POLICE BHAVAN KALABURAGI

POLICE BHAVAN KALABURAGI

08 February 2016

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿಠಲ ತಂದೆ ಹಣಮಂತ ವಾಲಿಕಾರ ಸಾ: ಬೊರಾಬಾಯಿನಗರ ಕಲಬುರಗಿ ಇವರು ಸುಮಾರು 5 ವರ್ಷದಿಂದ  ಎ ನಾರಾಯಣ  ಹೆಬ್ಬಾಳ  ಕರ್ನಾಟಕ ದಲೀತ ಸರ್ವೊದಯ ಸಮೀತಿ  (ರಿ) ರಾಜ್ಯ ಅದ್ಯಕ್ಷಕರು ಬೆಂಗಳೂರ ಇವರು ನನಗೆ ಉತ್ತರ ಕರ್ನಾಟಕದ ಅಧ್ಯಕ್ಷರೆಂದು ಮಾಡಿದ್ದರಿಂದ ದಿನಾಂಕ 6/2/16 ರಂದು ಬೆಂಗಳೂರದಿಂದ ಕಲಬುರಗಿಗೆ ಬಂದು ಮದ್ಯಾನ 2.00 ಗಂಟೆಗೆ ನನಗೆ ಜಗತ ಸರ್ಕಲಿಗೆ ಬರಲು ತಿಳಿಸಿದ್ದರಿಂದ ನನಗೆ ಉತ್ತರ ಕರ್ನಟಕದ ಮತ್ತೆ ಅಧ್ಯಕ್ಷರಾಗಲು ಒಂದು ಲೇಟರ ಪ್ಯಾಡಿನ ಮೇಲೆ ಬರೆದುಕೊಟ್ಟರು ನಾನು ತೆಗೆದುಕೊಂಡು ಮನೆಗೆ ಬಂದಿರುತ್ತೇನೆ ರಾತ್ರಿ 10.00 ಗಂಟೆ ಸೂಮಾರಿಗೆ ನನ್ನ ಮನೆಗೆ ರಾಜ್ಯ ಅಧ್ಯಕ್ಷರಾದ ಎ ಲಕ್ಷ್ಮಿನಾರಾಯಣ ಹೆಬ್ಬಾಳ ಮತ್ತು ಅವರ ಸಂಗಡ ತಾಹೇರಹುಶೇನ, ನಾರಾಯಣ ಇವರು ಬಂದು ಮಾತಾಡುವುದು ಇದೆ ಬನ್ನಿರಿ ಎಂದು ಹೇಳಿ ಒಂದು ಆಟೋ ರೀಕ್ಷಾದಲ್ಲಿ ಕೂಳಿಸಿ ಸ್ಠೇಶನ ಬಜಾರದಲ್ಲಿದ್ದ ಕಳಿಂಗ ಲಾಡ್ಜಗೆ ಕರೆದುಕೊಂಡು ರೂಮ ನಂ 1 ರಲ್ಲಿ ಏ ನಾರಾಯಣ ಇವರು ಕೂಡಿಯಲಿಕ್ಕೆ ಡ್ರಿಂಕ ತರಸಿರಿ ಅಂತಾ ಹೇಳಿದಾಗ ನಾನು ಕುಡಿಯುವುದಿಲ್ಲಾ ಅಂತಾ ಹೇಳಿದ್ದಕ್ಕೆ ರಾಜ್ಯ ಅಧ್ಯಕ್ಷರು ನಿನಗೆ ಕರ್ನಾಟಕ ಅಧ್ಯಕ್ಷರು ಮಾಡಿದ್ದೇವೆ ನೀನು ಆಮೇಲೆ ನನಗೆ 50,000 ರೂ ಕೊಡಬೇಕು ಇಲ್ಲದಿದ್ದರೆ ಮುಂಜಾನೆ 10 ಗಂಟೆಯ ತನಕ ತಂದು ಕೋಡು ಅಂತಾ ಹೇಳಿದ್ದಾಗ ನಾನು ಈಗಾಗಲೆ 1500000 ರೂ ಕೊಟ್ಟಿರುತ್ತೇನ ನನ್ನ ಹತ್ತಿರ ಹಣ ಇರುವುದಿಲ್ಲಾ ಅಂತಾ ಹೆಳಿದ್ದಾಗ ಏ ಲಕ್ಷ್ಮಿನಾರಾಯಣ ಇವನು ಕೈಮುಷ್ಠಿಮಾಡಿ ನನ್ನ ಎಡಗಣ್ಣಿನ ಮೇಲೆ ಜೋರಾಗಿ ಹೋಡೆದನು  ನನ್ನ ಎಡಗಣ್ಣಿನ ಪಕ್ಕದಲ್ಲಿ ಗಾಯವಾಗಿರತ್ತದೆ ತಾಹೇರ ಹುಶೇನ ಮತ್ತು ನಾರಾಣ ಇವರಿಗೆ ಕೈಕಾಲು ಕಟ್ಟಲು ಹೇಳಿದಾಗ ನಾರಾಯಣ ತನ್ನ ಕೈಯಲ್ಲಿದ್ದ  ಟಾವೇಲ್ಲದಿಂದ ನನ್ನ ಕೈಗಳನ್ನು ಕಟ್ಟಿದ್ದನು ತಾಹೇರ ಇವನು ಕೂಡಾ ಟಾವೇಲದಿಂದ ಕೈಕಾಲು ಕಟ್ಟಿದ್ದನು  ಎ ನಾರಾಯಣ ಇವನು ತನ್ನ ಕೈಯಲ್ಲಿದ್ದ ಬೇಲ್ಟದಿಂದ ನನ್ನ ಬೆನ್ನಮೇಲೆ ಹಾಗೂ ಕಾಲುಗಳ ಮೇಲೆ ಹೊಡೆದನು ಆ ನಂತರ ಬಲಹೊಟ್ಟೆಯ ಮೇಲೆ ಸುಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯ ಪ್ರಕರಣ :
