕಲ ಕೆಎ-32 ಕೆ-9215ನೇದ್ದರ ಮೇಲೆ ಕಲಬುರಗಿ ಕಡೆ ಬರುತ್ತಿರುವಾಗ ಸಾಯಂಕಾಲ 5-30 ಪಿಎಮ್ ಸುಮಾರಿಗೆ ಸಾವಳಗಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಒಂದು ಮೋಟರ ಸೈಕಲ ನನ್ನ ಮೋಟರ ಸೈಕಲಗೆ ಓವರಟೇಕ ಮಾಡಿ ಮುಂದೆ ಬಂದು ಅಡ್ಡಲಾಗಿ ನಿಂತು ನನ್ನ ಮೋಟರ ಸೈಕಲ ನಿಲ್ಲಿಸಿ ಅದರಲ್ಲಿನ ಒಬ್ಬ ವ್ಯೆಕ್ತಿ ವಿನಾಃಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯಲು ಬಂದಾಗ ನಾನು ಆತನಿಗೆ ತಡೆದಾಗ ಆತನ ಜೊತೆ ಇದ್ದ ಇನ್ನೊಬ್ಬ ವ್ಯೆಕ್ತಿ ತನ್ನ ಕೈಯಲ್ಲಿದ್ದ ಒಂದು ಕಟ್ಟಿಗೆಯಿಂದ ನನ್ನ ತಲೆಯ ಮೇಲೆ ಮತ್ತು ಎಡಗೈ ಮೋಳಕೈಗೆ, ಮುಂಗೈಗೆ ಹಾಗೂ ಎಡಗಾಲು ಮೋಣಕಾಲು ಕೆಳಗೆ ಹೊಡೆದು ಗಾಯಗೊಳಿಸಿ ನನ್ನ ಜೇಬಿನಲ್ಲಿದ್ದ 1) ನಗದು ಹಣ 43000/-ರೂ, 2) ನನ್ನ ಕೈಯಲ್ಲಿದ್ದ 10 ಗ್ರಾಂ ಬಂಗಾರದ ಬ್ರಾಸಲೇಟ ಅ.ಕಿ= 25000/-ರೂ 3) 10ಗ್ರಾಂ ಬಂಗಾರದ ಒಂದು ಕೊರಳಿನ ಚೈನ್ ಅ.ಕಿ= 25000/-ರೂ 4) ಒಂದು 20 ಗ್ರಾಂ ಬಂಗಾರದ ರುದ್ರಾಕ್ಷಿಯ ಸರ ಅ.ಕಿ= 50000/-ರೂ ಹಾಗು 5) ಒಂದು ಸ್ಯಾಮಸಂಗ ಮೋಬೈಲ್ ಅ.ಕಿ= 12000/-ರೂ ಹಾಗೂ ಎರಡು ಎಟಿಎಮ್ ಕಾರ್ಡಗಳು ಅ.ಕಿ= 00 ಹಿಗೆ ಒಟ್ಟು = 1,37,000/-ರೂ ಬೆಲೆಬಾಳುವುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿದ್ದು . ನನಗೆ ಸುಲಿಗೆ ಮಾಡಿದ ಆಪಾದಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ.