ಯಡ್ರಾಮಿ ಠಾಣೆ : ನಮ್ಮೂರ ಸಿಮೆಯಲ್ಲಿ ನನ್ನ ಗಂಡನ ಹೆಸರಿಗೆ 6 ಎಕರೆ ಜಮೀನು ಇರುತ್ತದೆ ನನ್ನ ಗಂಡ ಬೀಳವಾರ ಗ್ರಾಮದಲ್ಲಿರುವ ಕೆಜಿಬಿ ಬ್ಯಾಂಕ್‌ ನಲ್ಲಿ 80.000/- ರೂ ಗಳ ಸಾಲ ಮಾಡಿಕೊಂಡಿದ್ದು ಮತ್ತು ಇತರೆ ಖಾಸಗಿ ಸಾಲ 1 ಲಕ್ಷ ರೂ ಮಾಡಿಕೊಂಡಿದ್ದು ಇರುತ್ತದೆ. ಈ  ವರ್ಷ ಮಳೆಯಾಗದೆ ಇದ್ದಿದ್ದರಿಂದ ಹೊಲದಲ್ಲಿ ಯಾವುದೆ ಬೆಳೆ ಹಾಕಿರುವದಿಲ್ಲ. ನನ್ನ ಗಂಡ ಆಗಾಗ ಸಾಲ ಹೆಚ್ಚಾಗುತ್ತಿದ್ದು ಅದನ್ನು ಹೇಗೆ ತಿರಿಸಬೇಕು ಅಂತಾ ಚಿಂತೆ ಮಾಡುತ್ತಿದ್ದರು ಅದಕ್ಕೆ ನಾನು ಅವರಿಗೆ ಸಮಾದಾನ ಹೇಳುತ್ತಾ ಬಂದಿದ್ದು  ದಿನಾಂಕ 06.02.2016 ರಂದು ರಾತ್ರಿ 09:00 ಗಂಟೆಗೆ ನಾನು ಮತ್ತು ನನ್ನ ಗಂಡ ಹಾಗು ಮಕ್ಕಳು ಕೂಡಿ ಊಟ ಮಾಡಿಕೊಂಡು ಮಲಗಿಕೊಂಡಿದ್ದು ಬೆಳಗ್ಗೆ 05:00 ಗಂಟೆಗೆ ನಾನು ಎದ್ದಾಗ ಕ್ರೀಮಿನಾಷಕ ಔಷದ ತರಹ ವಾಸನೆ ಬರುತ್ತಿದ್ದು ನಂತರ ನನ್ನ ಗಂಡನಿಗೆ ಎಬ್ಬಿಸಲು ಹೋದಾಗ ನನ್ನ ಗಂಡ ಮೃತಪಟ್ಟಿದ್ದನು ಆಗ ನಾನು ಗಾಭರಿಗೊಂಡು ನಮ್ಮ ಅಣ್ಣ ತಮ್ಮಂದಿರಾದ ಅರ್ಜುನ ಕುಂಬಾರ, ಭೀಮಣ್ಣ ಕುಂಬಾರ ರವರಿಗೆ ಮನೆಗೆ ಕರೆಯಿಸಿದೆನು. ನನ್ನ ಗಂಡ ಸಾಲ ಹೇಗೆ ತಿರಿಸಬೇಕು ಅಂತಾ ಚಿಂತೆ ಮಾಡುತ್ತ ಜಿಗುಪ್ಸೆಗೊಂಡು ರಾತ್ರಿ 10:00 ಗಂಟೆಯಿಂದ ಬೇಳಗ್ಗೆ 04:00 ಗಂಟೆಯ ಮಧ್ಯದ ಅವಧಿಯಲ್ಲಿ ನಾವೇಲ್ಲರು ಮಲಗಿಕೊಂಡಾಗ ಯಾವುದೋ ಕ್ರೀಮಿನಾಷಕ ಔಷಧಿ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಪ್ಪ ಕುಂಬಾರ್ ಸಾ : ಹಂಗರಗಾ ಬಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಶ್ರೀಮಂತ ತಂದೆ ಸಿತಾರಾಮ ರಾಠೋಡ ಮು|| ಗುಲಹಳ್ಳಿ ತಾಂಡಾ ರವರ  ಮಗ ರಮೇಶ ಇತನು ದಿನಾಂಕ: 06/02/2016 ರಂದು ಬೆಳಗ್ಗೆ ಎಂದಿನಂತೆ ಪಡಸಾವಳಿ ಗ್ರಾಮಕ್ಕೆ ಕೆಲಸಕ್ಕೆ ಹೊದನು ನಮ್ಮ ಮೋಟರ್ ಸೈಕಲ ನಂ: MH:04 T-7931 ಹಿರೋ ಹೊಂಡಾದ ಮೇಲೆ ಹೂದನು ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 07:55 ಗಂಟೆ ಸುಮಾರಿಗೆ ಮನೆಗೆ ಬರುವಾಗ ಕನ್ನಿರಾಮ ಶಕಾಪೂರ ಇತನು ಮೋಬೈಲನಿಂದ ಪೋನ್ ಮಾಡಿ ತಿಳಿಸಿದೆನೆಂದರೆ ನಿಮ್ಮ ಮಗ ರಮೇಶ ಇತನು ಮೋಟರ ಸೈಕಲ ಮೇಲೆ ಆಳಂದ ಕಡೆಗೆ ಹೋಗುವಾಗ ಶಕಾಪೂರ ಕ್ರಾಸ್ ಬ್ರಿಜ್ ಹತ್ತಿರ ಮೋಟರ ಸೈಕಲ ಪಕ್ಕಕ್ಕೆ ನಿಲ್ಲಿಸಿದಾಗ ಹಿಂದಿನಿಂದ ವಾಗದರಿ ಕಡೆಯಿಂದ ಯಾವದೋ ಒಂದು ಟ್ಯಾಂಕರ ಚಾಲಕನು ಅತಿವೇಗದಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ಮಗನ ಮೋಟರ ಸೈಕಲ್ ಗೆ ಡಿಕ್ಕಿ ಹೊಡೆದು ವಾಹನದೊಂದಿಗೆ ಓಡಿ ಹೋಗಿರುತ್ತಾನೆ ಇವರಿಗೆ ಬಹಳ ರಕ್ತ ಗಾಯವಾಗಿದೆ ಎಂದು ಬರಲು ತಿಳಿಸಿದ ಮೇರೆಗೆ ನಾನು ಹಾಗೂ ವಿಜಯಕುಮಾರ ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ರಮೇಶ ಕೆಳಗಡೆ ಬಿದ್ದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ನಂತರ ನಾವು 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಆಳಂದಕ್ಕೆ ಬಂದು  ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಗೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆದು ನಂತರ ಗಂಗಾ ಆಸ್ಪತ್ರೆಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದ್ದು ವೈದ್ಯರು ಕಂಡಿಸನ್ ಸಿರಿಯಸ್ ಇದೆ ಅಂತಾ ತಿಳಿಸಿದ್ದರಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹೈದರಬಾದಗೆ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ತಂದೆ ಸೊಮಣ್ಣ ಮಡಿವಾಳ ಸಾ : ಇವಣಿ ಹುಡಾ ತಾ : ಚಿತ್ತಾಪೂರ ಹಾ.ವ: ಬಟಗೇರಾ (ಬಿ) ತಾ : ಸೇಡಂ ಇವರು ದಿನಾಂಕ: 04-02-2016 ರಂದು 10:00 ಪಿ.ಎಮ್ ಕ್ಕೆ ಮನೆಯಲ್ಲಿ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸೇರಿ ಊಟ ಮಾಡಿ ಮನೆಯ ಮುಂದುಗಡೆ ದ್ವಿಚಕ್ರವಾಹನವನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದೆವು. ನಂತರ ದಿನಾಂಕ: 05-02-2016 ರಂದು 06:00 .ಎಮ್ ಕ್ಕೆ ಎದ್ದು ಮನೆಯ ಮುಂದೆ ನಿಲ್ಲಿಸಿದ ನನ್ನ ದ್ವೀಚಕ್ರ ವಾಹನ ನಂ. KA32EJ6784 ನೆದ್ದನ್ನು ನೋಡಲಾಗಿ ಇರಲಿಲ್ಲ. ನಂತರ ನಾನು ಎಲ್ಲಾ ಕಡೆ ಗ್ರಾಮದಲ್ಲಿ ಹಾಗು ಸೇಡಂದಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ದ್ವಿಚಕ್ರ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ. ಕಾರಣ ದಿನಾಂಕ: 04-02-2016 ರಂದು 10:00 ಪಿ.