ಹಲ್ಲೆ ಪ್ರಕರಣ:
ಗ್ರಾಮೀ ಪೊಲೀಸ್ ಠಾಣೆ: ದಿನಾಂಕ. 19-11-2016 ರಂದು  ಶ್ರೀ. ತಮ್ಮಣ್ಣಾ ತಂದೆ ಹಣಮಂತಪ್ಪಾ ತಾನಕುಮ ಸಾ;ಭಗತಸಿಂಗ ಚೌಕ ವಡ್ಡರ ಗಲ್ಲಿ ಕಲಬುರಗಿ ಇವರು ದಿನಾಂಕ. 17-11-2016 ರಂದು ತಮ್ಮ ಹೊಲಕ್ಕೆ ಹೋಗಿ ಕಂಟಿ ಸಫಾಯಿ ಮಾಡಿಸುತ್ತಿರುವಾಗ ಅಲ್ಲಿಗೆ ಬಂದ ಅಹಮದ ಕಲ್ಯಾಣಿ ಮತ್ತು ಶಾಕೀರ ಕಲ್ಯಾಣಿ  ಮತ್ತು ಅವರ ಸಂಗಡ ಇನ್ನೂ 4-5 ಜನ  ಮೋಟಾರ ಸೈಕಲಗಳ ಮೇಲೆ ನಮ್ಮ ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಬಂದು  ಅಹಮದ ಕಲ್ಯಾಣಿ ಈತನು ಮಗನೆ ಈ ಹೊಲ ನಮಗೆ ಬಿಟ್ಟು ಕೊಡಬೇಕು ಇಲ್ಲಿ ನೀನು ಯಾವುದೇ ಕೆಲಸ ಮಾಡಬಾರದು  ಮತ್ತು ಕಾಲ ಇಡಬಾರದು  ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ದು  ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎದೆಯ ಮೇಲೆ ಮುಷ್ಠಿ ಮಾಡಿ ಹೊಡೆದನು  ಮತ್ತು ಶಾಕೀರ ಕಲ್ಯಾಣಿ  ಮತ್ತು ಅವರ ಸಂಗಡ ಇದ್ದ ಜನ ಸಹ ನನಗೆ ಕೈಯಿಂದ ಹೊಡೆದು ಕೆಳಗೆ ಹಾಕಿ ಒದೆಯುತ್ತಿರುವಾಗ ನಾನು ಕೆಳಗೆ ಬಿದ್ದು ಚೀರಾಡುವಾಗ ಶಬ್ದಕೇಳಿ ಮುನಸರ ಚಾವುಸ್ ಮತ್ತು ವಸೀಮ ಎಂಬುವವರು ಓಡಿ ಬರುವಷ್ಟರಲ್ಲಿ ನಿನಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರಳ್ಳಲಾಗಿದೆ.
ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 18.11.2016 ರಂದು ಶ್ರೀ ಬುರಾನ್ ಸಾಬ ತಂ. ಹುಸೇನ್ ಸಾಬ ಸಾ: ಸೊಂತ ರವರು ಮರಮಂಚಿ ಗ್ರಾಮದಿಂದ ಸೊಂತ ಗ್ರಾಮಕ್ಕೆ ಬರುವ ಕುರಿತು ಮರಮಂಚಿ ಗ್ರಾಮದ ಬಸ್ಸ ನಿಲ್ದಾಣದಿಂದ ಮಹಿಂದ್ರಾ ಕಮಾಂಡರ ಜೀಪ ನಂ ಕೆಎ 28 ಎಮ್ 1603 ನೇದರಲ್ಲಿ ಕುಳಿತು ಹೋಗುತ್ತಿರುವಾಗ ಸದರಿ ಜೀಪ ಚಾಲಕ ಮಹಾದೇವನು ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ನಾನು ಮತ್ತು ಜೀಪಿನಲ್ಲಿ ಕುಳಿತ ಕೆಲವು ಜನ ಜೀಪ ಚಾಲಕ ಮಹಾದೇವನಿಗೆ, ಜೀಪನ್ನು ನಿಧಾನವಾಗಿ ನಡೆಯಿಸಿಕೊಂಡು ಹೋಗಲು ತಿಳಿಸಿದರು ಸಹ ನಮ್ಮ ಮಾತನ್ನು ಕೇಳದೆ ಅದೇ ವೇಗದಲ್ಲಿ ಜೀಪನ್ನ ಚಲಾಯಿಸುತ್ತಾ ಹೊನ್ನಳ್ಳಿ ಕ್ರಾಸ ಹತ್ತಿರ ಎದರುಗಡೆಯಿಂದ ಬರುತ್ತಿದ್ದ ಟಂಟಂ ಅಟೊಕ್ಕೆ ಒಮ್ಮಲೆ ಕಟ್ ಮಾಡಲು ಹೋಗಿ ಜೀಪನ್ನು ರಸ್ತೆಯ ಪಕ್ಕದಲ್ಲಿರುವ ತಗ್ಗಿನಲ್ಲಿ ಹಾಕಿದ್ದು ಆಗ ಜೀಪಿನಲ್ಲಿದ್ದ ನಾನು ಮತ್ತು ನನ್ನ ಪಕ್ಕದಲ್ಲಿ ಕಿಳಿತಿದ್ದ ವ್ಯೆಕ್ತಿ ಕೆಳಗೆ ಬಿದ್ದು ನನ್ನ ಬಲಗಾಲ ತೊಡೆಗೆ ಭಾರಿ ಒಳಪೇಟ್ಟಾಗಿ ಕಾಲು ಮುರಿದಿದ್ದು. ಸದರಿ ಜೀಪ ಚಾಲಕನವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.