ಎಮ್ ದಿಂದ 05-02-2016 ರಂದು 06:00 .ಎಮ್ ದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ  ನಂ. KA32EJ6784 ನೆದ್ದರ ಇಂಜೀನ್ ನಂ. HA10EWFHE18692, ಚೆಸ್ಸಿ ನಂ. MBLHA10BWFHE67520 ನೆದ್ದರ ಅ.ಕಿ|| 44,935=00 ರೂ.ಗಳ ನೆದ್ದರ ದ್ವಿಚಕ್ರ ವಾಹನ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

06 February 2016

Kalaburagi District Press Note

ಪತ್ರಿಕಾ ಪ್ರಕಟಣೆ  
            ಕಲಬುರಗಿ ಮಕ್ಕಳ ವಿಶೇಷ  ಪೊಲೀಸ್ ಘಟಕದ ವತಿಯಿಂದ ಆಪರೇಷನ್ ಸ್ಮಾಯಿಲ್-2 ರ ಭಾಗವಾಗಿ ಕಾಣೆಯಾದ ಮಕ್ಕಳ, ಬಾಲಕಾರ್ಮಿಕ, ಭಿಕ್ಷಾಟಣೆ ಒಳಗಾದಂತಹ ಮಕ್ಕಳ ಪತ್ತೆಯ ಕಾರ್ಯಾಚರಣೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಲಬುರಗಿ ಮತ್ತು ಅಪರ ಪೊಲೀಸ್ ಅಧೀಕ್ಷಕರು, ಕಲಬುರಗಿರವರ ನಿರ್ದೇಶನದ ಮೇರೆಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸಪೇಕ್ಟರ ರವರಾದ ಶ್ರೀ ಕೆ.ಎಮ್ ಸತೀಶ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಶ್ರೀ ಭರತೇಶ ಶೀಲವಂತರ ಹಾಗೂ ಶ್ರೀ ಬಸವರಾಜ ಎ.ಎಸ್.ಐ  ರವರ ನೇತೃತ್ವದಲ್ಲಿ  ಮಕ್ಕಳ ಸಹಾಯವಾಣಿ, ಮತ್ತು ಡಾನ್ ಬಾಸ್ಕೋ ಸಂಸ್ಥೆ ಮತ್ತು ಇತರೆ ಸರ್ಕಾರೇತರ ಸ್ವಂಯ ಸಂಸ್ಥೆಗಳು ಮತ್ತು ಮಾರ್ಗದರ್ಶಿ ಸಂಸ್ಥೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶ್ರೀ ವಿಠಲ್ ಚೀಕಣಿ ಹಾಗೂ ಶ್ರೀ ಆನಂದ ರಾಜ, ಸಹಾಯಕ ಶಿಶು ಅಭೀವೃದ್ದಿ ಯೋಜನಾ ಅಧಿಕಾರಿಯವರಾದ ಶ್ರೀಮತಿ. ಪಾಪಮ್ಮ ಹಾಬಳಕರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಇಂದು ದಿನಾಂಕ: 06/02/2016 ರಂದು ವಾಡಿ ಪಟ್ಟಣದಲ್ಲಿ ತಿರುಗಾಡಿ ಗ್ಯಾರೇಜು ಮತ್ತು ಇತರ ಕಡೆಗಳಲ್ಲಿ ಕಡೆಗಳಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಒಟ್ಟು 09 ಮಕ್ಕಳನ್ನು ಸ್ವಾಧಿನಕ್ಕೆ ಪಡೆದುಕೊಳ್ಳಲಾಯಿತು. ಈ ಯೋಜನೆಯ ವಿವರವನ್ನು ಸಹ ಸಾರ್ವಜನಿಕರಿಗೆ ಮನವರಿಕೆ ಆಗುವಂತೆ ತಿಳುವಳಿಕೆ ನೀಡಲಾಯಿತು.
         ಕಾರ್ಯಚರಣೆ ಕೈಕೊಂಡು ಬೀಕ್ಷೆಯಾಟನೆಗೆ ಒಳಗೊಂಡ, ಬಾಲ ಕಾರ್ಮೀಕ ಪದ್ದತಿಗೆ ಒಳಗೊಂಡ ಒಟ್ಟು 09 ಮಕ್ಕಳನ್ನು ಪತ್ತೆ ಹಚ್ಚಿ, ಪುನರ ವಸತಿಗಾಗಿ ಹಾಗೂ ಬಾಲ ನ್ಯಾಯ ಕಾಯ್ದೆಯ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ರವರ ಮುಂದೆ ಹಾಜರುಪಡಿಸಲು ಕ್ರಮವಾಗಿ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಮುಂದಿನ ಪುನರ ವಸತಿಗಾಗಿ ದಾಖಲಾಯಿಸಲಾಯಿತು.
           ಕಾಣೆಯಾದ ಅನೇಕ ಮಕ್ಕಳು ಭಿಕ್ಷೆಯಾಟನೆಯಲ್ಲಿ ಹಾಗೂ ಬಾಲ ಕಾರ್ಮಿಕತೆಯಲ್ಲಿ ತೊಡಗಿದ್ದು, ಆ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಮನೆಗೆ ತಲುಪಿಸಿ ಪಾಲಕರ ಮುಖದಲ್ಲಿ ನಗೇ ಮೂಡಿಸುವ ಹಾಗೂ ಮಕ್ಕಳ ರಕ್ಷಣೆಗಾಗಿ ಸದರಿ ಕಾರ್ಯಾಚಾರಣೆಯನ್ನು ಕೈಕೊಳ್ಳಲಾಗಿದೆ ಎಂದು ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರು ಶ್ರೀ ಸತೀಸ ಕೆ,ಎಮ್.  ರವರು ತಿಳಿಸಿದ್ದಾರೆ.
            ಯಾವುದೇ ಮಗು ಪತ್ತೆಯಾದಲ್ಲಿ ಅಥವಾ 18 ವರ್ಷದ ಒಳಗಿನ ಯಾವುದೇ ಮಗು ತೊಂದರೆಗೆ ಒಳಗಾದಲ್ಲಿ ಉಚಿತ ಮಕ್ಕಳ ಸಹಾಯವಾಣಿ 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ತಿಳಿಸಲು ಕೋರಿರುತ್ತಾರೆ.
            ಈ ಕಾರ್ಯಚಾರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶ್ರೀ ಮಲ್ಲಪ್ಪ ರಾಚೂರು,  ಶ್ರೀ ಬಸವರಾಜು ಟೆಂಗಳಿ, ಕುಮಾರ ರಾಠೋಡ, ಕಾಣೆಯಾದ ಮಕ್ಕಳ ಬ್ಯೂರೋದ ಮಾಪಣ್ಣ, ಜ್ಯೋತಿ, ಡಾನ ಬಾಸ್ಕೋ ನಿರ್ದೇಶಕರಾದ ಫಾದರ ಪ್ರಸಾದ, ಹಾಗೂ ಸಂತೋಷ ಮತ್ತು ಕಾರ್ಮೀಕ ನಿರೀಕ್ಷಕರು ಹಾಜಾರಿದ್ದರು.

Kalaburagi District Reported Crimes

ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ದೊಡ್ಡಪ್ಪ ಹೇಬಳೆ ಅಬಕಾರಿ ನಿರೀಕ್ಷಕರು ಉಪ-ವಿಭಾಗ ಚಿತ್ತಾಪೂರ ಇವರು ಹಾಗು ಪ್ರಭಾರಿ ಅಧೀಕಾರಿ ಅಬಕಾರಿ ಉಪಾಧೀಕ್ಷಕರು ಚಿತ್ತಾಪೂರ ಇವರ ನೇತೃತ್ವದಲ್ಲಿ ಗಸ್ತು ಕಾರ್ಯಾ ಮಾಡುತ್ತಾ ಸೇಡಂ ತಾಲೂಕಿಗೆ ಭೇಟಿ ನೀಡಿದಾಗ, ಸಾಯಂಕಾಲ 1630 ಗಂಟೆಗೆ ರಿಬ್ಬನಪಲ್ಲಿ ಚಕ್ಕಪೊಸ್ಟ ಹತ್ತಿರ ಮುಧೋಳ ಗ್ರಾಮದಲ್ಲಿ ಈ ಹಿಂದೆ ಸುಮಾರು 4-5  ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಾದ 1] ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ 2] ಬಾಲರಾಜ ತಂದೆ ಕಿಷ್ಟಯ್ಯ ಕಲಾಲ 3] ಸತ್ಯಾವಾನ 4] ನಾರಾಯಣ  ಮುಂತಾದವರು ಅಕ್ರಮವಾಗಿ ಸಿಹೆಚ್ ಪೌಢರ ಮಿಶ್ರೀತ ಕಲಬೇರಿಕೆ ಸೇಂದಿ ತಯಾರಿಸುವ ಕೆಲಸವನ್ನು ಮತ್ತೆ ಆರಂಭಿಸಿರುತ್ತಾರೆ ಎಂಬಾ ಖಚಿತ ಮಾಹಿತಿ ಮೇರೆಗೆ ಉಪಾಧೀಕ್ಷಕರು ಇವರ ನೇತೃತ್ವದಲ್ಲಿ ಮುಧೋಳಕ್ಕೆ ಪಂಚರ ಜೋತೆಗೆ ಭೇಟಿ ನೀಡಿ ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ ಇವರ ಮನೆಯನ್ನು ಶೋಧನೆ ಮಾಡಲು ಮನೆಯ ಹತ್ತಿರ ಹೊದಾಗ ಮನೆಯ ಮುಂದೆ ನಿಂತಿದ್ದ ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ ಎಂಬುವವರಿಗೆ ನಿಮ್ಮ ಮನೆಯಲ್ಲಿ ಅಕ್ರಮವಾಗಿ ಕಲಬೇರಿಕೆ ಸೇಂದಿ ತಯಾರಿಸಿ ಮಾರಾಟಾ ಮಾಡುವ ಖಚಿತ ಮಾಹಿತಿ ಇದ್ದು, ಮನೆ ಶೋಧನೆ ಮಾಡುವದಿದೆ ಎಂದಾಗ ಸದರಿ ಬಸವರಾಜನು & ಪತ್ನಿ ನಮ್ಮ ಅಧೀಕಾರಿ ಸಿಬ್ಬಂದಿ ಹಾಗು ನನಗೆ ಬೋಸಡಿ ಮಕ್ಕಳೆ ಊರಲ್ಲಿ 5-6 ಮನೆಯಲ್ಲಿ ಸೇಂದಿ ತಯಾರಿಸುತ್ತಾರೆ. ನಾನು ತಯಾರಿಸಿ ಮಾರಾಟಾ ಮಾಡುತ್ತೇನೆ ನನ್ನದೇನು ಸೇಂಟಾ ಕಿತ್ತಿಕೊಳ್ಳಲಿಕ್ಕಾಗಲ್ಲಾ ನೀವು ನನ್ನ ಮನೆ ಶೋಧನೆ ಹೇಗೆ ಮಾಡುತ್ತಿರಿ ನೋಡುತ್ತೇನೆ ಎಂದು ನನ್ನ ಕೋರಳ ಪಟ್ಟಿ ಹಿಡಿದು ಏಳೆದಾಡಿದನು. ನಿಮಗೆ ಯಾರನ್ನು ಇವತ್ತು ಬಿಡುವದಿಲ್ಲಾ. ನಿಮ್ಮ ಜೀಪನ್ನು ನಿಮ್ಮನ್ನು ಸುಡುತ್ತೇನೆ ಎಂದು ಬೇದರಿಕೆ ಹಾಕಿ. ಸುಳ್ಯಾ ಮಕ್ಕಳೆ ನಮ್ಮ ಮನೆ ಹೇಗೆ ಶೋಧನೆ ಮಾಡುತ್ತಿರಿ ನೋಡುತ್ತೇನೆ ನನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಿರಿ ಎಂದು ನಿಮ್ಮ ಮೇಲೆ ಪೊಲೀಸ ಠಾಣೆಗೆ ದೂರು ಕೊಟ್ಟು ನಿಮ್ಮನ್ನು ಸಸ್ಪೆಂಡ ಮಾಡಿಸುತ್ತೇನೆ ಎಂದು ಬೇದರಿಕೆ ಹಾಕಿದನು. ನಾವು ನಮ್ಮ ಸಿಬ್ಬಂದಿಯವರಾದ ಪ್ರೋಬೇಷನರಿ ಅಬಕಾರಿ ಉಪ-ನಿರೀಕ್ಷಕ ಧನರಾಜ, ಚಾಲಕ & ಮಲ್ಲಿಕಾರ್ಜುನ ಅಬಕಾರಿ ರಕ್ಷಕ ಹಾಗು ಉಪಾಧೀಕ್ಷಕರು ಹಿರಿಯ ಅಧಿಕಾರಿಗಳೊಂದಿಗೆ ಮೊಬಾಯಿಲ ಮುಲಕ ಸಮಾಲೋಚನೆ ಮಾಡಿದೇವು. ಹಿರಿಯ ಅಧೀಕಾರಿಗಳಿಗೆ ವಿಷಯ ತಿಳಿಸಲಾಯಿತು. ಈ ರೀತಿಯಾಗಿ ನಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಜೀವದ ಬೇದರಿಕೆ ಹಾಕಿ ಸುಳ್ಳು ದೂರು ದಾಖಲಿಸುವ ಬೇದರಿಕೆ ಹಾಕಿ ಸುಳ್ಳುದೂರು ದಾಖಲಿಸುವ ಬೇದರಿಕೆ ಒಡ್ಡಿರುವ ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ ಹಾಗು ಆತನ ಪತ್ನಿಯ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಎಸುಬಾಯಿ ಗಂಡ ಅಂಬಾರಾಯ ನಿಂಬಾಳ ಸಾ|| ಅಳ್ಳಗಿ (ಬಿ) ಇವರ  ಗಂಡನಾದ ಅಂಬಾರಾಯ ತಂದೆ ಶರಣಪ್ಪ ನಿಂಬಾಳ ರವರು ನಮ್ಮ 3 ಎಕರೆ ಹೊಲದಲ್ಲಿ ಕಬ್ಬಿನ ಬೇಳೆ ಬೆಳೆದಿದ್ದು . ಸದರಿ ಹೊಲದ ಸಾಗುವಳಿಗಾಗಿ ಹಾಗೂ ಸುಮಾರು 4-5 ವರ್ಷಗಳಿಂದ ಹೊಲಗಳು ಸರಿಯಾಗಿ ಬೇಳೆಯದೆ ಕಾರಣದಿಂದ ಹೊಲದ ಸಾಗುವಳಿಗಾಗಿ ಅಫಜಲಪೂರದ ಕೆ.ಜಿ.ಬಿ ಬ್ಯಾಂಕಿನಲ್ಲಿ ಮತ್ತು ಊರು ಮನೆಯಲ್ಲಿ ಕೈಗಡವಾಗಿ ಸುಮಾರು 4-5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುತ್ತಾನೆ. ನನ್ನ ಗಂಡ ಯಾರ ಯಾರ ಹತ್ತಿರ ಹಣ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ನನಗೆ ತಿಳಿಸಿರುವುದಿಲ್ಲ, ಆದರೆ 4-5 ಲಕ್ಷ ರೂಪಾಯಿ ಸಾಲ ಇದೆ ಎಂದು ನನಗೆ ಹೇಳಿ, ಸಾಲ ತಿರಿಸುವುದು ಹೇಗೆ ಎಂದು ಚಿಂತೆ ಮಾಡುತ್ತಿರುತ್ತಾನೆ. ಹಾಗೂ ಈ ವರ್ಷ ಸರಿಯಾಗಿ ಮಳೆ ಬರದೆ ಇದ್ದ ಕಾರಣ ಕಬ್ಬು ಸಹ ಒಣಗಿದ್ದು ನಾನು ಸಾಲ ಹೇಗೆ ತಿರಿಸಲಿ ಎಂದು ಆಗಾಗ ಒಂಟಿಯಾಗಿ ಕುಳಿತು ಬಿಡುತ್ತಿದ್ದನು. ಆಗ ನಾನು ನನ್ನ ಗಂಡನಿಗೆ ಏನು ಆಗಲ್ಲ ಮುಂದೆ ಹೊಲ ಬೇಳೆದಾವು ಅಂತಾ ಹೇಳಿರುತ್ತೇನೆ. ಇಂದು ದಿನಾಂಕ 05-02-2016  ರಂದು ಬೆಳಿಗ್ಗೆ ಅಂದಾಜು 09:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಲಕ್ಷ್ಮೀ ಮತ್ತು ಶರಣು ಇವರೊಂದಿಗೆ ಮನೆಯಲ್ಲಿದ್ದಾಗ ನನ್ನ ಗಂಡ ನನಗೆ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ಬೆಳಿಗ್ಗೆ 11:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನ ಅಣ್ಣ ಬಸವಂತ್ರಾಯ ಇವರು ಮನೆಗೆ ಬಂದು ಹೊಲದಲ್ಲಿ ನಿನ್ನ ಗಂಡ ನೇಣೂ ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ಮಕ್ಕಳು ಹೊಲಕ್ಕೆ ಹೋಗಿ ನೋಡಲು ನನ್ನ ಗಂಡ ನನ್ನ ಗಂಡನ ಅಣ್ಣ ತಮ್ಮಕಿಯ ಭಿಮರಾಯ ಹಾವಪ್ಪ ನಿಂಬಾಳ ಇವರ ಹೊಲದಲ್ಲಿರುವ ಧನಗಳು ಕಟ್ಟಲು ಮಾಡಿ ಕೊಟಗಿಯಲ್ಲಿ ಪತ್ರಾಸ ಸೇಡ್ಡಿಗೆ ಇದ್ದ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದನು. ಆಗ ನಮ್ಮ ಅಣ್ಣ ತಮ್ಮಕಿಯ ಗುಂಡಪ್ಪ ನಿಂಬಾಳ ಈತನು ಬಂದು ನಾನು ಈಗ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಕೋಟಗಿಯಲ್ಲಿ ಮೇವು ತರಲು ಹೋದಾಗ ನೇಣು ಹಾಕಿಕೊಂಡಿದ್ದನ್ನು ನೋಡಿ ವಿಷಯ ತಿಳಿಸಿರುತ್ತೇನೆ ಎಂದು ಮಾತಾಡುತ್ತಿದ್ದನು. ನಂತರ ನನ್ನ ಗಂಡನ ಶವವನ್ನು ನನ್ನ ಗಂಡನ ಅಣ್ಣ ಬಸವಂತ್ರಾಯ ಹಾಗೂ ಊರಿನ ಇನ್ನು ಕೆಲವು ಜನರು ಕೂಡಿ ನೇಣಿನಿಂದ ಬಿಡಿಸಿರುತ್ತಾರೆ, ನನ್ನ ಗಂಡನು ಒಬ್ಬ ರೈತನಾಗಿದ್ದುಹೊಲದ ಸಾಗುವಳಿಯ ಸಂಬಂದ ಕೆ.ಜಿ.ಬಿ ಬ್ಯಾಂಕ ಅಫಜಲಪೂರ ಮತ್ತು ಊರು ಮನೆಯಲ್ಲಿ ಅಂದಾಜು 4 ರಿಂದ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಈ ವರ್ಷ ಸರಿಯಾಗಿ ಬೇಳೆ ಬರದೆ ಇದ್ದ ಕಾರಣ ಸಾಲ ಹೇಗೆ ತಿರಿಸೊದು ಅಂತಾ ಮನಸ್ಸಿಗೆ ಹಚ್ಚಿಕೊಂಡು ನಮ್ಮ ಹೊಲದ ಪಕ್ಕದಲ್ಲಿರುವ ಭೀಮರಾಯ ನಿಂಬಾಳ ಇವರ ಹೊಲದಲ್ಲಿರುವ ಧನಗಳು ಕಟ್ಟುವ ಕೋಟಗಿಯಲ್ಲಿ  ಇಂದು  ದಿನಾಂಕ 05-02-2016 ರಂದು ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:00 ಗಂಟೆಯ ಮದ್ಯದ ಅವದಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.